State

ವಿಕಾಸದಲ್ಲಿ ನಮ್ಮದ್ದೇ ಪಾತ್ರ ದೊಡ್ಡದ್ದು!

ನನ್ನ ಕನಸಿನ ಕನರ್ಾಟಕದ ಕಲ್ಪನೆಯನ್ನು ಕಟ್ಟಿದಾಗ ನಮ್ಮ ಆಲೋಚನೆ ಬಲು ನಿಚ್ಚಳವಾಗಿಯೇ ಇತ್ತು. ಎಲ್ಲಿಯವರೆಗೂ ವಿಕಾಸದಲ್ಲಿ ಸಾರ್ವಜನಿಕರ ಪಾಲುದಾರಿಕೆ ಇರುವುದಿಲ್ಲವೋ ಅಲ್ಲಿಯವರೆಗೂ ವಿಕಾಸದ ಚಕ್ರ ಪರಿಪೂರ್ಣವಾಗಲಾರದು ಅಂತ. ಬ್ರಿಟೀಷರ ಆಳ್ವಿಕೆಯ ಲಾಗಾಯ್ತು ಈ ದೇಶದಲ್ಲಿ ಒಂದು ಕೆಟ್ಟ ಪರಂಪರೆ ಶುರುವಾಗಿದೆ. ಸಾರ್ವಜನಿಕವಾದ ಪ್ರತಿಯೊಂದು ಕೆಲಸವನ್ನೂ ಸಕರ್ಾರವೇ ಮಾಡಬೇಕು ಅಂತ! ಒಂದೋ ನಾವು ಪತ್ರಗಳನ್ನು ಬರೆದು ಅಧಿಕಾರಿಗಳ ಬಳಿ ಮಾಡಿಸಬೇಕು. ಇಲ್ಲವೇ ಜನಪ್ರತಿನಿಧಿಗಳ ಹಿಂದೆ ಬಿದ್ದು ಅವರ ಹತ್ತಿರ ಮಾಡಿಸಿಕೊಳ್ಳಬೇಕು ಅಂತ. ಇದರ ಒಟ್ಟಾರೆ ಪರಿಣಾಮವೇನೆಂದರೆ ಸತತವಾಗಿ ಸಾರ್ವಜನಿಕರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಅಡಿಯಲ್ಲೇ ಇರಬೇಕು. ಇದನ್ನು ಭೇದಿಸಬೇಕೆಂದರೆ ವಿಕಾಸದ ಜವಾಬ್ದಾರಿಯನ್ನು ಸಮಾಜ ಹೊರಬೇಕು. ಅದಕ್ಕೆ ಬೆಂಬಲವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿಲ್ಲಬೇಕಷ್ಟೇ. ವಿಕಾಸವನ್ನು ಒಂದು ಪಿರಮಿಡ್ ಎಂದು ಭಾವಿಸುವುದಾದರೆ ಶೃಂಗ ಜನಪ್ರತಿನಿಧಿ. ಮಧ್ಯಭಾಗದಲ್ಲಿ ಅಧಿಕಾರಿಗಳು ಮತ್ತು ವಿಶಾಲವಾದ ಬುಡ ನಾವು, ಅಂದರೆ ಸಾಮಾನ್ಯ ಜನತೆ. ಶೃಂಗದಲ್ಲಿ ಕುಳಿತ ಜನಪ್ರತಿನಿಧಿ ತನ್ನ ತಾನು ಆಳಲೆಂದೇ ಹುಟ್ಟಿದವನೆಂದು ಭಾವಿಸುವಾಗಲೇ ಎಲ್ಲ ಸಮಸ್ಯೆಗಳೂ ಶುರುವಾಗೋದು. ಸ್ವಲ್ಪ ಈ ಪಿರಮಿಡ್ ಅನ್ನು ಉಲ್ಟಾ ಮಾಡಿ ನೋಡಿ. ಆಗ ಇವರುಗಳ ಧಿಮಾಕೆಲ್ಲ ಸರ್ರನೆ ಇಳಿದು ಹೋಗುತ್ತದೆ! ಬದಲಾವಣೆಯ ಕಾರ್ಯದಲ್ಲಿ ಜನ ಹೆಚ್ಚು ಜಾಗರೂಕರಾದಷ್ಟೂ ಅಧಿಕಾರಿಗಳು, ಜನ ಪ್ರತಿನಿಧಿಗಳು ತಮ್ಮ ಎಂದಿನ ಧಾಷ್ಟ್ರ್ಯ ಬುದ್ಧಿಯಿಂದ ಹೊರ ಬಂದೇ ಬರುತ್ತಾರೆ. ರಾಜ್ಯಾದ್ಯಂತ ಈ ಪ್ರಯೋಗದಲ್ಲಿ ಹಂತ ಹಂತವಾಗಿ ನಾವು ಯಶಸ್ಸು ಕಾಣುತ್ತಿದ್ದೇವೆ.

ಎರಡು ತಿಂಗಳ ಹಿಂದೆ ಹುಬ್ಬಳ್ಳಿಯ ಶ್ರೀನಗರದಲ್ಲಿ ಪಾಳುಬಿದ್ದ 310 ವರ್ಷಗಳ ಹಳೆಯ ಕಲ್ಯಾಣಿಯೊಂದಿತ್ತು. ಇಲ್ಲಿನ ಜನ ಅದನ್ನು ಕಪಿಲಾ ಬಾವಿ ಅಂತಾರೆ. ಪ್ರತಿ ವರ್ಷ ಚೌತಿಯ ಹೊತ್ತಲ್ಲಿ ಒಂದಡಿಯಷ್ಟು ಹೂಳು ತೆಗೆಯೋದು, ಪಕ್ಕದ ಬೋವರ್ೆಲ್ನಿಂದ ನೀರು ತೆಗೆದು ಬಾವಿಗೆ ತುಂಬಿಸಿ ಗಣೇಶನನ್ನು ಬಿಡುವುದು. ಇಷ್ಟು ಬಿಟ್ಟರೆ ಆ ಇಡಿಯ ಬಾವಿ ಕೊಳೆತ ನೀರಿನ ಆಗರವಾಗಿತ್ತು. ಮತ್ತು ಪ್ಲಾಸ್ಟರ್ ಆಫ್ ಪ್ಯಾರಿಸ್ನ, ಪ್ಲಾಸ್ಟಿಕ್ನ, ಹಳೆಯ ಬಟ್ಟೆಯ, ಮನೆಯ ಕೊಳಕಿನ ಅಂತಿಮ ತಾಣವಾಗಿ ನಿಮರ್ಾಣವಾಗಿತ್ತು. ಅಕ್ಕ-ಪಕ್ಕದ ಕಾಲೋನಿಯವರಿಗೆ ಅದನ್ನು ಮುಚ್ಚಿದರೆ ಸಾಕೆಂಬ ಹತಾಶೆಯ ಭಾವ. ಯುವಾಬ್ರಿಗೇಡ್ನ ಕಾರ್ಯಕರ್ತರು ಅದನ್ನು ಕಂಡವರು ಅದರ ಸ್ವಚ್ಛತೆ ಮಾಡಬೇಕೆಂದು ಮನಸ್ಸು ಮಾಡಿದರು. ಸೆಲ್ಫೀ ವೀರರಿರಬೇಕೆಂದು ಭಾವಿಸಿದ ಅಕ್ಕ-ಪಕ್ಕದ ಮನೆಯವರು ಮೂದಲಿಸಿ ಸುಮ್ಮನಾದರು. ಆದರೆ ಒಂದು ಭಾನುವಾರ ಕಲ್ಯಾಣಿಯೊಳಗೆ ನುಗ್ಗಿದ ಈ ತಂಡ ಕೊಳೆತ ನೀರನ್ನು ಖಾಲಿ ಮಾಡಿ, ಒಳಗೆ ಗಬ್ಬು ನಾರುತ್ತಿದ್ದ ಎಲ್ಲ ಕೊಳಕನ್ನು ಸ್ವಚ್ಛ ಮಾಡಲುಪಕ್ರಮಿಸಿತು! 30 ಜನರ ತಂಡದಿಂದ ಶುರುವಾದ ಈ ಕಾರ್ಯ ವಾರದಿಂದ ವಾರಕ್ಕೆ ರಂಗು ಪಡೆಯುತ್ತಾ ಹೋಯ್ತು. ಅಕ್ಕ-ಪಕ್ಕದ ಜನ ಈ ಕಾರ್ಯದಿಂದ ಪ್ರೇರಣೆ ಪಡೆದು ಪ್ರತಿನಿತ್ಯ ಕೆಲಸಕ್ಕೆಂದು ಬರುತ್ತಿದ್ದ ತರುಣರಿಗೆ ಉಪಾಹಾರ, ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದರು. ಮನೆಯೊಳಗೇ ಕುಳಿತಿರುತ್ತಿದ್ದ ಹೆಣ್ಣುಮಕ್ಕಳೂ ಕೂಡ ಈ ತರುಣ ಮಿತ್ರರೊಂದಿಗೆ ಸೇರಿ ತಾವೂ ಕೆಲಸ ಮಾಡಲಾರಂಭಿಸಿದರು. ಪತ್ರಿಕೆಗಳಿಗೆ ಇದು ಅಚ್ಚರಿಯ ಸುದ್ದಿಯಾಯಿತು. ಅಕ್ಕ-ಪಕ್ಕದ ಕಾಲೇಜಿನ ತರುಣರು ಆಗಾಗ ಇಲ್ಲಿಗೆ ಬಂದು ಸ್ವಯಂ ಸ್ಫೂತರ್ಿಯಿಂದ ಸೇವೆ ಮಾಡಲಾರಂಭಿಸಿದರು. ಒಮ್ಮೆಯಂತೂ ಅಂಧ ಶಾಲೆಯ ವಿದ್ಯಾಥರ್ಿಗಳೇ ಬಂದು ಕಲ್ಯಾಣಿಯೊಳಗೆ ತುಂಬಿದ್ದ ಕಸವನ್ನು ಹೊರತೆಗೆಯಲು ಶ್ರಮಿಸಿದರು! ನೋಡ-ನೋಡುತ್ತಾ 300 ವರ್ಷಗಳ ಹಳೆಯ ಕಲ್ಯಾಣಿ ಜೀವಕಳೆಯಿಂದ ಹೊಳೆಯಲಾರಂಭಿಸಿತ್ತು. ಕಲ್ಯಾಣಿಯ ಆಳದಿಂದ ಒಸರಿದ ನೀರು ಎಲ್ಲರಲ್ಲೂ ಹೆಮ್ಮೆ ತಂದಿತ್ತು. ನಿಧಾನವಾಗಿ ಕಾಪರ್ೊರೇಶನ್ ಈ ಕೆಲಸದಲ್ಲಿ ಕೈ ಜೋಡಿಸುವ ಮಾತನಾಡಲಾರಂಭಿಸಿತು. ಅದರ ಹಿಂದು-ಹಿಂದೆಯೇ ಶಾಸಕರು, ಸಂಸದರು ಧಾವಿಸಿ ಬಂದರು. ಕಲ್ಯಾಣಿಯನ್ನು ನೋಡಿದ್ದಲ್ಲದೇ ಅದಕ್ಕೆ, ಅದರ ಮುಂದಿನ ಬೆಳವಣಿಗೆಗೆ ಬೇಕಾದ ಅನುದಾನವನ್ನು ನೀಡುವ, ಕಾಪರ್ೊರೇಟ್ ವಲಯದ ಹಣವನ್ನು ಕೊಡಿಸುವ ಭರವಸೆ ಕೊಟ್ಟರು. ಇಡಿಯ ತಂಡ ಮತ್ತು ಸ್ಥಳೀಯರು ಅದೆಷ್ಟು ಕ್ರಿಯಾಶೀಲರಾದರೆಂದರೆ ಹಿಂದೆ ಬಿದ್ದು ಅನುದಾನವನ್ನು ತರಿಸಿಕೊಂಡರು. ಈಗ ಆ ಕಪಿಲಾ ಬಾವಿಯ ಸ್ವರೂಪವೇ ಬದಲಾಗುತ್ತಿದೆ! ತೆಗೆದಷ್ಟೂ ನೀರು ಅದರಿಂದ ಉಕ್ಕುತ್ತಿದೆ. ಒಂದು ಕಾಲದಲ್ಲಿ ಕುಡಿಯುವ ನೀರಿನ ಸ್ರೋತವಾಗಿದ್ದ ಈ ಬಾವಿಯನ್ನು ನಾವೇ ಹಾಳುಮಾಡಿಕೊಂಡು ಇಂದು ನೀರಿಗಾಗಿ ಪ್ರತಿಭಟನೆ ಮಾಡುವ ಹಂತಕ್ಕೆ ಬಂದು ನಿಂತಿದ್ದೇವಲ್ಲಾ, ಭಗವಂತ ಕ್ಷಮಿಸಲಾರ! ಅಂತಹ ಹೊತ್ತಲ್ಲೇ ತಮ್ಮ ಪ್ರಯತ್ನದಿಂದ ಕಲ್ಯಾಣಿ ಸ್ವಚ್ಛತೆಯನ್ನು ಆರಂಭಿಸಿ, ಅಧಿಕಾರಿಗಳನ್ನೂ ಮಂತ್ರಿ ಮಾಗದರನ್ನು ಮಣಿಸಿಕೊಂಡು ತರುಣರು ಮತ್ತು ಸ್ಥಳೀಯರು ತೋರಿಸದ ಆದರ್ಶ ನಿಜಕ್ಕೂ ಮೆಚ್ಚುವಂಥದ್ದು.

