Desi

ರಥಯಾತ್ರೆಗೆ ಪೂರ್ಣವಿರಾಮ ಹಾಕುವ ಮುನ್ನ ಕೆಲವು ಹಳೆಯ ಮೆಲುಕುಗಳು!

ನಾಲ್ಕಾರು ತಿಂಗಳ ಹಿಂದೆ ರಾಮಕೃಷ್ಣ ವಿದ್ಯಾಥರ್ಿ ಮಂದಿರಂನಲ್ಲಿ ಪರಮಪೂಜ್ಯ ಗೌತಮಾನಂದಜೀ ಮಹಾರಾಜ್ ಅವರಿಗೆ ಮುಗಳಖೋಡದಲ್ಲಿ 10,000 ತರುಣರಿಗೆ ವಿವೇಕಾನಂದರ ವೇಷಧಾರಣೆ ಮಾಡಿಸಿದ ಚಿತ್ರಗಳನ್ನೆಲ್ಲಾ ತೋರಿಸುತ್ತಿದ್ದಾಗ ಭಾವುಕರಾದ ಸ್ವಾಮೀಜಿ ತಮಿಳುನಾಡಿನಲ್ಲಿ ನಡೆದ ನಿವೇದಿತಾ ರಥಯಾತ್ರೆಯ ಕಲ್ಪನೆಯನ್ನು ನಮ್ಮೆದುರಿಗೆ ಬಿಚ್ಚಿಟ್ಟರು. ಅಷ್ಟೇ ಆಗಿದ್ದರೆ ಚೆನ್ನಿತ್ತು. ನೀವೇಕೆ ಇದನ್ನು ಮಾಡಬಾರದೆಂದು ಸವಾಲು ಮುಂದಿಟ್ಟರು. ಒಂದು ವರ್ಷದ ಹಿಂದೆಯೇ ಇಂಥದ್ದೊಂದು ರಥಯಾತ್ರೆ ಮಾಡಬೇಕೆಂದು ನಾವು ಕನಸು ಕಟ್ಟಿ ಕಷ್ಟಸಾಧ್ಯವೆಂದರಿತು ಸುಮ್ಮನಾಗಿಬಿಟ್ಟಿದ್ದೆವು. ಆದರೆ ಈಗ ರಣವೀಳ್ಯ ಸಿಕ್ಕ ನಂತರ ಬಿಡುವುದುಂಟೇನು?! ನಾಲ್ಕು ತಿಂಗಳ ಹಿಂದೆ ನಾವೆಲ್ಲಾ ಕುಳಿತು ರಥ ಸಾಗಬೇಕಾದ ಮಾರ್ಗದ ಕುರಿತಂತೆ ನಿವೇದಿತಾ ಪ್ರತಿಷ್ಠಾನದೊಂದಿಗೆ ಸೇರಿ ಚಚರ್ಿಸಿದೆವು. ಈ ಒಟ್ಟಾರೆ ರಥಯಾತ್ರೆಯನ್ನು ಪ್ರತಿಷ್ಠಾನವೇ ಮಾಡಬೇಕೆಂಬ ಬಯಕೆ ವಿಶೇಷವಾಗಿ ನನಗಿತ್ತು. ಎಲ್ಲಿಯವರೆಗೂ ಅಂದರೆ ರಥದ ಚಾಲಕರಿಂದ ಹಿಡಿದು ಕಾರ್ಯಕ್ರಮವನ್ನು ನಡೆಸುವವರೆಗೆ ಪ್ರತಿಯೊಂದನ್ನೂ ಹೆಣ್ಣುಮಕ್ಕಳೇ ಮಾಡಲೆಂಬ ಹೆಬ್ಬಯಕೆ ಕೂಡ. ದಿನಗಳೆದಂತೆ ಪ್ರತಿಷ್ಠಾನದಿಂದ ಇದು ಸಾಧ್ಯವಾಗಲಾರದೆಂಬ ಮುನ್ಸೂಚನೆ ದೊರೆಯಲಾರಂಭಿಸಿದವು. ಆಗ ಯುವಾಬ್ರಿಗೇಡ್ ಈ ಸಾಹಸಮಯ ಕಾರ್ಯಕ್ಕೆ ಧುಮುಕಿತು. ಸಮಯವೂ ಬಹಳ ಇರಲಿಲ್ಲ. ಆದರೆ ನಿರ್ಣಯ ಮಾಡಿಯಾಗಿತ್ತು. ಸಪ್ಟೆಂಬರ್ 11 ಕ್ಕೆ ವಿವೇಕಾನಂದರ ಚಿಕಾಗೊ ಭಾಷಣಕ್ಕೆ 125 ತುಂಬಿದಾಗ ಬೆಂಗಳೂರಿನಲ್ಲಿ ರಥಯಾತ್ರೆ ಆರಂಭವಾಗಬೇಕು, ಅಕ್ಟೋಬರ್ 28 ಕ್ಕೆ ನಿವೇದಿತಾಳಿಗೆ 151 ಆರಂಭವಾಗುವಾಗ ಬಾಗಲಕೋಟೆ ಜಿಲ್ಲೆಯಲ್ಲಿ ಮುಗಿಯಬೇಕು ಎಂದು ನಿಶ್ಚಯವಾಯ್ತು. ಪೂಜ್ಯ ಸ್ವಾಮಿ ತದ್ಯುಕ್ತಾನಂದಜೀ ಮಹಾರಾಜ್ ನಮ್ಮ ಕೆಲಸವನ್ನು ಸ್ವಲ್ಪ ಹಿಗ್ಗಿಸಿ ರಥವನ್ನು ಸ್ವಲ್ಪ ಬೇಗ ಬರಮಾಡಿಕೊಳ್ಳುವ ಪ್ರೇರಣೆ ಕೊಟ್ಟರು. ಹೀಗಾಗಿ ರಥಯಾತ್ರೆ ಆಗಸ್ಟ್ 31 ಕ್ಕೆ ಆರಂಭವಾಯ್ತು. ಬೆಂಗಳೂರನ್ನುಳಿದು ಬೆಂಗಳೂರಿನ ಆಸುಪಾಸಿನ ಜಿಲ್ಲೆಗಳನ್ನೆಲ್ಲಾ ಸಪ್ಟೆಂಬರ್ 11 ಕ್ಕೂ ಮುನ್ನ ಮುಗಿಸುವುದೆಂದು ತೀಮರ್ಾನಿಸಿ ಚಟುವಟಿಕೆ ಆರಂಭಿಸಿಬಿಟ್ಟೆವು.


ರಥವನ್ನು ಕೊಯ್ಮತ್ತೂರಿನಿಂದ ತರಲು ನಾನಷ್ಟೇ ಅಲ್ಲದೇ ರಥದೊಂದಿಗೆ ಅಷ್ಟೂ ದಿನ ಇರಬೇಕಾಗಿದ್ದ ಎಲ್ಲರನ್ನೂ ಕರೆದೊಯ್ದಿದ್ದೆ. ನಮ್ಮಲ್ಲಿದ್ದ ಉತ್ಸಾಹವನ್ನು ಕಂಡ ಕೊಯ್ಮತ್ತೂರು ಮಿಷನ್ ವಿದ್ಯಾಲಯದ ಕಾರ್ಯದಶರ್ಿಗಳಾದ ಸ್ವಾಮಿ ಗರಿಷ್ಠಾನಂದ ಮಹಾರಾಜ್ ಅವರು ಯಾವ ನಿಬಂಧನೆಗಳನ್ನೂ ಹಾಕದೇ ರಥದ ಡೀಸೆಲ್ ಟ್ಯಾಂಕನ್ನೂ ತುಂಬಿಸಿಯೇ ರಥ ನಮ್ಮ ಕೈಗಿತ್ತರು. ಅವರ ಕಂಗಳಲ್ಲಿದ್ದ ಭರವಸೆ ನಮ್ಮ ಜವಾಬ್ದಾರಿಯನ್ನು ಸಾಕಷ್ಟು ಹೆಚ್ಚಿಸಿತ್ತು. ರಥವನ್ನು ಜಿಗಣಿಗೆ ತಂದು ಚೆನ್ನೈನಿಂದ ತಂದ ನಿವೇದಿತಾ ಪ್ರತಿಮೆಯನ್ನು ಅದಕ್ಕೆ ಜೋಡಿಸುವಲ್ಲಿ ಕಾರ್ಯಕರ್ತರು ನಿರತರಾದರು. ಆಗಸ್ಟ್ 31 ಕ್ಕೆ ಜಿಗಣಿಯಿಂದ ಯಾತ್ರೆ ಆರಂಭಗೊಂಡಿತು. ರಥಕ್ಕೆ ಜಿಗಣಿಯಲ್ಲಿ ಸಿಕ್ಕ ಅಭೂತಪೂರ್ವ ಸ್ವಾಗತ ರಥದ ಮುಂದಿನ ಹಾದಿ ಹೇಗಿರಬಹುದೆಂಬ ಸಣ್ಣ ಅಂದಾಜು ಕೊಟ್ಟಿತು. ಚಂದಾಪುರದ ಕಾರ್ಯಕ್ರಮ ಮರೆಯಲಾಗದ್ದು. 500 ಕ್ಕೂ ಹೆಚ್ಚು ವಿದ್ಯಾಥರ್ಿಗಳು ಪೇಟ ಧರಿಸಿಕೊಂಡು ಬೀದಿಗಿಳಿದಿದ್ದರು. ಅಲ್ಲಿನ ಶಾಲೆಯೊಂದರಲ್ಲಿ ಬಂಗಾಳಿ ಸಂಗೀತ ಶಿಕ್ಷಕರು ವಿವೇಕಾನಂದರಿಂದ ರಚಿಸಲ್ಪಟ್ಟ ರಾಮಕೃಷ್ಣರ ಗೀತೆಯನ್ನು ಹಾಡುವಾಗ ನಮಗೆಲ್ಲರಿಗೂ ರೋಮಾಂಚನದ ಅನುಭವವಾಗಿತ್ತು. ಅದಕ್ಕೆ ಸರಿಯಾಗಿ ಸುರಿದ ನಾಲ್ಕು ಹನಿ ಮಳೆ ನಮ್ಮ ಮುಂದಿನ ಯಾತ್ರೆಗೆ ರಾಮಕೃಷ್ಣರ ಆಶೀವರ್ಾದವೆನಿಸಿತ್ತು. ಇನ್ನು ನಮ್ಮನ್ನು ತಡೆಯಬಲ್ಲ ಶಕ್ತಿ ಯಾರೂ ಇರಲಿಲ್ಲ. ಅದೂ ಹೌದಲ್ಲವೇ! ಗುರುದೇವನೇ ಅದೃಶ್ಯ ರೂಪದಲ್ಲಿ ಆಶೀರ್ವದಿಸಿದ ಮೇಲೆ ಇನ್ನು ತಡೆಯುವವರು ಯಾರು. ಅಲ್ಲಿಂದ ರಥ ಹೊಸಕೋಟೆಯತ್ತ ತೆರಳುವಾಗ ಗುಂಜೂರಿನ ಶಾಲೆಯವರು ಹಠ ಮಾಡಿ ರಥವನ್ನು ಶಾಲೆಗೆ ಕರೆಸಿಕೊಂಡು ರಥಕ್ಕೆ ಗೌರವ ನೀಡಿದ್ದು ರಥದೊಂದಿಗಿದ್ದ ಎಲ್ಲರಿಗೂ ಹೆಮ್ಮೆ ಎನಿಸುವಂತಿತ್ತು. ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ, ಚಿಂತಾಮಣಿ ಈ ಭಾಗಗಳಲ್ಲೆಲ್ಲಾ ಈ ಬಗೆಯ ಕಾರ್ಯಕ್ರಮಗಳು ಆಗಾಗ ಆಗುವುದು ಕಡಿಮೆ. ಅಲ್ಲಿನವರು ರಥಕ್ಕೆ ತೋರಿದ ಸ್ವಾಗತ ನಿಜಕ್ಕೂ ಮನ ತುಂಬುವಂತಿತ್ತು.

ಕನಕಪುರದಲ್ಲಿ ಮೊದಲ ಬಾರಿಗೆ ರಥದ ಹಿಂದೆ-ಮುಂದೆ ಇದ್ದ ಜನರ ಸಂಖ್ಯೆಯನ್ನು ನೋಡಿ ನಾವೆಲ್ಲ ಬೆಚ್ಚಿ ಬಿದ್ದಿದ್ದೆವು. ರಥಯಾತ್ರೆ ಆಯೋಜಿಸುವಾಗ ಕನಕಪುರದಲ್ಲಿ ಸಾಧ್ಯವಿಲ್ಲ ಎಂದೇ ನಮ್ಮ ಮಾತು ಶುರುವಾಗುತ್ತಿತ್ತು. ಆದರೀಗ ಅದೇ ಕನಕಪುರದ ಪ್ರತಿಸ್ಪಂದನೆ ಪರಮಾದ್ಭುತವೆನಿಸಿತ್ತು. ಸಂಜೆಯ ಕಾರ್ಯಕ್ರಮಕ್ಕೆ ಸೇರಿದ್ದ ಮೂನರ್ಾಲ್ಕು ಸಾವಿರ ಜನ ಹೊಸ ಶಕೆಯ ನಿಮರ್ಾಣಕ್ಕೆ ಭಾಷ್ಯ ಬರೆಯಬಹುದೇನೋ ಎನಿಸಿದ್ದಂತೂ ಸುಳ್ಳಲ್ಲ. ರಾಮನಗರ, ಚೆನ್ನಪಟ್ಟಣಗಳು ಬಂದ್ ಘೋಷಣೆಯ ನಡುವೆಯೂ ಸ್ವಾಮಿ ವಿವೇಕಾನಂದರಿಗೆ ಗೌರವವನ್ನು ಕಡಿಮೆ ಮಾಡಲಿಲ್ಲ. ಬೆಂಗಳೂರಿನ ಕಾರ್ಯಕ್ರಮದ ಕಥೆ ಕೇಳುವಂತೆಯೇ ಇಲ್ಲ. ಉಚ್ಚ ನ್ಯಾಯಾಲಯದ ನ್ಯಾಯಮೂತರ್ಿಗಳಾದ ಶ್ರೀ ಬೂದಿಹಾಳ್ರವರು ಸಭಾ ಕಾರ್ಯಕ್ರಮಕ್ಕೆ ಆಗಮಿಸಿ ವಿವೇಕಾನಂದರ ಕುರಿತಂತೆ ಅನೇಕ ಅಪರೂಪದ ಸಂಗತಿಗಳನ್ನು ಹಂಚಿಕೊಂಡರು. ಆನಂತರ ನಡೆದ ಶೋಭಾಯಾತ್ರೆ ಅದ್ದೂರಿಯಾಗಿ ನಡೆದದ್ದಷ್ಟೇ ಅಲ್ಲದೇ ಯುವಾಬ್ರಿಗೇಡ್ನ ಶಿಸ್ತನ್ನು ಸಮಾಜಕ್ಕೆ ತೋರುವಂತಿತ್ತು. ರಾಮಕೃಷ್ಣಾಶ್ರಮದ ಆವರಣದೊಳಕ್ಕೆ ಹತ್ತಾರು ಬಗೆಯ ಕಲಾತಂಡಗಳು ಗುರುಮಹಾರಾಜರ ಎದುರಿಗೆ ಪ್ರದರ್ಶನ ನೀಡುವಾಗ ಮೈ-ಮನ ಪುಳಕಗೊಂಡಿರುವುದೊಂತೂ ಸತ್ಯ. ಇದಕ್ಕೂ ಮುನ್ನ ದಾಸರಹಳ್ಳಿಯ ಭರತ್ ಮತ್ತು ಮಿತ್ರರು ರಥಕ್ಕೆ ವಿಶೇಷವಾದ ಅಲಂಕಾರವನ್ನು ಮಾಡಿಸಿ ಇಡಿಯ ದಾಸರಹಳ್ಳಿಯಲ್ಲಿ ವಿವೇಕಾನಂದರ ವೈಭವ ವಿಜೃಂಭಿಸುವಂತೆ ಮಾಡಿದ್ದಲ್ಲದೇ ಇಡಿಯ 65 ದಿನಗಳಲ್ಲಿ ಎಲ್ಲಿಯೂ ಆಗದಂತಹ ಅದ್ದೂರಿ ಸಭಾ ಕಾರ್ಯಕ್ರಮವನ್ನು ಜೋಡಿಸಿದ್ದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾಥರ್ಿಗಳೊಂದಿಗೆ ವಿವೇಕಾನಂದರ ವ್ಯಕ್ತಿತ್ವದ ಅನಾವರಣ ನಡೆದಿದ್ದನ್ನು ಕಣ್ತುಂಬಿಸಿಕೊಂಡವರೇ ಧನ್ಯ. ಅಲ್ಲಿಂದ ಕುಣಿಗಲ್ ಮಾರ್ಗವಾಗಿ ಮಂಡ್ಯದ ಮೂಲಕ ರಥ ಚಾಮರಾಜನಗರ ತಲುಪಿತು. ಅಲ್ಲಿ ಯುವಾಬ್ರಿಗೇಡ್ನ ಕಾರ್ಯಕರ್ತರು ಬಹಳ ಇಲ್ಲ. ಇದ್ದವರು ರಥಕ್ಕೆ ಕೊಟ್ಟ ಮಯರ್ಾದೆ ರಥದೊಂದಿಗಿದ್ದವರ ಆತ್ಮಸ್ಥೈರ್ಯವನ್ನು ನೂರ್ಮಡಿಯಾಗಿಸಿತು. ಚಾಮರಾಜನಗರದ ಸಂಚಾಲಕರ ತಾಯಿ ರಥದೊಂದಿಗಿನ ರಥ ಸೇವಕರಿಗೆ ಸ್ವಾಧಿಷ್ಟ ಭೋಜನ ಮಾಡಿ ಉಣಬಡಿಸಿದ್ದಲ್ಲದೇ ಬೆಳಗ್ಗೆ ಇವರು ಏಳುವ ಮುನ್ನವೇ ಬಿಸಿನೀರು ಕಾಯಿಸಿ ಸ್ನಾನಕ್ಕೆ ತಯಾರು ಮಾಡಿಟ್ಟಿದ್ದಲ್ಲದೇ ಇವರು ಸ್ನಾನ ಮುಗಿಸಿ ಎದ್ದುಬರುವ ವೇಳೆಗಾಗಲೇ ರಥದ ಅಲಂಕಾರವನ್ನು ಮುಗಿಸಿ ಹುಬ್ಬೇರುವಂತೆ ಮಾಡಿಬಿಟ್ಟಿದ್ದರು. ನಂಜನಗೂಡಿನ ನಮ್ಮ ಯಾವ ಕಾರ್ಯಕ್ರಮವೂ ಎಂದೂ ಪ್ರಭೆ ಕಳೆದುಕೊಂಡಿಲ್ಲ. ರಥಯಾತ್ರಯೂ ಕೂಡ. ಮೈಸೂರಿನಲ್ಲೂ ಕೂಡ ಹಾಗೆಯೇ. ರಥಯಾತ್ರೆಗೆ ಮುನ್ನವೇ ಪೂರ್ವಭಾವಿಯಾಗಿ ಮ್ಯಾರಥಾನ್ ಜೋಡಿಸಿಕೊಂಡಿದ್ದ ಕಾರ್ಯಕರ್ತರು ಯಾತ್ರೆಯನ್ನು ಉತ್ಸಾಹಪೂರ್ಣವಾಗಿಯೇ ನಿರ್ವಹಿಸಿದರು.

ವಾಸ್ತವವಾಗಿ ಮೈಸೂರಿನಿಂದ ನಮ್ಮ ಯಾತ್ರೆ ಕೊಡಗಿಗೆ ಹೋಗಬೇಕಿತ್ತು. ಭೀಕರ ಪ್ರವಾಹ ಕೊಡಗನ್ನು ಆವರಿಸಿದ್ದರಿಂದ ನಾವು ಅತ್ತ ಹೋಗಲಾಗದೇ ಮಾರ್ಗವನ್ನು ಬದಲಾಯಿಸಿ ಹಾಸನ, ಸಕಲೇಶಪುರಗಳ ಮಾರ್ಗವಾಗಿ ದಕ್ಷಿಣ ಕನ್ನಡಕ್ಕೆ ಕಾಲಿಟ್ಟೆವು. ದಾರಿಯುದ್ದಕ್ಕೂ ಕಾರ್ಯಕರ್ತರ ಉತ್ಸಾಹ ಮತ್ತು ಆಸ್ಥೆಗಳು ಮನಸೂರೆಗೊಂಡಿದ್ದು ಸತ್ಯ. ಸೂಳ್ಯದಲ್ಲಿ ಕಾರ್ಯಕ್ರಮದ ತಯಾರಿಗೆ ಸಿಕ್ಕಿದ್ದು ಮೂರೇ ದಿನ. ಅಲ್ಲಿನ ಇಂಜಿನಿಯರಿಂಗ್ ಕಾಲೇಜೊಂದು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದಾಗ ಸವಾಲು ಸ್ವೀಕರಿಸಿದ ಕೈ ಬೆರಳೆಣಿಕೆಯಷ್ಟು ಕಾರ್ಯಕರ್ತರು ಹಠಕ್ಕೆ ಬಿದ್ದು ರಥದ ಸ್ವಾಗತಕ್ಕೆ ನಿಂತರು. ಅಚ್ಚರಿಯೇನು ಗೊತ್ತೇ?! ಕಾರ್ಯಕರ್ತರ ಶ್ರದ್ಧೆ ಹೇಗಿತ್ತೆಂದರೆ ದಕ್ಷಿಣ ಕನ್ನಡದಲ್ಲಿ ರಥಕ್ಕೆ ಅದುವರೆಗಿನ ಅದ್ದೂರಿ ಸ್ವಾಗತ ಮತ್ತು ಭರ್ಜರಿ ಕಾರ್ಯಕ್ರಮ ಸೂಳ್ಯದಲ್ಲೇ ಆಯ್ತು. ಪುತ್ತೂರು ರಥಯಾತ್ರೆಗೆ ಮಧುಮಗಳಂತೆ ಸಿಂಗಾರಗೊಂಡಿತ್ತು. ಮಂಗಳೂರಿನಲ್ಲಿ ರಾಮಕೃಷ್ಣಾಶ್ರಮದ ಸ್ವಾಮಿ ಏಕಗಮ್ಯಾನಂದಜೀ ಕಾರ್ಯಕ್ರಮದ ಉಸ್ತುವಾರಿಯನ್ನು ಹೆಗಲ ಮೇಲೆ ಹೊತ್ತು ಅನೇಕ ಕಾಲೇಜು ವಿದ್ಯಾಥರ್ಿಗಳು ಮತ್ತು ವಿವೇಕಾನಂದರ ಭಕ್ತರು ಕಾರ್ಯಕ್ರಮದಲ್ಲಿ ಸೇರುವಂತೆ ವ್ಯವಸ್ಥೆ ಮಾಡಿದ್ದರು. ಈ ಹೊತ್ತಿನಲ್ಲಿಯೇ ರಥವನ್ನು ಕೇರಳಕ್ಕೆ ಒಯ್ಯುವ ಅವಕಾಶ ನಮಗೆ ಸಿಕ್ಕಿದ್ದು. ದೇವರ ನಾಡನ್ನು ಧ್ವಂಸಗೊಳಿಸುವ ಪ್ರಯತ್ನದಲ್ಲಿರುವ ದುಷ್ಟ ಕಮ್ಯುನಿಷ್ಟರ ನಟ್ಟ ನಡುವೆ ಭಾರತವನ್ನು ಅಖಂಡವಾಗಿ ಪ್ರೀತಿಸಿದ ವಿವೇಕ-ನಿವೇದಿತೆಯರ ರಥವನ್ನು ಯುವಾಬ್ರಿಗೇಡ್ ನುಗ್ಗಿಸಿತು. ಚೆಗುವೆರಾನನ್ನು ಎದೆಯ ಮೇಲಿಟ್ಟುಕೊಂಡು ಮೆರೆಯುವ ಒಂದಷ್ಟು ತರುಣರಿಗೆ ನಿಜವಾದ ತರುಣ ಹೃದಯ ಸಾಮ್ರಾಟನನ್ನು ಪರಿಚಯಿಸುವ ಅವಕಾಶ ನಮಗೆ ಸಿಕ್ಕಿತ್ತು.


