National

ಮೋದಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತೇ?!

ನರೇಂದ್ರಮೋದಿಯವರಿಗೆ ಒಂದು ಅತಿಮಾನುಷ ಶಕ್ತಿ ಇರುವುದಂತೂ ಸತ್ಯ. ಈ ಹಿಂದೆ ನರೇಂದ್ರಮೋದಿ ಅಮೇರಿಕಾ, ಕೆನಡಾಗಳ ಪ್ರವಾಸವನ್ನು ಬಿಡುವಿಲ್ಲದೇ ಮಾಡಿ ಡಿಮಾನಿಟೈಸೇಷನ್ನಿಂದಾದ ಕಿರಿಕಿರಿಗಳನ್ನು ಸಂಭಾಳಿಸಲು ರಾತೋರಾತ್ರಿ ಮತ್ತೆ ಸಿದ್ಧವಾಗಿದ್ದು ನಿಮಗೆಲ್ಲಾ ಗೊತ್ತಿರುವಂತೆಯೇ ಈಗ ಅಂಥದ್ದೇ ಮತ್ತೊಂದು ಸಂದರ್ಭ ಕಣ್ಣ ಮುಂದೆ ಬಂದಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಘಡ, ತೆಲಂಗಾಣ ರಾಜ್ಯಗಳಲ್ಲಿ ಬಿಡುವಿಲ್ಲದ ಪ್ರವಾಸ ಮಾಡುತ್ತಾ ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಮೋದಿ ಈ ನಡುವೆಯೇ ಜಿ-20 ಶೃಂಗಸಭೆಗೆ ಹೊರಟುಬಿಟ್ಟಿದ್ದಾರೆ. ಒಟ್ಟಾರೆ 50 ಗಂಟೆಗಳ ಪ್ರವಾಸ. ಅದರ ನಡುವೆ 50 ಗಂಟೆಗಳ ಬಿಡುವಿಲ್ಲದ ಸಭೆ ಮತ್ತು ಚಚರ್ೆಗಳು. ವಾಸ್ತವವಾಗಿ ವಿದೇಶ ಪ್ರವಾಸಕ್ಕೆ ಹೋದರೆ ಮತ್ತು ಅಲ್ಲಿಂದ ಮರಳಿ ಬಂದರೆ ಆಗುವ ನಿದ್ದೆಯ ಏರು-ಪೇರುಗಳನ್ನು ಸರಿಪಡಿಸಿಕೊಳ್ಳಲು ಕನಿಷ್ಠ ಒಂದು ದಿನವಾದರೂ ಬೇಕು. ಮೋದಿ ದೇಹಕ್ಕೆ ಅಷ್ಟು ಅವಕಾಶಗಳನ್ನು ಕೊಡುತ್ತಿಲ್ಲ!

ಕಳೆದ 23ನೇ ತಾರೀಕಿನಿಂದ ಮೋದಿ ಹೆಚ್ಚು-ಕಡಿಮೆ ಪ್ರತಿನಿತ್ಯ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಅಂದು ಮಿಜೋರಾಂನಲ್ಲಿ ಭಾಷಣ ಮುಗಿಸಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣಗಳಲ್ಲಿ ನಿರಂತರ ಆರು ದಿನಗಳ ಕಾಲ ಒಂದಾದ ಮೇಲೊಂದರಂತೆ ಚುನಾವಣಾ ರ್ಯಾಲಿಗಳಲ್ಲಿ ಭಾಷಣ ಮಾಡಿದರು. ಬುಧವಾರ ರಾಜಸ್ಥಾನದಲ್ಲಿ ಎರಡು ಬೃಹತ್ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಲು 7 ಗಂಟೆಗಳ ಪ್ರವಾಸವನ್ನು ವಿಮಾನ ಮತ್ತು ಹೆಲಿಕಾಪ್ಟರ್ಗಳಲ್ಲಿ ಮುಗಿಸಿದ ಮೋದಿ ದೆಹಲಿಗೆ ಆಗಮಿಸಿದ ತೊಂಭತ್ತೇ ನಿಮಿಷಗಳಲ್ಲಿ ಅಜರ್ೆಂಟಿನಾಕ್ಕೆ ಹೊರಡಲು ಸಿದ್ಧವಾದರು. ಆ ಯಾತ್ರೆ ಸರಳವಾದುದೇನಲ್ಲ. 12 ಗಂಟೆಗಳ ಯಾತ್ರೆ ಕೇಪ್ಟೌನ್ಗೆ. ಅಲ್ಲಿಂದ ಮುಂದುವರೆಸಿ ಮತ್ತೆ 12 ಗಂಟೆಗಳ ಕಾಲ ಬ್ಯೂನಸ್ ಐರಿಸ್ಗೆ. ಒಟ್ಟಾರೆ ಹೆಚ್ಚು-ಕಡಿಮೆ 25 ಗಂಟೆಗಳ ಯಾತ್ರೆ! ಈ ನಡುವೆ ಅಲ್ಲಿ ಎರಡು ರಾತ್ರಿಗಳನ್ನು ಕಳೆದು ಜಾಗತಿಕ ಸಮಾವೇಶಗಳಲ್ಲಿ ಭಾರತದ ಪರವಾದ ವಾದವನ್ನು ಬಲವಾಗಿ ಮಂಡಿಸಿ ಅಲ್ಲಿ ಬಂದಿರುವ ಪ್ರಮುಖರೊಡನೆ ನಿರಂತರ ಚಚರ್ೆಯಲ್ಲಿ ನಿರತವಾಗಿ ಮತ್ತೆ ಮರಳಿ ಬರಬೇಕು. ಸುಮಾರು ಡಿಸೆಂಬರ್ 3ನೇ ತಾರೀಕಿನ ಬೆಳಗಿನ ಜಾವ ಭಾರತ ಸೇರಿಕೊಳ್ಳುವ ಮೋದಿ ವಿಮಾನದಲ್ಲೇ ನಿದ್ದೆ ಮುಗಿಸಿ ತಮ್ಮ ಅಧಿಕೃತ ನಿವಾಸಕ್ಕೆ ಹೋಗಿ ಸ್ನಾನ-ತಿಂಡಿ ಮುಗಿಸಿ ರಾಜಸ್ಥಾನ ಮತ್ತು ತೆಲಂಗಾಣಗಳ ಮುಂದಿನ ಎರಡು ದಿನಗಳ ಪ್ರವಾಸಕ್ಕೆಂದು ಹೊರಡಬೇಕು.

