National

ರಾಮಮಂದಿರ ನಿರ್ಣಯ ಹಿಂದೂಗಳ ಪರವಾಗಿ?

ಕೊನೆಗೂ ಸುಪ್ರೀಂಕೋಟರ್ಿಗೆ ಕಪಿಲ್ ಸಿಬಲ್ರ ಮಾತಿನ ಮೇಲೆ ಹೆಚ್ಚು ಗೌರವ ಇದ್ದಂತೆ ಕಾಣುತ್ತಿದೆ. 2019ರ ಚುನಾವಣೆ ಕಳೆಯುವವರೆಗೆ ರಾಮಮಂದಿರದ ಕುರಿತಂತೆ ನಿರ್ಣಯ ಕೊಡಬಾರದೆಂದು ಅವರು ವಿನಂತಿಸಿಕೊಂಡಿದ್ದಕ್ಕೂ ಕೋಟರ್ು ಪದೇ ಪದೇ ತೀಪರ್ು ಕೊಡುವುದನ್ನು ಮುಂದೂಡುತ್ತಿರುವುದಕ್ಕೂ ಘನಿಷ್ಠವಾದ ಸಂಬಂಧವಿದೆ ಎನಿಸುತ್ತಿದೆ. ಇಲ್ಲವಾದಲ್ಲಿ ನಿನ್ನೆಯ ತೀಪರ್ಿನಲ್ಲಿ ಕುಳಿತುಕೊಂಡು ಮಾತನಾಡಿರೆಂದು ಸಲಹೆಯಂತೂ ಕೊಡುತ್ತಿರಲಿಲ್ಲ. ಕೋಟರ್ು ಹೆದರಿ ಹೆದರಿ ಹೆಜ್ಜೆ ಇಡುತ್ತಿರುವುದನ್ನು ನೋಡಿದರೆ ನಿರ್ಣಯ ಹಿಂದೂಗಳ ಪರವಾಗಿಯೇ ಇರಬೇಕು! ಏಕೆಂದರೆ ಈ ನಿರ್ಣಯವೇನಾದರೂ ಹೊರಬಂದರೆ ಉತ್ಪಾತವೇ ನಡೆದು ಹೋಗಬಹುದೆಂಬ ಭಯ ನ್ಯಾಯಾಲಯಕ್ಕೆ ಇದ್ದಂತಿದೆ. ಅದಕ್ಕೆ ನಿರ್ಣಯ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಹಾಗೆ ಆಲೋಚಿಸಿ ನೋಡಿ. ಹಿಂದೂಗಳ ವಿರುದ್ಧವಾದ ನಿರ್ಣಯ ಬಂದರೆ ನಮಗೆ ಪಾಠ ಹೇಳುವವರು ಬೇಕಾದಷ್ಟು ಮಂದಿ ಇದ್ದಾರೆ. ಕಾನೂನನ್ನು ಮೀರದಿರುವ, ವೈಜ್ಞಾನಿಕ ಪುರಾವೆಗಳನ್ನು ಒಪ್ಪಬೇಕೆನ್ನುವ, ಕೊನೆಗೆ ನ್ಯಾಯಾಧೀಶರ ವಿಚಾರಧಾರೆಗಳನ್ನು ಗೌರವಿಸಬೇಕೆನ್ನುವ ಉಪನ್ಯಾಸಗಳು ಪುಂಖಾನುಪುಂಖವಾಗಿ ನಡೆದುಬಿಡುತ್ತವೆ. ಆದರೆ ಮುಸಲ್ಮಾನರು ಹಾಗಲ್ಲ. ಷರಿಯಾದ ಮುಂದೆ ಬೇರೆ ಕಾನೂನುಗಳನ್ನು ಒಪ್ಪದವರಿಗೆ ಈ ನಿರ್ಣಯದಿಂದಾಗಬೇಕಾಗಿರುವುದಾದರೂ ಏನು? ಅವರು ಶುಕ್ರವಾರದ ನಮಾಜಿನ ನಂತರ ಬೀದಿಗಿಳಿಯುತ್ತಾರೆ, ಸಕರ್ಾರಿ ಆಸ್ತಿಪಾಸ್ತಿಗಳನ್ನು ಧ್ವಂಸಗೈಯ್ಯುತ್ತಾರೆ, ಅವರ ಬೆಂಬಲಕ್ಕೆ ಒಂದಷ್ಟು ಕಾಂಗ್ರೆಸ್ಸಿನ ನಾಯಕರು, ಅಲ್ಲಲ್ಲಿ ಅವರ ಪರವಾಗಿ ನಿಂತ ಇತರೆ ಪಕ್ಷಗಳ ಪ್ರಮುಖರು. ಒಟ್ಟಾರೆ ಹಿಂದೂಗಳ ಅಂಗಡಿಗೆ ಬೆಂಕಿ ಹಚ್ಚಿಯೂ ಅವರು ಕೂದಲು ಕೊಂಕದೆ ಉಳಿದುಬಿಡುತ್ತಾರೆ. ನ್ಯಾಯಾಲಯಕ್ಕೆ ಖಂಡಿತವಾಗಿಯೂ ಇದರ ಅರಿವಿದೆ.


