National

ಸೋಲಿಗೆ ಹೆದರಿದರೆ ನರೇಂದ್ರಮೋದಿ ಎನಿಸಿಕೊಳ್ಳೋದಿಲ್ಲ ಬಿಡಿ!!

ಈ ಕೆಳಗಿನದನ್ನು ಓದಲು ಸ್ವಲ್ಪ ಸಮಯ ಮಾಡಿಕೊಳ್ಳಿ:

ನಿಮ್ಮ ಹೃದಯದ ಮೇಲೆ ಕೈಯಿಟ್ಟು ಯೋಚಿಸಿ. ನವಭಾರತದ ಇತಿಹಾಸದಲ್ಲಿ ಯಾರೂ ಮಾಡಲಾಗದ್ದನ್ನು ಮೋದಿ ಮಾಡುವ ಧೈರ್ಯ ಮಾಡಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ? ಮೇಲಿಂದ ಕೆಳಗಿನ ಹಂತದವರೆಗೂ ಭಾರತದಲ್ಲಿದ್ದ ಹಲವು ನ್ಯೂನತೆಗಳನ್ನು ಸರಿಪಡಿಸುವ ಸಾಹಸಕ್ಕೆ ಮೋದಿಯವರು ಕೈ ಹಾಕಿ ಭಾರತದ ಒಳಗೂ-ಹೊರಗೂ ಶತ್ರುಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ಜಿ ಎಸ್ ಟಿಯನ್ನು ಜಾರಿಗೆ ತಂದಿದ್ದು ನರೇಂದ್ರಮೋದಿಯವರ ಅತಿದೊಡ್ಡ ಸಾಹಸವೇ ಸರಿ. ಇದು ಇಷ್ಟು ದಿನ ತೆರಿಗೆ ಕಟ್ಟದೇ ತಪ್ಪಿಸಿಕೊಳ್ಳುತ್ತಿದ್ದ ಹಲವು ವ್ಯಾಪಾರಸ್ಥರನ್ನು ತೆರಿಗೆ ಕಟ್ಟುವಂತೆ ಮಾಡಿದೆ. ಮೋದಿಯವರು ಈ ಕಾರಣಕ್ಕಾಗಿ ಉದ್ಯಮಿಗಳ, ವ್ಯಾಪಾರಸ್ಥರ ದ್ವೇಷವನ್ನು ಕಟ್ಟಿಕೊಳ್ಳುತ್ತಾರೆ ಎಂಬುದು ಅವರಿಗೆ ತಿಳಿಯದ ಸಂಗತಿ ಎಂದು ಯಾರಾದರೂ ಭಾವಿಸಿದರೆ ಅದು ಮೂರ್ಖತನವೇ ಸರಿ. ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಅಪರೋಕ್ಷ ತೆರಿಗೆಯನ್ನು ತರಲು ಜಿಎಸ್ಟಿಯಂತಹ ದಿಟ್ಟ ನಿರ್ಧಾರಗಳನ್ನು ಜಾರಿಗೆ ತರುವುದು ಅಗತ್ಯವಿತ್ತು.

ಕಳೆದ ವರ್ಷ ಮೋದಿಯವರು ಭಾರತದ ಇತಿಹಾಸದಲ್ಲೇ ಯಾರೂ ಮುಟ್ಟಲು ಧೈರ್ಯ ಮಾಡದ ಆಭರಣದ ವ್ಯಾಪಾರಿಗಳ ಸಮೂಹಕ್ಕೆ ಕೈ ಹಾಕಿದ್ದಾರೆ. ಆಭರಣ ವ್ಯಾಪಾರಿಗಳನ್ನು ತೆರಿಗೆಯ ಒಳಗೆ ತರಲು ಅವರ ಮೇಲೆ ಸೆಸ್ ಅನ್ನು ಜಾರಿಗೊಳಿಸಿದರು. ಆಭರಣದ ವ್ಯಾಪಾರಿಗಳು ಮೋದಿಯವರ ವಿರುದ್ಧ ತಿರುಗಿ ಬೀಳುತ್ತಾರೆ ಎಂಬುದು ಅವರಿಗೆ ತಿಳಿದಿಲ್ಲವೆಂದು ಭಾವಿಸುವಿರಾ?

