Desi

ವಿಶ್ವಸಂಸ್ಥೆಯಲ್ಲಿ ಅಧಿಕೃತವಾಗಿ ಮೊಳಗಲಿದೆಯೇ ಹಿಂದಿ?

ಸದ್ದಿಲ್ಲದೇ ಮೋದಿ ಸಕರ್ಾರ ಭಾರತ ಮತ್ತು ಭಾರತೀಯತೆಯ ಗೌರವವನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸುವ ಪ್ರಯತ್ನ ಮಾಡುತ್ತಲೇ ಇದೆ. ಇತ್ತೀಚೆಗೆ ಲೋಕಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಮಾತನಾಡುತ್ತಾ ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿಸುವ ಪ್ರಯತ್ನವನ್ನು ಕೇಂದ್ರ ಸಕರ್ಾರ ವಿಶೇಷವಾಗಿ ಮಾಡುತ್ತಿದೆ ಎಂದು ಹೇಳಿದ್ದರು. ಈ ಸಕರ್ಾರ ಅಧಿಕಾರಕ್ಕೆ ಬಂದಾಗಿನಿಂದಲೇ ಈ ಪ್ರಯತ್ನವನ್ನು ಆರಂಭಿಸಿತ್ತು. ಹಾಗೆ ನೋಡಿದರೆ ವಿಶ್ವಸಂಸ್ಥೆಯಲ್ಲಿ ಅರಾಬಿಕ್, ಇಂಗ್ಲಿಷ್, ಫ್ರೆಂಚ್, ರಷ್ಯನ್, ಸ್ಪಾನಿಶ್ ಹಾಗೂ ಚೈನೀಸ್ ಇವು ಅಧಿಕೃತ ಭಾಷೆಗಳೆಂದು ಗುರುತಿಸಲ್ಪಟ್ಟಿವೆ. ಇಂಗ್ಲಿಷ್ ಮತ್ತು ಫ್ರೆಂಚ್ಗಳು ಅಲ್ಲಿ ಕೆಲಸ ಮಾಡಲು ಬಳಸುವ ಭಾಷೆಗಳಾಗಿವೆ. ಜಗತ್ತಿನಲ್ಲಿ ಭಾರತವೊಂದೇ ಅಲ್ಲದೇ ಫಿಜಿ, ಮಾರಿಷಿಯಸ್, ಸರಿನಾಮ್, ಟ್ರಿನಿಡಾಡ್ ಆಂಡ್ ಟೊಬಾಗೊ, ಗಯಾನಾಗಳಲ್ಲೂ ಹಿಂದಿ ಮಾತನಾಡುತ್ತಾರೆ. ಎಲ್ಲ ದೇಶಗಳಲ್ಲೂ ಕಂಡು ಬರುವ ಅನಿವಾಸಿ ಭಾರತೀಯರು ಹಿಂದಿಯನ್ನೇ ಮಾತನಾಡುತ್ತಾರೆ. ಹೀಗಾಗಿ ಈ ಭಾಷೆಯನ್ನು ವಿಶ್ವಸಂಸ್ಥೆ ತಮ್ಮ ಅಧಿಕೃತ ಭಾಷೆಯಾಗಿ ಗುರುತಿಸಬೇಕೆನ್ನುವ ಪ್ರಯತ್ನ ಭಾರತ ದೀರ್ಘಕಾಲದಿಂದಲೂ ಮಾಡುತ್ತಾ ಬಂದಿದೆ. ಇದು ಬಾಯ್ಮಾತಿನ ಪ್ರಯತ್ನವಷ್ಟೇ ಅಲ್ಲ. ಸಾಕಷ್ಟು ಕಸರತ್ತನ್ನು ಇದಕ್ಕಾಗಿ ನಡೆಸಲಾಗಿದೆ. ಕಳೆದ ಮಾಚರ್್ನಲ್ಲಿ ಇದಕ್ಕೆ ಪೂರಕವಾಗಿಯೇ ಮಾರಿಷಸ್ನಲ್ಲಿ ವಲ್ಡರ್್ ಹಿಂದಿ ಸೆಕ್ರೆಟೆರಿಯೇಟ್ ಅನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರು ಉದ್ಘಾಟಿಸಿದ್ದರು. ಇತ್ತೀಚೆಗೆ ಭಾರತೀಯ ನಿಯೋಗವೊಂದು ಅಲ್ಲಿಗೆ ಸಮ್ಮೇಳನವೊಂದಕ್ಕೆ ಭಾಗವಹಿಸಲು ಹೋಗಿದ್ದು ವಿಶಿಷ್ಟವೂ ಮತ್ತು ಮೊದಲ ಪ್ರಯತ್ನವೂ ಆಗಿತ್ತು.

