National

ಮೋಜಿಗಾಗಿ ಸೈನ್ಯವನ್ನೇ ದುಡಿಸಿಕೊಂಡವರು!

ನರೇಂದ್ರಮೋದಿ ಅಚ್ಚರಿಗಳನ್ನು ಕೊಡುವುದರಲ್ಲಿ ನಿಸ್ಸೀಮರು. ಕಾಂಗ್ರೆಸ್ಸು ಯಾವುದನ್ನು ದಶಕಗಳ ಕಾಲ ಸಮಾಧಿಮಾಡಿರಿಸಿತ್ತೋ ಅದನ್ನೆಲ್ಲಾ ಸಮಾಜದ ಮುಂದೆ ತೆರೆದಿಡುತ್ತಿದ್ದಾರೆ. ಬಹುಶಃ ಮೋದಿ ಪ್ರಧಾನಿಯಾಗದೇ ಹೋಗಿದ್ದರೆ ಈ ಎಲ್ಲಾ ಸಂಗತಿಗಳು ಬೆಳಕಿಗೆ ಬರದೇ ರಾಜೀವ್ಗಾಂಧಿಯಂಥವರೂ ಸಮಾಜದ ಪಾಲಿಗೆ ದೇವರಾಗಿಯೇ ಉಳಿದುಬಿಡುತ್ತಿದ್ದರೇನೋ!


ಹೌದು. ನಾನೀಗ ಚಚರ್ೆ ಮಾಡುತ್ತಿರುವುದು ರಾಜೀವ್ ಯುದ್ಧನೌಕೆಯನ್ನು ತನ್ನ ಸ್ವಂತ ಮೋಜಿಗಾಗಿ ಬಳಸಿದುದರ ಕುರಿತೇ. ಪ್ರಧಾನಮಂತ್ರಿ ನರೇಂದ್ರಮೋದಿಯವರನ್ನು ಯಾವ ಪುರಾವೆಯೂ ಇಲ್ಲದೇ ಚೌಕಿದಾರ್ ಚೋರ್ ಎಂದು ಸಂಬೋಧಿಸುತ್ತಿದ್ದ ರಾಹುಲ್ಗೆ ತನ್ನಪ್ಪನ ಕುರಿತ ಅನೇಕ ಸಂಗತಿಗಳು ಈಗ ತಿಳಿದಿರಲಿಕ್ಕೆ ಸಾಕು. ಮೋದಿ ಯಾವಾಗ ರಾಜೀವ್ರ ಬಣ್ಣ ಬಯಲಿಗೆಳೆಯಲಾರಂಭಿಸಿದರೋ ಆಗಲೇ ಕಾಂಗ್ರೆಸ್ಸಿನ ಶಾಶ್ವತ ಗುಲಾಮರು ‘ಹಳೆಯದ್ದನ್ನೆಲ್ಲಾ ಕೆದಕುವುದೇಕೆ? ದ್ವೇಷದ ರಾಜಕಾರಣ ಸಲ್ಲದ್ದು’ ಎಂದೆಲ್ಲಾ ನೈತಿಕತೆಯ ಮಾತುಗಳನ್ನಾಡಲಾರಂಭಿಸಿದರು! ಮಾಜಿ ಪ್ರಧಾನಮಂತ್ರಿಯೊಬ್ಬರ ಕುರಿತಂತೆ ಹೀಗೆ ತುಚ್ಛವಾಗಿ ಮಾತನಾಡುವುದು ಮೋದಿಯವರ ನಿಜ ವ್ಯಕ್ತಿತ್ವದ ಅನಾವರಣ ಎಂದೂ ಹೇಳಿಬಿಟ್ಟರು. ಆದರೆ ಪ್ರೇಮದಿಂದಲೇ ಯುದ್ಧ ಗೆಲ್ಲುತ್ತೇನೆ ಎಂಬ ಮಾತುಗಳನ್ನಾಡುತ್ತಾ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ರಾಹುಲ್ ಕೋಟರ್ು ಛೀಮಾರಿ ಹಾಕಿದ ನಂತರವೂ ಚೌಕಿದಾರ್ ಚೋರ್ ಎಂಬ ಬಳಕೆ ಬಿಟ್ಟೇ ಇರಲಿಲ್ಲವಲ್ಲ! ಇದು ರಾಹುಲ್ ಮತ್ತು ಎಲ್ಲ ಕಾಂಗ್ರೆಸ್ಸಿಗರ ವ್ಯಕ್ತಿತ್ವವನ್ನು ಬಯಲಿಗೆಳೆಯುವುದಿಲ್ಲವೇ?

