Tech

ವಾಟ್ಸಪ್ ನ ಈ ಬದಲಾವಣೆಗಳು ನಿಮ್ಮ ಕಿರಿ ಕಿರಿಯನ್ನು ಖಂಡಿತ ತಪ್ಪಿಸಲಿದೆ!

ಫೇಕ್ ನ್ಯೂಸ್ ಹರಡುವುದನ್ನು ತಡೆಯಲೆಂದೇ ವಾಟ್ಸಪ್ ಹೊಸ‌ feature ಒಂದನ್ನು ಘೋಷಿಸಿದೆ. ವಾಟ್ಸಪ್ ಬಳಕೆದಾರರು ಒಂದು ಬಾರಿಗೆ ಮೆಸೇಜನ್ನು ಕೇವಲ ಐವರಿಗೆ ಮಾತ್ರವೇ forward ಮಾಡಬಹುದು. ಇದಕ್ಕೂ ಮುನ್ನ ಒಂದೇ ಸಮಯಕ್ಕೆ ಎಷ್ಟು ಜನರಿಗೆ ಬೇಕಾದರೂ ಮೆಸೇಜನ್ನು ಕಳಿಸಬಹುದಿತ್ತು. ಫೇಕ್ ನ್ಯೂಸ್ ಗಳಂತೂ ಕ್ಷಣ ಮಾತ್ರದಲ್ಲಿ ಹರಿದಾಡುತ್ತಿದ್ದವು.

ಎಲ್ಲ ಬಳಕೆದಾರರಿಗೂ ಉಪಯೋಗವಾಗುವಂತೆ forward ಮಾಡುವ ನಿಯಮವನ್ನು ಗೊತ್ತುಮಾಡುವುದಾಗಿ ವಾಟ್ಸಪ್ ತಿಳಿಸಿದೆ.‌ ಭಾರತದಲ್ಲಿ ಬೇರೆಲ್ಲ ದೇಶಕ್ಕೆ ಹೋಲಿಸಿದರೆ ಮೆಸೇಜ್ ಗಳನ್ನು, ಫೋಟೊ, ವಿಡಿಯೊಗಳನ್ನು forward ಮಾಡುವವರ ಸಂಖ್ಯೆ ಹೆಚ್ಚು. ಒಮ್ಮೆಗೇ 5 ಚಾಟ್ ಗಳನ್ನಷ್ಟೇ ಮಾಡಬಹುದಾದ feature ಅನ್ನು ತರಲೂ ಯೋಚಿಸುತ್ತಿದೆ ವಾಟ್ಸಪ್. Quick forward button ಅನ್ನು ತೆಗೆಯುವುದರ‌ ಕುರಿತೂ ಯೋಚಿಸುತ್ತಿದೆ.

ವಾಟ್ಸಪ್ ಅನ್ನು ಖಾಸಗಿ ಮೆಸೇಜಿಂಗ್ ಆ್ಯಪ್ ಆಗಿ ಮಾಡಲು ಇದು ಸಹಾಯ ಮಾಡುತ್ತದೆ ಎಂದು ವಾಟ್ಸಪ್ ಅನ್ನು ಕೊಂಡುಕೊಂಡಿರುವ ಫೇಸ್ ಬುಕ್ ತಿಳಿಸಿದೆ.‌

ಇತ್ತೀಚೆಗಷ್ಟೇ ವಾಟ್ಸಪ್, ಮೆಸೇಜು ಇನ್ನೊಬ್ಬರಿಂದ forward ಮಾಡಿದ್ದೋ ಅಲ್ಲವೋ ಎಂದು ತೋರಿಸುವ feature ಅನ್ನು ತಂದಿತ್ತು. ಈ ಎಲ್ಲ feature ಗಳೂ ವಾಟ್ಸಪ್ ಗಳಲ್ಲಿ ಹರಿದಾಡುವ ಫೇಕ್ ನ್ಯೂಸ್ ಗಳನ್ನು ತಡೆಗಟ್ಟಲು ಮಾಡಲಾಗಿದೆ.

ವಾಟ್ಸಪ್ ಗ್ರೂಪುಗಳ ವಿಚಾರದಲ್ಲೂ ಇತ್ತೀಚೆಗೆ ಒಂದಷ್ಟು ಬದಲಾವಣೆಯನ್ನು ತರಲಾಗಿತ್ತು. ಮೊದಲು ಗ್ರೂಪಿನ description ಅನ್ನು ಯಾರು ಬೇಕಾದರೂ ಬದಲಿಸಬಹುದಿತ್ತು.‌ ಆದರೀಗ ಅಡ್ಮಿನ್ ಗೆ ಮಾತ್ರವೇ ಈ ಅವಕಾಶವನ್ನು ನೀಡಿಲಾಗಿದೆ. ಬೇರೆಯವರು ಗ್ರೂಪಿನ ಮಾಹಿತಿಯಲ್ಲಿ ಬದಲಾವಣೆ ತರಬೇಕೆಂದರೆ ಅಡ್ಮಿನ್ ನ ಅನುಮತಿ‌ ಪಡೆದೇ ಮಾಡಬೇಕು.

Click to comment

Leave a Reply

Your email address will not be published. Required fields are marked *

Most Popular

To Top