National

370 ರದ್ದಾದರೂ ದಂಗೆಗಳಿಲ್ಲವಲ್ಲ, ಏಕೆ?

ನಮ್ಮ ದೇಶವನ್ನು ಕಂಡು ಎಲ್ಲೆಲ್ಲೂ ಹೊಟ್ಟೆಯುರಿ ದಿನೇದಿನೇ ಹೆಚ್ಚುತ್ತಿದೆ. ಒಂದೆಡೆ ನರೇಂದ್ರ ಮೋದಿಗೆ ಮುಸ್ಲೀಂ ರಾಷ್ಟ್ರಗಳಲ್ಲಿ ಸಿಗುತ್ತಿರುವ ಬೆಂಬಲ ಪಾಕೀಸ್ತಾನವನ್ನು ಕಂಗೆಡಿಸುತ್ತಿದ್ದರೆ ಮತ್ತೊಂದೆಡೆ ಆಟರ್ಿಕಲ್ 370 ಕಿತ್ತು ಬಿಸಾಡಿ ಸಮಸ್ಯೆಯನ್ನು ವೃಣವಾಗಿಸಿ ಲಾಭ ಪಡೆಯುತ್ತಿದ್ದ ಕಾಂಗ್ರೆಸ್ಸು ಈಗ ಚಿದಂಬರಂ ಮತ್ತು ಶಶಿ ತರೂರು ಜೈಲಿನ ಸನಿಹಕ್ಕೆ ಬಂದು ನಿಂತಿರುವ ಪರಿಸ್ಥಿತಿಯಿಂದ ಕಂಗಾಲಾಗಿಬಿಟ್ಟಿದೆ. ಸ್ವಲ್ಪ ಎಡವಟ್ಟು ಘಟಿಸಿದರೆ ಈ ದೇಶದ ಖ್ಯಾತನಾಮ ಪರಿವಾರವೊಂದು ದೇಶ ಬಿಟ್ಟು ಓಡಬೇಕಾದ ವಾತಾವರಣ ನಿಮರ್ಾಣಗೊಂಡರೆ ಅಚ್ಚರಿ ಪಡಬೇಕಿಲ್ಲ! ಅಲ್ಲಿಯೂ ನೆಮ್ಮದಿ ಇರಲಾರದು ಏಕೆಂದರೆ ಅದಾಗಲೇ ದೇಶ ಬಿಟ್ಟು ಓಡಿದವರು ಅಲ್ಲಿ ಇರಲಾಗದೇ ಚಡಪಡಿಸುತ್ತ ಮರಳಿಬರುವ ಭೀತಿಗೆ ಎದುರಾಗಿದ್ದಾರೆ. ಮೋದಿ ಜಾಗತಿಕವಾಗಿ ಎಲ್ಲ ರಾಷ್ಟ್ರಗಳ ಮೇಲಿನ ತಮ್ಮ ಪ್ರಭಾವ ಅದೆಷ್ಟು ಬಲಗೊಳಿಸುತ್ತಿದ್ದಾರೆಂದರೆ, ಮುಸ್ಲೀಂ ರಾಷ್ಟ್ರ ಮಲೇಷಿಯಾ ಕೂಡ ಝಾಕಿರ್ ನಾಯ್ಕ್ನನ್ನು ಗಡೀಪಾರು ಮಾಡಲೊಪ್ಪಿಕೊಂಡರೆ ಅಚ್ಚರಿ ಇಲ್ಲ.


