National

ವಿಕಾಸದ ಪರಿ ನೋಡಿದರೆ ಚುನಾವಣೆ ಗೆದ್ದೇಬಿಟ್ಟಿದ್ದಾರೆ!

ನರೇಂದ್ರಮೋದಿಯವರಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತಹ ವಿಶ್ವಾಸ ಅದಮ್ಯವಾಗಿದೆ. ವಾಸ್ತವವಾಗಿ ಪ್ರತೀ ಸಕರ್ಾರಗಳು ತಮ್ಮ ಅವಧಿಯ ಕೊನೆಯ ವೇಳೆಗೆ ಹೊಸ ಕನಸುಗಳನ್ನು ಘೋಷಿಸದೇ ಕೈಗೆತ್ತಿಕೊಂಡದ್ದನ್ನು ಪೂರ್ಣಗೊಳಿಸಿ ಅದನ್ನು ಜನರ ಮುಂದೆ ಬಿಚ್ಚಿಡಲು ಪ್ರಯತ್ನಿಸುತ್ತಿರುತ್ತದೆ. ನರೇಂದ್ರಮೋದಿ ಹಾಗಲ್ಲ. ಚುನಾವಣೆಯೇ ಇಲ್ಲವೇನೋ ಎಂಬಂತೆ ಎಂದಿನ ವೇಗದಲ್ಲಿ ಕೆಲಸ ಮಾಡುತ್ತಲೇ ಇದ್ದಾರೆ. ಅವರೊಂದಿಗೆ ಹೆಗಲಿಗೆ-ಹೆಗಲು ಕೊಟ್ಟು ದುಡಿಯಲು ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಸುರೇಶ್ ಪ್ರಭು, ಸುಷ್ಮಾ ಸ್ವರಾಜ್ರಂಥವರು ಸಿದ್ಧರಾಗಿಯೇ ನಿಂತಿದ್ದಾರೆ.


ನಿತಿನ್ ಗಡ್ಕರಿ ಪುಲ್ವಾಮಾ ದಾಳಿಗೂ ಮುನ್ನವೇ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿರುವ ಹೆಚ್ಚುವರಿ ನೀರನ್ನು ಭಾರತದೆಡೆಗೆ ತಿರುಗಿಸಲು ಯೋಜನೆಯನ್ನು ಕ್ಯಾಬಿನೆಟ್ಟಿನ ಮುಂದೆ ಪ್ರಸ್ತುತ ಪಡಿಸಿಯಾಗಿತ್ತು. 530 ಮಿಲಿಯನ್ ಕ್ಯುಬಿಕ್ ಮೀಟರ್ಗಳಷ್ಟು ನೀರು ಪಾಕಿಸ್ತಾನಕ್ಕೆ ಅನವಶ್ಯಕವಾಗಿ ಹರಿದುಹೋಗುತ್ತಿದ್ದು ಅದನ್ನು ತಡೆದು ಭಾರತಕ್ಕೆ ಬಳಸಿಕೊಳ್ಳುವಲ್ಲಿ ಇಷ್ಟು ವರ್ಷಗಳಿಂದ ನಾವು ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ. ಈಗ ಆ ನೀರನ್ನು ಸಂಗ್ರಹಿಸಲು ಅಣೆಕಟ್ಟು ಕಟ್ಟುವ, ಅದನ್ನು ತಿರುಗಿಸಿ ಯಮುನಾ ನದಿಗೆ ಹರಿಸುವ ಪ್ರಯತ್ನಗಳು ಭರದಿಂದ ಸಾಗಿವೆ. ಚುನಾವಣೆಯ ನೀತಿ ಸಂಹಿತೆ ಜಾರಿಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗ ಈ ಕೆಲಸ ಶುರುವಾಗಿದೆ. ಅತ್ತ ರೈಲ್ವೇ ಇಲಾಖೆಯಲ್ಲಂತೂ ಹೊಸ ಹೊಸ ಪ್ರಯತ್ನಗಳು, ಆಲೋಚನೆಗಳು ನಿಂತೇ ಇಲ್ಲ. ಪಿಯೂಷ್ ಗೋಯಲ್ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ದೇಶದಾದ್ಯಂತ ವಿಭಿನ್ನ ಸ್ಥಳಗಳಿಗೆ ವಿಸ್ತರಿಸುವ ಭರವಸೆ ಕೊಟ್ಟಿದ್ದಾರೆ. ಅದು ಸಾಲದೆಂಬಂತೆ ಈಗ ಭಾರತಕ್ಕೆ ಮುಂದಿನ ಹತ್ತು ವರ್ಷಗಳಲ್ಲಿ 10 ಲಕ್ಷಕೋಟಿ ರೂಪಾಯಿಯ ಹೂಡಿಕೆಯ ಮೂಲಕ 6000 ಕಿ.ಮೀ ಉದ್ದದ 10 ಬುಲೆಟ್ ಟ್ರೈನ್ಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗುತ್ತಿದೆ. ರೈಲ್ವೇ ಇಲಾಖೆ ಇದಕ್ಕೆ ಕ್ಯಾಬಿನೆಟ್ಟಿನ ಅನುಮತಿ ಪಡೆಯಲು ಕಾಯುತ್ತಿದೆ. ಒಮ್ಮೆ ಅನುಮತಿ ಸಿಕ್ಕರೆ ಈ ರೈಲುಗಳಿಗೆ ಬೇಕಾಗಿರುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಧ್ಯಾಸಾಧ್ಯತೆಗಳ ಪರಿಶೀಲನೆಗೆ ಅವಕಾಶ ಕೊಟ್ಟಂತಾಗುತ್ತದೆ. ಈಗ ಇರುವ ಅಂದಾಜಿನ ಪ್ರಕಾರ ಈ ಬುಲೆಟ್ ಟ್ರೈನುಗಳು ಚೆನ್ನೈ-ಬೆಂಗಳೂರು, ಪಾಟ್ನಾ-ಕೋಲ್ಕತ್ತಾ, ದೆಹಲಿ-ಅಮೃತ್ಸರ್, ನಾಗಪುರ-ಮುಂಬೈ, ಚೆನ್ನೈ-ಮೈಸೂರುಗಳೇ ಮೊದಲಾದ ದಿಕ್ಕಿನತ್ತ ಓಡಲಿವೆ. ಜೊತೆಗೆ ಬರಲಿರುವ ವರ್ಷಗಳಲ್ಲಿ ನಮ್ಮ ಸರಕು ಸಾಗಾಣೆಯ ಸಾಮಥ್ರ್ಯವನ್ನು ದ್ವಿಗುಣಗೊಳಿಸುವ ಉಪಾಯಗಳನ್ನು ಮುಂದಿರಿಸಲಾಗಿದೆ. ಅಲ್ಲದೇ ಈಗಿರುವ ಒಂದೂಕಾಲು ಲಕ್ಷ ರೈಲ್ವೇ ಜಾಲಕ್ಕೆ 17,000 ಕಿ.ಮೀ ಹಳಿಗಳನ್ನು ಸೇರಿಸುವ ಪ್ರಯತ್ನವೂ ನಡೆಯುತ್ತಿದೆ. ಈ ಬಾರಿ ಈ ಹಳಿಗಳನ್ನು ಅಟಲ್ಜಿಯವರ ಕನಸಿನ ಸುವರ್ಣ ಚತುಷ್ಪಥಕ್ಕೆ ಸಮಾನಾಂತರವಾಗಿಯೇ ರೂಪಿಸಿ ರಸ್ತೆಯ ಮೇಲಿನ ಸಂಚಾರ ಭಾರವನ್ನು ಕಡಿಮೆ ಮಾಡಿಸುವ ಪ್ರಯತ್ನವೂ ನಡೆಯುತ್ತಿದೆ. ಇದೇ ವೇಳೆಗೆ ಮುಂಬೈ ಮತ್ತು ಅಹ್ಮದಾಬಾದ್ಗಳ ನಡುವೆ ಬುಲೆಟ್ ಟ್ರೈನಿನ ನಿಮರ್ಾಣ ಪ್ರಗತಿಯಲ್ಲಿದೆ!


