National

1971ರ ಭಾರತ-ಪಾಕಿಸ್ತಾನ ಯುದ್ಧದ ಹೀರೊ ಲೆಫ್ಟಿನೆಂಟ್ ಜನರಲ್ ಜಾಕೊಬ್ ರನ್ನು ಗೌರವಿಸಿದ ಇಸ್ರೇಲ್!!

ಭಾರತ ಮತ್ತು ಇಸ್ರೇಲಿನ ಸಂಬಂಧ ದಿನದಿಂದ ದಿನಕ್ಕೆ ಗಟ್ಟಿಗೊಳ್ಳುತ್ತಿರುವ ಬೆನ್ನಲ್ಲೇ ಇಸ್ರೇಲ್ ಸರ್ಕಾರ ಏಪ್ರಿಲ್ 30, ಮಂಗಳವಾರದಂದು ಲೆಫ್ಟಿನೆಂಟ್ ಜನರಲ್ ಜಾಕ್ ಫರ್ಜ್ ರಫೆಲ್ ಜಾಕೊಬ್ ರನ್ನು ಗೌರವಿಸಿದೆ. ಇಸ್ರೇಲಿನ ಪ್ರಖ್ಯಾತ ಅಮ್ಯುನಿಷನ್ ಹಿಲ್ ನಲ್ಲಿನ ವಾಲ್ ಆಫ್ ಹಾನರ್ ನಲ್ಲಿ ಲೆಫ್ಟಿನೆಂಟ್ ಜನರಲ್ ಜಾಕೊಬ್ ಅವರ ಹೆಸರಿನ ಪ್ಲೇಕನ್ನು ಅಳವಡಿಸಿದೆ!

1971 ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನಾ ಯುದ್ಧದ ನಂತರ ಢಾಕಾದಲ್ಲಿ ಪಾಕಿಸ್ತಾನಿ ಸೈನಿಕರು ಶರಣಾಗತರಾಗುಲ್ಲಿ ಇವರು ಪಾಕಿಸ್ತಾನದೊಂದಿಗೆ ನಡೆಸಿದ ಸಮಾಲೋಚನೆ ಅವಿಸ್ಮರಣೀಯ. ‘ಲೆಫ್ಟಿನೆಂಟ್ ಜನರಲ್ ಜಾಕೊಬ್ ಅವರ ಜೀವನ ಎಲ್ಲಾ ಭಾರತೀಯರಿಗೂ ಸ್ಫರ್ತಿಗಾಥೆ. ಅವರ ಹೆಸರಿನ ಪ್ಲೇಕ್ ಈ ಪ್ರಸಿದ್ಧ ಗೋಡೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ಇನ್ನೂ ಹೆಚ್ಚು ಗಟ್ಟಿಗೊಳ್ಳಲಿದೆ ಎಂಬುದರ ಸಂಕೇತ’ವೆಂದು ಇಸ್ರೇಲಿನ ಭಾರತದ ರಾಯಭಾರಿ ಪವನ್ ಕಪೂರ್ ಹೇಳಿದ್ದಾರೆ.

ಈ ವಾಲ್ ಆಫ್ ಆನರ್ ನಲ್ಲಿ 340 ಕ್ಕೂ ಹೆಚ್ಚು ವ್ಯಕ್ತಿಗಳ, ಸೈನಿಕಾಧಿಕಾರಿಗಳ, ಮಹಿಳೆಯರ, ಸಿಪಾಯಿಗಳ ಹೆಸರುಗಳು ನಮೂದಿಸಲ್ಪಟ್ಟಿದೆ. ತನ್ನ ರಾಷ್ಟ್ರಕ್ಕಾಗಿ ಸೈನಿಕ ತೋರಿದ ನಿಷ್ಠೆ, ಸಾಹಸ, ಶ್ರದ್ಧೆಗಳನ್ನು ಗಮನದಲ್ಲಿಟ್ಟುಕೊಂಡು ಈ ಗೌರವವನ್ನು ನೀಡಲಾಗುತ್ತದೆ.

ಲೆಫ್ಟಿನೆಂಟ್ ಜನರಲ್ ಜಾಕೊಬ್ ಅವರು 2016ರಲ್ಲಿ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದರಲ್ಲದೇ ಅವರು ಪಂಜಾಬ್ ಮತ್ತು ಗೋವಾದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top