National

ಮೊದಲ ಅವಧಿಯಷ್ಟು ಸುಲಭವಾಗಿಲ್ಲ ಮೋದಿಗೆ ಈ ಬಾರಿ!

ಸಮಸ್ಯೆಗಳು ಹೊಸ ಹೊಸ ರೂಪದಲ್ಲಿ ಬರುತ್ತಿವೆ. ನರೇಂದ್ರಮೋದಿಯವರು ಮೊದಲ ಬಾರಿ ಪ್ರಧಾನಿಯಾದಾಗ ಅವಕಾಶಗಳು ಎಷ್ಟು ಮುಕ್ತವಾಗಿ ತೆರೆದುಕೊಂಡಿದ್ದವೋ ಈಗ ಹಾಗಿಲ್ಲ. ಈ ಬಾರಿಯ ಬಜೆಟ್ ಸಾರ್ವತ್ರಿಕ ಪ್ರಶಂಸೆಯನ್ನೇನೂ ಗಳಿಸಿಕೊಂಡಿಲ್ಲ. ಸಿರಿವಂತರೆಲ್ಲರೂ ಆಕ್ರೋಶಗೊಂಡಿದ್ದಾರೆ. ಕೊಡುವವರಿಂದಲೇ ಮತ್ತಷ್ಟು ತೆಗೆದುಕೊಳ್ಳುವುದು ಸಕರ್ಾರ ನಡೆಸುವವರ ಅನಿವಾರ್ಯತೆ ನಿಜ. ಕೊಡುತ್ತಲೇ ಇರುವವರ ಸಂಕಟವನ್ನು ಕೇಳಬೇಕು ಎಂಬುದು ಅವರ ಅಂಬೋಣ. ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವುದು ಕಷ್ಟವೇಕೆಂದರೆ ಹತ್ತಿರದಲ್ಲಿಯೇ ಅನೇಕ ರಾಜ್ಯಗಳು ಚುನಾವಣೆಗೆ ಸಿದ್ಧವಾಗಿವೆ. ಮೋದಿ ದೇಶವನ್ನು ಸಂಭಾಳಿಸುವುದರೊಂದಿಗೆ ಅವುಗಳನ್ನೂ ಗೆಲ್ಲಬೇಕು. ಇವುಗಳ ನಡುವೆ ಅಂತರರಾಷ್ಟ್ರೀಯ ಸಮೀಕರಣಗಳೂ ಕೂಡ ಬದಲಾಗುತ್ತಿವೆ. ಸದ್ಯದಲ್ಲೇ ಡೊನಾಲ್ಡ್ ಟ್ರಂಪ್ ಕೂಡ ಚುನಾವಣೆ ಎದುರಿಸಬೇಕಿರುವುದರಿಂದ ಆತ ತೆಗೆದುಕೊಳ್ಳಬೇಕಾಗಿರುವ ಕಠಿಣ ನಿಧರ್ಾರಗಳಿಗೂ ನಾವು ತಲೆಕೊಡಬೇಕಾದ ಪರಿಸ್ಥಿತಿ ಬಂದರೂ ಬರಬಹುದು. ಎಲ್ಲಕ್ಕೂ ಮಿಗಿಲಾಗಿ ಚೀನಾ ಬಲಾಢ್ಯವಾಗಿ ಬೆಳೆಯುತ್ತಾ ಸಾಕಷ್ಟು ಕಿರಿಕಿರಿ ಉಂಟುಮಾಡುತ್ತಿದೆ. ಚೀನಾವನ್ನು ಮಟ್ಟಹಾಕಲೆಂದು ಅಫ್ಘಾನಿಸ್ತಾನದ ಗೆಳೆತನವನ್ನು ವೃದ್ಧಿಸಿಕೊಳ್ಳುವ ಪ್ರಯತ್ನ ನಾವು ಮಾಡಿದ್ದೇವಲ್ಲ. ಅದೂ ಕೂಡ ಈಗ ಸಂಕಟದ ಹಾದಿಯಲ್ಲಿ ತೆವಳುತ್ತಿದೆ.


ಜಾಗತಿಕ ವ್ಯಾಪಾರದ ದೃಷ್ಟಿಯಿಂದ ಅಫ್ಘಾನಿಸ್ತಾನ ಭಾರತದ ಪಾಲಿಗೆ ಬಲುಮುಖ್ಯ ಪ್ರದೇಶ. ಇರಾನಿನ ಚಾಬಹಾರ್ ಬಂದರನ್ನು ನಾವು ಅಭಿವೃದ್ಧಿಪಡಿಸಿದ್ದು ಆ ಮೂಲಕ ಅಫ್ಘಾನಿಸ್ತಾನಕ್ಕೆ ಹೋಗಿ ಜಗತ್ತನ್ನು ಮುಟ್ಟಿಕೊಳ್ಳುವ ಪ್ರಯತ್ನದಿಂದಲೇ. ಈ ನಡುವೆ ಪಾಕಿಸ್ತಾನವನ್ನು ಬೈಪಾಸ್ ಮಾಡುವ ಅವಕಾಶ ನಮಗೆ ಸಿದ್ಧಿಸಿತ್ತು. ಇದು ಪಾಕಿಸ್ತಾನದ ಮೇಲಿನ ನಮ್ಮ ನಿರ್ಭರತೆಯನ್ನು ಕಡಿಮೆ ಮಾಡಿದ್ದಲ್ಲದೇ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ದುರ್ಬರಗೊಳಿಸಿಬಿಟ್ಟಿತು. ಏರ್ಸ್ಟ್ರೈಕ್ನ ನಂತರವಂತೂ ಜಗತ್ತಿನಲ್ಲಿ ಯಾರೂ ಪಾಕಿಸ್ತಾನವನ್ನು ಗೌರವಿಸುತ್ತಲೇ ಇರಲಿಲ್ಲ. ದುರ್ಬಲ ರಾಷ್ಟ್ರವೊಂದಕ್ಕೆ ಜಗತ್ತು ಎಂದೂ ಗೌರವ ಕೊಡಲಾರದು. ಇದನ್ನು ಸಾಧಿಸಲೆಂದು ಮೋದಿ ಸಕರ್ಾರ ಮಾಡಿದ ಮೊದಲನೇ ಪ್ರಯತ್ನವೇ ಅಫ್ಘಾನಿಸ್ತಾನದೊಂದಿಗಿನ ಗೆಳೆತನವನ್ನು ವೃದ್ಧಿಸಿಕೊಂಡಿದ್ದು. ಅಫ್ಘಾನಿಸ್ತಾನದ ಮೇಲೆ ಅಮೇರಿಕಾ ದಾಳಿನಡೆಸಿ ತಾಲೀಬಾನಿಗಳಿಂದ ಅಫ್ಘನ್ನರನ್ನು ರಕ್ಷಿಸುತ್ತೇವೆಂದು ಹೇಳಿ ಅಲ್ಲಿ ತನ್ನ ಬಲವಾದ ಸೇನೆಯ ಪಹರೆ ನಿಲ್ಲಿಸಿ ದಶಕಗಳೇ ಉರುಳಿಹೋಗಿವೆ. ಅಮೇರಿಕಾದ ಇತಿಹಾಸದ ಅತ್ಯಂತ ದುಬಾರಿ ಸೈನಿಕ ಕಾಯರ್ಾಚರಣೆಗಳಲ್ಲಿ ಇದೂ ಒಂದು. ಒಂದೆಡೆ ಅಮೇರಿಕಾ ಬಲಪ್ರಯೋಗ ಮಾಡುತ್ತಾ ಅಫ್ಘಾನಿಸ್ತಾನದ ಮೇಲೆ ಹಿಡಿತ ತಂದುಕೊಳ್ಳಲು ಪ್ರಯತ್ನಪಡುತ್ತಿದ್ದರೆ ಭಾರತ ಮಾತ್ರ ಅಣೆಕಟ್ಟನ್ನು ಕಟ್ಟಿಕೊಡುವ ಮೂಲಕ, ಹಳ್ಳಿ-ಹಳ್ಳಿಗಳಲ್ಲಿ ಗ್ರಂಥಾಲಯಗಳನ್ನು ನಿಮರ್ಿಸಿಕೊಡುವ ಮೂಲಕ, ಶಾಲಾ-ಕಾಲೇಜು, ರಸ್ತೆ ನಿಮರ್ಾಣ, ಇತ್ಯಾದಿಗಳ ಮೂಲಕವೂ ಅಫ್ಘನ್ನರ ಮನಸ್ಸನ್ನು ಗೆದ್ದುಬಿಟ್ಟಿತ್ತು. ನರೇಂದ್ರಮೋದಿ ಅಫ್ಘಾನಿಸ್ತಾನಕ್ಕೆ ಹೋದಾಗ ಅಲ್ಲಿನ ಮುಸಲ್ಮಾನರು ತಮ್ಮ ಕೈಯಲ್ಲಿ ಭಾರತದ ಧ್ವಜವನ್ನು ಹಿಡಿದುಕೊಂಡಿದ್ದಿದುದು ಈ ಪ್ರೇಮದ ಸಂಕೇತವೇ ಆಗಿತ್ತು. ಆದರೀಗ ನಿಜವಾದ ಸಮಸ್ಯೆ ಎದುರಾಗಿಬಿಟ್ಟಿದೆ!

ಅಮೇರಿಕಾ ಅಫ್ಘಾನಿಸ್ತಾನದ ಸಕರ್ಾರ ಮತ್ತು ತಾಲಿಬಾನಿಗಳನ್ನು ಸೇರಿಸಿಕೊಂಡು ಶಾಂತಿ ಮಾತುಕತೆ ಆರಂಭಿಸಿದೆ. ಈ ಶಾಂತಿ ಮಾತುಕತೆಯ ಒಟ್ಟಾರೆ ದಿಕ್ಕು ಅಫ್ಘಾನಿಸ್ತಾನದಿಂದ ಅಮೇರಿಕಾದ ಸೇನೆಯನ್ನು ಹಿಂದೆ ಕರೆಸಿಕೊಳ್ಳುವುದೇ ಆಗಿದೆ. ಒಮ್ಮೆ ಅಲ್ಲಿಂದ ಅಮೇರಿಕಾದ ಸೇನೆ ಮರಳಿತೆಂದರೆ ತಾಲಿಬಾನಿಗಳು ಮೆರೆಯಲಾರಂಭಿಸಿಬಿಡುತ್ತಾರೆ. ಆನಂತರ ನಾವು ಕಟ್ಟಿದ ಅಣೆಕಟ್ಟುಗಳಿಗೂ ಬೆಲೆಯಿಲ್ಲ. ಶಾಲಾ-ಕಾಲೇಜು, ಗ್ರಂಥಾಲಯಗಳಿಗೂ ಮೌಲ್ಯವಿಲ್ಲ. ಇವೆಲ್ಲದರ ಮುನ್ಸೂಚನೆಯಿಲ್ಲದೇ ಅಫ್ಘಾನಿಸ್ತಾನದಲ್ಲಿ ದೊಡ್ಡಮೊತ್ತದ ಹಣಹೂಡಿಕೆಯ ಆಲೋಚನೆ ಮಾಡಿದ್ದ ಭಾರತ ಸಕರ್ಾರ ಹಿಂದಡಿಯಿಡುವಂತಾಗಿದೆ. ಪಾಕಿಸ್ತಾನ ಅದಾಗಲೇ ಹಬ್ಬ ಆಚರಿಸುತ್ತಿದೆ. ಅಫ್ಘಾನಿಸ್ತಾನದಿಂದ ಒಮ್ಮೆ ಅಮೇರಿಕಾ ಕಾಲು ತೆಗೆಯಿತೆಂದರೆ ಪಾಕಿಸ್ತಾನ ತನ್ನ ಭಯೋತ್ಪಾದಕ ಪ್ರಯೋಗಶಾಲೆಯನ್ನು ವಿಸ್ತರಿಸಿಕೊಳ್ಳಲಿದೆ ಮತ್ತು ಅಫ್ಘಾನಿಸ್ತಾನದ ಪ್ರದೇಶವನ್ನು ಭಾರತದ ವಿರುದ್ಧ ಕೆಲಸ ಮಾಡಲು ಬಳಸಿಕೊಳ್ಳಲಿದೆ. ಹಾಗೇನಾದರೂ ಆಗಿಬಿಟ್ಟರೆ ಇರಾನ್ನೊಂದಿಗೆ ಸಂಬಂಧವೇರ್ಪಡಿಸಿಕೊಂಡು ನಾವು