Desi

ಶಿವಾಜಿ ಮಹಾರಾಜರನ್ನು ಯೋಧನನ್ನಾಗಿ ನಿರ್ಮಿಸಿದ ರಾಜಮಾತೆ ಜೀಜಾಬಾಯಿ!

ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಯಾರು ತಾನೇ ಕೇಳಿರುವುದಿಲ್ಲ ಹೇಳಿ? ಅಂತಹ ವೀರ ಪುರುಷನ ಜೀವನಕ್ಕೆ ಆಧಾರವಾಗಿದ್ದು, ಸಂಸ್ಕಾರವನ್ನು ಕೊಟ್ಟು ವೀರವೃತ್ತಿಯನ್ನು ಜಾಗೃತಗೊಳಿಸಿದವಳು ತಾಯಿ ಜೀಜಾಬಾಯಿ.

ಮಹಾರಾಷ್ಟ್ರದ ಸಿಂಧಖೇಡ್ ಎಂಬ ಊರಿನಲ್ಲಿ ಮರಾಠಿ ಸರದಾರನಾದ ಲಖೂಜೀ ಜಾಧವರಾವ್ನ ಮಗಳಾಗಿ ಜೀಜಾಬಾಯಿಯ ಜನನವಾಯಿತು. ಆಕೆ ಹುಟ್ಟಿದ್ದು ಜನವರಿ 12, 1598. ಪ್ರಾಪ್ತವಯಸ್ಕಳಾದಾಗ ಜೀಜಾಬಾಯಿಗೆ ಶಾಹಜಿಯೊಡನೆ ಲಗ್ನವಾಯಿತು. ಜೀಜಾಬಾಯಿಯ ತಂದೆ, ಮಾವ, ಪತಿ ಎಲ್ಲರೂ ನಿಜಾಮ ಶಾಹಿಗಳ ಆಡಳಿತದಲ್ಲಿ ಅವರ ಸೇವೆಯನ್ನು ಮಾಡುತ್ತಿದ್ದರು. ಜೀಜಾಬಾಯಿಯದು ತೀವ್ರ ಸ್ವಾತಂತ್ರ್ಯ ಪ್ರೇಮ. ಆದರ್ಶ ಗೃಹಿಣಿಯಾಗಿ ಶಾಂತರೂಪ ಧಾರಣೆ ಮಾಡುವ ಅವಶ್ಯಕತೆಯಿದ್ದುದರಿಂದ ಸುಮ್ಮನಾದಳು. ಜೀಜಾ ಸುಪ್ತ ಜ್ವಾಲಾಮುಖಿಯಾಗಿದ್ದಳು!

ಜೀಜಾಬಾಯಿಯ ಜೀವನದಲ್ಲಿ ಕಷ್ಟಗಳ ಸುರಿಮಳೆ ಪ್ರಾರಂಭವಾಯಿತು. ತಮ್ಮ ಮೇಲೆ ಆಕ್ರಮಣವಾದಾಗ ಶಾಹಜಿ ಜೀಜಾಮಾತೆಯನ್ನು ಶಿವನೇರಿಗೆ ತಲುಪಿಸಿದ. ಆಗ ಜೀಜಾಬಾಯಿ ಗಭರ್ಿಣಿ. ಜೀಜಾಬಾಯಿ ಆತ್ಮಗೌರವದ ಮೂತರ್ಿ. ಶಿವನೇರಿಯಲ್ಲಿ ಪ್ರಶಾಂತ ವಾತಾವರಣದಲ್ಲಿ ಜೀವಿಸತೊಡಗಿದಳು. ಸದಾ ಜಗದಂಬೆಯ ಮುಂದೆ ಕುಳಿತು, ತನ್ನ ಧ್ವಜ, ತನ್ನ ಸೈನ್ಯಗಳಿಂದ ಬೆಳಗುವ ಸ್ವತಂತ್ರ ಸಾಮ್ರಾಟನನ್ನು ನಾನು ನೋಡಬೇಕು ಎಂದು ಬೇಡುತ್ತಿದ್ದಳು.
ಗಭರ್ಿಣಿಯಾದ ಜೀಜಾಬಾಯಿಯ ಬಯಕೆಗಳು ವಿಚಿತ್ರವಾಗಿದ್ದವು. ಸಿಹಿ ತಿಂಡಿ ರುಚಿಸುತ್ತಿರಲಿಲ್ಲ; ಮೃಷ್ಟಾನ್ನ ಭೋಜನ ಬೇಕಿರಲಿಲ್ಲ. ದುರ್ಗಗಳನ್ನೇರುವುದು, ಖಡ್ಗಗಳನ್ನು ತಿರುಗಿಸುವುದು, ಕಠಿಣ ರಾಜಕೀಯ ಚಚರ್ಿಸುವುದು, ಮೈಮೇಲೆ ಕವಚ ಹಾಕಿ ಕುದುರೆ ಏರುವುದು ಹೀಗೆ ಸಾಗಿತ್ತು ಆಕೆಯ ಬಯಕೆ! ಇವುಗಳೆಲ್ಲ ಸಿಂಹಸದೃಶ ವೀರಪುರುಷನ ಜನನದ ಮುನ್ಸೂಚನೆಯೇ ಸರಿ!!