ಕುಂದಾಪುರದ ಕಾರ್ಯಕ್ರಮ ಮುಗಿಸಿ ಬೈಂದೂರಿಗೆ ಸಾಗುವ ಮಾರ್ಗದಲ್ಲಿ ಕನಿಷ್ಠ 16 ಹಳ್ಳಿಗಳಲ್ಲಿ ರಥಕ್ಕೆ ಸ್ವಾಗತ, ಬೈಕ್ರ್ಯಾಲಿ ಇವೆಲ್ಲವೂ ನಡೆದು ಹೆಮ್ಮೆ ಮೂಡಿಸಿತು. ಭಟ್ಕಳದ ಕಾರ್ಯಕ್ರಮ ಯಾವಾಗಲೂ ಕಿರಿಕಿರಿಯದ್ದೇ. ಈ ರಥಕ್ಕೆ ಅನುಮತಿ ನಿರಾಕರಿಸಬೇಕೆಂದು ಕೆಲವರು ಪೊಲೀಸರೆದುರು ಗೋಗರೆದಿದ್ದರು. ಆದರೆ ಯುವಾಬ್ರಿಗೇಡ್ನ ಈ ಹಿಂದಿನ ಚಟುವಟಿಕೆಗಳನ್ನೆಲ್ಲಾ ಗಮಿನಿಸಿದ ಸ್ಥಳಿಯ ಪೊಲೀಸರು ಅತೀವ ಪ್ರೀತಿಯಿಂದಲೇ ಅನುಮತಿ ನೀಡಿದ್ದಲ್ಲದೇ ರಥ ಉತ್ತರ ಕನ್ನಡ ಜಿಲ್ಲೆ ದಾಟುವವರೆಗೂ ವಿಶೇಷ ರಕ್ಷಣೆಯ ವ್ಯವಸ್ಥೆಯನ್ನು ಮಾಡಿದ್ದರು. ಹೊನ್ನಾವರದಲ್ಲಿ ಶೋಭಾಯಾತ್ರೆಯೇ ಅತಿ ವಿಶಿಷ್ಟವಾಗಿತ್ತು. ನಿವೇದಿತಾ ಪ್ರತಿಷ್ಠಾನದ ಹೆಣ್ಣುಮಕ್ಕಳು ಭಾರತಮಾತೆಯ ಪ್ರತಿಮೆಯನ್ನು ಪಲ್ಲಕ್ಕಿಯ ಮೇಲೆ ಕೂರಿಸಿ ಹೆಗಲ ಮೇಲೆ ಹೊತ್ತೋಯ್ದ ಫೋಟೊ ಆನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು. ಉತ್ತರ ಕನ್ನಡದ ಕೊನೆಯ ಕಾರ್ಯಕ್ರಮ ಕನ್ನಡದ ಮೊದಲ ಸಾಮ್ರಾಜ್ಯದ ರಾಜಧಾನಿ ಬನವಾಸಿಯಲ್ಲಿ. ಬಿರು ಬಿಸಿಲಿನ ಮಧ್ಯಾಹ್ನದಲ್ಲಿ ಇಡೀ ಊರಿನ ಮಂದಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಸೇರಿಬಿಟ್ಟಿದ್ದರು. ನಾವ್ಯಾರೂ ಊಹಿಸದೇ ಇದ್ದ ಅಪರೂಪದ ಕಾರ್ಯಕ್ರಮಗಳಲ್ಲಿ ಅದೂ ಒಂದು. ರಥ ಅಲ್ಲಿಂದಾಚೆಗೆ ಶಿವಮೊಗ್ಗ ಜಿಲ್ಲೆಯತ್ತ ಸಾಗಿತು. ಸೊರಬ, ಶಿಕಾರಿಪುರ, ಶಿವಮೊಗ್ಗ, ತರೀಕೆರೆ, ಭದ್ರಾವತಿ ಇಲ್ಲೆಲ್ಲಾ ಗೌರವವನ್ನು ಪಡೆದ ರಥ ಚಿಕ್ಕಮಗಳೂರಿನತ್ತ ಹೊರಟಿತು. ಶಿವಮೊಗ್ಗದ ಕಾರ್ಯಕರ್ತರು ರಥಯಾತ್ರೆಯ ತಯಾರಿಯನ್ನು ಒಂದು ತಿಂಗಳ ಮುಂಚಿನಿಂದಲೇ ಆರಂಭಿಸಿದ್ದರು. ಪೂರ್ವಭಾವಿಯಾಗಿ ವಿವೇಕಾನಂದ-ನಿವೇದಿತೆಯರ ಗೀತಾಗಾಯನ ಸ್ಪಧರ್ೆಗಳನ್ನು, ನಾಟಕ ಸ್ಪಧರ್ೆಗಳನ್ನೆಲ್ಲಾ ವ್ಯವಸ್ಥಿತವಾಗಿ ಮಾಡಿ ಭೂಮಿಕೆ ಸಿದ್ಧಪಡಿಸಿದ್ದರು. ಚಿಕ್ಕಮಗಳೂರಿನದ್ದು ಮರೆಯಲಾಗದ ಕಾರ್ಯಕ್ರಮ. ಸುರಿವ ಮಳೆಯಲ್ಲೂ ಪೂರ್ಣಕುಂಭ ಹಿಡಿದಿದ್ದ ಮಹಿಳೆಯರಾದಿಯಾಗಿ ಯಾರೊಬ್ಬರೂ ರಥ ಬಿಟ್ಟು ಕದಲಲಿಲ್ಲ. ಇದು ಸಹಜವಾಗಿಯೇ ಚಿಕ್ಕಮಗಳೂರಿನಲ್ಲಷ್ಟೇ ಅಲ್ಲದೇ ಇಡಿಯ ರಾಜ್ಯದ ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರ ಉಂಟುಮಾಡಿತು. ಆನಂತರ ನಡೆದ ಕಾರ್ಯಕ್ರಮದಲ್ಲಿ ಕಣ್ಣನ್ಮಾಮ ಮತ್ತು ವೀಣಾ ಬನ್ನಂಜೆಯವರು ಎಲ್ಲರ ಹೃದಯ ಸೂರೆಗೊಳ್ಳುವಂತೆ ಮಾತನಾಡಿದರು. ಈಗಲೂ ವೀಣಕ್ಕ ಅವತ್ತಿನ ಕಾರ್ಯಕ್ರಮದ ಅನುಭೂತಿಯೇ ಭಿನ್ನವಾದದ್ದು ಎಂದು ನೆನಪಿಸಿಕೊಳ್ಳುತ್ತಾರೆ. ಅದೇ ಕಾರ್ಯಕ್ರಮದಲ್ಲಿ ಅಕ್ಕಿ ಕಾಳಿನ ಮೇಲೆ ಅತ್ಯಂತ ಕಡಿಮೆ ಸಮಯದಲ್ಲಿ ವಿವೇಕಾನಂದರ ಹೆಸರನ್ನು ಕೆತ್ತಿದ ದಾಖಲೆಯೂ ನಿಮರ್ಾಣಗೊಂಡಿತು. ಚಿತ್ರದುರ್ಗ ಜಿಲ್ಲೆಯಲ್ಲೂ ರಥಕ್ಕೆ ಎಲ್ಲೆಡೆ ಸೂಕ್ತವಾದ ಸ್ವಾಗತವೇ ಸಿಕ್ಕಿತು. ಹರಿಹರದಲ್ಲಿ ಮೊದಲ ಬಾರಿಗೆ ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳೇ ಶೋಭಾಯಾತ್ರೆಯಲ್ಲಿ ನಿಂತು ನಿವೇದಿತಾ 150 ಅನ್ನು ಸಾರ್ಥಕಗೊಳಿಸಿದರು. ಬೆಂಗಳೂರಿನ ನಂತರ ಅದ್ದೂರಿಯಾದ ಶೋಭಾಯಾತ್ರೆಯನ್ನು ಪ್ರಸ್ತುತ ಪಡಿಸಿದ್ದು ದಾವಣಗೆರೆ. ಜಿಟಿ-ಜಿಟಿ ಮಳೆಯಲ್ಲೂ ಬೈಕ್ ರ್ಯಾಲಿ, ಶೋಭಾಯಾತ್ರೆಗಳು ನಡೆದದ್ದಲ್ಲದೇ ಕೊನೆಗೆ ಸಾರ್ವಜನಿಕ ಸಮಾರಂಭವೂ ಹನಿ ಮಳೆಯಲ್ಲೇ ನಡೆದು ಹೋಯ್ತು. ನಿವೇದಿತಾಳನ್ನು ಕನರ್ಾಟಕಕ್ಕೆ ತಮ್ಮ ಕೃತಿಯ ಮೂಲಕ ಪರಿಚಯಿಸಿದ ಪರಮಪೂಜ್ಯ ಸ್ವಾಮಿ ನಿತ್ಯಸ್ಥಾನಂದಜೀ ಕಾರ್ಯಕ್ರಮದಲ್ಲಿದ್ದು ಜನರನ್ನುದ್ದೇಶಿಸಿ ಮಾತನಾಡಿದ್ದು ಧನ್ಯವೆನಿಸಿತ್ತು.