ನಿಮರ್ಿಸಿದ ಬಂದರು ಕೂಡ ಹೆಚ್ಚು ಕೆಲಸಕ್ಕೆ ಬರಲಾರದು. ಜಾಗತಿಕ ಮಾರುಕಟ್ಟೆಯನ್ನು ತಲುಪಲು ಪಾಕಿಸ್ತಾನದ ಸಹಕಾರ ಬೇಕೇ-ಬೇಕಾಗಬಹುದು. ಎಲ್ಲಕ್ಕೂ ಮಿಗಿಲಾಗಿ ಚೀನಾ ತನ್ನ ಒನ್ ಬೆಲ್ಟ್ ಒನ್ ರೋಡ್ ಯೋಜನೆಯನ್ನು ಅಬಾಧಿತವಾಗಿ ಮುಂದುವರೆಸಬಹುದು. ಇವ್ಯಾವುವೂ ಕೂಡ ಸದ್ಯದಮಟ್ಟಿಗೆ ಭಾರತದ ಪಾಲಿಗೆ ಒಳ್ಳೆಯ ಸಂಗತಿಯಲ್ಲ!


ಈಗಾಗಲೇ ಕಾಶ್ಮೀರದಲ್ಲಿ ಭಾರತಸಕರ್ಾರ ತನ್ನ ಹಿಡಿತವನ್ನು ಬಲಗೊಳಿಸಿಕೊಂಡಿದೆ. ಅಮಿತ್ಶಾ ಮುಂದಡಿಯಿಡುತ್ತಿರುವ ಪರಿ ನೋಡಿದರೆ ಬಲುಬೇಗ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ತನ್ನ ತಾನು ಘೋಷಿಸಿಕೊಳ್ಳುವ ದಿನ ದೂರವಿಲ್ಲ. ಕೇಂದ್ರಸಕರ್ಾರ ಆಟರ್ಿಕಲ್ 370ನ್ನು ತೆಗೆಯುವುದು ಬಿಡಿ ಜಮ್ಮು-ಕಾಶ್ಮೀರದ ಚುನಾವಣಾ ಪ್ರಕ್ರಿಯೆಯಲ್ಲೂ ಕೈಯ್ಯಾಡಿಸಿ ಜನಸಂಖ್ಯೆಗನುಗುಣವಾಗಿ ಭಿನ್ನ-ಭಿನ್ನ ಜಾತಿಗಳಿಗೆ ಪ್ರಾತಿನಿಧ್ಯ ಸಿಗುವಂತೆ ಆಲೋಚನೆ ಮಂಡಿಸಿದೆ. ಹಾಗೇನಾದರೂ ಆದರೆ ಸುದೀರ್ಘಕಾಲದ ಕಾಶ್ಮೀರಿ ಮುಸಲ್ಮಾನರ ಪ್ರಾಬಲ್ಯ ಈ ಚುನಾವಣೆಯ ವೇಳೆಗೆ ಮುಗಿಯಲಿದೆ. ಇದು ಕಾಶ್ಮೀರಿಗರ ಪಾಲಿಗೆ ನುಂಗಲಾರದ ತುತ್ತು. ಮತ್ತೊಂದೆಡೆ ಪ್ರತ್ಯೇಕತಾವಾದಿಗಳನ್ನು ಜೈಲಿಗೆ ಕಳಿಸಿ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡು ಅವರ ಬ್ಯಾಂಕ್ ಅಕೌಂಟುಗಳನ್ನು ವಜಾಮಾಡಿಸಿದ ನಂತರ ಪಾಕಿಸ್ತಾನದಿಂದ ಹರಿದುಬರುತ್ತಿದ್ದ ಹಣವೆಲ್ಲಾ ನಿಂತುಹೋಗಿದೆ. ಅಂತರರಾಷ್ಟ್ರೀಯ ಒತ್ತಡವನ್ನು ಪಾಕಿಸ್ತಾನದ ಮೇಲೆ ಸಾಕಷ್ಟು