Desi

ಸಂಘ ಸಂಸ್ಥೆಗಳ ನೊಂದಣಿ ಇನ್ನು ಬಲು ಸುಲಭ!

-ಕೌಸ್ತುಭ ಭಾರತೀಪುರ

ನೀವು Indian Trust Act ಅಡಿಯಲ್ಲಿ ಒಂದು ಸಂಸ್ಥೆಯನ್ನು ನೊಂದಣಿ ಮಾಡಿಕೊಳ್ಳಬೇಕೆಂದರೆ ಅದನ್ನು ಉಪ-ನೊಂದಣಾಧಿಕಾರಿಗಳ ಕಛೇರಿಯಲ್ಲಿಯೇ ಮಾಡಿಸಬೇಕು, ಅದನ್ನು ಮತ್ತೊಮ್ಮೆ ಚರ್ಚಿಸೋಣ.

 

Societies Registration Act 1960 ಕೆಳಗೆ ನೊಂದಣಿ ಮಾಡಿಸುವುದು ಈಗ ನಮ್ಮ ಕೈಯಲ್ಲಿದೆ. ಚಾರಿಟೆಬಲ್ ಟ್ರಸ್ಟ್ ಗಳು,ವಿವಿಧ ಅಸೋಸಿಯೇಷನ್ಗಳು ಇದರಡಿಯಲ್ಲೇ ಬರುತ್ತದೆ.

ಏನೇನು ದಾಖಲೆಗಳು ಬೇಕು?

*ಸದಸ್ಯರ ಸಭೆಯ ನಡವಳಿಗಳು (Meeting Proceedings)

*ಜ್ಞಾಪನಾ ಪತ್ರ(ಉದ್ದೇಶಗಳು) Memorandum of Association)

*ನಿಯಮ ನಿಬಂಧನೆಗಳು( Rules & Regulations)

*ಜಿಲ್ಲಾ ನೋಂದಣಾಧಿಕಾಗಳಿಗೊಂದು ಮನವಿ ಪತ್ರ.

*ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿ (ಕನಿಷ್ಟ 7 ಸದಸ್ಯರು)
-ಸದಸ್ಯರ ಹೆಸರು & ವಿಳಾಸ,
-ವಯಸ್ಸು
-ಉದ್ಯೋಗ
-ಸಂಘದಲ್ಲಿ ಹುದ್ದೆ
-ಫೋಟೋ & ಸಹಿ

*20/- ರೂ ಗಳ ಛಾಪ ಕಾಗದದಲ್ಲಿ ಅಫಿಡವಿಟ್ಟು (ನೋಟರಿ ಮಾಡಿಸಬೇಕು)

*ಕಾರ್ಯಕಾರಿ ಸಮಿತಿ ಸದಸ್ಯರ ವಿಳಾಸದ ನಖಲು ಪ್ರತಿಗಳು.

*ಎಲ್ಲಾ ಪುಟಗಳಲ್ಲಿಯೂ ,ಸಂಘದಲ್ಲಿ ಯಾರಿಗೆ ಅಧಿಕಾರ ನೀಡಲಾಗಿದೆಯೋ ಅವರ ಸಹಿ ಇರಬೇಕು.

ಇವಿಷ್ಟನ್ನೂ ಇಟ್ಟುಕೊಂಡು www.Sahakara.kar.gov.in ವೆಬ್ಸೈಟ್ ಗೆ upload ಮಾಡಬೇಕು.

-sign up ಮಾಡುವ ವಿಧಾನವೂ ಸುಲಭವಾಗಿರುತ್ತದೆ! ಒಮ್ಮೆ upload ಆದ ನಂತರ , ನೀಡಿದ ಮಾಹಿತಿ ಸಮರ್ಪಕವಾಗಿದ್ರೆ ಚಲನ್ ಜನರೇಟ್ ಆಗುತ್ತದೆ.ಹಣ ಕಟ್ಟಿ ಅದರ ವಿವರ ತುಮಬಿಸಿದರಾಯ್ತು

ಸಂಬಂಧಿಸಿದ ಅಧಕಾರಿಯೊಬ್ಬರು ಅದನ್ನು ನೀಡಿ verify ಮಾಡಿದರೆ ನೊಂದಣಿ ಪ್ರಮಾಣ ಪತ್ರ ಬಂತು ಎಂದೇ ಅರ್ಥ!

ಮೇಲೆ ತಿಳಿಸಿದ ಎಲ್ಲಾ ದಾಖಲೆಗಳು ಹೇಗಿರಬೇಕೆಂಬ ಪ್ರತಿ ಗಳನ್ನೂ ವೆಬ್‌ಸೈಟ್ ಒದಗಿಸುತ್ತದೆ. ಇಲ್ಲದಿದ್ದರೆ ಹಲವಾರು ಸರ್ಚ್ ಇಂಜಿನ್ಗಳು ಇದ್ದೇ ಇದೆಯಲ್ಲ!

ಪರಾವಲಂಬನೆಯೇ ಅಲ್ಲವೇ ಲಂಚಾವತಾರದ ಮೊದಲ ಹೆಜ್ಜೆ! ಯೋಚಿಸಿ.

Click to comment

Leave a Reply

Your email address will not be published. Required fields are marked *

Most Popular

To Top