Desi

Treasure Hunt – ನಿಧಿ ಸಮಾನ ಪುಸ್ತಕಗಳ ಪರಿಚಯ..

– ವೃಷಾಂಕ

ಕಂಡದ್ದನ್ನು ಕಂಡಂತೆ ಹೇಳುವುದು, ಹೇಳಿದಂತೆ ನಡೆಯುವುದು, ನಡೆದದ್ದನ್ನೇ ಉಪದೇಶಿಸುವುದು ಸಜ್ಜನರ ಲಕ್ಷಣ. ಆದರೆ ಇವಿಷ್ಟಕ್ಕೂ ವಿರೋಧವಾಗಿ ನಡೆದುಕೊಂಡು ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಹಲವರು. ಕಂಡವರಿಂದ ಜನಿವಾರ ಕೀಳಿಸಿ ತನ್ನ ಮಗನಿಗೆ ಉಪನಯನ ಮಾಡುವವರು, ಕಂಡವರ ಹೆಣ್ಣುಮಕ್ಕಳನ್ನು ಪಲ್ಲಂಗಕ್ಕೆ ಎಳೆಯುತ್ತಾ ತಮ್ಮ ಹೆಣ್ಣುಮಕ್ಕಳಿಗೆ ಸುಂದರ ಭವಿಷ್ಯ ನಿರ್ಮಿಸಬೇಕೆಂದುಕೊಳ್ಳುವವರು, ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಟೊಳ್ಳಾಗಿದ್ದರೂ ‘ಬದುಕುವುದು ಹೇಗೆ’ ಎಂದು ಉಪನ್ಯಾಸ ಮಾಡುವವರು ಇಂದಿನ ಬುದ್ದಿವಂತರು. ವಿಕೃತ ಪುಸ್ತಕಗಳನ್ನು ಅಂತಿಮವೆಂದುಕೊಂಡು, ಅದಕ್ಕಾಗಿ ಸೈನ್ಯ ಕಟ್ಟಿ ಆಕ್ರಮಣ ಮಾಡಿದವರು ಇಂದು ಸಾಂಸ್ಕೃತಿಕ ಪ್ರತಿನಿಧಿಗಳು. ಇಂತಹ ವ್ಯಾಘ್ರಗಳನ್ನು ಬೆತ್ತಲುಗೊಳಿಸುವುದರಲ್ಲಿ ಸಾಹಿತಿ ಸೇತುರಾಮ್ ಅವರದ್ದು ಎತ್ತಿದ ಕೈ.

ಧಾರಾವಹಿ ನಿರ್ದೇಶಕನಾಗಿ, ರಂಗಕರ್ಮಿಯಾಗಿ ಜನರಿಗೆ ಪ್ರಿಯರಾಗಿದ್ದ ಸೇತುರಾಮ್ ‘ನಾವಲ್ಲ’ ಮೂಲಕ ಕಥೆಗಾರನಾಗಿ ಬಿಚ್ಚಿಕೊಂಡಿದ್ದರು. ಮೊನ್ನೆ ಜುಲೈ 28ಕ್ಕೆ ಬಿಡುಗಡೆಯಾದ ‘ದಹನ’ದ ಅವರ ಎರಡನೇ ಕಥಾ ಸಂಕಲನ.

ಕೆಲವರು ಹೇಳುವುದುಂಟು, ಸೇತುರಾಮ್ ಅವರದ್ದು ವಿಪರೀತ ವಾಚ್ಯ ಎಂದು. ಏನುಮಾಡುವುದು, ಒಬ್ಬೊಬ್ಬರ ಶೈಲಿ ಒಂದೊಂದು ರೀತಿ. ಕತೃ ಹೇಗೆ ರಚಿಸುತ್ತಾನೆ ಹಾಗೇ ತೆಗೆದುಕೊಳ್ಳಬೇಕು. ಓದುವ, ಓದದಿರುವ ಸ್ವಾತಂತ್ರ್ಯ ಈ ದೇಶದಲ್ಲಿ ಉಂಟಲ್ಲ.

ಸೇತುರಾಮ್ ಅವರ ಮೊದಲ ಕಥಾಸಂಕಲನದ 5000 ಪ್ರತಿಗಳು ಖರ್ಚಾದ್ದು ಕೇವಲ 6 ತಿಂಗಳಲ್ಲಿ! ಅಷ್ಟಕ್ಕೂ ಜನರೇಕೆ ಸೇತುರಾಮ್ ಪುಸ್ತಕಗಳನ್ನು ಓದುತ್ತಾರೆಂದರೆ ಮೌಲ್ಯಗಳಿಗಾಗಿ. ಮೌಲ್ಯರಹಿತವಾಗುತ್ತಿರುವ ಸಮಾಜದಲ್ಲಿ ಯಾರಾದರೂ ನೀರೆರೆಯುತ್ತಾರೆಂದರೆ ಬೆಳೆಯಲು ಗಿಡಗಳಿಗೇನು ಬರವೇ?

ಬನ್ನಿ, let’s read Dahana!

Click to comment

Leave a Reply

Your email address will not be published. Required fields are marked *

Most Popular

To Top