National

Emergency – ಇಂದಿರಾ ದಂಗಲ್!

ಅಧಿಕಾರಕ್ಕೆ ಬಂದಾಗಿನಿಂದಲೂ ಇಂದಿರಾ ಹಠಮಾರಿಯೇ. ಬಾಲ್ಯದಲ್ಲಿ ಅತ್ಯಂತ ಶಾಂತ ಸ್ವಭಾವದವಳೆನಿಸುತ್ತಿದ್ದ ಇಂದಿರಾ ಅಧಿಕಾರಕ್ಕೆ ಬಂದರೆ ತಾವು ಹೇಳಿದಂತೆ ಕೇಳುತ್ತಾಳೆಂಬ ಅನೇಕ ಕಾಂಗ್ರೆಸ್ಸಿಗರ ಲೆಕ್ಕಾಚಾರ ತಲೆಕೆಳಗಾಗಿತ್ತು. ಇಂದಿರಾ ಆರಂಭದಿಂದಲೇ ಅಧಿಕಾರವನ್ನು ಪ್ರಧಾನಮಂತ್ರಿ ಕಛೇರಿಗೆ ಕ್ರೋಢೀಕರಿಸಿಕೊಂಡುಬಿಟ್ಟರು. ಅವರು ಹೇಳಿದ್ದನ್ನು ಉಳಿದವರು ಕೇಳಬೇಕಿತ್ತು ಅಷ್ಟೇ. ಇಷ್ಟಾದರೂ 1971 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಗರೀಬೀ ಹಠಾವೋ ಘೋಷಣೆಯಿಂದಲೇ ಮನೆ-ಮನೆ ಮುಟ್ಟಿದ ಇಂದಿರಾ 518 ರಲ್ಲಿ 352 ಲೋಕಸಭಾ ಸೀಟುಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವನ್ನು ಸಾಧಿಸಿಬಿಟ್ಟರು. ಪಾಕಿಸ್ತಾನವನ್ನು 71 ರ ಯುದ್ಧದಲ್ಲಿ ಸೋಲಿಸಿದ ಮೇಲಂತೂ ಆಕೆ ಸವರ್ಾಧಿಕಾರಿಯೇ ಆಗಿಬಿಟ್ಟರು.

1971-72 ರ ಚುನಾವಣೆಗಳ ನಂತರ ವಿರೋಧ ಪಕ್ಷಗಳು ಅತ್ಯಂತ ದುರ್ಬಲವಾಗಿದ್ದವು. ಸಕರ್ಾರದ ತಪ್ಪು ನೀತಿಗಳಿಗೆ ವಿರೋಧ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದರೆ ಇಂದಿರಾ ‘ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಿಮಗೆಲ್ಲಿ ಬೆಂಬಲವಿದೆ’ ಎಂದು ಮೂದಲಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನಗಳೂ ಕೂಡ ಸಕರ್ಾರದ ಮುಖವಾಣಿಗಳೇ ಆದವು. ಪತ್ರಿಕೆಗಳಲ್ಲಿಯೂ ಕೂಡ ಇಂದಿರಾ ವಿರುದ್ಧವಾದ ಟೀಕೆ ಟಿಪ್ಪಣಿಗಳು ಬಂದರೆ ಆಕೆ ಸಹಿಸುತ್ತಿರಲಿಲ್ಲ. ಹೀಗಾಗಿ ಕಾನೂನೊಂದನ್ನು ಜಾರಿಗೆ ತಂದು ಪತ್ರಿಕೆಗಳಲ್ಲಿ ಪುಟ ಸಂಖ್ಯೆ ಎಷ್ಟಿರಬೇಕೆಂದು ಇಂದಿರಾ ನಿರ್ಧರಿಸಿದರು. ನ್ಯಾಯಾಲಯ ಇದನ್ನು ಧಿಕ್ಕರಿಸಿದಾಗ ಪತ್ರಿಕೆಗಳಿಗೆ ಕೊಡುವ ಜಾಹಿರಾತನ್ನೇ ನಿಲ್ಲಿಸುವ ಕುತಂತ್ರ ಆರಂಭವಾಯ್ತು. ಟ್ರಿಬ್ಯೂನ್ ಪತ್ರಿಕೆ ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ನಡೆಯಿತು. ಸಚರ್್ಲೈಟ್ ಪತ್ರಿಕೆಯ ಕಾಯರ್ಾಲಯಕ್ಕೆ ಬೆಂಕಿ ಹಚ್ಚಲಾಯ್ತು. ಹಿಂದ್ ಸಮಾಚಾರ್, ಪಂಜಾಬ್ ಕೇಸರಿ ಪತ್ರಿಕೆಗಳ ಮುದ್ರಣಾಲಯದ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಲಾಯ್ತು. ಪ್ಯಾಡ್ಲರ್ ಟೈಮ್ಸ್ ಪತ್ರಿಕೆಯ ಸಂಪಾದಕರನ್ನು ಇರಿದು ಕೊಲ್ಲಲಾಯ್ತು. ಮಲಯಾಳಂ ಮನೋರಮಾದ ಮುಖ್ಯ ಸಂಪಾದಕ ಕೆ.ಎಂ ಮ್ಯಾಥ್ಯೂ ಅವರ ಮೇಲೆ ದಾಳಿ ಮಾಡಲಾಯ್ತು. ಇಷ್ಟಾದರೂ ಪತ್ರಿಕೆಗಳು ಬಗ್ಗಲಿಲ್ಲ. ಇಂದಿರಾ ಆಡಳಿತದಲ್ಲಿರುವ ಸವರ್ಾಧಿಕಾರತ್ವವನ್ನು ಮುಲಾಜಿಲ್ಲದೇ ಟೀಕಿಸಿದವು.

