National

ರಾಜೀವ್ ಗಾಂಧಿ ಪರಿವಾರದ ಮೋಜಿನ ಪ್ರವಾಸದ ಬಗ್ಗೆ ವರದಿ ಪ್ರಕಟಿಸಿದ್ದ ಇಂಡಿಯನ್ ಎಕ್ಸ್ ಪ್ರೆಸ್ ಗೆ ರಾಜೀವ್ ಮಾಡಿದ್ದೇನು ಗೊತ್ತೇ?!

ಭಾರತದ ಯುದ್ಧನೌಕೆ ಐ ಎನ್ ಎಸ್ ವಿರಾಟ್ ನಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಮತ್ತವರ ಪರಿವಾರ ರಜೆಯ ಮೋಜಿಗಾಗಿ ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದ ಸತ್ಯವನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಆ ದಿನಗಳಲ್ಲಿ ಇದರ ವಿರುದ್ಧ ವರದಿಗಳು ಪ್ರಕಟವಾಗಿಲ್ಲವೆಂದೇನಿಲ್ಲ. ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಇಂಡಿಯಾ ಟುಡೇ ಪತ್ರಿಕೆಗಳು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಹೊರಹಾಕಿತ್ತು.

ಇದೀಗ ಇಂಡಿಯನ್ ಎಕ್ಸ್ ಪ್ರೆಸ್ ಹೀಗೆ ರಾಜೀವ್ ಗಾಂಧಿ ಮತ್ತು ಪರಿವಾರದ ವಿರುದ್ಧ ಸತ್ಯವನ್ನು ಹೊರಹಾಕಿದ ಪರಿಣಾಮ ತಮಗಾದ ತೊಂದರೆಗಳನ್ನು, ಕಾಂಗ್ರೆಸ್ಸು ತಮಗೆ ಒಡ್ಡಿದ್ದ ಸವಾಲುಗಳನ್ನು ಜನರ ಮುಂದಿರಿಸಿದೆ! ಇಂದು ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ನಿರುಪಮಾ ಸುಬ್ರಮಣಿಯನ್ ಅವರು ಇದರ ಕುರಿತ ವರದಿಯನ್ನು ಪ್ರಕಟಿಸಿದ್ದಾರೆ. ಈ ವಿಷಯವನ್ನು ಹೊರತರುವ ಮೂಲಕ ಪ್ರಧಾನಿ ಮೋದಿಯವರು ಅಧಿಕಾರದಲ್ಲಿರುವವರಿಗೆ ಪ್ರಶ್ನೆಗಳನ್ನು ಕೇಳಬೇಕೆಂಬುದನ್ನು ಮನವರಿಕೆ ಮಾಡಿಸಿದ್ದಾರೆ ಎಂದಿದ್ದಾರೆ ಸುಬ್ರಮಣಿಯನ್ ಅವರು.

ವರ್ಷದ ಕೊನೆಯಲ್ಲಿ ರಜೆಯನ್ನು ಅನುಭವಿಸುವ ಮತ್ತು ಕ್ಯಾಬಿನೆಟ್ ಸಭೆಗಳನ್ನು ಪ್ರವಾಸಿ ತಾಣಗಳಲ್ಲಿ ನಡೆಸುವ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಕಂಡು ಬರುವ ಈ ಸಂಸ್ಕೃತಿ ಭಾರತಕ್ಕೆ ಕಾಲಿರಿಸಿದ್ದೇ ರಾಜೀವ್ ಗಾಂಧಿಯವರು ಪ್ರಧಾನಮಂತ್ರಿಯಾದ ನಂತರ ಎಂದಿದ್ದಾರೆ ನಿರುಪಮಾ ಸುಬ್ರಮಣಿಯನ್. ಈ ವರದಿ ಪ್ರಕಟವಾದ ನಂತರ ರಾಜೀವ್ ಮತ್ತು ಕಾಂಗ್ರೆಸ್ ಸರ್ಕಾರ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಮಸ್ಯೆಗಳನ್ನೂ ಅವರು ಬರೆದಿದ್ದಾರೆ.

