National

ಹೆಣ್ಣುಮಕ್ಕಳನ್ನು ಮಾರಿದರೂ ತಪ್ಪಿಲ್ಲ, ಕಾನೂನು ತಪ್ಪಬಾರದಷ್ಟೇ!

ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಇಸ್ಲಾಮಿನಲ್ಲಿರುವ ನಿಕಾಹ್ ಹಲಾಲಾ ಮತ್ತು ಬಹು ಪತ್ನಿತ್ವವನ್ನು ಪ್ರಶ್ನಿಸಿತ್ತು. ಕೇಂದ್ರ ಸರ್ಕಾರದ ಕಾನೂನು ಸಚಿವಾಲಯ ನಿಕಾಹ್ ಹಲಾಲಾದ ರೀತಿ-ನೀತಿಗಳು ಸ್ತ್ರೀ ಸಮಾನತೆಯ ವಿರುದ್ಧವಾಗಿರುವುದರಿಂದ ಇದನ್ನು ಪ್ರಶ್ನಿಸಲೇಬೇಕಿದೆ ಎಂಬ ಹೇಳಿಕೆಯನ್ನು ನೀಡಿತ್ತು. ಜುಲೈ 15 ರಂದು ದೆಹಲಿಯಲ್ಲಿ ಆಲ್ ಇಂಡಿಯಾ ಮುಸ್ಲೀಂ ಪರ್ಸನಲ್ ಲಾ ಬೋರ್ಡಿನ ಸಭೆ ನಡೆಯಿತು. ಈ ಸಭೆಯಲ್ಲಿ ನಿಕಾಹ್ ಹಲಾಲಾ ಕುರಾನಿನಲ್ಲಿ ಹೇಳಲಾಗಿದೆ. ಹೀಗಾಗಿ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳಿಕೆ ನೀಡಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಅಷ್ಟಕ್ಕೂ ಟ್ರಿಪಲ್ ತಲಾಖ್ ಯಾವುದೇ ಸಭ್ಯ ಸಮಾಜದಲ್ಲಿರುವಬಹುದಾದ ಅನಿಷ್ಟವಾದ ಪದ್ಧತಿ. ಇಸ್ಲಾಮಿನ ಪದ್ಧತಿಯ ಮದುವೆಗಳ ಪ್ರಕಾರ ಗಂಡ ತನ್ನ ಹೆಂಡತಿಗೆ ಮೂರು ಬಾರಿ ತಲಾಖ್ ಎಂದು ಹೇಳಿದರೆ ಆ ಮದುವೆ ರದ್ದಾಗಿಬಿಡುತ್ತದೆ. ಈ ಮೂರು ಬಾರಿ ತಲಾಖ್ ಹೇಳಿದ ನಂತರ ಸ್ವಲ್ಪ ದಿನಗಳ ಕಾಲ ಇಬ್ಬರಿಗೂ ಸಂಧಾನ ಮಾಡಿಕೊಳ್ಳಬಹುದಾದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಈ ನಡುವೆಯೂ ಬದಲಾವಣೆ ಕಂಡು ಬರಲಿಲ್ಲವೆಂದರೆ ವಿಚ್ಛೇದನ ಖಾತ್ರಿಯಾಗುತ್ತದೆ. ಈ ಅವಧಿಯ ನಂತರ ಅವರಿಬ್ಬರಿಗೂ ಮತ್ತೆ ಮದುವೆಯಾಗಬೇಕೆನಿಸಿದರೆ ಇಸ್ಲಾಮಿನ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಆಗ ಅವರಿಗಿರೋದು ಒಂದೇ ಮಾರ್ಗ. ನಿಕಾಹ್ ಹಲಾಲಾ! ಹಲಾಲ್ ಎಂದರೆ ಪವಿತ್ರಗೊಳಿಸುವುದು ಅಂತ. ಇಸ್ಲಾಮಿನಲ್ಲಿ ಪ್ರತಿಯೊಂದನ್ನು ಪವಿತ್ರಗೊಳಿಸಿಯೇ ಆನಂತರ ಬಳಸಬೇಕೆಂಬ ನಿಯಮ ಮಾಡಿಕೊಂಡಿದ್ದಾರೆ. ಅದು ಕೋಳಿಯ ಮಾಂಸವನ್ನು ಸವಿಯುವಾಗಲೂ ಸರಿ, ಕೊನೆಗೆ ಮರು ಮದುವೆಯಾಗಲೂ ಸರಿ. ಎಲ್ಲವೂ ಪವಿತ್ರಗೊಳಿಸಲ್ಪಡಬೇಕು. ಈ ಮರುಮದುವೆಯಲ್ಲಿ ಅದೇ ಹೆಣ್ಣನ್ನು ಪವಿತ್ರಗೊಳಿಸುವ ದಾರಿ ಯಾವುದು ಗೊತ್ತಾ? ಆಕೆ ಮತ್ತೊಬ್ಬನನ್ನು ಮದುವೆಯಾಗಿ ಒಂದು ರಾತ್ರಿಯಾದರೂ ಹೊಸ ಗಂಡನೊಂದಿಗೆ ಕಳೆದು ಮರಳಿ ಬರಬೇಕು. ಆಗ ಮಾತ್ರ ಆಕೆ ಪವಿತ್ರಗೊಂಡಂತಾಗುತ್ತದೆ.