ಹಾಗೆ ನೋಡಿದರೆ ರೂಸ್ವೆಲ್ಟ್ ನ ಪ್ರಕಾರ ಒಂದು ವ್ಯಕ್ತಿಯ ಕೈಯಲ್ಲಿ ಸಕರ್ಾರದ ಒಡೆತನವಿರುವುದೇ ಫ್ಯಾಸಿಸಂ. ಇಂದಿರಾ ಹುಟ್ಟು ಹಾಕಿದ ಇಂದಿನ ಕಾಂಗ್ರೆಸ್ ಬಲ ಪಂಥೀಯರನ್ನು ಫ್ಯಾಸಿಸ್ಟ್ ಎಂದು ಕರೆಯುತ್ತಾರೆ. ವಾಸ್ತವವಾಗಿ ಸಕರ್ಾರದ ಅಷ್ಟೂ ಒಡೆತನವನ್ನು ತನ್ನೊಬ್ಬಳ ಕೈಯ್ಯಲಿ ಹಿಡಿದಿಟ್ಟುಕೊಂಡ ಇಂದಿರಾ ನಿಜವಾದ ಫ್ಯಾಸಿಸ್ಟ್. ಫ್ಯಾಸಿಸಂ ನ ಮೂಲ ಪ್ರವರ್ತಕ ಮುಸ್ಸಲೋನಿ ನಾಗರೀಕರಿಗೆ ಎಷ್ಟು ಸ್ವಾತಂತ್ರ್ಯ ಇರಬೇಕೆಂಬುದನ್ನು ಸಕರ್ಾರ ನಿಶ್ಚಯಿಸುತ್ತದೆ ಎನ್ನುತ್ತಿದ್ದ. ಪ್ರಜಾಪ್ರಭುತ್ವ ನಿರುಪಯೋಗಿ ಎಂದೂ ಹೇಳುತ್ತಿದ್ದ. ಇಂದಿರಾ ಅದೇ ಹಾದಿಯಲ್ಲಿ ಸ್ಪಷ್ಟವಾಗಿ ನಡೆದಿದ್ದರು.

