National

ರಾಮಮಂದಿರ ಖಾತ್ರಿ, ಅನುಮಾನ ಬೇಡ!

ಅಯೋಧ್ಯೆಗಾಗಿ ಜನಾಗ್ರಹ ಶುರುವಾಗಿದೆ. ಬಹುಶಃ ಮಹಾತ್ಮಾ ಗಾಂಧೀಜಿಯವರು ನೇತೃತ್ವ ವಹಿಸಿದ್ದ ಅಸಹಕಾರ ಚಳುವಳಿಯನ್ನು ಬಿಟ್ಟರೆ ದೇಶವ್ಯಾಪಿಯಾಗಿ ಬೆಳೆದು ನಿಂತ ಮತ್ತೊಂದು ದೊಡ್ಡ ಆಂದೋಲನವೇ ಇದು. ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾದಾಗ ಅಯೋಧ್ಯೆಯ ಕನಸು ನನಸಾಗಿಯೇ ಬಿಡುವುದೆಂದು ಎಲ್ಲರೂ ಭಾವಿಸಿದ್ದರು. ಆದರೆ ಹಾಗಾಗಲಿಲ್ಲ. ಮುಂದಿನ ಹತ್ತು ವರ್ಷ ಅತ್ಯಂತ ಕೆಟ್ಟ ಪರಿಸ್ಥಿತಿ. 2015ರಲ್ಲಂತೂ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷ ವಿಶ್ವ ಹಿಂದೂ ಪರಿಷತ್ತು ಅಯೋಧ್ಯೆಗೆ ಸಾಗಿಸುತ್ತಿದ್ದ ಕಲ್ಲುಗಳ ಸಾಗಾಣಿಕೆಯನ್ನು ನಿಷೇಧಿಸಿಬಿಟ್ಟಿತು. ಇಂದು ರಾಮ-ಕೃಷ್ಣ ಎಂದೆಲ್ಲಾ ಮಾತನಾಡುವ ಅನಿವಾರ್ಯತೆಗೆ ಬಿದ್ದಿರುವ ಅಖಿಲೇಶ್ ತನ್ನ ಅಧಿಕಾರಾವಧಿಯಲ್ಲಿ ಅಯೋಧ್ಯೆ ಮಂದಿರ ಇನ್ನೆಂದಿಗೂ ಆಗದಂತೆ ನೋಡಿಕೊಳ್ಳುವೆನೆಂಬ ಸಂಕಲ್ಪವನ್ನೇ ಮಾಡಿಬಿಟ್ಟಿದ್ದ ಎಂದು ಮರೆಯುವುದು ಹೇಗೆ?! ಇವೆಲ್ಲವುಗಳಿಂದ ಬೇಸತ್ತು ಹಿಂದುಗಳೆಲ್ಲ ಒಟ್ಟಾಗಿ ಮೋದಿಯನ್ನು ಅಧಿಕಾರಕ್ಕೆ ತರುವಾಗ ಮತ್ತೆ ರಾಮಮಂದಿರದ ಕನಸುಗಳು ಹಸಿಯಾಗಿಬಿಟ್ಟಿದ್ದವು. ದೂರದಲ್ಲೊಂದು ವಿಶ್ವಾಸ ಮೋದಿಯವರ ಮೇಲೆ ಖಂಡಿತ ಇತ್ತು. ಆದರೆ ಪ್ರತ್ಯಕ್ಷ ಅವರು ರಾಮಮಂದಿರದ ಕುರಿತಂತೆ ಎಂದೂ ಮಾತೇ ಆಡಲಿಲ್ಲ. ಅನುಮಾನದ ಹೊಗೆಯಾಡುತ್ತಿದ್ದುದು ನಿಜವಾದರೂ ಉತ್ತರ ಪ್ರದೇಶದಲ್ಲಿ ಅಧಿಕಾರ ಪಡೆದು ಮೋದಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ಘೋಷಿಸುತ್ತಿದ್ದಂತೆ ಅನೇಕರಿಗೆ ಭವಿಷ್ಯ ನಿಚ್ಚಳವಾಗಿ ಕಾಣಹತ್ತಿತು. ಅವರು ಕಳೆದ 15 ವರ್ಷಗಳಲ್ಲಿ ಅಯೋಧ್ಯೆಯಲ್ಲಿ ವಿವಾದಿತವಾಗಿ ಗುರುತಿಸಲ್ಪಟ್ಟಿರುವ ರಾಮಮಂದಿರಕ್ಕೆ ಹೋಗಿ ಪೂಜೆಗೈದ ಮೊದಲ ಮುಖ್ಯಮಂತ್ರಿಯಾದರಲ್ಲದೇ ಅಂದೇ ಅಯೋಧ್ಯೆಯನ್ನು ಯಾತ್ರಾಥರ್ಿಗಳ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು 350 ಕೋಟಿ ರೂಪಾಯಿಯನ್ನು ಘೋಷಿಸಿದರು. ಇದು ರಾಮಮಂದಿರ ನಿಮರ್ಾಣದ ಮೊದಲ ಸೂಚನೆಯಾಯ್ತು. ಸಕರ್ಾರಿ ವ್ಯವಸ್ಥೆಯನ್ನು ಚುರುಕುಗೊಳಿಸಿದ ಯೋಗಿ ಅಯೋಧ್ಯೆಯಲ್ಲಿ ರಾಮಲೀಲಾ ಕಾರ್ಯಕ್ರಮ ಅಬಾಧಿತವಾಗಿ ನಡೆಯುವುದೆಂಬುದನ್ನು ಖಾತ್ರಿ ಪಡಿಸಿದರು. 20 ಎಕರೆ ಜಾಗವನ್ನು ಮಂಜೂರು ಮಾಡಿಸಿ 154 ಕೋಟಿ ರೂಪಾಯಿಯಲ್ಲಿ ರಾಮಾಯಣ ಮ್ಯೂಸಿಯಂಗೆ ಅಡಿಗಲ್ಲು ಹಾಕಿದರು. ಇದು ಪದೇ-ಪದೇ ಸ್ಪಷ್ಟ ಸಂದೇಶಗಳನ್ನು ರವಾನಿಸಿತು.

