National

ರಾಷ್ಟ್ರೀಯತೆಯ ಪರ್ವಕಾಲ!

ಭಾರತದ ವಾಯುದಾಳಿಯಲ್ಲಿ ಪಾಕಿಸ್ತಾನದವರು ಎಷ್ಟು ಜನ ಸತ್ತಿದ್ದಾರೆಂಬುದು ನಮ್ಮ ಅನೇಕ ರಾಜಕಾರಣಿಗಳಿಗೆ ಈಗಿರುವ ಯಕ್ಷ ಪ್ರಶ್ನೆ. ಆರಂಭದಲ್ಲಿ ವಾಯುದಾಳಿ ನಡೆದೇ ಇಲ್ಲವೆಂದು, ನಡೆದಿದ್ದರೂ ಅದು ಪಾಕಿಸ್ತಾನದ ಒಳಗೆ ನುಗ್ಗಿದ್ದಲ್ಲ, ಬದಲಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದದ್ದು ಎಂಬ ವಾದವನ್ನು ಮಂಡಿಸುತ್ತಿದ್ದ ಪ್ರತಿಪಕ್ಷಗಳು ಈಗ ತಮ್ಮ ವರಸೆಯನ್ನು ಸ್ವಲ್ಪ ಬದಲಾಯಿಸಿಕೊಂಡಿವೆ. ಪಾಕಿಸ್ತಾನದ ಒಳಗೆ ನುಗ್ಗಿ ಭಾರತದ ಸೇನೆ ಬಾಂಬ್ ದಾಳಿ ನಡೆಸಿದ್ದು ನಿಜ ಎಂಬುದು ಅವರಿಗೆ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿದೆ. ಹೀಗಾಗಿ ಅವರು ಸತ್ತವರೆಷ್ಟು ಮಂದಿ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಕಾಂಗ್ರೆಸ್ಸಿನ ನಾಯಕ ದಿಗ್ವಿಜಯ್ ಸಿಂಗ್ ಸತ್ತವರ ಭಾವಚಿತ್ರಗಳೇಕೆ ಇನ್ನೂ ಬಂದಿಲ್ಲ ಎಂದು ಪ್ರಶ್ನಿಸಿದ್ದು ಹಾಸ್ಯಾಸ್ಪದ! ಈ ನಡುವೆಯೇ ಸಲ್ಮಾನ್ ಖುಷರ್ಿದ್ ಈ ಎಲ್ಲಾ ದಾಳಿಯ ಶ್ರೇಯ ಕಾಂಗ್ರೆಸ್ಸಿಗೆ ಸಲ್ಲಬೇಕೆಂದು ಏಕೆಂದರೆ ವಿಂಗ್ ಕಮ್ಯಾಂಡರ್ ಅಭಿನಂದನ್ ಕಾಂಗ್ರೆಸ್ಸಿನ ಅವಧಿಯಲ್ಲೇ ಸೇನೆ ಸೇರಿದ್ದೆಂದು ಹೇಳಿ ಅಪಹಾಸ್ಯಕ್ಕೊಳಗಾಗಿದ್ದಾನೆ.


