National

ರೈಲ್ವೇ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ಅಭಿವೃದ್ಧಿಗೊಳಿಸಲು ನಿರ್ಧಾರ!!

ಭಾರತೀಯ ರೈಲ್ವೆ 2019 ರಲ್ಲಿ ಭಾರತದಾದ್ಯಂತ 50 ರೈಲ್ವೇ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲು ನಿಶ್ಚಯಿಸಿದೆ. ಇದಕ್ಕೆ 7500 ಕೋಟಿ ರೂಪಾಯಿಗಳ ಬಂಡವಾಳವನ್ನೂ ಸಹ ಸರ್ಕಾರ ಬೊಡಿಗಡೆ ಮಾಡಿದೆ.

ಆಧುನೀಕರಣದ ಅಡಿಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಬರುವ ದಾರಿ ಮತ್ತು ಹೋಗುವ ದಾರಿಯನ್ನು ಬೇರೆ ಬೇರೆ ಮಾಡಲು ನಿಶ್ಚಯಿಸಿದ್ದಾರೆ. ಇದರಿಂದ ಸುರಕ್ಷತೆ ಹೆಚ್ಚಾಗುತ್ತದೆ ಮತ್ತು ನಿರ್ವಹಣೆಯೂ ಸುಲಭವಾಗುತ್ತದೆ.

ಹಲವು ನಿಲ್ದಾಣಗಳಲ್ಲಿ ಒಳಬರುವ ಮತ್ತು ಹೊರಹೋಗುವ ದಾರಿ ಬೇರೆ ಬೇರೆಯೇ ಮಾಡಲಾಗುತ್ತದೆ. ಆದರೆ ಜನರು ಹೆಚ್ಚು ಓಡಾಡುವ ನಿಲ್ದಾಣಗಳಲ್ಲಿ ಇದನ್ನು ಮೊದಲು ಇದ್ದಂತೆಯೇ ಇರಿಸಲಾಗುತ್ತದೆ ಎಂದು ಐ.ಆರ್.ಸಿ.ಡಿ.ಸಿ ಯ ಮ್ಯಾನೇಜಿಂಗ್ ಡೈರೆಕ್ಟರ್ ಎಸ್.ಕೆ ಲೋಹಿಯಾ ಅವರು ತಿಳಿಸಿದ್ದಾರೆ. ‘ಸಿಗುವ ಜಾಗದ ಆಧಾರದ ಮೇಲೆ ನಾವು ಒಳಬರುವ ಮತ್ತು ಹೊರಹೋಗುವ ದಾರಿಯನ್ನು ಬೇರೆ-ಬೇರೆ ಮಾಡಬೇಕೋ ಅಥವಾ ಇರುವ ಜಾಗದಲ್ಲಿಯೇ ಬೇರೆ ರೀತಿ ವ್ಯವಸ್ಥೆ ಮಾಡಬೇಕೋ ನಿರ್ಧರಿಸುತ್ತೇವೆ’ ಎಂದವರು ತಿಳಿಸಿದ್ದಾರೆ.

ಅದಾಗಲೇ ಗಾಂಧಿನಗರ್, ಹಬೀಬ್ ಗಂಜ್, ಚಾರ್ ಬಾಘ್ ಮತ್ತು ಗೋಮಿಟ್ ನಗರ್ ನಲ್ಲಿ ಕೆಲಸ ಮಾರ್ಚ್ 2019 ರ ವೇಳೆಗೆ ಪೂರ್ಣಗೊಳ್ಳಲಿದೆ. ಉಳಿದ 43 ನಿಲ್ದಾಣಗಳಿಗೆ ಕೆಲಸವನ್ನು ಪ್ರಾರಂಭಿಸುವ ಕಾರ್ಯವೂ ನಡೆದಿದೆ.

ನಾಗಪುರ್, ಬೈಯ್ಯಪ್ಪನಹಳ್ಳಿ, ಅಮೃತ್ ಸರ್, ಗ್ವಾಲಿಯರ್, ಸಾಬರಮತಿ ಮತ್ತು ಥಾಕುರ್ಲಿ ನಿಲ್ದಾಣಗಳ ಅಭಿವೃದ್ಧಿ ಕಾರ್ಯವನ್ನು ನೀಡಲು ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.

ಸದ್ಯ ಈಗ ಭಾರತೀಯ ರೈಲ್ವೆ ಗೂಗಲ್ ನೊಡನೆ ಸೇರಿಕೊಂಡು ಭಾರತದಾದ್ಯಂತ 700 ಕ್ಕೂ ಹೆಚ್ಚು ರೈಲ್ವೇ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯವನ್ನು ಒದಗಿಸುತ್ತಿದೆ. ಟಾಟಾ ಗ್ರೂಪ್ ನೊಡನೆ ಒಪ್ಪಂದ ಮಾಡಿಕೊಂಡಿರುವ ಭಾರತೀಯ ರೈಲ್ವೇ 4000 ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಕೊಡಲು ನಿರ್ಧರಿಸಿದೆ.

Click to comment

Leave a Reply

Your email address will not be published. Required fields are marked *

Most Popular

To Top