ಇಷ್ಟಕ್ಕೇ ಸುಮ್ಮನಾಗದ ಯೋಗಿ 2017ರ ಜೂನ್ 21 ಕ್ಕೆ ಅಯೋಧ್ಯೆಯತ್ತ ದೊಡ್ಡ-ದೊಡ್ಡ ಕಲ್ಲುಗಳನ್ನು ಹೊತ್ತ ಎರಡು ಲಾರಿಗಳು ಬಂದಾಗ ಅದನ್ನು ತಡೆಯಲಿಲ್ಲ. ಇದು ಅಖಿಲೇಶನ ಈ ಹಿಂದಿನ ಆದೇಶವನ್ನು ಧಿಕ್ಕರಿಸಿದುದರ ಸ್ಪಷ್ಟ ಸೂಚನೆಯಾಗಿತ್ತು. ಅದಾದ ಹದಿನೈದಿಪ್ಪತ್ತು ದಿನಗಳಲ್ಲಿ ಮತ್ತೆ ಮೂರು ಲಾರಿಗಳು ಅಯೋಧ್ಯೆಯತ್ತ ಬಂದವು. ಹಿಂದು-ಹಿಂದೆಯೇ ಆರು ಲಾರಿಗಳು. ದೇಶದ ಜನಕ್ಕೆ ಇವೆಲ್ಲವೂ ಗೊತ್ತಾಗುತ್ತಿತ್ತೋ ಇಲ್ಲವೋ ಅಯೋಧ್ಯೆಯ ಹಿಂದೂಗಳಂತೂ ಬರಲಿರುವ ದಿನಗಳು ಹೇಗಿರಬಹುದೆಂಬುದನ್ನು ಊಹಿಸಿಲಾರಂಭಿಸಿದ್ದರು. ವಿಶ್ವ ಹಿಂದೂ ಪರಿಷತ್ನ ತ್ರಿಲೋಕಿನಾಥ್ ಪಾಂಡೆಯವರ ಪ್ರಕಾರ ಸದ್ಯಕ್ಕೆ ನೆಲ ಅಂತಸ್ತಿನ ಮಂದಿರ ನಿಮರ್ಾಣಕ್ಕೆ ಬೇಕಾಗಿರುವಷ್ಟು ಕಂಬಗಳು, ಅಲ್ಲಿ ಸಂಗ್ರಹವಾಗಿವೆ. ಮೇಲ್ಛಾವಣಿ ಮತ್ತು ಮೊದಲ ಅಂತಸ್ತಿಗೆ ಬೇಕಾದ ಕಲ್ಲುಗಳ ಸಂಗ್ರಹಕಾರ್ಯ ಈಗ ನಡೆಯುತ್ತಿದೆ. ಈಗಾಗಲೇ 11 ಲಕ್ಷ ಕ್ಯುಬಿಕ್ ಅಡಿಗಳಷ್ಟು ಕಲ್ಲು ಸಿಂಗಾರಗೊಂಡು ಅಯೋಧ್ಯೆಯ ಕಾರ್ಯಶಾಲೆಯಲ್ಲಿ ಸಿದ್ಧವಾಗಿವೆ. ಇನ್ನು ಕನಿಷ್ಠಪಕ್ಷ 70,000 ಕ್ಯುಬಿಕ್ ಅಡಿಗಳಷ್ಟು ಕಲ್ಲುಗಳ ಅವಶ್ಯಕತೆಯಿದೆ. ಒಟ್ಟಾರೆ ವೇಗದ ಸಿದ್ಧತೆ ನೋಡಿದರೆ ಮಂದಿರ ನಿಮರ್ಾಣದ ಸೂಚನೆ ದೊರೆತ ಕೆಲವು ತಿಂಗಳಲ್ಲೇ ನೆಲ ಅಂತಸ್ತು ನಿಮರ್ಾಣವಾಗಿಯೇ ಬಿಡುತ್ತದೆ. ಈ ಮುನ್ಸೂಚನೆಯನ್ನು ಗ್ರಹಿಸಿಯೇ ಅಯೋಧ್ಯೆಯ ಮುಸಲ್ಮಾನರು ಇದಕ್ಕೆ ವಿರೋಧಿಸಿ ಪ್ರಯೋಜನವಿಲ್ಲೆವೆಂದು ಬಾಯಿಗೆ ಬೀಗ ಹಾಕಿಕೊಂಡಿದ್ದು. ಕ್ರಮೇಣ ಉತ್ತರ ಪ್ರದೇಶದ ಮುಸಲ್ಮಾನರಿಗೂ ಇದು ಅರ್ಥ ಆಗಿದ್ದಲ್ಲದೇ ಅಯೋಧ್ಯೆ ರಾಮಕ್ಷೇತ್ರವಾಗಿ ಬೆಳೆದು ನಿಂತರೆ ಅದು ಜಾಗತಿಕ ಆಕರ್ಷಣೆಯಾಗುವುದಲ್ಲದೇ ತಮ್ಮ ಜೀವನ ಮಟ್ಟವೂ ಸುಧಾರಿಸುವುದೆಂಬುದನ್ನು ಅರಿತು ವಿರೋಧ ನಿಲ್ಲಿಸಿ ತೆಪ್ಪಗಾಗಿಬಿಟ್ಟರು. ಷಿಯಾ ಮುಸಲ್ಮಾನರಂತೂ ಒಂದು ಹೆಜ್ಜೆ ಮುಂದೆ ಹೋಗಿ ಇರಾನಿನಿಂದ ಫತ್ವಾವನ್ನು ತಂದು ವಿವಾದಿತ ಸ್ಥಳದಲ್ಲಿ ಮಸೀದಿ ಇರಬಾರದೆನ್ನುವ ಇಸ್ಲಾಂ ಕಾನೂನುಗಳನ್ನು ಮುಂದಿಟ್ಟು ಇಲ್ಲಿ ರಾಮಮಂದಿರ ಕಟ್ಟಲು ತಮ್ಮ ಅಭ್ಯಂತರವಿಲ್ಲವೆಂದು ಹೇಳಿಕೆ ನೀಡಿದರು.

ವಾಸ್ತವವಾಗಿ ಮಂದಿರ ನಿಮರ್ಾಣದ ಹಿಂದೂ ಆಕ್ರೋಶ ತೀವ್ರ ತುದಿಯನ್ನು ಮುಟ್ಟಿದ್ದು 92 ಡಿಸೆಂಬರ್ ಆರಕ್ಕೆ. ಲಕ್ಷಕ್ಕೂ ಮಿಕ್ಕಿದ ಕರಸೇವಕರು ರಾಮಜನ್ಮಭೂಮಿಯಲ್ಲಿ ಸೇರಿ ಸಕರ್ಾರ ನಿಮರ್ಿಸಿದ್ದ ತಡೆಗೋಡೆಗಳನ್ನೆಲ್ಲಾ ಕಿತ್ತೆಸೆದು ತಮ್ಮನ್ನು ಅಲ್ಲಿಗೆ ಕರೆ ತಂದಿದ್ದ ಸಂಘಟನೆಯ ಮಾತನ್ನು ಧಿಕ್ಕರಿಸಿ ರಾಮನ ವಿಗ್ರಹವನ್ನು ಹೊಂದಿದ್ದ ಮಸೀದಿಯ ಗೋಪುರದ ಮೇಲೇರಿ ಅದನ್ನು ಬಡಿ-ಬಡಿದೇ ಉರುಳಿಸಿಬಿಟ್ಟರು. ಕರಸೇವಕರ ಈ ಆಕ್ರೋಶಕ್ಕೆ ಖಂಡಿತ ಕಾರಣವಿತ್ತು. ರಾಮಭಕ್ತರಾಗಿದ್ದ ಅವರನ್ನು ಎಲ್ಲರೂ ಕೈಬಿಟ್ಟುಬಿಟ್ಟಿದ್ದರು. ಸುಪ್ರೀಂಕೋಟರ್ು ಅವರ ವಿರುದ್ಧವಾಗಿತ್ತು, ಆಳುವ ಸಕರ್ಾರಗಳು ಅವರ ವಿರುದ್ಧವಾಗಿ ವತರ್ಿಸುತ್ತಿತ್ತು, ವ್ಯವಸ್ಥೆ ಅವರ ವಿರುದ್ಧವಾಗಿತ್ತು. ಅನೇಕ ಬಾರಿ ಭಾಜಪವೂ ತಮ್ಮ ಜೊತೆಗಿಲ್ಲವೆಂಬ ಅನುಮಾನ ಅವರನ್ನು ಬಾಧಿಸುತ್ತಿತ್ತು. ಒಟ್ಟಾರೆ ಮಂದಿರ ನಿಮರ್ಾಣದ ವಿಚಾರವನ್ನು ಒಂದು ತುದಿಗೆ ಮುಟ್ಟಿಸಲೇಬೇಕೆಂದು ನಿಶ್ಚಯಿಸಿದ ಕರಸೇವಕರು ಡಿಸೆಂಬರ್ 6ರಂದು ಐದು ಶತಮಾನಗಳ ಅವಮಾನವನ್ನು ತೊಳೆದುಕೊಂಡೇ ಬಿಟ್ಟಿದ್ದರು. ಈ ಸಂದರ್ಭದಲ್ಲಿ ಕರಸೇವಕರು ಅಯೋಧ್ಯೆಯಲ್ಲಿದ್ದ ಇನ್ನೊಂದೇ ಒಂದು ಮಸೀದಿಯನ್ನು ಮುಟ್ಟಲಿಲ್ಲ ಎಂಬುದು ಹಿಂದೂಗಳ ಸಂಯಮದ ವೈಭವದ ದರ್ಶನವಾದರೆ ರಾಮಮಂದಿರ ಮಾತ್ರವೇ ಅವರ ಗುರಿಯಾಗಿತ್ತು ಎಂಬುದನ್ನೂ ಸ್ಪಷ್ಟವಾಗಿ ಸೂಚಿಸುತ್ತದೆ. ಮುಸಲ್ಮಾನರಾಗಿದ್ದರೆ ದಾರಿಯಲ್ಲಿ ಕಾಣುವ ಅಮರ್ ಜವಾನ್ ಸ್ಮಾರಕಗಳನ್ನೂ ಒಡೆದು ಮೆರೆಯುತ್ತಿದ್ದರು.

