National

ಮೋದಿ‌ ಪ್ರಭಾವ ರಾಹುಲ್ ನಂತರ ಈಗ ಅಖಿಲೇಶ್ ಮಂದಿರ ಜಪ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಾವು ಚುನಾವಣೆಯಲ್ಲಿ ಗೆದ್ದರೆ ‘ವಿಷ್ಣು’ ದೇವರ ಹೆಸರಿನಲ್ಲಿ 2000 ಎಕರೆಗಳಷ್ಟು ದೊಡ್ಡ ನಗರವೊಂದನ್ನು ನಿರ್ಮಿಸುವುದಾಗಿ ಜನರಿಗೆ ಆಶ್ವಾಸನೆ ನೀಡಿದ್ದಾರೆ. ಆ‌ ನಗರದಲ್ಲಿ ಕಾಂಬೋಡಿಯಾದ ಅಂಗೋರ್ ವಾಟ್ ನಲ್ಲಿರುವಂತೆ ದೊಡ್ಡ ವಿಷ್ಣು ದೇವಾಲಯವನ್ನೂ ನಿರ್ಮಿಸುವುದಾಗಿ ಹೇಳಿದ್ದಾರೆ!
ಇಟಾವಹ್ ನ ಬಳಿಯಿರುವ ಲಯನ್ಸ್ ಸಫಾರಿಯ ಹತ್ತಿರ ಈ ನಗರವನ್ನು ನಿರ್ಮಿಸುವ ಚಿಂತನೆ ನಡೆಸಲಾಗಿದೆ ಎಂದು ಅಖಿಲೇಶ್ ತಿಳಿಸಿದ್ದಾರೆ. ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ಜ್ಞಾನವನ್ನು ಈ ನಗರ ಬಿಂಬಿಸಲಿದೆ ಎಂದಿದ್ದಾರೆ. ಇದಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ ನಿರ್ಮಾಣದ ಯೋಜನೆಯನ್ನು ತಯಾರಿಸಲೂ ಅಖಿಲೇಶ್ ಸಿದ್ಧವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಕುರಿತ ಯೋಜನೆಯೊಂದನ್ನು ಜನರ ಮುಂದಿಟ್ಟಿದ್ದರು. ಸುಪ್ರೀಂಕೋರ್ಟಿನಲ್ಲಿ ರಾಮಮಂದಿರದ ಕುರಿತ ವಾದ-ವಿವಾದಗಳು ನಡೆಯುತ್ತವೆ.‌ ಸದ್ಯದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆಯೂ ಹೆಚ್ಚಿದೆ. ರಾಮಮಂದಿರ ಕಟ್ಟುವ ಸಂದರ್ಭ ಬಂದರೆ ತಾವದಕ್ಕೆ ಸಿದ್ಧ ಎಂದು ಬಿಜೆಪಿ ಈ ಹಿಂದೆ ಹೇಳಿತ್ತು.‌
ಜನರ ವೋಟನ್ನು, ವಿಶೇಷವಾಗಿ ಹಿಂದುಗಳ ವೋಟನ್ನು ತನ್ನತ್ತ ಸೆಳೆಯಲು ಸಮಾಜವಾದಿ ಪಕ್ಷ ಮತ್ತು ಮಹಾಘಟಬಂಧನದಡಿ ಒಂದಾಗಿರುವ ಪಕ್ಷಗಳೆಲ್ಲ ಹರಸಾಹಸ ಮಾಡುತ್ತಿದ್ದಾರೆ.‌ ವೋಟಿಗಾಗಿ ‘ಟೆಂಪಲ್ ರನ್’‌ ರಾಜಕೀಯ ಪ್ರಾರಂಭವಾಗಿದೆ. 2012 ರಿಂದ 2017 ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಬಾರದ ‘ವಿಷ್ಣು ನಗರ’ದ ಕಲ್ಪನೆ ಈಗ ಬಂದಿರುವುದು ಅಚ್ಚರಿ ತಂದಿದೆ!
ಮೋದಿ-ಮತ್ತು ಯೋಗಿ ಅಧಿಕಾರಕ್ಕೆ ಬಂದ ನಂತರ ಚುನಾವಣಾ ದಿಸೆಯೇ ಸಂಪೂರ್ಣ ಬದಲಾದಂತಿದೆ. ಬಿಜೆಪಿ ಎಲ್ಲೆಡೆಯೂ ಜಯಭೇರಿ ಬಾರಿಸುತ್ತಿರುವುದನ್ನು ಕಂಡ ಉಳಿದ ಪಕ್ಷಗಳು ‘ಸಾಫ್ಟ್ ಹಿಂದುತ್ವ’ದತ್ತ ವಾಲಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ನ‌ ರಾಷ್ಟ್ರಿಯ ಅಧ್ಯಕ್ಷ ಮತ್ತು ಪ್ರಧಾನಿ ಅಭ್ಯರ್ಥಿ ರಾಹುಲ್ ಅವರ ‘ಟೆಂಪಲ್ ರನ್’ ಕೂಡ ವೋಟಿಗಾಗಿಯೇ ನಡೆದ ಡ್ರಾಮ! ಇದೀಗ ಅಖಿಲೇಶ್ ಯಾದವ್ ರ ಸರದಿ.
Click to comment

Leave a Reply

Your email address will not be published. Required fields are marked *

Most Popular

To Top