National

ಹೆಣ್ಮಕ್ಕಳೇ ಸ್ಟ್ರಾಂಗು ಗುರು!

2019ರ ಚುನಾವಣೆ ಅನೇಕ ವಿಶೇಷಗಳ ಆಗರ. ಅದರಲ್ಲಿ ಒಂದು ಮಹಿಳೆಯರ ಪಾತ್ರದ್ದು. ಈ ಬಾರಿ ಮತದಾನದ ದೃಷ್ಟಿಯಿಂದ ನೋಡಿದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಮತದಾನ ಮಾಡಿರುವುದು ಕಂಡುಬಂದಿದೆ. ಬಿಹಾರ, ಉತ್ತರಾಖಂಡ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ 13 ರಾಜ್ಯಗಳಲ್ಲಿ ನಿಚ್ಚಳವಾಗಿ ಪುರುಷರನ್ನು ಮೀರಿಸಿ ಮಹಿಳೆಯರು ಮತ ಚಲಾಯಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಮಹಿಳೆಯರು ಸುಮಾರು 69 ಪ್ರತಿಶತ ಮತದಾನ ಮಾಡಿ ಕಳೆದ ಬಾರಿಗಿಂತ 12 ಪ್ರತಿಶತದಷ್ಟು ಹೆಚ್ಚು ಮತದಾನ ದಾಖಲಿಸಿದ್ದಾರೆ. ಈ ಬಾರಿ ಅಭ್ಯಥರ್ಿಗಳ ವಿಚಾರದಲ್ಲೂ ಅಷ್ಟೇ. 723 ಮಹಿಳಾ ಅಭ್ಯಥರ್ಿಗಳು ಕಣದಲ್ಲಿದ್ದು 76 ಜನ ಸಂಸತ್ತು ಪ್ರವೇಶಿಸಿದ್ದಾರೆ. ಇದು ಹಿಂದಿನ ಎಲ್ಲ ವರ್ಷಗಳ ದಾಖಲೆಯನ್ನು ಮುರಿದು ಬಿಸಾಡಿದೆ. ಈ ಚುನಾವಣೆಯಲ್ಲಿ ಬಿಜೆಪಿ 53 ಮತ್ತು ಕಾಂಗ್ರೆಸ್ಸು 54 ಮಹಿಳೆಯರಿಗೆ ಚುನಾವಣಾ ಕಣ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತ್ತು. ಇದರಲ್ಲಿ ಬಿಜೆಪಿಯಿಂದ 38 ಜನ ಆಯ್ಕೆಯಾಗಿದ್ದರೆ ಕಾಂಗ್ರೆಸ್ಸಿನ 6 ಜನ ಸಂಸತ್ತನ್ನು ಪ್ರವೇಶಿಸಿದ್ದಾರೆ. ಒಟ್ಟಾರೆ ಅಭ್ಯಥರ್ಿಗಳಲ್ಲಿ ತೃಣಮೂಲ ಕಾಂಗ್ರೆಸ್ಸಿನಿಂದ 40 ಪ್ರತಿಶತದಷ್ಟು ಹೆಣ್ಣುಮಕ್ಕಳು ಪ್ರತಿಸ್ಪಧರ್ಿಸಿದ್ದರೆ, ಬಿಜು ಜನತಾದಳ 33 ಪ್ರತಿಶತ ಜನರಿಗೆ ಅವಕಾಶ ಮಾಡಿಕೊಟ್ಟಿದೆ. ತೃಣಮೂಲ ಕಾಂಗ್ರೆಸ್ಸಿನಿಂದ 9 ಜನ ಸಂಸತ್ತು ಪ್ರವೇಶಿಸುತ್ತಿದ್ದರೆ ಬಿಜೆಡಿಯಿಂದ 5 ಮಂದಿ ಪ್ರವೇಶಿಸುವುದು ನಿಚ್ಚಳವಾಗಿದೆ. ಉತ್ತರಪ್ರದೇಶದಿಂದ 10 ಹೆಣ್ಣುಮಕ್ಕಳು ಸಂಸದರಾಗಿ ಆಯ್ಕೆಯಾಗಿದ್ದರೆ ಬಿಹಾರದಿಂದ 3, ಪಶ್ಚಿಮಬಂಗಾಳದಿಂದ 11 ಜನ ಮಹಿಳೆಯರು ಸಂಸತ್ತು ತಲುಪಲಿದ್ದಾರೆ. ಬಿಹಾರದಿಂದ ಗೆದ್ದ ಮೂವರು ಭಾಜಪದ ಮೂಲಕ ಆಯ್ಕೆಯಾದವರೇ.


ಇವುಗಳಲ್ಲಿ ಅತ್ಯಂತ ಪ್ರಮುಖ ಗೆಲುವು ಎಂದು ಬಿಂಬಿಸಲಾಗುವುದು ಸ್ಮೃತಿ ಇರಾನಿ ಮತ್ತು ಸಾಧ್ವಿ ಪ್ರಜ್ಞಾಸಿಂಗ್ರದ್ದು. ಸ್ಮೃತಿ ರಾಹುಲ್ರನ್ನು ಸಾಕಷ್ಟು ಅಂತರಗಳಿಂದ ಸೋಲಿಸಿ ಸಂಸತ್ತು ಪ್ರವೇಶಿಸುತ್ತಿರುವುದು ಆ ಪರಿವಾರಕ್ಕೇ ಅವಮಾನಕರ ಸಂಗತಿ. ಅನೇಕ ದಶಕಗಳಿಂದ ಅಮೇಥಿಯನ್ನು ಭದ್ರಕೋಟೆಯಾಗಿಸಿಕೊಂಡಿರುವ ಈ ಪರಿವಾರಕ್ಕೆ ಇದು ನುಂಗಲಾರದ ಬಿಸಿತುಪ್ಪ. ಅಭಿವೃದ್ಧಿಯ ಕಾರ್ಯ ಕೈಗೊಳ್ಳದೆಯೂ ಗೆದ್ದುಬಿಡಬಹುದೆಂಬ ಹುಚ್ಚು ಕಲ್ಪನೆಯನ್ನು ಈ ಚುನಾವಣೆ ಅಳಿಸಿ ಹಾಕಿದೆ. ಸ್ಮೃತಿ ಕಳೆದ ಚುನಾವಣೆಯಲ್ಲಿ ಸೋತಾಗಿನಿಂದಲೂ ಅಮೇಥಿಯನ್ನು ಗೆಲ್ಲುವುದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡೇ ಬಂದಿದ್ದರು. ಸತತವಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾ ಜನರ ಕುಂದು-ಕೊರತೆಗಳನ್ನು ಆಲಿಸುತ್ತಾ ಸಕರ್ಾರದ ಯೋಜನೆಗಳನ್ನು ತಾನೇ ಮುಂದೆ ನಿಂತು ಅಮೇಥಿಯ ಗಲ್ಲಿ-ಗಲ್ಲಿಗಳಿಗೆ ತಲುಪಿಸುತ್ತಾ, ಅಲ್ಲಿನ ಜನರೊಂದಿಗೆ ನೇರಸಂಪರ್ಕ ಇಟ್ಟುಕೊಂಡಿದ್ದರು. ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಂತೆಯೇ ಆಕೆ ಗೆಲ್ಲುವುದು ಖಾತ್ರಿ ಎಂದು ಸ್ವತಃ ಕಾಂಗ್ರೆಸ್ಸಿಗರಿಗೆ ಅನಿಸಲಾರಂಭಿಸಿತ್ತು. ಹೀಗಾಗಿಯೇ ರಾಹುಲ್ಗೆ ವಾಯ್ನಾಡನ್ನು ಆರಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದ್ದು. ರಾಹುಲ್ ಎರಡನೇ ಕ್ಷೇತ್ರವನ್ನು ಆರಿಸಿಕೊಳ್ಳುವುದರೊಂದಿಗೆ ಸ್ಮೃತಿಯ ಗೆಲುವಿನ ದಾರಿ ಬಹುತೇಕ ನಿಚ್ಚಳವಾಗಿತ್ತು. ಫಲಿತಾಂಶದ ದಿನ ಆರಂಭಿಕ ಹಿನ್ನಡೆಯಂತೆ ಕಂಡರೂ ಒಮ್ಮೆ ಮುನ್ನಡೆ ಸಾಧಿಸಿದ ಸ್ಮೃತಿ ಇರಾನಿ ಮತ್ತೆಂದೂ ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಗೆಲುವಿನ ನಗೆ ಹೊರಸೂಸಿದ ಆಕೆ ಅಂತಿಮವಾಗಿ ಅಮೇಥಿಯನ್ನು ಪರಿವಾರದ ಮುಷ್ಟಿಯಿಂದ ಕಸಿದುಕೊಂಡರು. ಇದೇ ಸ್ಥಿತಿ ಭೋಪಾಲದ್ದೂ ಕೂಡ. ಸಾಧ್ವಿ ಪ್ರಜ್ಞಾಸಿಂಗರ ಹೆಸರು ಉಲ್ಲೇಖವಾಗುತ್ತಿದ್ದಂತೆ ದೇಶದಾದ್ಯಂತ ಸಂಚಲನ ಮೂಡಿತ್ತು. ಆಕೆಯನ್ನು ದಿಗ್ವಿಜಯ್ ಸಿಂಗರ ವಿರುದ್ಧ ಕಣಕ್ಕಿಳಿಸಿದ್ದುದು ಬಲುದೊಡ್ಡ ಸಂದೇಶದಂತಿತ್ತು. ಹಿಂದೂ ಭಯೋತ್ಪಾದನೆಯ ಕಲ್ಪನೆಯನ್ನು ಹುಟ್ಟುಹಾಕಿದ ಶಿಂಧೆ, ಚಿದಂಬರಂ, ಸಿಬಲ್ರ ಪಾಳಯದ ಮತ್ತೊಬ್ಬ ವ್ಯಕ್ತಿ ದಿಗ್ವಿಜಯ್ಸಿಂಗ್ ಆಗಿದ್ದ. ಅದೇ ಕಲ್ಪನೆಗೆ ತನ್ನ ಜೀವನವನ್ನೇ ಬಲಿ ಕೊಟ್ಟಾಕೆ ಸಾಧ್ವಿ ಪ್ರಜ್ಞಾಸಿಂಗ್. ಭೋಪಾಲ್ನಲ್ಲಿ ಆಕೆಗೆ ಟಿಕೆಟ್ ಕೊಡುವ ಮೂಲಕ ಇಡಿಯ ಮಧ್ಯಪ್ರದೇಶವನ್ನು ಮೋದಿ ಮತ್ತು ಅಮಿತ್ಶಾ ಭಾಜಪದ ಹಿಂದೂಪರ ಮತ್ತು ಕಾಂಗ್ರೆಸ್ಸಿನ ಹಿಂದೂ ವಿರೋಧಿ ನಿಲುವುಗಳ ಆಧಾರದ ಮೇಲೆ ಚುನಾವಣೆ ನಡೆಸುವ ನಿಧರ್ಾರ ಬಿಚ್ಚಿಟ್ಟರು. ಮಧ್ಯಪ್ರದೇಶದುದ್ದಕ್ಕೂ ಇದರ ಪರಿಣಾಮ ಹೇಗಾಯಿತೆಂದರೆ ದೇಶದ ಮತ್ತು ಜಗತ್ತಿನ ಮೂಲೆ-ಮೂಲೆಗಳಿಂದ ಸಾಧ್ವಿಯ ಪರ ಪ್ರಚಾರಕ್ಕೆ ಬಂದವರು ಇಡಿಯ ಮಧ್ಯಪ್ರದೇಶದಲ್ಲಿ ಸಂಚಲನ ಉಂಟುಮಾಡಿದರು. ಪರಿಣಾಮ ಸಾಧ್ವಿ ಮೂರು ಲಕ್ಷ ಮತಗಳ ಅಂತರದಿಂದ ದಿಗ್ವಿಜಯ್ಸಿಂಗರನ್ನು ಸೋಲಿಸಿದ್ದಲ್ಲದೇ ಸಕರ್ಾರವಿದ್ದೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸು ಹೀನಾಯ ಸೋಲು ಕಂಡಿತು.