ಹಾಗೆ ನೋಡಿದರೆ ಮಂದಿರ-ಮಸೀದಿಗಳ ವಿವಾದ ಇಷ್ಟು ತೀವ್ರವಾಗುವ ಸಾಕಷ್ಟು ಮುನ್ನವೇ ಆಕರ್ಿಯಾಲಾಜಿಕಲ್ ಸವರ್ೇ ಆಫ್ ಇಂಡಿಯಾ ಉತ್ಖನನ ನಡೆಸಿ ಹೊರ ಹಾಕಿದ ವರದಿ ಸ್ಪಷ್ಟ ಸಂದೇಶವನ್ನು ಕೊಡುತ್ತಿತ್ತು. ಡಾ. ಬಿಬಿ ಲಾಲರ ನೇತೃತ್ವದ ತಂಡದಲ್ಲಿದ್ದ ಏಕೈಕ ಮುಸಲ್ಮಾನ ಕೆಕೆ ಮೊಹಮ್ಮದ್ ತಮ್ಮ ಒಂದು ಸಂದರ್ಶನದಲ್ಲಿ ಮಸೀದಿಯ ಅಡಿಯಲ್ಲಿ ಮಂದಿರದ ಅವಶೇಷಗಳಿದ್ದುದನ್ನೂ ಒಪ್ಪಿದ್ದಲ್ಲದೇ ‘ವಿವಾದ ಶುರುವಾದಾಗ ಜೆಎನ್ಯು ಇತಿಹಾಸಕಾರರು ನಮ್ಮ ಮಹತ್ವದ ಸಂಶೋಧನೆಗಳನ್ನೆಲ್ಲಾ ಸಮಾಧಿ ಮಾಡಿಬಿಟ್ಟರು. ಎಡಪಂಥೀಯ ಇತಿಹಾಸಕಾರರು ಮತ್ತು ಮಾಧ್ಯಮದ ಒಂದು ವರ್ಗ ಸತ್ಯದೊಂದಿಗೆ ಆಟವಾಡಿತಲ್ಲದೇ ಮಸೀದಿಯ ಕೆಳಗೆ ಏನೂ ಇರಲಿಲ್ಲವೆಂಬ ಸುಳ್ಳು ಭಾವನೆಯನ್ನು ಜನರಲ್ಲಿ ಬಿತ್ತಿದರು. ಅವರೇನಾದರೂ ಅಂದು ನಮ್ಮ ಸಂಶೋಧನೆಯನ್ನು ಸಮಾಜಕ್ಕೆ ಸರಿಯಾಗಿ ಮುಟ್ಟಿಸಿದ್ದಿದ್ದರೆ ಇಷ್ಟೊಂದು ಅಹಿತಕರ ಘಟನೆಗಳು ನಡೆಯುತ್ತಲೇ ಇರಲಿಲ್ಲ. ಇಷ್ಟಕ್ಕೂ ಬಹುತೇಕ ಮುಸಲ್ಮಾನರು ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರಲ್ಲದೇ ಹಿಂದೂ ಸಮುದಾಯದವರ ಭಾವನೆಗಳನ್ನು ಗೌರವಿಸಲು ಸಿದ್ಧರಿದ್ದಾರೆ. ಎಡಪಂಥೀಯ ಇತಿಹಾಸಕಾರರು ಮತ್ತು ಮಾಧ್ಯಮಗಳಿಗೆ ಮಾತ್ರ ಇದು ಬೇಕಿಲ್ಲ ಅಷ್ಟೇ’ ಎಂದು ಗುಡುಗಿದ್ದರು.

