National

ಸುಳ್ಳು ಹೇಳಿದ್ದಕ್ಕೆ ಕ್ಷಮೆ ಕೇಳಿದ ರಾಹುಲ್!

ಬಹುಶಃ ದೇಶದ ಇತಿಹಾಸದಲ್ಲಿ ಹಿಂದೆಂದೂ ಹೀಗೆ ಆಗಿರಲಿಕ್ಕಿಲ್ಲ. ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಪ್ರಧಾನಮಂತ್ರಿಯನ್ನು ಚೌಕಿದಾರ್ ಚೋರ್ ಎಂದು ಸಂಬೋಧಿಸಿದ್ದಕ್ಕೆ ಕ್ಷಮೆ ಕೇಳಿದ್ದಾರೆ. ಒಂದು ರಾಷ್ಟ್ರಮಟ್ಟದ ಪಕ್ಷವಾಗಿ ಇಂದಿರಾ ಕಾಂಗ್ರೆಸ್ ಎಂಬುದನ್ನೇ ಗಣನೆಗೆ ತೆಗೆದುಕೊಂಡರೂ ಕನಿಷ್ಠ ಮೂರು ದಶಕಗಳಷ್ಟು ಹಳೆಯದಾಗಿರುವ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷ ಈ ಪರಿ ಮುಖಭಂಗಕ್ಕೆ ಒಳಗಾಗಿದ್ದು ಹಿಂದೆಂದೂ ಇರಲಿಕ್ಕಿಲ್ಲವೇನೋ. ಮತದಾನಕ್ಕೂ ಮುನ್ನ ಕಾಂಗ್ರೆಸ್ಸಿಗರು ಜನರ ಮುಂದೆ ಹೇಗೆ ಮುಖ ತೋರಿಸುತ್ತಾರೆ ಎನ್ನುವುದೇ ಈಗ ಬಲುದೊಡ್ಡ ಪ್ರಶ್ನೆ!


ರಾಹುಲ್ನ ಈ ಹುಚ್ಚುತನ ಮೊದಲನೇ ಬಾರಿಯದ್ದೇನೂ ಅಲ್ಲ. ರಫೇಲ್ನ ವಿಚಾರಕ್ಕೆ ಆತ ಅನೇಕ ಬಾರಿ ಪ್ರಧಾನಮಂತ್ರಿಗಳನ್ನು ದೂಷಿಸುವ ಭರದಲ್ಲಿ ದೇಶದ ಮಾನ ಹರಾಜು ಹಾಕಿದ್ದಾನೆ. ಸಂಸತ್ನಲ್ಲಿ ಮಾತನಾಡುತ್ತಾ ಒಮ್ಮೆ ರಫೇಲ್ ಒಪ್ಪಂದದಲ್ಲಿ ಯಾವುದೇ ಗೌಪ್ಯತೆಯ ಕಾನೂನುಗಳಿಲ್ಲವೆಂದು ಫ್ರಾನ್ಸಿನ ಅಧ್ಯಕ್ಷರೇ ಹೇಳಿದ್ದಾರೆಂದು ಭರ್ಜರಿ ಭಾಷಣ ಮಾಡಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಫ್ರಾನ್ಸ್ ಅಧಿಕೃತವಾದ ಹೇಳಿಕೆಯನ್ನು ಹೊರಡಿಸಿ ಅಲ್ಲಿನ ಅಧ್ಯಕ್ಷರು ರಾಹುಲ್ನೊಡನೆ ಇಂಥದ್ದೊಂದು ವಿಚಾರ ಮಾತೇ ಆಡಿಲ್ಲವೆಂದು, ರಫೇಲ್ನ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದೂ ಹೇಳಿ ಕಾಂಗ್ರೆಸ್ಸಿಗೆ ಕಪಾಳಮೋಕ್ಷ ಮಾಡಿದ್ದರು. ಸಂಸತ್ತನ್ನು, ಈ ದೇಶದ 128 ಕೋಟಿ ಜನರ ಪ್ರತಿನಿಧಿಗಳನ್ನು ಮತ್ತು ಇಡಿಯ ದೇಶವನ್ನು