ರಾಜಕೀಯವಾದ ಎಲ್ಲ ಅಧಿಕಾರಗಳನ್ನು ತನ್ನಲ್ಲೇ ಕೇಂದ್ರೀಕರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದ ಇಂದಿರಾ ಆಥರ್ಿಕ ಪರಿಸ್ಥಿತಿಯನ್ನು ಹದಗೆಡಿಸುತ್ತಾ ನಡೆದರು. 1972 ರಲ್ಲಿ ಮಳೆ ಸರಿಯಾಗದೇ ಆಹಾರದ ಉತ್ಪಾದನೆ ಕುಸಿದು ಜನ ತತ್ತರಿಸಿದರು. ಅನ್ನ ಕೇಳಿದ ಜನತೆಯ ಮೇಲೆ ಅರಸಿಕೆರೆಯಲ್ಲಿ ಗುಂಡು ಹಾರಿಸಿತು ಇಂದಿರಾ ಸಕರ್ಾರ. ಒಬ್ಬ ತೀರಿಕೊಂಡ. ಆನಂತರ ಕನರ್ಾಟಕದಲ್ಲಿ 84 ಕಡೆ ಆಹಾರ ಗಲಭೆಗಳಾದವು. 8 ಜನ ಗುಂಡಿಗೆ ಆಹುತಿಯಾದರು. ಈ ಕನರ್ಾಟಕದ ಚಿತ್ರಣವೇ ಭಾರತದಲ್ಲಿ ಎಲ್ಲೆಡೆ ಹಬ್ಬಿತ್ತು.

ಗೋಲಿಬಾರು, ಲಾಠಿಚಾಜರ್ು ಕಾಂಗ್ರೆಸ್ಸಿಗೆ ಹೊಸತೇನಲ್ಲ. ಅನ್ನ ಕೇಳಿದ ರೈತರು ಏಟು ತಿಂದರು. ಕಳೆದ ಎರಡು ವರ್ಷಗಳ ಹಿಂದೆ ನೀರು ಕೇಳಿದ ರೈತರು ಹುಬ್ಬಳ್ಳಿಯ ಯಮನೂರಿನಲ್ಲಿ ಏಟು ತಿಂದದ್ದು ಮರೆತಿಲ್ಲ ತಾನೇ? ಇಂದಿರಾ ಈ ದೇಶದಲ್ಲಿ ಆಳುವವರಿಗೆ ದರ್ಪವನ್ನು ತುಂಬಿ ಹೋಗಿಬಿಟ್ಟರು. ಇಂದಿಗೂ ಈ ರಾಜ್ಯದ ಅನೇಕರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಪಾಳೇಗಾರರಂತೆ ವತರ್ಿಸುವುದರಲ್ಲಿ ಇಂದಿರಾಳ ರಕ್ತ ಬಲು ಜೋರಾಗಿಯೇ ಕಾಣುತ್ತದೆ. ಈ ಸವರ್ಾಧಿಕಾರತ್ವವನ್ನು ವಿರೋಧಿಸಿಯೇ ಮುಂಚೂಣಿಗೆ ಬಂದು ನಿಂತವರು ಡಾ. ಜಯಪ್ರಕಾಶ್ ನಾರಾಯಣ್.

