State

ತುಂಗಾನದಿ ಶಿವಮೊಗ್ಗದ ಚರಂಡಿಯಾದ ಕಥೆ!!

ನಾಗರಿಕತೆ ಹುಟ್ಟಿಕೊಳ್ಳುವುದೇ ನೀರಿನ ಸೆಲೆಯಿದ್ದಲ್ಲಿ. ಆ ಕಾರಣಕ್ಕಾಗಿಯೇ ಯಾವುದೇ ನದಿಯನ್ನು ಜೀವನದಿ ಎಂದು ಕರೆಯೋದು. ನೀರಿಲ್ಲದೇ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವೇ ಸರಿ. 2019 ಕನರ್ಾಟಕದ ಪಾಲಿಗೆ ಅತ್ಯಂತ ಕೆಟ್ಟ ವರ್ಷ ಎಂದೇ ಹೇಳಬಹುದೇನೋ! ಅರ್ಧಕ್ಕಿಂತಲೂ ಹೆಚ್ಚು ಜಿಲ್ಲೆಗಳು ಬರಪರಿಸ್ಥಿತಿಯನ್ನು ಎದುರಿಸುತ್ತಿವೆ. ಅದಾಗಲೇ ರಾಜ್ಯ ಸಕರ್ಾರ 3000 ಕ್ಕೂ ಹೆಚ್ಚು ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರದೇಶಗಳೆಂದು ಗುರುತಿಸಿದೆ. ಅಂತರ್ಜಲದ ಮಟ್ಟ ಹಿಂದೆಂದಿಗಿಂತಲೂ ಕುಗ್ಗಿದೆ. ದಕ್ಷಿಣ ಕನ್ನಡ, ಉಡುಪಿ ಈ ಭಾಗಗಳ ಹಲವು ಶಾಲೆಗಳಲ್ಲಿ ನೀರಿಲ್ಲದೇ ಬಿಸಿಯೂಟ ತಯಾರಿಸುವುದನ್ನು ನಿಲ್ಲಿಸಿದ್ದಾರೆ! ಇನ್ನು ಉತ್ತರ ಕನರ್ಾಟಕದ ಪರಿಸ್ಥಿತಿಯನ್ನು ನೆನೆಯುವುದಕ್ಕೂ ಸಾಧ್ಯವಿಲ್ಲ. ಸ್ನಾನ ಮಾಡಲು ಕೇವಲ ಒಂದು ಲೋಟ ನೀರನ್ನು ಬಳಸಿಕೊಳ್ಳುವ ಸ್ಥಿತಿ ನಿಮರ್ಾಣವಾಗಿದೆ. ಎಲ್ಲೆಲ್ಲೂ ನೀರಿಲ್ಲದೇ ಹಾಹಾಕಾರ ಕೇಳಿಬರುತ್ತಿದೆ. ಮಲೆನಾಡು ಎಂದೇ ಕರೆಯಲ್ಪಡುವ ನಾಡಿನಲ್ಲಿಯೂ ಮಳೆಯಿಲ್ಲದೇ ಜನ ಪರದಾಡುತ್ತಿರುವುದು ಶೋಚನೀಯವೇ ಸರಿ. ಇವೆಲ್ಲವುಗಳ ಜೊತೆ ನಮ್ಮದೇ ತಪ್ಪಿನಿಂದಾಗಿ ಇಂದು ನದಿಯ ನೀರು ಬತ್ತಿಹೋಗಿದೆ. ಇರುವ ಅಲ್ಪ-ಸ್ವಲ್ಪ ನೀರೂ ಕುಡಿಯಲು ಯೋಗ್ಯವಲ್ಲದಂತೆ ಮಾಡಿಕೊಂಡಿದ್ದೇವೆ.