ಹಾಕಿದ್ದರಿಂದ ಪಾಕಿಸ್ತಾನದಿಂದ ಭಯೋತ್ಪಾದಕರ ಸರಬರಾಜೂ ಕಡಿಮೆಯಾಗಿಬಿಟ್ಟಿದೆ. ಇದರಿಂದಾಗಿಯೇ ಕಾಶ್ಮೀರದ ಸಮಸ್ಯೆಯ ಬುಡ ಅಲುಗಾಡುತ್ತಿದೆ. ಇಂತಹ ಹೊತ್ತಲ್ಲಿ ಮತ್ತೆ ಪಾಕಿಸ್ತಾನ ಚಿಗುರಿಕೊಂಡು ಅಫ್ಘಾನಿಸ್ತಾನವೂ ಅದಕ್ಕೆ ಬೆಂಬಲವಾಗಿ ನಿಂತುಬಿಟ್ಟರೆ ಎಲ್ಲವೂ ತಿರುಗುಮುರುಗಾಗುವ ಸಾಧ್ಯತೆಗಳಿವೆ. ಅದಕ್ಕೆ ಸವಾಲುಗಳು ಸಾಕಷ್ಟಿವೆ ಎಂದಿದ್ದು. ಆದರೆ ಬೆಳ್ಳಿಯಕಿರಣವೇನು ಗೊತ್ತೇ? ಅಮೇರಿಕಾ ಪಾಕಿಸ್ತಾನಕ್ಕೆ ಕಿಂಚಿತ್ತೂ ಗೌರವ ಕೊಡುತ್ತಿಲ್ಲವೆನ್ನುವುದು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಅಮೇರಿಕಾದಲ್ಲಿ ಟ್ರಂಪ್ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾಗ ಟ್ರಂಪ್ನ ಕಾರ್ಯದಶರ್ಿ ಹಾಗೊಂದು ಭೇಟಿ ವ್ಯವಸ್ಥೆಯೇ ಆಗಿಲ್ಲವೆಂದು ಹೇಳಿ ಇಮ್ರಾನ್ನ ಮಾನ ಹರಾಜು ಹಾಕಿದ್ದರು. ಈಗ ಅದೇ ಇಮ್ರಾನ್ ಅಮೇರಿಕಾಕ್ಕೆ ಹೋದರೆ ಅವನನ್ನು ಸ್ವಾಗತಿಸಲು ಅಲ್ಲಿ ಉನ್ನತಮಟ್ಟದ ಅಧಿಕಾರಿ ಕೂಡ ಬರದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆತ ಮೆಟ್ರೋದಲ್ಲಿ ತಿರುಗಾಡುತ್ತಾ ತಾನೇ ನೊಂದಾಯಿಸಿಕೊಂಡ ಹೊಟೆಲ್ನಲ್ಲಿ ಉಳಿದಿರುವುದು ಪಾಕಿಸ್ತಾನದ ಮಾನವನ್ನು ಹರಾಜುಹಾಕಿಬಿಟ್ಟಿದೆ. ಭಾರತ ಸೂಕ್ತಮಟ್ಟದಲ್ಲಿ ತನ್ನ ಒತ್ತಡವನ್ನು ಕಾಯ್ದುಕೊಂಡರೆ ಪಾಕಿಸ್ತಾನವನ್ನು ನಮ್ಮ ವಿರುದ್ಧ ಕೆಲಸ ಮಾಡುವುದಿರಲಿ ತನ್ನ ರಾಷ್ಟ್ರವನ್ನು ತಾನೇ ಕಟ್ಟಿಕೊಳ್ಳಲಾಗದ ದೈನೇಸಿ ಸ್ಥಿತಿಗೆ ತಲುಪಿಸಿಬಿಡಬಹುದು!

