National

ರಾ(ಗಾ)ಫೇಲ್, ದೇಶ ಪಾಸ್!

ಕಾಂಗ್ರೆಸ್ಸಿಗೆ ಭಾರೀ ಮುಖಭಂಗ. ಹೆಚ್ಚು-ಕಡಿಮೆ ಕಳೆದ ಒಂದು ವರ್ಷದಿಂದ ರಫೆಲ್ನ ಕುರಿತಂತೆ ಅವರು ಜನರಿಗೆ ಹೇಳುತ್ತಾ ಬಂದಿದ್ದ ಸುಳ್ಳುಗಳೆಲ್ಲಾ ಈಗ ಸುಪ್ರೀಂಕೋಟರ್ಿನಲ್ಲೇ ಕಸದ ಬುಟ್ಟಿಗೆ ಎಸೆಯಲ್ಪಟ್ಟಿದೆ. ಸಂಸತ್ತಿನಲ್ಲಿ ಫ್ರಾನ್ಸಿನ ಅಧ್ಯಕ್ಷರನ್ನೇ ಸುಳ್ಳುಗಾರ ಎನ್ನುವಂತೆ ಮಾತನಾಡಿದ ರಾಹುಲ್ ಅಂದೇ ರಾಷ್ಟ್ರದ ಚುಕ್ಕಾಣಿ ಹೊರುವ ಅರ್ಹತೆಯನ್ನು ಕಳೆದುಕೊಂಡಿದ್ದರು. ಅನ್ಯ ರಾಷ್ಟ್ರವೊಂದರ ಪ್ರಮುಖನನ್ನು, ಅದರಲ್ಲೂ ಆತ ಭಾರತಕ್ಕೆ ಪೂರಕವಾಗಿ ನಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಹೀಗೆ ಅಗೌರವಿಸುವುದು ರಾಜನೀತಿಜ್ಞನೊಬ್ಬನಿಗೆ ತಕ್ಕುದಲ್ಲದ ಮಾತು. ಅದನ್ನು ವಿಶ್ಲೇಷಕರು, ಪತ್ರಕರ್ತರು, ಬೀದಿ ಜಗಳಗಂಟರು ಇವರು ಮಾಡಬಹುದು. ಕಾಂಗ್ರೆಸ್ಸಿನ ಅಧ್ಯಕ್ಷನೆನಿಸಿಕೊಂಡು ರಾಷ್ಟ್ರದ ಚುಕ್ಕಾಣಿ ಹಿಡಿಯುವ ನಾಯಕನಾಗಿ ಬಿಂಬಿಸಿಕೊಂಡ ರಾಹುಲ್ಗೆ ಇದು ಖಂಡಿತ ತಕ್ಕುದ್ದಲ್ಲ! ಹಾಗೆಂದು ಮೊದಲೇ ನಿಶ್ಚಯವಾಗಿತ್ತು. ಆದರೀಗ ಸುಪ್ರೀಂಕೋಟರ್ು ರಾಹುಲ್ ಕೆನ್ನೆಗೆ ಬಾರಿಸಿದ ಮೇಲಂತೂ ಕಾಂಗ್ರೆಸ್ಸಿನ ಘಟಾನುಘಟಿಗಳೆಲ್ಲಾ ಅವಡುಗಚ್ಚಿ ಕುಳಿತಿದ್ದಾರೆ. ಸುಪ್ರೀಂಕೋಟರ್ು ರಫೆಲ್ನಂತಹ ಯುದ್ಧ ವಿಮಾನಗಳ ಖರೀದಿಯ ಕುರಿತಂತೆ ಹೀಗೆ ಎಲ್ಲೆಂದರಲ್ಲಿ ವಿಚಾರಣೆ ನಡೆಸುವುದೇ ತಪ್ಪು ಎಂದಿದ್ದಲ್ಲದೇ ಕೇಂದ್ರಸಕರ್ಾರ ಕೊಟ್ಟಿರುವ ವರದಿ ಸಮಾಧಾನಕರವಾಗಿದೆ ಎಂದೂ ಹೇಳಿದೆ. ಇಷ್ಟಕ್ಕೂ ಮೊದಲ ಬಾರಿಗೆ ರಕ್ಷಣಾ ಇಲಾಖೆಯ ಒಪ್ಪಂದ ಮಧ್ಯವತರ್ಿಯೇ ಇಲ್ಲದೇ ರಾಷ್ಟ್ರ-ರಾಷ್ಟ್ರಗಳ ನಡುವೆ ನಡೆದಿರುವುದು ಹೆಮ್ಮೆ ಪಡಬೇಕಾದ ವಿಚಾರ. ಹೀಗಾಗಿಯೇ ಮುಖ್ಯ ಡೀಲನ್ನು ಪಕ್ಕಕ್ಕಿಟ್ಟು ರಿಲಯನ್ಸ್ಗೆ ಆಫ್ಸೆಟ್ ಹಣದಲ್ಲಿ ಅತ್ಯಂತ ಸಣ್ಣ ಪಾಲೊಂದನ್ನು ಕೊಟ್ಟು ಯುದ್ಧವಿಮಾನಗಳ ಬಿಡಿಭಾಗ ನಿಮರ್ಾಣಕ್ಕೆ ಅದರಿಂದ ಸಹಕಾರ ಪಡೆದುಕೊಳ್ಳುತ್ತಿರುವುದನ್ನೇ ಹಗರಣವೆಂದು ಕಾಂಗ್ರೆಸ್ಸಿಗರು ಕೂಗಾಡುತ್ತಿದ್ದಾರೆ. ಅಚ್ಚರಿಯೇನು ಗೊತ್ತೇ? ಹೀಗೆ ಕೂಗಾಡುವವರೆಲ್ಲ ಅಂಬಾನಿಯ ಮಗಳ ಮದುವೆಗೆ ಹೋಗಿ ಕುಡಿದು, ಕುಣಿದು ಕುಪ್ಪಳಿಸಿ ಬಂದಿದ್ದಾರೆ!