ಎಐಎಂಪಿಬಿ ಯ ಕಾರ್ಯದರ್ಶಿಯಾಗಿರುವ ಜಾಫರ್ಯಾಬ್ ಜಿಲಾನಿ, ‘ನಿಕಾಹ್ ಹಲಾಲಾ ಪದ್ಧತಿ ಕುರಾನಿನಲ್ಲಿ ಹೇಳಿದೆ. ಇದನ್ನು ಬೋರ್ಡಾಗಲಿ, ಕೋರ್ಟಾಗಲೀ ಪ್ರಶ್ನಿಸುವ ಹಾಗಿಲ್ಲ’ ಎಂದಿದ್ದಾರೆ. ಆದರೆ, ನಿಕಾಹ್ ಹಲಾಲಾವನ್ನು ಧಂಧೆಯಾಗಿ ಬಳಸಿಕೊಳ್ಳುವವರಿದ್ದಾರೆ. ಹೆಣ್ಣುಮಕ್ಕಳನ್ನು ಇಸ್ಲಾಂ ಕಾನೂನಿಗೆ ಬದ್ಧವಾಗಿಯೇ ಮಾರಾಟ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಮದುವೆಯಾಗುವ ಪುರುಷರನ್ನು ಒದಗಿಸಿಕೊಡುವ ಏಜೆಂಟುಗಳೂ ಇದ್ದಾರೆ. ಇದರ ಕುರಿತು ಪ್ರಶ್ನಿಸಿದಾಗ ಜಿಲಾನಿಯವರು, ‘ಇದಕ್ಕೋಸ್ಕರವೇ ನಿಕಾಹ್ ಮಾಡಿಕೊಳ್ಳುವುದನ್ನು ಒಪ್ಪಲಾಗದು’ ಎಂಬ ಹಾರಿಕೆಯ ಉತ್ತರವನ್ನು ನೀಡಿದ್ದಾರೆ! ಇದರ ಜೊತೆಗೆ ಭಾರತದಾದ್ಯಂತ ಹತ್ತು ಕಡೆಗಳಲ್ಲಿ ಶರಿಯತ್ ಕೋರ್ಟುಗಳನ್ನು ಪ್ರಾರಂಭಿಸುವ ಕುರಿತೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ನಡುವೆಯೇ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಹೆಣ್ಣುಮಗುವಿಗೆ ಜನ್ಮ ನೀಡಿದಳು ಎಂಬ ಕಾರಣಕ್ಕೆ ಆಕೆಗೆ ತಲಾಖ್ ನೀಡಿದ್ದಲ್ಲದೇ ಮನೆಯಿಂದ ಹೊರದಬ್ಬಿದ್ದಾನೆ. 50,000 ರೂಪಾಯಿಗಳ ವರದಕ್ಷಿಣೆಯನ್ನು ನೀಡುವಂತೆ ಆಕೆಗೆ ಪೀಡಿಸಿದ್ದಾನೆ. ತಾಯಿ-ಮಗುವಿಬ್ಬರೂ ಈಗ ಬೀದಿಪಾಲಾಗಿದ್ದಾರೆ. ಟ್ರಿಪಲ್ ತಲಾಖ್, ನಿಕಾಹ್ ಹಲಾಲಾ, ಬಹುಪತ್ನಿತ್ವದಂತಹ ಪದ್ಧತಿಗಳು ಕುರಾನಿನ ಪ್ರಕಾರ ಸರಿಯೆನ್ನುವುದು ಮುಸ್ಲೀಂ ಲಾ ಬೋರ್ಡಿನ ವಾದ. ಶರಿಯತ್ ಕೋರ್ಟುಗಳು ಬಂದರೆ ಮುಸ್ಲೀಂ ಹೆಣ್ಣುಮಕ್ಕಳ ಗತಿ ಅತ್ಯಂತ ಕೆಟ್ಟದಾಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯ ಪಡಲಾಗುತ್ತಿದೆ.

ಸುಪ್ರೀಂಕೋರ್ಟು ನಿಕಾಹ್ ಹಲಾಲಾ ಮತ್ತು ಬಹುಪತ್ನಿತ್ವದ ವಿಚಾರಣೆಯನ್ನು ಜುಲೈ 20 ರಂದು ಪ್ರಾರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

1 Comment

1 Comment

  1. Ranganath

    July 17, 2018 at 3:13 pm

    This is bad tomorrow to muslim women s.

Leave a Reply

Your email address will not be published. Required fields are marked *

Most Popular

To Top