National

ಯೋಗಿ ಆಡಳಿತದಲ್ಲಿ ಹೆಂಡ ಮಾರುವವರಿಗೆ ಕಷ್ಟ!!

ಉತ್ತರ ಪ್ರದೇಶ ಸರ್ಕಾರದ ಅಬಕಾರಿ ಆದಾಯ 55 ಪ್ರತಿಶತ ಹೆಚ್ಚಾಗಿದೆ. ಮದ್ಯದ ಕಳ್ಳಸಾಗಣೆಯನ್ನು ತಡೆಯುವಲ್ಲಿ ಹೊಸ ನೀತಿ-ನಿಯಮಗಳು ಸಹಾಯವಾಗಿವೆ. ಅಲ್ಲಿನ ಮದ್ಯದ ಸಂಸ್ಥೆಗಳ ಒಕ್ಕೂಟಕ್ಕೆ ದೊಡ್ಡ ಹೊಡೆತವೇ ಆಗಿದೆ. ಈ ವರ್ಷ ಏಪ್ರಿಲ್ ಮತ್ತು ಆಗಸ್ಟ್ ನಡುವೆ ಅಬಕಾರಿಯ ಆದಾಯ 10,000 ಕೋಟಿ ರೂಪಾಯಿಯನ್ನು ಮುಟ್ಟಿದೆ.

ಕಳೆದ ವರ್ಷ ಸರ್ಕಾರ ಇದೇ ಸಮಯದಲ್ಲಿ 6425 ಕೋಟಿ ರೂಪಾಯಿ ಅಬಕಾರಿ ಆದಾಯವನ್ನು ಹೊಂದಿತ್ತು. ಈ ವರ್ಷ ಸರ್ಕಾರ ಅಳವಡಿಸಿಕೊಂಡ ಕ್ರಮದಿಂದ ಆದಾಯದಲ್ಲಿ ಏರಿಕೆ ಕಂಡಿದೆ. ಈ ವರ್ಷ ಜನವರಿಯಲ್ಲಿ ಯೋಗಿ ಆದಿತ್ಯನಾಥರ ಸರ್ಕಾರ 2018-19 ರ ಸಾಲಿನ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿತು. ಈ ನೀತಿ ಬಂಡವಾಳಶಾಹಿಗಳನ್ನು ತಡೆಗಟ್ಟುವಲ್ಲಿ ಮತ್ತು ಮದ್ಯದ ಉದ್ಯಮದಲ್ಲಿ ಏಕಸ್ವಾಮ್ಯ ಸಾಧಿಸುವುದನ್ನೂ ತಡೆಗಟ್ಟುವಲ್ಲಿ ಯಶಸ್ವಿಯಾಯ್ತು. ಇದು ಸರ್ಕಾರದ ಇಲಾಖೆಗಳು ಪಾರದರ್ಶಕವಾಗಿ ಕೆಲಸ ಮಾಡುವಲ್ಲಿಯೂ ಸಹಾಯ ಮಾಡಿತು.

ಮಾಯಾವತಿಯ ಅಧಿಕಾರಾವಧಿಯಲ್ಲಿ ಮೀರತ್ ನಲ್ಲಿ ಸೃಷ್ಟಿಯಾಗಿದ್ದ ವಿಶೇಷ ಅಬಕಾರಿ ವಲಯಕ್ಕೂ ಇದರಿಂದ ಭಾರಿ ಪೆಟ್ಟು ಉಂಟಾಗಿದೆ. ಈ ವಲಯದಲ್ಲಿ ಮೀರತ್, ಶಹರನ್ ಪುರ, ಬರೈಲಿ ಮತ್ತು ಮೊರದಾಬಾದ್ ನಿಂದ ಪಾಂಟಿ ಚಡ್ಡಾಸ್ ವೇವ್ ಗ್ರೂಪ್ ಎಂಬ ಉದ್ಯಮಿ ಸಂಸ್ಥೆಗೆ ನೇರವಾಗಿಯೇ ಲಾಭವಾಗುತ್ತಿತ್ತು. ಮದ್ಯ ವ್ಯಾಪಾರದಲ್ಲಿ ಇವರೇ ಏಕಸ್ವಾಮ್ಯ ಹೊಂದುವಂತೆ ಈ ವಲಯ ಸೃಷ್ಟಿಸಿತ್ತು.

ಈಗಿನ ನೀತಿ-ನಿಯಮಗಳ ಪ್ರಕಾರ ಮದ್ಯ ವ್ಯಾಪಾರಿ ತಾನೇ ವೈಯಕ್ತಿಕವಾಗಿ ರೀಟೈಲ್ ಔಟ್ ಲೆಟ್ ಗೆ ಹರಾಜು ಕೂಗಬೇಕು. ಒಂದು ಜಿಲ್ಲೆಯಲ್ಲಿ ಒಬ್ಬ ಗರಿಷ್ಠ ಎರಡು ಅಂಗಡಿಗಳಷ್ಟೇ ಹೊಂದಿರಬೇಕು. ಉತ್ತರ ಪ್ರದೇಶದಲ್ಲಿ ಒಟ್ಟಾರೆ 18,000 ಮದ್ಯದಂಗಡಿಗಳಿವೆ.

ರಾಜ್ಯದಲ್ಲಿ ಅಬಕಾರಿ ತೆರಿಗೆ ಅತ್ಯಂತ ಹೆಚ್ಚಿರುವುದೇ ಮದ್ಯ ಕಳ್ಳಸಾಗಾಣೆಗೆ ಕಾರಣವೆಂದು ಕಂಡು ಬಂದಿದೆ. ತೆರಿಗೆ ಇಲಾಖೆಯಿಂದ ಏಪ್ರಿಲ್ ಮತ್ತು ಆಗಸ್ಟ್ ನಡುವೆ 1,42,000 ದಾಳಿಗಳಾಗಿವೆ. 1031 ಜನರನ್ನು ಬಂಧಿಸಲಾಗಿದೆ. 326 ವಾಹನಗಳನ್ನು ತಡೆಹಿಡಿಯಲಾಗಿದೆ ಮತ್ತು ಸುಮಾರು ಆರು ಲಕ್ಷ ಲೀಟರ್ ನಷ್ಟು ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯದ ಕಳ್ಳಸಾಗಾಣೆಯನ್ನು ತಡೆಯುವಲ್ಲಿ ಯೋಗಿ ಆದಿತ್ಯನಾಥರ ಸರ್ಕಾರ ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಿದೆ. ಇದರಿಂದ ರಾಜ್ಯದ ಆದಾಯವೂ ಹೆಚ್ಚಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top