National

ಮೌಲಾನಾ ವಿರುದ್ಧದ ದೂರು ಹಿಂಪಡೆಯದ ಕಾರಣ ಯುವತಿಯನ್ನು ಸುಟ್ಟುಹಾಕಿದ ಮದ್ರಸಾ ವಿದ್ಯಾರ್ಥಿಗಳು!!

ಬಾಂಗ್ಲಾದೇಶದಲ್ಲಿ 18 ವರ್ಷದ ಯುವತಿಯನ್ನು ನಾಲ್ವರು ಗಂಡಸರು ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ. ನಾಲ್ವರೂ ಬುರ್ಖಾದಲ್ಲಿ ಬಂದು ಆಕೆಯನ್ನು ಸುಟ್ಟು ಹಾಕಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಆಕೆ ಓದುತ್ತಿದ್ದ ಮದ್ರಸಾದ ಪ್ರಾಂಶುಪಾಲ ಮೌಲಾನಾ ಸಿರಾಜ್ ಉದ್ ದೌಲಾ ತನ್ನ ಮೇಲೆ ಲೈಂಗಿಕ ಕಿರುಕುಳವೆಸಗಿದ್ದಾನೆ ಎಂದು ಆಕೆ ದೂರು ದಾಖಲಿಸಿದ್ದಳು. ಮಾರ್ಚ್ 27ರಂದು ಆಕೆ ದೂರು ದಾಖಲಿಸಿದ ನಂತರ ಪೊಲೀಸರು ಮೌಲಾನಾ ಸಿರಾಜ್ ಉದ್ ದೌಲಾನನ್ನು ಬಂಧಿಸಿದ್ದರು.

ಪ್ರಾಂಶುಪಾಲ ಬಂಧಿತನಾದ ನಂತರ ಯುವತಿಯ ಕುಟುಂಬಕ್ಕೆ ಪ್ರತಿನಿತ್ಯ ಬೆದರಿಕೆ ಕರೆಗಳು ಬರಲು ಪ್ರಾರಂಭಿಸಿದವು. ಏಪ್ರಿಲ್ 6ರಂದು ಈ ಯುವತಿಯನ್ನು ಆಕೆ ಮದ್ರಸಾದಲ್ಲಿದ್ದ ಸಮಯದಲ್ಲಿ ನಾಲ್ವರು ಗಂಡಸರು ಬುರ್ಖಾ ತೊಟ್ಟುಕೊಂಡು ಬಂದು ಅಪಹರಿಸಿದ್ದರು. ನಂತರ ಆಕೆಗೆ ದೂರನ್ನು ಹಿಂಪಡೆಯುವಂತೆ ಹೇಳಿದರು. ಆಕೆ ಕೇಳದೇ ಹೋದಾಗ ಸೀಮೆಎಣ್ಣೆ ಸುರಿದು ಆಕೆಯನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ!

ಆಕೆಯನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಏಪ್ರಿಲ್ 10ರಂದು ಕೊನೆಯುಸಿರೆಳೆದಿದ್ದಾಳೆ. ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ. ಅವರು ಮದ್ರಸಾದ ವಿದ್ಯಾರ್ಥಿಗಳೇ ಎಂದು ತಿಳಿದುಬಂದಿದೆ. ಈ ಘಟನೆಯ ನಂತರ ಬಾಂಗ್ಲಾದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಯಿತು. ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾ ಅವರು ಘಟನೆಗೆ ಸಂಬಂಧಪಟ್ಟ ಎಲ್ಲರ ಮೇಲೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top