ಈ ಆಧಾರದ ಮೇಲೆ ಈ ವಿವಾದದಿಂದ ಉಂಟಾಗಿರುವ ಸಾವು-ನೋವುಗಳನ್ನು ಗಮನದಲ್ಲಿರಿಸಿಕೊಂಡು ಈ ಎಲ್ಲಾ ಎಡಪಂಥೀಯ ಇತಿಹಾಸಕಾರರನ್ನು ಮತ್ತು ಅಂದು ಬೆಂಕಿ ಹಚ್ಚಿದ ಕೆಲವು ಪತ್ರಕರ್ತರನ್ನು ಸುಪ್ರೀಂಕೋಟರ್ು ವಿಚಾರಣೆಗೆ ಕರೆಸಿ ಕಠಿಣವಾದ ಶಿಕ್ಷೆ ನೀಡಬೇಕು. ಅದನ್ನು ಬಿಟ್ಟು ಮಂದಿರ-ಮಸೀದಿಯ ಈ ಚಚರ್ೆ ಪ್ರಮುಖವಾದುದಲ್ಲವೆಂದು ವಿಚಾರಣೆಯೇ ನಡೆಸದೇ ಅದನ್ನು ಮುಂದಕ್ಕೆ ಹಾಕುತ್ತದಲ್ಲ ಸುಪ್ರೀಂಕೋಟರ್ು ಸರಿಯಾದ ಕ್ರಮವೇ ಇದು? ನಮ್ಮ ನ್ಯಾಯಾಲಯಗಳಿಗೆ ಸೆಲೆಬ್ರಿಟಿಗಳ ಸಮಸ್ಯೆಯನ್ನು ಮಧ್ಯರಾತ್ರಿಯಾದರೂ ಕೇಳಲು ಪುರುಸೊತ್ತಿರುತ್ತದೆ. ನಗರ ನಕ್ಸಲರ ನೋವನ್ನು ಇತರೆಲ್ಲ ಕೆಲಸ ಬಿಟ್ಟು ಕೇಳಲು ವ್ಯವಸ್ಥೆ ಇದೆ. ಆದರೆ ಅಸಂಖ್ಯ ಹಿಂದೂಗಳ ಶ್ರದ್ಧೆಯನ್ನು ಮಾತ್ರ ಗೌರವಿಸಲು ಪೊರಸೊತ್ತಿಲ್ಲ. ಇದನ್ನು ಒಪ್ಪುವುದಾದರೂ ಹೇಗೆ? ಅಯೋಧ್ಯೆ ಭಾರತದೊಂದಿಗೆ ಬೆಸೆದುಕೊಂಡಿರುವುದು ಕಳೆದ ನೂರಿನ್ನೂರು ವರ್ಷಗಳಿಂದಲ್ಲ. ಕನಿಷ್ಠ ಏಳೆಂಟು ಸಹಸ್ರ ವರ್ಷಗಳಿಂದ. ಉತ್ತರ ಮತ್ತು ದಕ್ಷಿಣ ಎಂದು ಭೇದ ಮಾಡುವವರು ಒಂದನ್ನಂತು ನೆನಪಿಡಬೇಕು. ರಾಮ ಉತ್ತರ-ದಕ್ಷಿಣಗಳನ್ನು ಬೆಸೆದು ಬಲಾಢ್ಯ ರಾಷ್ಟ್ರ ಕಟ್ಟಿದ ಪುಣ್ಯಾತ್ಮ ಅಂತ. ಇಂದಿಗೂ ದಕ್ಷಿಣದವರು ಕೂಡ ಉತ್ತರ ಭಾರತದ ಪ್ರವಾಸಕ್ಕೆ ಹೋದರೆ ಅವರು ಕೆಂಪುಕೋಟೆಯನ್ನೋ ತಾಜ್ಮಹಲ್ ಅನ್ನೋ ನೋಡಬೇಕೆಂದು ಹೋಗುವುದಲ್ಲ; ಅವರು ದಶರ್ಿಸಬೇಕಾಗಿರುವುದು ಕಾಶಿ, ಮಥುರಾ, ಅಯೋಧ್ಯೆಗಳನ್ನೇ.