ಬಳ್ಳಾರಿಯ ಕಾರ್ಯಕರ್ತರ ಉತ್ಸಾಹವೂ ಅಸೀಮವಾದುದಾಗಿತ್ತು. ಹೊಸಪೇಟೆಗೆ ರಥ ಬರುವ ವೇಳೆಗಾಗಲೇ ಉಪಚುನಾವಣೆಯ ನೀತಿ ಸಂಹಿತೆ ಘೋಷಣೆಯಾಗಿತ್ತು. ಎಲ್ಲ ಬಗೆಯ ಕಿರಿಕಿರಿಗಳ ನಡುವೆ ರಥವನ್ನೊಯ್ದು ಶೋಭಾಯಾತ್ರೆ ಮಾಡಿಸಿ ಕಾರ್ಯಕ್ರಮಕ್ಕೆ ಅಣಿಯಾಗಬೇಕಿತ್ತು. ಕಾರ್ಯಕ್ರಮದ ದಿನ ಹೆಚ್ಚು ಕಡಿಮೆ ಅರ್ಧಧಷ್ಟು ಸಮಯ ಪೊಲೀಸ್ ಠಾಣೆಯಲ್ಲೇ ಕಳೆದು ಹೋದದ್ದು ವಿಶೇಷ. ಕೊನೆಗೆ ಭಾಷಣಕಾರ ಭಾಷಣದಲ್ಲಿ ಏನನ್ನು ಮಾತನಾಡಬೇಕು, ಯಾವುದನ್ನು ಮಾತನಾಡಬಾರದು ಎಂಬ ನಿಯಮಗಳನ್ನು ಪೊಲೀಸರೇ ಹಾಕಿಕೊಟ್ಟು ಕಾರ್ಯಕ್ರಮಕ್ಕೆ ಅನುಮತಿ ಕೊಡಬೇಕಾದ ಪರಿಸ್ಥಿತಿ ಬಂತು. ಆದರೆ ಆ ಕಾರ್ಯಕ್ರಮದಲ್ಲಿ ಯುವಾಬ್ರಿಗೇಡ್ನ ತರುಣರು ತೋರಿದ ಸಂಯಮ ಶಿಸ್ತಿನಿಂದಾಗಿ ಮುಂದಿನ ಕಾರ್ಯಕ್ರಮಗಳು ಸಮಸ್ಯೆಯಾಗಲೇ ಇಲ್ಲ. ಬಳ್ಳಾರಿಯ ಎಲ್ಲ ಕಾರ್ಯಕ್ರಮಗಳಲ್ಲೂ ನಮಗೆ ಜಿಲ್ಲಾಧಿಕಾರಿಯಿಂದಲೇ ವಿಶೇಷ ಅನುಮತಿ ದೊರೆತುಬಿಟ್ಟಿತು. ಬಳ್ಳಾರಿಯ ಶೋಭಾಯಾತ್ರೆಯಲ್ಲಿ ನೂರಾರು ಜನ ವಿದ್ಯಾಥರ್ಿಗಳು ವಿವೇಕಾನಂದರ ವೇಷಧಾರಿಯಾಗಿ ಕಣ್ಮನ ಸೆಳೆದರು. ಕೊಪ್ಪಳದ ಯಾತ್ರೆಯಲ್ಲಿ ಮನಸೂರೆಗೊಂಡ ಕಾರ್ಯಕ್ರಮ ಬೂದಗುಂಪಾದ್ದು. ರಥಯಾತ್ರೆಯ ಯೋಜನೆಯಾದಾಗಿನಿಂದಲೂ ಬೂದಗುಂಪಾಕ್ಕೆ ರಥವನ್ನೊಯ್ಯಲೇಬೆಕೆಂಬ ಹಠ ಅಲ್ಲಿನ ಪ್ರತಿಷ್ಠಾನದ ಕಾರ್ಯಕತರ್ೆಯರದ್ದಾಗಿತ್ತು. ರಥ ಬೂದಗುಂಪಾಕ್ಕೆ ಹೋದ ನಂತರವೇ ನಮಗೆಲ್ಲಾ ಅರಿವಾದದ್ದು, ‘ರಥದ ಸ್ವಾಗತಕ್ಕೆ ಬೂದಗುಂಪಾದ ಪ್ರತಿಯೊಬ್ಬ ವ್ಯಕ್ತಿಯೂ ರಸ್ತೆಗೆ ಬಂದುಬಿಟ್ಟಿದ್ದರು’ ಎಂಬುದು. ಅಕ್ಷರಶಃ ಆ ಹಳ್ಳಿಯ ಮನೆಗಳಲ್ಲಿ ಯಾರೊಬ್ಬರೂ ಉಳಿದಿರಲಿಲ್ಲ. ಎಲ್ಲರೂ ರಥದ ಹಿಂದೆ-ಮುಂದೆಯೇ ಅಡ್ಡಾಡುತ್ತಿದ್ದರು. ಪ್ರತಿಷ್ಠಾನದ ಕಾರ್ಯಕತರ್ೆಯರ ಶ್ರಮವನ್ನು ಮೆಚ್ಚಲೇಬೇಕಿತ್ತು. ಕಾರಟಗಿ, ಗಂಗಾವತಿ, ಕೊಪ್ಪಳಗಳಲ್ಲೂ ಕಾರ್ಯಕ್ರಮ ನಡೆದು ರಥ ಸಿಂಧನೂರಿನತ್ತ ಸಾಗಿತು. ಸಿಂಧನೂರಿನ ಶೋಭಾಯಾತ್ರೆ ಬಹುಶಃ ಉತ್ತರ ಕನರ್ಾಟಕದ ಮೊದಲ ಅದ್ದೂರಿ ಯಾತ್ರೆ. ಮೂನರ್ಾಲ್ಕು ಸಾವಿರದಷ್ಟು ಮಕ್ಕಳು ರಥದೊಂದಿಗೆ ಭಾಗವಹಿಸಿದ್ದರು. ಅಲ್ಲಿನ ಸಭಾ ಕಾರ್ಯಕ್ರಮವೂ ಅತಿ ವಿಶಿಷ್ಟವಾಗಿತ್ತಲ್ಲದೇ ಮುಖ್ಯ ಭಾಷಣಕಾರ ನಿತ್ಯಾನಂದ ವಿವೇಕವಂಶಿ ಎಲ್ಲರ ಮನಸೂರೆಗೊಳ್ಳುವಂತೆ ಮಾತನಾಡಿದರು. ಮಸ್ಕಿಯಲ್ಲಿ ಕಾರ್ಯಕ್ರಮ ನಡೆದಿದ್ದು ಚಚರ್ಿನ ಆವರಣದಲ್ಲಿ. ರಥದ ಸ್ವಾಗತಕ್ಕೆ ಪ್ರೀತಿಯಿಂದ ನಿಂತ ಅಲ್ಲಿನ ಪಾದ್ರಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಇಂತಹ ಯಾವ ಕಾರ್ಯಕ್ರಮಗಳಿದ್ದರೂ ತಾನು ಕೈ ಚಾಚಿ ನಿಂತಿರುವುದಾಗಿ ಸಭೆಯಲ್ಲಿಯೇ ಹೇಳಿದರು. ಬಹುಶಃ ವಿವೇಕಾನಂದರ ವಿಶ್ವಮಾನವತೆಗೆ ಇದಕ್ಕಿಂತಲೂ ಶ್ರೇಷ್ಠವಾದ ಒಪ್ಪಿಗೆ ದೊರೆತಿರಲಾರದು. ಈ ಕಾರ್ಯಕ್ರಮ ಮುಗಿಯುವ ವೇಳೆಗಾಗಲೇ ಸಾಕಷ್ಟು ತಡವಾಗಿತ್ತು. ರಾಯಚೂರಿಗೆ ಸೇರಿಕೊಳ್ಳುವ ಧಾವಂತವೂ ಇತ್ತು. ಆಗಲೇ ಗೊತ್ತಾದದ್ದು ಕಲ್ಮಲ ಎಂಬ ಹಳ್ಳಿಯಲ್ಲಿ ಒಂದಷ್ಟು ಹುಡುಗರು ಸ್ವಾಗತಕ್ಕೆ ಕಾಯುತ್ತಿದ್ದಾರೆ ಅಂತ. ರಥ ಸೇವಕರಿಗೆ ಪಿತ್ತ ನೆತ್ತಿಗೇರಿತ್ತು. ಆದಷ್ಟು ಬೇಗ ರಾಯಚೂರಿಗೆ ತಲುಪಿಕೊಳ್ಳಬೇಕು ಹೀಗಾಗಿ ರಥ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು. ಉತ್ತರವಾಗಿ ಕಲ್ಮಲದ ತರುಣರು ‘ವಿವೇಕಾನಂದರು ಹೋಗುವ ರೈಲು ನಿಲ್ಲುವುದಿಲ್ಲ ಎಂದುದಕ್ಕೆ ತಮಿಳುನಾಡಿನ ತರುಣರು ಹಳಿಯ ಮೇಲೆ ಮಲಗಿದ್ದರಂತೆ. ನಾವು ರಸ್ತೆಯುದ್ದಕ್ಕೂ ಮಲಗಿಬಿಡುತ್ತೇವೆ’ ಎಂದು ಆಗ್ರಹ ಮಾಡಿ ರಥವನ್ನು ನಿಲ್ಲಿಸಿಕೊಂಡರು. ಇನ್ನೂ ಸರಿಯಾಗಿ ಮೀಸೆಯೂ ಚಿಗುರದ ಪೋರರೊಂದಷ್ಟು ಜನ ಅಲ್ಲಿ ರಥಕ್ಕೆ ನೀಡಿದ ಗೌರವ, ಸ್ವಾಗತ ರಥದೊಂದಿಗಿದ್ದವರೆಲ್ಲರ ಕಂಠಬಿಗಿಯುವಂತೆ ಮಾಡಿತು. ಮರೆಯಲಾಗದ ಭಾವುಕ ಕ್ಷಣ ಅದು. ಯಾದಗಿರಿ, ಸೇಡಂ, ಕಲ್ಬುಗರ್ಿಗಳಲ್ಲೆಲ್ಲಾ ವಿವೇಕಾನಂದರ ವೇಷಧಾರಿಗಳದ್ದೇ ಭರಾಟೆ. ಕಲ್ಬುಗರ್ಿಯಲ್ಲಿ 600 ಕ್ಕೂ ಹೆಚ್ಚು ವಿವೇಕಾನಂದರ ವೇಷಧಾರಿಗಳು ಬೀದಿಗಿಳಿದು ನೋಡುಗರ ಮೈ-ಮನ ಸೆಳೆದುಬಿಟ್ಟರು. ಪ್ರತಿಯೊಂದು ಚಿತ್ರಪಟವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹಬ್ಬಿತ್ತು. ಬೀದರ್ ಜಿಲ್ಲೆಯ ಹುಮನಾಬಾದ್ನಲ್ಲಿ ನಡೆದ ಕಾರ್ಯಕ್ರಮ ನೆನಪುಳಿಯುವಂಥದ್ದು. ವಿವಿಧ ಬಗೆಯ ಕಲಾತಂಡಗಳು ಶೋಭಾಯಾತ್ರೆಯನ್ನು ರಂಗೇರಿಸಿದ್ದರೆ ಆನಂತರದ ಸಭಾ ಕಾರ್ಯಕ್ರಮವು ಅತ್ಯುಚ್ಚ ಮಟ್ಟದ್ದಾಗಿತ್ತು. ತಿಂಗಳುಗಟ್ಟಲೆ ಕಾರ್ಯಕ್ರಮಕ್ಕಾಗಿ ಶ್ರಮ ಹಾಕಿದ್ದ ಕಾರ್ಯಕರ್ತರ ಸಮಯ ಖಂಡಿತವಾಗಿಯೂ ವ್ಯರ್ಥವಾಗಿರಲಿಲ್ಲ. ಸಿಂದಗಿಯಲ್ಲಿ ಸಂಘಟನೆಯೊಂದು ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದೆಂದು ಹಠ ಹಿಡಿದು ಕುಳಿತಿತ್ತು. ಇದರಿಂದಾಗಿ ಒಗ್ಗಟ್ಟಾದ ಊರಿನ ಜನತೆ ರಥವನ್ನು ಸ್ವಾಗತಿಸಲು ತಾವೇ ಮುಂದೆ ಬಂದು ನಿಂತರು. ಅಲ್ಲಿಂದ 35 ಕಿ.ಮೀ ದೂರದ ಹೊನ್ನುಟಗಿಯಲ್ಲಿ ಆನಂತರ ಅಚ್ಚುಕಟ್ಟಾದ ಕಾರ್ಯಕ್ರಮವಾಯ್ತು. ಒಂದೇ ದಿನದ ಅವಧಿಯಲ್ಲಿ ಸೂಚನೆ ಸಿಕ್ಕ ನಂತರವೂ ಕಾರ್ಯಕರ್ತರು ಬಲು ವಿಶಿಷ್ಟವಾಗಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದರು. ಅಲ್ಲಿಂದಾಚೆಗೆ ರಥ ಬೆಳಗಾವಿ ಸೇರಿಕೊಂಡಿತು. ವಿವೇಕಾನಂದರು ಬೆಳಗಾವಿಗೆ ಬಂದಿದ್ದು ಅಕ್ಟೋಬರ್ 16 ಕ್ಕೆ. ರಥವೂ ಅಕ್ಟೋಬರ್ 16 ಕ್ಕೇ ಬೆಳಗಾವಿಗೆ ಕಾಲಿಟ್ಟಿತು. ಆನಂತರದ್ದು ವಿವೇಕಾನಂದರದ್ದೇ ಕೈ ಚಳಕ. ಬೆಳಗಾವಿಯ ಹಳ್ಳಿ-ಹಳ್ಳಿಗಳಲ್ಲಿ ರಥಯಾತ್ರೆಗೆ ಅನೂಹ್ಯವಾದ ಸ್ವಾಗತ ದೊರೆತದ್ದಲ್ಲದೇ ಹಿಮಾಲಯದೆತ್ತರದ ಶ್ರದ್ಧೆ ಪ್ರಕಟವಾಯ್ತು. ಕೆಲವು ಹಳ್ಳಿಗಳಲ್ಲಿ ಕಿ.ಮೀಗಳುದ್ದದ ರಂಗೋಲಿಗಳನ್ನು ಹಾಕಿ ರಥಕ್ಕೆ ಗೌರವ ಸಲ್ಲಿಸಲಾಯ್ತು. ಹಿಡಕಲ್ ಡ್ಯಾಂನಲ್ಲಂತೂ ಹೆಚ್ಚು ಕಡಿಮೆ ಪ್ರತಿ ಮನೆಯ ಹೊರಗೂ ರಥ ನಿಲ್ಲಿಸಿ ಆರತಿ ಮಾಡಿಯೇ ಕಳಿಸಿದರು. 80 ವರ್ಷ ದಾಟಿದ ತಾಯಂದಿರೂ ವಿವೇಕಾನಂದರಿಗೆ ಬಂದು ನಮಸ್ಕರಿಸಿ ಹುಂಡಿಗೆ 5 ರೂಪಾಯಿ ಹಾಕಿದ್ದನ್ನು ಕಣ್ತುಂಬಿಸಿಕೊಂಡವರಿದ್ದಾರೆ. ಅಥಣಿ, ಗೋಕಾಕ್, ಬೆಳಗಾವಿ ನಗರ, ರಾಮದುರ್ಗ ಎಲ್ಲೆಡೆಯೂ ಮನಸೂರೆಗೊಳ್ಳುವ ಕಾರ್ಯಕ್ರಮಗಳೇ. ಬೆಳಗಾವಿಯ ತರುಣರು ರಥಯಾತ್ರೆಗೂ ಮುನ್ನ ವಿವೇಕ್ಕಿಕ್ ಎಂಬ ಫುಟ್ಬಾಲ್ ಸ್ಪಧರ್ೆಯನ್ನು ಆಯೋಜಿಸಿ 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವಲ್ಲದೇ ಆ ತರುಣರಲ್ಲಿ ವಿವೇಕಾನಂದರ ಸ್ಫೂತರ್ಿಯನ್ನು ತುಂಬುವಲ್ಲಿ ಸಫಲರಾಗಿದ್ದರು.


ಧಾರವಾಡ ಮತ್ತು ಹುಬ್ಬಳ್ಳಿಗಳು ವಿಭಿನ್ನವಾಗಿಯೇ ರಥಯಾತ್ರೆಗೆ ಸಿದ್ಧವಾಗಿದ್ದವು. ಪೂರ್ವಭಾವಿಯಾಗಿ ವಿವೇಕವನ, ವಿವೇಕಾಗ್ನಿ, ವಿವೇಕೈಟ್ಸ್, ವಿವೇಕ್ ಆವಿಷ್ಕಾರ ಮುಂತಾದ ಅತ್ಯಾಕರ್ಷಕ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವ ಯತ್ನ ಮಾಡಿದ್ದರು. ಧಾರವಾಡದ ಪಂಜಿನ ಮೆರವಣಿಗೆ ಎಲ್ಲರನ್ನೂ ಆಕಷರ್ಿಸುವಂತಿತ್ತು. ಹುಬ್ಬಳ್ಳಿಯ ಶೋಭಾಯಾತ್ರೆ ಏಳೆಂಟು ಕಿ.ಮೀ ಉದ್ದದ್ದಾಗಿದ್ದು ರಥದ ಚಾಲಕರಿಗೂ ಸೇವಕರಿಗೂ ಸವಾಲೆನಿಸುವಂತಿತ್ತು. ಇಡಿಯ ರಥಯಾತ್ರೆಯ ಅತಿ ಉದ್ದದ ಶೋಭಾಯಾತ್ರೆ ಹುಬ್ಬಳ್ಳಿಯದ್ದೇ. ಬೆನಕನಹಳ್ಳಿಯ ಕಾರ್ಯಕ್ರಮ ಊಹೆಗೆ ನಿಲುಕದ್ದು. ಗಂಡು-ಹೆಣ್ಣೆಂಬ ಭೇದವಿಲ್ಲದೇ ಆ ಹಳ್ಳಿಯಲ್ಲಿ ಸಾವಿರಾರು ಜನ ಶೋಭಾಯಾತ್ರೆಗೆ ಆನಂತರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು ನಿಜಕ್ಕೂ ಅಚ್ಚರಿಯ ಸಂಗತಿ. 