ಜಯಪ್ರಕಾಶ್ ನಾರಾಯಣ್ರು ಇಂದಿರಾಳನ್ನು ಭೇಟಿ ಮಾಡಿ ಎಲ್ಲವನ್ನೂ ಸರಿಪಡಿಸುವಂತೆ ವಿನಂತಿಸಿಕೊಂಡು ಸಂವಿಧಾನ ದತ್ತ ಮಾರ್ಗದಲ್ಲಿಯೇ ಆರಂಭದಲ್ಲಿ ನಡೆದರು. ಗೌರವದಿಂದ ನಡೆದುಕೊಳ್ಳಬೇಕಾಗಿದ್ದ ಇಂದಿರಾ ಬಾಲ ತುಳಿದ ಹಾವಿನಂತಾಗಿ ತಿರುಗಿ ಬಿದ್ದುದಲ್ಲದೇ ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದೇ ಇಲ್ಲ ಅಂದುದಲ್ಲದೇ ಜಯಪ್ರಕಾಶ್ ನಾರಾಯಣರ ವಿರುದ್ಧ ಅಪಪ್ರಚಾರ ಶುರುಮಾಡಿದರು. ಆಗ ಗುಜರಾತಿನ ವಿದ್ಯಾಥರ್ಿ ವೃಂದ ಬಂಡಾಯವೆದ್ದು ಚಳುವಳಿ ಆರಂಭಿಸಸಿತು. ಮಣಿದ ರಾಜ್ಯ ಸಕರ್ಾರ ರಾಜಿನಾಮೆ ಕೊಡಲೇಬೇಕಾಯ್ತು. ಇದರ ಪ್ರೇರಣೆಯಿಂದ ಬಿಹಾರದಲ್ಲಿ ಸಿಡಿದೆದ್ದ ವಿದ್ಯಾಥರ್ಿಗಳು ದೊಡ್ಡ ಸಂಖ್ಯೆಯಲ್ಲಿ ಗೋಲಿಬಾರಿಗೆ ಆಹುತಿಯಾದಾಗ ಈ ಚಳುವಳಿಯ ನೇತೃತ್ವವನ್ನು ಜಯಪ್ರಕಾಶರು ವಹಿಸಲೇಬೇಕಾಗಿ ಬಂತು. ಜಯಪ್ರಕಾಶ ನಾರಾಯಣ್ರು ‘ಈ ಹೋರಾಟ ಭಾರತೀಯ ಪ್ರಜಾತಂತ್ರವನ್ನು ಪುನರ್ ಸ್ಥಾಪಿಸಲು ಮತ್ತು ನಿಜವಾದ ಜನತಾ ರಾಜ್ಯವನ್ನು ನೆಲೆಗೊಳಿಸಲೆಂದೇ ನಡೆಯುತ್ತಿದೆ ಎಂದರಲ್ಲದೇ ಒಂದು ನೈತಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ರಾಂತಿಯನ್ನು ತರುವುದು, ಹೊಸ ಬಿಡಾರವನ್ನು ಕಟ್ಟುವುದು ಮತ್ತು ಕೊನೆಯದಾಗಿ ನವ ಭಾರತದ ನಿಮರ್ಾಣ ಮಾಡುವುದು ನಮ್ಮ ಗುರಿ’ ಎಂದರು. ಇದನ್ನವರು ಸಂಪೂರ್ಣ ಕ್ರಾಂತಿ ಎಂದು ಕರೆದರು.

ಜಯಪ್ರಕಾಶ್ ನಾರಾಯಣರು ಶಾಂತಿಯುತವಾದ ಚಳುವಳಿಯನ್ನೇ ನಡೆಸಿದ್ದರೂ ಇಂದಿರಾ ತನ್ನ ದಮನ ನೀತಿಯನ್ನು ಬಿಡಲೇ ಇಲ್ಲ. ಜನತೆಯಿಂದ ಚುನಾಯಿತ ಸಕರ್ಾರದ ರಾಜಿನಾಮೆ ಕೇಳುವುದು ಸಂವಿಧಾನ ವಿರೋಧೀ ಎಂದೇ ಭಾಷಣ ಮಾಡುತ್ತಿದ್ದರು. ಕಾಂಗ್ರೆಸ್ಸಿಗೆ ಅಧಿಕಾರಕ್ಕೆ ಕುಂದು ಬರುವಂಥದ್ದೆಲ್ಲಾ ಸಂವಿಧಾನ ವಿರೋಧೀ ಎನಿಸುವುದು ಹೊಸತೇನಲ್ಲ. ದೊಡ್ಡ ಪಕ್ಷ ಸಕರ್ಾರ ನಡೆಸಲು ಮನಸ್ಸು ಮಾಡುವುದು ಸಂವಿಧಾನ ವಿರೋಧಿಯಾದರೆ ರೆಸಾಟರ್್ಗಳಲ್ಲಿ ಶಾಸಕರನ್ನು ಕೂಡಿಹಾಕಿಕೊಳ್ಳುವುದು ಸಂವಿಧಾನ ಪೂರಕವಾದ್ದು. ಬಿಡಿ ಇಂದಿರಾ ಪ್ರಣೀತ ಕಾಂಗ್ರೆಸ್ಸು ಇನ್ನೇನು ಆಲೋಚಿಸಬಲ್ಲುದು?!

ಇಂದಿರಾ ಸಂಸತ್ತಿನಲ್ಲಿ ನಡೆದುಕೊಳ್ಳುತ್ತಿದ್ದ ದರ್ಪದ ರೀತಿಯನ್ನು ಕಂಡು ಖ್ಯಾತ ಸಂಸತ್ ಪಟು ಅಟಲ್ ಬಿಹಾರಿ ವಾಜಪೇಯಿ ತಾವು ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದು ಉತ್ಪಾತವನ್ನೇ ಎಬ್ಬಿಸಿತ್ತು. ಪ್ರಜಾವಾಣಿ ಭ್ರಮನಿರಸನ ಎಂಬ ಶೀಷರ್ಿಕೆಯಡಿ ಅಗ್ರ ಲೇಖನವನ್ನು ಬರೆದು ಇಂದಿರಾ ಸವರ್ಾಧಿಕಾರಿ ಎಂದು ತರಾಟೆಗೆ ತೆಗೆದುಕೊಂಡಿತ್ತು. ಭ್ರಷ್ಟಾಚಾರ ತಾಂಡವವಾಡಲಾರಂಭಿಸಿತ್ತು. ಸ್ವತಃ ಕಾಂಗ್ರೆಸ್ ಸಮಿತಿಯಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ, ಮಧ್ಯಪ್ರದೇಶದ ಮುಖ್ಯಂಮತ್ರಿ ಪಿಸಿ ಸೇಠೀ ಈ ಕುರಿತಂತೆ ಸಕರ್ಾರದ ನೀತಿಗಳನ್ನೇ ವಿರೋಧಿಸಿದರು. ಇಂದಿರಾ ಆಪ್ತವಲಯದವರೇ ಹೀಗೆ ಮಾತನಾಡಿದ್ದು ಅಂದಿನ ಆಡಳಿತಕ್ಕೆ ಹಿಡಿದ ಕೈಗನ್ನಡಿ.

ಮಧ್ಯಪ್ರದೇಶದ ಮುಖ್ಯಮಂತ್ರಿ ಹೇಳಿದ್ದೇನು ಗೊತ್ತೇ? ‘ಯಾವ ವಿಧದಲ್ಲಾದರೂ ಸರಿ ಹಣ ಸಂಗ್ರಹಿಸುವುದೇ ಪ್ರತಿಯೊಬ್ಬರ ಹವ್ಯಾಸವಾಗಿದೆ. ಮುಖ್ಯಮಂತ್ರಿಯಾದರೆ ಸಾಕು ಮುಂಬರುವ ಮೂರ್ನಾಲ್ಕು ಪೀಳಿಗೆಯವರಿಗಾಗಿ ಆತ ಐಶ್ವರ್ಯ ಸಂಪಾದಿಸಲು ಹವಣಿಸುತ್ತಾನೆ’ ಅಂತ. ಈ ರಾಜಕಾರಣಿಗಳ ಹಣ ಗಳಿಸುವ ತುಡಿತ ಮಿತಿ ಮೀರಿದ್ದು ಇಂದಿರಾ ಕಾಲದಲ್ಲೇ. ಇದನ್ನು ಧಿಕ್ಕರಿಸಿಯೇ ಪ್ರತಿಪಕ್ಷಗಳೆಲ್ಲವೂ ಸೇರಿ ‘ಸಿಂಹಾಸನ್ ಖಾಲಿ ಕರೊ’ ಎಂಬ ಆಂದೋಲನವನ್ನು ಕೈಗೆತ್ತಿಕೊಂಡಿತು. ಎದುರಿಗೆ ಕಾಣುತ್ತಿದ್ದ ಮುಖಗಳು ನೂರಿದ್ದರೂ ಹಿಂದಿನಿಂದ ಚಿಂತನೆಯ ಗಂಗೆಯನ್ನು ಹರಿಸುತ್ತಿದ್ದುದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ.