ಆ ದಿನಗಳಲ್ಲಿ ಈ ಮೋಜಿನ ಪ್ರವಾಸದ ಕುರಿತಂತೆ ಇಂಡಿಯನ್ ಎಕ್ಸ್ ಪ್ರೆಸ್ ಕಾರ್ಟೂನ್ ಒಂದನ್ನು ಪ್ರಕಟಿಸಿತ್ತು. ಆ ಕಾರ್ಟೂನ್ ನಲ್ಲಿ ರಾಜೀವ್ ಅವರು ತೆಂಗಿನಮರದ ಕೆಳಗೆ ಕುಳಿತು ‘ಓಹ್! ಇವೆಲ್ಲದರಿಂದ ದೂರವುಳಿಯಲು’ ಎಂದು ಹೇಳುತ್ತಿರುವಂತೆ ಮತ್ತು ಭಾರತ ಇದಕ್ಕೆ ‘ಯಾವಾಗ?’ ಎಂದು ಪ್ರಶ್ನಿಸುತ್ತಿರುವಂತೆ ಚಿತ್ರಿಸಲಾಗಿತ್ತು. ಈ ಕಾರ್ಟೂನ್ ನನ್ನು ಪ್ರಕಟಿಸಿದ ನಂತರ ರಾಜೀವ್ ಪತ್ರಿಕೆಯ ಮೇಲೆ ಹರಿಹಾಯ್ದಿದ್ದರು. ಇದಾದ ನಂತರವೇ ರಾಜೀವ್ ಅವರು ಮಾನನಷ್ಟ ವಿರೋಧಿ ಮಸೂದೆ 1988 ಅನ್ನು ಜಾರಿಗೊಳಿಸಲು ಮುಂದಾಗಿದ್ದು. ಮಾಧ್ಯಮಗಳೆಲ್ಲಾ ಒಟ್ಟಾಗಿ ಸೇರಿ ಇದನ್ನು ವಿರೋಧಸಿದ್ದವು!

1988 ರ ಈ ಮಸೂದೆಯನ್ನು ಜಾರಿಗೊಳಿಸುವಲ್ಲಿ ರಾಜೀವ್ ಅವರಿಗಿದ್ದ ಉದ್ದೇಶವೆಂದರೆ ಈ ರೀತಿಯ ಶಾಸನ ವಿರೋಧಿ ಬರಹಗಳು, ಅಪಹಾಸ್ಯದ ಬರಹಗಳನ್ನು ತಡೆಹಿಡಿಯುವುದು! ಆದರೆ ಮಾಧ್ಯಮಗಳ ವಿರೋಧವನ್ನು ಎದುರಿಸಲಾರದೇ ರಾಜೀವ್ ಈ ಮಸೂದೆಯನ್ನು ಕೈಬಿಟ್ಟರು.

ಈ ಕಾರ್ಟೂನ್ ಪ್ರಕಟವಾದ ನಂತರ ಇಂಡಿಯನ್ ಎಕ್ಸ್ ಪ್ರೆಸ್ ನ ಕಛೇರಿಯ ಮೇಲೆ ತೆರಿಗೆಯನ್ನು ತಪ್ಪಿಸಿಕೊಂಡಿದ್ದಾರೆಂಬ ಆರೋಪದ ಮೇಲೆ ಹಲವು ಬಾರಿ ದಾಳಿಯೂ ನಡೆದಿತ್ತು ಎಂದು ನಿರುಪಮಾ ಅವರು ನೆನಪಿಸಿಕೊಳ್ಳುತ್ತಾರೆ. ‘ಅಂದು ಕಛೇರಿಯಲ್ಲಿ ದಾಳಿ ನಡೆಸುವ ಸಂದರ್ಭದಲ್ಲಿ ಸಿಆರ್ಪಿಎಫ್ ನವರು ಮತ್ತು ದೆಹಲಿ ಪೊಲೀಸರು ಕಛೇರಿಯ ಹೊರಗೆ, ಒಳಗೆ ನಡೆದುಕೊಳ್ಳುತ್ತಿದ್ದುದನ್ನು ನೋಡಿದರೆ ಅದು ತೆರಿಗೆ ದಾಳಿಗಿಂತ ಬೇರೆಯೇ ಎನಿಸುತ್ತಿತ್ತು’ ಎಂದು ಬರೆದಿದ್ದಾರೆ.

ಸೋನಿಯಾ ಪರಿವಾರದ ಈ ಭಯಾನಕ ಸತ್ಯ ಹೊರಬರದೇ ಮುಚ್ಚಿಹೋಗಿಬಿಡುತ್ತಿತ್ತು. ಪ್ರಧಾನಮಂತ್ರಿ ನರೇಂದ್ರಮೋದಿಯವರು ಮತ್ತೆ ನೆನಪಿಸುವ ಮೂಲಕ ಸೈನ್ಯದ ದುರ್ಬಳಕೆಯನ್ನು ಮಾಡಿರುವವರನ್ನು ಜನರ ಮುಂದೆ ಬೆತ್ತಲಾಗುವಂತೆ ಮಾಡಿದ್ದಾರೆ!

Click to comment

Leave a Reply

Your email address will not be published. Required fields are marked *

Most Popular

To Top