ಬಿಡಿ. ಇಡಿಯ ವಾಯುದಾಳಿಯನ್ನು ಬಿಜೆಪಿ ರಾಜಕೀಕರಣಗೊಳಿಸುತ್ತಿದೆ ಎಂದು ಆರೋಪಿಸಿತ್ತಲೇ ಕಾಂಗ್ರೆಸ್ಸು ಈ ದಾಳಿಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. ಈ ನಡುವೆ ಗಮನಿಸಲೇಬೇಕಾದ ಕೆಲವು ಸಂಗತಿಗಳಿವೆ. ದಾಳಿಯನ್ನು ಅಲ್ಲಗಳೆಯುತ್ತಾ ಬಂದಿದ್ದ ಪಾಕಿಸ್ತಾನ ಥೇಟು ಕಾಂಗ್ರೆಸ್ಸಿನಂತೆ ಆನಂತರ ದಾಳಿಯನ್ನು ಒಪ್ಪಿಕೊಂಡಿದೆ! ನಷ್ಟವೇನೂ ಆಗಿಲ್ಲವೆಂದು, ಸಾವು-ನೋವುಗಳು ಸಂಭವಿಸಿಯೇ ಇಲ್ಲವೆಂದು ಸಮಥರ್ಿಸಿಕೊಂಡು ಬಂದಿದ್ದ ಪಾಕಿಸ್ತಾನ ದಾಳಿ ನಡೆದ ಸ್ಥಳಕ್ಕೆ ಒಬ್ಬ ಪತ್ರಕರ್ತನನ್ನೂ ಬಿಡದಂತೆ ದಿಗ್ಬಂಧನ ವಿಧಿಸಿಬಿಟ್ಟಿದೆ. ಆದರೆ ಪ್ರತ್ಯಕ್ಷದಶರ್ಿಗಳನೇಕರು ಬಾಲಾಕೋಟ್ನಲ್ಲಿದ್ದ ಜೈಶ್-ಎ-ಮೊಹಮ್ಮದ್ನ ತರಬೇತಿ ತಾಣಗಳಲ್ಲಿ ಅಡಗಿದ್ದ ಪ್ರಮುಖ ಕಮ್ಯಾಮಂಡರ್ಗಳು ಸತ್ತಿರುವುದನ್ನು ದೃಢಪಡಿಸಿದ್ದಾರೆ. ಅಷ್ಟೇ ಅಲ್ಲದೇ ದಾಳಿ ನಡೆದ ಬೆಳಿಗ್ಗೆ ಹತ್ತಾರು ಆ್ಯಂಬುಲೆನ್ಸುಗಳು ಓಡಾಡುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನ ಈ ಘಟನೆ ನಡೆದೇ ಇಲ್ಲವೆಂಬಂತೆ ಬಿಂಬಿಸಿಕೊಳ್ಳಲು ದಾಳಿಗೆ ಸೀಳಿ ಹೋಗಿರುವ ಒಂದಷ್ಟು ಮರಗಳ ಚಿತ್ರಗಳನ್ನು ಹಂಚಿಕೊಂಡು ಭಾರತದ ಸೈನ್ಯವನ್ನು ಅಪಹಾಸ್ಯ ಮಾಡಲೆತ್ನಿಸಿತ್ತು. ಆದರೆ ಸೇನೆ ತಾವು ಬಳಸಿದ ಬಾಂಬುಗಳು ಇಸ್ರೇಲಿನ ವಿಶೇಷ ಮಾದರಿಯ ಬಾಂಬುಗಳಾಗಿದ್ದು ಅವು ಮನೆಯೊಳಗೆ ತಾರಸಿಯ ಮೂಲಕ ನುಗ್ಗಿ ಆನಂತರ ಸಿಡಿಯುವಂತವಾಗಿರುವುದರಿಂದ ಈ ರೀತಿ ಮರಗಳು ಬಿರುಕು ಬಿಡುವುದು ಸಾಧ್ಯವೇ ಇಲ್ಲವೆಂಬ ತಾಂತ್ರಿಕ ವರದಿಯನ್ನು ಮುಂದಿಟ್ಟವು!


ಪಾಕಿಸ್ತಾನ ಈಗ ಹಿಂದೆಂದಿಗಿಂತಲೂ ಭಯಾನಕವಾದ ಒತ್ತಡಕ್ಕೆ ಸಿಲುಕಿದೆ. ಮೊದಲೆಲ್ಲಾ ಶಾಂತಿ ಕಾಪಾಡಿಕೊಳ್ಳಿ ಎಂದು ನಾವು ಹೇಳುತ್ತಿದ್ದೆವು. ಈಗ ಪಾಕಿಸ್ತಾನ ಗೋಗರೆಯುತ್ತಿದೆ. ಅದರಲ್ಲೂ ಕಳೆದೆರಡು ದಿನಗಳಿಂದ ಮೌಲಾನಾ ಮಸೂದ್ ಅಜರ್ನ ಸಾವಿನ ಸುದ್ದಿ ಭಾರತದ ಮಾಧ್ಯಮವನ್ನೆಲ್ಲಾ ಆವರಿಸಿಕೊಂಡುಬಿಟ್ಟಿದೆ. ಮೌಲಾನಾ ಮಸೂದ್ ಅಜರ್ ಸತ್ತಿರುವುದೇ ಆದರೆ ಅದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು ಆತನ ಅಡಗುತಾಣದಿಂದ ಅಬೋಟಾಬಾದ್ನ ಸೇನಾನೆಲೆಗೆ ಹತ್ತಿರವಿರುವ ಬಾಲಾಕೋಟ್ಗೆ ಸ್ಥಳಾಂತರಿಸಿದರೆ ಒಳಿತೆಂದು ಸಕರ್ಾರವೇ ಅವನನ್ನು ಸ್ಥಳಾಂತರಿಸಿ ಈ ವಾಯುದಾಳಿಯಲ್ಲೇ ಅವನು ಮೃತಪಟ್ಟಿರಬಹುದು. ಅಥವಾ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಬಿಸಿಯ ಸಂದರ್ಶನದಲ್ಲಿ ಈ ದಾಳಿಯ ನಂತರ ಹೇಳಿಕೊಂಡಂತೆ ಆತ ಅನಾರೋಗ್ಯ ಪೀಡಿತನೂ ಆಗಿದ್ದಿರಬಹುದು. ಆನಂತರ ಬಂದ ಸುದ್ದಿಗಳು ಹೇಳುವ ಪ್ರಕಾರ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಆತ ಮುಂದೆ ಲಿವರ್ಅನ್ನು ಕಳೆದುಕೊಂಡು ಸತ್ತಿದ್ದಾನೆ ಅಂತ. ಇಡಿಯ ಈ ಪ್ರಕರಣಕ್ಕೆ ಇನ್ನೊಂದು ತಿರುವೂ ಇರಬಹುದು. ಒಸಾಮಾ ಬಿನ್ ಲ್ಯಾಡೆನ್ ಸತ್ತಿದ್ದಾನೆಂದು ಹತ್ತಾರು ಬಾರಿ ವರದಿಗಳು ಬಂದಿದ್ದವು. ಆ ಮೂಲಕ ಆತನ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನ ಅದು. ಈ ಪ್ರಕರಣವೂ ಅದರದ್ದೇ ಮುಂದುವರಿದ ಭಾಗ! ಮೌಲಾನಾ ಮಸೂದ್ ಸತ್ತುಹೋಗಿದ್ದಾನೆಂದುಬಿಟ್ಟರೆ ಪಾಕಿಸ್ತಾನದ ಮೇಲಿನ ಒತ್ತಡಗಳು ಕಡಿಮೆಯಾಗುತ್ತವೆ. ಭಾರತ ಕೆಲಕಾಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದರೂ ನಿಲ್ಲಿಸೀತು. ಇದು ಪಾಕಿಸ್ತಾನದ ಭಯೋತ್ಪಾದಕರ ಮೇಲಿನ ಹಿಡಿತವನ್ನು ಬಲಗೊಳಿಸುವ ಪ್ರಯತ್ನಕ್ಕೆ ಸಹಕಾರಿಯೂ ಆದೀತು. ಆದರೆ ಇವೆಲ್ಲವೂ ಭಯೋತ್ಪಾದಕರನ್ನು ಬಚಾವು ಮಾಡುವ ಹಳೆಯ ತಂತ್ರಗಾರಿಕೆಗಳಾದ್ದರಿಂದ ಈ ಬಾರಿ ಜಗತ್ತು ಮೋಸಗೊಳ್ಳುವುದು ಅನುಮಾನ!