ಅಲ್ಲಿಗೆ ಭೇಟಿ ಕೊಟ್ಟಾಗ ನನ್ನ ಹೃದಯದೊಳಗೆ ಆನಂದದ ಬುಗ್ಗೆಯನ್ನು ಚಿಮ್ಮಿಸಿದ್ದೇನು ಗೊತ್ತೇ? 75 ರ ಹಿರಿಯರೊಬ್ಬರು ಹೊಸ ತಾರುಣ್ಯದ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ಭಾರತ ಬದಲಾಗುವ ಖಾತ್ರಿ ನನಗೀಗಿದೆ ಎಂದದ್ದು. ಭಾರತವನ್ನು ಸದಾ ಜರಿಯುತ್ತಾ ತಾರುಣ್ಯವನ್ನು ಕಟಕಿಯಾಡುತ್ತಾ ಕುಳಿತಿರುತಿದ್ದ ಆ ಹಿರಿಯರು, ತರುಣರ ಸಾಂಘಿಕ ಪ್ರಯತ್ನವನ್ನು ಕಂಡು ಬೆನ್ತಟ್ಟಿದ್ದು ಬದಲಾವಣೆಯ ಪರ್ವ! ಎಲ್ಲರೂ ಒಟ್ಟಾಗಿ ಸೇರುತ್ತಿರುವ ಶ್ರೀನಗರದ ಅಷ್ಟೂ ಜನತೆ ಸಂತೋಷದಿಂದ ಹೇಳಿದ್ದೇನು ಗೊತ್ತೇ? ‘ನಮ್ಮ ನಡುವೆ ಇದ್ದ ವೈಮನಸ್ಸನ್ನು ಕಪಿಲಾ ಬಾವಿ ಸ್ವಚ್ಛತೆಗೆಂದು ಬಂದ ತರುಣರು ಹೊಡೆದೋಡಿಸಿಬಿಟ್ಟರು. ನಾವಿಂದು ಒಟ್ಟಾಗಿದ್ದೇವೆ. ಈ ನಗರದ ಬೆಳವಣಿಗೆಗೆ ಮತ್ತು ನಾಡಿನ ಬೆಳವಣಿಗೆಗೆ ಜೊತೆಯಾಗಿ ನಿಲ್ಲಬೇಕೆಂಬ ನಿಧರ್ಾರಕ್ಕೆ ಬಂದಿದ್ದೇವೆ’ ಎಂದು. ಈ ಮಾತನ್ನು ಅವರು ಹೇಳುವಾಗ ಹೆಮ್ಮೆ ಎನಿಸುತ್ತಿತ್ತು.

ಆಗಬೇಕಾದ್ದು ಇಷ್ಟೇ. ದೇಶದ ಸಾಮಾನ್ಯ ಜನರೊಳಗೆ ಭರವಸೆ ಮೂಡಿಸಬೇಕಿದೆ. ಗುಲಾಮಿ ಮಾನಸಿಕತೆಯ ಚಿಂತನೆಯಿಂದ ಹೊರಗೆಳೆದುಕೊಂಡು ಬರಬೇಕಿದೆ. ಅದಕ್ಕೆ ಅಧಿಕಾರಿಗಳಿಗೆ, ಆಳುವವರಿಗೆ ಡೊಗ್ಗು ಸಲಾಮು ಹೊಡೆದರಾಗುವುದಿಲ್ಲ. ಬದಲಾವಣೆಯ ಹರಿಕಾರರಾಗಿ ನಾವೇ ನಿಲ್ಲಬೇಕಿದೆ. ಬನ್ನಿ ಜೊತೆಯಾಗೋಣ!

Click to comment

Leave a Reply

Your email address will not be published. Required fields are marked *

Most Popular

To Top