ಮರಾಠರ ಲಜ್ಜೆಗೇಡಿತನವನ್ನು ಹೊಡೆದೋಡಿಸಿ ಆತ್ಮಗೌರವದ ಅಧ್ಯಾಯವನ್ನು ಪ್ರಾರಂಭಿಸುವ ವೀರ ತನ್ನ ಮಗನಾಗಬೇಕೆಂದು ಆ ಧೀರಮಾತೆ ಹಂಬಲಿಸುತ್ತಿದ್ದಳು. ಶಿವಾಜಿಯ ಜನನವಾಯಿತು. ಶಾಹಜಿ ಈಗ ಜೀಜಾಮಾತೆ ಮತ್ತು ಶಿವಾಜಿಯನ್ನು ಪುಣೆಗೆ ಕಳಿಸಿದ. ಶಿವಾಜಿಯ ವಿದ್ಯಾಭ್ಯಾಸ ಜೀಜಾಬಾಯಿಯ ಕೈಯ್ಯಲ್ಲಿತ್ತು. ರಾಮಾಯಣ, ಮಹಾಭಾರತದ ಕಥೆಗಳು, ರಾಮ, ಹನುಮಂತ, ಕೃಷ್ಣ, ಭೀಮ, ಅಜರ್ುನರ ಸಾಹಸದ ಕಥೆಗಳನ್ನು ಹೇಳುತ್ತಿದ್ದಳು. ಜೀಜಾಮಾತೆಯ ಅತ್ಯಂತ ಕಟ್ಟು ನಿಟ್ಟಿನ ಶಿಸ್ತು, ನ್ಯಾಯ, ನಿಷ್ಠೆ ಶಿವಾಜಿಯ ಉಸಿರಾದವು. ಪುಣೆಯ ದಬರ್ಾರಿನಲ್ಲಿ ನ್ಯಾಯ ನಿಷ್ಕಷರ್ೆಗಳನ್ನು ಸ್ವತಃ ಜೀಜಾಮಾತೆ ನಡೆಸುತ್ತಿದ್ದಳು. ಜೀಜಾಮಾತೆ ಈಗ ಎಲ್ಲರಿಗೂ ರಾಜಮಾತೆಯಾದಳು.

ಸ್ವದೇಶ, ಸ್ವಧರ್ಮ, ಸ್ವರಾಜ್ಯ ಹಾಗೂ ಸತ್ಕಾರ್ಯ ಇವುಗಳ ಭದ್ರ ಬುನಾದಿಯ ಮೇಲೆ ಶಿವಾಜಿಯ ಜೀವನದ ಭವ್ಯಮಂದಿರ ಕಟ್ಟಿದಳು. ಆಕೆಗಿದ್ದ ದೂರದೃಷ್ಟಿ ಅಪಾರ. ಸ್ವಧರ್ಮವನ್ನು ತೊರೆದು ಮುಸ್ಲಿಂ ಮತಕ್ಕೆ ಹೋಗಿದ್ದ ಇಬ್ಬರು ವೀರಸರದಾರರನ್ನು ಹಿಂದುಧರ್ಮಕ್ಕೆ ಪುನಃ ಸ್ವೀಕರಿಸುವುದರಲ್ಲಿ ಆಕೆ ಬಹುದೊಡ್ಡ ಪಾತ್ರವಹಿಸಿದಳು. ಕಸಬ ಗಣಪತಿ ದೇವಸ್ಥಾನವನ್ನು ಪುನರ್ಪ್ರತಿಷ್ಠಾಪಿಸಿದಳು.

ಜೀಜಾಬಾಯಿ ಮತ್ತೆ ಮತ್ತೆ ಕಷ್ಟಗಳನ್ನು ಎದುರಿಸಬೇಕಾಗಿ ಬಂತು. ಆಕೆ ಧೃತಿಗೆಡಲಿಲ್ಲ. ತನ್ನ ಮಗ ಮೊಗಲ ಬಾದಷಾಹ ಔರಂಗಜೇಬನನ್ನು ಕಾಣಲು ಆಗ್ರಾಕ್ಕೆ ಹೊರಟು ನಿಂತಾಗ ಹರಸಿ ಕಳಿಸಿದ ವೀರಮಾತೆ ಜೀಜಾ! ಆ ಸಮಯದಲ್ಲಿ ರಾಜ್ಯವನ್ನು ನಡೆಸುವ ಹೊಣೆ ಹೊತ್ತಳು. ಇದೇ ಸಮಯದಲ್ಲಿ ಪತಿ ಶಾಹಜಿಯೂ ತೀರಿಕೊಂಡ. ಜೀಜಾಮಾತೆ ಸ್ವರಾಜ್ಯದಲ್ಲಿ ಮಗನ ಪಟ್ಟಾಭಿಷೇಕಕ್ಕಾಗಿ ಕಾಯುತ್ತಿದ್ದಳು. ಆಕೆಯ ಕನಸು ನನಸಾಗುವವರೆಗೆ ಕಾದ ಈ ಧೀರಮಾತೆ ರಾಜ್ಯಾಭಿಷೇಕದ 12ನೇ ದಿನವೇ ಇಹಲೋಕದ ಯಾತ್ರೆಯನ್ನು ತ್ಯಜಿಸಿದಳು.

ಹಿಂದೂಗಳ ಸಾಮ್ರಾಟನಾಗಿ, ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಶಿವಾಜಿ ಮಹಾರಾಜರ ವ್ಯಕ್ತಿತ್ವ ನಿಮರ್ಾಣದಲ್ಲಿ ತಾಯಿ ಜೀಜಾಬಾಯಿಯವರದು ಮುಖ್ಯ ಪಾತ್ರ.

1 Comment

1 Comment

  1. Adarsh

    November 25, 2018 at 8:57 am

    inspiring

Leave a Reply

Your email address will not be published. Required fields are marked *

Most Popular

To Top