ಎಲ್ಲಾ ಪಕ್ಕಕ್ಕಿರಲಿ. ರಾಜೀವ್ ಸೇನಾನೌಕೆಯನ್ನು ಕ್ರಿಸ್ಮಸ್ ರಜೆ ಕಳೆಯಲು ಬಳಸಿದ್ದು ಎಷ್ಟು ಸರಿ ಎಂಬುದಷ್ಟೇ ಈಗಿನ ಪ್ರಶ್ನೆ. ಲಕ್ಷದ್ವೀಪದಲ್ಲಿ ಯಾರೂ ವಾಸಿಸದ ಒಂದು ದ್ವೀಪವನ್ನು ರಜೆ ಕಳೆಯಲೆಂದೇ ಆಯ್ಕೆ ಮಾಡಿಕೊಂಡ ಸೋನಿಯಾ ಕುಟುಂಬ ಅದಕ್ಕೆ ಬೇಕಾದ ತಯಾರಿ ಮಾಡಲು ಸೇನೆಗೆ ಆದೇಶಿಸಿತ್ತು. ಹೀಗೆ ಆಯ್ಕೆ ಮಾಡಿಕೊಂಡ ದ್ವೀಪದಲ್ಲಿ ಮೀನು ಮತ್ತು ತೆಂಗಿನಕಾಯಿ ಬಿಟ್ಟರೆ ಮತ್ತೇನೂ ಸಿಗುತ್ತಿರಲಿಲ್ಲ. ಅಕ್ಷರಶಃ ಕುಡಿಯುವ ನೀರನ್ನೂ ಕೂಡ ಕನಿಷ್ಠ 300 ಮೈಲು ದೂರದಿಂದ ಹೊತ್ತೊಯ್ಯಬೇಕಿತ್ತು. ಇಡಿಯ ನೌಕಾಸೇನೆ ಈ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಆ ದ್ವೀಪದಲ್ಲಿ ಹೆಲಿಪ್ಯಾಡುಗಳ ನಿಮರ್ಾಣಕ್ಕಾಗಿ ನೂರಾರು ಜನ ಮೇಸ್ತ್ರಿಗಳು ಹೊತ್ತೊಯ್ಯಲ್ಪಟ್ಟರು. ಜನರೇಟರ್ನಿಂದ ಹಿಡಿದು ಅಡುಗೆಭಟ್ಟನವರೆಗೆ ಪ್ರತಿಯೊಬ್ಬರನ್ನೂ ಮುಂಚಿತವಾಗಿಯೇ ಅಲ್ಲಿಗೆ ತಲುಪಿಸಲಾಗಿತ್ತು. ಸುಮಾರು ನಾಲ್ಕು ತಿಂಗಳುಗಳ ಕಾಲ ಬಿಟ್ಟೂಬಿಡದ ಕೆಲಸ! ಪ್ರವಾಸಕ್ಕೆ ಕೆಲವು ದಿನಗಳ ಮುನ್ನವೇ ಲಕ್ಷದ್ವೀಪಕ್ಕೆ ಹೋಗುವ ಮತ್ತು ಅಲ್ಲಿಂದ ಮುಖ್ಯ ಭಾರತಕ್ಕೆ ಬರುವ ಎಲ್ಲಾ ಯಾತ್ರಿಕರನ್ನೂ ನಿಷೇಧಿಸಲಾಗಿತ್ತು. ಆರಂಭದಲ್ಲಿ ಲಕ್ಷದ್ವೀಪ ಮತ್ತು ಆಸುಪಾಸಿನಲ್ಲಿ ಅನೇಕ ಕಾರ್ಯಕ್ರಮಗಳಿವೆ ಎಂದು ಹೇಳಲಾಗಿತ್ತಾದರೂ ಕೊನೆಗೆ ಅದು ಸೋನಿಯಾ ಪರಿವಾರ ಮಂಡಳಿಯನ್ನು ತೃಪ್ತಿಪಡಿಸುವ ಮೋಜಿನ ಯಾತ್ರೆಯಷ್ಟೇ ಆಗಿತ್ತು ಎಂಬುದು ಸಾಬೀತೂ ಆಯ್ತು. ಆಗಿನ ದಿನಗಳಲ್ಲಿ ಯಾರೂ ಇದನ್ನು ಪ್ರತಿಭಟಿಸಿರಲಿಲ್ಲವೆಂದಲ್ಲ. ಬಿಜೆಪಿ ಈ ಕುರಿತಂತೆ ರಾಜೀವ್ ಅವರಿಗೆ ಖಾರವಾದ ಪ್ರತಿಕ್ರಿಯೆ ಕೊಟ್ಟು ಯಾತ್ರೆ ತಡೆಯುವುದೊಳಿತು ಎಂದೂ ಹೇಳಿತು. ಅಂದಿನ ಪತ್ರಿಕೆಗಳಲ್ಲಿ ಇದು ದೊಡ್ಡ ಸುದ್ದಿಯೂ ಆಗಿತ್ತು. ಸಮುದ್ರಕ್ಕೆ ಸಂಬಂಧಪಟ್ಟಂತಹ ಸಂಶೋಧನೆಗೆ ಮೀಸಲಾದ ಹಡಗುಗಳಲ್ಲಿ ರಾಜೀವ್ ಮೋಜಿನ ಯಾತ್ರೆಯ ತಯಾರಿಗೆ ಬೇಕಾದ ಮಂತ್ರಿಗಳು ಮತ್ತವರ ಪರಿವಾರವನ್ನು ಸಾಗಿಸಿದ್ದು ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ವರದಿಯಾಗಿತ್ತು. ಬರಿ ನೌಕೆಯಷ್ಟೇ ಅಲ್ಲದೇ ಈ ಕೆಲಸಕ್ಕೆ ಹೆಲಿಕಾಪ್ಟರ್ಗಳನ್ನು ದುಡಿಸಿಕೊಳ್ಳಲಾಗಿತ್ತಲ್ಲದೇ ಬೊಕ್ಕಸದ ನೂರಾರು ಕೋಟಿ ರೂಪಾಯಿ ಹಣವನ್ನು ಇದಕ್ಕಾಗಿಯೇ ವ್ಯಯಿಸಲಾಗಿತ್ತು!