ಸದ್ಯದಲ್ಲೇ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮೌಲಾನಾ ಮಸೂದ್ ಅಜರ್ನನ್ನು ಭಯೋತ್ಪಾದಕನೆಂದು ಘೋಷಿಸಿ ಜಗತ್ತೆಲ್ಲಾ ಅವನ ಹಿಂದೆ ಬೀಳುವ ಸಂದರ್ಭ ಹತ್ತಿರ ಬರುತ್ತಿದೆ. ಹಾಗೇನಾದರೂ ಆದರೆ ಅವನಿಗೆ ರಕ್ಷಣೆ ಕೊಡುತ್ತಿರುವ ಪಾಕಿಸ್ತಾನ ಅದಕ್ಕೆ ಮೊದಲ ಬಾಧ್ಯಸ್ಥನಾಗಬೇಕಾಗುತ್ತದೆ. ಇದು ಪಾಕಿಸ್ತಾನದ ಆಥರ್ಿಕ ಪರಿಸ್ಥಿತಿಯನ್ನು ಈಗಿನ ಸ್ಥಿತಿಗಿಂತಲೂ ಕೆಟ್ಟಸ್ಥಿತಿಗೊಯ್ಯಬಲ್ಲುದು. ಪಾಕಿಸ್ತಾನ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋಸರ್್ನ ದೃಷ್ಟಿಯಿಂದ ಕಪ್ಪುಪಟ್ಟಿಗೆ ಸೇರಲ್ಪಟ್ಟರೂ ಅಚ್ಚರಿ ಪಡಬೇಕಿಲ್ಲ.