ಮೋದಿ-ಶಾಹ್ ಜೋಡಿಯ ಮನಸ್ಸನ್ನು ಅಧ್ಯಯನ ಮಾಡುವುದು ಜೊತೆಗಿರುವವರಿಗೂ ಸಾಧ್ಯವಾಗಲಾರದು. ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಲಾಗಾಯ್ತು ಇದ್ದ ಸಮಸ್ಯೆಯನ್ನು ಚಿಟಿಕೆ ಹೊಡೆದಂತೆ ಸಮಾಪ್ತಿಗೊಳಿಸಿದ ಈರ್ವರೂ ಆನಂತರ ಸಮಸ್ಯೆ ದೇಶದಾದ್ಯಂತ ವ್ಯಾಪಿಸದಂತೆ ತಡೆದ ರೀತಿ ಇದೆಯಲ್ಲ ಅದು ನಿಜಕ್ಕೂ ಅಪರೂಪದ್ದು. ಹಾಗೆ ಆರಂಭದಿಂದಲೂ ನಡೆದ ಪ್ರಕ್ರಿಯೆಯನ್ನು ಗಮನಿಸಿ. ಪುಲ್ವಾಮಾ ದಾಳಿಯೊಂದಿಗೆ ಶುರುವಾದ ಪ್ರತ್ಯೇಕತಾವಾದಿಗಳ ಮೇಲೆ ‘ಮುರಿದು ಬೀಳುವ’ ಪ್ರಕ್ರಿಯೆ ಚುನಾವಣೆಯ ಕಾಲಕ್ಕೂ ನಿಂತಿರಲಿಲ್ಲ. ಅವರ ಆಸ್ತಿ-ಪಾಸ್ತಿಗಳನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಜಪ್ತು ಮಾಡಿಕೊಳ್ಳಲಾಯ್ತು; ಚುನಾವಣೆಯ ಫಲಿತಾಂಶದೊಂದಿಗೆ ಅವರಿಗಿದ್ದ ರಕ್ಷಣೆಯನ್ನು ಹಿಂಪಡೆಯಲಾಯ್ತು. ಇದರೊಂದಿಗೆ ಮನೆಯಿಂದ ಹೊರ ಬರಲೂ ಹೆದರುವಂತಾದ ಈ ನಾಯಕರು ಅಯಾಚಿತವಾಗಿ ತಮಗೆ ತಾವೇ ಗೃಹ ದಿಗ್ಬಂಧನ ಹಾಕಿಕೊಂಡು ಕುಳಿತುಬಿಟ್ಟರು. ಏಕೆ ಗೊತ್ತೇ? ಕಾಶ್ಮೀರದ ಜನತೆಗೆ ಸ್ವಾತಂತ್ರ್ಯದ ಕನಸು ಕಾಣಿಸಿ ಅವರನ್ನು ಜೀಹಾದ್ಗೆ ಪ್ರೇರೇಪಿಸುವ ಈ ಅಯೋಗ್ಯರು ತಮ್ಮ ಮಕ್ಕಳನ್ನು ಮಾತ್ರ ಈ ಧರ್ಮಯುದ್ಧಕ್ಕೆ ಕಳಿಸದೇ ವಿದೇಶದಲ್ಲಿ ಓದಲು, ವೃತ್ತಿ ಕೈಗೊಳ್ಳಲು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಇದು ಅಲ್ಲಿನ ತರುಣರಿಗೆ ಆಕ್ರೋಶವಾಗಿಯಂತೂ ಕಾಡುತ್ತಿದೆ. ಆದರೆ ಸಕರ್ಾರದ ಸುರಕ್ಷಾ ಕವಚದಲ್ಲಿ ಅವರಿಗೆ ಬೇಕಾದ ವಾತಾವರಣದಲ್ಲಿ ಕೆಲಸ ಮಾಡಲು ಕೇಂದ್ರದಲ್ಲಿರುವ ಸರಕಾರಗಳೇ ವ್ಯವಸ್ಥೆ ರೂಪಿಸಿಕೊಡುತ್ತಿದ್ದವು. ಆನಂತರ ಅವರ ಭಾಷಣವನ್ನು ಮಾಧ್ಯಮಗಳು ಜಾಗತಿಕ ಮಟ್ಟದಲ್ಲಿ ಪ್ರಚಾರಕ್ಕೆ ಬಳಸಿಕೊಂಡು ಕಾಶ್ಮೀರ ಉರಿಯುತ್ತಿದೆ ಎಂಬ ಭಾವನೆ ತುಂಬಿ ಬಿಡುತ್ತಿದ್ದವು. ಯಾವಾಗ ಮೋದಿ ಇವರಿಗೆಲ್ಲ ಕೊಟ್ಟಿದ್ದ ಭದ್ರತಾ ಕವಚವನ್ನು ತೆಗೆದು ಹಾಕಿದರೋ ಅಲ್ಲಿಗೆ ಇವರೆಲ್ಲರ ಟೈರು ಪಂಕ್ಚರ್ ಆಗಿತ್ತು. ಮುಂದೇನೆಂಬುದು ಅವರಿಗೆ ಹೊಳೆಯಲಿಲ್ಲ. ಪಾಕೀಸ್ತಾನದ ಸಹಕಾರಕ್ಕಾಗಿ ಕಾಯುತ್ತ ಕುಳಿತರು. ಆದರೇನು? ಸ್ವತಃ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿರುವ ಪಾಕೀಸ್ತಾನಕ್ಕೆ ಹಣ ಹರಿಸಬಲ್ಲಷ್ಟು ತಾಕತ್ತು ಈಗ ಉಳಿದಿಲ್ಲ. ಡಿಮಾನಿಟೈಸೇಷನ್ ನೊಂದಿಗೆ ಪಾಕಿಸ್ತಾನದ ಆಥರ್ಿಕ ಶಕ್ತಿ ಉಡುಗಿ ಹೋಗಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಮೋದಿ ಹೇರಿರುವ ದಿಗ್ಬಂಧನ ಎಂಥದ್ದೆಂದರೆ ಪಾಕೀಸ್ತಾನದ ಕೂಗನ್ನು ಕೇಳಬೇಕೆಂದುಕೊಳ್ಳುವ ರಾಷ್ಟ್ರ ಭಾರತದ ಸ್ನೇಹ ಕಳೆದುಕೊಳ್ಳುವ ಭೀತಿಯನ್ನೂ ಎದುರಿಸುವಂತಾಗಿದೆ. ಹೀಗಾಗಿ ಅದು ಈಗ ಒಂಟಿ. ಎಷ್ಟು ಒಂಟಿಯೆಂದರೆ ಅಕ್ಕಪಕ್ಕದ ಮುಸ್ಲೀಂ ರಾಷ್ಟ್ರಗಳೂ ಅದರ ಬೆಂಬಲಕ್ಕಿಲ್ಲ.


ಸೂಕ್ಷ್ಮವಾಗಿ ಗಮನಿಸಿ ನೋಡಿ. ಕಳೆದ ಹದಿನೈದಿಪ್ಪತ್ತು ದಿನಗಳಿಂದ ಕಾಶ್ಮೀರದಲ್ಲಿ ಮೊಬೈಲ್ ಬಿಡಿ, ಸ್ಥಿರ ದೂರವಾಣಿಗಳು ಕೆಲಸ ನಿರ್ವಹಿಸುತ್ತಿಲ್ಲ. ತೀರಾ ನಿನ್ನೆಯಿಂದ ಸ್ಥಿರ ದೂರವಾಣಿಗಳು ಕೆಲಸ ಆರಂಭಿಸಿವೆ. ಅಷ್ಟರೊಳಗೆ ಮೋದಿ ವ್ಯವಸ್ಥಿತವಾಗಿ ಮುಸ್ಲೀಂ ರಾಷ್ಟ್ರಗಳನ್ನೇ ಸುತ್ತಾಡಿಕೊಂಡು ಬಂದು ಅಲ್ಲಿನ ಅತ್ಯುನ್ನತ ನಾಗರಿಕ ಗೌರವಗಳನ್ನು ಮಡಿಲಿಗೆ ಹಾಕಿಕೊಂಡಿದ್ದಾರೆ. ಇದು ಪಾಕಿಸ್ತಾನಕ್ಕಷ್ಟೇ ಅಲ್ಲ, ಇಲ್ಲಿನ ಪಾಕೀಸ್ತಾನದ ಬೆಂಬಲಿಗರಿಗೂ ಸ್ಪಷ್ಟ ಸಂದೇಶ. ಜಗತ್ತಿನ ಯಾವ ಮುಸಲ್ಮಾನ ರಾಷ್ಟ್ರಗಳೂ ಕಾಶ್ಮೀರದ ವಿಚಾರದಲ್ಲಿ ಭಾರತವನ್ನು ಎದುರು ಹಾಕಿಕೊಳ್ಳಲು ಸಿದ್ಧರಿಲ್ಲವೆಂಬ ಸಂಗತಿ ಮೋದಿ ಪರೋಕ್ಷವಾಗಿ ತಲುಪಿಸಿಬಿಟ್ಟಿದ್ದಾರೆ. ಹೀಗಾಗಿ ಈ ಕುರಿತ ಆಂದೋಲನಕ್ಕೆ ಅತ್ತಲಿಂದ ಹಣದ ಹೊಳೆ ಹರಿಯುವುದೂ ಅಸಾಧ್ಯದ ಮಾತು. ಮತ-ಪಂಥಕ್ಕಾಗಿ ಹೋರಾಟ ಎಂಬುದೆಲ್ಲವು ಸುಳ್ಳು ಕಂತೆ, ಇವರೆಲ್ಲ ಜನರನ್ನು ಭಡಕಾಯಿಸಿ ಕಾದಾಟಕ್ಕೆ ಹಚ್ಚೋದು ಹಣಕ್ಕಾಗಿ ಮಾತ್ರ. ಮೋದಿ ಆ ಹೆಬ್ಬಾಗಿಲನ್ನೇ ಮುಚ್ಚಿಬಿಟ್ಟಿರುವುದರಿಂದ ಟಿಪ್ಪುವಿನ ಹೆಸರಿಗೇ ಬೀದಿಗಿಳಿದಿದ್ದ ಕೇರಳ ಕನರ್ಾಟಕಗಳ ಕಟ್ಟರ್ ಮುಸಲ್ಮಾನರು ಕಾಶ್ಮೀರದಲ್ಲಾದ ಕ್ರಾಂತಿಕಾರಕ ಬದಲಾವಣೆಗೆ ಮುಗುಮ್ಮಾಗಿ ಕುಳಿತುಬಿಟ್ಟಿದ್ದಾರಲ್ಲ!

ಈ ನಡುವೆ ಇನ್ನೊಂದು ಗಮನಿಸಲೇಬೇಕಾದ ವಿಚಾರವಿದೆ. 370ನೇ ವಿಧಿ ರದ್ದು ಮಾಡುವ ನಿರ್ಣಯ ಕೈಗೊಳ್ಳುವ ಮುನ್ನ, ಅಲ್ಲಿರಬಹುದಾದ ಯಾತ್ರಿಕರನ್ನು, ಕಾಲೇಜು ವಿದ್ಯಾಥರ್ಿಗಳನ್ನು ವಿಶೇಷ ಆಸ್ಥೆವಹಿಸಿ ಸಕರ್ಾರ ಅವರವರ ಊರಿಗೆ ಕಳಿಸಿತು. ಈ ಒಂದು ಪ್ರಯತ್ನ ಮಾಡದೇಹೋಗಿದ್ದರೆ ಶ್ರೀನಗರದಲ್ಲಿರುವ ಪ್ರತ್ಯೇಕತಾವಾದಿಗಳ ದೊಡ್ಡಪಡೆ ವಿದ್ಯಾಥರ್ಿಗಳನ್ನೋ, ಯಾತ್ರಿಕರನ್ನೋ ಆಪೋಶನ ಪಡೆದುಕೊಂಡುಬಿಡುತ್ತಿತ್ತು. ಒಬ್ಬರ ಸಾವೂ ದೇಶದಲ್ಲಿ ಉತ್ಪಾತವನ್ನುಂಟುಮಾಡಿಬಿಡುತ್ತಿತ್ತು! ಅದು ಹಿಂದು-ಮುಸ್ಲೀಂ ದಂಗೆಗಳಾಗಿ ಪರಿವತರ್ಿತಗೊಂಡರೆ ನಿಯಂತ್ರಣ ಕಷ್ಟವೂ ಆಗಿರುತ್ತಿತ್ತು. ಅದರೊಟ್ಟಿಗೇ ದೂರವಾಣಿ ಸಂಪರ್ಕಗಳನ್ನು ಸ್ಥಗಿತಗೊಳಿಸಿದ್ದರಿಂದ ಶ್ರೀನಗರದಲ್ಲಾದ 250ಕ್ಕೂ ಹೆಚ್ಚು ಕಲ್ಲು ತೂರಾಟದ ಪ್ರಕರಣಗಳು ಯಾರಿಗೂ ಗೊತ್ತಾಗಲೇ ಇಲ್ಲ. ಈಗ ದೂರವಾಣಿ ತೆರೆದುಕೊಳ್ಳುವ ಮುನ್ನ ಪಾಕಿಸ್ತಾನಕ್ಕೆ ಅನುಕಂಪ ತೋರಬಲ್ಲ ರಾಷ್ಟ್ರಗಳಿಗೆ ಹೋಗಿ ಮೋದಿ ಒಟ್ಟಾರೆ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ವಿವರಿಸಿ ಬಂದುಬಿಟ್ಟಿದ್ದಾರೆ. ಅಲ್ಲಿಗೆ ಕಾಶ್ಮೀರದ ಪ್ರತ್ಯೇಕತಾವಾದಿಗಳ ಕಥೆ ಮುಗಿದಂತೆಯೇ!


ಕಾಂಗ್ರೆಸ್ಸು ಉರಿಯುವ ಬೆಂಕಿಗೆ ತುಪ್ಪ ಸುರಿಯಬಹುದಿತ್ತೇನೋ? ಆದರೆ ಅದರ ಅಂಗಳದಲ್ಲೇ ಜ್ವಾಲಾಮುಖಿ ಸ್ಫೋಟಗೊಂಡಿದೆ. ಚಿದಂಬರಂ ಕಂಬಿ ಎಣಿಸಲು ಕ್ಷಣಗಣನೆ ಮಾಡುತ್ತಿದ್ದಾನೆ. ಏಕವಚನಕ್ಕೆ ಬೇಸರಿಸಿಕೊಳ್ಳಬೇಡಿ. ಅಪವಾದವೇ ಸಾಬೀತಾಗುವ ಮುನ್ನ ಸಾಧು-ಸಂತರನ್ನು ಏಕವಚನದಿಂದ ಕರೆಯಬಹುದೆಂಬುದನ್ನು ಕಾಂಗ್ರೆಸ್ ಬೆಂಬಲಿತ ಪತ್ರಕರ್ತರೇ ಹೇಳಿಕೊಟ್ಟಿದ್ದಲ್ಲವೇ? ಅಂದಹಾಗೆ ಪಕ್ಷ ತನ್ನ ಸಹಕಾರಕ್ಕೆ ಬರಲಿಲ್ಲವೆಂದು ಚಿದು ಆಂತರಿಕ ಸಂಗತಿಗಳನ್ನು ಬಾಯ್ಬಿಟ್ಟರೆ ಇನ್ನೆಷ್ಟು ಜನಕ್ಕೆ ಕುಣಿಕೆ ಬಿಗಿಯಾಗಲಿದೆಯೋ ದೇವರೇ ಬಲ್ಲ. ಆದರೆ ಒಂದಂತೂ ಸತ್ಯ. ಮೋದಿ-ಶಾಹ್ ಜೋಡಿ ಯಾರಿಗೂ ಹೋಲಿಸಲಾಗದಂತಹ ಅಪರೂಪದ ಜೋಡಿಯಾಗಿ ಬೆಳೆದು ನಿಂತುಬಿಟ್ಟಿದ್ದಾರೆ. ಇಂತಹುದೊಂದು ಸಮರ್ಥ ಪಡೆ ಭಾರತಕ್ಕೆ ಅಗತ್ಯವಿತ್ತು. ಅನೇಕ ವರ್ಷಗಳ ತಪಸ್ಸಿನ ನಂತರ ದೇಶ ದಕ್ಕಿಸಿಕೊಂಡಿರುವ ಆಡಳಿತಗಾರರಿವರು!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top