193 ರಾಷ್ಟ್ರಗಳುಳ್ಳ ವಿಶ್ವಸಂಸ್ಥೆಯಲ್ಲಿ ಭಾರತದ ಯೋಗ ದಿನದ ಆಚರಣೆಗೆ 177 ರಾಷ್ಟ್ರಗಳು ಅನುಮೋದನೆ ನೀಡಿದ್ದವು. ಹಿಂದಿಯನ್ನು ಅಧಿಕೃತ ಭಾಷೆಯೆಂದು ಒಪ್ಪಲು 129 ರಾಷ್ಟ್ರಗಳು ಅನುಮೋದನೆ ನೀಡಿದರೆ ಸಾಕು. ಅದೇ ವಿಶ್ವಾಸದ ಮೇಲೆ ಭಾರತ ಸಕರ್ಾರ ಈಗ ಕೆಲಸ ಮಾಡುತ್ತಿದೆ. ವಿದೇಶಾಂಗ ಸಚಿವಾಲಯ ಅಂದುಕೊಂಡಿದ್ದನ್ನು ಸಾಧಿಸುವತ್ತ ವ್ಯವಸ್ಥಿತವಾದ ರೂಪುರೇಷೆಗಳನ್ನು ಮಾಡಿಕೊಂಡು ಶಾಂತವಾಗಿ ಹೆಜ್ಜೆಯಿಡುತ್ತಿದೆ. ಅದರ ಪರಿಣಾಮವಾಗಿಯೇ ಕಳೆದ ಜುಲೈನಲ್ಲಿ ವಿಶ್ವಸಂಸ್ಥೆ ಹಿಂದಿಯಲ್ಲಿ ಟ್ವಿಟರ್ ಅಕೌಂಟನ್ನು ಆರಂಭಿಸಿತು. ಅಷ್ಟೇ ಅಲ್ಲ. ವಿಶ್ವಸಂಸ್ಥೆಯ ರೆಡಿಯೋದಲ್ಲಿ ಜುಲೈ 22 ರಿಂದ ಹತ್ತು ನಿಮಿಷಗಳ ಹಿಂದಿ ವಾತರ್ೆಯನ್ನೂ ಕೂಡ ಆರಂಭಿಸಿತು. ಕಳೆದ ವಾರದಿಂದ ವಿಶ್ವಸಂಸ್ಥೆ ಹಿಂದಿಯಲ್ಲಿ ಬ್ಲಾಗ್ಗಳನ್ನು ಬರೆಯುವುದೂ ಆರಂಭಿಸಿಬಿಟ್ಟಿದೆ. ಅಂದರೆ ಹಿಂದಿಯನ್ನು ಅಧಿಕೃತ ಭಾಷೆಯೆಂದು ಒಪ್ಪಿಕೊಳ್ಳಲು ಒಳಗಿಂದೊಳಗೇ ಎಲ್ಲ ತಯಾರಿಯೂ ನಡೆಯುತ್ತಿದೆ ಎಂದಾಯ್ತು. ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಒಮ್ಮೆ ಅಧಿಕೃತ ಭಾಷೆಯೆಂದು ಹಿಂದಿಯನ್ನು ಗುರುತಿಸಿದರೆ ಅದರಿಂದಾಗುವ ಎಲ್ಲ ಖಚರ್ು ವೆಚ್ಚಗಳನ್ನು ಆಯಾ ಭಾಷಿಗರು ಮಾತನಾಡುವ ರಾಷ್ಟ್ರಗಳೇ ಭರಿಸಬೇಕು. ಕೆಲವೊಮ್ಮೆ ಅನುಮೋದಿಸುವ ರಾಷ್ಟ್ರಗಳೆಲ್ಲದರ ಮೇಲೆಯೂ ಈ ಖಚರ್ು ಹಂಚಬೇಕಾದ ಪರಿಸ್ಥಿತಿ ಬರಬಹುದು. ಆರಂಭಿಕ ಮೂಲಸೌಕರ್ಯವನ್ನೊದಗಿಸುವ ಹೊಣೆಯೊಂದಿಗೆ ಭಾರತಕ್ಕೆ 4 ಕೋಟಿಯಷ್ಟು ಖಚರ್ು ಬರಬಹುದು. ಈ ಕುರಿತಂತೆ ಸಂಸತ್ನಲ್ಲಿ ಸುಷ್ಮಾಸ್ವರಾಜ್ರನ್ನು ಪ್ರಶ್ನಿಸಿದಾಗ 400 ಕೋಟಿಯಾದರೂ ಈ ಹೊಣೆ ಹೊರಲು ಸಿದ್ಧವೆಂದು ಆಕೆ ಬಲು ಬಲವಾಗಿಯೇ ಹೇಳಿದ್ದರು. ಈ ಹಿಂದೆ ಜರ್ಮನಿ, ಜಪಾನ್ನಂತಹ ರಾಷ್ಟ್ರಗಳೂ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿ ಸೋತಿದ್ದವು. ಏಕೆಂದರೆ ಹಣಕಾಸಿನ ಹೊರೆಯನ್ನು ಎಲ್ಲಾ ರಾಷ್ಟ್ರಗಳೂ ಸೇರಿ ನಿರ್ವಹಿಸಬೇಕೆಂಬುದು ವಿಶ್ವಸಂಸ್ಥೆಯ ಆಗ್ರಹ. ಬಡ ರಾಷ್ಟ್ರಗಳು ಈ ಹೊಣೆಯಿಂದ ನುಣುಚಿಕೊಳ್ಳಲು ಇದ್ದುದು ಇದ್ದಂತೆ ನಡೆಯಲೆಂದು ಸುಮ್ಮನಾಗಿಬಿಡುತ್ತವೆ. ಆದರೆ ಭಾರತ ಆ ಎಲ್ಲಾ ರಾಷ್ಟ್ರಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಡುತ್ತಿರುವ ಹೆಜ್ಜೆ ಮೆಚ್ಚವಂಥದ್ದು ಅಭಿನಂದಿಸುವಂಥದ್ದೂ ಕೂಡ.