ಕೇಂದ್ರ ಸರ್ಕಾರದ ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಪ್ರಾರಂಭಿಸಿದಾಗ ಅವರಿಂದ ಬಲವಾದ ವಿರೋಧ ವ್ಯಕ್ತವಾಗುತ್ತದೆ ಎಂಬುದು ಮೋದಿಯವರಿಗೆ ತಿಳಿಯದ ಸಂಗತಿಯೇ? ಬೆಳಿಗ್ಗೆ 11 ಗಂಟೆಗೆ ಬಂದು, ಮಧ್ಯಾಹ್ನ ಊಟದ ಸಮಯದಲ್ಲಿ ಗಾಲ್ಫ್ ಆಡುತ್ತಿದ್ದ, ಮಧ್ಯಾಹ್ನ 3 ಗಂಟೆಗೇ ತೆರಳುತ್ತಿದ್ದವರು ಪೂರ್ಣ ಅವಧಿ ಕಛೇರಿಯಲ್ಲಿ ಕಳೆಯುವಂತಾಯ್ತು.

ಸರ್ಕಾರಿ ಶ್ರೇಣಿ-3 ಮತ್ತು ಶ್ರೇಣಿ-4 ರ ಅಧಿಕಾರಿಗಳನ್ನು ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕೋಟಿಗಟ್ಟಲೆ ರೂಪಾಯಿಯ ಲಂಚವನ್ನು ಪಡೆಯುತ್ತಿದ್ದರು. ಈಗ ಸಂದರ್ಶನವನ್ನೇ ನಿಲ್ಲಿಸಿ, ಆನ್ ಲೈನ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರಸರ್ಕಾರದ ನೇಮಕಾತಿಯಲ್ಲಿ ಮಧ್ಯವರ್ತಿಗಳಾಗಿದ್ದು ಕೋಟಿಗಟ್ಟಲೆ ಹಣ ದೋಚುತ್ತಿದ್ದವರ ವಿರುದ್ಧ ತಾನು ಹೋರಾಡುತ್ತಿರುವುದೆಂದು ಮೋದಿಯವರಿಗೆ ತಿಳಿದಿಲ್ಲ ಎಂದು ಭಾವಿಸಿದ್ದೀರೇನು?

ಮತ್ತೊಂದು ಅತಿದೊಡ್ಡ ಹೆಜ್ಜೆಯೆಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಫರ್ (ನೇರ ಪಾವತಿ). ಎಲ್ ಪಿ ಜಿ, ಸೀಮೆಎಣ್ಣೆ, ವಿದ್ಯಾರ್ಥಿ ವೇತನ, ನರೇಗದ ಸಂಬಳ,ಮುಂತಾದವುಗಳ ಹಂಚಿಕೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಸ್ವಲ್ಪ ಮಟ್ಟಿಗೆ ಕಡಿತಗೊಂಡ ಕಾರಣ ಸರ್ಕಾರ 60,000 ಕೋಟಿ ರೂಪಾಯಿಯನ್ನು ಪ್ರತಿ ವರ್ಷ ಉಳಿತಾಯ ಮಾಡುವಂತಾಗಿದೆ. ದಶಕಗಳಿಂದ ಇದರಲ್ಲಿ ಲಾಭ ಪಡೆದುಕೊಳ್ಳುತ್ತಿದ್ದ ಮಧ್ಯವರ್ತಿಗಳು, ವ್ಯಾಪಾರಿಗಳು, ಡೀಲರ್ ಗಳ ದ್ವೇಷಕ್ಕೆ ತಾನು ಗುರಿಯಾಗುತ್ತಿದ್ದೇನೆ ಎಂಬುದು ನರೇಂದ್ರಮೋದಿಯವರಿಗೆ ತಿಳಿಯದ ಸಂಗತಿ ಎಂದುಕೊಂಡಿದ್ದೀರಾ??

ತಾವೇನು ಮಾಡುತ್ತಿದ್ದೇನೆಂಬುದು ನರೇಂದ್ರಮೋದಿಯವರಿಗೆ ಚೆನ್ನಾಗಿಯೇ ಗೊತ್ತಿದೆ. ಭ್ರಷ್ಟಾಚಾರದಿಂದ ದೇಶವನ್ನು ಮುಕ್ತಗೊಳಿಸಬೇಕೆಂದು ಸಂಕಲ್ಪಬದ್ಧನಾಗಿರುವ ನಾಯಕನಿಗೆ ಚುನಾವಣೆಯನ್ನು ಗೆಲ್ಲುವುದಷ್ಟೇ ಗುರಿಯಾಗಿರಬಾರದು. ಮೋದಿಯವರು ಕೇವಲ ಚುನಾವಣೆಯನ್ನು ಗೆಲ್ಲಬೇಕೆಂದಿದ್ದರೆ ಹೀಗೆ ಒಂದಾದ ಮೇಲೊಂದು ಸಾಹಸೀ ಹೆಜ್ಜೆಗಳನ್ನಿಡುವ ಅವಶ್ಯಕತೆಯಿರಲಿಲ್ಲ. ಈ ದುರಭ್ಯಾಸಗಳನ್ನು ಹಾಗೆಯೇ ಮುಂದುವರೆಯಲು ಬಿಟ್ಟು, ಮಧ್ಯವರ್ತಿಗಳು, ವ್ಯಾಪಾರಿಗಳನ್ನು ತಡೆಯದೇ ಇದ್ದುಬಿಡಬಹುದಿತ್ತು.