ರಫೆಲ್ ವಿಚಾರದಲ್ಲಿ ರಾಹುಲ್ ಸಂಪೂರ್ಣ ಫೇಲ್ ಆಗಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಇಡಿಯ ಕಾಂಗ್ರೆಸ್ಸು ಸುಪ್ರೀಂಕೋಟರ್ು ಕೊಟ್ಟಿರುವ ತೀಪರ್ು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ ಎಂದು ಮತ್ತೆ ಸಕರ್ಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದರೆ ಅತ್ತ ಕೇಂದ್ರಸಕರ್ಾರ ತಾನೇ ಮುನ್ನುಗ್ಗಿ ಪೂರ್ಣ ನಿರ್ಣಯವನ್ನು ಮಂಡಿಸಬೇಕೆಂದು ಸುಪ್ರೀಂಕೋರ್ಟನ್ನು ಕೇಳಿಕೊಂಡಿದೆ. ಅಷ್ಟೇ ಅಲ್ಲ, ನರೇಂದ್ರಮೋದಿ ಸಕರ್ಾರ ಪ್ರಗತಿಯ ಹೆಜ್ಜೆಯನ್ನು ಒಂದೊಂದಾಗಿಯೇ ಬಲವಾಗಿ ಊರುತ್ತಾ ರಾಷ್ಟ್ರದ ಕುರಿತಂತ ತನ್ನ ಬದ್ಧತೆಯನ್ನು ಪ್ರದಶರ್ಿಸಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಭಾರತ ತನ್ನ ಸುತ್ತಲೂ ಇರುವ ಸಮುದ್ರವನ್ನು ಸಾಗಾಣಿಕೆಗೆ ಎಂದೂ ಬಳಸಿಕೊಂಡೇ ಇರಲಿಲ್ಲ. ನದಿಗಳು ಕೊಳಕು ಚೆಲ್ಲುವ ಚರಂಡಿಯಾಗಷ್ಟೇ ಬಳಕೆಯಾಗುತ್ತಿದ್ದವು. ನೆನಪಿಡಿ. ಯಾವಾಗ ವಸ್ತುವೊಂದನ್ನು ನಾವು ಭಿನ್ನ-ಭಿನ್ನ ರೂಪಗಳಲ್ಲಿ ಬಳಸಿಕೊಳ್ಳುವುದಿಲ್ಲವೋ ಆಗ ಅದರ ಅಗತ್ಯ ಕಡಿಮೆಯಾಗುತ್ತಲೇ ಹೋಗುತ್ತದೆ. ಸಹಜವಾಗಿಯೇ ಅದು ಹಾಳಾಗುತ್ತದೆ. ಹೀಗಾಗಿಯೇ ಗಂಗಾಶುದ್ಧಿ ಎನ್ನುವುದು ಗಂಗೆಯನ್ನು ವಿಭಿನ್ನವಾಗಿ ಬಳಸಿಕೊಳ್ಳುವ ಚಿಂತನೆಯಾಗಿಯೇ ಮಾರ್ಪಡಬೇಕಿತ್ತು. ನಿತಿನ್ ಗಡ್ಕರಿ ಅಧಿಕಾರ ಪಡೆದೊಡನೆ ಜಲಮಾರ್ಗವನ್ನು ವಿಸ್ತಾರವಾಗಿ ಬಳಸಿಕೊಳ್ಳುವ ಆಲೋಚನೆಗಳನ್ನು ರೂಪಿಸಿದರು. ಬ್ರಿಟೀಷರ ಕಾಲದಿಂದಲೂ ಜಲಮಾರ್ಗದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಭೂಮಾರ್ಗ ಮತ್ತು ರೈಲು ಮಾರ್ಗಗಳ ಮೇಲೆ ಭಾರತದ ವ್ಯಾಪಾರ ನಿರ್ಭರವಾಗುವಂತೆ ಮಾಡುವಲ್ಲಿ ಬಂಡವಾಳಶಾಹಿಗಳ ಸ್ವಾರ್ಥವೊಂದು ಅಡಗಿತ್ತು. ಜೊತೆಗೆ ಭಾರತ ಬೆಳೆದುಬಿಟ್ಟೀತೆಂಬ ಹೆದರಿಕೆ ಕೂಡ. ಹೀಗಾಗಿ ಅವರಂತೂ ಅದನ್ನು ವ್ಯಾಪಕಗೊಳಿಸುವ ಪ್ರಯತ್ನ ಮಾಡಲಿಲ್ಲ. ಆನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸು ಅದರ ಬಗ್ಗೆ ಎಂದೂ ಯೋಚಿಸಲೂ ಇಲ್ಲ. ಗುಜರಾತಿನ ಮುಖ್ಯಮಂತ್ರಿಯಾದಾಗಿನಿಂದಲೂ ಈ ಕುರಿತಂತೆ ಸದಾ ಮಾತನಾಡುತ್ತಿದ್ದ ಮೋದಿ ಬದಲಾವಣೆಗೆ ಕೈ ಹಾಕಿದರು. ಪರಿಣಾಮ ನೀವು ನ್ಯಾಷನಲ್ ಹೈವೇಗಳನ್ನು ಕೇಳಿದ್ದೀರಲ್ಲ, ಹಾಗೆಯೇ ಈಗ ಕೋಲ್ಕತ್ತಾ ಮತ್ತು ವಾರಣಾಸಿಗಳ ನಡುವೆ ನ್ಯಾಷನಲ್ ವಾಟರ್ವೇ ನಿಮರ್ಾಣವಾಗಿದೆ. ಈ ಜಲಮಾರ್ಗದ ಮೂಲಕ ಸಾಗಿಬಂದ ಮೊದಲ ಕಂತಿನ ಸರಕನ್ನು ನರೇಂದ್ರಮೋದಿಯವರೇ ಸ್ವೀಕಾರ ಮಾಡಿ ಹೊಸದೊಂದು ಅಧ್ಯಾಯವನ್ನೇ ಬರೆದಿದ್ದಾರೆ. ಒಂದೇ ತಿಂಗಳೊಳಗೆ ಲಕ್ಷಾಂತರ ಟನ್ನುಗಳಷ್ಟು ಸರಕನ್ನು ಜಲಮಾರ್ಗದ ಮೂಲಕ ಸಾಗಿಸಿ ಭಾರತ ವಿಕ್ರಮವನ್ನೇ ಮೆರೆದಿದೆ. ಮುಂದಿನ ಒಂದು ವರ್ಷದಲ್ಲಿ ಭಾರತದ ಗುರಿ 280 ಲಕ್ಷ ಟನ್ನುಗಳನ್ನು ಸಾಗಿಸುವುದೆಂದು ನಿತಿನ್ ಗಡ್ಕರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಇದರಿಂದ ದೇಶಕ್ಕಾಗುವ ಉಳಿತಾಯವನ್ನು ಸಣ್ಣದೊಂದು ಲೆಕ್ಕಾಚಾರದ ಮೂಲಕ ನಿಮ್ಮ ಮುಂದೆ ಬಿಡಿಸಿಡುತ್ತೇನೆ. ರಸ್ತೆಯ ಮೂಲಕ ಒಂದು ಟನ್ ವಸ್ತುವನ್ನು ಸಾಗಿಸಲು 10 ರೂಪಾಯಿ ಖಚರ್ಾದರೆ ರೈಲಿನ ಮೂಲಕ ಅದಕ್ಕೆ 6 ರೂಪಾಯಿ ಖಚರ್ಾಗುತ್ತದೆ. ಜಲಮಾರ್ಗದಲ್ಲಿ ಇಷ್ಟೇ ಪ್ರಮಾಣದ ವಸ್ತು ಸಾಗಾಣಿಕೆಗೆ ಖಚರ್ಾಗುವುದು ಬರೇ 1 ರೂಪಾಯಿ ಮಾತ್ರ! ಇಂಧನವಾಗಿ ಡೀಸೆಲ್ನ ಬದಲು ಮೆಥನಾಲನ್ನು ಬಳಸಿದರೆ ಈ ದರ 50 ಪೈಸೆಗೆ ಇಳಿಯಲಿದೆ ಎಂದು ಗಡ್ಕರಿ ಹೇಳುವಾಗ ಭವಿಷ್ಯದ ಮುನ್ಸೂಚನೆ ಕಣ್ಣಿಗೆ ರಾಚುತ್ತಿತ್ತು! ಅನೇಕರು ನರೇಂದ್ರಮೋದಿ 60 ವರ್ಷಗಳಲ್ಲಿ ಏನಾಯ್ತು ಎಂದು ಪ್ರಶ್ನಿಸಿದಾಗ ಕೋಪಿಸಿಕೊಳ್ಳುತ್ತಾರೆ. ಆದರೆ ಸತ್ಯ ಹೇಳಿ, ಭಾರತಕ್ಕೆ ವಾಸ್ಕೋಡಗಾಮ ಜಲಮಾರ್ಗ ಶೋಧಿಸಿಯೇ 500 ವರ್ಷಕ್ಕೂ ಮೇಲಾಯ್ತು. ಕಳೆದ 50 ವರ್ಷಗಳಲ್ಲಿ ಭಾರತದ ವಸ್ತು ಸಾಗಾಣಿಕೆಗೆ ಜಲಮಾರ್ಗ ಶೋಧಿಸಲು ನಮ್ಮಿಂದ ಸಾಧ್ಯವಾಗಲಿಲ್ಲವಲ್ಲ. ಇದರಿಂದಾಗಿ ಭಾರತಕ್ಕಾದ ನಷ್ಟ ಮತ್ತು ಏರುತ್ತಿರುವ ವಸ್ತುಗಳಿಗೆ ಈ ದೇಶದ ನಾಗರಿಕ ತೆತ್ತ ಹಣದ ಲೆಕ್ಕಾಚಾರವನ್ನು ಯಾರಾದರೂ ಮಾಡಿದ್ದೇವಾ?! ಇಷ್ಟೂ ವರ್ಷ ಆಳಿದ ಸಕರ್ಾರಗಳು ಈ ಕುರಿತಂತೆ ಏಕೆ ಆಲೋಚಿಸಲಿಲ್ಲವೆಂದು ಕೇಳುವುದೂ ತಪ್ಪಾ?! ಅಥವಾ ಇಂಥದ್ದೊಂದು ಆಲೋಚನೆ ಅವರ ತಲೆಗೆ ಹೊಳೆದಿರಲಿಲ್ಲವೆಂದರೆ ಇಂತಹ ಅಪರೂಪದ ಸಾಧನೆಗಳನ್ನು ಮಾಡುತ್ತಿರುವ ನರೇಂದ್ರಮೋದಿಯವರಿಗೆ ಇನ್ನೊಂದು ಅವಧಿ ಕೊಟ್ಟರೆ ತಪ್ಪೇನು? ಸರಳವಾದ ಪ್ರಶ್ನೆ ಅಷ್ಟೇ.

