National

ಮೋದಿಯನ್ನು ಮಟ್ಟಹಾಕಲು ದೂರದರ್ಶನವನ್ನು ಬಳಸಿಕೊಂಡಿತ್ತು ಕಾಂಗ್ರೆಸ್ಸು!!

ದೂರದರ್ಶನ್ ನ ನ್ಯೂಸ್ ಆ್ಯಂಕರ್ ಮತ್ತು ಪತ್ರಕರ್ತ ಅಶೋಕ್ ಶ್ರೀವಾಸ್ತವ್ ಅವರು ‘ನರೇಂದ್ರಮೋದಿ ಸೆನ್ಸಾರ್ಡ್’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಯುಪಿಯ ಸರ್ಕಾರ 2004 ರಿಂದ 2014 ರ ನಡುವೆ ಹೇಗೆ ದೂರದರ್ಶನವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂಬುದನ್ನು ವಿವರಿಸಲಾಗಿದೆ.

ಮೂಲತಃ ಪುಸ್ತಕದ ವಿಷಯ 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿಯವರು ದೂರದರ್ಶನಕ್ಕೆ ನೀಡಿದ್ದ ಸಂದರ್ಶನವೊಂದನ್ನು ಕುರಿತು ಬರೆದಿರುವುದು. ಅಶೋಕ್ ಶ್ರೀವಾಸ್ತವ್ ಅವರೇ ನರೇಂದ್ರಮೋದಿಯವರ ಸಂದರ್ಶನವನ್ನು ಮಾಡಿದ್ದರು. ಆದರೆ ಅದನ್ನು ತಕ್ಷಣವೇ ಪ್ರಸಾರವಾಗಲು ಬಿಡದೇ ಅದನ್ನು ಹಲವು ಬಾರಿ ಸೆನ್ಸಾರ್ ಮಾಡಿ ನಂತರ ಪ್ರಸಾರ ಮಾಡಲಾಯ್ತು!

ಅದರ ಪ್ರಸಾರವಾದ ನಂತರವೂ ಹಲವು ವಿವಾದಾತ್ಮಕ ವಿಚಾರಗಳು ಅದರ ಸುತ್ತ ಸುತ್ತಿಕೊಂಡವು. ಟೈಮ್ಸ್ ಆಫ್ ಇಂಡಿಯಾ ಅಧಿಕಾರದಲ್ಲಿರುವವರು ಈ ಸಂದರ್ಶನವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಪ್ರಸಾರ ಮಾಡಿರುವುದಾಗಿ ಆರೋಪಿಸಿತು. ಈ ಸಂದರ್ಶನವನ್ನು ನೆನಪಿಸಿಕೊಳ್ಳುತ್ತಾ ಶ್ರೀವಾಸ್ತವ್ ತಮ್ಮ ಪುಸ್ತಕದಲ್ಲಿ, ಹೇಗೆ ಕಾಂಗ್ರೆಸ್ಸು ತಮ್ಮ ರಾಜಕೀಯ ವಿರೋಧಿಗಳನ್ನು ಎದುರಿಸಲು ಸಾರ್ವಜನಿಕ ಸಂಸ್ಥೆಯೊಂದನ್ನು ಉಪಯೋಗಿಸಿಕೊಂಡಿದೆ ಎಂಬುದನ್ನೂ ವಿವರಿಸುತ್ತಾ ಸಾಗುತ್ತಾರೆ!

ಈ ಪುಸ್ತಕದ ಪ್ರಕಾರ 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ದೂರದರ್ಶನ ಚಾನೆಲ್ ಗೆ ಒಂದು ವಿಶೇಷ ತಂಡವನ್ನು ರಚಿಸಲಾಗಿತ್ತು. ನರೇಂದ್ರಮೋದಿಯವರ ವಿರುದ್ಧ ಡಾಕ್ಯುಮೆಂಟರಿಗಳು, ಕಥೆಗಳು, ವಿವಿಧ ಮಾಹಿತಿಗಳನ್ನು ಒದಗಿಸುವುದು ಈ ತಂಡದ ಕೆಲಸ. ಮಾಹಿತಿಗಳು ವಿಶೇಷವಾಗಿ 2002 ರ ಗೋಧ್ರಾ ಹತ್ಯಾಕಾಂಡದ ಸುತ್ತಲೂ ಸುತ್ತುವಂತೆ ನೋಡಿಕೊಳ್ಳಲಾಗುತ್ತಿತ್ತಂತೆ!

ಈ ವಿಶೇಷ ತಂಡ ಯುಪಿಎ ಸರ್ಕಾರದ ನೀತಿ, ನಿಯಮಗಳು, ಯೋಜನೆಗಳ ಕುರಿತೂ ಮಾಹಿತಿಯನ್ನು ಕಲೆ ಹಾಕುತ್ತಿತ್ತು. ಈ ತಂಡವೇ ದೂರದರ್ಶನದ ಅಧಿಕಾರದ ಪ್ರಮುಖ ದ್ವಾರವಾಗಿತ್ತು ಎನ್ನುತ್ತಾರೆ ಲೇಖಕ ಶ್ರೀವಾಸ್ತವ್. ಈ ತಂಡ ಡಿಸೆಂಬರ್ 9 ರಂದು ದೂರದರ್ಶನ ಕಛೇರಿಯಲ್ಲಿ ಸೋನಿಯಾ ಗಾಂಧಿಯ ಹುಟ್ಟುಹಬ್ಬವನ್ನೂ ಎಲ್ಲರಿಗೂ ಸಿಹಿ ಹಂಚಿ ಆಚರಿಸುತ್ತಿತ್ತಂತೆ!