ತಪ್ಪು ಮಾಹಿತಿಯಿಂದ ಪ್ರಪಾತಕ್ಕೆ ತಳ್ಳಲೆತ್ನಿಸಿದ ರಾಹುಲ್ಗೆ ಅಂದೇ ಶಿಕ್ಷೆಯಾಗಬೇಕಿತ್ತು ಅಥವಾ ತನ್ನಿಂದಾದ ತಪ್ಪಿಗೆ ನಾಚಿ ನೀರಾಗಿ ರಾಹುಲ್ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಇತ್ತು ಯಾರ ಕಣ್ಣಿಗೂ ಬೀಳದಂತೆ ಹೊರಟುಬಿಡಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದ ರಾಹುಲ್ ಆನಂತರದ ದಿನಗಳಲ್ಲಿ ರಫೇಲ್ನ ಕುರಿತಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲೇ ನಡೆದ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಫೇಲ್ ಕುರಿತಂತೆ ಎಲ್ಲ ಸಂಗತಿಗಳನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಾಗಲೂ ರಾಹುಲ್ ಬದಲಾಗಲಿಲ್ಲ. ವಾಸ್ತವವಾಗಿ ರಕ್ಷಣಾ ಸಚಿವಾಲಯದ ಒಪ್ಪಂದಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಎತ್ತರದ ಬೌದ್ಧಿಕ ಸ್ತರ ಬೇಕಾಗುತ್ತದೆ ಎಂಬುದನ್ನು ನಾವೂ ಅರ್ಥಮಾಡಿಕೊಳ್ಳಬೇಕು. ಮುಂದೆ ಸುಪ್ರೀಂಕೋಟರ್್ ಈ ವಿಚಾರಣೆಯನ್ನು ಕೈಗೆತ್ತಿಕೊಂಡು ರಫೇಲ್ನಲ್ಲಿ ಯಾವ ಹಗರಣವೂ ನಡೆದಿಲ್ಲವೆಂದು ಹೇಳಿದಾಗ ಅದು ಕಾಂಗ್ರೆಸ್ಸಿನಲ್ಲಿರುವ ಎಲ್ಲ ಹಿರಿಯ ನಾಯಕರುಗಳಿಗೆ ಭರ್ಜರಿ ಕಪಾಳಮೋಕ್ಷ! ಮುಂದೆ ಕಾಂಗ್ರೆಸ್ಸಿನ ಒತ್ತಡಕ್ಕೆ ಮಣಿದು ಕಂಟ್ರೋಲರ್ ಆಡಿಟರ್ ಜನರಲ್ ರಫೇಲ್ ಒಪ್ಪಂದದ ತುಲನಾತ್ಮಕ ಅಧ್ಯಯನವನ್ನು ದೇಶದ ಮುಂದಿರಿಸಿದಾಗ ಕಾಂಗ್ರೆಸ್ಸಿನ ಒಪ್ಪಂದಕ್ಕಿಂತ ಮೋದಿಯವರು ಮಾಡಿಕೊಂಡು ಬಂದ ಒಪ್ಪಂದ ಕಡಿಮೆ ಬೆಲೆಯದ್ದು ಎಂಬುದು ದೇಶಕ್ಕೆ ಅರಿವಾಯ್ತು. ಆದರೆ ಆಡಿಟ್ ವರದಿಯನ್ನು ಅರ್ಥಮಾಡಿಕೊಳ್ಳಲು ಬೇಕಾದ ಬೌದ್ಧಿಕ ಸಾಮಥ್ರ್ಯ ರಾಹುಲ್ಗಿರಲಿಲ್ಲ. ಮುಂದೇನಾಯ್ತು ಗೊತ್ತೇ?


ರಕ್ಷಣಾ ಇಲಾಖೆಯಿಂದ ತಮ್ಮ ಅಧಿಕಾರಿಗಳನ್ನು ಬಳಸಿ ಕದ್ದ ಮಾಹಿತಿಯನ್ನು ಸುಪ್ರೀಂಕೋಟರ್್ನಲ್ಲಿ ಇಟ್ಟು ಅದರ ಆಧಾರದ ಮೇಲೆ ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್ಸು ಕೇಳಿಕೊಂಡಿತು. ಸಕರ್ಾರ ಗೌಪ್ಯ ಮಾಹಿತಿಯ ಆಧಾರದ ಮೇಲೆ ವಿಚಾರಣೆ ನಡೆಸಬಾರದೆಂದು ವಿನಂತಿಸಿಕೊಂಡಿತು. ಸಕರ್ಾರದ ಕೋರಿಕೆಯನ್ನು ತಳ್ಳಿಹಾಕಿದ ಸವರ್ೋಚ್ಚ ನ್ಯಾಯಾಲಯ ವಿಚಾರಣೆ ನಡೆಸಲು ತಪ್ಪೇನಿಲ್ಲ ಎಂದು ಹೇಳಿ ಸುಮ್ಮನಾಯ್ತು. ವಾಸ್ತವವಾಗಿ ಅದು ಮೋದಿಯ ವಿರುದ್ಧ, ಸಕರ್ಾರದ ವಿರುದ್ಧ ಸುಪ್ರೀಂಕೋಟರ್ಿನ ನಿರ್ಣಯವಾಗಿರಲಿಲ್ಲ. ವಿಚಾರಣೆ ನಡೆಸಬಹುದು ಎಂಬ ಹೇಳಿಕೆಯಷ್ಟೇ ಆಗಿತ್ತು. ಇದನ್ನೇ ತಪ್ಪಾಗಿ ಅಥರ್ೈಸಿಕೊಂಡ ರಾಹುಲ್ ಜನರನ್ನು ಮತ್ತೊಮ್ಮೆ ತಪ್ಪುದಾರಿಗೆಳೆಯುವ ಪ್ರಯತ್ನ ಶುರುಮಾಡಿದರು. ಸವರ್ೋಚ್ಚ ನ್ಯಾಯಾಲಯವೇ ಚೌಕಿದಾರ್ನನ್ನು ಚೋರ್ ಎಂದು ಒಪ್ಪಿಕೊಂಡಿದೆ ಎಂದು ಬಡಬಡಾಯಿಸಲಾರಂಭಿಸಿದರು!


ರಾಹುಲ್ ಹೇಳಿದ್ದನ್ನು ಭಾರತದಲ್ಲಿ ಯಾರೂ ತೀವ್ರವಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಹಿಂದೆ ಸಾವು ಬದುಕಿನ ನಡುವೆ ಹೋರಾಡುತ್ತಾ ಮನೋಹರ್ ಪರಿಕ್ಕರ್ ಅವರು ವ್ಯಾಧಿಘ್ರಸ್ಥರಾಗಿದ್ದಾಗ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿಕೊಂಡು ಬಂದು ವೇದಿಕೆಯ ಮೇಲೆ ಭಾಷಣ ಮಾಡುವಾಗ ರಫೇಲ್ ಬಗ್ಗೆ ತನಗೇನೂ ಗೊತ್ತೇ ಇಲ್ಲವೆಂದು ಪರಿಕ್ಕರ್ ಹೇಳಿದರೆಂಬ ಮತ್ತೊಂದು ಸುಳ್ಳು ಹೇಳಿದ್ದ. ಹಾಸಿಗೆಯ ಮೇಲೆ ಮಲಗಿಕೊಂಡೇ ರಾಹುಲ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಿಕ್ಕರ್ ‘ಇಂತಹ ಹೊತ್ತಲ್ಲಿ ರಾಜಕೀಯ ಮಾಡುತ್ತಾ ಹೇಳದೇ ಇರುವ ಸಂಗತಿಯನ್ನು ನನ್ನ ಬಾಯಿಗೆ ತುರುಕುವುದು ಸರಿಯಲ್ಲ’ವೆಂದು ಛೀಮಾರಿ ಹಾಕಿದರು. ರಾಹುಲ್ನ ಹಿನ್ನೆಲೆ ಇಷ್ಟು ಕಳಪೆಯಾಗಿರುವುದರಿಂದ ಆತ ಹೇಳಿದ್ದನ್ನು ನಂಬುವ ತಪ್ಪು ಭಾರತೀಯರು ಖಂಡಿತ ಮಾಡಲಾರರೆಂಬ ವಿಶ್ವಾಸವಿದ್ದೇ ಇತ್ತು. ಆದರೆ ದುರಂತವೇನು ಗೊತ್ತೇ? ಕಾಂಗ್ರೆಸ್ಸಿನ ಪರಿವಾರದ ಸೇವೆಗೈದ ಅನೇಕ ಮಹತ್ವದ ಹುದ್ದೆಗಳನ್ನು ಗಿಟ್ಟಿಸಿರುವ ಪತ್ರಕರ್ತರು, ಉಪನ್ಯಾಸಕರು ಈ ಹೇಳಿಕೆಗೆ ಮಹತ್ವವನ್ನು ಕೊಡಲಾರಂಭಿಸಿದಾಗ ಬಿಜೆಪಿಯ ಸಾಂಸದೆ ಮೀನಾಕ್ಷಿ ಲೇಖಿ ಸವರ್ೋಚ್ಚ ನ್ಯಾಯಾಲಯಕ್ಕೆ ಈ ವಿಚಾರವನ್ನೋಯ್ದರು. ನ್ಯಾಯಾಲಯ ಹೇಳದಿರುವ ಮಾತುಗಳನ್ನು ಅದರ ಬಾಯಿಗೆ ತುರುಕಿದ್ದು ಎಷ್ಟು ಸರಿ ಎಂಬುದು ಆಕೆಯ ಪ್ರಶ್ನೆ. ನ್ಯಾಯಾಲಯವು ಮರುಮಾತಿಲ್ಲದೇ ನೋಟಿಸ್ ನೀಡಿತು. ಕೊನೆಗೆ ಇದು ಸುರುಳಿಯಾಗಿ ತನ್ನ ಕಾಲಿಗೇ ಸುತ್ತಿಕೊಳ್ಳುವುದು ಎಂದರಿತ ರಾಹುಲ್ ಚೌಕಿದಾರನನ್ನು ಚೋರ್ ಎಂದು ಕರೆದಿದ್ದು ತನ್ನ ತಪ್ಪೆಂದು ಒಪ್ಪಿಕೊಂಡ.
ಸತ್ಯವನ್ನು ಹೇಳುವ ಛಾತಿಯಿಲ್ಲದವ, ಸುಳ್ಳನ್ನು ಹೇಳಿಕೊಂಡೇ ಅಧಿಕಾರ ಪಡೆಯಲು ಬಯಸುವವ ಮತ್ತು ರಾಷ್ಟ್ರದ ಸುರಕ್ಷತೆಯ ವಿಚಾರದಲ್ಲಿ ಎಂತಹ ಬಗೆಯ ನೀಚ ಒಪ್ಪಂದಕ್ಕೂ ಇಳಿಯಬಲ್ಲ ಇಂತಹ ವ್ಯಕ್ತಿಗಳಿಗೆ ಮತ ಹಾಕುವುದಾ!? ಇಂದು ಮತದಾನದ ದಿವಸ. ಹೇಗೆ ಮನೆಯ ಮಗಳನ್ನು ಯೋಗ್ಯ ವರನನ್ನು ಹುಡುಕಿ ಅಪರ್ಿಸಲಾಗುವುದೋ ಹಾಗೆಯೇ ರಾಷ್ಟ್ರದ ಕಾಳಜಿಯುಳ್ಳ ಸಮರ್ಥ ವ್ಯಕ್ತಿಗೆ ಮತದಾನ ಮಾಡಬೇಕು. ಏಕೆಂದರೆ ಲೋಕಸಭಾ ಚುನಾವಣೆ ಸ್ಥಳೀಯ ಸಮಸ್ಯೆಗಳಿಗಷ್ಟೇ ಪರಿಹಾರವಲ್ಲ. ಭಾರತದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ, ಭಾರತದ ಸುರಕ್ಷತೆಯನ್ನು ಕಾಪಾಡುವ, ಇಲ್ಲಿನ ಸಂಪತ್ತನ್ನು ವೃದ್ಧಿಸುವ ಸಮರ್ಥ ವ್ಯಕ್ತಿಯ ಆಯ್ಕೆಗೆ ಈ ಚುನಾವಣೆ.

ಯೋಚಿಸಿ, ಮತ ಚಲಾಯಿಸಿ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top