National

ದೆಹಲಿ ದರ್ಬಾರು!

ಚುನಾವಣೆಗಳ ಫಲಿತಾಂಶದ ವಿಶ್ಲೇಷಣೆ ಬಲು ವಿಚಿತ್ರವಾಗಿರುತ್ತದೆ. ಕೆಲವೊಮ್ಮೆ ಗೆದ್ದವರು ವಿಶ್ಲೇಷಣೆಯ ಹೊತ್ತಲ್ಲಿ ಸೋತುಹೋಗುತ್ತಾರೆ. ಇನ್ನೂ ಕೆಲವೊಮ್ಮೆ ಸೋತು ಸುಣ್ಣವಾದವರು ಭಿನ್ನ-ಭಿನ್ನ ವಿಶ್ಲೇಷಣಾ ತಜ್ಞರ ನೆರವು ಪಡೆದುಕೊಂಡು ಗೆದ್ದೆನೆಂದು ಬೀಗುತ್ತಾರೆ. ಇದು ಈಗಿನ ಕಥೆಯಲ್ಲ. 2014ರಲ್ಲಿ ಮೋದಿ ಪ್ರಧಾನಿಯಾದಾಗಿನಿಂದಲೂ ಹೀಗೆಯೇ ಇದೆ!


ನರೇಂದ್ರಮೋದಿ ಪ್ರಧಾನಿಯಾದಾಗ ಕಾಂಗ್ರೆಸ್ ಪೂಜಕ ಮಾಧ್ಯಮಗಳೆಲ್ಲಾ ಶೇಕಡಾವಾರು ವೋಟುಗಳನ್ನು ಲೆಕ್ಕ ಹಾಕುವುದರಲ್ಲೇ ಮಜ್ಞವಾಗಿಬಿಟ್ಟಿದ್ದವು. ಕಾಂಗ್ರೆಸ್ಸು ಪಡೆದ ಒಟ್ಟಾರೆ ವೋಟುಗಳು ಬಿಜೆಪಿಯ ಒಟ್ಟು ವೋಟುಗಳಿಗಿಂತ ಬಹಳ ಕಡಿಮೆಯೇನಲ್ಲ ಎಂಬುದೇ ಅವರ ವಾದವಾಗಿತ್ತು. ಹೀಗಾಗಿ ಮೋದಿಯ ಗೆಲುವು ಗೆಲುವೇ ಅಲ್ಲ ಎಂಬುದು ಅವರ ಅಂತಿಮ ತೀಪರ್ು. ಒಂದೇ ಪಕ್ಷದ ರೂಪದಲ್ಲಿ ಮ್ಯಾಜಿಕ್ ಅಂಕಿಯನ್ನು ದಾಟಿದ ಮೋದಿಯನ್ನು ತಡೆಯುವ ಯಾವ ಉಪಾಯವೂ ಕಾಣದಿದ್ದ ಹೊತ್ತಿನಲ್ಲಿ ಕಾಂಗ್ರೆಸ್ಸಿಗೆ ಈ ವಿಶ್ಲೇಷಣೆ ಬಹುವಾಗಿ ಸಹಾಯ ಮಾಡಿತು. ಮುಂದೆ ಇದೇ ಮೋದಿ ಅಲೆ ರಾಜ್ಯವಾದ ಮೇಲೆ ರಾಜ್ಯಗಳನ್ನು ಆಪೋಷನ ತೆಗೆದುಕೊಳ್ಳುತ್ತಾ ಹೋದಂತೆ ಕಾಂಗ್ರೆಸ್ಸು ಎಚ್ಚೆತ್ತುಕೊಂಡಿತು. ತನ್ನ ಏಳು ದಶಕಗಳ ಆಳುವಿಕೆಯ ಅಹಂಕಾರವನ್ನು ಬದಿಗಿಟ್ಟು ಎಲ್ಲರೊಡನೆ ಬೆರೆತು ಮೋದಿಯನ್ನು ಎದುರಿಸುವ ತಂತ್ರಗಾರಿಕೆ ರಚಿಸಿತು. ದೇಶ ಒಂದು ಹಂತದಲ್ಲಿ ದ್ವಿಪಕ್ಷ ಸಿದ್ಧಾಂತದೆಡೆಗೆ ಸಾಗಿಬಿಡುವ ಲಕ್ಷಣಗಳೂ ಗೋಚರಿಸಿದ್ದವು. ಕುಮಾರಸ್ವಾಮಿಯವರ ಪ್ರಮಾಣವಚನಕ್ಕೆ ಎಲ್ಲಾ ಪಾಟರ್ಿಗಳ ಪ್ರಮುಖರೆನಿಸಿಕೊಂಡವರೂ ಆಗಮಿಸಿ ಕೈ-ಕೈ ಹಿಡಿದು ನಿಂತು ಒಂದು ಬಲವಾದ ಸಂದೇಶವನ್ನು ಕೊಡುವ ಪ್ರಯತ್ನ ಮಾಡಿದರು. ಆದರೇನು? ಅವರು ಕೊಟ್ಟ ಈ ಸಂದೇಶವೇ ಉಳಿದವರನ್ನೆಲ್ಲಾ ಒಗ್ಗೂಡಿಸಲು ಸಹಾಯ ಮಾಡಿತು. ಬಿಜೆಪಿಯ ಕಾರ್ಯಕರ್ತರು ಹಿಂದೆಂದಿಗಿಂತಲೂ ಹೆಚ್ಚು ಕರ್ಮಠರಾಗಿ ಮೋದಿಯ ಪರವಾಗಿ ಬೀದಿಗಿಳಿದರು. ಪ್ರತಿಪಕ್ಷಗಳೆಲ್ಲಾ ಒಟ್ಟಾದ ಚಿತ್ರವೇ ಮೋದಿಯ ಗೆಲುವಿಗೆ ದೊಡ್ಡ ಶಕ್ತಿಯಾಗಿ ಕಂಡುಬಂತು. ಮೊದಲನೇ ಬಾರಿಗಿಂತಲೂ ಹೆಚ್ಚು ಸಂಸದರೊಂದಿಗೆ ಮೋದಿ ಮರುಆಯ್ಕೆಗೊಂಡರು. ಎರಡನೇ ಅವಧಿಯಲ್ಲಿ ಯಾಕೋ ಮೋದಿಯವರ ಆಸಕ್ತಿ ಕಡಿಮೆಯಾಗಲಾರಂಭಿಸಿತು. ರಾಜ್ಯಗಳೆಡೆಗೆ ಅವರು ಹೆಚ್ಚು ಗಮನ ಹರಿಸುವುದನ್ನು ಬಿಟ್ಟುಬಿಟ್ಟರು. ಬಿಜೆಪಿಯ ಹೊಸ ಅಧ್ಯಕ್ಷರಾದ ಜೆ.ಪಿ ನಡ್ಡಾ ಅಮಿತ್ಶಾರಂತೆ ಖಡಕ್ಕು ನಿಧರ್ಾರವನ್ನು ಕೈಗೊಳ್ಳುವಂಥವರಾಗಿರಲಿಲ್ಲ. ಸ್ವತಃ ಅಮಿತ್ಶಾ ಗೃಹಸಚಿವರೂ ಆಗಿಬಿಟ್ಟಿದ್ದರಿಂದ ಅವರ ಕಾರ್ಯವ್ಯಾಪ್ತಿಯೂ ಕೂಡ ವಿಸ್ತಾರವಾಗಿತ್ತು. ನೋಡ-ನೋಡುತ್ತಲೇ ಭಾಜಪ ರಾಜ್ಯಗಳ ಮೇಲೆ ರಾಜ್ಯವನ್ನು ಸೋಲಲಾರಂಭಿಸಿತು. ಬತ್ತಳಿಕೆಯಿಂದ ಕಳಕೊಂಡ ಅನೇಕ ರಾಜ್ಯಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರಗಳೂ ಸೇರಿದ್ದವು. ದೆಹಲಿ ಮತ್ತೊಮ್ಮೆ ಕೈತಪ್ಪಿತು!