ಅನೇಕರು ಮೋದಿ ಅದೇನು ಮಾಡಿದರು ಎಂದು ಕೇಳುತ್ತಾರೆ! ಚುನಾವಣೆ ಹೊಸ್ತಿಲಲ್ಲಿ ನಿಂತು ಬಾಗಿಲು ಬಡಿಯುತ್ತಿರುವಾಗ ಮೋದಿ ತಮ್ಮೆಲ್ಲಾ ವಿದೇಶದ ಚಟುವಟಿಕೆಗಳನ್ನು ನಿಲ್ಲಿಸಿ ದೇಶದಲ್ಲಿ ನಡೆಯುತ್ತಿರುವ ರಾಜಕಾರಣದ ಕಲಸುಮೇಲೋಗರಗಳಲ್ಲಿ ಪಾಲ್ಗೊಳ್ಳಬೇಕಿತ್ತು. ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚುತ್ತಾ ಜಾತಿ-ಜಾತಿಗಳನ್ನು ವಿಭಜಿಸುತ್ತಾ ಬೇರೆ-ಬೇರೆ ವರ್ಗಗಳಿಗೆ ಕೊಡುವ ಕೊಡುಗೆಗಳ ಕುರಿತಂತೆ ಕನಸುಗಳನ್ನು ಬಿತ್ತುತ್ತಾ ಒಂದಷ್ಟು ನಾಟಕ ಮಾಡಿಕೊಂಡು ತಿರುಗಾಡಬೇಕಿತ್ತು. ಹಾಗಂತ ಭಾರತದ ಬಹುತೇಕರು ಅಪೇಕ್ಷೆ ಪಡುತ್ತಾರೆ. ಕಳೆದ 70 ವರ್ಷಗಳಿಂದ ನೆಹರೂ ಪ್ರಣೀತ ರಾಜಕೀಯದ ಶೈಲಿ ಅದು. ನಾಲ್ಕು ವರ್ಷಗಳ ಕಾಲ ತಾವು ಐಷಾರಾಮದ ಬದುಕನ್ನು ಬದುಕೋದು, ಐದನೇ ವರ್ಷ ಜನರನ್ನು ಗುಂಪುಗಳಾಗಿ ಒಡೆದು ಕಿತ್ತಾಟಕ್ಕೆ ಹಚ್ಚಿ ಒಂದೊಂದು ಗುಂಪುಗಳಿಗೆ ಒಂದಷ್ಟು ಬಿಸ್ಕತ್ತನ್ನು ಎಸೆಯುವುದು. ರಾಜಕಾರಣವೆಂದರೆ ಹೀಗೇ ಆಗಿತ್ತು. ಮೋದಿ ಆ ಭಾಷ್ಯವನ್ನೇ ಬದಲಾಯಿಸಿಬಿಟ್ಟಿದ್ದಾರೆ. ಅವರದ್ದು ಪರಿಪೂರ್ಣ ಹೊಸ ಶೈಲಿ. ಅಧಿಕಾರಾವಧಿಯ ಕೊನೆಯ ದಿನದವರೆಗೂ ತಮಗೆ ಕೊಟ್ಟ ಅಧಿಕಾರದ ಸದ್ಬಳಕೆ ಮಾಡುತ್ತಾರೆ ಮತ್ತು ಜನರ ಸೇವೆ ಮಾಡಲು ಸಿಕ್ಕಿರುವ ಈ ಅವಕಾಶವನ್ನು ಸಮರ್ಥವಾಗಿ ಉಪಯೋಗಿಸುತ್ತಾರೆ. ಈ ಕಾರಣಕ್ಕಾಗಿಯೇ ಅವರ ವಿರುದ್ಧ ಕಾಂಗ್ರೆಸ್ಸು ಮಾಡುತ್ತಿರುವ ಯಾವ ಆರೋಪಗಳನ್ನೂ ಜನಸಾಮಾನ್ಯ ಒಪ್ಪಲು ಸಿದ್ಧವೇ ಆಗಿಲ್ಲ. ಅವರಿಗೆಲ್ಲಾ ಭಾಜಪದ ಇತರೆ ನಾಯಕರ ಮೇಲೆ ಕೋಪವಿರಬಹುದು, ಆದರೆ ಮೋದಿಯವರ ಮೇಲೆ ಅಭಿಮಾನವಿದೆ. ಈ ಮನುಷ್ಯ ಭಾರತವನ್ನು ಬಿಟ್ಟರೆ ಬೇರೆ ವಿಚಾರವನ್ನು ಕನಸಿನಲ್ಲೂ ಮಾಡಲಾರ ಎಂಬುದರ ಖಾತ್ರಿ ಇದೆ.

ಏನೇ ಹೇಳಿ ಮೋದಿಗೆ ದೇವರೊಂದು ಅಪರೂಪದ ವರ ಕೊಟ್ಟಿದ್ದಾರೆ. ಗುಜರಾತಿನಲ್ಲಿರುವಾಗಲಂತೂ ಅವರ ಸಾಮಥ್ರ್ಯವನ್ನು ಪ್ರತಿಯೊಬ್ಬರೂ ಕಂಡಿದ್ದರು. ಈಗ ದೇಶದ ಪ್ರಧಾನಿಯಾದ ಮೇಲೆ ಇಡಿಯ ಜಗತ್ತಿಗೆ ನರೇಂದ್ರಮೋದಿಯವರ ಸಾಮಥ್ರ್ಯದ ಅರಿವಾಗುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅವರು ಒಂದೇ ಒಂದು ದಿನ ಕೆಲಸದಿಂದ ರಜೆ ತೆಗೆದುಕೊಂಡಿಲ್ಲ. ಐದು ದಿನಗಳ ಕಾಲ ಆಫೀಸಿನಲ್ಲಿ ದಿನಕ್ಕೆಂಟು ಗಂಟೆ ಕೆಲಸ ಮಾಡುವ ನಾವು ವಾರದ ಕೊನೆಯ ಎರಡು ದಿನದ ರಜೆಗಾಗಿ ಹಾತೊರೆಯುತ್ತಾ ಕುಳಿತಿರುತ್ತೇವಲ್ಲಾ; ಈ ಹೊತ್ತಲ್ಲಿ ಈ ದೇಶದ ಪ್ರಧಾನ ಸೇವಕ ಒಂದು ಕ್ಷಣವೂ ನಮ್ಮಂತೆ ರಜೆಯನ್ನು ಅನುಭವಿಸಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ. ಹಾಗಂತ ಮೋದಿ ಬರಿ ಕಡತಗಳನ್ನು ನೋಡುತ್ತಾ ಅದಕ್ಕೆ ಸಹಿ ಮಾಡುತ್ತಾ ಕುಳಿತವರೇನಲ್ಲ. ವಿದೇಶಕ್ಕೆ ಸಿಕ್ಕಾಪಟ್ಟೆ ಓಡಾಡಿದ್ದಾರೆ. ಅಚ್ಚರಿಯೇನು ಗೊತ್ತೇ? ಒಟ್ಟಾರೆ ವಿದೇಶ ಪ್ರವಾಸದ ದಿನಗಳನ್ನು ಲೆಕ್ಕ ಹಾಕಿದರೆ ಮನಮೋಹನ ಸಿಂಗರದ್ದೇನೂ ಕಡಿಮೆ ಇಲ್ಲ. ಆದರೆ, ಮೋದಿಯವರು ಅಷ್ಟೇ ಅವಧಿಯಲ್ಲಿ ಅವರಿಗಿಂತ ಎರಡರಷ್ಟು ಹೆಚ್ಚು ದೇಶಗಳನ್ನು ತಿರುಗಾಡಿ ಬಂದಿದ್ದಾರೆ. ಹಿಂದಿನ ಪ್ರಧಾನಿಗಳೆಲ್ಲ ವಿದೇಶಕ್ಕೆ ಹೋದರೆ ತಿರುಗಾಡಲೆಂದೇ ಒಂದಷ್ಟು ಸಮಯ ಇಟ್ಟುಕೊಂಡಿರುತ್ತಿದ್ದರೆ ಮೋದಿ ಅನವಶ್ಯಕವಾಗಿ ಅನ್ಯದೇಶಗಳಲ್ಲಿ ನಿದ್ದೆಯನ್ನೂ ಮಾಡುವುದಿಲ್ಲ. ಮೋದಿಯವರ ವಿದೇಶ ಪ್ರವಾಸದ ಕುರಿತಂತೆ ಆಡಿಕೊಳ್ಳುವ ಪುಣ್ಯಾತ್ಮರೆಲ್ಲರೂ ನೆನಪಿಡಬೇಕಾದ ಒಂದೇ ಅಂಶವೆಂದರೆ ಕಾಂಗ್ರೆಸ್ಸಿನ ಆಡಳಿತಾವಧಿಯಲ್ಲಿ ಆಟಕ್ಕುಂಟೂ ಲೆಕ್ಕಕ್ಕಿಲ್ಲವೆಂತಾಗಿದ್ದ ಭಾರತ ಇಂದು ಜಗತ್ತಿಗೆ ಅನಿವಾರ್ಯವಾಗಿಬಿಟ್ಟಿದೆ. ತೀರಾ ಇತ್ತೀಚೆಗೆ ಚೀನಾದ ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ಮಾಲ್ಡೀವ್ಸ್ ಭಾರತ ತನಗೆ ಸಹಾಯ ಮಾಡಬೇಕೆಂದು ಕೇಳಿಕೊಂಡಿರುವುದು ನರೇಂದ್ರಮೋದಿಯವರ ಸಾಮಥ್ರ್ಯಕ್ಕೆ ಹಿಡಿದ ಕೈಗನ್ನಡಿ. ಪುಣ್ಯಾತ್ಮ ಹೊರ ದೇಶಗಳನ್ನಷ್ಟೇ ಸುತ್ತಾಡಿಕೊಂಡಿದ್ದಾನೆಂದು ಭಾವಿಸಿಬಿಡಬೇಡಿ. ಯಾವ ರಾಜ್ಯದಲ್ಲಿ ಚುನಾವಣೆಯಾದರೂ ಅವರು ಅಲ್ಲಿನ ನಾಯಕರ ಮನಸು ತುಂಬುವಷ್ಟು ರ್ಯಾಲಿಗಳನ್ನು ಮಾಡುತ್ತಾರೆ. ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುತ್ತಾರೆ. ಮತ್ತು ಆ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲೆಂದು ಹಗಲು-ರಾತ್ರಿ ಶ್ರಮಿಸುತ್ತಾರೆ. ಈ ನಡುವೆ ಮನ್ ಕಿ ಬಾತ್ ತಪ್ಪದಂತೆ ನಡೆಯುತ್ತದೆ. ಅನೇಕ ಸಭೆ ಸಮಾರಂಭಗಳಿಗೆ ಟೆಲಿಕಾನ್ಫರೆನ್ಸ್ನ ಮೂಲಕ ಮಾತನಾಡುತ್ತಾರೆ. ಸಮಸ್ಯೆಗಳು ಆಥರ್ಿಕದ್ದಾಗಿರಲಿ ಸಾಮಾಜಿಕವೇ ಆಗಿರಲಿ ಸಂಬಂಧ ಪಟ್ಟವರನ್ನು ಕರೆದು ಚಚರ್ಿಸುತ್ತಾರೆ. ಕೊನೆಗೆ ಅಪರೂಪದ ವ್ಯಕ್ತಿಗಳನ್ನು ಕರೆದು ಅವರ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡುತ್ತಾರೆ. ನಮಗೂ ಇರುವುದು 24 ಗಂಟೆಯೇ. ಆದರೆ ಮೋದಿಯವರಿಗೆ ಮಾತ್ರ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯವಾಗುವುದಾದರೂ ಹೇಗೆ?!