ಎಂದಿನಂತೆ ಕಾಂಗ್ರೆಸ್ ನಾಯಕ ಶಶಿತರೂರ್ ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಹಿಂದಿಯನ್ನು ವಿಶ್ವಸಂಸ್ಥೆಯ ಅಧಿಕೃತ ಭಾಷೆಯಾಗಿಸುವುದರಿಂದ ಲಾಭವೇನೆಂದು ಪ್ರಶ್ನಿಸುತ್ತಿದ್ದಾರೆ. ಇಂದು ಪ್ರಧಾನಮಂತ್ರಿ ಮತ್ತು ವಿದೇಶಾಂಗ ಸಚಿವರು ಹಿಂದಿ ಮಾತನಾಡಬಲ್ಲರು. ಮುಂದೊಂದು ದಿನ ದಕ್ಷಿಣದವರೋ ಪಶ್ಚಿಮ ಬಂಗಾಳದವರೋ ಈ ಹುದ್ದೆಗೆ ಬಂದರೆ ಅವರು ಹಿಂದಿಯನ್ನೇ ಮಾತನಾಡುವುದಿಲ್ಲವೆಂಬ ಬಾಲಿಶ ಪ್ರಶ್ನೆಯನ್ನು ಸಂಸತ್ತಿನಲ್ಲಿ ಕೇಳಿದ್ದಾರೆ. ಇದು ಹಿಂದಿ, ಹಿಂದು, ಹಿಂದುತ್ವ ಎಂಬ ಬಿಜೆಪಿಯ ಅಜೆಂಡಾದ ಒಂದು ಭಾಗವೆಂದು ಕಿಡಿ ಕಾರಿದ್ದಾರೆ. ಈ ಅರ್ಬನ್ ನಕ್ಸಲರಿಗೆ, ಬುದ್ಧಿಜೀವಿಗಳಿಗೆ ಅರ್ಥವಾಗದ ಒಂದೇ ಸಂಗತಿಯೆಂದರೆ ಈ ಎಲ್ಲಾ ಪ್ರಯತ್ನಗಳೂ ಭಾರತೀಯತೆಯನ್ನು ಬಲವಾಗಿ ಪ್ರತಿಷ್ಠಾಪಿಸುವ ಹೆಜ್ಜೆಗಳು ಎಂಬುದು. ಹಿಂದಿಗೆ ಗೌರವ ಸಿಗುತ್ತಿದೆ ಎಂದರೆ ಭಾರತಕ್ಕೆ ಗೌರವ ಸಿಗುತ್ತಿದೆ ಎಂದರ್ಥ. ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಚೈನೀಸ್ನೊಂದಿಗೆ ಹಿಂದಿ ನಿಲ್ಲುವುದೆಂದರೆ ಚೀನಾದೊಂದಿಗೆ ಸೆಟದು ನಿಲ್ಲುವುದು ಎಂದರ್ಥ. ಇವುಗಳಿಗೆ ಸ್ಥೂಲ ಮಹತ್ವ ಇಲ್ಲದೇ ಹೋದರೂ ಸೂಕ್ಷ್ಮವಾಗಿ ಇವು ಜಾಗತಿಕ ಮಾನಸಿಕತೆಯ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ.
ಸ್ವಾಭಿಮಾನ ಎನ್ನುವುದು ಹೀಗೇ ಹುಟ್ಟುವುದು. ನಾನು, ನನ್ನದ್ದು ಈ ಅಭಿಮಾನವನ್ನು ಧನಾತ್ಮಕವಾಗಿ ಬಳಸಿಕೊಂಡಾಗ ಅದು ಶಕ್ತಿಯುತವಾಗುತ್ತದೆ.