ಹಾಗಂತ ನಾನು ಹೊಸದೇನನ್ನೂ ಹೇಳುತ್ತಿಲ್ಲ. ಮುಸಲ್ಮಾನರು ಗೂಂಡಾವರ್ತನೆ ಮಾಡುವವರು ಮತ್ತು ದೇಶದ ಪರವಾಗಿ ಎಂದೂ ನಿಲ್ಲದವರು ಎಂಬುದನ್ನು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಜಗತ್ತಿಗೆ ಕೇಳುವಂತೆ ಹೇಳಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಏರ್ಸ್ಟ್ರೈಕ್ ಮಾಡಿದ್ದನ್ನು ಸಂಭ್ರಮಿಸಿದರೆ ಕೋಮುಗಲಭೆಗಳಾಗುತ್ತವೆ ಎಂದು ಅವರು ಎಚ್ಚರಿಸಿರುವುದು ಇದರದ್ದೇ ಮುನ್ಸೂಚನೆಯಲ್ಲವೇನು? ದಾಳಿಗೈದ ವಾಯುಸೇನೆ ನಮ್ಮದ್ದೇ ಎನ್ನುವ ಆನಂದ ನಮಗಿದೆ. ಆ ಕಾರಣಕ್ಕೆ ನಾವು ಸಂಭ್ರಮಿಸಿದರೆ ಮುಸಲ್ಮಾನರು ಕೋಪಿಸಿಕೊಂಡು ಗಲಭೆಗಿಳಿಯುತ್ತಾರೆ ಎನ್ನುವುದು ಮುಖ್ಯಮಂತ್ರಿಗಳ ಮಾತುಗಳಾದರೆ ಒಂದೋ ಇಲ್ಲಿನ ಮುಸಲ್ಮಾನರು ಪಾಕಿಸ್ತಾನವನ್ನು ತಮ್ಮ ರಾಷ್ಟ್ರ ಎಂದು ಭಾವಿಸಿರಬೇಕು ಅಥವಾ ಸತ್ತ ಭಯೋತ್ಪಾದಕರು ಅವರ ಸಂಬಂಧಿಕರಿರಬೇಕು. ಇವೆರಡೂ ಅಲ್ಲದೇ ಹೋದರೆ ಬಾಕಿ ಉಳಿದ ವಿಚಾರ ಒಂದೇ ಕುಮಾರಸ್ವಾಮಿ ಸುಳ್ಳು ಹೇಳುತ್ತಿರಬೇಕು. ಹೀಗೆ ಮುಸಲ್ಮಾನರನ್ನು ನಡುರಸ್ತೆಯಲ್ಲಿ ನಿಲ್ಲಿಸಿ ದೇಶದ್ರೋಹಿಗಳು ಎಂದು ಜರಿಯುವ ಅಧಿಕಾರವನ್ನು ಅವರಿಗೆ ಕೊಟ್ಟವರಾದರೂ ಯಾರು? ಅದರಲ್ಲೂ ದೊಡ್ಡಸಂಖ್ಯೆಯ ಮುಸಲ್ಮಾನರು ಪುಲ್ವಾಮಾ ದಾಳಿಯನ್ನು ವಿರೋಧಿಸಿ ಜಾಥಾ, ಮೆರವಣಿಗೆಗಳನ್ನು ಮಾಡಿದ ನಂತರ ಹೀಗೆ ಹೇಳಲು ಮುಖ್ಯಮಂತ್ರಿಗಳಿಗೆ ಆದ ಪ್ರೇರಣೆಯಾದರೂ ಏನು?! ಮುಸಲ್ಮಾನ ಸಮಾಜ ಈ ಪ್ರಶ್ನೆಯನ್ನು ಕುಮಾರಸ್ವಾಮಿಗಳ ಬಳಿ ಕೇಳಬೇಕಿದೆ. ಸ್ವತಃ ನರೇಂದ್ರಮೋದಿ ಸಬ್ ಕಾ ಸಾಥ್ ಸಬ್ಕಾ ವಿಕಾಸ್ ಎನ್ನುತ್ತಾ ದೂರ ಉಳಿದ ಮುಸಲ್ಮಾನರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದರೆ ಅವರನ್ನು ಮತ್ತೆ ಸಮಾಜಕಂಟಕರೆಂದು ಸಾಬೀತುಪಡಿಸುವ ಪ್ರಯತ್ನವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರಲ್ಲಾ!


ಬಿಡಿ. ವೋಟು ಸಿಗುವುದಾದರೆ ಎಂತಹ ಹೀನ ಕಾರ್ಯಕ್ಕೂ ಹೇಸದ ಮಂದಿ ಇವರು. ಆದರೆ ನಾವು ಚಚರ್ಿಸಬೇಕಾಗಿದ್ದುದು ರಾಮಮಂದಿರದ ಕುರಿತಂತೆ. ಹಿಂದೂಗಳು ಕಳೆದ ನಾಲ್ಕು ಶತಮಾನಗಳಿಂದ ಈ ಮಂದಿರದ ನಿಮರ್ಾಣಕ್ಕಾಗಿ ಬಡಿದಾಡುತ್ತಿದ್ದಾರೆ. ಮುಸಲ್ಮಾನರ ಆಳ್ವಿಕೆ ಇದ್ದಾಗ ಮುಲಾಜಿಲ್ಲದೇ ಮಂದಿರವನ್ನು ಹೊಡೆದುರುಳಿಸಿ ಮಸೀದಿಯನ್ನು ಕಟ್ಟಿಕೊಂಡುಬಿಟ್ಟರು. ಆನಂತರ ಸುದೀರ್ಘವಾದ ಹಿಂದೂ ಆಳ್ವಿಕೆ ಬಂದ ನಂತರವೂ ಮುಸಲ್ಮಾನರ ಮನನೋಯಿಸದೇ ಅದನ್ನು ಮನವೊಲಿಸಿಯೇ ಪಡೆದುಕೊಳ್ಳುವ ಇವರ ಯಾವ ಯತ್ನವೂ ಫಲಿಸಲಿಲ್ಲ. ಸ್ವಾತಂತ್ರ್ಯಾನಂತರ ಪಾಕಿಸ್ತಾನವೆಂದು ಮುಸಲ್ಮಾನರು ತಮಗೇ ಆದ ರಾಷ್ಟ್ರವನ್ನು ಪಡೆದುಕೊಂಡ ನಂತರವೂ ಇಲ್ಲಿ ಉಳಿದ ಮುಸಲ್ಮಾನರನ್ನು ನಮ್ಮವರೇ ಎಂದು ಭಾವಿಸುತ್ತಾ ಅಪ್ಪಿಕೊಂಡೆವಲ್ಲ, ಆಗಲೂ ಇವರ ಮನಸ್ಸು ಕರಗಲಿಲ್ಲ. ಹೋಗಲಿ ಇಷ್ಟೆಲ್ಲಾ ಸೆಕ್ಯುಲರ್ ಚಿಂತನೆಯ ಚಚರ್ೆಗಳು