National

2019 ರ ಕದನ ಏನಾಗಬಹುದೆಂಬ ಕುತೂಹಲ!

ಐದು ರಾಜ್ಯಗಳ ಚುನಾವಣೆಯಲ್ಲಿ ಭಾಜಪದ ಸೋಲನ್ನು ನರೇಂದ್ರಮೋದಿಯವರ ಸೋಲೆಂದು ಬಿಂಬಿಸಲು ಕಾಂಗ್ರೆಸ್ಸು ಯತ್ನಿಸುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಮೋದಿಯವರ ಅಭಿಮಾನಿಗಳಂತೂ ಅದನ್ನು ಹಾಗೆಯೇ ಭಾವಿಸಿಬಿಟ್ಟಿದ್ದಾರೆ. ಎಲ್ಲಾ ಮೋದಿ ಪರ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಚಚರ್ೆ. ಸೋಲಿಗೆ ಕಾರಣವೇನೆಂಬುದರ ವಿಮಶರ್ೆ. ಅವರು ಹಾಗೆ ಮಾಡಬೇಕಾದ್ದು ಸಹಜವೇ. ಏಕೆಂದರೆ ಯಾವ ರಾಜ್ಯಗಳ ಚುನಾವಣೆಗಳನ್ನು ಗೆದ್ದಾಗಲೂ ಅದರ ಎಲ್ಲಾ ಶ್ರೇಯವನ್ನು ನರೇಂದ್ರಮೋದಿಗೇ ಕೊಟ್ಟಿದ್ದರಿಂದ ಈಗ ಅಪಕೀತರ್ಿಯನ್ನೂ ಸಹಿಸಲೇಬೇಕಲ್ಲವೇ. ಅಮಿತ್ಶಾರನ್ನು ಚಾಣಕ್ಯರೆಂದು ಕರೆದ ನಂತರ ಸೋಲಿನ ಹೊಣೆಯನ್ನು ಚಾಣಕ್ಯನೇ ಹೊರಬೇಕಲ್ಲವೇ. ಹೀಗಾಗಿ ಚಿಂತೆಪಡುವ ಅಗತ್ಯ ಖಂಡಿತ ಇಲ್ಲ. ಆದರೆ, ರಾಷ್ಟ್ರವಾದಿಗಳ ಮಾನಸಿಕತೆಯ ಕುರಿತಂತೆ ಎಚ್ಚರಿಕೆಯಿಂದರಬೇಕಾದ ಅಗತ್ಯವಿದೆ.

ಇತಿಹಾಸದ ಯಾವುದೇ ಕಾಲಘಟ್ಟದಲ್ಲಾದರೂ ಸರಿ. ರಾಷ್ಟ್ರದ ಪರವಾಗಿ ನಿಲ್ಲುವವರು ಸ್ವಾಭಿಮಾನಿಗಳೇ. ಅವರು ಯಾರಿಂದಲೋ ಹಣ ಪಡೆದು ಕೀತರ್ಿ ದಕ್ಕುವುದೆಂಬ ಅಭಿಲಾಷೆಯಿಂದ ರಾಷ್ಟ್ರದ ಪರವಾಗಿ ನಿಲ್ಲುವವರಲ್ಲ. ಬದಲಿಗೆ ತಮ್ಮೆಲ್ಲವನ್ನೂ ರಾಷ್ಟ್ರಕ್ಕಾಗಿ ಸಮಪರ್ಿಸಿಯೇ ಸ್ವಾಭಿಮಾನದಿಂದ ಈ ಕೈಂಕರ್ಯವನ್ನು ಮೇಲೆಳೆದುಕೊಳ್ಳುವವರು. ಹೀಗಾಗಿಯೇ ಅವರ ಈ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದೊಡನೆ ಅವರು ಪ್ರತಿಭಟಿಸುತ್ತಾರೆ ಅಥವಾ ತಾವು ಮಾಡುತ್ತಿದ್ದ ಕೈಂಕರ್ಯದಿಂದ ದೂರವಾಗಿಬಿಡುತ್ತಾರೆ. ಕೆಲವೊಮ್ಮೆ ಇದೇ ರಾಷ್ಟ್ರವಾದಿಗಳು ತಮಗಾದ ಅವಮಾನಕ್ಕೆ ತಾವು ನಂಬಿಕೊಂಡ ಸಿದ್ಧಾಂತವನ್ನೇ ವಿರೋಧಿಸಿ ಅದಕ್ಕೆ ವಿರುದ್ಧವಾದ ಕಾರ್ಯ ಮಾಡಬಹುದೆಂಬುದನ್ನೂ ಗಮನಿಸಬಹುದು. ಅದಕ್ಕೆ ಇಂಥವರನ್ನು ಸಂಭಾಳಿಸುವುದು ಬಲು ಕಷ್ಟ. ಪ್ರತಿ ಶಿವಾಜಿ ಎಂದೇ ಕರೆಯಲ್ಪಡುತ್ತಿದ್ದ ನೇತಾಜಿ ಪಾಲ್ಕರ್ ಶಿವಾಜಿ ಮಹಾರಾಜರ ಬಲಗೈಯಂತಿದ್ದು ಒಂದು ಹಂತಕ್ಕೆ ಅವರದ್ದೇ ವಿರುದ್ಧ ಶತ್ರುಗಳ ಸೇನೆ ಸೇರಿದುದರಿಂದ ಹಿಡಿದು ತನ್ನ ರಾಷ್ಟ್ರವಾದಿ ಚಿಂತನೆಗಳಿಂದ ಜನಮನ ಸೂರೆಗೊಂಡಿದ್ದ ನವಜೋತ್ಸಿಂಗ್ ಸಿದ್ದು ಪಾಕಿಸ್ತಾನದ ಕೈಗೊಂಬೆಯಾಗಿ ಮಾರ್ಪಡುವವರೆಗೂ ಇದು ನಮ್ಮನ್ನು ಹೊಕ್ಕಿರುವ ವೈರಸ್ಸು. ತಪ್ಪದೇ ಸಂಘದ ಶಾಖೆಗಳಿಗೆ ಹೋಗುತ್ತಾ ರಾಷ್ಟ್ರವಾದಕ್ಕಾಗಿ ಮನೆ-ಮಠವನ್ನು ಎದುರು ಹಾಕಿಕೊಂಡವರು ಭಾಜಪದ ಶಾಸಕ ತನ್ನ ಮಾತು ಕೇಳಲಿಲ್ಲವೆಂಬ ಕಾರಣವೊಂದಕ್ಕೆ ಕಾಂಗ್ರೆಸ್ಸಿನ ನಾಯಕರ ಪರವಾಗಿ ನಿಂತು ತಾನು ನಂಬಿಕೊಂಡು ಬಂದ ಸಿದ್ಧಾಂತ-ತತ್ತ್ವಗಳನ್ನು ವಿರೋಧಿಸಿ ನಿಂತಿರುವುದನ್ನು ನಾನು ನೋಡಿದ್ದೇನೆ! ಇದೊಂದು ಬಲು ವಿಚಿತ್ರವಾದ ಪ್ರಸಂಗ.

ಮೋದಿಯವರು ಚುನಾವಣೆಗಳ ಮೇಲೆ ಚುನಾವಣೆಗಳನ್ನು ಗೆಲ್ಲುತ್ತಾ ಹೋದಂತೆ ಅವರನ್ನು ಬೆಂಬಲಿಸುತ್ತಾ ಆರಾಧಿಸುತಿದ್ದವರಲ್ಲನೇಕರು 5 ರಾಜ್ಯಗಳಲ್ಲಿ ಭಾಜಪ ಅಧಿಕಾರ ಗಳಿಸಲಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಪ್ರತಿರೋಧಕ್ಕೆ ನಿಂತುಬಿಟ್ಟರು. ಹಳೆಯ ದ್ವೇಷವನ್ನೆಲ್ಲಾ ತೀರಿಸಿಕೊಳ್ಳಲು ಕಾತರರಾಗಿರುವಂತೆ ಪ್ರಧಾನಸೇವಕರ ಮೇಲೆ ಮುಗಿಬಿದ್ದರು. ನರೇಂದ್ರಮೋದಿಯವರ ಯಾವ ಯೋಜನೆಗಳು ಅವರಿಗೆಲ್ಲಾ ಪ್ರಗತಿಯ ಮಾನದಂಡಗಳಾಗಿ ಕಾಣುತ್ತಿದ್ದವೋ ಇಂದು ಅದೇ ಯೋಜನೆಗಳಲ್ಲಿ ಪರಿಪೂರ್ಣತೆಯ ಕೊರತೆಯನ್ನು ಅವರುಗಳೇ ಹುಡುಕಾಡಲಾರಂಭಿಸಿದರು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನೆಲದ ಕೂಗನ್ನು ಅರಿಯಲಾಗದ ಜನ ಮುಗಿಲ ಛಾವಣಿಯಲ್ಲಿ ನಿಂತು ಅಶರೀರವಾಣಿ ಮೊಳಗಿಸುತಿದ್ದರು. ಸರಳವಾದ ಕೆಲವು ಸಂಗತಿಗಳು ನಮಗೆ ಬಹುತೇಕರಿಗೆ ಅರ್ಥವೇ ಆಗಲಿಲ್ಲ. ಚುನಾವಣೆಗೂ ಮುನ್ನ ಎಲ್ಲ ಮಾಧ್ಯಮಗಳು ರಾಜಸ್ಥಾನದಲ್ಲಿ ಮೋದಿ ಪಾಳಯಕ್ಕೆ ಹೀನಾಯ ಸೋಲು ಎಂಬುದನ್ನು ಖಾತ್ರಿ ಪಡಿಸಿದ್ದವು. ಅದಕ್ಕೆ ವಸುಂಧರಾ ರಾಜೆಯ ದುರಾಡಳಿತವೇ ಕಾರಣ ಎಂಬುದನ್ನು ಅವರು ಗುರುತಿಸಿದ್ದರು. ಆಕೆಯ ಕುರಿತಂತೆ ಸಾಮಾನ್ಯ ಬಿಜೆಪಿ ಕಾರ್ಯಕರ್ತನೂ ಅಸಮಾಧಾನ ವ್ಯಕ್ತಪಡಿಸುವುದನ್ನು ಪ್ರತಿಯೊಬ್ಬರೂ ಅರಿತಿದ್ದರು. ಮತ್ತೊಂದೆಡೆ 15 ವರ್ಷಗಳಿಂದ ಅಧಿಕಾರದಲ್ಲಿರುವ ಶಿವರಾಜ್ಸಿಂಗ್ ಚೌಹಾಣ್ ಗೆಲುವಿಗೆ ಕಷ್ಟ ಪಡಬೇಕಾಗುತ್ತದೆಂಬುದು ಎಲ್ಲರ ಅಭಿಪ್ರಾಯವಾಗಿತ್ತು. ನೆನಪಿಡಿ. 15 ವರ್ಷ ಸಾಮಾನ್ಯವಾದ ಅವಧಿಯಲ್ಲಿ ತೀರಾ ಕಮ್ಯುನಿಸ್ಟ್ ರಾಜ್ಯಗಳಂತೆ ಪ್ರಜಾಪ್ರಭುತ್ವವನ್ನೆಲ್ಲಾ ಗಾಳಿಗೆ ತೂರಿ ಅಧಿಕಾರ ನಡೆಸುವುದಾದರೆ ಅದು ಬೇರೆಯೇ ಮಾತು. ಗುಂಡಾಗಿರಿ ಇಲ್ಲದೇ ಜನಸಾಮಾನ್ಯರನ್ನು ಒಲಿಸಿಕೊಂಡು ಇಷ್ಟು ದೀರ್ಘಕಾಲ ಅಧಿಕಾರ ನಡೆಸಿ ಮತ್ತೊಂದು ಅವಧಿಯನ್ನು ಜನರೆದುರು ಕೇಳಿಕೊಳ್ಳುವುದು ಛಾತಿಯ ಮಾತೇ ಆಗಿತ್ತು. ಖ್ಯಾತ ಮುಖ್ಯಮಂತ್ರಿ ಸಿದ್ದರಾಮಯ್ಯ ಆಳಿದ ಐದೇ ವರ್ಷದ ಅವಧಿಯಲ್ಲಿ ಅತ್ಯಂತ ಹೀನಾಯ ಸೋಲನ್ನು ಮೈಮೇಲೆಳೆದುಕೊಂಡು ಆಡಳಿತ ವಿರೋಧಿ ಅಲೆಗೆ ಬಲಿಯಾಗಿಬಿಟ್ಟರು. ಹೀಗಾಗಿ ಮಧ್ಯಪ್ರದೇಶದಲ್ಲಿ ಹೀಗೊಂದು ಸವಾಲಿದ್ದದ್ದು ಮೊದಲೇ ಗೊತ್ತಿತ್ತು. ಛತ್ತೀಸ್ಘಡದಲ್ಲಿ ಮಾತ್ರ ಭಾಜಪದ ಗೆಲುವು ಖಾತ್ರಿ ಎಂದು ಪ್ರತಿಯೊಬ್ಬರೂ ಮಾತನಾಡಿಕೊಳ್ಳುತ್ತಿದ್ದರು. ಡಾ.ರಮಣ್ಸಿಂಗರ ಶ್ರೇಷ್ಠ ಆಡಳಿತ, ಪ್ರಗತಿಪರ ಚಿಂತನೆಗಳು ಇವೆಲ್ಲವೂ ಎದುರಾಳಿಗಳ ನಿದ್ದೆಗೆಡಿಸಿದ್ದವು. ಇನ್ನು ತೆಲಂಗಾಣದಲ್ಲಿ ಬಿಜೆಪಿಗೆ ಅವಕಾಶಗಳು ಇರಲೇ ಇಲ್ಲ. ಮಿಜೋರಾಂನಲ್ಲಿ ಎನ್ಡಿಎ ಬೆಂಬಲಿತ ಪಕ್ಷ ಗೆಲ್ಲುವುದು ನಿಚ್ಚಳವೆಂದು ಖಾತ್ರಿಯಿತ್ತು.

