National

ಹಿಂದೂ ಹೋರಾಟಗಾರ ರಾಮಲಿಂಗಮ್ ಅವರ ಹತ್ಯೆ ಪ್ರಕರಣದಲ್ಲಿ ಪಿ ಎಫ್ ಐ ಸದಸ್ಯನ ಬಂಧನ!!

ದಲಿತ ಹಿಂದೂ ಕಾಲೋನಿಯೊಂದರಲ್ಲಿ ಇಸ್ಲಾಮಿಕ್ ಸಂಘಟನೆ ನಡೆಸುತ್ತಿದ್ದ ಬಲವಂತದ ಮತಾಂತರದ ವಿರುದ್ಧ ರಾಮಲಿಂಗಮ್ ಅವರು ದನಿ ಎತ್ತಿದ್ದರು. ಈ ಕಾರಣಕ್ಕೆ ಅವರನ್ನು ಇಸ್ಲಾಮಿನ ಜನ ಬರ್ಬರವಾಗಿ ಕೊಂದು ಹಾಕಿದ್ದರು.

ಇಸ್ಲಾಮಿಕ್ ಸಂಘಟನೆ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಮೊಹಮ್ಮದ್ ಫಾರೂಕ್ ಎಂಬುವವನನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿಯವರು ತಮಿಳುನಾಡಿನಲ್ಲಿ ವಶಕ್ಕೆ ಪಡೆದಿದ್ದಾರೆ. ಫೆಬ್ರವರಿಯಲ್ಲಿ ಪಟ್ಟಾಲಿ ಮಕ್ಕಳ್ ಕಟ್ಚಿಯ ಸದಸ್ಯ ರಾಮಲಿಂಗಮ್ ಎನ್ನುವವರ ಹತ್ಯೆಯಾಗಿತ್ತು. ರಾಮಲಿಂಗಮ್ ಅವರ ಹತ್ಯೆಯಲ್ಲಿ ಫಾರೂಕ್ ನ ಪಾತ್ರವಿರಬಹುದು ಎಂದು ಶಂಕಿಸಲಾಗಿದೆ.

ಈ ಹಿಂದೆ ಎನ್ ಐ ಎ ಸುಮಾರು 20 ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು. ಕೆಲವು ಅಪರಾಧಿಗಳ ಮನೆಗಳಲ್ಲಿಯೂ ಹುಡುಕಾಟ ನಡೆಸಿ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಫಾರೂಕ್ ನ ಮನೆಯಲ್ಲಿ ಡಿಜಿಟಲ್ ವಸ್ತುವೊಂದನ್ನು ವಶಪಡಿಸಿಕೊಂಡಿತ್ತು ಎನ್ ಐ ಎ.

‘ಫಾರೂಕ್ ಮತ್ತು ಇತರ ಅಪರಾಧಿಗಳನ್ನು ಎನ್ ಐ ಎ ವಿಶೇಷ ನ್ಯಾಯಾಲಯ ಮುಂದೆ ಇಂದು ಕರೆದೊಯ್ಯಲಾಗುವುದು. ಇವರೆಲ್ಲಾ ಸೇರಿ ರಾಮಲಿಂಗಮ್ ನನ್ನು ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ. ರಾಮಲಿಂಗಮ್ ನಂತರ ಗಂಭೀರ ಗಾಯಗಳಿಂದ ಮರಣ ಹೊಂದಿದ್ದಾರೆ. ಎಸ್ ಡಿ ಪಿ ಐ ಅಥವಾ ಪಿ ಎಫ್ ಐನ ಕಾರ್ಯಕರ್ತರು ಈ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ. ಈಗಾಗಲೇ ತಮಿಳುನಾಡಿನ ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಇನ್ನೂ ಆರು ಜನ ಓಡಿಹೋಗಿದ್ದಾರೆ’ ಎಂದು ಎನ್ ಐ ಎ ತಿಳಿಸಿದೆ. ಎನ್ ಐ ಎ ಇದನ್ನು ಭಯೋತ್ಪಾದಕ ಕೃತ್ಯ ಎಂದು ಕರೆದಿದೆ.

 

Click to comment

Leave a Reply

Your email address will not be published. Required fields are marked *

Most Popular

To Top