Politics

ಮೋದಿ ಹಣಿಯಲು ದಲಿತರ ಹೆಗಲ ಮೇಲೆ ಬಂದೂಕು!

ರೋಹಿತ್ ವೆಮುಲಾ. ಈ ಹೆಸರು ನೆನಪಿದೆ ತಾನೆ! ಬುದ್ಧಿಜೀವಿಗಳ ಪೋಸ್ಟರ್ ಬಾಯ್! ಹೈದರಾಬಾದಿನ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಓದುತ್ತಿದ್ದ ಹುಡುಗ 2016 ರಲ್ಲಿ ಆತ್ಮಹತ್ಯೆ ಮಾಡಿಕೊಂಡ!

ವಿಶ್ವವಿದ್ಯಾಲಯದ ಅಂಬೇಡ್ಕರ್ ಸ್ಟುಡೆಂಟ್ಸ್ ಅಸೋಸಿಯೇಷನ್ ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಈತ ಭಯೋತ್ಪಾದಕ ಯಾಕುಬ್ ಮೆನನ್ ನ ಸಾವಿನ ವಿರುದ್ಧ ಪ್ರತಿಭಟನೆಯನ್ನೂ ಮಾಡಿದ್ದ. ಆತನ ವಿರುದ್ಧ ಸಹ ವಿದ್ಯಾರ್ಥಿಗಳು ಹಲವು ದೂರನ್ನು ನೀಡಿದ ನಂತರ ಆತನಿಗೆ ಬರುತ್ತಿದ್ದ ಫೆಲೋಶಿಪ್ ಅನ್ನು ನಿಲ್ಲಿಸಲಾಗಿತ್ತು.‌ 2016 ರ ಜನವರಿಯಲ್ಲಿ ಆತನನ್ನು ಕಾಲೇಜಿನಿಂದ ಹೊರಹಾಕಲಾಗಿತ್ತು. ಈ ದುಃಖದಿಂದ ಆತ ಆತ್ಮಹತ್ಯೆ ಮಾಡಿಕೊಂಡ ಎಂದು ಶಂಕಿಸಲಾಗಿತ್ತು. ಈತನ ಸಾವು ದೇಶಾದ್ಯಂತ ಚರ್ಚೆಗೆ ಒಳಪಟ್ಟಿತು. ಈತನ ಸಾವನ್ನು ಮುಂದಿಟ್ಟುಕೊಂಡು ಬುದ್ಧಿಜೀವಿಗಳು ಸರ್ಕಾರ‌ ಅಸಮಾನತೆಯನ್ನು ಸಾರುತ್ತಿದೆ, ದಲಿತರಿಗೆ ಮೋಸ ಮಾಡುತ್ತಿದೆ ಎಂದು ಹುಯಿಲೆಬ್ಬಿಸಿದ್ದರು.

ಆದರೆ, ಆತ ದಲಿತನೇ ಅಲ್ಲವೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದ ಮೇಲೆ ಈ ಕುರಿತು ವಿಚಾರಣೆ ನಡೆಸಲಾಯಿತು. ಆತ ಮೂಲತಃ ಆಂಧ್ರಪ್ರದೇಶದವನಾದ್ದರಿಂದ ಅಲ್ಲಿನ ಸರ್ಕಾರಿ ಇಲಾಖೆಗೆ ವಿಚಾರಣೆ ನಡೆಸಲು ಹೇಳಲಾಯ್ತು. ಗುಪ್ತಚರ ಇಲಾಖೆ ಮತ್ತು ಆಂಧ್ರಪ್ರದೇಶದ ಗುಂಟೂರಿನ ಸರ್ಕಾರಿ ಇಲಾಖೆಯಿಂದ ರೋಹಿತ್ ಮತ್ತು ಆತನ ತಾಯಿ ಇಬ್ಬರೂ ದಲಿತರಲ್ಲ ಎಂಬುದು ಖಚಿತವಾಯ್ತು!!‌ ಆದರೆ ತಾಯಿ ಮತ್ತು ಕುಟುಂಬದವರೆಲ್ಲಾ ತಾವು ದಲಿತರೇ ಎಂದು ಪಟ್ಟು ಹಿಡಿದಿದ್ದರು. ತಾಯಿ ಮಿಡಿಯಾ ಮುಂದೆ ಬಂದು ತನ್ನ ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು, ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದರು.

ಇಷ್ಟೆಲ್ಲಾ ಈಗೇಕೆ ಹೇಳಬೇಕಾಯಿತೆಂದರೆ, ಎರಡು ವರ್ಷಗಳ ನಂತರ ರೋಹಿತ್ ವೆಮುಲಾರ ತಾಯಿ‌ ಮತ್ತೆ ಮಾಧ್ಯಮದ ಮುಂದೆ ಬಂದಿದ್ದಾರೆ. ಈ ಬಾರಿ ಮಗನ ಪರವಾಗಿ ಕಣ್ಣೀರು ಸುರಿಸಲಲ್ಲ.‌ ಮಗನ ಸಾವಿನ ಮೇಲೆ ರಾಜಕಾರಣ ಮಾಡಿದವರ ಬಣ್ಣ ಬಯಲು ಮಾಡಲು. ಹೌದು! ‘ಇಂಡಿಯನ್ ಯುನಿಯನ್ ಮುಸ್ಲೀಂ ಲೀಗ್ ಮನೆಗಾಗಿ 20 ಲಕ್ಷ‌ ಕೊಡುವುದಾಗಿ ಹೇಳಿತ್ತು. ಇಲ್ಲಿಯವರೆಗೂ ಅದರ ಬಗ್ಗೆ ಯಾವುದೇ ಮಾತಿಲ್ಲ. ಕೊಟ್ಟ ಚೆಕ್ ಕೂಡ ಬೌನ್ಸ್ ಆಗಿದೆ’ ಎಂದು ಅವರ ತಾಯಿ ದೂಷಿಸಿದ್ದಾರೆ.‌ ಕೊಡಲು ಆಗದಿದ್ದರೆ ನೇರವಾಗಿ ಹೇಳಬೇಕೆಂದು ತಾಕೀತು ಮಾಡಿದ್ದಾರೆ. ಇಂಡಿಯನ್ ಯುನಿಯನ್ ಮುಸ್ಲೀಂ ಲೀಗ್ ಸಾವಿನಲ್ಲೂ ರಾಜಕಾರಣ ಮಾಡಿರುವುದು ಸ್ವತಃ ರೋಹಿತ್ ಅವರ ತಾಯಿಯಿಂದಲೇ ಬಯಲಿಗೆ ಬಂದಿದೆ!!

ಮುಸ್ಲೀಮರು ದಲಿತರನ್ನು ಅಸ್ತ್ರವಾಗಿಸಿಕೊಂಡು ಮೋದಿಯನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿರುವುದು ಈಗ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮುಸ್ಲೀಮರು ಪಾಕಿಸ್ತಾನದಂತಹ ರಾಷ್ಟ್ರಗಳಿಂದ ಹಣವನ್ನು ಪಡೆದು ಭಾರತದ ವಿರುದ್ಧ ನಡೆಸುತ್ತಿರುವ ಪಿತೂರಿ ಈ ಘಟನೆಯ ಮೂಲಕ ಮತ್ತೊಮ್ಮೆ ಖಾತ್ರಿಯಾಗಿದೆ!

Click to comment

Leave a Reply

Your email address will not be published. Required fields are marked *

Most Popular

To Top