ಈಗ ಫಲಿತಾಂಶದೊಂದಿಗೆ ಒಮ್ಮೆ ತುಲನೆ ಮಾಡಿ ನೋಡಿ. ರಾಜಸ್ಥಾನದಲ್ಲಿ ಚುನಾವಣೆಗೆ ಮುನ್ನ ಎಷ್ಟು ಸೀಟುಗಳು ಬರಬಹುದೆಂದು ಹೇಳಲಾಗಿತ್ತೋ ಅದಕ್ಕಿಂತಲೂ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗಳಿಸಿಕೊಂಡಿತ್ತು. ಹಾಗೆ ನೋಡುವುದಾದರೆ ಕನರ್ಾಟಕದಲ್ಲಿ ಜನತಾದಳವಿರುವಂತೆ ರಾಜಸ್ಥಾನದಲ್ಲೂ ಬಲವಾದ ಮೂರನೇ ಪಕ್ಷವೊಂದಿದ್ದರೆ ಕಾಂಗ್ರೆಸ್ಸಿನಿಂದ ಆ ಸಕರ್ಾರ ತಪ್ಪುವುದು ನಿಶ್ಚಿತವಾಗುತ್ತಿತ್ತು. ಇತ್ತ ಮಧ್ಯಪ್ರದೇಶದಲ್ಲಿ 15 ವರ್ಷಗಳ ನಂತರವೂ ಶಿವರಾಜ್ಸಿಂಗ್ ಚೌಹಾಣ್ ಕೊನೆಯ ಕ್ಷಣದವರೆಗೆ ಕಾಂಗ್ರೆಸ್ಸಿನ ಕಣ್ಣಲ್ಲಿ ನೀರಿಳಿಯುವಂತೆ ಮಾಡಿದ್ದು ವಿಶಿಷ್ಟವೇ ಆಗಿತ್ತು. ಎಲ್ಲಕ್ಕೂ ಮಿಗಿಲಾಗಿ ಅಲ್ಲಿ ಕಾಂಗ್ರೆಸ್ ಪಡೆದಿರುವುದಕ್ಕಿಂತ ಹೆಚ್ಚು ವೋಟನ್ನು ಬಿಜೆಪಿಯೇ ಪಡೆದಿರುವುದು ಚಚರ್ೆಗೆ ಗ್ರಾಸವಾಗಿತ್ತು. ಬಿಜೆಪಿಯ ಸೋಲಿಗೆ ಕಾರಣವಾಗಿದ್ದು ನಾಲ್ಕುವರೆ ಸಾವಿರ ವೋಟುಗಳಿಗಿಂತಲೂ ಕಡಿಮೆ ಎನ್ನುವುದು ಕಾಂಗ್ರೆಸ್ಸಿನ ನಿದ್ದೆಗೆಡಿಸಿರಲಿಕ್ಕೂ ಸಾಕು. ಬಿಜೆಪಿಯ ಪಾಲಿಗೆ ಅಚ್ಚರಿಯಾದದ್ದು ಛತ್ತೀಸ್ಘಡದ ಫಲಿತಾಂಶವೇ. ರಮಣ್ಸಿಂಗ್ ಈ ರೀತಿಯಲ್ಲಿ ಸೋಲಬಹುದೆಂದು ಯಾರೂ ಊಹಿಸಿರಲಿಲ್ಲ. ಮಿಜೋರಾಂನಲ್ಲಿ ಕಾಂಗ್ರೆಸ್ಸು ಪೂರ್ಣ ನೆಲಕಚ್ಚುವ ಮೂಲಕ ಈಶಾನ್ಯ ರಾಜ್ಯದ ತನ್ನ ಪ್ರಾಬಲ್ಯವನ್ನು ಸಮಾಪ್ತಿಗೊಳಿಸಿತ್ತು!

ಈಗ ಅಸಲಿ ವಿಶ್ಲೇಷಣೆಗೆ ಬನ್ನಿ. ಛತ್ತೀಸ್ಘಡ ಗೆಲುವು ಖಾತ್ರಿ ಎಂದು ಪ್ರತಿಯೊಬ್ಬರೂ ಹೇಳಿದ್ದರಿಂದ ನರೇಂದ್ರಮೋದಿ ಅಲ್ಲಿ ಮಾಡಿದ ರ್ಯಾಲಿಗಳು ಅತ್ಯಂತ ಕಡಿಮೆ. ಮಧ್ಯಪ್ರದೇಶದಲ್ಲಿ ಶಿವರಾಜ್ಸಿಂಗ್ ಚೌಹಾಣ್ರು ಗೆಲುವಿನ ಹೊಣೆಗಾರಿಕೆ ಹೊತ್ತು ತಾನು ಗೆಲ್ಲುವುದು ಖಾತ್ರಿ ಎಂಬ ಭಾವನೆ ವ್ಯಕ್ತಪಡಿಸಿದ್ದರಿಂದ ಮೋದಿ ಅಲ್ಲಿಯೂ ಬಹಳವಾಗಿ ತಿರುಗಾಡಲಿಲ್ಲ. ಅವರಿಗೆ ಸವಾಲಾಗಿ ಕಂಡಿದ್ದು ರಾಜಸ್ಥಾನವೇ. ರಾಜಸ್ಥಾನದ ಯಾವ ಚುನಾವಣಾ ಪ್ರಕ್ರಿಯೆಯಲ್ಲೂ ಮೂಗು ತೂರಿಸದೇ ರ್ಯಾಲಿಗಳಲ್ಲೇ ಉತ್ಸುಕತೆ ತೋರಿದ ಮೋದಿ ಅದೆಷ್ಟು ಜೀವ ಸವೆಸಿದರೆಂದರೆ ಫಲಿತಾಂಶ ಬಂದಾಗ ರಾಜಸ್ಥಾನದ ಕಾಂಗ್ರೆಸ್ಸಿಗರಿಗೆ ಅಚ್ಚರಿಯಾಗಿತ್ತು. ಏಕೆಂದರೆ ಎಲ್ಲರೂ ಊಹಿಸಿದಂತಹ ಹೀನಾಯ ಸೋಲು ಅಲ್ಲಿ ಬಿಜೆಪಿಗೆ ಆಗಿರಲಿಲ್ಲ. ಮತ್ತು ಅದಕ್ಕೆ ಕಾರಣ ನರೇಂದ್ರಮೋದಿಯವರ ಅವಿರತ ರ್ಯಾಲಿಗಳೇ ಆಗಿದ್ದವು. ಹಾಗೆ ನೋಡಿದರೆ ನರೇಂದ್ರಮೋದಿಯವರ ಸ್ಟ್ರೈಕ್ ರೇಟ್ ಈಗಲೂ ಜೋರಾಗಿಯೇ ಇದೆ. ರಾಹುಲ್ ಎಲ್ಲೆಲ್ಲಿ ಭಾಷಣ ಮಾಡಿದರೋ ಅಂತಹ ಬಹುತೇಕ ಕಡೆ ಕಾಂಗ್ರೆಸ್ಸು ಸೋತಿದೆ. ಆದರೆ ಮೋದಿ ಭಾಷಣ ಮಾಡಿದೆಡೆಯಲ್ಲೆಲ್ಲಾ ಬಿಜೆಪಿ ಅಕ್ಕಪಕ್ಕದ ಸೀಟುಗಳನ್ನೂ ಗೆದ್ದಿದೆ. ಅದರರ್ಥ ಈಗಲೂ ಮೋದಿ ಈ ದೇಶದ ನಂಬರ್ ಒನ್ ಆಯ್ಕೆ ಅಂತ. ಬಹುಶಃ ಶಿವರಾಜ್ಸಿಂಗ್ ಚೌಹಾಣ್ ಮತ್ತೊಮ್ಮೆ ಚುನಾವಣೆಯನ್ನು ಗೆದ್ದಿದ್ದರೆ ಅವರು ಪ್ರಧಾನಮಂತ್ರಿ ಪಟ್ಟಕ್ಕೆ ಸಮರ್ಥವಾದ ಪ್ರತಿಸ್ಪಧರ್ಿಯಾಗಿ ಮೋದಿ ವಿರೋಧಿ ಮಾಧ್ಯಮಗಳಿಂದ ಬಿಂಬಿಸಲ್ಪಡುತ್ತಿದ್ದರೇನೋ! ಚುನಾವಣೆಯ ನಂತರ ಮೋದಿಯ ಬದಲಿಗೆ ಇನ್ನೊಂದು ಆಯ್ಕೆಯಾದರೂ ಮೋದಿ ವಿರೋಧಿ ಬಿಜೆಪಿಗರಲ್ಲಿ ಖಂಡಿತ ಇರುತ್ತಿತ್ತು. ಆದರೀಗ ಅವ್ಯಾವಕ್ಕೂ ಅವಕಾಶವೇ ಇಲ್ಲ. ಭಾಜಪಕ್ಕೆ, ಜನರಿಗೆ ಮತ್ತು ದೇಶಕ್ಕೆ ಮೋದಿಯೊಂದೇ ಆಯ್ಕೆ. 2014ರಲ್ಲಿಯೇ ರಾಜ್ದೀಪ್ ಸರ್ದೇಸಾಯಿ, ಸಾಗರಿಕಾಳಂತಹ ಪತ್ರಕರ್ತರು ಮೋದಿಗಿಂತ ಚೌಹಾಣ್ ಪರವಾಗಿಲ್ಲ ಎಂದು ಜನರ ಮುಂದೆ ಮಂಡಿಸಲು ಶುರುಮಾಡಿದ್ದರು. ಆದರೆ ಈ ಬಾರಿ ಮೋದಿಯನ್ನುಳಿದರೆ ಅಂತಹ ಯಾವ ಆಯ್ಕೆಗಳೂ ಬಾಕಿ ಉಳಿದಿಲ್ಲ. ಹೀಗಾಗಿ ಗೆಲುವಿಗೆ ಮೋದಿ ಇನ್ನೊಂದು ಹೆಜ್ಜೆ ಹತ್ತಿರ ಹೋದಂತೆಯೇ ಆಯ್ತು.