ದೆಹಲಿಯ ಚುನಾವಣಾ ಫಲಿತಾಂಶಗಳು ಬಂದನಂತರ ನಡೆದ ವಿಶ್ಲೇಷಣೆಯನ್ನು ನಾನು ಗಮನಿಸುತ್ತಿದ್ದೆ. ಹೇಗೆ ಮೋದಿ ಗೆದ್ದಾಗ ಸೀಟುಗಳನ್ನು ಬಿಟ್ಟು ಒಟ್ಟಾರೆ ಮತಗಳಿಕೆಯ ಲೆಕ್ಕಾಚಾರವನ್ನು ಕಾಂಗ್ರೆಸ್ಸು ಮತ್ತು ಅದರ ಗುಲಾಮಿ ಮಾಧ್ಯಮಗಳು ಮಾಡುತ್ತಿದ್ದವೋ ಹಾಗೆಯೇ ಈ ಬಾರಿ ದೆಹಲಿಯ ವಿಚಾರದಲ್ಲಿ ಬಿಜೆಪಿ ಮತ್ತದರ ಭಕ್ತಮಾಧ್ಯಮಗಳು ಮಾಡುತ್ತಿದ್ದವು. ಕೆಲವರಂತೂ ಎಲ್ಲಿಯವರೆಗೂ ಸುಳ್ಳು ಹೇಳಿಬಿಟ್ಟರೆಂದರೆ ನೂರು ವೋಟುಗಳ ಅಂತರದಲ್ಲಿ, 1000-2000 ವೋಟುಗಳ ಅಂತರದಲ್ಲಿ ಸೋತವರೆಷ್ಟೆಷ್ಟು ಮಂದಿ ಎಂಬುದನ್ನು ದಾಖಲಿಸಿ ಹರಿಬಿಟ್ಟಿದ್ದರು. ಅದು ಅಪ್ಪಟ ಸುಳ್ಳಾಗಿತ್ತು ಎಂಬುದು ಗೊತ್ತಾದಾಗ ಅನೇಕರಿಗೆ ತಲೆತಗ್ಗಿಸಿ ನಿಲ್ಲುವ ಸರದಿ. ಆದರೆ ನಿಜವಾದ ಗೆಲುವಿನ ಸಂಭ್ರಮವನ್ನು ಆಚರಿಸಿದ್ದು ಕಾಂಗ್ರೆಸ್ಸು ಮಾತ್ರ!