ಇದು ನನ್ನೊಬ್ಬನ ಪ್ರಶ್ನೆ ಅಲ್ಲ. ಇಡೀ ದೇಶ ಈಗ ಕೇಳುತ್ತಿದೆ. ಅದಕ್ಕೆ ಅನೇಕರು ಹೇಳುತ್ತಿರುವುದು ರಫೇಲ್ನಲ್ಲಿ ಫೇಲಾದ ಕಾಂಗ್ರೆಸ್ ಪ್ರತಿ ಹಂತದಲ್ಲೂ ಮುಗ್ಗರಿಸುತ್ತಿದೆ. ಅತ್ತ ಮೋದಿ ಪ್ರತಿಯೊಂದು ಕ್ಷಣವೂ ಭಾರತವನ್ನು ಜಗತ್ತಿನೆದುರು ಪ್ರಭಾವಿಯಾಗಿ ನಿಲ್ಲಿಸಲು ಯತ್ನಿಸುತ್ತಿದ್ದಾರೆ. ನೆನಪಿಡಿ. 2019ರಲ್ಲಿ ಮೋದಿ ಮರಳಲಿಲ್ಲವೆಂದರೆ ಫೇಲಾಗುವುದು ಮೋದಿಯಲ್ಲ, ದೇಶ ಮತ್ತು ನಾವು!!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