ಎಲ್ಲಕ್ಕೂ ದುಃಖದಾಯಕ ಸಂಗತಿಯೆಂದರೆ ರಾಜೀವ್ ಇಟಲಿಯಿಂದ ಬಂದ ತನ್ನ ಅತ್ತೆಯ ಪರಿವಾರವನ್ನು ಖುಷಿ ಪಡಿಸಲು ಮೋಜಿನ ಪ್ರವಾಸದ ತಯಾರಿಯಲ್ಲಿರುವಾಗ ದೇಶ ಭೀಕರ ಬರಗಾಲದಿಂದ ನರಳುತ್ತಿತ್ತು. ಅನೇಕ ರಾಜ್ಯಗಳು ಬೊಕ್ಕಸದ ಹಣವನ್ನು ಅನವಶ್ಯಕವಾಗಿ ಖಚರ್ು ಮಾಡುತ್ತಿವೆಯೆಂದು ಸ್ವತಃ ರಾಜೀವ್ ಕೆಲವು ದಿನಗಳ ಹಿಂದೆ ಆರೋಪವನ್ನೂ ಮಾಡಿದ್ದರು. ಆದರೆ ಪ್ರತ್ಯಕ್ಷ ತಮ್ಮ ವಿಚಾರಕ್ಕೆ ಬಂದಾಗ ತಾವೇ ಅನವಶ್ಯಕ ಖಚರ್ುಗಳಲ್ಲಿ ನಿರತರಾಗಿ ಬೊಕ್ಕಸವನ್ನು ಬರಿದುಮಾಡಿದ್ದರು. ಇವರಿಗೆಲ್ಲಾ ದೇಶ ಆಳುವ ಅಧಿಕಾರ ಅಪ್ಪನ ಆಸ್ತಿಯಷ್ಟೇ. ದೇಶದ ಅಭಿವೃದ್ಧಿಯ ಕಾಳಜಿ ಕಿಂಚಿತ್ತೂ ಇರಲಿಲ್ಲ. ಈ ಹಣದಲ್ಲಿ ಒಂದಷ್ಟು ಪಾಲನ್ನು ಪಡೆದುಕೊಳ್ಳುತ್ತಿದ್ದ ಆಸ್ಥಾನ ಪತ್ರಕರ್ತರು, ವಿಶ್ವವಿದ್ಯಾಲಯದ ಪ್ರೊಫೆಸರುಗಳೆಂಬ ಹಿರಿತಲೆಗಳು, ಬುದ್ಧಿಜೀವಿಗಳೆನಿಸಿಕೊಂಡ ಅಯೋಗ್ಯರು ಇವರೆಲ್ಲಾ ಈ ಪರಿವಾರದ ಕುರಿತಂತೆ ಜನರ ಸದ್ಭಾವನೆಗಳು ಎಂದೂ ನಾಶವಾಗದಂತೆ ನೋಡಿಕೊಳ್ಳುತ್ತಿದ್ದರು. ಎಲ್ಲಿಯವರೆಗೂ ಎಂದರೆ ಆಳುವ ಅಧಿಕಾರವಿರುವುದು ಈ ಪರಿವಾರಕ್ಕೆ ಮಾತ್ರ. ಉಳಿದವರಿಗೆಲ್ಲಾ ಆ ಯೋಗ್ಯತೆ ಇಲ್ಲ ಎನ್ನುವವರೆಗೆ!

