National

ರಾಹುಲ್ ಒಳ್ಳೆಯ ಹಿಂದುವೋ, ಕೆಟ್ಟವನೋ?!

ಈ ಪ್ರಶ್ನೆ ಇಂದು ಇಡೀ ದೇಶ ಕೇಳುತ್ತಿದೆ. ಅದಕ್ಕೆ ಕಾರಣ ಕಾಂಗ್ರೆಸ್ಸಿನ ಲೋಕಸಭಾ ಸದಸ್ಯ ಶಶಿತರೂರ್. ತರೂರ್ ಇತ್ತೀಚೆಗೆ ದ ಹಿಂದೂ ಲಿಟರೇಚರ್ ಫಾರ್ ಲೈಫ್ ಡೈಲಾಗ್ನಲ್ಲಿ ‘ಭಾರತ; ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಚಾರದ ಕುರಿತ ಸಂವಾದದಲ್ಲಿ ಇಂತಹ ಅನೇಕ ಗೊಂದಲಕಾರಿ ಹೇಳಿಕೆಗಳನ್ನು ನೀಡಿಬಿಟ್ಟಿದ್ದಾರೆ. ಗೋಪಾಲ್ಕೃಷ್ಣ ಗಾಂಧಿಯವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ತರೂರು ‘ಬಹುಪಾಲು ಹಿಂದೂಗಳು ರಾಮನ ಜನ್ಮಸ್ಥಳ ಅಯೋಧ್ಯೆ ಎಂದೇ ಭಾವಿಸುತ್ತಾರಾದರೂ ಯಾವ ಒಳ್ಳೆಯ ಹಿಂದುವೂ ಅಲ್ಲಿ ರಾಮಮಂದಿರ ಕಟ್ಟುವುದನ್ನು ಇಷ್ಟಪಡಲಾರ’ ಎಂದು ಹೇಳಿಕೆ ನೀಡಿಬಿಟ್ಟಿದ್ದಾರೆ! ಆ ಅರ್ಥದಲ್ಲಿ ನೋಡುವುದಾದರೆ ರಾಮಮಂದಿರ ಆಗಲೇಬೆಕೆಂದು ಬಯಸುತ್ತಿರುವ ಈ ದೇಶದ 99 ಪ್ರತಿಶತ ಹಿಂದೂಗಳು ತರೂರು ದೃಷ್ಟಿಯಲ್ಲಿ ಒಳ್ಳೆಯವರಲ್ಲವೆಂದಾಯ್ತು. ಅತ್ತ ರಾಹುಲ್ ಇದೇ ಹಿಂದೂಗಳ ವೋಟು ಪಡೆಯಲೆಂದು ತನ್ನನ್ನು ತಾನು ಶಿವಭಕ್ತನೆಂದುಕೊಂಡು, ಬ್ರಾಹ್ಮಣನೆಂದುಕೊಂಡು ಕೊನೆಗೆ ರಾಮಭಕ್ತನಾಗಿಯೂ ಕಾಣಿಸಿಕೊಂಡು ತಮ್ಮದ್ದೇ ಪಾಟರ್ಿಯಿಂದ ರಾಮ ವನ ಗಮನ ಪಥಯಾತ್ರಾ ಮಾಡಿಯೂ ಬಿಟ್ಟರಲ್ಲ. ಈಗಿರುವ ಪ್ರಶ್ನೆ ಕಾಂಗ್ರೆಸ್ಸಿನವರು ಒಳ್ಳೆಯ ಹಿಂದೂಗಳೋ ಕೆಟ್ಟ ಹಿಂದೂಗಳೋ ಮತ್ತು ಅವರಿಗೆ ವೋಟು ಬೇಕಿರುವುದು ಒಳ್ಳೆಯ ಹಿಂದುಗಳಿಂದಲೋ ಕೆಟ್ಟ ಹಿಂದೂಗಳಿಂದಲೋ ಎಂಬುದು ಮಾತ್ರ.


ತರೂರ್ ಹೇಳಿರುವಂತಹ ಒಟ್ಟಾರೆ ಮಾತು ಹಾಸ್ಯಾಸ್ಪದವಾಗಿಯೇ ಇದೆ. ಯಾರೊಬ್ಬರ ಪ್ರಾರ್ಥನಾ ಮಂದಿರವನ್ನು ಧ್ವಂಸಗೊಳಿಸಿ ತನ್ನ ಮಂದಿರ ನಿಮರ್ಿಸುವುದನ್ನು ಹಿಂದೂ ಒಪ್ಪಲಾರ ಎಂದಿದ್ದಾರೆ. ಬಾಬ್ರಿ ಮಸೀದಿ ನಿಮರ್ಾಣವಾಗಿರುವುದು ಹೇಗೆಂಬುದರ ಕಥೆ ಅವರಿಗೆ ಗೊತ್ತಿರಬೇಕಿತ್ತಲ್ಲ. ಬಾಬರ್ನ ಸೇನಾಧಿಪತಿ ಭವ್ಯವಾಗಿದ್ದ ರಾಮಮಂದಿರವನ್ನು ಕೆಡವಿ ಅದರ ಮೇಲೆಯೇ ಮಸೀದಿಯನ್ನು ನಿಮರ್ಿಸಿದ ಎಂಬುದನ್ನು ಪುರಾತತ್ವ ಇಲಾಖೆಯವರ ಉತ್ಖನನದಿಂದ ಸಾಬೀತುಪಡಿಸಲಾಯ್ತಲ್ಲ! ಅಂದಮೇಲೆ ಮಸೀದಿಯನ್ನು ಒಡೆದು ಮಂದಿರ ಕಟ್ಟುವುದಲ್ಲ, ಬದಲಿಗೆ ಮಂದಿರ ಒಡೆದು ಮಸೀದಿ ನಿಮರ್ಾಣ ಮಾಡಿದ್ದರ ಅವಮಾನವನ್ನು ತೊಳೆದುಕೊಳ್ಳುವ ಪ್ರಯತ್ನ ರಾಮಮಂದಿರದ ನಿಮರ್ಾಣ ಅಷ್ಟೇ. ರಾಮಮಂದಿರದ ನಿಮರ್ಾಣ ಬರಿ ಪೂಜಾಗೃಹವೊಂದರ ನಿಮರ್ಿತಿಯ ಸಂಕೇತವಲ್ಲ. ಇದು ಹಿಂದುವೊಬ್ಬನ ಆತ್ಮಾಭಿಮಾನದ ಸಂಕೇತ. ಮಹಾತ್ಮ ಗಾಂಧೀಜಿ ಹೇಳುತ್ತಿದ್ದರಲ್ಲ, ‘ಎಲ್ಲಿಯವರೆಗೂ ಹಿಂದೂ ಹೇಡಿ ಇರುತ್ತಾನೋ ಅಲ್ಲಿಯವರೆಗೂ ಮುಸಲ್ಮಾನ ಗೂಂಡಾ ಇದ್ದೇ ಇರುತ್ತಾನೆ’ ಅಂತ. ಹಿಂದೂಗಳು ಅಸಹಾಯಕರಾಗಿದ್ದ ಹೊತ್ತಿನಲ್ಲಿ ರಾಕ್ಷಸರಂತೆರಗಿ ಬಾಬರಾದಿಗಳು ಮಂದಿರ ಧ್ವಂಸಗೊಳಿಸಿದ್ದರು. ಈಗ ಸಮರ್ಥನಾಗಿರುವ ಹಿಂದೂ ಅದೇ ಮಂದಿರವನ್ನು ಮರಳಿ ನಿಮರ್ಿಸುತ್ತಿದ್ದಾನೆಂದರೆ ಶಶಿತರೂರ್ರಂಥವರಿಗೆ ಅದೇಕೆ ಸಮಸ್ಯೆಯಾಗುವುದೋ ದೇವರೇ ಬಲ್ಲ. ಆದರೆ ಮಾತಿನ ಭರದಲ್ಲಿ ತರೂರು ಮಂದಿರ ನಿಮರ್ಾಣ ಖಾತ್ರಿ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಏಕೆಂದರೆ ಚುನಾವಣೆಗೂ ಮುನ್ನ ಮಂದಿರ ನಿಮರ್ಾಣದ ನೆಪದಲ್ಲಿ ಭಾಜಪ ಕೋಮು ಗಲಭೆಗಳನ್ನು ಉಂಟುಮಾಡಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಕೋಮುಗಲಭೆ ಉಂಟುಮಾಡುವ ಎಲ್ಲ ಪ್ರಯತ್ನಗಳನ್ನು ಕಳೆದ ಇಷ್ಟು ದಿನದಿಂದ ಕಾಂಗ್ರೆಸ್ಸು ಮತ್ತು ಅದರ ಪ್ರಗತಿಪರ ಮಿತ್ರ ಮಂಡಳಿಯೇ ಮಾಡಿರುವುದೆಂದು ಈಗ ದೇಶಕ್ಕೆ ಗೊತ್ತಿರದ ಸಂಗತಿಯೇನಲ್ಲ. ಭೀಮಾ ಕೋರೆಂಗಾವ್ ಗಲಾಟೆಯ ಹಿನ್ನೆಲೆಯಲ್ಲಿದ್ದವರೆಲ್ಲರೂ ಕಾಂಗ್ರೆಸ್ಸಿನ ಹಿತೈಷಿಗಳಾಗಿದ್ದು ಅದನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತಿದ್ದವರೇ ಎಂಬುದು ತನಿಖೆಗಳಿಂದ ದೃಢಪಟ್ಟಿದೆ. ಗುಜರಾತಿನಲ್ಲಿ ಬಿಹಾರಿಗಳ ವಿರುದ್ಧ ಜನ ದಂಗೆ ಏಳುವಂತೆ ಕಿಡಿ ಹಚ್ಚಿ ಹೊರಟಿದ್ದು ಕಾಂಗ್ರೆಸ್ಸಿನ ಶಾಸಕರೆಂಬುದು ವಿಡಿಯೊ ಟೇಪುಗಳಿಂದ ಬಹಿರಂಗಗೊಂಡಿದೆ. ದೇಶದಾದ್ಯಂತ ದಲಿತರನ್ನು ಎತ್ತಿಕಟ್ಟಿ ದಂಗೆ ಮಾಡಿಸುವ, ಮುಸಲ್ಮಾನರನ್ನು ಎತ್ತಿಕಟ್ಟಿ ಹೊಡೆದಾಡಿಸುವ ರಾಜ್ಯ-ರಾಜ್ಯಗಳ ನಡುವೆ ಕಿತ್ತಾಟ ನಡೆಸುವ, ಅನ್ಯ ಭಾಷಿಗರ ಸಮಸ್ಯೆಯನ್ನು ವ್ಯಾಪಕಗೊಳಿಸುವ, ದಕ್ಷಿಣ ಭಾರತದಲ್ಲಾದರೆ ಉತ್ತರ-ದಕ್ಷಿಣ ಎಂಬ ಭೇದವನ್ನು ತರುವ ಪ್ರಯತ್ನ ಇವೆಲ್ಲವೂ ಕಾಂಗ್ರೆಸ್ಸಿನ ಕದನ ಕೋಣೆಯಿಂದ ಹೊರಟಿದ್ದೆಂಬುದಕ್ಕೆ ಸಾಕ್ಷಿಗಳೂ ಲಭ್ಯವಿದೆ. ಆದ್ದರಿಂದಲೇ ಶಶಿತರೂರ್ ಮಾತಿಗೆ ಬಲುವಾದ ಬೆಲೆ ಬಂದಿರುವುದು. ರಾಮಮಂದಿರದ ಪರವಾದ ನಿರ್ಣಯ ಬಂದೊಡನೆ ಮುಸಲ್ಮಾನರನ್ನು ಎತ್ತಿಕಟ್ಟಿ ದಂಗೆಗೆ ಕಾಂಗ್ರೆಸ್ಸು ಸಿದ್ಧ ನಡೆಸಿದೆಯಾ ಎಂಬ ಪ್ರಶ್ನೆ ಈಗ ಖಂಡಿತವಾಗಿಯೂ ಕಾಡುತ್ತಿದೆ. ರಾಹುಲ್ ಇದಕ್ಕೀಗ ಉತ್ತರಿಸಲೇಬೇಕು.