  1. ಶಶಿಕಲಾ. ಎಸ್.

    December 18, 2018 at 10:36 am

    ನೀವು ಹೇಳುವುದು ಸರಿ. ಯಾರಿಗೂ ದೇಶದ ಬಗ್ಗೆ ಕಾಳಜಿ ಇಲ್ಲ. ಗಾಂಧಿಗಳು ಪ್ರತಿನಿಧಿಸುವ ಕ್ಷೇತ್ರಗಳ ಸ್ಥಿತಿ ನೋಡಿದರೆ ಅವರ ಧೋರಣೆ ತಿಳಿಯುತ್ತೆ. ಈಗಿರುವ ಎಕೈಕ ಮಾರ್ಗ ಸೊಷಿಯಲ್ ಮೀಡಿಯಾ.ಅದನ್ನು ವ್ಯಾಪಕವಾಗಿ ಬಳಸಬೇಕು. ನನ್ನ ಒಂದು ವಿನಂತಿ. ಹಲವಾರು ಉತ್ತಮ ಬರಹಗಾರರು ಎಫ್ಬಿಯಲ್ಲಿ ಯಾವುದೆ ಒಂದು ಘಟನೆ ಅಥವಾ ಹೇಳಿಕೆ ಕುರಿತು ಅನೇಕ ಚಿಕ್ಕ ಚಿಕ್ಕ ಪ್ರತಿಕ್ರಿಯೆಗಳನ್ನು ದಾಖಲಿಸುತ್ತಾ ಹೋಗ್ತಾರೆ. ಹೆಚ್ಚು ಬಾರಿ ಇದು ಹಾಸ್ಯ ಮತ್ತು ವ್ಯಂಗ್ಯದಿಂದ ಕೂಡಿದ್ದು ಲೈಕುಗಳು ಕಮೆಂಟುಗಳು ಹೆಚ್ಚಾಗಿ ಇರತ್ತೆ. ಇದು ಪ್ರಾಯಶಃ ಪರಿಸ್ಥಿತಿಯ ಗಂಭೀರತೆಯನ್ನು ತಿಳಿಗೊಳಿಸುತ್ತೆ ಹಾಗು ಹೆಚ್ಚಿನ ಜನ ಅದನ್ನು ಪೂರ್ಣ ಅರ್ಥೈಸಿ ಕೊಳ್ಳುವುದಿಲ್ಲ ಎಕೆಂದರೆ ಅವರಿಗೆ ಮಾಹಿತಿ ಇರುವುದಿಲ್ಲ. ಈಗಿನ ಹೆಚ್ಚು ಜನರಿಗೆ ಹಾಸ್ಯ, ವ್ಯಂಗ್ಯ, ವಿಡಂಬನೆ ಅರ್ಥವಾಗಲ್ಲ. ಅವರಿಗೆ ಭಾಷೆ ಮಾತ್ರ ಗೊತ್ತು. ಆದ್ದರಿಂದ ಒಂದು ವಿಷಯವನ್ನು ಒಂದು ಬಾರಿ ವಿಶ್ಲೇಷಣೆ ಮಾಡಿ ನಂಬರ್ ಕೊಡಿ. ಅನುಮಾನ ಇದ್ದವರು ನಂಬರ್ ಕೊಟ್ ಮಾಡಿ ನಿಮ್ಮಿಂದ ಮಾಹಿತಿ ಪಡೆಯಲಿ.
    ವಾರ್ತಾ ಮತ್ತು ಪ್ರಚಾರ ಇಲಾಖೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಉತ್ತಮ ಮಾಹಿತಿ ನೀಡುವ ಕರಪತ್ರ ಹೊರ ತಂದಿದೆ. ನೀವು ಅದರ ಸಾಫ್ಟ್ ಕಾಪಿ ಹಾಕಿದರೆ ಒಳ್ಳೆಯದು. ನಿಮಗೆ ಸಿಗದಿದ್ದಲ್ಲಿ ವಿಳಾಸ ತಿಳಿಸಿದರೆ ಪೋಸ್ಟ್ ಮಾಡುತ್ತೆನೆ.

Leave a Reply

Your email address will not be published. Required fields are marked *

Most Popular

To Top