150 ಜನ ರುದ್ರ ಪಠಣ ಮಾಡುತ್ತಾ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಅನುಭೂತಿ ದೊರೆತದ್ದು ಹಾವೇರಿಯಲ್ಲಿ. ಗದಗ್ನ ಕಾರ್ಯಕ್ರಮದಲ್ಲಿ ತುಂಬಿದ ಸಭೆಯನ್ನುದ್ದೇಶಿಸಿ ಪರಮಪೂಜ್ಯ ನಿರ್ಭಯಾನಂದ ಸರಸ್ವತಿಯವರು ಪ್ರೇರಣಾದಾಯಿ ನುಡಿಗಳನ್ನಾಡಿದರು. ಅಲ್ಲಿಂದ ರಥ ಬಾಗಲಕೋಟೆಯ ಅನೇಕ ಪ್ರದೇಶಗಳನ್ನು ಮುಟ್ಟಿ ಕೊನೆಗೆ ಜಿಲ್ಲಾ ಕೇಂದ್ರಕ್ಕೆ ತಲುಪಿತು. ಒಂದೆಡೆ ರಥಯಾತ್ರೆಯ ಸಮಾರೋಪ ಇನ್ನೊಂದೆಡೆ ನಿವೇದಿತಾ ಹುಟ್ಟಿದ ಹಬ್ಬ ಮತ್ತೊಂದೆಡೆ ಎಲ್ಲೆಡೆ ಅದ್ದೂರಿಯಾಗಿ ನಡೆದಿರುವ ರಥಯಾತ್ರೆಗೆ ಇನ್ನೂ ಹೆಚ್ಚು ವೈಭವವನ್ನು ತುಂಬಬೇಕಾದ ಸವಾಲು. ಬಾಗಲಕೋಟೆಯ ಕಾರ್ಯಕರ್ತರು ಸಿದ್ಧವಾಗಿಯೇ ನಿಂತಿದ್ದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ತರುಣರೂ ಜೊತೆಗೂಡಿಬಿಟ್ಟಿದ್ದರು. ನೂರಾರು ಕೆಜಿಯಷ್ಟು ಹೂವನ್ನು ಹಾರ ಮಾಡುವ ಪ್ರಯತ್ನದಲ್ಲಿ ನಿರತರಾದ ಕಾರ್ಯಕರ್ತರೊಂದೆಡೆಯಾದರೆ ವೇದಿಕೆಯ ಅಲಂಕರಣಕ್ಕೆಂದು ನಿಂತಿದ್ದ ಒಂದಷ್ಟು ಕಾರ್ಯಕರ್ತರು. ಈ ಕಾರ್ಯಕ್ರಮಕ್ಕೆ ಬಂಗಾಲದ ಜಲ್ಪಾಯ್ಗುರಿಯಿಂದ ಪರಮಪೂಜ್ಯ ಸ್ವಾಮಿ ಶಿವಪ್ರೇಮಾನಂದಜಿ ಕೂಡ ಬರುವವರಿದ್ದರು. ಹೀಗಾಗಿ ಸಹಜವಾಗಿಯೇ ರಥಯಾತ್ರೆ ಕಳೆಗಟ್ಟಿತ್ತು. ಸಂಜೆ ನಾಲ್ಕು ಗಂಟೆಗೆ ಶೋಭಾಯಾತ್ರೆ ಶುರುವಾದಾಗ ವಿವೇಕ ವೈಭವಕ್ಕೆ ಒಂದಿನಿತೂ ಕೊರತೆ ಇರಲಿಲ್ಲ. ಶೋಭಾಯಾತ್ರೆಯಲ್ಲಿ ಭೇರಿ-ನಗಾರಿಗಳ ಸದ್ದಿನೊಂದಿಗೆ ಆನೆ, ಕುದುರೆಗಳು ಜೊತೆಗೂಡಿ ಎಲ್ಲರೂ ಮೂಕವಿಸ್ಮಿತರಾಗಿಬಿಟ್ಟಿದ್ದರು. ಶೋಭಾಯಾತ್ರೆಯಲ್ಲಿ ಶಾಲಾ-ಕಾಲೇಜಿನ ಮಕ್ಕಳು ಅತ್ಯಲ್ಪ ಸಂಖ್ಯೆಯಲ್ಲಿದ್ದು ಸಾರ್ವಜಿನಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತಿದ್ದರು. ಬೆಳಗಾವಿಯ ಹಳ್ಳಿಯೊಂದರಲ್ಲಿ ಆನೆಯೊಂದು ವಿವೇಕಾನಂದರ ಮೂತರ್ಿಗೆ ಹಾರ ಹಾಕಿದ ಚಿತ್ರ ವೈರಲ್ ಆಗಿತ್ತಲ್ಲ ಇಲ್ಲಿಯೂ ಆನೆ ವಿವೇಕಾನಂದರ ಮೂತರ್ಿಗೆ ಹಾರವನ್ನೇರಿಸಿತ್ತು. ಆನಂತರದ ಕಾರ್ಯಕ್ರಮದ ವೇದಿಕೆ ಬಲು ವಿಶಿಷ್ಟವಾಗಿತ್ತು ಏಕೆಂದರೆ ರಥವೇ ವೇದಿಕೆಯ ಹಿಂದಿನ ಪರದೆಯಾಗಿತ್ತು. ಅದೊಂದು ರೀತಿ ಭ್ರಮಾಲೋಕವನ್ನೇ ಸೃಷ್ಟಿಸಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಪ್ರೇಮಾನಂದಜಿ ಯುವಾಬ್ರಿಗೇಡ್ನ ಕಾರ್ಯಕರ್ತರನ್ನು ಮನದುಂಬಿ ಹೊಗಳಿದರು. ಹಾಗಂತ ಇದು ರಥಯಾತ್ರೆಗೆ ತೆರೆಯಾಗಿರಲಿಲ್ಲ. ಕನರ್ಾಟಕದ ರಥಯಾತ್ರೆಗೆ ಪೂರ್ಣವಿರಾಮವಾಗಿತ್ತಷ್ಟೇ. ಏಕೆಂದರೆ ಅಲ್ಲಿಂದಾಚೆಗೆ ರಥ ಗೋವಾದತ್ತ ಹೊರಟಿತು.


ಹಾಗೆ ನೋಡಿದರೆ ಬೆಳಗಾವಿಗೆ ಬಂದ ಸ್ವಾಮೀಜಿ ಬೆಳಗಾವಿಯಿಂದ ಗೋವಾಕ್ಕೆ ಹೋಗಿ ಅಲ್ಲಿಂದ ಮರಳಿ ಧಾರವಾಡಕ್ಕೆ ಬಂದಿದ್ದರು. ಈ ರಥ ಈಗ ಬಾಗಲಕೋಟೆಯಿಂದ ಬೆಳಗಾವಿ ಮಾರ್ಗವಾಗಿ ಗೋವೆಯನ್ನು ಸೇರಿಕೊಂಡಿತ್ತು. ಮೊದಲ ಬಾರಿಗೆ ಗೋವಾದ ಎಲ್ಲ ಕನ್ನಡ ಸಂಘಟನೆಗಳು ತಮ್ಮ ನಡುವಿನ ಸಣ್ಣ ಪುಟ್ಟ ವೈರುಧ್ಯಗಳನ್ನು ಮರೆತು ಒಂದಾಗಿದ್ದಲ್ಲದೇ ಗೋವೆಯ ಭಿನ್ನ ಭಿನ್ನ ಸಂಘಟನೆಗಳನ್ನು ಸೇರಿಸಿಕೊಂಡು ಕಾರ್ಯಕ್ರಮದ ತಯಾರಿ ನಡೆಸಿದ್ದರು. ಬಿಚ್ಚೋಲಿಂನ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿ ವಿವೇಕಾನಂದರ ಮತ್ತು ಗೋವೆಯ ಸಂಬಂಧಗಳನ್ನು ಮೆಲುಕು ಹಾಕಿಕೊಂಡರಲ್ಲದೇ ರಥ ನಿಲ್ಲಿಸಿದ್ದ ವೃತ್ತಕ್ಕೆ ವಿವೇಕಾನಂದರ ನಾಮಕರಣ ಮಾಡುವುದಾಗಿ ಸಂಕಲ್ಪವನ್ನೂ ಮಾಡಿದರು. ರಥ ಮಡಗಾಂವ್ಗೆ ತೆರಳಿದಾಗ ಅಲ್ಲಿ ಚಿನ್ಮಯಾ ಮಿಷನ್ನಿನ ಸ್ವಾಮೀಜಿ ಸ್ವಾಗತಿಸಿದಲ್ಲದೇ ಗೋವೆಗೊಂದು ಯುವಾಬ್ರಿಗೇಡ್ ಬೇಕೆಂದು ಆಗ್ರಹವನ್ನೂ ಮಾಡಿದರು. ಸ್ವಾಮಿ ವಿವೇಕಾನಂದರು ತಂಗಿದ್ದ ದಾಮೋದರ್ ಸಾಲ್ಗೆ ರಥ ಹೋದಾಗ ಆ ಮನೆಯವರ ಆನಂದ ಹೇಳತೀರದ್ದಾಗಿತ್ತು. ವಾಸ್ಕೊದ ಜುವಾರಿನಗರದಲ್ಲಿ ಕನ್ನಡಿಗರೇ ಹೆಚ್ಚು. ಆ ಜನರ ಉತ್ಸಾಹ ಪ್ರೀತಿ ಆಸ್ಥೆಗಳಿಗೆ ನಮ್ಮೆಲ್ಲಾ ಕಾರ್ಯಕರ್ತರ ಮನ ಕರಗಿದ್ದಂತೂ ಸತ್ಯ. ಪಣಜಿಯಲ್ಲೂ ಕಾರ್ಯಕ್ರಮ ಅದ್ದೂರಿಯಾಗಿಯೇ ನೆರವೇರಿತ್ತು. ವಿದೇಶದ ಯಾತ್ರಿಕರು ರಥದ ಬಳಿ ನಿಂತು ವಿವೇಕಾನಂದರ ಕುರಿತಂತೆ ರಥ ಸೇವಕರ ಬಳಿ ವಿಚಾರಿಸುತ್ತಿದ್ದುದು ಹೆಮ್ಮೆ ತರಿಸುವಂತಿತ್ತು.


