National

ಸಾವರ್ಕರ್ ಎಂದರೆ ಕಾಂಗ್ರೆಸ್ಸಿಗರು ಮೈ ಪರಚಿಕೊಳ್ಳುವುದೇಕೆ?!

ಕೋಟರ್ಿನಲ್ಲಿ ವಿಚಾರಣೆ ನಡೆಯುತ್ತಿತ್ತು. ತಾನು ಮಾಡಿದ ತಪ್ಪಿಗೆ ಸಕರ್ಾರಿ ಅಧಿಕಾರಿಗಳಿಂದ ವಿಚಾರಣೆ ಎದುರಿಸುತ್ತಿದ್ದ ರಾಜಕೀಯ ಖೈದಿಯ ಪರವಾಗಿ ಅವನ ವಕೀಲರು ನ್ಯಾಯಾಧೀಶರ ಬಳಿ ಅಲವತ್ತುಕೊಳ್ಳುತ್ತಿದ್ದರು. ತಮ್ಮ ಕಕ್ಷಿದಾರರು ಜೈಲಿನಲ್ಲಿದ್ದು ಐದು ಕೇಜಿಯಷ್ಟು ತೂಕ ಕಡಿಮೆಯಾಗಿಬಿಟ್ಟಿದೆ ಎಂಬುದು ವಕೀಲರ ಕಣ್ಣೀರಿಗೆ ಕಾರಣ. ನ್ಯಾಯಾಧೀಶರು ತುಂಬಾ ತಲೆಕೆಡಿಸಿಕೊಂಡಂತೇನೂ ಕಾಣಲಿಲ್ಲ. ಹೀಗಾಗಿ ವಿಚಾರಣೆ ಮುಂದುವರೆಯಿತು. ಇವಿಷ್ಟು ಸಾವರ್ಕರ್ ಬದುಕಿನ ಘಟನೆಗಳೇನೂ ಅಲ್ಲ. ಇಲ್ಲಿ ರಾಜಕೀಯ ಖೈದಿ ಚಿದಂಬರಂ ಮತ್ತು ಅವರ ಪರ ವಕೀಲ ಕಪಿಲ್ ಸಿಬಲ್. ವಿಐಪಿಗಳಿಗೆ ಕೊಡುವ ಸವಲತ್ತುಗಳನ್ನು ಕೊಟ್ಟು ಜೈಲಿನಲ್ಲಿರಿಸಿದ್ದಕ್ಕೆ ಇಷ್ಟು ಮೈ ಪರಚಿಕೊಳ್ಳುವ ಕಾಂಗ್ರೆಸ್ ನಾಯಕರು ಚಿದಂಬರಂರನ್ನೇನಾದರು ಮೈ ಬಗ್ಗಿಸಿ ದುಡಿಯುವ ಕೆಲಸಕ್ಕೆ ಹಚ್ಚಿ ಒಂದು ಹೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿಬಿಟ್ಟಿದ್ದಿದ್ದರೆ ಹೇಗೆ ಪ್ರತಿಕ್ರಿಯಿಸಬಹುದಿತ್ತು? ಊಹಿಸಬಹುದೇನೂ?


ಕಾಂಗ್ರೆಸ್ಸಿಗರ ಸಮಸ್ಯೆಯೇ ಅದು. ಅವರ ಖ್ಯಾತನಾಮ ನಾಯಕರು ಎಂದಿಗೂ ಯಾತನೆಯನ್ನು ಅನುಭವಿಸಲೇ ಇಲ್ಲ. ಅವೆಲ್ಲವನ್ನೂ ದೇಶಭಕ್ತರಿಗೆ ಬಿಟ್ಟು ತಾವು ಜೈಲಿನಲ್ಲಿ ಪೆನ್ನು, ಪೇಪರುಗಳನ್ನು ಪಡಕೊಂಡು ತಮ್ಮ-ತಮ್ಮ ಜೀವನಕಥನಗಳನ್ನು ಬರೆದುಕೊಂಡು ಕಾಲ ತಳ್ಳಿಬಿಟ್ಟರು. ಅದನ್ನೇ ಬಲುದೊಡ್ಡ ಸ್ವಾತಂತ್ರ್ಯ ಹೋರಾಟವೆಂದು ಬಿಂಬಿಸಿದರು. ಸಾವರ್ಕರ್ರದು ಹಾಗಲ್ಲ. ಅವರ ಜೀವನವೇ ಕಣ್ಣೀರಿನಲ್ಲಿ ಕೈತೊಳೆದಂಥದ್ದು. ಅಷ್ಟರ ನಂತರವೂ ಒಮ್ಮೆಯಾದರೂ ‘ನಾನು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆ’ ಎಂದು ಹೇಳುವ ಸಾಹಸವನ್ನೇ ಮಾಡಲಿಲ್ಲ ಪುಣ್ಯಾತ್ಮ! ವಿದೇಶದಲ್ಲಿದ್ದಾಗ ತಮ್ಮ ಅಧ್ಯಯನದ ಜೊತೆ-ಜೊತೆಗೆ ಇಟಲಿ, ಐಲ್ಯರ್ಾಂಡ್, ಫ್ರೆಂಚ್, ರಷ್ಯಾ ಮತ್ತು ಅಮೇರಿಕಾದ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಏರ್ಪಡಿಸಿಕೊಂಡು ಭಾರತದ ಸ್ವಾತಂತ್ರ್ಯಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದರು. ಬ್ರಿಟೀಷ್ ಸಕರ್ಾರ ಅವರನ್ನು ಅತ್ಯಂತ ಭಯಾನಕ ರಾಜದ್ರೋಹಿ ಎಂಬ ಪಟ್ಟಿಯಲ್ಲಿ ಇಟ್ಟಿತ್ತು. ಆದರೆ 1881ರ ಫ್ಯುಜಿಟೀವ್ ಅಫೆಂಡಸರ್್ ಆ್ಯಕ್ಟನ್ನು ಅವರ ಮೇಲೆ ಲಾಗೂ ಮಾಡಲಾಗಲಿಲ್ಲವೇಕೆಂದರೆ ಅವರಾಗ ತಪ್ಪಿಸಿಕೊಂಡು ಓಡಿಹೋಗಿರಲಿಲ್ಲ ಮತ್ತು ಲಂಡನ್ನಿನಲ್ಲಿ ಅಧಿಕೃತ ವಿದ್ಯಾಥರ್ಿಯಾಗಿ ಓದುತ್ತಿದ್ದರು. ಲಂಡನ್ನಿನಲ್ಲಿ ಅವರ ವಿಚಾರಣೆ ನಡೆಸಿದರೆ ಹೆಚ್ಚು ಕ್ರೂರ ಶಿಕ್ಷೆ ಕೊಡಲಾಗುವುದಿಲ್ಲವೆಂದರಿತ ಬ್ರಿಟೀಷ್ ಸಕರ್ಾರ ಅವರನ್ನು ಭಾರತಕ್ಕೆ ಕರೆದುಕೊಂಡು ಬಂತು. ಕಟಕಟೆಯಲ್ಲಿ ನಿಲ್ಲಿಸಿ, ವಿಚಾರಣೆ ನಡೆಸಿ ಕೊಟ್ಟ ಶಿಕ್ಷೆಯಾದರು ಎಷ್ಟು ಗೊತ್ತೇ? ಪರಿಪೂರ್ಣ 50 ವರ್ಷಗಳ ಎರಡು ಜೀವಾವಧಿ ಶಿಕ್ಷೆ! ಅದು ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ. ಅತ್ಯಂತ ಪ್ರಖ್ಯಾತವಾದ ಕಾಲಾಪಾನಿ ಶಿಕ್ಷೆ!

ಆಗೆಲ್ಲಾ ಕಾಲಾಪಾನಿಗೆ ಹೋಗುವುದೆಂದರೆ ಯಮನ ಆಸ್ಥಾನಕ್ಕೆ ಹೋಗುವುದೆಂದೇ ಅರ್ಥವಾಗಿತ್ತು. ಅಲ್ಲಿಂದ ಮರಳಿ ಬಂದವರ ಉದಾಹರಣೆಗಳು ಹೆಚ್ಚು-ಕಡಿಮೆ ಇರಲೇ ಇಲ್ಲ. ಬ್ರಿಟೀಷ್ ಸಕರ್ಾರಕ್ಕೆ ತಲೆನೋವಾಗುತ್ತಿದ್ದ ದರೋಡೆಕೋರರು, ಕಳ್ಳಕಾಕರೊಂದಿಗೆ ರಾಜಕೀಯ ಖೈದಿಗಳನ್ನೂ ತಳ್ಳಿಬಿಡಲಾಗುತ್ತಿತ್ತು. ಒಬ್ಬೊಬ್ಬರೇ ವಾಸಿಸುವ ಈ ಸೆಲ್ಲುಗಳಲ್ಲಿ ಭಯಾನಕವಾದ ಏಕತಾನತೆ ಕಾಡುವಂತೆ ವ್ಯವಸ್ಥೆ ಮಾಡಲಾಗಿತ್ತು. ಒಬ್ಬರೊಂದಿಗೆ ಮತ್ತೊಬ್ಬರು ಮಾತನಾಡುವುದಿರಲಿ, ಒಬ್ಬರ ಮುಖ ಮತ್ತೊಬ್ಬರು ನೋಡದಿರುವಂತೆ ಆ ಜೈಲು ರೂಪಿಸಲ್ಪಟ್ಟಿತ್ತು. ಹಗ್ಗ ಹೊಸೆಯುವುದರಿಂದ ಹಿಡಿದು, ಗಾಣಸುತ್ತಿ ಎಣ್ಣೆ ತೆಗೆಯುವುದರವರೆಗೂ ಅತ್ಯಂತ ಕಠಿಣ ಕೆಲಸಗಳು. ಸ್ವಲ್ಪ ಎಡವಟ್ಟಾದರೂ ಚರ್ಮವೇ ಸುಲಿದು ಹೋಗುವಷ್ಟು ಬಾರುಕೋಲಿನ ಹೊಡೆತ. ಕೊಟ್ಟ ಊಟ ಕೊಟ್ಟಷ್ಟೇ ಮತ್ತು ಕೊಟ್ಟಂತೇ ತಿನ್ನಬೇಕು; ಆ ಕುರಿತು ಚಕಾರವೂ ಎತ್ತುವಂತಿಲ್ಲ. ಒಮ್ಮೆ ಸೆಲ್ಲಿನೊಳಗೆ ಹೊಕ್ಕರೆ ಮತ್ತೆ ಬೆಳಿಗ್ಗೆಯೇ ಎದ್ದು ಬರುವುದು. ಅಷ್ಟರೊಳಗಿನ ಮಲ-ಮೂತ್ರ ಬಾಧೆಗಳೆಲ್ಲಾ ಸೆಲ್ಲಿನೊಳಗೇ! ಊಟವಾದರೂ ಎಂಥದ್ದೆಂದರೆ ಸರಿಯಾಗಿ ಬೆಂದಿರದ ರೊಟ್ಟಿ, ಹಾವು-ಹಲ್ಲಿ-ಚೇಳುಗಳನ್ನೂ ಒಳಗೊಂಡಿರುವ ಸೊಪ್ಪಿನ ಸಾರು, ಕೊನೆಗೆ ಗೆದ್ದಲು ಹುಳುಗಳನ್ನೂ ಬೆರೆಸಿದ ಹಬ್ಬದೂಟ. ಇಂಥ ಸ್ಥಳದಲ್ಲಿ 50 ವರ್ಷದ ಶಿಕ್ಷೆಯನ್ನು ಅನುಭವಿಸಬೇಕೆಂಬ ನ್ಯಾಯಾಧೀಶರ ಬರಹವನ್ನು ಕೇಳಿದವನ ಮಾನಸಿಕ ಸ್ಥಿತಿ ಎಂಥದ್ದಿರಬಹುದೆಂದು ಊಹಿಸಿದೀರೆನು? ಆಸಾಮಿ ಸಾವರ್ಕರ್ ಒಂದಿನಿತೂ ಜಗ್ಗಲಿಲ್ಲ. ಸಾವರ್ಕರ್ರ ಛಾಯಾಚಿತ್ರವನ್ನೊಮ್ಮೆ ನೋಡಿ, ಅವರ ತಲೆಯೊಳಗೆ ಕಾಣುವ ಆ ನರಗಳು ಹುರಿಗೊಳಿಸಿ ಹಗ್ಗ ಮಾಡಿದಂತಿದೆ. ಅದು ಅವರ ಇಚ್ಛಾಶಕ್ತಿಯ ಪ್ರತೀಕ.
ಕಾಲಾಪಾನಿಗೆ ಹೋದ ನಂತರವೂ ಆ ಜೀವ ಬೆಚ್ಚಲಿಲ್ಲ. ಕೆಲವೇ ದಿನಗಳಲ್ಲಿ ಅಲ್ಲಿನ ಒಟ್ಟಾರೆ ಪರಿಸ್ಥಿತಿಯನ್ನು ಅಧ್ಯಯನ ಮಾಡಿದರು. ಆಹಾರ ಪದ್ಧತಿ ಸರಿಯಿಲ್ಲವೆಂದು ಗೊತ್ತಾದ ನಂತರ ತಮಗೆ ಸಿಕ್ಕ ಅವಕಾಶದಲ್ಲೇ ರಾಜಕೀಯ ಖೈದಿಗಳನ್ನೆಲ್ಲಾ ಹುರಿದುಂಬಿಸಿ ತಾವ್ಯಾರೂ ಸಾಮಾನ್ಯ ಡಕಾಯಿತರಲ್ಲವೆಂದು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರೆಂಬುದನ್ನು ಮನದಲ್ಲಿ ಮೂಡುವಂತೆ ಮಾಡಿ ರಾಜಕೀಯ ಖೈದಿಗಳಿಗೆ ಪ್ರತ್ಯೇಕ ಆಹಾರ ವ್ಯವಸ್ಥೆ ರೂಪಿಸುವಂತೆ ಚಳವಳಿ ಹೂಡಿಸಿದರು. 16ರ ಯುವಕ ನಾನೀ ಗೋಪಾಲ ಬ್ರಿಟೀಷ್ ಅಧಿಕಾರಿಯ ಮೇಲೆ ಬಾಂಬ್ ಎಸೆದು 14 ವರ್ಷದ ಶಿಕ್ಷೆ ಪಡೆದು ಅಲ್ಲಿಗೆ ಬಂದಿದ್ದ. ಕೊಟ್ಟ ಕೆಲಸವನ್ನು ಮಾಡದೇ ಅವರ ಪ್ರತಿಯೊಂದೂ ಏಟಿಗೂ ತನ್ನದ್ದೇ ಆದ ರೀತಿಯಲ್ಲಿ ತಿರುಗೇಟು ಕೊಡುತ್ತಾ ಹಠಮಾರಿಯಾಗಿ ನಿಂತಿದ್ದ. ಕೊನೆಗೆ ಸಾವರ್ಕರ್ರ ರಾಜಕೀಯ ಖೈದಿಯ ಈ ಕಲ್ಪನೆ ಅವನಿಗೆ ಹಿಡಿಸಿ ಉಪವಾಸ ಕುಳಿತುಬಿಟ್ಟ. ಆತನ ಸ್ಥಿತಿ ಚಿಂತಾಜನಕವಾದಾಗ ಸಾವರ್ಕರ್ ಹೇಳಿದ್ದೇನು