ಈ ಎಲ್ಲಾ ಪ್ರಕರಣಗಳಲ್ಲಿ ಗೊಂದಲಕ್ಕೀಡಾಗಿ ಮುಂದೇನು ಮಾಡಬೇಕೆಂದು ತಿಳಿಯದೇ ಚಡಪಡಿಸುತ್ತಿರುವುದು ಪ್ರತಿಪಕ್ಷಗಳೇ. ಕಾಂಗ್ರೆಸ್ ಎರಡು ಅಲಗಿನ ಕತ್ತಿಯ ಮೇಲೆ ನಡೆಯುತ್ತಿದೆ. ಮಧ್ಯಪ್ರದೇಶದಲ್ಲಿ ರಾಮನ ಗುಣಗಾನ ಮಾಡಿ ವೋಟು ಕೇಳುತ್ತಿರುವ ಪಾಟರ್ಿ ಗುಜರಾತಿನಲ್ಲಿ ಶಿವ ಭಕ್ತರಂತೆ ನಟಿಸಿದ ಪಾಟರ್ಿ ಈಗ ಅಯೋಧ್ಯೆಯಲ್ಲಿ ರಾಮಮಂದಿರ ಬೇಕು ಎಂದು ಧೈರ್ಯವಾಗಿ ಹೇಳಲಾಗದೇ ಬೇಡವೆಂದು ಧಿಕ್ಕರಿಸಲಾಗದೇ ತೊಳಲಾಡುತ್ತಿದೆ. ಇಡಿಯ ಪ್ರಕರಣದ ಕುರಿತಂತೆ ರಾಹುಲ್ ಮಾತನಾಡುತ್ತಲೇ ಇಲ್ಲ. ಏಕೆಂದರೆ ರಾಮಮಂದಿರದ ವಿಚಾರದಲ್ಲಿ ಮುಸಲ್ಮಾನರ ಪರವಾಗಿ ನಿಂತು ವಾದ ಮಾಡುತ್ತಿರುವುದು ಕಾಂಗ್ರೆಸ್ಸಿನ ಪ್ರಮುಖ ನಾಯಕರಾದ ಕಪಿಲ್ ಸಿಬಲ್ರೇ. ಮಂದಿರ ನಿಮರ್ಾಣ ಖಾತ್ರಿ ಎಂದು ಅರಿವಾದೊಡನೆ ಸಿಬಲ್ ನ್ಯಾಯಾಲಯದ ಮೊರೆ ಹೋಗಿ 2019ರ ಚುನಾವಣೆ ಮುಗಿಯುವವರೆಗೂ ಈ ಕುರಿತಂತ ಯಾವ ನಿರ್ಣಯವನ್ನೂ ಕೊಡಬಾರದೆಂದು ಅಹವಾಲು ಮಂಡಿಸಿದ್ದರು. ಪುಣ್ಯಕ್ಕೆ ಅದನ್ನು ಕಸದ ಬುಟ್ಟಿಗೆಸೆದ ಸುಪ್ರೀಂಕೋಟರ್ು ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಒಂದೆಡೆ ತಮ್ಮನ್ನು ತಾವು ಹಿಂದುವೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಾಯಕರನ್ನು ಅನುಸರಿಸಬೇಕೋ, ಮತ್ತೊಂದೆಡೆ ರಾಮಮಂದಿರ ನಿಮರ್ಾಣವೇ ಆಗಬಾರದೆಂದು ಹಠ ಹಿಡಿದು ನಿಂತಿರುವ ಕಪಿಲ್ ಸಿಬಲ್ರಂತಹ ಕಾಂಗ್ರೆಸ್ಸಿನ ಥಿಂಕ್ ಟ್ಯಾಂಕ್ಗಳನ್ನು ಅನುಸರಿಸಬೇಕೋ ಎಂಬ ಗೊಂದಲಕ್ಕೆ ಈಗ ಕಾಂಗ್ರೆಸ್ ಕಾರ್ಯಕರ್ತ ಬಿದ್ದಿದ್ದಾನೆ. ಅಕ್ಷರಶಃ ಅವನದ್ದು ಹುಚ್ಚಾಸ್ಪತ್ರೆಯ ರೋಗಿಯ ಪರಿಸ್ಥಿತಿ. ಹಿಂದೂಗಳ ಪರವಾಗಿ ನಿಂತಿದ್ದೇನೆ ಎಂದು ಕಾಂಗ್ರೆಸ್ಸು ಹೇಳುವುದು ನಿಜವೇ ಆದರೆ ರಾಮಮಂದಿರದ ಪರವಾಗಿ ಮಾತನಾಡುವುದು ಆಮೇಲೆ ಮೊದಲು ಕಪಿಲ್ ಸಿಬಲ್ರನ್ನು ಹೊರದಬ್ಬಬೇಕಿದೆ. ಆಗ ಹಿಂದೂಗಳು ಅವರನ್ನು ನಂಬಬಹುದಷ್ಟೇ.

ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳಷ್ಟೇ ಬಾಕಿ. ಈ ಬಾರಿ ಚುನಾವಣೆಯಲ್ಲಿ ಹಿಂದೂ ಮತಗಳು ನಿಣರ್ಾಯಕವಾಗಲಿವೆ ಎಂಬುದಂತೂ ಖಾತ್ರಿ ಇದೆ. ಹೀಗಾಗಿ ಕಾಂಗ್ರೆಸ್ಸು ರಾಮಮಂದಿರದ ನಿರ್ಣಯವನ್ನು ವಿರೋಧಿಸಲಾರದು. ಅತ್ತ ಉತ್ತರ ಪ್ರದೇಶದಲ್ಲಿ ತಮ್ಮ ಸ್ಥಾನ ಭದ್ರವಾಗಿರಬೇಕೆಂದರೆ ಮುಸಲ್ಮಾನರನ್ನು ಒಲಿಸಿಕೊಳ್ಳಬೇಕು. ಆದರೆ ಹಿಂದೂಗಳ ದ್ವೇಷ ಕಟ್ಟಿಕೊಳ್ಳಬಾರದೆಂದರಿತಿರುವ ಎಸ್ಪಿ ಬಿಎಸ್ಪಿಗಳು ತಮ್ಮ ಮಾತಿನ ವರಸೆಯನ್ನೇ ಬದಲಾಯಿಸಿವೆ. ಸದ್ಯದ ಮಟ್ಟಿಗೆ ರಾಮಮಂದಿರದ ನಿಮರ್ಾಣದ ವಿರುದ್ಧವಾಗಿ ಹೇಳಿಕೆ ಕೊಡಬಲ್ಲ ಏಕೈಕ ವ್ಯಕ್ತಿ ಮಮತಾ ಬ್ಯಾನಜರ್ಿ ಮಾತ್ರ. ಕಳೆದ ಆರೇಳು ತಿಂಗಳಿಂದ ಪಶ್ಚಿಮ ಬಂಗಾಳದಲ್ಲಿ ಹಿಂದೂ ಒಗ್ಗಟ್ಟು ರೂಪುಗೊಳ್ಳುತ್ತಿರುವುದನ್ನು ನೋಡಿದರೆ ಆಕೆಯೂ ಮೆತ್ತಗಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಇನ್ನು ರಾಮಮಂದಿರದ ನಿರ್ಣಯದ ವಿಚಾರದಲ್ಲಿ ಎದುರಿನಲ್ಲಿರುವ ಇತರ ಪಕ್ಷಗಳ ಮೌಲ್ಯ ಗಣನೆಗೆ ಬಾರದಷ್ಟಿರುವುದರಿಂದ ಚುನಾವಣೆಗೆ ಮುನ್ನವೇ ರಾಮಮಂದಿರದ ನಿಮರ್ಾಣ ಖಾತ್ರಿ. ಈ ಬಾರಿಯ ಜನಾಗ್ರಹ ಹಿಂದೆಂದಿಗಿಂತಲೂ ಜೋರಾಗುವುದಲ್ಲದೇ ಇದು ರಾಮಮಂದಿರದ ನಿಮರ್ಾಣದೊಂದಿಗೆ ಪರ್ಯವಸಾನಗೊಳ್ಳುವುದು ನಿಶ್ಚಿತ. ಅದಾಗಲೇ ಬಾಬಾ ಪರಮಹಂಸದಾಸ್ ಮಂದಿರ ನಿಮರ್ಾಣಕ್ಕಾಗಿ ಉಪವಾಸಕ್ಕೆ ಕೂತಿದ್ದು ಅಸ್ವಸ್ಥಗೊಂಡ ಅವರನ್ನು ಬಲವಂತದಿಂದ ಉಪವಾಸ ತ್ಯಜಿಸುವಂತೆ ಮಾಡಲಾಗಿತ್ತು. ಡಿಸೆಂಬರ್ ಆರರ ವೇಳೆಗೆ ಮಂದಿರ ನಿಮರ್ಾಣ ಆರಂಭವಾಗಲಿಲ್ಲವೆಂದರೆ ತನ್ನ ತಾನು ಜೀವಂತ ದಹಿಸಿಕೊಳ್ಳುವುದಾಗಿ ಅವರು ಕೇಂದ್ರ ಸಕರ್ಾರಕ್ಕೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ಈ ಬಾರಿ ಮುಸಲ್ಮಾನರ ಪ್ರತಿರೋಧದ ಕೂಗು ಬಹಳ ಕಡಿಮೆ ಇದೆ. ಏಕೆಂದರೆ ಅವರ ವಿರೋಧಕ್ಕೆ ಹಣ ಒದಗಿಸಬಲ್ಲ ರಾಷ್ಟ್ರಗಳ್ಯಾವುವೂ ಬಾಕಿ ಉಳಿದಿಲ್ಲ. ಸೌದಿ ಅರೇಬಿಯಾವೂ ಸೇರಿದಂತೆ ಮುಸಲ್ಮಾನ ರಾಷ್ಟ್ರಗಳೆಲ್ಲಾ ಮೋದಿಯ ಅನಿವಾರ್ಯತೆಯನ್ನು ಮನಗೊಂಡಿವೆ. ಅಮೇರಿಕಾ ಪಾಕಿಸ್ತಾನಕ್ಕೆ ಕೊಡುತ್ತಿದ್ದ ಧನಸಹಾಯ ನಿಲ್ಲಿಸಿದೆ. ಹೀಗಾಗಿ ಅತ್ತಲಿಂದಲೂ ಇವರ ಚಟುವಟಿಕೆಗೆ ಹಣ ಹರಿದು ಬರುವುದು ಸಾಧ್ಯವಿಲ್ಲ. ಇನ್ನು ಚೀನಾ ಬುದ್ಧಿವಂತ ರಾಷ್ಟ್ರವಾಗಿರುವುದರಿಂದ ಆಂತರಿಕವಾಗಿ ಅಲ್ಪ-ಸ್ವಲ್ಪ ಸಹಾಯ ಮಾಡುವ ಸಾಧ್ಯತೆಯಿದ್ದರೂ ಮೋದಿಯನ್ನು ಎದುರು ಹಾಕಿಕೊಳ್ಳುವಲ್ಲಿ ಅದೂ ರುಚಿ ತೋರಿಸಲಾರದು. ಅದಾಗಲೇ ಪಾಕಿಸ್ತಾನದಲ್ಲಿ ಚೀನಾದ ಮುಸ್ಲೀಂ ವಿರೋಧಿ ನೀತಿಯ ಕುರಿತಂತೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಬಾರಿ ಮುಸಲ್ಮಾನರಿಗೆ ಯಾವ ಪಕ್ಷಗಳ ನೈತಿಕ ಬೆಂಬಲವಿಲ್ಲ, ಯಾವ ರಾಷ್ಟ್ರಗಳ ಧನಸಹಾಯವೂ ಇಲ್ಲ. ಸ್ವತಃ ಹೋರಾಡುವ ಆತ್ಮಶಕ್ತಿಯೂ ಅವರಿಗಿಲ್ಲ. ಹೀಗಾಗಿ ಮಂದಿರ ನಿಮರ್ಾಣಕ್ಕೆ ಯಾವ ಅಡೆ-ತಡೆಯೂ ಇಲ್ಲ.