1975 ರ ಜೂನ್ 12 ರ ಬೆಳಿಗ್ಗೆ 10 ಗಂಟೆಗೆ ಅಲಹಬಾದ್ ಉಚ್ಚ ನ್ಯಾಯಾಲಯ ಇಂದಿರಾ ಚುನಾವಣಾ ಭ್ರಷ್ಟಾಚಾರವನ್ನು ಟೀಕಿಸಿ ಆಕೆಯ ಲೋಕಸಭಾ ಸದಸ್ಯತ್ವವನ್ನು ರದ್ದು ಪಡಿಸಿತು. ಮುಂದಿನ 6 ವರ್ಷಗಳವರೆಗೆ ಆಕೆ ಯಾವ ಚುನಾವಣೆಗೂ ಸ್ಪಧರ್ಿಸದಂತೆ ನಿಷೇಧಿಸಿತು. ಅದೇ ಸಂಜೆ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಇಂದಿರಾ ಕಾಂಗ್ರೆಸ್ಸಿಗೆ ಭರ್ಜರಿ ಸೋಲಾಗಿತ್ತು. ಇಂದಿರಾ ಪ್ರತಿಪಕ್ಷಗಳಿಂದಷ್ಟೇ ಅಲ್ಲ. ಈಗ ತನ್ನವರಿಂದಲೇ ದೂಷಿಸಲ್ಪಟ್ಟಳು. ಹಾಗಂತ ಸುಮ್ಮನಾಗಲಿಲ್ಲ ಆಕೆ. ಜನ ಬೆಂಬಲದ ಪ್ರದರ್ಶನಕ್ಕೆ ಮುಂದೆ ನಿಂತರು. ಒಂದೆಡೆ ಸಕರ್ಾರ ಯಂತ್ರವನ್ನು ಪಕ್ಷದ ವಸ್ತುವೆಂಬಂತೆ ಬಳಸಿಕೊಂಡ ಇಂದಿರಾ ಜೂನ್ 20ರಂದು ಜನರನ್ನು ಗುಡ್ಡೆ ಹಾಕುಲು ಹರ ಸಾಹಸ ಮಾಡುತ್ತಿದ್ದರೆ ಜೂನ್ 25 ರಂದು ರಾಮಲೀಲಾ ಮೈದಾನದಲ್ಲಿ ಜಯಪ್ರಕಾಶ್ ನಾರಾಯಣರ ಭಾಷಣ ಕೇಳಲು ಸ್ವ ಇಚ್ಛೆಯಿಂದ ಜನ ತುಂಬಿ ತುಳುಕಾಡುತ್ತಿದ್ದರು.

ಇಂದಿರಾ ಕೈಲಿದ್ದ ಅಸ್ತ್ರಗಳೆಲ್ಲಾ ಬರಿದಾಗಿದ್ದವು. ಪ್ರತಿಪಕ್ಷವೇನು ಸ್ವಪಕ್ಷವೂ ಆಕೆಯ ಜೊತೆಗಿರಲಿಲ್ಲ. ನ್ಯಾಯಾಲಯದಲ್ಲಿ ಸೋಲಾಯ್ತು, ಚುನಾವಣೆಯಲ್ಲಿ ಸೋಲಾಯ್ತು. ಜನ ತಿರುಗಿಬಿದ್ದರು. ಅತ್ತ ರಾಮಲೀಲಾ ಮೈದಾನದಲ್ಲಿ ಬಲುದೊಡ್ಡ ಸಂಖ್ಯೆಯಲ್ಲಿ ಜನ ಜಯಪ್ರಕಾಶ ನಾರಾಯಣರ ಮಾತಿಗೆ ತಲೆದೂಗುತ್ತಿದ್ದರೆ ಇತ್ತ ಇಂದಿರಾ ಮಾತ್ರ ಶಾಂತವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ ತುತರ್ು ಪರಿಸ್ಥಿತಿಯ ಆಜ್ಞೆಗೆ ಅಂಕಿತ ಹಾಕಿಸಿಕೊಂಡರು. ಭಾರತದ 60 ಕೋಟಿ ಜನ ಶಾಂತವಾಗಿ ನಿದ್ರಿಸುತ್ತಿದ್ದಾಗ ಹಿಂಬಾಗಿಲಿನಿಂದ ಅವರ ಮನೆಗೆ ನುಗ್ಗಿ ಅವರನ್ನು ಕಟ್ಟಿ ಹಾಕಿ ಅಡಿಯಾಳಾಗಿಸಿಕೊಂಡಿದ್ದರು ಇಂದಿರಾ.
ಪ್ರಜಾಪ್ರಭುತ್ವದ ಮಹಾ ಗೋಪುರ ಕಳಚಿ ಬಿದ್ದಿತ್ತು. ತಮ್ಮ ಮಾತುಗಳಿಗೆ ಬಗ್ಗುವುದಿಲ್ಲವೆನಿಸುವ ಪತ್ರಿಕೆಗಳ ಮುದ್ರಣಾಲಯಗಳಿಗೆ ಸಕರ್ಾರ ಬೀಗ ಹಾಕಿಸಿತು. ಅನೇಕ ಸಂಪಾದಕರು ಜೈಲಿಗೆ ತಳ್ಳಲ್ಪಟ್ಟರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಬಾಳಾಸಾಹೇಬ್ ದೇವರಸರು ನಾಗಪುರದಲ್ಲಿ ರೈಲಿನಿಂದಿಳಿಯುತ್ತಿದ್ದಂತೆ ಪೋಲಿಸರು ಎಳೆದುಕೊಂಡು ಹೋದರು. ದೇಶದ ಮೂಲೆ-ಮೂಲೆಯಲ್ಲಿ ಸಿಡಿದು ಬಿದ್ದ ಜನರನ್ನು ಹಿಂದೆ-ಮುಂದೆ ನೋಡದೇ ಸಕರ್ಾರ ಬಂಧಿಸಿ ಜೈಲಿಗೆ ತಳ್ಳಿತು. ತುತರ್ು ಪರಿಸ್ಥಿತಿಯನ್ನು ವಿರೋಧಿಸಿ ಕಾಗೋಡು ತಿಮ್ಮಪ್ಪ ‘ಯಾರಿಂದ ವರಪ್ರಸಾದ ಪಡೆದರೋ ಅವರನ್ನೇ ನಾಶ ಮಾಡುವ ಭಸ್ಮಾಸುರನ ಕೆಲಸವನ್ನು ಕಾಂಗ್ರೆಸ್ಸು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ’ ಎಂದಿದ್ದರು. ವಿರೋಧ ಪಕ್ಷದ ನಾಯಕ ಎಚ್.ಡಿ ದೇವೇಗೌಡರು ‘ಪ್ರಜಾಪ್ರಭುತ್ವದ ಅವಸಾನಕ್ಕೆ ಇದು ಮೊದಲ ಹೆಜ್ಜೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ’ ಎಂದು ಗುಡುಗಿದ್ದರು. ಭಾರತ ಬಿಟ್ಟು ತೊಲಗಿ ಸತ್ಯಾಗ್ರಹ ನಡೆದ ಆಗಸ್ಟ್ 9 ಅನ್ನು ಕ್ರಾಂತಿ ದಿವಸವೆಂದು ಕರೆದು ದೇಶದಾದ್ಯಂತ ಆಚರಿಸಲಾಯ್ತು. ಕನರ್ಾಟಕವೂ ಸೂಕ್ತವಾಗಿ ಪ್ರತಿಕ್ರಿಯಿಸಿತು. ಪತ್ರಿಕೆಗಳನ್ನು ಸಕರ್ಾರ ನಿಷೇಧಿಸಿದ್ದರಿಂದ ಭೂಗತ ಪತ್ರಿಕೆಗಳು ಶುರುವಾದವು. ಸಕರ್ಾರದ ದಮನ ನೀತಿಯನ್ನು ಲೇಖನ ಮಾಡಿ ಮುದ್ರಿಸಿ ಮನೆ-ಮನೆಗೂ ತಲುಪಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ಪ್ರಯತ್ನ ಬಲು ಅಪರೂಪದ್ದು. ವಿಜಯ್ ರಾಜೇಶ್ ಸಿಂಧ್ಯಾ, ರಾಜ್ ನಾರಾಯಣ, ಮೊರಾಜರ್ಿ ದೇಸಾಯಿ, ಚರಣ್ ಸಿಂಗ್, ಅಟಲ್ ಜಿ, ಲಾಲ್ಕೃಷ್ಣ ಅಡ್ವಾಣಿಯಂತಹ ಪ್ರಮುಖ ನಾಯಕರೆಲ್ಲಾ ಜೈಲಿಗೆ ತಳ್ಳಲ್ಪಟ್ಟಿದ್ದರು. ತಮಿಳುನಾಡಿನಂತಹ ರಾಜ್ಯಗಳಲ್ಲಿ ಆಳ್ವಿಕೆಯಲ್ಲಿದ್ದ ಸಕರ್ಾರವನ್ನು ಕಿತ್ತೆಸೆದು ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಲಾಯ್ತು. ಇಂದಿರೆಯ ಮಗ ಸಂಜಯ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಸಾರ್ವತ್ರಿಕವಾಗಿ ಮಾಡಿಸಿ ಇಂದಿರೆಗೆ ಸಾಕಷ್ಟು ಕೆಟ್ಟ ಹೆಸರು ತಂದ.