ಈ ನಿರ್ಧಾರಗಳನ್ನು ಚುನಾವಣೆ ಗೆಲ್ಲುವುದಕ್ಕಾಗಿ ಕೈಗೊಂಡಿದ್ದಲ್ಲ; ಬದಲಿಗೆ ದೇಶದ ಆರೋಗ್ಯಕ್ಕಾಗಿ ತೆಗೆದುಕೊಂಡದ್ದು.

ಹೌದು. ಭಾರತ ಅತ್ಯಂತ ದೊಡ್ಡ ರಾಷ್ಟ್ರ ಮತ್ತು ಜಿ ಎಸ್ ಟಿ ಅತ್ಯಂತ ಹೊಸ ನಿರ್ಧಾರವಾದ್ದರಿಂದ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಇದಕ್ಕೆ ಆಗಿಂದಾಗ್ಯೆ ಸರಿಯಾದ ಪರಿಶೀಲನೆಯ ಅಗತ್ಯವಿದೆ ಮತ್ತು ಸರ್ಕಾರ ಇದನ್ನು ಪ್ರಾರಂಭದಿಂದಲೂ ಹೇಳುತ್ತಾ ಬಂದಿದೆ. ಆದರೆ, ಜಿಎಸ್ಟಿಯ ವಿರುದ್ಧ ವ್ಯಾಪಾರಸ್ಥರ ಕೂಗು ತಾವೀಗ ತೆರಿಗೆಯನ್ನು ಕಟ್ಟಲೇಬೇಕೆಂಬ ಹತಾಶೆಯಿಂದ ಉದ್ಭವಿಸಿರುವಂಥದ್ದು.

ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧದ ತಮ್ಮ ಕಾಳಗದಲ್ಲಿ ಮೋದಿಯವರು ಸೋತರೆಂದರೆ ಮುಂದಿನ 100 ವರ್ಷಗಳ ಕಾಲ ಯಾವ ಪ್ರಧಾನಮಂತ್ರಿಗೂ ಈ ವಿಚಾರಗಳನ್ನು ತನ್ನ ಅಜೆಂಡಾದಲ್ಲಿ ಸೇರಿಸಿಕೊಳ್ಳುವ ಧೈರ್ಯ ಸಾಲುವುದಿಲ್ಲ. ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು, ಉದ್ಯಮಿಗಳು ತಮ್ಮ ಜನ್ಮ ಸಿದ್ಧ ಹಕ್ಕೆಂಬಂತೆ ಲೂಟಿ ಮಾಡುವುದನ್ನು ಮುಂದುವರೆಸುತ್ತಾರೆ. ಆದ್ದರಿಂದ ಮೋದಿಯವರನ್ನು ಬೆಂಬಲಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ.

ಇಂದು ನಾವು ಸೋತರೆ, ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ನಮ್ಮನ್ನೆಂದೂ ಕ್ಷಮಿಸಲಾರರು. ಸ್ವಚ್ಛ, ಸುಂದರ ಭಾರತವನ್ನು ನೀಡದೇ ಹೋದುದಕ್ಕೆ ನಮ್ಮನ್ನು ಜವಾಬ್ದಾರಿಯುತರನ್ನಾಗಿ ಮಾಡುತ್ತಾರೆ.

1 Comment

1 Comment

  1. Mahabaleshwar S Shetti

    December 31, 2018 at 1:49 pm

    ಮುಂದಿನ ತಲೆಮಾರು ನಮಗೆ ಜಯಚಂದನೊಂದಿಗೆ ಹೋಲಿಸುವಂತಾಗಬೇಕೆಂದರೆ ಈ ಬಾರಿ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸೋಣ.

Leave a Reply

Your email address will not be published. Required fields are marked *

Most Popular

To Top