National

ಶಸ್ತ್ರ ನಿರ್ಮಾಣದ ಕಾರ್ಖಾನೆಗೆ ಮೋದಿ ಕಾಯಕಲ್ಪ!

ಆಪರೇಶನ್ ಪರಾಕ್ರಮ್ ನೆನಪಿರಬೇಕಲ್ಲ. ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದೊಂದಿಗೆ ಕದನದ ವಾತಾವರಣ ನಿಮರ್ಾಣವಾಗಿತ್ತು. ಭಾರತೀಯ ಸೇನೆ ಬಲುದೊಡ್ಡ ಪ್ರಮಾಣದಲ್ಲಿ ಗಡಿಯಲ್ಲಿ ಜಮಾವಣೆಗೊಂಡು ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿತ್ತು. ಆ ವರ್ಷದ ಡಿಸೆಂಬರ್ 19ರಿಂದ ಮರುವರ್ಷದ ಅಕ್ಟೋಬರ್ 16ರವರೆಗೆ ಈ ದೇಶ 1874 ಸೈನಿಕರನ್ನು ಕಳೆದುಕೊಂಡಿತ್ತು. ಇದು ಕಾಗರ್ಿಲ್ ಯುದ್ಧದಲ್ಲಿ ಭಾರತ ಕಳೆದುಕೊಂಡ ಸೈನಿಕರ ಸಂಖ್ಯೆಗಿಂತ ಕನಿಷ್ಠಪಕ್ಷ ಮೂರೂವರೆ ಪಟ್ಟು ಹೆಚ್ಚು. ಸೈನ್ಯ ಗಡಿಯ ಭಾಗಕ್ಕೆ ಹೊರಟ ಆರಂಭದ ದಿನಗಳಲ್ಲೇ ನೂರಕ್ಕೂ ಹೆಚ್ಚು ಸೈನಿಕರು ತೀರಿಕೊಂಡಿದ್ದರು, 250ಕ್ಕೂ ಹೆಚ್ಚು ಮಂದಿ ಗಾಯಾಳುಗಳಾಗಿದ್ದರು. ಕಾರಣವೇನಿತ್ತು ಗೊತ್ತೇ? ಸೈನ್ಯಕ್ಕೆ ಸಕರ್ಾರಿ ಆಡರ್ಿನೆನ್ಸ್ ಫ್ಯಾಕ್ಟರಿಯಿಂದ ಪೂರೈಸಲಾದ ಮೈನ್ಗಳೇ ಮೊದಲಾದ ಶಸ್ತ್ರಗಳು ಕಳಪೆ ಮಟ್ಟದ್ದಾಗಿದ್ದವು. ಅನೇಕರಿಗೆ ಕೊಟ್ಟ ಬುಲೆಟ್ಪ್ರೂಫ್ ಜಾಕೆಟ್ಗಳು ಅವರು ಧರಿಸುವ ಇತರೆ ಜಾಕೆಟ್ಗಿಂತ ಭಿನ್ನವೇನೂ ಆಗಿರಲಿಲ್ಲ. ಈ ಕಥೆ ಇಲ್ಲಿಗೇ ಮುಗಿಯಲಿಲ್ಲ. 2014ರಿಂದ 2019ರ ನಡುವೆ ಕಳಪೆ ಗುಣಮಟ್ಟದ ಶಸ್ತ್ರಗಳ ಕಾರಣದಿಂದಾಗಿ 400 ಅವಘಡಗಳು ಸಂಭವಿಸಿತ್ತಲ್ಲದೇ 27 ಸೈನಿಕರನ್ನು ದೇಶ ಕಳೆದುಕೊಂಡಿತು. ಕೆಲಸಕ್ಕೆ ಬಾರದ ಶಸ್ತ್ರಗಳನ್ನು ಅನಿವಾರ್ಯವಾಗಿ ಎಸೆಯಬೇಕಾಗಿ ಬಂದು 660 ಕೋಟಿ ರೂಪಾಯಿಯಷ್ಟು ನಷ್ಟ ಮಾಡಿಕೊಂಡಿತು ಸೇನೆ. ಈ ವೇಳೆಯಲ್ಲಿಯೇ 300 ಕೋಟಿಗೂ ಮಿಕ್ಕಿ ಮೈನ್ಸ್ಗಳು ಕೆಲಸಕ್ಕೆ ಬಾರದ್ದೆಂದು ವ್ಯರ್ಥಗೊಂಡಿದ್ದವು. ಸೇನೆ ಹೇಳುವ ಪ್ರಕಾರ ಈ ಐದು ವರ್ಷಗಳಲ್ಲಿ ಸುಮಾರು 960 ಕೋಟಿ ರೂಪಾಯಿ ನಷ್ಟವಾಗಿದೆ. ಇಷ್ಟು ಹಣದಲ್ಲಿ ನೂರಕ್ಕೂ ಹೆಚ್ಚು 155 ಮಿಲಿಮೀಟರ್ ಮಿಡಿಯಂ ಆಟರ್ಿಲರಿ ಗನ್ಗಳನ್ನು ಕೊಳ್ಳಬಹುದಿತ್ತು ಎಂದು ಸೇನೆಯ ಪ್ರಮುಖರು ಹೇಳಿದ್ದಾರೆ. ಇಂತಹ ಹಲವು ಕಾರಣಗಳನ್ನು ಮುಂದಿಟ್ಟುಕೊಂಡೇ ಸಕರ್ಾರ ಈ ಫ್ಯಾಕ್ಟರಿಗಳನ್ನು ಪಬ್ಲಿಕ್ ಸೆಕ್ಟರ್ ಯುನಿಟ್ಗಳಾಗಿ ಪರಿವತರ್ಿಸ ಹೊರಟಿದೆ. ಈ ಸುದ್ದಿ ಬಂದಾಗಿನಿಂದಲೂ 80 ಸಾವಿರಕ್ಕೂ ಹೆಚ್ಚು ನೌಕರರು ಎಲ್ಲ ಕೆಲಸವನ್ನು ನಿಲ್ಲಿಸಿ ಬೀದಿಗಿಳಿಯುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ.


ಆಡರ್ಿನೆನ್ಸ್ ಫ್ಯಾಕ್ಟರಿ ಬೋಡರ್್ ಬ್ರಿಟೀಷರ ಕಾಲದ್ದು. ರೈಲ್ವೆ ಇಲಾಖೆ ಶುರುವಾಗುವ ಮುನ್ನವೇ ಇದು ಕೆಲಸ ನಿರ್ವಹಿಸುತ್ತಿತ್ತು. ಐದು ಜೋನ್ಗಳಲ್ಲಿ 41 ಫ್ಯಾಕ್ಟರಿಗಳ ಮೂಲಕ ಕೆಲಸ ನಿರ್ವಹಿಸುತ್ತಿರುವ ಆಡರ್ಿನೆನ್ಸ್ ಫ್ಯಾಕ್ಟರಿ ಅನೇಕ ದಶಕಗಳಿಂದ ತನ್ನ ನಿಷ್ಕ್ರಿಯತೆಗೆ ಹೆಸರುವಾಸಿಯಾಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲನೆಯದಾಗಿ ಆಡರ್ಿನೆನ್ಸ್ ಫ್ಯಾಕ್ಟರಿ ನಿಮರ್ಿಸಿದ ವಸ್ತುಗಳನ್ನು ಭಾರತೀಯ ಸೇನೆಯೇ ಖರೀದಿ ಮಾಡಬೇಕು. ಅದಕ್ಕೆ ಬಳಸಬೇಕಾಗಿರುವ ತಂತ್ರಜ್ಞಾನ ಯಾವುದಿರಬೇಕೆಂಬುದರ ಬಗ್ಗೆ ನಿಧರ್ಾರ ತೆಗೆದುಕೊಳ್ಳಲು ಆಡರ್ಿನೆನ್ಸ್ ಫ್ಯಾಕ್ಟರಿಗೆ ಸ್ವಾತಂತ್ರ್ಯವಿಲ್ಲ. ಹೀಗಾಗಿ ತನ್ನದ್ದೇ ಆದ ಸಂಶೋಧನಾ ಘಟಕವನ್ನು ಹೊಂದಲು ಅದು ಹೆಣಗಾಡಬೇಕಾಗಿ ಬಂತು. ಎಂದಿನಂತೆ ಸಕರ್ಾರಿ ಸಂಬಳವಾಗಿರುವುದರಿಂದ ಒಮ್ಮೆ ಸೇರಿಕೊಂಡ ನೌಕರ ನಿವೃತ್ತಿಯವರೆಗೂ ಕಾಖರ್ಾನೆಯಲ್ಲಿ ಹಾಯಾಗಿ ಕಾಲ ಕಳೆದುಬಿಡುತ್ತಾನೆ. ಹೀಗಾಗಿಯೇ ಒಂದು ವರದಿಯ ಪ್ರಕಾರ ನೌಕರನೊಬ್ಬ ಶೇಕಡಾ 127ರಷ್ಟು ಸಂಬಳ ಪಡೆದುಕೊಂಡರೆ ಅವನು ಉಪಯೋಗಿಸುವ ಯಂತ್ರ ಶೇಕಡಾ 60ರಷ್ಟೂ ದುಡಿಮೆ ಮಾಡಿರುವುದಿಲ್ಲ. ಅಂದರೆ ಎಲ್ಲ ಸಕರ್ಾರಿ ಕಛೇರಿಗಳಂತೆ ಈ ಕಾಖರ್ಾನೆಯೂ ಬಿಳಿ ಆನೆ ಎನಿಸಿ ಜನ ಕಟ್ಟಿದ ತೆರಿಗೆಯನ್ನು ಉಂಡುಂಡು ಪೊಗದಸ್ತಾಗಿ ಬೆಳೆದುಬಿಟ್ಟಿದೆ. ಸುಮಾರು 82 ಸಾವಿರ ಉದ್ಯೋಗಿಗಳನ್ನು ಸಾಕಲು ಸಕರ್ಾರ ಹರಸಾಹಸ ಮಾಡಬೇಕಾಗುತ್ತಿದೆ. ಈ ಎಲ್ಲ ಕಾರಣಗಳಿಗೆ ಆಡರ್ಿನೆನ್ಸ್ ಫ್ಯಾಕ್ಟರಿಯ ಉತ್ಪಾದನೆಗಳು ಇತರೆ ಕಂಪೆನಿಗಳ ಉತ್ಪಾದನೆಗಳಿಗಿಂತ ಹೆಚ್ಚು ಬೆಲೆಯುಳ್ಳದ್ದಾಗಿಬಿಟ್ಟಿವೆ. ಸೈನಿಕರು ತೊಡುವ ಯುದ್ಧಕಾಲದ ಬಟ್ಟೆಗಳಿಗೆ ಹೊರಗಿನ ಮಾರುಕಟ್ಟೆಯಲ್ಲಿ ಒಂದುಮುಕ್ಕಾಲು ಸಾವಿರ ಬೆಲೆಯಿದ್ದರೆ, ಆಡರ್ಿನೆನ್ಸ್ ಫ್ಯಾಕ್ಟರಿ ಅದನ್ನು ಸೇನೆಗೆ ಮೂರುವರೆ ಸಾವಿರಕ್ಕೆ ಮಾರುತ್ತದೆ. ಇದು ಒಂದು ವಸ್ತುವಿನ ಕಥೆ ಅಷ್ಟೆ. ಹೆಚ್ಚು-ಕಡಿಮೆ ಮಾರುಕಟ್ಟೆ ಬೆಲೆಗಿಂತ ಈ ಕಾಖರ್ಾನೆಯಲ್ಲಿ ಉತ್ಪಾದನೆಯಾಗುವ ವಸ್ತುಗಳ ಬೆಲೆ ಕನಿಷ್ಠಪಕ್ಷ ಎರಡರಷ್ಟಾದರೂ ಇರುತ್ತದೆ. ಸಕರ್ಾರಿ ನಿಯಮಗಳು ಸೇನೆಗಳಿಗೆ ಈ ಫ್ಯಾಕ್ಟರಿಯಿಂದಲೇ ವಸ್ತುಗಳನ್ನು ಕೊಳ್ಳಲು ಆದೇಶ ನೀಡಿವೆಯಾದ್ದರಿಂದ ಸೈನ್ಯ ಕಣ್ಣೀರಿಡುತ್ತಲೇ ಇವುಗಳನ್ನು ಕೊಳ್ಳಬೆಕು. ಕೆಲವೊಮ್ಮೆಯಂತೂ ಇನ್ಸಾಸ್ನಂತಹ ಬಂದೂಕುಗಳು ಯುದ್ಧಕಾಲದಲ್ಲಿ ಶತ್ರುಗಳನ್ನೆದುರಿಸುವಲ್ಲಿ ಪರಿಪೂರ್ಣವಲ್ಲವೆಂದು ಗೊತ್ತಿದ್ದರೂ ಮರುಮಾತಿಲ್ಲದೇ ಅದನ್ನೇ ಖರೀದಿಸಬೇಕು. ಈ ಕಾರಣಕ್ಕಾಗಿಯೇ ಅತ್ಯಾಧುನಿಕ ಗನ್ನುಗಳನ್ನು ಭಾರತ ಇತ್ತೀಚೆಗೆ ಆಮದು ಮಾಡಿಕೊಂಡಿರೋದು.


ಆಡರ್ಿನೆನ್ಸ್ ಫ್ಯಾಕ್ಟರಿಯನ್ನು ಸುಧಾರಿಸಿ ಯುದ್ಧಕ್ಕೆ ಹೊಂದುವಂತೆ ಮಾಡಬೇಕೆಂದು ಮನೋಹರ್ ಪರಿಕ್ಕರ್ರ ಕಾಲದಲ್ಲಿ ಸಾಕಷ್ಟು ಪ್ರಯತ್ನ ಪಡಲಾಯ್ತಾದರೂ ಫಲ ಕೊಡಲಿಲ್ಲ. ಅದಾಗಲೇ ಆಯಕಟ್ಟಿನ ಜಾಗವನ್ನು ಆರಿಸಿಕೊಂಡು ಕೂತಿರುವ ಮಂದಿ ಯುನಿಯನ್ಗಳ ಕೆಂಪು ಬಾವುಟದಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ತಮ್ಮ ಸಂಬಳ ಬಂದರಷ್ಟೇ ಸಾಕು. ಕದನದಲ್ಲಿ ಮುಂಚೂಣಿಯಲ್ಲಿ ನಿಂತ ಸೈನಿಕನ ಕುರಿತಂತೆ ಅವರು ತಲೆಕೆಡಿಸಿಕೊಳ್ಳಲಾರರು. ಈ ಪ್ರಯತ್ನ ಸೋತ ಮೇಲೆಯೇ ಕೇಂದ್ರಸಕರ್ಾರ ಕಾಪರ್ೋರೇಟ್ ವಲಯದಂತೆ ಇದನ್ನೂ ಕೂಡ ಸಮರ್ಪಕವಾಗಿ ನಿರ್ವಹಿಸುವ ಆಲೋಚನೆಯನ್ನು ಮಾಡಿದ್ದು. ಇದೇನು ಹೊಸ ನಿಧರ್ಾರವಲ್ಲ. ಕಳೆದ ಅನೇಕ ವರ್ಷಗಳಿಂದ ಇಂಥದ್ದೊಂದು ಚಚರ್ೆ ನಡೆಯುತ್ತಲೇ ಇತ್ತು. ಆದರೆ ಕೈಹಾಕಿ ಗೆಲ್ಲುವ ಸಾಹಸವನ್ನು ಮಾತ್ರ ಯಾರೂ ತೋರಲಿಲ್ಲ. ಮೋದಿ ಸುಮ್ಮನಿರುವವರಲ್ಲವಲ್ಲ. ಈ ನಿಧರ್ಾರವನ್ನು ಪ್ರಕಟಿಸಿಯೇಬಿಟ್ಟರು. ಇದನ್ನು ಊಹಿಸಿದ್ದ ಕಾಮರ್ಿಕರು ಅನಿಧರ್ಿಷ್ಟಾವಧಿ ಮುಷ್ಕರಕ್ಕೆ ಹೊರಟಿದ್ದಾರೆ. ದೇಶ ಚೀನಿಯನ್ನರೊಂದಿಗೆ ಕದನಕ್ಕೆ ಸಜ್ಜಾಗಿದ್ದಾಗ ಸೈನ್ಯಕ್ಕೆ ಬೇಕಾದ ವಸ್ತುಗಳನ್ನು ಸಮರೋಪಾದಿಯಲ್ಲಿ ನಿರ್ಮಸಿಕೊಡುತ್ತೇವೆ, ಸೂಕ್ತ ಗುಣಮಟ್ಟದ ಭರವಸೆ ಕೊಡುತ್ತೇವೆ ಎನ್ನಬೇಕಿದ್ದ ಈ ಕಾಮರ್ಿಕರೆಲ್ಲ ದೇಶದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಹಾಗೆಂದು ದೇಶವಲ್ಲ, ಒಳಗಿರುವ ಅನೇಕ ಕಾಮರ್ಿಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಎಷ್ಟಾದರೂ ಕೆಂಪು ಬಾವುಟದ ಮದವೇರಿದ ಯುನಿಯನ್ಗಳಲ್ಲವೇ! ನಾಳೆ ಯುದ್ಧದ ಹೊತ್ತಲ್ಲಿ ಚೀನಾ ಸಂದೇಶವೊಂದನ್ನು ಕಳಿಸಿತೆಂದರೆ ಉತ್ಪಾದನೆಯನ್ನೇ ಮುಲಾಜಿಲ್ಲದೇ ನಿಲ್ಲಿಸಿಬಿಡುವವರು ಇವರು. ಇವೆಲ್ಲದರ ಅರಿವಿದ್ದೇ ಈ ಸಂದರ್ಭದಲ್ಲೂ ಈ ಸಾಹಸಕ್ಕೆ ಮೋದಿ ಕೈ ಹಾಕಿದ್ದಾರೆ. ಚೀನಾದೊಂದಿಗೆ ತೊಡೆತಟ್ಟಿ ನಿಂತಿರುವ ಈ ಸಂದರ್ಭದಲ್ಲಿ, ವಿದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರುವ ದೊಡ್ಡ ಕನಸುಗಳನ್ನು ಕಾಣುತ್ತಿರುವ ಈ ಹೊತ್ತಲ್ಲಿ ನಾವು ಇಂಥದ್ದೊಂದು ಬಲವಾದ ಹೆಜ್ಜೆ ಇಡುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಕ್ಷೇತ್ರದ ಕಾಮರ್ಿಕರು ಈ ಕುರಿತಂತೆ ಆಲೋಚನೆ ಮಾಡಲಿಲ್ಲವೆಂದರೆ ಭಾರತವನ್ನು ಬಲಗೊಳಿಸುವಲ್ಲಿ ಸೋತು ಹೋಗುತ್ತೇವೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top