ಜಗದ್ವ್ಯಾಪಿ ನಡೆಯುವಾಗ ಬಹುಸಂಖ್ಯಾತ ಹಿಂದೂಗಳು ತಮಗೆ ಅಲ್ಪಸಂಖ್ಯಾತರೆನ್ನುವ ಭಾವನೆ ಬರದಂತೆ ಪ್ರೀತಿಯಿಂದ ನೋಡಿಕೊಂಡಿದ್ದಾರೆಂಬ ಕಾರಣಕ್ಕಾಗಿಯಾದರೂ ಮುಸಲ್ಮಾನರು ಕೋಟರ್ಿನಾಚೆಗೆ ಇದನ್ನು ಎಂದೋ ಇತ್ಯರ್ಥಪಡಿಸಬಹುದಿತ್ತು. ಊಹೂಂ, ಹಾಗೆ ಮಾಡಲಿಲ್ಲ. ಕೊನೆಗೆ ತಾಳಲಾಗದೆ ಹಿಂದುವೇ ಶತಶತಮಾನಗಳ ಕಳಂಕವನ್ನು ತೊಳೆಯಬೇಕಾಯ್ತು. ಮಸೀದಿಯ ಧ್ವಂಸಕಾರ್ಯ 92 ರಲ್ಲಿ ನಡೆದದ್ದು ಸುದೀರ್ಘಕಾಲದ ಶಾಂತಿಯು ಆಕ್ರೋಶವಾಗಿ ಬದಲಾಗಬಲ್ಲುದು ಎಂಬುದರ ಮೊದಲ ಸಂಕೇತ!

ಸಂಬಂಧ ಕಲ್ಪಿಸಬಹುದೋ ಇಲ್ಲವೋ ಗೊತ್ತಿಲ್ಲ. ಸ್ವಾತಂತ್ರ್ಯ ಬಂದ 70 ವರ್ಷಗಳಿಂದಲೂ ಪಾಕಿಸ್ತಾನ ತಾನೇ ತಾನಾಗಿ ದಾಳಿ ಮಾಡಿದಾಗಲೂ ಅದನ್ನು ಸೋಲಿಸಿಯೂ ಶಾಂತವಾಗಿರುತ್ತಿದ್ದೆವಲ್ಲ, ಭಯೋತ್ಪಾದನೆಯ ಮೂಲಕ ಪಾಕಿಸ್ತಾನ ಸತತವಾಗಿ ಕಿರುಕುಳ ಕೊಡುವಾಗಲೂ ಅಹಿಂಸೆಯನ್ನು ಪಾಲಿಸಿಕೊಂಡು ಪಾಕಿಸ್ತಾನಕ್ಕೆ ನೋವಾಗದಂತೆ ನೊಡಿಕೊಂಡಿದ್ದೆವಲ್ಲ, ಈ ಎಲ್ಲಾ ಶಾಂತಿಯ ಅವಧಿ ಮುಗಿದ ನಂತರವೇ ಸಜರ್ಿಕಲ್ಸ್ಟ್ರೈಕ್ಗಳು, ಏರ್ಸ್ಟ್ರೈಕ್ಗಳೂ ಶುರುವಾಗಿದ್ದು. ಹಾರಾಡುತ್ತಿದ್ದ ಪಾಕಿಸ್ತಾನ ಬಾಲಮುದುರಿಕೊಂಡು ತೆಪ್ಪಗೆ ಬಿದ್ದಿದೆಯಲ್ಲಾ ಅದರ ಹಿಂದಿರುವ ಮರ್ಮವೂ ಇಷ್ಟೇ. ಬಾಬ್ರಿ ಮಸೀದಿಯ ಧ್ವಂಸ ಪ್ರಕ್ರಿಯೆ ಇದೇ ರೀತಿಯ ಅಂದಿನ ಆಕ್ರೋಶ. ಆಗಲೇ ಸಂಧಾನ ಮುಗಿಸಿದ್ದರೆ ಈ ವೇಳೆಗೆ ಸಮಸ್ಯೆಯೇ ಇರುತ್ತಿರಲಿಲ್ಲ. ರಾಜಕೀಯ ಪಕ್ಷಗಳಿಗೆ ಮಸೀದಿ ಚುನಾವಣಾ ವಸ್ತು. ಹೀಗಾಗಿಯೇ ಅದರ ಪರಿಹಾರಕ್ಕೆ ಯಾರೂ ಪ್ರಯತ್ನಿಸಲಿಲ್ಲ. ಈಗ ಕೇಂದ್ರಸಕರ್ಾರ ಅದಕ್ಕೊಂದು ವೇಗ ಕೊಡಲು ಪ್ರಯತ್ನಿಸುತ್ತಿದೆ. ಹಾಗೆಂದೊಡನೆ ಅದನ್ನು ಸುಳ್ಳೆಂದು ಜರಿಯುವವರೂ ಇದ್ದಾರು. ನರೇಂದ್ರಮೋದಿಯವರು ಇದಕ್ಕೆ ಬೇಕಾಗಿರುವ ವಾತಾವರಣ ರೂಪಿಸುತ್ತಿದ್ದಾರೆಂದು ಅರಿವಿರುವುದರಿಂದಲೇ ಸಿಬಲ್ ಇದರ ವಿರುದ್ಧ ಸುಪ್ರೀಂಕೋಟರ್ಿಗೆ ಮನವಿ ಮಾಡಿ ನಿರ್ಣಯವನ್ನು ಚುನಾವಣೆಯ ನಂತರ ಕೊಡಿರೆಂದು ಕೇಳಿಕೊಂಡಿದ್ದು. ಕಾಂಗ್ರೆಸ್ಸಿನೊಳಗೂ ಆತಂಕ ತಾಂಡವವಾಡುತ್ತಿದೆ. ಸಜರ್ಿಕಲ್ ಸ್ಟ್ರೈಕ್ನಿಂದಾದ ಹೊಡೆತವನ್ನೇ ತಾಳಿಕೊಳ್ಳಲಾಗದಿರುವ ಕಾಂಗ್ರೆಸ್ಸು ಈಗ ರಾಮಮಂದಿರದ ನಿರ್ಣಯವೂ ಹೊರಗೆ ಬಂದುಬಿಟ್ಟರೆ ಕಣ್ಣೀರು ಹಾಕಿಬಿಡುತ್ತದೆ.


ಆದರೆ ಕೋಟರ್ು ಮಾತ್ರ ಪ್ರತೀಬಾರಿಯೂ ಹಿದೂಗಳ ಸಹನೆಯನ್ನು ಪರೀಕ್ಷಿಸುತ್ತಲೇ ಇದೆ. ಅನವಶ್ಯಕವಾಗಿ ವಿಚಾರಣೆ ಮುಂದೂಡುವುದು, ನಿರ್ಣಯ ಕೊಡಬೇಕಾದ ದಿನ ಬೆಂಚನ್ನೇ ಬದಲಾಯಿಸಿವುದು, ನ್ಯಾಯಾಧೀಶರೇ ರಾಜಿನಾಮೆ ಕೊಡುವುದು ಇವೆಲ್ಲವೂ ಸವರ್ೋಚ್ಚ ನ್ಯಾಯಾಲಯದ ಘನತೆಗೆ ಸೂಕ್ತವಾದುದಲ್ಲ. ಅರ್ಬನ್ ನಕ್ಸಲರಿಗಾಗಿ ಮಧ್ಯರಾತ್ರಿ ತೆರೆಯಲ್ಪಡುವ ನ್ಯಾಯಾಲಗಳು ರಾಮನಿಗಾಗಿ ಒಂದೆರಡು ಗಂಟೆ ಹೆಚ್ಚು ಕೆಲಸ ಮಾಡಲು ಸಿದ್ಧವಿಲ್ಲವೆಂದರೆ ದುರಂತಕಾರಿ ಸಂಗತಿಯೇ. ಆದರೆ ಎಲ್ಲಾ ಸಾಕ್ಷಿಗಳೂ, ವಿಚಾರಣೆಯ ಎಲ್ಲ ಮಜಲುಗಳು