ಮತ್ತೊಂದು ಅಚ್ಚರಿ ಏನು ಗೊತ್ತೇ?! ಮೊದಲ ಮೂರ್ನಾಲ್ಕು ದಿನ ಈ ರಾಜ್ಯಗಳ ಸೋಲಿನ ಹತಾಶೆಯಿಂದ ಮೋದಿ ವಿರುದ್ಧವಾಗಿ ಮಾತನಾಡುತ್ತಿದ್ದದ್ದು ಒಂದಾದರೆ ಆನಂತರ ಇದ್ದಕ್ಕಿದ್ದಂತೆ ಅದೇ ಜನ ಮೊದಲಿಗಿಂತ ಹೆಚ್ಚು ಗಾಢವಾಗಿ ಮೋದಿಯ ಬೆಂಬಲಕ್ಕೆ ನಿಂತರು. ಅನೇಕರು ಮುಂದಿನ ಮೂರ್ನಾಲ್ಕು ತಿಂಗಳುಗಳ ಕಾಲ ಕೆಲಸಕ್ಕೂ ಹೋಗದೇ ಮೋದಿ ಪ್ರಚಾರಕ್ಕೆ ನಿಲ್ಲುವುದಾಗಿ ಹೇಳಿಕೊಳ್ಳಲಾರಂಭಿಸಿದರು. ವಿದೇಶದಲ್ಲಿದ್ದ ಭಾರತೀಯರಿಗಂತೂ ರಾತ್ರಿ ನಿದ್ದೆ ಹತ್ತದಂತಾಯ್ತು. ಅವರೀಗ ಮೋದಿಗಾಗಿ ಏನು ಮಾಡಲೂ ಸಿದ್ಧವೆಂದು ಹೇಳಿಕೆಕೊಟ್ಟರು. ಒಟ್ಟಾರೆ ರಾಹುಲ್ ಪ್ರಧಾನಿಯಾಗಿಬಿಡಬಹುದೆಂಬ ಸಂಗತಿಯನ್ನು ಕನಸಿನಲ್ಲಿ ಕಂಡು ಬೆಚ್ಚಿಬೀಳುವಂತಾದರು ಜನ. ಅವರೆಲ್ಲರೂ ತಮ್ಮ ಮನಸ್ಸಿನೊಳಗಿದ್ದ ಮೋದಿಯ ಕುರಿತಂತ ಬೇಸರವನ್ನು ಪಕ್ಕಕ್ಕಿಟ್ಟು ಮುಖ್ಯ ಭೂಮಿಕೆಗೆ ಧುಮುಕಲು ಸಿದ್ಧರಾದರು. ಈ ಹಿನ್ನೆಲೆಯಲ್ಲಿ ಈ ಪಂಚರಾಜ್ಯಗಳ ಚುನಾವಣೆ ಮೋದಿಗೆ ವರದಾನವಾಯ್ತೆಂದು ಎಂಥವನಿಗೂ ಅನ್ನಿಸದಿರಲಾರದು. ಈಗ ಮೋದಿಯೆದುರಿಗೆ ನಿಜವಾದ ಸವಾಲಿದೆ. ಜನ ತಮ್ಮೆಲ್ಲ ಒತ್ತಡಗಳ ನಡುವೆ ಮೋದಿಯಿಂದ ಬಲು ದೊಡ್ಡದ್ದನ್ನು ಬಯಸುತ್ತಿದ್ದಾರೆ. ಅಪೇಕ್ಷೆಗಳು ಮುಗಿಲೆತ್ತರಕ್ಕೆ ಇವೆ. ಉಳಿದಿರುವ ಮೂರ್ನಾಲ್ಕು ತಿಂಗಳಲ್ಲಿ ಮೋದಿ ಅವೆಲ್ಲವನ್ನೂ ಹೇಗೆ ಈಡೇರಿಸುತ್ತಾರೋ ಕಾದು ನೋಡಬೇಕಿದೆ. ಅವರಿಗೂ ಸವಾಲುಗಳೇನು ಕಡಿಮೆಯಿಲ್ಲ! ಕೊಬ್ಬಿ ಬೆಳೆದು ಕೆಲಸ ಮಾಡುವುದನ್ನೇ ಮರೆತಿದ್ದ ಉನ್ನತ ಅಧಿಕಾರಿಗಳಿಗೆಲ್ಲ ಕಳೆದೈದು ವರ್ಷಗಳಲ್ಲಿ ರಾತ್ರಿಯ ನಿದ್ದೆ ಹಾರಿಹೋಗಿದೆ. ಅವರೀಗ ಮೋದಿ ಮತ್ತೆ ಗೆಲ್ಲವುದನ್ನು ವಿರೋಧಿಸುತ್ತಿದ್ದಾರೆ. ಇವರುಗಳನ್ನು ಸೂಕ್ತ ಸಂದರ್ಭದಲ್ಲಿ ಮಟ್ಟಹಾಕುವುದು ಜನರ ಆತ್ಮಸ್ಥೈರ್ಯವನ್ನು ಖಂಡಿತ ವೃದ್ಧಿಸಲಿದೆ. ಐದು ವರ್ಷಗಳ ಅಧಿಕಾರದ ನಂತರವೂ ದೆಹಲಿಯಲ್ಲಿರುವ ಗೂಳಿಯಂತಹ ಅಧಿಕಾರಿ ವರ್ಗದ ಮೇಲೆ ಸಂಪೂರ್ಣ ಹಿಡಿತವನ್ನು ತಂದುಕೊಳ್ಳಲಾಗಲಿಲ್ಲವೆಂಬುದು ಒಪ್ಪಿಕೊಳ್ಳಲೇಬೇಕಾದ ಸತ್ಯ. ಹೀಗಾಗಿ ಮೋದಿ ಅವರೆಲ್ಲರ ಕುರಿತಂತೆ ಮಾತನಾಡದೇ ಆಯಕಟ್ಟಿನ ಜಾಗದಲ್ಲಿ ತಮಗೆ ಬೇಕಾದವರನ್ನೇ ಹಾಕಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಇನ್ನು ನ್ಯಾಯಾಸ್ಥಾನದ ಮುಖ್ಯ ಹುದ್ದೆಗಳಲ್ಲಿ ಕುಳಿತಿರುವವರು ಮನಸೋ ಇಚ್ಛೆ ಕೊಡುತ್ತಿರುವ ತೀಪರ್ಿನಿಂದಾಗಿ ದೇಶದ ಆತ್ಮಸ್ಥೈರ್ಯ ಕದಡಿಹೋಗುತ್ತಿದೆ. ಜನ ರೊಚ್ಚಿಗೆದ್ದು ಕುಳಿತಿದ್ದಾರೆ. ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ತೆರಿಗೆಯನ್ನು ವಂಚಿಸಿ ರೂಢಿಯಾಗಿ ಹೋಗಿದ್ದ ಬಂಡವಾಳಶಾಹಿಗಳು, ಕೆಲವೊಮ್ಮೆ ಸ್ಥಳೀಯ ವ್ಯಾಪಾರಿಗಳು ಎಲ್ಲರೂ ಐದು ವರ್ಷಗಳಲ್ಲಿ ಸಾಕಷ್ಟು ಹೈರಾಣಾಗಿದ್ದಾರೆ. ತೆರಿಗೆಯನ್ನು ಕಟ್ಟಲೇಬೇಕಾದ ಅನಿವಾರ್ಯತೆಗೆ ಸಿಲುಕಿ ಮೋದಿಯ ಕುರಿತಂತೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬೇಕರಿಯವರೊಬ್ಬರು ಡಿಮಾನಿಟೈಸೇಷನ್ನ ಮನಸೋ ಇಚ್ಛೆ ಜರಿಯುತ್ತಿದ್ದರು. ಏಕೆಂದು ಕೇಳಿದ್ದಕ್ಕೆ ನಾಲ್ಕು ಮದುವೆಯಾಗಿರುವ ಮುಸಲ್ಮಾನ ಗಿರಾಕಿಯೊಬ್ಬ ಅಷ್ಟೂ ಪರಿವಾರಗಳಿಗೆ ಪ್ರತಿನಿತ್ಯ 8 ರಿಂದ 10 ಸಾವಿರದಷ್ಟು ಮೌಲ್ಯದ ಸಿಹಿಯನ್ನು ಅವನಂಗಡಿಯಿಂದ ಒಯ್ಯುತ್ತಿದ್ದನಂತೆ. ನೋಟು ಅಮಾನ್ಯೀಕರಣದ ನಂತರ ಆತ ವಾರಕ್ಕೊಮ್ಮೆ ಒಯ್ಯಲಾರಂಭಿಸಿದನಂತೆ. ಆದರೆ ಆ ವ್ಯಕ್ತಿಗೆ ಇಷ್ಟು ಹಣ ಎಲ್ಲಿಂದ ಬರುತ್ತಿತ್ತು, ಆತ ಮಾಡಬಹುದಾಗಿದ್ದ ಕೃತ್ಯಗಳಾದರೂ ಏನು ಎಂಬುದನ್ನು ಈ ಪುಣ್ಯಾತ್ಮ ವಿಚಾರಿಸುವ ಗೋಜಿಗೇ ಹೋಗಿರಲಿಲ್ಲ. ಆತನ ಆ ಕೃತ್ಯದಿಂದ ದೇಶದ ಸುರಕ್ಷತೆಗೆ ಆಗಬಹುದಾದ ತೊಂದರೆಗಳ ಕುರಿತಂತೆಯೂ ಆತ ಲೆಕ್ಕ ಹಾಕಿರಲಿಲ್ಲ. ತನಗೆ ವೈಯಕ್ತಿಕವಾಗಿ ಆದ ತೊಂದರೆಯೇ ಆತನ ಪಾಲಿಗೆ ಬೆಟ್ಟವಾಗಿತ್ತು. ನಮ್ಮ ದೋಷ ಅದೇ. ನಮ್ಮ ದೇಶ ಜಗತ್ತಿನಲ್ಲೇ ಶ್ರೇಷ್ಠ ರಾಷ್ಟ್ರವಾಗಬೇಕೆಂದು