ಅಶೋಕ್ ಶ್ರೀವಾಸ್ತವ್ ಸೇರಿದಂತೆ ಇನ್ನೂ ಕೆಲ ಪತ್ರಕರ್ತರ ಪಾಲಿಗೆ ನಡೆದ ಆಶ್ಚರ್ಯಕರ ಸಂಗತಿಯೆಂದರೆ 2005 ರಲ್ಲಿ, ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿಯವರಿಗೆ ಅಮೇರಿಕಾ ವೀಸಾವನ್ನು ತಿರಸ್ಕರಿಸಿದಾಗ ಸಿಹಿ ಹಂಚಿ ಸಂಭ್ರಮಿಸಲಾಗಿತ್ತಂತೆ! ಆದರೆ ಈ ತಂಡದ ವಿರುದ್ಧ ಯಾರೂ ಚಕಾರವೆತ್ತುತ್ತಿರಲಿಲ್ಲವೇಕೆಂದರೆ ಅದರಲ್ಲಿ ಕಾಂಗ್ರೆಸ್ಸಿನ ವ್ಯಕ್ತಿ ಸಲಹೆಗಾರನಾಗಿದ್ದ ಮತ್ತು 2004 ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಯುಪಿಎಯ ವಿರೋಧವಿದ್ದ ಡಜನುಗಟ್ಟಲೆ ಕೆಲಸಗಾರರನ್ನು ಕೆಲಸದಿಂದ ಕಿತ್ತು ಬಿಸಾಡಲಾಗಿತ್ತು.

2007 ರ ಗುಜರಾತಿನ ಅಸೆಂಬ್ಲಿ ಚುನಾವಣೆಯ ಸಂದರ್ಭದಲ್ಲಿ ದೂರದರ್ಶನದ ವರದಿಗಾರರು ಮಾಹಿತಿಯನ್ನು ಕಾಂಗ್ರೆಸ್ಸಿನ ಸಲಹೆಗಾರ ಮತ್ತು ತೀಸ್ತಾ ಸೆಟ್ಲವಾಡ್ ರಿಂದ ಸ್ವೀಕರಿಸಬೇಕಿತ್ತಂತೆ. 2009 ರ ವೇಳೆಗೆ ಈ ವಿಶೇಷ ತಂಡದ ಅಧಿಕಾರವನ್ನು ಬೇರೆಯವರಿಗೆ ವರ್ಗಾಯಿಸಲಾಯಿತಾದರೂ ಇದರ ಗುರಿ ನರೇಂದ್ರಮೋದಿಯವರನ್ನು ವಿರುದ್ಧ ಮಾಹಿತಿ ಕಲೆ ಹಾಕುವುದೇ ಆಗಿತ್ತು ಎನ್ನುತ್ತಾರೆ ಅಶೋಕ್!

ಗುಜರಾತಿನ ಸರ್ಕಾರ ಸಾಧಿಸಿದ ಅದ್ಭುತ ಮೈಲಿಗಲ್ಲುಗಳನ್ನು ಮತ್ತು ನರೇಂದ್ರಮೋದಿಯವರ ಕುರಿತ ಯಾವುದೇ ಒಳ್ಳೆಯ ವಿಚಾರವನ್ನು ಪ್ರಸಾರ ಮಾಡುವುದಕ್ಕೆ ನಿಷೇಧವಿತ್ತು. ಹಾಗಾಗಿ ನರೇಂದ್ರಮೋದಿಯವರನ್ನು ಸಂದರ್ಶಿಸುವ ಅವಕಾಶ ದೊರೆತಿದ್ದು ತನನ್ನು ಆಶ್ಚರ್ಯಕ್ಕೆ ತಳ್ಳಿತ್ತು ಎನ್ನುತ್ತಾರೆ ಲೇಖಕ ಅಶೋಕ್ ಶ್ರೀ ವಾಸ್ತವ್. ಆದರೆ ಸಂದರ್ಶನದ ನಂತರ ಎದುರಿಸಬೇಕಾದ ಕಷ್ಟಗಳೂ ಹಲವು ಎಂಬುದನ್ನು ನರೇಂದ್ರಮೋದಿ ಸೆನ್ಸಾರ್ಡ್ ಪುಸ್ತಕದುದ್ದಕ್ಕೂ ಅವರು ವಿವರಿಸಿದ್ದಾರೆ.

ಹಿಂದಿಯಲ್ಲಿ ಕೃತಿ ರೂಪಕ್ಕೆ ಬಂದಿರುವ ಈ ಪುಸ್ತಕ, ಕಾಂಗ್ರೆಸ್ಸಿನ ಅವಧಿಯಲ್ಲಿ ಮಾಧ್ಯಮಗಳಿಗೆ ‘ಸ್ವಾತಂತ್ರ್ಯ’ವಿತ್ತು ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಮಾಧ್ಯಮಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆಂಬ ಪ್ರಾಪಗ್ಯಾಂಡಗಳನ್ನು ಹಬ್ಬಿಸುತ್ತಿದ್ದಾರಲ್ಲಾ, ಅದರ ಕುರಿತು ಬೆಳಕು ಚೆಲ್ಲುತ್ತದೆ!

ಈ ಪುಸ್ತಕದಲ್ಲಿ ಹೇಗೆ 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಿಯಾಂಕಳನ್ನು ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನವನ್ನು ಕಾಂಗ್ರೆಸ್ಸು ಮಾಡಿತ್ತು ಎಂಬುದನ್ನೂ ವಿವರಿಸಲಾಗಿದೆ.

 

Click to comment

Leave a Reply

Your email address will not be published. Required fields are marked *

Most Popular

To Top