National

ಸ್ವಾತಂತ್ರ್ಯ ಹೋರಾಟಗಾರರಿಗೆ ದುರ್ಗಾಭಾಬಿಯಾಗಿದ್ದ ದುರ್ಗಾವತಿದೇವಿ!

ದುರ್ಗಾವತಿ ದೇವಿ ಬಂಗಾಳದ ಹೆಣ್ಣುಮಗಳು. ಈಕೆ 1907, ಅಕ್ಟೋಬರ್ 7 ರಂದು ಅಲಹಾಬಾದ್ನಲ್ಲಿ ಹುಟ್ಟಿದ್ದು. ಹುಟ್ಟಿನಿಂದಲೂ ಆಕೆಯ ಬದುಕು ಸಂಘರ್ಷದ್ದೇ. ಹುಟ್ಟಿದ ಹತ್ತು ತಿಂಗಳಿಗೇ ಆಕೆಯ ತಾಯಿ ತೀರಿಕೊಂಡಳು. ಇದಾದ ಕೆಲವು ಸಮಯದಲ್ಲಿಯೇ ತಂದೆ ಸಂನ್ಯಾಸ ಸ್ವೀಕರಿಸಿದರು! ಸಂಬಂಧಿಕರೊಡನೆ ಆಗ್ರಾಗೆ ಬಂದು ನೆಲೆಸಿ ತನ್ನ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದಳು. ಅತ್ಯಂತ ಧೈರ್ಯವಂತಳಾಗಿ ಬೆಳೆದಳು.


ಬಾಲ್ಯವಿವಾಹ ಹೆಚ್ಚು ಹೆಚ್ಚು ಜಾರಿಯಲ್ಲಿದ್ದ ಕಾಲವದು. ಹೀಗಾಗಿ ದುರ್ಗಾವತಿ ದೇವಿಯ ವಿವಾಹವಾದಾಗ ಆಕೆಗೆ ಕೇವಲ ಹನ್ನೊಂದು ವರ್ಷ! ಆಕೆ ಮದುವೆಯಾದದ್ದು ‘ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್’ನ ಕಾರ್ಯಕರ್ತ ಭಗವತಿಚರಣ್ ವೋಹ್ರಾನನ್ನು. ಅಲ್ಲಿಂದಾಚೆಗೆ ಆಕೆಯ ಕ್ರಾಂತಿಯ ಬದುಕು ಶುರುವಾಯಿತು. ನೌಜವಾನ್ ಭಾರತ್ ಸಭಾದ ಸಕ್ರಿಯ ಕಾರ್ಯಕರ್ತಳೂ ಆದಳು. ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಪಾಲಿಗೆ ‘ದುರ್ಗಾಭಾಬಿ’ಯಾದಳು!

ಸೈಮನ್ ಕಮೀಷನ್ನನ್ನು ವಿರೋಧಿಸಿ ನಡೆದ ಸಭೆಗೆ ದುರ್ಗಾವತಿ ದೇವಿ ಅಧ್ಯಕ್ಷ ಸ್ಥಾನವನ್ನು ವಹಿಸಿದಳು. ಈ ಸಭೆಯಲ್ಲಿಯೇ ಸ್ಕಾಟ್ನನ್ನು ಹತ್ಯೆಗೈಯ್ಯುವ ಶಪಥ ಮಾಡಿದರು ಭಗತ್ಸಿಂಗ್ ಮತ್ತು ಸುಖದೇವ್. ಆದರೆ ಗುರಿ ತಪ್ಪಿತು. ತಪ್ಪಿದ ಗುರಿ ಸ್ಯಾಂಡಸರ್್ನನ್ನು ಬಲಿತೆಗೆದುಕೊಂಡಿತು. ಈ ಹತ್ಯೆಯ ಆರೋಪದಡಿಯಲ್ಲಿ ಆಂಗ್ಲ ಸಕರ್ಾರ ಭಗತ್ಸಿಂಗ್ ಮತ್ತು ಸುಖದೇವ್ರನ್ನು ಜೈಲಿಗಟ್ಟಲು ಕಾದು ಕುಳಿತಿತ್ತು. ಆದರೆ, ಮಾರುವೇಷದಲ್ಲಿದ್ದ ಭಗತ್ನ ಪತ್ನಿಯಾಗಿ ನಟಿಸಿ, ಅವರಿಬ್ಬರೂ ಸುರಕ್ಷಿತವಾಗಿ ತಪ್ಪಿಸಿಕೊಳ್ಳುವಂತೆ ಮಾಡಿದವಳು ಈ ಧೀರಮಾತೆ ದುಗರ್ಾಭಾಬಿ! ಈಕೆ ತನ್ನ ಆಭರಣಗಳನ್ನೂ ಮಾರಿ ಭಗತ್ಸಿಂಗ್ ಮತ್ತವರ ಸಂಗಡಿಗರ ನೆರವಿಗೆ ನಿಂತಳು. ಈ ಹೊತ್ತಿನಲ್ಲಿಯೇ ಭಗವತಿ ಚರಣ್ ತೀರಿಕೊಂಡ. ಧೃತಿಗೆಡದ ದುಗರ್ಾದೇವಿ ತನ್ನ ಕ್ರಾಂತಿ ಹೆಜ್ಜೆಯನ್ನು ಮುನ್ನಡೆಸಿದಳು!

ಭಗತ್ಸಿಂಗ್ ಮತ್ತು ಸುಖದೇವ್ರು ಜೈಲಿಗೆ ಹೋದ ನಂತರ ದುಗರ್ಾವತಿ ದೇವಿ ಲಾಡರ್್ ಹೈಲಿಯನ್ನು ಹತ್ಯೆಗೈಯ್ಯಲು ಮುಂದಾದಳು. ಲಾಡರ್್ ಹೈಲಿಯ ಜೊತೆಗಾರರು ಹತ್ಯೆಗೊಳಗಾದರು; ಆತ ಬದುಕಿಬಿಟ್ಟ. ಆಂಗ್ಲ ಸಕರ್ಾರ ಆಕೆಯನ್ನು ಬಂಧಿಸಿ ಮೂರು ವರ್ಷ ಜೈಲಿಗಟ್ಟಿತು! ಸ್ವಾತಂತ್ರ್ಯಕ್ಕಾಗಿಯೇ ತನ್ನೆಲ್ಲವನ್ನು ಅಪರ್ಿಸಿದ ಜೀವ, ಭಾರತ ಸ್ವಾತಂತ್ರ್ಯಗೊಂಡ ನಂತರ ಸಾಮಾನ್ಯ ಜೀವನವನ್ನು ನಡೆಸಿತು.


ಆನಂತರ ಲಕ್ನೋನಲ್ಲಿ ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆದು ಸೇವೆಯತ್ತ ಹೆಜ್ಜೆ ಹಾಕಿದಳು ಧೀರಮಾತೆ ದುಗರ್ಾವತಿ! 92 ವರ್ಷಗಳ ತುಂಬು ಜೀವನ ನಡೆಸಿದ ದುಗರ್ಾಭಾಬಿ 1999ರ ಅಕ್ಟೋಬರ್ 15 ರಂದು ಗಾಜಿಯಾಬಾದ್ನಲ್ಲಿ ಕೊನೆಯುಸಿರೆಳೆದಳು.

Click to comment

Leave a Reply

Your email address will not be published. Required fields are marked *

Most Popular

To Top