ಶಶಿತರೂರ್ ಅಲ್ಲಿಗೇ ನಿಲ್ಲಲಿಲ್ಲ. ಜೆಎನ್ಯುನಲ್ಲಿ ಅಲ್ಲಿನ ಉಪಕುಲಪತಿಗಳು ಸೈನ್ಯಕ್ಕೊಂದು ಪತ್ರ ಬರೆದು ಕ್ಯಾಂಪಸ್ಸಿನಲ್ಲಿ ಯುದ್ಧಕ್ಕೆ ಬಳಸಿದ ಟ್ಯಾಂಕೊಂದನ್ನು ಇಡುವುದಕ್ಕೆ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು. ಅದು ವಿದ್ಯಾಥರ್ಿಗಳಲ್ಲಿ ರಾಷ್ಟ್ರಭಕ್ತಿಯನ್ನು ಉದ್ದೀಪಿಸುವ ಪ್ರಯತ್ನವಾಗಿತ್ತು. ಅದನ್ನು ಕಟುವಾಗಿ ಟೀಕಿಸಿರುವ ತರೂರ್ ಇದು ಸರಿಯಲ್ಲವೆಂದು ಜರಿದಿದ್ದಾರೆ. ಮತ್ತದೇ ಪ್ರಶ್ನೆ ರಾಹುಲ್ಗೆ. ಸೈನ್ಯದ ಸಾಹಸವನ್ನು ಅಭಿನಂದಿಸುವುದು, ಸೈನಿಕರ ಹೌತಾತ್ಮ್ಯದ ಸಂಕೇತಗಳನ್ನು ಪೂಜಿಸುವುದು ಇವೆಲ್ಲಕ್ಕೂ ಕಾಂಗ್ರೆಸ್ಸಿನ ವಿರೋಧವಿದೆಯೇ ಅಥವಾ ಒಂದೇ ಮಾತಿನಲ್ಲಿ ಕೇಳಬೇಕೆಂದರೆ ಕಾಂಗ್ರೆಸ್ಸಿಗೆ ದೇಶಭಕ್ತಿಯೇ ಇಷ್ಟವಿಲ್ಲವೇ? ರಾಹುಲ್ ಉತ್ತರಿಸಬೇಕು.

ಪ್ರಶ್ನೆ ಕೇಳುತ್ತಿದ್ದ ಗಾಂಧಿ ಇಂದಿನ ಸಕರ್ಾರದ ಎಲ್ಲ ಸಮಸ್ಯೆಗಳಿಗೂ ಯುಪಿಎ ಸಕರ್ಾರದಲ್ಲೂ ಅಂಥದ್ದೇ ಸಮಸ್ಯೆ ಇದೆಯಲ್ಲಾ ಎಂದು ಕಾಲೆಳೆದರೆ ತರೂರು ನಿರ್ಲಜ್ಜವಾಗಿ ಸಮಥರ್ಿಸಿಕೊಂಡರು. ತಪ್ಪನ್ನು ಒಪ್ಪಿಕೊಳ್ಳುವ ಗುಣ ನಮಗಿದೆ ಎಂದರು. ಅಷ್ಟೇ ಅಲ್ಲ, ಎಮಜರ್ೆನ್ಸಿಯನ್ನು ಹೇರಿದ್ದು ನಿಜವಾದರೂ ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದೂ ತಾವೇ ಎಂಬ ಹೇಳಿಕೆಯನ್ನು ಕೊಟ್ಟು ಅಪಹಾಸ್ಯಕ್ಕೆ ಒಳಗಾದರು. ಒಟ್ಟಿನಲ್ಲಿ ಮೋದಿ ಮಾಡಿದ ಕೆಲಸವೆಂದರೆ ಕಾಂಗ್ರೆಸ್ಸಿಗರು ಸಿಖ್ಖರನ್ನು ಹತ್ಯೆಗೈದಿದ್ದು ತಾವೇ ಎಂಬುದನ್ನು ಒಪ್ಪಿಕೊಳ್ಳುವಂತಾಯ್ತು. ಎಮಜರ್ೆನ್ಸಿ ತಾವು ಮಾಡಿದ ತಪ್ಪು ಎಂಬುದನ್ನು ಮುಲಾಜಿಲ್ಲದೇ ಒಪ್ಪಿಕೊಳ್ಳುವಂತಾಯ್ತು. ಬಹುಶಃ ಇನ್ನೊಂದವಧಿ ಮೋದಿ ಕುಳಿತುಬಿಟ್ಟರೆ ಸುಭಾಷ್ ಚಂದ್ರಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿಯವರ ಹತ್ಯೆಯಲ್ಲೂ ತಮ್ಮ ಪಾತ್ರವಿದ್ದದ್ದು ಸತ್ಯವೆಂದು ಕಾಂಗ್ರೆಸ್ಸಿಗರು ಒಪ್ಪಿಕೊಂಡುಬಿಡುತ್ತಾರೇನೋ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top