ಭವ್ಯ ರಾಮಮಂದಿರದತ್ತಲೇ ಬೊಟ್ಟು ಮಾಡುತ್ತಿರುವುದರಿಂದ ಪ್ರತಿಯೊಬ್ಬ ಹಿಂದೂವೂ ಇನ್ನು ಹೆಚ್ಚು ಕಾಯಬೇಕಿಲ್ಲ ಎನ್ನುವುದಂತೂ ಸ್ಪಷ್ಟ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕಳೆದ ಸಾವಿರ ವರ್ಷಗಳ ಹಿಂದೆ ಈ ನೆಲದಲ್ಲಿ ಮುಸಲ್ಮಾನನೇ ಇರಲಿಲ್ಲ. ಅದಕ್ಕೂ ಕೆಲವು ನೂರು ವರ್ಷಗಳ ಹಿಂದೆ ಜಗತ್ತಿನಲ್ಲೇ ಮುಸಲ್ಮಾನನಿರಲಿಲ್ಲ. ಆಗಲೂ ರಾಮನಿದ್ದ, ರಾಮನ ವಿಚಾರಧಾರೆಗಳೂ ಪ್ರತಿಯೊಬ್ಬರ ಮನಸ್ಸಿನಲ್ಲೂ ಹಸಿರಾಗಿತ್ತು. ಹಾಗಿದ್ದ ಮೇಲೆ ನಿರ್ಣಯ ಕೊಡಲು ಯಾವ ಗೊಂದಲವೂ ಇರಬಾರದು. ಬುದ್ಧನ ನಂತರ ಶಾಂತಿಯ ಮಾತುಗಳನ್ನು ತುಂಬಾ ಆಡಿರುವುದರಿಂದ, ಗಾಂಧಿಯ ನಂತರ ಅಹಿಂಸೆಯನ್ನೇ ಆವಾಹಿಸಿಕೊಂಡಿರುವುದರಿಂದ ನಾವು ಈಗ ಸ್ವಲ್ಪ ಗೊಂದಲದಲ್ಲಿ ಇದ್ದೇವಷ್ಟೇ. ಭಾರತೀಯ ಪರಂಪರೆ-ಘನತೆಗಳು ಎಲ್ಲಕ್ಕಿಂತಲೂ ಮಿಗಿಲಾದವು. ಅದನ್ನು ಉಳಿಸಿದರೆ ಭಾರತ ಉಳಿಯುತ್ತದೆ ಎನ್ನುವುದನ್ನು ನಾವು ಮರೆಯುವಂತೆಯೇ ಇಲ್ಲ. ಈ ಹಿನ್ನೆಲೆಯಲ್ಲಿಯೇ ನಿರ್ಣಯ ಹೊರಬರಬೇಕಿರೋದು. ಇವ್ಯಾವನ್ನೂ ಗಮನಿಸದೇ ಇನ್ನು ಎಂಟು ವಾರಗಳ ಕಾಲ ಮಧ್ಯಸ್ಥಿಕೆಗೆ ಅವಕಾಶ ಕೊಟ್ಟು ಅದು ಸಾಧ್ಯವಾಗದೆಂದಾದಾಗ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವ ನ್ಯಾಯಾಲಯದ ಧೋರಣೆ ಖಂಡಿತವಾಗಿಯೂ ಅರ್ಥವಾಗದ್ದು. ಅಥವಾ ನ್ಯಾಯ ವಿಳಂಬ ಪ್ರಕ್ರಿಯೆ ಎನ್ನುವುದನ್ನು ಒಪ್ಪಲೇಬೇಕೇನೋ!


ಇತ್ತ ಮೋದಿ ಮಾತ್ರ ಹಿಂದೂ ಸಂಸ್ಕೃತಿಯ ಶ್ರದ್ಧಾಕೇಂದ್ರಗಳನ್ನು ಯಾರಿಗೂ ಅರಿವಿಗೇ ಬಾರದಂತೆ ಪುನರುತ್ಥಾನಗೊಳಿಸುತ್ತಿದ್ದಾರೆ. ಅಯೋಧ್ಯೆ ರಾಮನ ವಿಚಾರಗಳಿಂದ ಈಗ ಅಲಂಕೃತಗೊಂಡಿದೆ. ಅಲ್ಲಿನ ಗಂಗಾತಟದಲ್ಲಿ ಭವ್ಯವಾದ ದೀಪಾವಳಿ ನಡೆಯುತ್ತದೆ. ಅಲಹಾಬಾದ್ ತೀರ್ಥರಾಜ ಪ್ರಯಾಗವಾಯ್ತು. ಕಾಶಿ ಹಳೆಯ ವೈಭವಕ್ಕೆ ಮರಳುವ ಲಕ್ಷಣವನ್ನು ತೋರುತ್ತಿವೆ. ಗಂಗೆ 80 ಪ್ರತಿಶತ ಶುದ್ಧಳಾದಳಲ್ಲದೇ ಈಗ ವಿಶೇಷ ಜಾತಿಯ ಮೀನುಗಳು ಶುದ್ಧ ಗಂಗೆಯಲ್ಲಿ ಆಟವಾಡುತ್ತಿವೆಯೆಂದರೆ ಹೊಸ ವಾತಾವರಣ ಮತ್ತೆ ರೂಪುಗೊಂಡಿದೆ ಎಂದೇ ಅರ್ಥ. ಅದೇ ವೇಳೆಗೆ ಪ್ರತಿಪಕ್ಷಗಳವರು ಅನಿವಾರ್ಯವಾಗಿ ತಮ್ಮ ಹಿಂದೂ ಪರಂಪರೆಯನ್ನು ಜನರ ಮುಂದೆ ಉಗ್ಗಡಿಸಿಹೇಳುವಂತೆ ಒತ್ತಡವನ್ನು ತಂದುಬಿಟ್ಟಿದ್ದಾರೆ. ರಾಹುಲ್ ಬ್ರಾಹ್ಮಣನೆಂಬುದು ದೇಶದ ಜನತೆಗೆ ಬಿಡಿ ಹುಟ್ಟಿದಾಗಿನಿಂದ ಆತನಿಗೇ ಗೊತ್ತಿದ್ದುದು ಅನುಮಾನ. ಸದಾ ಮುಸಲ್ಮಾನರ ಓಲೈಕೆಯಲ್ಲಿ ನಿರತನಾಗಿದ್ದ ಅಖಿಲೇಶ್ ಕುಂಭಮೇಳಕ್ಕೆ ಬಂದು ಸ್ನಾನಗೈದು ಹೋಗುತ್ತಾನೆ. ಒಬ್ಬಿಬ್ಬರಲ್ಲ, ಎಲ್ಲರದ್ದೂ ಇದೇ ಕಥೆಯೇ. ರಾಮಮಂದಿರವೊಂದು ಆಗಿಬಿಟ್ಟರೆ ಇವರೆಲ್ಲರ ಪರಿಸ್ಥಿತಿ ಏನಾಗುವುದೋ! ಹಾಗೆಂದೇ ಕಾಂಗ್ರೆಸ್ಸು ಚುನಾವಣೆ ಮುಗಿಯುವವರೆಗೂ ನಿರ್ಣಯ ಕೊಡಬೇಡಿ ಎಂದು ಗೋಗರೆದಿರೋದು. ಜನರ ಮುಂದೆ ರಾಮಭಕ್ತರಂತೆ ನಾಟಕವಾಡುತ್ತಾ ಹಿಂದೆ ಮಂದಿರ ಆಗದಂತೆ ತಡೆಹಾಕಿ ಕುಳಿತಿರುವ ಕಾಂಗ್ರೆಸ್ಸಿಗೆ ಸರಿಯಾದ ಪಾಠ ಕಲಿಸಬೇಕು!

– ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top