ಮುಂದಿನ ರಾಮನವಮಿಯನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಆಚರಿಸೋಣ!

-ಚಕ್ರವರ್ತಿ ಸೂಲಿಬೆಲೆ

3 Comments

3 Comments

 1. ಶಶಿಕಲಾ. ಎಸ್.

  November 26, 2018 at 11:54 am

  ಎಂತಹ ಚರಿತ್ರೆ ನಮ್ಮದು. ನಮ್ಮ ದೇಶದಲ್ಲಿ ನಾವೇ ಹೀನಾಯವಾಗಿ ಬದುಕುವ ಸ್ಥಿತಿ. ನಿನ್ನೆ ನೀವು ಹೇಳಿದಂತೆ ರಾಮನಿಗೇ ಬೇಕಿತ್ತೇನೊ ಇದೆಲ್ಲಾ. ಆದರೂ ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ರಾಮ ಮಂದಿರ ನಿರ್ಮಾಣವೂ ಆಗಬೇಕು, ಮೋದಿ ಮತ್ತೊಂದು ಬಾರಿಗೆ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿಯಲೇ ಬೇಕು.ಶತ್ರುವನ್ನು ತೃಣಮಾತ್ರವೂ ನಿರ್ಲಕ್ಷಿಸುವಂತಿಲ್ಲ.

  • Adarsh

   November 27, 2018 at 6:33 pm

   thats the spirit

 2. Adarsh

  November 27, 2018 at 6:36 pm

  ಕಟ್ಟಿಯೇ ಬಿಡೋಣ ರಾಮಮಂದಿರ! ಹಾರಿಸಿಯೇ ಬಿಡೋಣ ಕೇಸರೀ ಪತಾಕೆಯ!
  ಜೈ ರಾಮ್ ಜೈ ಜೈ ಶ್ರೀರಾಮ್ !!!

Leave a Reply

Your email address will not be published. Required fields are marked *

Most Popular

To Top