National

ಸುಳ್ಳು ಹೇಳಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಬೆತ್ತಲಾದ ರಾಹುಲ್!!

ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಸುಪ್ರೀಂಕೋರ್ಟು ನೀಡಿದ್ದ ನೊಟಿಸ್ ಗೆ ಉತ್ತರಿಸಿದ್ದಾರೆ. ಪ್ರತಿ ಬಾರಿ ಸುಳ್ಳು ಹೇಳಿ ಸಿಕ್ಕುಹಾಕಿಕೊಳ್ಳುವ ರಾಹುಲ್ ಈ ಬಾರಿ ಸರ್ವೋಚ್ಚ ನ್ಯಾಯಾಲಯದೆದುರೇ ಸಿಕ್ಕಿಹಾಕಿಕೊಂಡಿದ್ದಾರೆ.

ರಾಹುಲ್ ಈ ಹಿಂದೆ ಚೋಕಿದಾರ್ ಚೋರ್ ಹೈ ಎಂದು ಸರ್ವೋಚ್ಚ ನ್ಯಾಯಾಲಯವೇ ಒಪ್ಪಿಕೊಂಡಿದೆ ಎಂಬ ಸುಳ್ಳು ಸುದ್ದಿಯನ್ನು ಮಾಧ್ಯಮಗಳ ಮುಂದೆ ನಿಂತು ಹೇಳಿದ್ದ. ಈ ಹೇಳಿಕೆಯ ವಿರುದ್ಧ ಬಿಜೆಪಿಯ ನಾಯಕಿ ಮೀನಾಕ್ಷಿ ಲೇಖಿಯವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟು ಇದನ್ನಾಧರಿಸಿ ರಾಹುಲ್ ಗೆ ನೋಟಿಸ್ ಜಾರಿಗೊಳಿಸಿತ್ತು. ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಗೆ ಏಪ್ರಿಲ್ 22ರೊಳಗೆ ಉತ್ತರಿಸಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ರಾಹುಲ್ ಈಗ ಉತ್ತರಿಸಿದ್ದು, ‘ಚುನಾವಣಾ ಪ್ರಚಾರದ ಭರದಲ್ಲಿ ಹೀಗೆ ಹೇಳಿದ್ದೇನೆ’ ಎಂದು ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದಾರೆ. ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷನೇ ಹೀಗೆ ಸುಳ್ಳು ಹೇಳಿರುವುದು ಪಕ್ಷಕ್ಕೆ ಭಾರಿ ಮುಖಭಂಗವೇ ಸರಿ. ಕಾಂಗ್ರೆಸ್ ಈಗ ಜನರ ಮುಂದೆ ಬೆತ್ತಲಾಗಿದೆ!

ತಮ್ಮ ಇಡಿಯ ಚುನಾವಣಾ ಪ್ರಚಾರವನ್ನು ಚೋಕಿದಾರ್ ಚೋರ್ ಹೈ ಎಂಬ ಆಂದೋಲನದೊಂದಿಗೆ ನಡೆಸುತ್ತಿದ್ದ ಕಾಂಗ್ರೆಸ್ಸಿಗೆ ಈಗ ಇರಿಸುಮುರಿಸು.

Click to comment

Leave a Reply

Your email address will not be published. Required fields are marked *

Most Popular

To Top