National

ಲವ್ ಜಿಹಾದಿನ ಪರಿಣಾಮ ಏನಾಗುತ್ತದೆ ಗೊತ್ತೇನು!!?

ಒಂದು ವಾರದ ಹಿಂದೆ ದೆಹಲಿಯ ಓಕ್ಲಾ ಟ್ಯಾಂಕ್ ಬಳಿ ಸಿಕ್ಕಿದ್ದ ಜೂಹಿ ಎಂಬ ಯುವತಿಯ ಶವಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಜಿದ್ ಆಲಿ ಅನ್ಸಾರಿ (26) ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಅವನ ಸಹೋದರರಾದ ಇಸ್ತೇಯಾಕ್ ಮತ್ತು ಹಸ್ಮತ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ

ಜೂಹಿ ಎಂಬ ಹಿಂದೂ ಯುವತಿ ಮೂಲತಃ ಬಿಹಾರದವಳಾಗಿದ್ದು ಹದಿಹರೆಯದ ದಿನಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಾಜಿದ್ ಆಲಿ ಅನ್ಸಾರಿ ಎಂಬ ಮುಸ್ಲಿಂ ಯುವಕನ
ಮೋಸದ ಪ್ರೀತಿಯ ಜಾಲಕ್ಕೆ ಬಿದ್ದಿದ್ದಳು. ಪ್ರೀತಿಯ ಆಳದಲ್ಲಿ ಮುಳುಗಿದ ಜೂಹಿ ತನ್ನ ಹೆತ್ತವರನ್ನೇ ಧಿಕ್ಕರಿಸಿ ಆ ಯುವಕನನ್ನು ಮದುವೆಯಾಗಿ ಇದೀಗ ಬದುಕನ್ನೇ ಮುಳುಗಿಸಿಕೊಂಡು ದುರಂತ ಅಂತ್ಯ ಕಂಡಿದ್ದಾಳೆ.

ಸಾಜೀದ್, ಜೂಹಿಯನ್ನು ಮದುವೆಯಾಗಿ ಕೆಲಕಾಲ ಸಂಸಾರ ನಡೆಸಿ ಮಕ್ಕಳಾದ ಮೇಲೆ ತನ್ನ ವರಸೆ ಶುರು ಮಾಡಿಕೊಂಡಿದ್ದ. ನಂಬಿ ಬಂದವಳಿರುವಾಗಲೇ ಇನ್ನೊಬ್ಬ ಹೆಣ್ಣಿನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡ. ಜೂಹಿಗೆ ಪ್ರತಿನಿತ್ಯ ಕಿರುಕುಳದ ಜೊತೆಗೆ ಹಲ್ಲೆ ನಡೆಸಲು ಪ್ರಾರಂಭಿಸಿದ. ಜೂಹಿಗೆ ತನ್ನ ಪರಿಸ್ಥಿತಿಯನ್ನು ಹೇಳಿಕೊಳ್ಳಲು ಇತ್ತ ಹೆತ್ತವರೂ ಇಲ್ಲ, ಸಂಬಂಧಿಕರೂ ಇಲ್ಲವಾಗಿತ್ತು. ಅನಿವಾರ್ಯವಾಗಿ ಪತಿಯೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು. ಆದರೂ ಸಹ ಕ್ಷುಲ್ಲಕ ಕಾರಣಕ್ಕಾಗಿ ಅನ್ಸಾರಿಯು ಅವಳನ್ನು ತುಂಡು ತುಂಡಾಗಿ ಕತ್ತರಿಸಿ ಬೀದಿ ಹೆಣವನ್ನಾಗಿ ಮಾಡಿದ್ದಾನೆ.
ಜೂಹಿಯ ಮಕ್ಕಳು ಸಹಜವಾಗಿ ಗಾಢ ನಿದ್ರೆಯಲ್ಲಿರುವಾಗ ಜೂಹಿ ಮಾತ್ರ ಬಲವಂತವಾಗಿ ಚಿರನಿದ್ರೆಗೆ ತಳ್ಳಲ್ಪಟ್ಟಳು!

ಇಂತಹ ಇನ್ನೂ ಅದೆಷ್ಟು ಭಯಾನಕತೆಯನ್ನು ತನ್ನೊಡಲೊಳಗೆ ಹುದುಗಿಸಿಟ್ಟುಕೊಂಡಿದೆಯೋ ಏನೋ ಈ ಕರಾಳ ಕೂಪ ಲವ್ ಜಿಹಾದ್! ಕೇವಲ ಬೆರಳೆಣಿಕೆಯಷ್ಟು ಮಾತ್ರ ಬೆಳಕಿಗೆ ಬರುತ್ತಿವೆ.

ರೋಚಕ ಶೈಲಿಯಲ್ಲಿ ಪ್ರಕರಣ ಭೇದಿಸಿದ ಪೊಲೀಸರು:-
ಪೊಲೀಸ್ ಆಯುಕ್ತರು ಹೇಳುವ ಪ್ರಕಾರ, ಮೊದಲಿಗೆ ಈ ಪ್ರಕರಣವೇ ನಮಗೆ ಸವಾಲಾಗಿತ್ತು. ಅಸಲಿಗೆ ಶವವನ್ನು ಗುರುತೇ ಸಿಗದ ರೀತಿಯಲ್ಲಿ ಕತ್ತರಿಸಿ ಹಾಕಲಾಗಿತ್ತು. ಶವ ಸಿಕ್ಕಿರುವ ಕರ್ಟನ್ ಬಾಕ್ಸ್ ಒಂದೇ ಸಣ್ಣ ಸುಳಿವಾಗಿ ಸಿಕ್ಕಿತ್ತು.
ಆ ಸಣ್ಣ ಸುಳಿವೇ ಇಡೀ ಪ್ರಕರಣಕ್ಕೆ ಮಹತ್ವದ ದಿಕ್ಕು ತೋರಿಸಿತು ಜೊತೆಗೆ ಅದರ ಮೇಲಿದ್ದ ಕೊರಿಯರ್ ವಿಳಾಸದ ಟ್ಯಾಗ್!

ಅದು ಗುರಗಾಂವ್ ಜಿಲ್ಲೆಯ ಕೊರಿಯರ್ ಕಂಪೆನಿ. ಅಲ್ಲಿ ವಿಚಾರಿಸಲಾಗಿ ತಿಳಿದು ಬಂದದ್ದು ಆ ಕರ್ಟನ್ ಬಾಕ್ಸ್, ಯು.ಎ.ಇ. ದೇಶದಿಂದ ಇಲ್ಲಿನ ಅಲೀಘರ್ ನಲ್ಲಿರುವ ಜಾವೇದ್ ಅಕ್ತರ್ ಎಂಬ ವ್ಯಕ್ತಿಗೆ ಕಳುಹಿಸಲಾಗಿತ್ತು.

ಕೂಡಲೇ ಆ ವ್ಯಕ್ತಿಯನ್ನು ಸಂಪರ್ಕಿಸಲು ಒಂದು ತನಿಖಾ ತಂಡವನ್ನು ಅಲೀಘರ್ ಗೆ ಕಳುಹಿಸಲಾಯಿತು. ಆ ವ್ಯಕ್ತಿ ನೀಡಿರುವ ಹೇಳಿಕೆ ಪ್ರಕಾರ, ಯು.ಎ.ಇ ದೇಶದಿಂದ ಒಂದಷ್ಟು ಸಾಮಾನುಗಳನ್ನು ತರಿಸಿಕೊಂಡಿದ್ದು ಅದರಲ್ಲಿ ಕರ್ಟನ್ ಬಾಕ್ಸ್ ಮಾತ್ರ ಜಾಮಿಯಾ ನಗರದಲ್ಲಿರುವ ಶಹೀನ್ ಬಾಗ್ ಎಂಬ ತನ್ನ ಅಪಾರ್ಟ್ ಮೆಂಟ್ ನಲ್ಲಿ ಇದೆ ಮತ್ತು ಆ ಅಪಾರ್ಟ್ ಮೆಂಟ್ ಸಾಜೀದ್ ಅಲಿ ಅನ್ಸಾರಿ ಎಂಬ ವ್ಯಕ್ತಿಗೆ ಬಾಡಿಗೆಗೆ ಕೊಡಲಾಗಿದೆ”.