ನಾನೀಗ ಮಾತನಾಡುತ್ತಿರುವುದು ವರಾಹ ಪರ್ವತದ ಗಂಗಮೂಲ ಎಂಬಲ್ಲಿ ಉದ್ಭವಿಸಿ ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಹರಿಯುವ ತುಂಗೆಯ ಕುರಿತು. ತುಂಗೆ ಯಾವಾಗಲೂ ಮೈದುಂಬಿ ಹರಿಯುತ್ತಿದ್ದ ನದಿ. ಗಂಗಾ ಸ್ನಾನ ತುಂಗಾ ಪಾನ ಎಂಬುದು ದೇಶಾದ್ಯಂತ ಜನಜನಿತವಾದ ಮಾತು. ತುಂಗೆಯ ನೀರು ಕುಡಿಯಲು ಬಹಳ ಸಿಹಿ. ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಬಹಳ ವಿರಳ ಎಂದೇ ಹೇಳಬಹುದು. ಆದರೆ ಈ ಬಾರಿಯ ಪರಿಸ್ಥಿತಿ ವಿಭಿನ್ನವಾಗಿದೆ. ಮಳೆಯೇ ಇಲ್ಲದ ಕಾರಣ ತುಂಗೆ ಬತ್ತಿಹೋಗಿದ್ದಾಳೆ. ಇದರ ಜೊತೆಗೆ ತುಂಗೆಯ ನೀರು ಕುಡಿಯಲು ಯೋಗ್ಯವಲ್ಲದಂತಾಗಿದೆ. ನಗರದ ಕೊಳಕೆಲ್ಲಾ ನದಿಗೆ ನೇರವಾಗಿ ಸೇರಿ ನದಿ ಚರಂಡಿಯಂತಾಗಿರುವುದು ಗಾಬರಿ ಹುಟ್ಟಿಸುವ ಸಂಗತಿಯೇ ಸರಿ. ಈ ಹಿಂದೆ ಮಳೆ ಬಂದು ಶೇಖರಣೆಗೊಂಡಿದ್ದ ನೀರನ್ನು ಸ್ವಚ್ಛವಾಗಿ ನೋಡಿಕೊಂಡಿದ್ದರೆ ಈ ಬರಪರಿಸ್ಥಿತಿಯಲ್ಲಿ ಕುಡಿಯುವುದಕ್ಕಾದರೂ ನೀರಿರುತ್ತಿತ್ತೇನೋ!


ನಗರದ ಮಧ್ಯದಲ್ಲಿ ಹಾದು ಹೋಗುವ ನದಿ ಚರಂಡಿಗಿಂತಲೂ ಮಲಿನಗೊಂಡಿದೆ ಎಂದರೆ ತಪ್ಪಾಗಲಾರದು. ಒಂದೆಡೆ ತುಂಗೆಯ ದಡದಲ್ಲಿರುವ ಜನ ಅದನ್ನು ಕಸದ ತೊಟ್ಟಿಯಾಗಿಸಿಕೊಂಡಿದ್ದರೆ ಇನ್ನೊಂದೆಡೆ ಹಲವು ವಾಣಿಜ್ಯ ಮಳಿಗೆಗಳ ವ್ಯಾಪಾರಿಗಳು, ಕಸಾಯಿಖಾನೆಗಳ, ತಳ್ಳುವ ಗಾಡಿಗಳ ವ್ಯಾಪಾರಿಗಳು ತಮ್ಮ ಅಳಿದುಳಿದ ಕಸವನ್ನು ನದಿಗೆಸೆದು ಹೋಗುತ್ತಾರೆ! ಇಷ್ಟೇ ಅಲ್ಲದೇ, ನಾಲೆಗೆ ಪ್ರತಿ ಮನೆಯ ಶೌಚಾಲಯದ ಮಲ, ಮೂತ್ರ, ಅಡುಗೆಮನೆ ಮತ್ತು ಬಚ್ಚಲುಮನೆಯ ಕೊಳಕು ನೀರನ್ನೂ ನೇರವಾಗಿ ಹರಿಸಲಾಗುತ್ತಿದೆ. ನೀರಿನಲ್ಲಿ ಪ್ಲಾಸ್ಟಿಕ್ ಕವರ್, ಬಾಟಲ್ಗಳು, ಹಾಸಿಗೆ, ಕಸ ತುಂಬಿದ ಪಾಲಿಥಿನ್ ಕವರ್ಗಳು ರಾಶಿ ರಾಶಿ ಕಂಡುಬರುತ್ತವೆ. ಅವೆಲ್ಲಾ ಸೇತುವೆ ಬಳಿ ನಿಂತಿರುವ ದೃಶ್ಯವನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಸುಮಾರು ಎಂಟು ದೊಡ್ಡ ದೊಡ್ಡ ಚರಂಡಿಯ ಕೊಳಚೆ ನೀರು ನದಿಗೆ ಸೇರುವ ದೃಶ್ಯವನ್ನು ನಾವು ಕಾಣಬಹುದು!


ಇದರ ಜೊತೆಗೆ ಮಹಾನಗರ ಪಾಲಿಕೆ ಕಳೆದ 12 ವರ್ಷಗಳಿಂದಲೂ ತಾನೇನು ಕಡಿಮೆ ಎನ್ನುವ ರೀತಿಯಲ್ಲಿ ನಗರದ ಅಷ್ಟೂ ಕೊಳಚೆಯನ್ನೂ ನೀರಿಗೆ ನೇರವಾಗಿ ಹರಿಸುತ್ತಿದೆ. ಈ ಹಿಂದೆ 2017ರಲ್ಲಿಯೇ ಮಹಾನಗರ ಪಾಲಿಕೆಗೆ ಸುಪ್ರೀಂಕೋಟರ್್ ಆದೇಶಾನುಸಾರ ಕೊಳಚೆ ನೀರು ಸಂಸ್ಕರಣ ಘಟಕವನ್ನು ಚಾಲನೆಯಲ್ಲಿಡಬೇಕೆಂದು ಶೋಕಾಸ್ ನೋಟೀಸ್ ಜಾರಿಗೊಳಿಸಿತ್ತು. ಇಷ್ಟಾದರೂ ಈಗ ಪರಿಸ್ಥಿತಿ ಭಿನ್ನವಾಗಿಲ್ಲ. ಒಳಚರಂಡಿ ಸಂಸ್ಕರಣಾ ಘಟಕವೊಂದನ್ನು ಈ ಹಿಂದೆ ನಿಮರ್ಿಸಲಾಗಿತ್ತು. ಹೆಸರಿಗಷ್ಟೇ ಸಂಸ್ಕರಣಾ ಘಟಕವಾಗಿ ಉಳಿದಿರುವ ಇದು ಹಲವು ವರ್ಷಗಳಿಂದ ಕೆಲಸವೇ ಮಾಡುತ್ತಿಲ್ಲ! ಇತ್ತೀಚೆಗಷ್ಟೇ ನದಿಯ ದಂಡೆಯ ಮೇಲೆ ನಡೆದಾಡುವ ದಾರಿಯನ್ನು ಕೋಟ್ಯಂತರ ರೂಪಾಯಿ ಖಚರ್ು ಮಾಡಿ ನಿಮರ್ಿಸಲಾಗಿದೆ. ಆದರೆ, ಅಲ್ಲಿ ನಡೆದಾಡಲು ಸಾಧ್ಯವಿಲ್ಲವೇಕೆಂದರೆ ನದಿಯಿಂದ ಕೊಳಚೆ ನೀರಿನ ಕೆಟ್ಟು, ಕೊಳೆತ ವಾಸನೆ ಹೊರಬರುತ್ತಿರುತ್ತದೆ. ರಿವರ್ಫ್ರಂಟ್ ಮಾಡಬೇಕೆಂಬ ಕಲ್ಪನೆ ಹಳ್ಳಹಿಡಿದು ಕುಳಿತಿದೆ.


ಮಾಜಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರೂ ಆಗಿರುವ ಪ್ರಭಾವಿ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗದವರು. ಇದೀಗ ಮತ್ತೊಬ್ಬ ಪ್ರಭಾವಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ಶಾಸಕರಾಗಿದ್ದರೆ ಯಡಿಯೂರಪ್ಪ ಅವರ ಮಗ ಬಿ.ವೈ ರಾಘವೇಂದ್ರ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಸ್ಮಾಟರ್್ಸಿಟಿ ಯೋಜನೆಗೆ ಆಯ್ಕೆಯಾಗಿರುವ ನಗರ. ಇಷ್ಟಾಗಿಯೂ ತುಂಗೆಯ ಪರಿಸ್ಥಿತಿ ಬಲು ಶೋಚನೀಯವಾಗಿದೆ. ಸ್ಮಾಟರ್್ಸಿಟಿಯ ಅಭಿವೃದ್ಧಿಕಾರ್ಯಗಳು ತೆವಳುತ್ತಾ ಸಾಗಿದೆ. ಚುನಾವಣಾ ಫಲಿತಾಂಶ ಬಂದೊಡನೆ ತಮ್ಮ ಜವಾಬ್ದಾರಿಯನ್ನು ಮರೆತು ಕಾಲ ಕಳೆಯುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಹೀಗೆಯೇ ಮುಂದುವರೆದರೆ ಶಿವಮೊಗ್ಗದಲ್ಲಿ ಬದುಕುವುದೂ ಕಷ್ಟಸಾಧ್ಯವಾಗುವ ಪರಿಸ್ಥಿತಿ ದೂರವಿಲ್ಲ!

Click to comment

Leave a Reply

Your email address will not be published. Required fields are marked *

Most Popular

To Top