ಗೊತ್ತೇ? ‘ಅನ್ನ ಬಿಟ್ಟು ಕೂತರೆ ನಮಗೇ ನಷ್ಟ. ಚೆನ್ನಾಗಿ ತಿನ್ನಿ, ಸಾಧ್ಯವಾದರೆ ಕಸಿದುಕೊಂಡು ತಿನ್ನಿ. ಆದರೆ ಕೆಲಸ ಮಾಡಬೇಡಿ. ಊಟದ ವ್ಯವಸ್ಥೆ ಸರಿಯಾಗುವವರೆಗೂ ಕೆಲಸಕ್ಕೆ ಇಳಿಯಲೇಬೇಡಿ’ ಅಂತ. ಮೊದಲ ಬಾರಿಗೆ ಅಂಡಮಾನ್ ಬೆಚ್ಚಿಬಿದ್ದಿತ್ತು. ಸಾವರ್ಕರ್ ಕಿಚ್ಚು ಹಚ್ಚಿಬಿಟ್ಟಿದ್ದರು. ಅನಿವಾರ್ಯವಾಗಿ ಊಟದ ವ್ಯವಸ್ಥೆಯನ್ನು ನೆಟ್ಟಗೆ ಮಾಡಲೇಬೇಕಾಗಿ ಬಂತು.


ಸಾವರ್ಕರ್ ಬಲು ಚಾಲಾಕು. ಫೇಸ್ಬುಕ್ಕು, ವಾಟ್ಸಪ್, ಟ್ವಿಟರ್ಗಳಿಲ್ಲದ ಕಾಲಕ್ಕೂ ಅಂಡಮಾನಿನ ಸುದ್ದಿಯನ್ನು ವ್ಯವಸ್ಥಿತವಾಗಿ ಹೊರಜಗತ್ತಿಗೆ ಮುಟ್ಟಿಸುತ್ತಿದ್ದರು. ಅವರ ಪ್ರೇರಣೆಯಿಂದಲೇ ಆರಂಭಗೊಂಡ ಗದರ್ನಂತಹ ಪತ್ರಿಕೆಗಳು ಸಾವರ್ಕರ್ ಗಾಣಸುತ್ತುವ ಚಿತ್ರವನ್ನು ಹಾಕಿ ದೇಶದಾದ್ಯಂತ ಅನುಕಂಪದ ಅಲೆಯನ್ನೇ ಎಬ್ಬಿಸಿಬಿಟ್ಟಿದ್ದವು. ತಮ್ಮ ಸೆಲ್ನ ಗೋಡೆಯ ಮೇಲೆ ತಾವು ಬರೆದ ಕವನಗಳನ್ನು ಬಿಡುಗಡೆಯಾಗಲಿರುವ ಖೈದಿಗೆ ಬಾಯಿಪಾಠಮಾಡಿಸಿ ಆತ ಅದನ್ನು ಹೊರಗಿನ ಜನಕ್ಕೆ ಮುಟ್ಟಿಸುವಂತೆ ಸೂಕ್ತವಾದ ವ್ಯವಸ್ಥೆ ಮಾಡುತ್ತಿದ್ದರು. ಬ್ರಿಟೀಷ್ ಸಕರ್ಾರ ನೆಹರೂ, ಪಟೇಲ್, ಗಾಂಧಿಯರನ್ನು ಜೈಲುಗಳಲ್ಲಿ ಸಲೀಸಾಗಿ ಸಂಭಾಳಿಸಿತ್ತಲ್ಲಾ ಹಾಗೆ ಸಾವರ್ಕರ್ರನ್ನು ಸಂಭಾಳಿಸುವುದು ಸಾಧ್ಯವಾಗುತ್ತಿರಲಿಲ್ಲ. ಎಷ್ಟರಮಟ್ಟಿಗೆ ಸಕರ್ಾರಕ್ಕೆ ಕಿರಿಕಿರಿಯಾಯ್ತೆಂದರೆ ಸಾವರ್ಕರ್ ಅಂಡಮಾನಿನಲ್ಲಿ ಬಾಂಬ್ ತಯಾರಿಕೆ ಮಾಡುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ ಎಂಬ ಸುದ್ದಿ ಭಾರತೀಯ ಕ್ರಾಂತಿಕಾರಿಗಳ ಪಾಲಿಗೆ ಚೇತೋಹಾರಿ ಎನಿಸಿದರೆ ಬ್ರಿಟೀಷರಿಗೆ ನಡುಕ ಹುಟ್ಟಿಸಿಬಿಟ್ಟಿತ್ತು. ಸಮುದ್ರವನ್ನೇ ಈಜಿದ ಸಾವರ್ಕರ್ ಅಂಡಮಾನಿನ ಕಣ್ಗಾವಲಿನ ನಡುವೆಯೂ ಹೀಗೊಂದು ಸಾಹಸ ಮಾಡಬಹುದು ಎಂದು ಅವರಿಗೂ ಅನ್ನಿಸಿದ್ದರಲ್ಲಿ ಆಶ್ಚರ್ಯವೇನಲ್ಲ. ಹೀಗಾಗಿಯೇ ಸಕರ್ಾರದ ಪರವಾಗಿ ರೆಜಿನಾಲ್ಡ್ ಕ್ರಡಾಕ್ ಸೆಲ್ಯುಲಾರ್ ಜೈಲಿಗೆ ಭೇಟಿಕೊಟ್ಟರು. ಸಕರ್ಾರದ ಪ್ರತಿನಿಧಿಯೊಂದಿಗೆ ಮಾತನಾಡುವ ಅವಕಾಶವನ್ನು ಸಾವರ್ಕರ್ ಕಳೆದುಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿಯೇ ಸುದೀರ್ಘವಾದ ಮನವಿಯೊಂದನ್ನು ಅವರಿಗೆ ಸಮಪರ್ಿಸಿದರು. ಆ ಮನವಿಯೇ ಇಂದು ಕಾಂಗ್ರೆಸ್ಸಿಗರ ಚಚರ್ಾ ವಿಷಯ. ಸಾವರ್ಕರರ ಕಾಲಿನ ಧೂಳಿನ ಸಮಕ್ಕೂ ಅಲ್ಲದ ಅಯೋಗ್ಯರೊಂದಷ್ಟು ಜನ ಸಾವರ್ಕರ್ರನ್ನು ದೇಶದ್ರೋಹಿ, ಹೆದರುಪುಕ್ಕಲು ಎಂದು ಜರಿಯುವುದನ್ನು ಕಂಡಾಗ ಎಂಥವನಿಗೂ ಮೈ ಉರಿಯುತ್ತದೆ. ಅದರಲ್ಲೂ ತಮ್ಮಿಡೀ ರಾಜಕೀಯ ಬದುಕನ್ನು ಜಾತಿ-ಜಾತಿಗಳ ನಡುವೆ ಬೆಂಕಿ ಹಚ್ಚಿ ಕಟ್ಟಿಕೊಂಡವರೆಲ್ಲರೂ ಸಾವರ್ಕರ್ರ ರಾಷ್ಟ್ರದ ಕುರಿತ ಶ್ರದ್ಧೆಯನ್ನು ಪ್ರಶ್ನಿಸುತ್ತಾರಲ್ಲಾ ಅದೇ ವಿಪಯರ್ಾಸ!


1913ರ ನವೆಂಬರ್ 14ರಂದು ಸಾವರ್ಕರ್ ಸಮಪರ್ಿಸಿದ ಮನವಿ ಪತ್ರದಲ್ಲಿ ತಮ್ಮನ್ನು ರಾಜಕೀಯ ಖೈದಿಗಳೆಂದು ಗುರುತಿಸಬೇಕೆಂಬ ಬೇಡಿಕೆ ಇಟ್ಟಿದ್ದರು. ಬಂದೂಕಿನ ಕೆಲಸ ಈಗ ಮುಗಿದಿರುವುದರಿಂದ ತಾವಿನ್ನು ಮುಖ್ಯವಾಹಿನಿಯ ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಂಡು ಸಂವೈಧಾನಿಕ ರೀತಿಯಲ್ಲಿ ಸಕರ್ಾರದೊಂದಿಗೆ ಸಹಕರಿಸುವುದಾಗಿ ಹೇಳಿದ್ದರು. ಈ ಸಾಲನ್ನು ಕಾಂಗ್ರೆಸ್ಸು ತಪ್ಪು ಎನ್ನುವುದಾದರೆ ಆ ಹೊತ್ತಿನಲ್ಲಿ ಮುಖ್ಯವಾಹಿನಿಯ ರಾಜಕೀಯ ನಡೆಸುತ್ತಾ ಬ್ರಿಟೀಷರೊಂದಿಗೆ ಸಂವಿಧಾನಾತ್ಮಕ ಸಹಕಾರ ನೀಡುತ್ತಾ ಚಟುವಟಿಕೆ ನಡೆಸುತ್ತಾ ಇದ್ದದ್ದು ಸ್ವತಃ ಕಾಂಗ್ರೆಸ್ಸೇ. ಇಷ್ಟಕ್ಕೂ ಕಾಂಗ್ರೆಸ್ಸಿನ ಹುಟ್ಟು ಬ್ರಿಟೀಷರಿಗೆ ಬೇಡಿಕೆಯ ಪತ್ರಗಳನ್ನು ಸಮಪರ್ಿಸಲೆಂದೇ ಆಗಿತ್ತು ಎಂಬುದನ್ನು ಆ ಪಕ್ಷದ ಇಂದಿನ ನಾಯಕರು ಮರೆಯದಿದ್ದರೆ ಒಳಿತು. ಲಂಡನ್ನಲ್ಲಿ ಬ್ಯಾರಿಸ್ಟರ್ಗಿರಿ ಮುಗಿಸಿಬಂದಿದ್ದ ಸಾವರ್ಕರ್ರಿಗೆ ಸ್ವಾತಂತ್ರ್ಯ ಹೋರಾಟದ ದೂರದೃಷ್ಟಿ ಇತ್ತು. ಅಂಡಮಾನಿನಲ್ಲಿ ಕೊಳೆಯುವುದರಿಂದ ಸ್ವಾತಂತ್ರ್ಯ ಬರುವುದಿಲ್ಲ. ಮೊದಲು ಇಲ್ಲಿಂದ ಬಿಡುಗಡೆಯಾಗಿ ಹೋಗಬೇಕು. ಆನಂತರ ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಡಲು ಮುಂದಿನ ಪ್ರಯತ್ನಗಳಲ್ಲಿ ತೊಡಗಿಕೊಳ್ಳಬೇಕು ಎಂದೇ ಅವರು ಜೊತೆಗಾರರಿಗೆ ತಿಳಿಹೇಳುತ್ತಿದ್ದರು. ಈಗ ಅಂತಹ ಅವಕಾಶವನ್ನು ಸ್ವತಃ ಸಾವರ್ಕರ್ ಬಿಟ್ಟಾರೇನು? ತಮ್ಮೆಲ್ಲಾ ಬೌದ್ಧಿಕ ಚಾಕಚಕ್ಯತೆಯನ್ನು ಬಳಸಿಯೇ ಸಾವರ್ಕರ್ ಈ ಮನವಿ ಪತ್ರ ಬರೆದಿದ್ದರು. ಪತ್ರದ ಕೊನೆಯಲ್ಲಿ ಅವರು ಬರೆದ ಒಂದು ಸಾಲನ್ನು ಹಿಡಿದುಕೊಂಡು ಇಂದಿಗೂ ಅನೇಕರು ಬೊಬ್ಬೆಹೊಡೆಯುತ್ತಾರೆ. ‘ಶಕ್ತಿವಂತ ಮಾತ್ರ ಕ್ಷಮಿಸಬಲ್ಲ. ಹೀಗಾಗಿ ಉಢಾಳ ಮಕ್ಕಳು ಸಕರ್ಾರದ ಬಳಿಯಲ್ಲದೇ ಮತ್ಯಾರ ಬಳಿ ಹೋಗಬೇಕು’ ಎಂದಿತ್ತು ಅದು. ಯಾಸಿನ್ ಮಲಿಕ್ನ ಬಿಡುಗಡೆಗೆ ಯತ್ನಿಸುತ್ತಿರುವ ಮಾನವ ಹಕ್ಕು ರಕ್ಷಣೆಯ ಎದೆಬಡಿದುಕೊಳ್ಳುವ ಹೋರಾಟಗಾರರು ಸಾವರ್ಕರ್ರ ಈ ಸಾಲನ್ನು ಹಿಡಿದುಕೊಂಡೇ ಟೀಕಿಸುತ್ತಾರೆ. ಅವರನ್ನು ಹೆದರುಪುಕ್ಕಲ ಎನ್ನುತ್ತಾರೆ. ಎಲ್ಲವನ್ನೂ ಬಿಟ್ಟು ಕಾಂಗ್ರೆಸ್ಸಿಗರು ಈ ಕಾರಣಕ್ಕಾಗಿಯೇ ಸಾವರ್ಕರರನ್ನು ಹೇಡಿ ಎನ್ನುವಾಗ ಖಂಡಿತ ನಗೆಯುಕ್ಕುತ್ತದೆ, ಏಕೆಂದರೆ 1942ರಲ್ಲಿ ದೇಶಬಿಟ್ಟು ತೊಲಗಿ ಎಂದು ಬ್ರಿಟೀಷರನ್ನು ಗದರಿದ್ದು ಬಿಟ್ಟರೆ ಮತ್ಯಾವಾಗಲೂ ನೆಹರೂವಾಗಲಿ ಮತ್ತವರ ಅನುಯಾಯಿಗಳಾಗಲಿ ಕಟುವಾದ ಶಬ್ದಗಳಲ್ಲಿ ಬ್ರಿಟೀಷರ ಕುರಿತಂತೆ ಆಲೋಚಿಸಿದ್ದೇ ಇಲ್ಲ. ನಿಮಗೆ ಗೊತ್ತಿರಲಿ, ಭಗತ್ಸಿಂಗ್ ಮತ್ತವನ ಗೆಳೆಯರು ಪೂರ್ಣ ಸ್ವರಾಜ್ಯದ ಮಾತೆತ್ತುವವರೆಗೆ ಕಾಂಗ್ರೆಸ್ಸು ಅದರ ಬಗ್ಗೆ ಜೋರಾಗಿ ಮಾತಾಡಿರಲಿಲ್ಲ. ತಿಲಕರ ಪೂರ್ಣಸ್ವರಾಜ್ಯ ಕಾಂಗ್ರೆಸ್ಸಿನಲ್ಲಿ ಎಂದಿಗೋ ಮೂಲೆಗುಂಪಾಗಿ ಹೋಗಿತ್ತು. ಇದೇ ಕಾಂಗ್ರೆಸ್ಸಿಗರು ಸಕರ್ಾರದೊಂದಿಗೆ ಸಂಬಂಧ ಬೆಸೆದುಕೊಂಡು ಚುನಾವಣೆಗಳಲ್ಲಿ ನಿಂತು ಅಧಿಕಾರ ಭೋಗಿಸುತ್ತಾ ಇದ್ದುಬಿಟ್ಟರಲ್ಲಾ; ಸುಭಾಷ್ಚಂದ್ರ ಬೋಸರೇನಾದರೂ ಮುಂಚೂಣಿಗೆ ಬರದೇ ಹೋಗಿದ್ದರೆ ಇವರು ಈಗಲೂ ಬ್ರಿಟೀಷರ ಬೂಟು ನೆಕ್ಕುತ್ತಾ, ಮಂತ್ರಿಯೋ ಶಾಸಕನೋ ಆಗಿ ತಮಗೆ ಸಿಕ್ಕ ದುಡ್ಡನ್ನು ತಿಜೋರಿಗಳಲ್ಲಿಟ್ಟು ಹಾಯಾಗಿದ್ದುಬಿಡುತ್ತಿದ್ದರು.