ಕಾಂಗ್ರೆಸ್ಸಿಗೆ ಹೇಳಿಕೊಳ್ಳಲು ಆಮ್ಆದ್ಮಿ ಪಾಟರ್ಿಯಂತೆ ಸಂಖ್ಯೆಯಂತೂ ಇರಲೇ ಇಲ್ಲ. ಬಿಜೆಪಿಯಂತೆ ಶೇಕಡಾವಾರು ವೋಟುಗಳ ಬಲವೂ ಇರಲಿಲ್ಲ. ಶೇಕಡಾ 5ಕ್ಕಿಂತ ಕಡಿಮೆ ಮತವನ್ನು ಗಳಿಸಿದ ಕಾಂಗ್ರೆಸ್ಸು ತಾನು ಸ್ಪಧರ್ಿಸಿದ್ದ 67 ಕ್ಷೇತ್ರಗಳಿಂದ 64 ಕ್ಷೇತ್ರಗಳಲ್ಲಿ ಠೇವಣಿಯನ್ನು ಕಳೆದುಕೊಂಡಿತ್ತು. ಸ್ಕೋರ್ಬೋಡರ್ಿನ ಮೇಲೆ ಕಾಂಗ್ರೆಸ್ಸಿನ ಶಾಸಕರ ಸಂಖ್ಯೆ ಅಕ್ಷರಶಃ ಸೊನ್ನೆಯಾಗಿತ್ತು. 15 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಪಕ್ಷವೊಂದು ಇಷ್ಟು ಹೀನಾಯವಾದ ಸೋಲನ್ನು ಅಪ್ಪಿಕೊಳ್ಳುವುದು ದೇಶದ ಭವಿಷ್ಯದ ದೃಷ್ಟಿಯಿಂದ ಒಳಿತಿರಬಹುದೇನೋ ಕಾಂಗ್ರೆಸ್ಸಿನ ಭವಿಷ್ಯದ ದೃಷ್ಟಿಯಿಂದ ಖಂಡಿತ ಒಳಿತಲ್ಲ. ಈ ಚುನಾವಣೆಯಲ್ಲಿ 8 ಸೀಟು ಪಡೆದ ಬಿಜೆಪಿಯ ಅನೇಕ ಮುಖಂಡರು ಮುಖ ತೋರಿಸಲಾಗದೇ ನಾಚುತ್ತಿದ್ದರೆ ಕಾಂಗ್ರೆಸ್ಸು ಮಾತ್ರ ತನ್ನ ಸೋಲನ್ನು ಮರೆತು ಬಿಜೆಪಿಯ ಸೋಲನ್ನು ಸಂಭ್ರಮಿಸುತ್ತಿತ್ತು. ಬೇರೆಯವರನ್ನು ಬಿಡಿ, ಸ್ವತಃ ಪಿ.ಚಿದಂಬರಂ ಸರಣಿ ಟ್ವೀಟುಗಳನ್ನು ಮಾಡಿ ಸೋತ ಬಿಜೆಪಿಯ ಕಾಲೆಳೆಯುವ ಪ್ರಯತ್ನ ಮಾಡಿದ್ದರು. ಜೈಲಿಗೆ ಕಳಿಸಿದ್ದ ಬಿಜೆಪಿಯ ಮೇಲಿನ ಆಕ್ರೋಶ ಅವರಿಗೆ ಇಂಗಿರಲಿಲ್ಲವೆಂಬುದು ನೋಡಿದರೆ ಗೊತ್ತಾಗುವಂತಿತ್ತು. ಅವರ ಈ ಟ್ವೀಟಿಗೆ ಜನಸಾಮಾನ್ಯರು ಬಿಡಿ, ಸ್ವತಃ ಮಾಜಿ ರಾಷ್ಟ್ರಪತಿ ಪ್ರಣಬ್ಮುಖಜರ್ಿಯವರ ಮಗಳು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಳು. ಬಿಜೆಪಿಯ ಸೋಲಿನಲ್ಲಿ ತನ್ನ ಗೆಲುವನ್ನು ಕಾಣುವ ಕಾಂಗ್ರೆಸ್ಸಿನ ಈ ಬುದ್ಧಿ ಒಳಿತಲ್ಲವೆಂದು ಕಾಂಗ್ರಸ್ ನಾಯಕರೇ ಹೇಳಲಾರಂಭಿಸಿದರು. ಮೊದಲ ದಿನ ಸಂಭ್ರಮಿಸುವಂತಾದರೂ ಬರು-ಬರುತ್ತಾ ಕಾಂಗ್ರೆಸ್ಸಿನ ಮನೆಯೊಳಗೆ ಉತ್ಪಾತಗಳೆದ್ದವು. ರಾಹುಲ್ ಹೋದೆಡೆಯೆಲ್ಲಾ ಕಾಂಗ್ರೆಸ್ಸು ಸೋಲುತ್ತದೆ ಎಂಬ ಮಾತಂತೂ ವ್ಯಾಪಕವಾಗಿ ಎಲ್ಲೆಡೆ ಅಡ್ಡಾಡಲಾರಂಭಿಸಿತು. ಮಧ್ಯಪ್ರದೇಶದ ಮುಖ್ಯಮಂತ್ರಿ ಜ್ಯೋತಿರಾದಿತ್ಯನೊಂದಿಗೆ ಬಹಿರಂಗವಾಗಿಯೇ ಕಿತ್ತಾಟಕ್ಕಿಳಿದಿದ್ದು ಹುಬ್ಬೇರಿಸುವಂತಿತ್ತು. ಕೊನೆಗೆ ಅಜಯ್ ಮಾಕನ್ ಮತ್ತು ಮಿಲಿಂದ್ ದೇವ್ರಾ ಟ್ವಿಟರ್ನಲ್ಲಿ ಮುಕ್ತವಾಗಿ ಬಡಿದಾಡಿಕೊಂಡು ಕಾಂಗ್ರೆಸ್ಸಿನ ಮನೆ ಒಡೆದಿದೆ ಎಂಬುದನ್ನು ಜಗಜ್ಜಾಹೀರುಗೊಳಿಸಿದರು. ವಾಸ್ತವವಾಗಿ ಮಿಲಿಂದ್ ಅರವಿಂದ್ ಕೇಜ್ರಿವಾಲರನ್ನು ಮುಕ್ತಕಂಠದಿಂದ ಹೊಗಳಿ ಅವರ ಸಕರ್ಾರ ಹೆಚ್ಚುವರಿ ಬಜೆಟ್ನಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದಿದ್ದರು. ಪ್ರತಿಕ್ರಿಯೆ ನೀಡಿದ ಅಜಯ್ ಮಾಕನ್ ಮಿಲಿಂದರ ಮಾತುಗಳಲ್ಲಿರುವ ಸುಳ್ಳನ್ನು ಬಯಲಿಗೆಳೆಯುತ್ತಾ, ‘ಬೇಕಿದ್ದರೆ ಕಾಂಗ್ರೆಸ್ ಬಿಟ್ಟುಬಿಡಿ. ಹೀಗೆ ಅರೆಬೆಂದ ಸುಳ್ಳುಗಳನ್ನು ಜನರಿಗೆ ಹೇಳಬೇಡಿ’ ಎಂದಿದ್ದು ಅನೇಕ ಪ್ರಶ್ನೆಗಳಿಗೆ ಉತ್ತರಕೊಟ್ಟಿತ್ತು!