ಒಟ್ಟು 65 ದಿನಗಳ ಯಾತ್ರೆ, 175 ಸಾರ್ವಜನಿಕ ಕಾರ್ಯಕ್ರಮಗಳು, 250ಕ್ಕೂ ಹೆಚ್ಚು ಶೋಭಾಯಾತ್ರೆಗಳು ಗೋವೆಯೂ ಸೇರಿದಂತೆ ಮೂರು ರಾಜ್ಯಗಳ ಯಾತ್ರೆ. 8000 ಕಿ.ಮೀಗಳ ಪಯಣ. 5 ಲಕ್ಷಕ್ಕೂ ಹೆಚ್ಚು ಜನರ ನೇರ ಭೇಟಿ, ಪತ್ರಿಕಾ ವರದಿಗಳ ಮೂಲಕ ಕನಿಷ್ಠ 50 ಲಕ್ಷ ಜನರಿಗೆ ತಲುಪಿಸಿದ ಹೆಮ್ಮೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನರ ಹೃದಯ ಮುಟ್ಟಿದ ವಿಶ್ವಾಸ. ವಿವೇಕ-ನಿವೇದಿತೆಯರ ಪರಿಚಯವುಳ್ಳ ಒಂದು ಲಕ್ಷಕ್ಕೂ ಹೆಚ್ಚು ಕರಪತ್ರ ವಿತರಣೆ. ಈ ಸಂದರ್ಭಕ್ಕೆಂದೇ ಬಿಡುಗಡೆ ಮಾಡಿದ 5 ರೂಪಾಯಿಯ ಮತ್ತೊಮ್ಮೆ ದಿಗ್ವಿಜಯ ಎಂಬ ಕೃತಿ 35,000 ಪ್ರತಿಗಳಷ್ಟು ಮಾರಾಟ. ವಿವೇಕ-ನಿವೇದಿತೆಯರ ಸಾಹಿತ್ಯ ಸುಮಾರು 10 ಲಕ್ಷ ರೂಪಾಯಿಯಷ್ಟು ಜನರಿಗೆ ಮುಟ್ಟಿಸಿದ ನೆಮ್ಮದಿ. ನಿವೇದಿತಾ ಸೇವಾ ಕೇಂದ್ರದ ಬಟ್ಟೆ ಕೈ ಚೀಲಗಳನ್ನು ಸಮಾಜಕ್ಕೆ ಮುಟ್ಟಿಸಿದ್ದಲ್ಲದೇ ಪ್ಲಾಸ್ಟಿಕ್ ವಿರೋಧದ ನಮ್ಮ ಅಹವಾಲನ್ನು ಮಂಡಿಸಿದ ಗೌರವ. ಎಲ್ಲಕ್ಕೂ ಮಿಗಿಲಾಗಿ ನೂರಾರು ಹೊಸ ಕಾರ್ಯಕರ್ತರ ಸೇರ್ಪಡೆ ಜೊತೆಗೆ ಇದ್ದ ಕಾರ್ಯಕರ್ತರಲ್ಲಿ ವಿವೇಕಾನಂದರ ಆದರ್ಶ ನೂರು ಪಟ್ಟು ಹೆಚ್ಚಾದುದರ ಆನಂದ. ರಥದ ಹುಂಡಿಯೊಂದರಲ್ಲೇ 22,271 ರೂಪಾಯಿ ಸಂಗ್ರಹವಾಗಿತ್ತು. ರಥದೊಟ್ಟಿಗೆ ಅದನ್ನು ಕೊಯ್ಮಮತ್ತೂರಿನ ಆಶ್ರಮಕ್ಕೆ ಕೊಡುವಾಗ ಧನ್ಯತಾ ಭಾವ ಮೂಡಿತ್ತು. ಒಂದು ರಥಯಾತ್ರೆ ಇನ್ನೇನು ಕೊಡಬೇಕು ಹೇಳಿ. ಆರಂಭದಲ್ಲಿ ನಾವು ರಥಯಾತ್ರೆ ಮಾಡುತ್ತೇವೆ, ಸಮಾಜಕ್ಕೆ ಸಂದೇಶ ಕೊಡುತ್ತೇವೆ ಎಂಬ ಧಿಮಾಕು ಇತ್ತು. ರಥಯಾತ್ರೆ ಮುಗಿಯುವ ವೇಳೆಗೆ ವಿವೇಕಾನಂದರು ಇದನ್ನು ಮಾಡಿಸಿಕೊಂಡರು ಮತ್ತು ನಮ್ಮ ಆತ್ಮಸ್ಥೈರ್ಯವನ್ನು ವೃದ್ಧಿಸಿದರು ಎಂಬ ಸತ್ಯದ ಅರಿವಾಗಿದೆ. ಈ ರಥಯಾತ್ರೆ ನಮ್ಮಲ್ಲನೇಕರ ಅಹಂಕಾರವನ್ನು ತರಿದು ಹಾಕಿದೆ. ಅನೇಕರ ದರ್ಪ ಧಾಷ್ಟ್ರ್ಯವನ್ನು ಮೆಟ್ಟಿ ನಿಂತಿದೆ. ಅನೇಕರ ನಾಯಕತ್ವದ ಗುಣಗಳನ್ನು ಹೊರಗೆಳೆದು ತಂದಿದೆ. ಅನೇಕರ ಹೃದಯವನ್ನು ಪ್ರೀತಿಯಿಂದ ತುಂಬಿಬಿಟ್ಟಿದೆ. ಓಹ್! ಈ 65 ದಿನಗಳು ಮರೆಯಲಾರದ ಅನುಭೂತಿಯನ್ನು ನೀಡಿದೆ.


ಓಹ್! ಅಂದ ಹಾಗೆ ಹೇಳೋದನ್ನು ಮರೆತಿದ್ದ ಈ ರಥಯಾತ್ರೆಗೂ ಮುನ್ನ ಲೋಕಾರ್ಪಣೆ ಮಾಡಿದ ಲಾಂಛನ ಎಲ್ಲರನ್ನೂ ಒಂದು ಕ್ಷಣ ಆಲೋಚಿಸುವಂತೆ ಮಾಡುವುದಲ್ಲದೇ ದೂರದ ಸಿಂಗಾಪುರಿನಲ್ಲಿ ಮೆಚ್ಚುಗೆ ಗಳಿಸಿತು. ಲಾಂಛನದ ವಿವರಣೆ ಕೇಳಿದವರೆಲ್ಲಾ ಒಮ್ಮೆ ಓ! ಎಂದು ಉದ್ಗರಿಸದೇ ವಿಧಿಯಿಲ್ಲ. ಅನೇಕ ಪ್ರಮುಖ ಸಂಘಟನೆಗಳೂ ಕೂಡ ಇದೇ ಲಾಂಛನವನ್ನು ತಮ್ಮ ಕಾರ್ಯಕ್ರಮಕ್ಕೂ ಬಳಸಿ ನಮ್ಮ ಆನಂದವನ್ನು ನೂರ್ಮಡಿಯಾಗಿಸಿದ್ದಾರೆ. ಈ ಲಾಂಛನದೊಂದಿಗೆ ಬಿಡುಗಡೆಯಾದ ರಥಯಾತ್ರೆಯ ಧ್ಯೇಯ ಗೀತೆ ಈಗಲೂ ಕಿವಿಯೊಳಗೆ ಗುಂಯ್ಗುಡುತ್ತಿದೆ. ಸಂಗೀತ ಸಂಯೋಜಿಸಿ ಹುಚ್ಚಿಗೆ ಬಿದ್ದವನಂತೆ ಹಾಡಿದ ಮನೋಜವಂ ಎಲ್ಲ ಕಾರ್ಯಕರ್ತರ ಉತ್ಸಾಹವನ್ನು ಬೆಟ್ಟದಷ್ಟಾಗಿಸಿದ ಕೀತರ್ಿಗಂತೂ ಪಾತ್ರನಾಗಿದ್ದಾನೆ. ನಾನು ಹೇಳಿದ್ದಷ್ಟೇ ರಥಯಾತ್ರೆಯಲ್ಲ ಹೇಳದೇ ಉಳಿದುದು ಸಾಕಷ್ಟಿದೆ ಮತ್ತು ಅದೇ ಇವುಗಳಿಗಿಂತಲೂ ರೋಚಕವಾಗಿದೆ. ಈ ಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಕಾರ್ಯಕರ್ತರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top