National

ಸಾವಿನ ಮನೆಯಲ್ಲೂ ರಾಜಕೀಯದ ಚದುರಂಗ!

ಗೋವಾದ ಮುಖ್ಯಮಂತ್ರಿಯಾಗಿದ್ದ ಮಾಜಿ ರಕ್ಷಣಾ ಸಚಿವರೂ ಆಗಿದ್ದ ಮನೋಹರ್ ಪರಿಕ್ಕರ್ ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. ಮನೋಹರ್ ಪರಿಕ್ಕರ್ ಅವರು ಹಲವು ತಿಂಗಳುಗಳಿಂದ ಪ್ಯಾಂಕ್ರಿಯಾಟಿಕ್ ಖಾಯಿಲೆಯಿಂದ ನರಳುತ್ತಿದ್ದರು. ಮನೋಹರ್ ಪರಿಕ್ಕರ್ ಅವರು ತೀರಿಕೊಂಡ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ಸು ಗೋವಾದಲ್ಲಿ ಸರ್ಕಾರ ರಚಿಸಲು ಮುಂದಾಗಿದೆ.

40 ಸದಸ್ಯರನ್ನೊಳಗೊಂಡಂತಹ ಗೋವಾ ಅಸೆಂಬ್ಲಿಯಲ್ಲಿ ಕಾಂಗ್ರೆಸ್ಸು ಅತಿ ದೊಡ್ಡ ಪಕ್ಷವಾಗಿದೆ. ಗೋವಾದ ರಾಜ್ಯಪಾಲರಾದ ಮೃದಲಾ ಸಿಂಹ ಅವರಿಗೆ ಕಾಂಗ್ರೆಸ್ಸು ಸರ್ಕಾರ ರಚಿಸಲು ಅನುಮತಿ ನೀಡುವಂತೆ ಪತ್ರ ಬರೆದಿದೆ. ಗೋವಾದ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ಅವರು ತೀರಿಕೊಂಡ 48 ಗಂಟೆಗಳಲ್ಲಿ ಎರಡೆರಡು ಬಾರಿ ಪತ್ರ ಬರೆದಿದೆ.

ಗೋವಾದ ಮುಖ್ಯಮಂತ್ರಿ ಪರಿಕ್ಕರ್ ಆಗಿರುವವರೆಗೂ ಮೈತ್ರಿ ಮಾಡಿಕೊಳ್ಳುವುದಾಗಿ ಬಿಜೆಪಿಯೊಡನೆ ಮೈತ್ರಿ ಮಾಡಿಕೊಂಡ ಪಕ್ಷ ಹೇಳಿತ್ತು. ಪರಿಕ್ಕರ್ ಅವರು ಮೃತಪಟ್ಟಿರುವುದರಿಂದ ಬಿಜೆಪಿಯ ಮೈತ್ರಿ ಈಗ ಮುರಿದುಬಿದ್ದಿದೆ. ಇದರ ಆಧಾರದ ಮೇಲೆ ಈಗ ಪರಿಕ್ಕರ್ ಅವರ ಸಾವಿನ ಹಿಂದು-ಹಿಂದೆಯೇ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸು ಸರ್ಕಾರ ರಚಿಸಲು ಮುಗಿಬಿದ್ದಿದೆ. ಅಂತಿಮ ಸಂಸ್ಕಾರವೂ ಸಹ ನಡೆದಿಲ್ಲ. ಈ ಪತ್ರಕ್ಕೆ  ಕಾಂಗ್ರೆಸ್ಸಿನ ನಾಯಕ ಚಂದ್ರಶೇಖರ್ ಕವ್ಲೇಕರ್ ಮತ್ತು ಗೋವಾ ಪ್ರದೇಶ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಗಿರೀಶ್ ಚೊಡ್ನಕರ್ ಅವರು ಸಹಿ ಹಾಕಿದ್ದಾರೆ.

ಈ ಹಿಂದೆ ಮನೋಹರ್ ಪರಿಕ್ಕರ್ ಅವರು ಅಸ್ವಸ್ಥರಾಗಿದ್ದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್ ಸಹಜವಾಗಿ ಮಾತನಾಡಿಕೊಂಡು ಬಂದಿದ್ದ. ಹಿಂದಿರುಗಿ ಬಂದ ನಂತರ ಮಾಧ್ಯಮಗಳೆದುರು ತಾನು ರಫೇಲ್ ಕುರಿತು ಮಾತನಾಡಿದುದಾಗಿ ಹೇಳಿಕೆ ನೀಡಿದ್ದ. ಮನೋಹರ್ ಪರಿಕ್ಕರ್ ಅವರು ರಾಹುಲ್ ಗೆ ಬಹಿರಂಗ ಪತ್ರವೊಂದನ್ನು ಬರೆದು ತಾವು ರಾಹುಲ್ ನೊಡನೆ ರಫೇಲ್ ಕುರಿತು ಮಾತನಾಡಲಿಲ್ಲವೆಂದು ಸ್ಪಷ್ಟಪಡಿಸಿದ್ದರು. ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರಾಧ್ಯಕ್ಷನಾದ ರಾಹುಲ್ ಹೀಗೆ ಸುಳ್ಳು ಹೇಳಿಕೊಂಡೇ ಪ್ರಚಾರ ಗಿಟ್ಟಿಸಿಕೊಳ್ಳುವ ಪರಿ ಎಂಥವರಿಗೂ ಅಸಹ್ಯ ತರುವಂಥದ್ದು.

ಆರೋಗ್ಯ ಹದಗೆಟ್ಟು ಕುಳಿತಿದ್ದ ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ನೋಡಲು ಹೋದುದನ್ನೇ ರಾಜಕೀಯಕ್ಕೆ ಬಳಸಿಕೊಂಡ ರಾಹುಲ್ ಮತ್ತವನ ಪಕ್ಷ ಅಲ್ಲಿಗೇ ನಿಲ್ಲಲಿಲ್ಲ. ಈಗ ಕಾಂಗ್ರೆಸ್ ಸಾವಿನ ಮನೆಯಲ್ಲೂ ರಾಜಕಾರಣ ಮಾಡುತ್ತಿದೆ. ಅವರು ತೀರಿಕೊಂಡ ಮರುಕ್ಷಣವೇ ಗೋವಾವನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿದೆ ಅಧಿಕಾರದಾಹಿ ಕಾಂಗ್ರೆಸ್ಸು!

Click to comment

Leave a Reply

Your email address will not be published. Required fields are marked *

Most Popular

To Top