ಕಾಂಗ್ರೆಸ್ಸು ಸೋತು ಗೆದ್ದೆ ಎಂದುಕೊಂಡಿದೆ. ಆದರೆ ವಾಸ್ತವವಾಗಿ ಈ ಕದನದಲ್ಲಿ ಸೋತು ಗೆದ್ದಿರುವುದು ಬಿಜೆಪಿಯೇ. ಕಾಂಗ್ರೆಸ್ಸು ಹೆಚ್ಚು-ಕಡಿಮೆ ಎಲ್ಲಾ ರಾಜ್ಯಗಳಲ್ಲೂ ಈಗ ಮೂರನೇ ದಜರ್ೆಯ ಪಾಟರ್ಿ. ಕಾಂಗ್ರೆಸ್ ಮುಕ್ತ ಭಾರತದ ಕನಸು ಬಲು ದೂರವಿಲ್ಲ. ಹಾಗಾದಾಗ ಉಳಿದೆಲ್ಲ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿ ಆಯಾ ರಾಜ್ಯಕ್ಕೆ ಸೀಮಿತವಾಗಿಬಿಡುತ್ತವೆ. ಆಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬಲ್ಲ ಪಕ್ಷ ಭಾಜಪ ಮಾತ್ರ. ಮುಂದಿನ ಚುನಾವಣೆಗೆ ಜನರಿಗೆ ಬೇರೆ ಆಯ್ಕೆಯೇ ಉಳಿಯುವುದಿಲ್ಲ. ಮೋದಿ ನಿಮರ್ಿಸಿಕೊಟ್ಟ ಖೆಡ್ಡಾದಲ್ಲಿ ಕಾಂಗ್ರೆಸ್ಸು ಉರುಳಿ ಬಿದ್ದಿದೆ ಮತ್ತು ಆ ಹೊಂಡದಲ್ಲಿ ತಿನ್ನಲು ಒಂದಷ್ಟು ಹುಲ್ಲು, ಕುಡಿಯಲು ನೀರಿದೆ ಎಂದಷ್ಟೇ ಅದು ತೃಪ್ತಿ ಪಡುತ್ತಿದೆ!

ಆರಂಭದಲ್ಲೇ ಹೇಳಿದೆನಲ್ಲಾ ರಾಜಕೀಯ ವಿಶ್ಲೇಷಣೆ ಬಲು ವಿಚಿತ್ರವಾದ್ದು ಅಂತ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. Adarsh

    February 18, 2020 at 9:10 pm

    howdu

Leave a Reply

Your email address will not be published. Required fields are marked *

Most Popular

To Top