ಕೂಡಲೇ ತನಿಖಾ ತಂಡ ಆ ಅಪಾರ್ಟ್ ಮೆಂಟಿಗೆ ಹೋಗಿ ನೋಡಲು ಅನ್ಸಾರಿಯು ಆತುರದಿಂದ ರೂಂ ಖಾಲಿ ಮಾಡಿ ಪಕ್ಕದ ಮನೆಯವರ ಬಳಿ ಕೀ ಕೊಟ್ಟು ಅದಾಗಲೇ ತೆರಳಿ ದಿನಗಳೇ ಕಳೆದಿದ್ದವು.

ಪೊಲೀಸರು ಕೊಠಡಿಯನ್ನು ತೆರೆದು ಒಳ ಪ್ರವೇಶಿಸಿದಾಗ ಜೂಹಿಯ ರಕ್ತದ ಕಲೆಗಳು, ಅನ್ಸಾರಿಗೆ ಸಂಬಂಧಪಟ್ಟ ಸಾಕ್ಷಿಗಳು ದೊರೆತಿವೆ. ಸಹೋದರನ ಮನೆಯಲ್ಲಿ ಅಡಗಿದ್ದ ಅನ್ಸಾರಿಯನ್ನು ಕೂಡಲೇ ಪೊಲೀಸರು ಬಂಧಿಸಲು ತನ್ನೆಲ್ಲಾ ಕೃತ್ಯವನ್ನು ಈ ರೀತಿಯಾಗಿ ಒಪ್ಪಿಕೊಂಡಿದ್ದಾನೆ.

;ಜೂನ್ 21 ರಂದು ಜೂಹಿಯನ್ನು ಕೊಂದು ಶವವನ್ನು ತನ್ನ ಒಬ್ಬ ಸಹೋದರ ಇಸ್ತೇಯಾಕ್ ಸಹಾಯದಿಂದ ಮನೆಯ ಶೌಚಾಲಯಕ್ಕೆ ಎಳೆದೊಯ್ದು ತುಂಡು ತುಂಡಾಗಿ ಕತ್ತರಿಸಿ ಕರ್ಟನ್ ಬಾಕ್ಸ್ ಹಾಗೂ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ನಂತರ ಇನ್ನೊಬ್ಬ ಸಹೋದರ ಹಸ್ಮತ್ ಸಹಾಯದಿಂದ ಕಾರಿನಲ್ಲಿ ಶವವನ್ನು ಸಾಗಿಸಿ ದೂರಕ್ಕೆ ಎಸೆಯಲಾಗಿತ್ತು”

ಸದ್ಯ ಅನ್ಸಾರಿ ಹಾಗೂ ಸಹೋದರರನ್ನು ಬಂಧಿಸಿರುವ ಪೊಲೀಸರು ಜೂಹಿಯ ಹೆತ್ತವರಿಗೆ ವಿಷಯ ತಿಳಿಸಿದ್ದಾರೆ. ಆಕೆಯ ಮಕ್ಕಳನ್ನು ಸಂಬಂಧಿಕರ ಸುಪರ್ದಿಗೆ ವಹಿಸಲಾಗಿದೆ.

ಲವ್ ಜಿಹಾದ್ ಬಗ್ಗೆ ಅರಿವಿದ್ದೂ ತಪ್ಪು ಮಾಡಿದವಳು ತನ್ನ ಬದುಕನ್ನೇ ಹಾಳು ಮಾಡಿಕೊಂಡರೆ, ತಮ್ಮದಲ್ಲದ ತಪ್ಪಿಗೆ ಹೆತ್ತವರು ಮಗಳನ್ನು ಕಳೆದುಕೊಂಡರು.
ಜಗತ್ತನ್ನೇ ಅರಿಯದ ಆಕೆಯ ಮಕ್ಕಳು ತಬ್ಬಲಿಯಾದರು.

-ಶ್ರೀನಾಥ್ ಮಾನೆ

Click to comment

Leave a Reply

Your email address will not be published. Required fields are marked *

Most Popular

To Top