ಇಷ್ಟಾಗಿಯೂ ಒಂದು ದಿನವೂ ತಾನಿಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿಕೊಳ್ಳದ ಜೀವ ಅದು. ಪ್ರತಿಪಕ್ಷಗಳು ಬಿಡಿ ಸದಾ ಜೊತೆಯಲ್ಲಿ ನಿಲ್ಲಬೇಕಾದ ನಾವುಗಳೇ ಆಗಾಗ ‘ಅವರೇನು ಮಾಡಿದ್ದಾರೆ?’ ಎಂದು ಧಿಮಾಕಿನಿಂದ ಪ್ರಶ್ನೆ ಕೇಳಿಬಿಡುತ್ತೇವಲ್ಲಾ ಆಗೆಲ್ಲಾ ಅವರಿಗೆ ಅದೆಷ್ಟು ನೋವಾಗಿರಬೇಡ. ನಮ್ಮೆಲ್ಲರ ಒಳಿತಿಗಾಗಿ ತಮ್ಮ ಸುಖವನ್ನೆಲ್ಲಾ ತ್ಯಾಗ ಮಾಡಿದ, 5 ವರ್ಷಗಳ ಕಾಲ ಬಿಟ್ಟೂ-ಬಿಡದೇ ನಮ್ಮ ಸೇವೆಗೇ ನಿಂತಿರುವ ಆತನ ಕುರಿತಂತೆ ಮನಸಿಗೆ ಬಂದಿದ್ದನ್ನೆಲ್ಲಾ ಗೀಚುವಾಗ ಹೃದಯ ಅದೆಷ್ಟು ಬೆಂದಿರಬೇಡ! ಆದರೆ ಅಚ್ಚರಿಯೇನು ಗೊತ್ತೇ? ಈ ಎಲ್ಲಾ ಕೆಲಸಗಳ ನಡುವೆ ದುಃಖಿಸುತ್ತಾ ಕೂರಲು ಅವರಿಗೆ ಪುರಸೊತ್ತು ಸಿಗುವುದೇ ಅನುಮಾನ. ಅದಕ್ಕೇ ಹೇಳಿದ್ದು ಅವರಿಗೆ ಭಗವಂತ ಅಪರೂಪದ ಶಕ್ತಿಯನ್ನು ಕೊಟ್ಟಿದ್ದಾನೆ ಅಂತ. ಅವರ ವಿರೋಧಿಗಳೆನಿಸಿಕೊಂಡಿದ್ದವರೆಲ್ಲಾ ಅದಾಗಲೇ ಮೂಲೆ ಗುಂಪಾಗಿದ್ದಾರೆ ಅಥವಾ ಜೈಲಿನ ಕಂಬಿಗಳನ್ನು ಎಣಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎನ್ಡಿಟಿವಿ 2000 ಕೋಟಿ ರೂಪಾಯಿ ಹಗರಣದಲ್ಲಿ ಸಿಲುಕಿಹಾಕಿಕೊಂಡಿದೆ. ಚಿದಂಬರಂ ಜೈಲಿನಿಂದ ತಪ್ಪಿಸಿಕೊಳ್ಳಲು ಕಾಲ ತಳ್ಳಬಹುದಷ್ಟೇ. ಅಮ್ಮ-ಮಗ ಇಬ್ಬರೂ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಅದ್ಯಾವಾಗ ಒಳಹೋಗುತ್ತಾರೋ ದೇವರೇ ಬಲ್ಲ! ಇನ್ನು ಅಳಿದುಳಿದ ಸ್ವಲ್ಪ ಹೆಸರು ಮಾಡಿಕೊಂಡಿರುವ ಚಿಲ್ಲರೆ ರಾಜಕಾರಣಿಗಳು ಈ ಬಾರಿ ತಮ್ಮ ಗೆಲುವಿಗೆ ಮೋದಿಯದ್ದೇ ಮೊರೆ ಹೋಗಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಅವರ ಕ್ಷೇತ್ರಗಳಲ್ಲಿ ಮೋದಿ ರ್ಯಾಲಿ ಮಾಡದೇ ಹೋದರೆ ಸಾಕು ಎಂದು ಅವರೆಲ್ಲಾ ಕೇಳಿಕೊಳ್ಳಬೇಕಿದೆ. ಏಕೆಂದರೆ ಮೋದಿ ಈ ಹಿಂದಿನ ಎಲ್ಲಾ ಪ್ರಧಾನಮಂತ್ರಿಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನರ ಹೃದಯವನ್ನು ತಟ್ಟಿದ್ದಾರೆ.