ಇದೇ ರೀತಿ ಕುತೂಹಲದ ಕದನದ ಕಣ ಮಂಡ್ಯದ್ದೂ ಇತ್ತು. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗನನ್ನೇ ಎದುರು ಹಾಕಿಕೊಂಡ ಸುಮಲತ ಗೆಲುವು ಅಸಾಧ್ಯವೆಂದೇ ಆರಂಭದಲ್ಲಿ ಭಾವಿಸಲಾಗಿತ್ತು. ಮಂಡ್ಯದ ಮೇಲಿರುವ ಜೆಡಿಎಸ್ನ ಹಿಡಿತ, ಸ್ವತಃ ಕುಮಾರಸ್ವಾಮಿ ಮಗನನ್ನುಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ, ಆನಂತರ ಚೆಲ್ಲಬಹುದಾದ ದುಡ್ಡಿನ ಅಂದಾಜು ಇವೆಲ್ಲವೂ ಸುಮಲತ ಗೆಲುವನ್ನು ಕಷ್ಟವಾಗಿಸಿಬಿಟ್ಟಿತ್ತು. ಕುಮಾರಸ್ವಾಮಿಯಂತೂ ರಾಜ್ಯದ ಮುಖ್ಯಮಂತ್ರಿ ಎಂಬುದನ್ನೂ ಮರೆತು ನಿಖಿಲ್ನನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಮಂಡ್ಯದಲ್ಲೇ ಮೊಕ್ಕಾಂ ಹೂಡಿಬಿಟ್ಟರು. ಆದರೆ ಸುಮಲತ ಅತ್ಯಂತ ಶ್ರೇಷ್ಠಮಟ್ಟದ ರಾಜಕೀಯ ಜಾಣ್ಮೆಯನ್ನು ಪ್ರದಶರ್ಿಸುತ್ತಾ ಪ್ರತೀ ಹಂತದಲ್ಲೂ ನಿಖಿಲ್ನನ್ನು ಸೋಲಿಸುತ್ತಲೇ ಮುಂದಡಿಯಿಟ್ಟರು. ಈ ಫಲಿತಾಂಶ ಬಂದಾಗಲೂ ಜೆಡಿಎಸ್ನ ಕಾರ್ಯಕರ್ತರಿಗೆ ಅಚ್ಚರಿ, ಆಘಾತ, ಆತಂಕ, ಆಕ್ರೋಶ ಎಲ್ಲವೂ ಒಟ್ಟಿಗೇ ಆಗಿದ್ದವು. ಕುಮಾರಸ್ವಾಮಿಯಂತೂ ಪತ್ರಕರ್ತರನ್ನೇ ಅಟ್ಟಿಸಿಕೊಂಡು ಹೋಗಿ ಮಟ್ಟಹಾಕಿಬಿಡುವಂತೆ ಆನಂತರ ವತರ್ಿಸಿದ್ದು ಸೋಲಿನ ಆಳ ಎಂಥದ್ದು ಎಂಬುದನ್ನು ತೋರಿಸಲು ಸಾಕಿತ್ತು. ಸತ್ಯವೋ ಸುಳ್ಳೋ ಹೆಣ್ಣಿನೆದುರಿಗೆ ಸೋಲಬೇಕಾಯ್ತಲ್ಲ ಎಂಬುದೇ ತನ್ನ ದುಃಖವೆಂದು ನಿಖಿಲ್ ರಂಪಾಟ ಮಾಡಿದ್ದು ನಿಜವೇ ಆದರೆ ರಾಹುಲ್ನ ಕಥೆ ಏನಾಗಬೇಕು ಹೇಳಿ. ಕಾಂಗ್ರೆಸ್ಸಿನ ಅಧ್ಯಕ್ಷನಾಗಿದ್ದು ಸ್ಮೃತಿ ಎದುರು ಗೆಲ್ಲಲಾಗದೇ ಯುದ್ಧಕ್ಕೂ ಮುನ್ನ ಸೋಲನ್ನಪ್ಪಿ ವಾಯ್ನಾಡಿಗೆ ಓಡಿಹೋಗುವ ಪರಿಸ್ಥಿತಿ ಆಗಿತ್ತಲ್ಲ!

ಹೆಣ್ಣು-ಗಂಡು ಎಂಬ ಭೇದ ಈಗ ಉಳಿದಿಲ್ಲ. ಈ ಬಾರಿಯಿಂದ ಹೆಣ್ಣುಮಕ್ಕಳು ಮನೆಯ ಆಚೆಬಂದು ಮತ ಚಲಾಯಿಸುವ ಆಸ್ಥೆ ತೋರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬದಲಾವಣೆ ಶತಃಸಿದ್ಧ. ನರೇಂದ್ರಮೋದಿಯವರಂತೂ ನೇರವಾಗಿ ತಮ್ಮ ವಿಕಾಸದ ಸಂದೇಶವನ್ನು ಅಡುಗೆಮನೆಗೇ ಮುಟ್ಟಿಸಿದ್ದು ಈ ಬಾರಿಯ ಫಲಿತಾಂಶದಲ್ಲಿ ಬದಲಾವಣೆ ಕಾಣಲು ಮುಖ್ಯ ಕಾರಣವೆಂದು ಅನೇಕ ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ನಿಸ್ಸಂಶಯವಾಗಿ ಮೋದಿಯವರ ಕ್ಯಾಬಿನೆಟ್ನಲ್ಲು ಜೋರಾಗಿಯೇ ಇರುತ್ತದೆ ಎಂದೆನಿಸುತ್ತದೆ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top