ಪಿಯೂಷ್ ಗೋಯಲ್ರ ಅವಧಿಯಲ್ಲಿ ಕನರ್ಾಟಕಕ್ಕೆ ಅನೇಕ ಸಂತಸದ ಸುದ್ದಿಗಳಿವೆ. ಹಿಂದೊಮ್ಮೆ ಪಿಯೂಷ್ ಗೋಯಲ್ರು ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡುತ್ತಾ ಬೆಂಗಳೂರಿಗೆ ನಗರ ರೈಲು ಸಂಚಾರಕ್ಕೆ ವ್ಯವಸ್ಥೆ ರೂಪಿಸಿಕೊಡುವ ಕುರಿತಂತೆ ಮಾತನಾಡಿದರು. ಅದು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಅನಂತ್ಕುಮಾರ್ ಅವರ ಕನಸೂ ಆಗಿತ್ತು. ಅವರ ಅಪೇಕ್ಷೆಯ ಹಿನ್ನೆಲೆಯಲ್ಲೇ ಸಿದ್ದರಾಮಯ್ಯ ಇಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರೈಲ್ವೇ ಇಲಾಖೆಯ ಮೂಲಕ 17,000 ಕೋಟಿಯ ಯೋಜನೆಯನ್ನು ಮುಂದಿರಿಸಿದ್ದರಂತೆ. ವಾಸ್ತವವಾಗಿ ಈ ರೀತಿಯ ನಗರದೊಳಗಿನ ರೈಲು ಜಾಲ ನಿಮರ್ಾಣಕ್ಕೆ ಕೇಂದ್ರ ಸಕರ್ಾರದ ಪಾಲು ಶೇಕಡಾ 20 ಮಾತ್ರ. ಉಳಿದದ್ದನ್ನು ರಾಜ್ಯ ಸಕರ್ಾರವೇ ಭರಿಸಬೇಕು. ಆದರೆ ಸಿದ್ದರಾಮಯ್ಯ ಸಕರ್ಾರ ಭಾಗ್ಯಗಳನ್ನು ವಿತರಿಸುವಲ್ಲೇ ನಿರತವಾಗಿದ್ದರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಷ್ಟು ಹಣ ರಾಜ್ಯಸಕರ್ಾರದ ಬಳಿ ಇರಲಿಲ್ಲವೆಂದು ಗೊತ್ತಿದ್ದೇ ಪಿಯೂಷ್ ಗೋಯಲ್ರು ಇಡಿಯ ಯೋಜನೆಗೆ ಅರ್ಧದಷ್ಟನ್ನು ರಾಜ್ಯಸಕರ್ಾರ ಕೊಟ್ಟರೆ ಉಳಿದ ಅರ್ಧದಷ್ಟನ್ನು ಕೇಂದ್ರಸಕರ್ಾರ ಭರಿಸುತ್ತದೆ ಎಂಬ ಪ್ರಸ್ತಾವನೆ ಮುಂದಿಟ್ಟಿದ್ದು. ಅಭಿವೃದ್ಧಿಯ ಕುರಿತಂತೆ ಎಂದೂ ಆಸಕ್ತಿ ತೋರದ ಸಿದ್ದರಾಮಯ್ಯ ಈ ಪ್ರಸ್ತಾವನೆಯನ್ನು ಮೂಲೆಗುಂಪು ಮಾಡಿದ್ದರೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳೊಳಗೆ ಮೂರು ಪತ್ರಗಳನ್ನು ಬರೆದ ಪಿಯೂಷ್ ಗೋಯಲ್ರು ಉತ್ತರ ಬರದೇ ನಿರಾಶರಾದಾಗ ಇಲ್ಲಿನ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ಕೊಡಲೇಬೇಕಾದ ಪರಿಸ್ಥಿತಿ ಬಂತಂತೆ. ಬೆಂಗಳೂರು ನಗರ ರೈಲಿಗೆ ಅಡ್ಡಗಾಲು ಹಾಕುತ್ತಿರುವುದೇ ಮುಖ್ಯಮಂತ್ರಿಗಳು ಎಂದು ಸಾರ್ವಜನಿಕವಾಗಿ ಹೇಳಿಬಿಡುತ್ತೇನೆಂದಾಗ ಬಾಗಿದ ಕುಮಾರಸ್ವಾಮಿ 20ಕ್ಕೂ ಹೆಚ್ಚು ನಿಯಮಗಳನ್ನು ರೂಪಿಸಿ ಮರುಪತ್ರ ಬರೆದರಂತೆ. ಇಷ್ಟೊಂದು ನಿಯಮಗಳ ಮೂಲಕ ಒಂದು ಯೋಜನೆಯನ್ನು ಪೂರ್ಣಗೊಳಿಸಲಾಗುವುದಿಲ್ಲ ಎಂದರಿತಿದ್ದ ಪಿಯೂಷ್ ಗೋಯಲ್ರು ಕೊನೆಗೂ ಮುಖ್ಯಮಂತ್ರಿಗಳನ್ನು ಈ ಯೋಜನೆಗೆ ಒಪ್ಪಿಸಿ ಮೊನ್ನೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಹುಶಃ ಬರಲಿರುವ ಒಂದೆರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಗರ ರೈಲು ವ್ಯವಸ್ಥೆ ರೂಪುಗೊಂಡರೆ ಅಚ್ಚರಿ ಪಡಬೇಕಿಲ್ಲ.


ನರೇಂದ್ರಮೋದಿ ಯಾವ ಕೆಲಸವನ್ನೂ ಒಂದು ತಿಂಗಳಿಗೋ ಎರಡು ತಿಂಗಳಿಗೋ ಕೈಗೆತ್ತಿಕೊಳ್ಳುವವರಲ್ಲ. ದೂರದೃಷ್ಟಿ ಇಟ್ಟುಕೊಂಡೇ ಕೆಲಸ ಮಾಡುವಂಥವರು. 10 ವರ್ಷಗಳಾಚೆಯ ಬುಲೆಟ್ ಟ್ರೈನಿನ ಕಲ್ಪನೆಯನ್ನು ಈಗ ಕಟ್ಟುತ್ತಿದ್ದಾರೆಂದರೆ ಅವರು ಈ ಚುನಾವಣೆಯನ್ನಷ್ಟೇ ಅಲ್ಲ, ಬರಲಿರುವ ಚುನಾವಣೆಯನ್ನೂ ಗೆದ್ದಾಗಿದೆ ಎಂದೇ ಅರ್ಥ. ಅದಕ್ಕೆ ಸರಿಯಾಗಿ ಪ್ರತಿಪಕ್ಷಗಳು ಸತ್ತಂತೆ ಬಿದ್ದುಕೊಂಡಿರುವುದು ನೋಡಿದರೆ 2019ರ ಚುನಾವಣೆ ಏಕಮುಖಿಯಾಗಿದೆ ಎನ್ನುವುದರಲ್ಲಿ ಖಂಡಿತ ಅನುಮಾನವಿಲ್ಲ. ವಿಕಾಸದ ಕಲ್ಪನೆ ಐದು ವರ್ಷಗಳ ನಂತರ ಚುನಾವಣೆಯನ್ನು ಗೆಲ್ಲುವಂಥದ್ದಲ್ಲ. ಅದು ನೂರಾರು ವರ್ಷಗಳಿಗೆ ರಾಷ್ಟ್ರವನ್ನು ನಿಮರ್ಿಸುವಂಥದ್ದು. ನರೇಂದ್ರಮೋದಿ ಮತ್ತು ಅವರ ತಂಡ ಅದೇ ದಿಕ್ಕಿನತ್ತ ಹೆಜ್ಜೆ ಹಾಕುತ್ತಿದೆ.

– ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top