ಪಾಕಿಸ್ತಾನ ಸದ್ಯಕ್ಕೆ ಪಾಠ ಕಲಿಯುವಂತೆ ಕಾಣದು. ಕಾಗರ್ಿಲ್ ಯುದ್ಧದ ನಂತರ ಭಾರತ ತನ್ನ ಹೋರಾಟದ ಹಾದಿಯನ್ನು ಸಾಕಷ್ಟು ಬದಲಿಸಿಕೊಂಡು ಪಾಕಿಸ್ತಾನದೆದುರು ಸಣ್ಣ ಪ್ರಮಾಣದ ಯುದ್ಧಕ್ಕೂ ಸಿದ್ಧವಾಗಿರುವಂತೆ ಸೇನೆಯನ್ನು ಸಿದ್ಧಪಡಿಸಿಬಿಟ್ಟಿದೆ. ಆದರೆ ಅವೆಲ್ಲವೂ ರಕ್ಷಣಾತ್ಮಕ ಯೋಜನೆಗಳೇ ಆಗಿದ್ದವು. ಮೊದಲ ಬಾರಿಗೆ ಬಾಲಾಕೋಟ್ನಲ್ಲಿ ವಾಯುದಾಳಿ ಮಾಡಿಸುವ ಮೂಲಕ ಭಾರತ ತನ್ನೊಳಗಿನ ಆಕ್ರಮಕ ಶಕ್ತಿಯನ್ನೂ ಪರಿಚಯಿಸಿದೆ. ಇದರ ಜೊತೆಗೆ ಭಾರತದ ಮೇಲೆ ಮರುದಿನ ಪಾಕಿಸ್ತಾನ ನಡೆಸಲು ಯತ್ನಿಸಿದ ವಾಯುದಾಳಿ ಭಾರತದ ಪಾಲಿಗೂ ಅಚ್ಚರಿ ಉಂಟುಮಾಡುವಂಥದ್ದೇ! ಭಾರತದ ವಾಯುನೆಲೆ ಪ್ರವೇಶಿಸಿದೊಡನೇ ಪಾಕಿಸ್ತಾನದ ವಿಮಾನಗಳನ್ನು ಧ್ವಂಸಗೊಳಿಸಿಬಿಡಬಲ್ಲಂತಹ ತಂತ್ರಜ್ಞಾನ ನಮ್ಮದಾಗಬೇಕಿದೆ. ಬಹುಶಃ ರಷ್ಯಾದಿಂದ ತರಿಸಿಕೊಳ್ಳುತ್ತಿರುವ ಎಸ್-400ನಂತಹ ಮಿಸೈಲ್ ವ್ಯವಸ್ಥೆ ನಮ್ಮ ಸೇನೆಗೆ ಈ ಶಕ್ತಿ ತುಂಬೀತೇನೋ! ಒಟ್ಟಾರೆ ಹೀಗೆ ನಡೆದ ಬೆಳವಣಿಗೆಗಳು ಭಾರತದ ಸೈನಿಕ ಶಕ್ತಿಯನ್ನು ಹೆಚ್ಚಿಸಲು ಪ್ರೇರಣೆ ನೀಡಿರುವುದಂತೂ ನಿಜ. ಅದರೊಟ್ಟಿಗೆ ಬಾಲಾಕೋಟ್ ದಾಳಿ ನಮ್ಮೊಳಗಿನ ಶತ್ರುಗಳನ್ನು ನಮಗೆ ಪರಿಚಯಿಸಿಬಿಟ್ಟಿದೆ. ಮುಸಲ್ಮಾನರನ್ನು ಶತ್ರುಗಳೆಂದು ಬಿಂಬಿಸುತ್ತಾ ಅವರನ್ನು ಎತ್ತಿಕಟ್ಟಲು ಹಿಂದೆ ನಿಂತಿರುತ್ತಿದ್ದ ಅನೇಕ ರಾಜಕೀಯ ನಾಯಕರು ಈಗ ಬಟಾ ಬಯಲಾಗಿಬಿಟ್ಟಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದು ರಾಷ್ಟ್ರೀಯತೆಯ ಪರ್ವಕಾಲ. ಭಾರತವನ್ನು ಸದ್ಯದಮಟ್ಟಿಗೆ ಅಲುಗಾಡಿಸುವುದು ಬಲು ಕಷ್ಟ!

– ಚಕ್ರವರ್ತಿ ಸೂಲಿಬೆಲೆ

1 Comment

1 Comment

 1. ಶಶಿಕಲಾ. ಎಸ್.

  March 5, 2019 at 8:29 am

  ಜನ ಎಚ್ಚರ ಗೊಂಡಿದ್ದಾರೆ. ವಿರೋಧ ಪಕ್ಷಗಳಿಗಿಂತ ಹೆಚ್ಚಿನ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಜಕ್ಕೂ ಪರ್ವ ಕಾಲ.
  ಇಂದಿನ ಜೆಡಿಎಸ್ ಪ್ರಕಟಣೆ ನೋಡಿದ್ರಾ.
  ಜೆಡಿಎಸ್ ನಿಂದ ತಾತಾ ಮೊಮ್ಮಕ್ಕಳು ಕಂಟೆಸ್ಟ್ ಮಾಡ್ತಿದ್ದಾರೆ. ಒಂದೇ ಮನೆಯಿಂದ ಮೂರು ಜನ ಅಸೆಂಬ್ಲಿಗೆ ಮೂರುಜನ ಲೋಕ ಸಭೆಗೆ.
  ಕನ್ನಡಿಗರ ಯಾವ ಕರ್ಮ ಇದು.

Leave a Reply

Your email address will not be published. Required fields are marked *

Most Popular

To Top