ಭಾವಿಸುತ್ತೇವೆ. ಅದಕ್ಕಾಗಿ ಇತರರು ತ್ಯಾಗ ಮಾಡಬೇಕೇ ಹೊರತು ತಾನಲ್ಲ ಎಂದು ನಿಶ್ಚಯಿಸಿಬಿಡುತ್ತೇವೆ. ಮೋದಿ ಇಂಥವರನ್ನು ಎದುರಿಸಬೇಕಿದೆ. ಇನ್ನು ಜಾತಿ ರಾಜಕಾರಣ ಬಲವಾಗಿದ್ದಷ್ಟೂ ಪಕ್ಷಗಳ ಏಜೆಂಟರುಗಳಾಗಿ ತಮ್ಮ ಆಸೆಗಳನ್ನು ತೀರಿಸಿಕೊಳ್ಳುವ ಕೆಲವು ಮಧ್ಯವತರ್ಿಗಳಿಗೆ ಮೋದಿಯ ಆಗಮನದಿಂದಾಗಿ ಸಾಕಷ್ಟು ಹೊಡೆತ ಬಿದ್ದಿದೆ. ಅವರೀಗ ವಿಕಾಸದೆಡೆಗೆ ಓಡುತ್ತಿರುವ ಜನ ಜಾತಿಯನ್ನು ಮರೆತು ರಾಷ್ಟ್ರದ ಅಭಿವೃದ್ಧಿಯ ಪಥದಲ್ಲಿ ನಿಂತುಬಿಡುತ್ತಾರೆಂಬ ಗಾಬರಿಯಿಂದ ಶತಾಯ-ಗತಾಯ ನರೇಂದ್ರಮೋದಿ ಅವರನ್ನು ಮನೆಗೆ ಕಳಿಸಬೇಕೆಂದಿದ್ದಾರೆ. ಇನ್ನು ಹೊರದೇಶದಿಂದ ಹಣ ಪಡೆದು ಕೆಲಸ ಮಾಡುತ್ತಿರುವ ಕೆಲವು ಮತೀಯ ಸಂಸ್ಥೆಗಳು, ಬುದ್ಧಿಜೀವಿಗಳು, ಪತ್ರಕರ್ತರು, ಸಿನಿಮಾ ನಟ-ನಟಿಯರು ಇವರೆಲ್ಲರಿಗೂ ಅಸ್ತಿತ್ವದ ಭಯ ಕಾಡುತ್ತಿದೆ. ಹೀಗಾಗಿಯೇ ಅವರೆಲ್ಲ ಮೋದಿಯನ್ನು ಸೋಲಿಸಲು ಪಣತೊಟ್ಟು ನಿಂತಿದ್ದಾರೆ.

ಅವರಿಗೆಲ್ಲ ಅನ್ನವೇ ಚಿಂತೆ. ಮೋದಿ ಮತ್ತೆ ಬಂದರೆ ತಮ್ಮ ಐಷಾರಾಮಿ ಬದುಕಿಗೆ ಕುತ್ತು ಬರುವುದೆಂಬ ಹೆದರಿಕೆ. ಆದರೆ ರಾಷ್ಟ್ರವಾದಿಗಳಿಗೆ ಹಾಗಲ್ಲ. ಅಕಸ್ಮಾತ್ ಈ ಚುನಾವಣೆಯಲ್ಲಿ ಮೋದಿ ಸೋತುಹೋದರೆ ರಾಷ್ಟ್ರವೇ ದ್ರೋಹಿಗಳ ಕೈಗೆ ಸೇರುವ, ಇನ್ನೆಂದೂ ರಿಪೇರಿಯಾಗದ ಸ್ಥಿತಿ ತಲುಪುವ ಆತಂಕ. ಹಾಗಾದರೆ ಅದು ರಾಷ್ಟ್ರವಾದಿಯ ಸಾವೇ! ಇಂಗ್ಲೀಷಿನಲ್ಲಿ ಒಂದು ಮಾತಿದೆ. ಬೇಟೆಯಾಡುವವ ಆಹಾರಕ್ಕಾಗಿ ಕೊಲ್ಲುತ್ತಾನೆ. ಆದರೆ ಬೇಟೆಯಾಗಲು ಹೊರಟಿರುವವ ಬದುಕಿಗಾಗಿ ಓಡುತ್ತಾನೆ. ಹೀಗಾಗಿ ಕೊಲ್ಲುವವನಿಗಿಂತ ಬೇಟೆಯಾಗಲ್ಪಡುವವನೇ ಅನೇಕ ಬಾರಿ ಗೆದ್ದುಬಿಡುತ್ತಾನೆ. ಭಾರತದ ಉಳಿವಿಗಾಗಿ ಕಾದಾಟ ಮಾಡುವ ಜನ ಒಟ್ಟಾಗುತ್ತಿರುವುದರಿಂದಲೇ 2019 ಮತ್ತೊಮ್ಮೆ ಮೋದಿಯ ಪಾಲಿಗೆ ನಿಶ್ಚಿತ ಎಂದು ನಂಬಬಹುದೆನಿಸುತ್ತದೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top