ಮೋದಿ ಬಂದ ಮೇಲೆ ಇವರೆಲ್ಲರಿಗೂ ಆಗಿರುವ ಸಮಸ್ಯೆ ಇದೇ. ಈ ದೇಶದ ಸಾಮಾನ್ಯ ಚಾಯ್ವಾಲಾ ಕೂಡ ಪ್ರಧಾನಿಯಾಗಿ; ದೇಶ ಆಳಲು ಅಧಿಕಾರ ಪಡೆದುಕೊಂಡ ಗಾಂಧಿ ಪರಿವಾರದವರಿಗಿಂತಲೂ ಸಮರ್ಥವಾಗಿ ಆಡಳಿತ ನಡೆಸಬಲ್ಲ ಎಂಬುದನ್ನೇ ಜೀಣರ್ಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿಯೇ ಸುಳ್ಳುಗಳ ಸರಮಾಲೆಯನ್ನೇ ಹೆಣೆದು ಹೇಗಾದರೂ ಮಾಡಿ ಮೋದಿಯನ್ನೊಮ್ಮೆ ಕೆಳಗಿಳಿಸಿ ಮತ್ತೊಮ್ಮೆ ಗಾಂಧಿ ಪರಿವಾರದವರನ್ನೇ ತಂದು ಕೂರಿಸಿದರೆ ಈ ದೇಶದ ಆತ್ಮವಿಶ್ವಾಸವನ್ನು ಶಾಶ್ವತವಾಗಿ ನಾಶಮಾಡಿಬಿಡುವುದೆಂಬ ಆಲೋಚನೆ. ಆದರೆ ಮೋದಿ ಸಾಮಾನ್ಯ ಪೆಟ್ಟಿಗೆ ಬಗ್ಗುವವರಲ್ಲ. ಅವರು ತಮ್ಮ ಬಳಿಯಿರುವ ಹಳೆಯ ಕಡತಗಳನ್ನೆಲ್ಲಾ ಸಮಯಕ್ಕೆ ಸರಿಯಾಗಿ ಹೇಗೆ ತೆಗೆದೆಸೆಯುತ್ತಿದ್ದಾರೆಂದರೆ ಗಾಬರಿಗೊಂಡ ಗಾಂಧಿ ಪರಿವಾರ ಪತರಗುಟ್ಟುತ್ತಿದೆ. ಅವರನ್ನು ಸಮಥರ್ಿಸಿಕೊಳ್ಳಲು ನಿಂತಿದ್ದ ಸಮೀಪದ ಗುಲಾಮ ಬಂಧುಗಳೆಲ್ಲಾ ಬೆತ್ತಲಾಗಿಬಿಡುತ್ತಿದ್ದಾರೆ. ಇತ್ತ ಕಾಂಗ್ರೆಸ್ಸನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕೆಳಹಂತದ ಪುಢಾರಿಗಳಿಗೆ ಜನಮಾನಸದಲ್ಲಿ ಗೌರವ ಕಳೆದುಹೋಗುತ್ತಿದ್ದಂತೆ ಬಾಯಿಗೆ ರಂಗು-ರಂಗಿನ ಮಾತುಗಳು ಹೊರಬರುತ್ತಿವೆ. ಮಲ್ಲಿಕಾಜರ್ುನಖಗರ್ೆಯವರು ಮೋದಿಗೆ ನೇಣು ಹಾಕಿಕೊಳ್ಳುವ ಸವಾಲು ಕೊಟ್ಟದ್ದು ಈ ಹಿನ್ನೆಲೆಯಲ್ಲಿಯೇ!


ಮೇ 23ಕ್ಕೆ ಅದೆಷ್ಟು ಜನ ಮಾನಸಿಕವಾಗಿ ನೇಣು ಹಾಕಿಕೊಳ್ಳಲಿದ್ದಾರೋ ದೇವರೇ ಬಲ್ಲ. ಇನ್ನೈದು ವರ್ಷ ಭಾರತದ್ದೇ. ಅಷ್ಟರೊಳಗೆ ಮೋದಿ ಮುಂದಿನ ಐವತ್ತು ವರ್ಷವನ್ನು ಭಾರತದ್ದಾಗಿಸಿಬಿಡುತ್ತಾರೆ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top