ನರೇಂದ್ರಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ಎಲ್ಲ ಪ್ರಯತ್ನಗಳೂ ಜೋರಾಗಿ ನಡೆಯುತ್ತಿವೆ. ಹಿಂದಿನ ಯಾವ ಸಕರ್ಾರಗಳಿಗೂ ಇಂತಹದ್ದೊಂದು ಆಲೋಚನೆ ತಲೆಗೆ ಬಂದಿರಲಿಲ್ಲ. ಆಲೋಚನೆ ಬಂದರೂ ಅದನ್ನು ಸಾಕಾರಗೊಳಿಸಿಕೊಳ್ಳುವ ಮಾರ್ಗವೂ ತಿಳಿದಿರಲಿಲ್ಲ. ಮೋದಿ ಕಳೆದ ನಾಲ್ಕುವರೆ ವರ್ಷದಲ್ಲಿ ಜಗತ್ತೆಲ್ಲವನ್ನೂ ಸುತ್ತಾಡಿ ಅಲ್ಲಿನ ಪ್ರಭುತ್ವದ ಮೇಲೆ ಎಂತಹ ಪ್ರಭಾವ ಬೀರಿದ್ದಾರೆ ಎಂದರೆ ಭಾರತದ ಎಲ್ಲ ಬಗೆಯ ಬೇಡಿಕೆಗಳಿಗೆ ಅವರುಗಳಿಂದು ಒಪ್ಪಿ ತಲೆದೂಗುವ ಸ್ಥಿತಿಗೆ ಬಂದಿದ್ದಾರೆ. ಭಾರತವೀಗ ಜಗತ್ತು ಹೇಳಿದ್ದಕ್ಕೆಲ್ಲ ಗೋಣು ಬಗ್ಗಿಸುವ ರಾಷ್ಟ್ರವಲ್ಲ. ಬದಲಿಗೆ ತನ್ನದೇ ಆದ ವಿಚಾರವನ್ನು ಜಗತ್ತಿಗೆ ತಿಳಿ ಹೇಳಿ ಜಗತ್ತು ಅನುಸರಿಸುವಂತೆ ಮಾಡಬಲ್ಲ ಸಾಮಥ್ರ್ಯವಿರುವ ರಾಷ್ಟ್ರ. ಉತ್ತರ-ದಕ್ಷಿಣದ ಎಲ್ಲ ಭೇದಗಳನ್ನು ಪಕ್ಕಕ್ಕಿಟ್ಟು ನಮ್ಮ ರಾಷ್ಟ್ರದ ಭಾಷೆಯೊಂದು ವಿಶ್ವಸಂಸ್ಥೆಯಲ್ಲಿ ಅಧಿಕೃತ ಭಾಷೆಯಾಗುತ್ತಿರುವುದನ್ನು ಹೆಮ್ಮೆಯಿಂದ ಸ್ವೀಕಾರ ಮಾಡೋಣ.

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. Sidrta

    October 2, 2018 at 2:51 pm

    ಹಿಂದಿ ಬದ್ಲು ಸಂಸ್ಕೃತಿ ಇದ್ದಿದ್ರೆ ಚನಾಗಿರ್ತಿತು
    ಸದ್ಯಕ್ಕೆ ಹಿಂದಿM ಮಾಡಿ ಆಮೇಲೆ ಸಂಸ್ಕೃತಿ ಮಾಡಿದ್ರೆ

Leave a Reply

Your email address will not be published. Required fields are marked *

Most Popular

To Top