ಅಂದಹಾಗೆ, ಈ ನೀಚ ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಮಾತನಾಡುತ್ತಾ ಒಂದು ವಿಷಯ ಮರೆತೇ ಬಿಟ್ಟೆ. ಸಾವರ್ಕರ್ ಕೊಟ್ಟ ಈ ಮನವಿ ಪತ್ರವನ್ನು ಓದಿ ಕೊನೆಯ ಸಾಲನ್ನು ನೋಡಿ ಆಶ್ಚರ್ಯಚಕಿತನಾದ ಕ್ರೆಡಾಕ್ ಸಾವರ್ಕರರನ್ನು ಕರೆಸಿ ಮಾತನಾಡಿದ. ನಿಮ್ಮ ಸ್ನೇಹಿತರು ಹೊರಗೆಲ್ಲಾ ಅಶಾಂತಿ ಸೃಷ್ಟಿಸಿದ್ದಾರೆ. ಅವರು ಸುಮ್ಮನಿರುವುದಾದರೆ ನೀವು ಹೇಳಿದ ಸವಲತ್ತುಗಳನ್ನು ಕೊಡಬಹುದಿತ್ತು ಎಂದ. ಅದಕ್ಕೆ ಸಾವರ್ಕರ್ ಕೊಟ್ಟ ಉತ್ತರವೇನಿತ್ತು ಗೊತ್ತೇ? ‘ರಾಷ್ಟ್ರಕ್ಕೆ ಒಳಿತಾಗುವುದೆಂಬ ವಿಶ್ವಾಸ ಮೂಡಿದರೆ ಅವರೆಲ್ಲರೂ ಶಾಂತವಾಗಿರುತ್ತಾರೆ ಬಿಡಿ’. ಈ ಮಾತಿನಿಂದ ದಂಗಾದ ಕ್ರೆಡಾಕ್ ಕೋಪದಿಂದ ಉರಿದು ಎದ್ದು ಹೋದುದಲ್ಲದೇ ತನ್ನ ಮರಳುವ ದಾರಿಯಲ್ಲಿ ಹಡಗಿನಲ್ಲೇ ಕುಳಿತು ಯಾವ ಕಾರಣಕ್ಕೂ ಈ ಮನುಷ್ಯನನ್ನು ಅಂಡಮಾನಿನಿಂದ ಬಿಡಲೇಬಾರದು ಏಕೆಂದರೆ ಇವನಿಗಿರುವ ಮಿತ್ರರ ವ್ಯಾಪ್ತಿಯನ್ನು ಗಮನಿಸಿದರೆ ಎಲ್ಲಿಂದ ಬೇಕಾದರೂ ಇವನನ್ನು ಅವರು ಹಾರಿಸಿಕೊಂಡು ಹೋಗಬಲ್ಲರು ಎಂಬರ್ಥದ ವರದಿಯನ್ನು ಬರೆದ. ಅಷ್ಟೇ ಅಲ್ಲ, ಸಾವರ್ಕರ್ರ ಕ್ರಾಂತಿಕಾರಿ ಮನೋಭಾವ ಒಂದಿನಿತೂ ಆರಿಲ್ಲ ಎಂದು ಸೇರಿಸುವುದನ್ನೂ ಮರೆಯಲಿಲ್ಲ. ಇತಿಹಾಸದ ನಾಲ್ಕಕ್ಷರ ಗೊತ್ತಿರದ ಕಾಂಗ್ರೆಸ್ಸಿನ ಅನೇಕ ತೃತೀಯ ದಜರ್ೆಯ ನಾಯಕರು ಯಾರೋ ಹೇಳಿಕೊಟ್ಟ ಗಿಣಿಪಾಠವನ್ನು ಒಪ್ಪಿಸುವುದರಲ್ಲೇ ಕಾಲ ಸವೆಸಿಬಿಡುತ್ತಿದ್ದಾರೆ. ಸಾವರ್ಕರ್ ಕೊಟ್ಟ ಮನವಿ ಪತ್ರದ ಉಲ್ಲೇಖ ಮಾಡುವ ಇವರೆಲ್ಲಾ ಅದನ್ನು ಪರಿಶೀಲಿಸಿದ ಕ್ರೆಡಾಕ್ನ ಮಾತುಗಳೇನಿತ್ತು ಎಂದು ಹೇಳುವುದರಲ್ಲಿ ಸೋತುಹೋಗುತ್ತಾರೆ. ಒಬ್ಬ ದೇಶಭಕ್ತನನ್ನು ಸಮರ್ಥವಾಗಿ ಅಥರ್ೈಸಿಕೊಳ್ಳಲಾಗದೇ ದೇಶದ್ರೋಹಿ ಎಂದುಬಿಡುವ ಈ ಜನರ ದೈನೇಸಿ ಮನಸ್ಥಿತಿಯೇ ಇಂಥದ್ದು! ಮುಂದೆ ಸಾವರ್ಕರ್ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರವೂ ಇತರೆ ಕಾಂಗ್ರೆಸ್ಸಿನ ನಾಯಕರುಗಳಂತೆ ಓಡಾಡಿಕೊಂಡಿರಲಿಲ್ಲ. ಬಹುಕಾಲ ಯರವಾಡ ಜೈಲಿನಲ್ಲಿದ್ದರು, ಆನಂತರ ಗೃಹಬಂಧನದಲ್ಲಿದ್ದರು. ಅಷ್ಟಾದರೂ ಬ್ರಿಟೀಷರ ವಿರುದ್ಧ ಕಾದಾಡುತ್ತಲೇ ಅನೇಕ ಕ್ರಾಂತಿಕಾರಿಗಳಿಗೆ ಪ್ರೇರಣೆ ಕೊಡುತ್ತಾ ಸ್ವಾತಂತ್ರ್ಯದ ಗಂಗೆ ಅಂತರಂಗದಲ್ಲಿ ಪ್ರವಹಿಸುವಂತೆ ಮಾಡಿದರು. ಅವರ ವಿಸ್ತರಿಸುತ್ತಿರುವ ಪ್ರಭಾವವನ್ನು ತಡೆಯಲಾಗದೆಯೇ ಕಾಂಗ್ರೆಸ್ಸಿನ ನಾಯಕರು ಗಾಂಧಿ ಹತ್ಯೆಯಲ್ಲಿ ಅವರನ್ನು ಬೇಕಂತಲೇ ಸಿಲುಕಿಸಿದ್ದು. ಕೊನೆಗೆ ನ್ಯಾಯಾಲಯದಿಂದಲೂ ಪೂರ್ಣ ಗೌರವಯುತವಾಗಿಯೇ ನಿರಪರಾಧಿ ಎಂದು ಹೇಳಿಸಿಕೊಂಡು ಬಂದವರು ಸಾವರ್ಕರ್. ಅವರನ್ನು ಗಾಂಧಿ ಹಂತಕ ಎಂದು ಹೇಳುವುದು ನ್ಯಾಯಾಲಯವನ್ನು ಅವಮಾನಿಸುವ ಹೀನಕಾಯಕ ಎನ್ನುವುದನ್ನು ಕಾಂಗ್ರೆಸ್ಸಿಗರು ಮರೆಯದಿದ್ದರೆ ಒಳಿತು. ಸಾವರ್ಕರ್ರನ್ನು ನಿಂದಿಸುವ ಕಾಂಗ್ರೆಸ್ಸಿನ ನಾಯಕರಿಗೆ ಗೊತ್ತಿರಬೇಕಾದ ಸಂಗತಿಯೆಂದರೆ ಅವರ ಅಧಿನಾಯಕಿ ಇಂದಿರಾ 1970ರಲ್ಲಿ ಸಾವರ್ಕರ್ರ ಸ್ಟಾಂಪ್ ಬಿಡುಗಡೆ ಮಾಡಿಸಿದ್ದರು. ಸಾವರ್ಕರ್ ಟ್ರಸ್ಟ್ಗೆ ತನ್ನದ್ದೇ ಅಕೌಂಟಿನಿಂದ 11,000 ರೂಪಾಯಿ ಜಮೆ ಮಾಡಿಸಿದ್ದರು. ಸಾವರ್ಕರ್ರ ಕುರಿತಂತೆ ಸಿನಿಮಾ ಮಾಡಲು ಫಿಲ್ಮ್ ಡಿವಿಜನ್ಗೆ ಅನುಮತಿ ಕೊಟ್ಟವರು ಆಕೆಯೇ. ಬೊಬ್ಬಿಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಇವೆಲ್ಲ ಗೊತ್ತಾದರೆ ಅವರವರ ಮೈ ಅವರವರೇ ಪರಚಿಕೊಂಡು ಹುಣ್ಣುಮಾಡಿಕೊಳ್ಳುತ್ತಾರೇನೋ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. Adarsh

    November 2, 2019 at 10:55 am

    Super

Leave a Reply

Your email address will not be published. Required fields are marked *

Most Popular

To Top