ಆಮ್ನೆಸ್ಟಿ ಇಂಟರ್ ನ್ಯಾಷನಲ್ನ ವರದಿಯ ಪ್ರಕಾರ ಸುಮಾರು ಒಂದುವರೆ ಲಕ್ಷದಷ್ಟು ಜನ ಯಾವ ವಿಚಾರಣೆಯೂ ಇಲ್ಲದೇ ಬಂಧಿಸಲ್ಪಟ್ಟಿದ್ದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯಂತಹ ದಿಗ್ಗಜರು ಕನರ್ಾಟಕದ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಬಂಧಿಸಿಡಲ್ಪಟ್ಟಿದ್ದರು. ಅವರೆಲ್ಲರ ನೆನಪನ್ನು ಹೊತ್ತ ಆ ಜೈಲು ಇಂದು ಫ್ರೀಡಂ ಪಾಕರ್್ ಆಗಿ ಬೆಳೆದು ನಿಂತಿದೆ. ಒಟ್ಟಾರೆ 21 ತಿಂಗಳ ಈ ಕರಾಳ ಅವಧಿ ಭಾರತದ ಇತಿಹಾಸದಲ್ಲಿ ಒಂದು ಬಹು ಕ್ರೂರವಾಗಿರುವಂತಹ ನೆನಪು. ಜನ ಸಾಮಾನ್ಯರು ಒಟ್ಟಾಗಿ ನಿಂತಿದ್ದರ ಪರಿಣಾಮವಾಗಿ ಕೊನೆಗೂ ಇಂದಿರಾ ತಲೆಬಾಗಲೇಬೇಕಾಯ್ತು. ಆನಂತರ ಲೋಕಸಭಾ ಚುನಾವಣೆಗಳು ನಡೆದು ಇಂದಿರಾ ಕಾಂಗ್ರೆಸ್ ಉಧ್ವಸ್ಥಗೊಂಡಿತು. ಮೊದಲ ಕಾಂಗ್ರೆಸ್ಸೇತರ ಸಕರ್ಾರ ಅಸ್ತಿತ್ವಕ್ಕೆ ಬಂತು. ಪ್ರಜಾಪ್ರಭುತ್ವವನ್ನು ಧ್ವಂಸಗೊಳಿಸಿದ ಕಾಂಗ್ರೆಸ್ಸಿನ ಕರಾಳ ಕಥೆಯಿದು. ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ಜನತೆ ತಮ್ಮದೇ ಸಕರ್ಾರದ ವಿರದ್ಧ ಕಾದಾಟ ನಡೆಸಬೇಕಾದ ಪರಿಸ್ಥಿತಿ ಬಂದಿದ್ದು ದೌಭರ್ಾಗ್ಯಪೂರ್ಣ. ನಾವು ಈ ಇತಿಹಾಸವನ್ನು ಮರೆಯದಿರೋಣ. ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಮೂಲ ಆಶಯವನ್ನೇ ನಾಶ ಮಾಡಿದ ತುತರ್ು ಪರಿಸ್ಥಿತಿಯ ಆ ದಿನಗಳನ್ನು ನೆನಪಿಸಿಕೊಳ್ಳೋಣ. ಭಾರತದ ನಿಮರ್ಾಣಕ್ಕೆ ಜೊತೆಯಾಗಿ ನಿಲ್ಲೋಣ.

Click to comment

Leave a Reply

Your email address will not be published. Required fields are marked *

Most Popular

To Top