ಇವೆಲ್ಲವನ್ನೂ ಕಂಡಾಗಲೇ ಮನಸ್ಸಿಗೆ ಸಮಾಧಾನವಾಗೋದು. ಜನಿವಾರ ಹಾಕಿಕೊಂಡು ಶಿವಭಕ್ತನೆಂದು, ರಾಮರಥಯಾತ್ರೆ ಮಾಡಿ, ದೇವಸ್ಥಾನದಲ್ಲಿ ಗೋತ್ರವನ್ನೂ ಹೇಳಿ ರಾಹುಲ್ ಮತ್ತವನ ತಂಡ ತಿಪ್ಪರಲಾಗ ಹೊಡೆದರೂ ಮೋದಿಯನ್ನು ಅಲುಗಾಡಿಸಲು ಸಾಧ್ಯವೇ ಇಲ್ಲ! ಮೋದಿ ಅಷ್ಟರಮಟ್ಟಿಗೆ ಜನರ ಹೃದಯವನ್ನು ಆಕ್ರಮಿಸಿಕೊಂಡುಬಿಟ್ಟಿದ್ದಾರೆ. 2019 ಮೋದಿಯದ್ದೇ ವರ್ಷ. ಪ್ರತಿಪಕ್ಷಗಳು 2024ಕ್ಕೆ ತಯಾರಿ ಮಾಡಿಕೊಳ್ಳುವುದು ಒಳಿತು!

-ಚಕ್ರವರ್ತಿ ಸೂಲಿಬೆಲೆ

3 Comments

3 Comments

 1. Amar

  December 1, 2018 at 7:51 am

  Yes Anna u r absolutely.. east or west our MODIJI is the best 😍😍

 2. C N aruna

  December 1, 2018 at 7:58 am

  Modiji great

 3. Adarsh

  December 1, 2018 at 9:22 am

  Hail Modi

Leave a Reply

Your email address will not be published. Required fields are marked *

Most Popular

To Top