ಹಾಗಂತ ಹೊರಗಿನದ್ದು ಮಾತ್ರವಲ್ಲ. ಒಳಗೂ ಸವಾಲು ಭರ್ಜರಿಯಾಗಿದೆ. ಅದಾಗಲೇ ಹಳೆಯ ಅವಾಡರ್್ ವಾಪ್ಸಿ ಗ್ಯಾಂಗು ಚಿಗಿತುಕುಳಿತುಬಿಟ್ಟಿದೆ. ಭಿನ್ನ-ಭಿನ್ನ ರಾಜ್ಯಗಳಲ್ಲಿ ವಿಶೇಷವಾಗಿ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಿಂದ ‘ಲಿಂಚಿಂಗ್’ನ ಸುದ್ದಿ ವರದಿಯಾಗುತ್ತಿದೆ. ವ್ಯಾಪಕವಾಗಿ ಹಬ್ಬುತ್ತಲೂ ಇದೆ. ರಾಜಸ್ತಾನದ ದಲಿತ ಹೆಣ್ಣುಮಗಳ ಮೇಲೆ ಮುಸಲ್ಮಾನನೊಬ್ಬ ಮಾಡಿದ ಅತ್ಯಾಚಾರ ಮಾತ್ರ ಎಲ್ಲೂ ವರದಿಯಾಗಲೇ ಇಲ್ಲ. ಗೋರಕ್ಷಕರ ಮತ್ತು ಜೈ ಶ್ರೀರಾಮ್ ಎಂಬ ಘೋಷಣೆಯ ಕುರಿತಂತೆಯೂ ದಿನಕ್ಕೊಂದು ವರದಿ ಪ್ರಕಟವಾಗುತ್ತಲೇ ಇದೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಜೈ ಶ್ರೀರಾಮ್ ಹೇಳದ ಕಾರಣಕ್ಕೆ ಮುಸಲ್ಮಾನರ ಮೇಲೆ ಹಲ್ಲೆಯಾಯಿತು ಎಂಬ ವರದಿ ಸಾಕಷ್ಟು ಸದ್ದು ಉಂಟುಮಾಡಿತು. ಆನಂತರ ಅದು ಮುಸಲ್ಮಾನರ ಎರಡು ಪಂಗಡಗಳ ನಡುವೆ ಕ್ರಿಕೆಟ್ಗಾಗಿ ನಡೆದ ಕಾದಾಟ ಎಂದು ತನಿಖೆಯಿಂದ ದೃಢಪಟ್ಟಿತು. ಆಂತರಿಕವಾಗಿರುವ ದೇಶವಿರೋಧಿ ಶಕ್ತಿಗಳು ಅಸಹಜ ಸ್ಥಿತಿ ನಿಮರ್ಾಣಕ್ಕಾಗಿ ಹಗಲೂ-ರಾತ್ರಿ ಪ್ರಯತ್ನಿಸುತ್ತಿವೆ. ಇವೆಲ್ಲವನ್ನೂ ಎದುರಿಸಿ ಗೆಲ್ಲಲು ಸಾಹಸವಂತೂ ಬೇಕು.


ಇವೆಲ್ಲವೂ ಸಾಲದು ಅಂತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಅಸಂಬದ್ಧ ಚಟುವಟಿಕೆಗಳು ಬೇರೆ. ಪಕ್ಷ ಯಾವುದೇ ಇರಲಿ ಪ್ರತೀ ರಾಜ್ಯವೂ ಕೂಡ ರಾಷ್ಟ್ರದ ಅವಿಭಾಜ್ಯ ಅಂಗವೇ ಆಗಿರುವುದರಿಂದ ಎಲ್ಲಿ ಅಸಂಬದ್ಧಗಳು ನಡೆದರೂ ಅದು ರಾಷ್ಟ್ರಕ್ಕೆ ಹಿನ್ನಡೆಯೇ, ಪ್ರಧಾನಮಂತ್ರಿಗೆ ಸವಾಲೇ. ಕನಿಷ್ಠಪಕ್ಷ ಕಳೆದ 15 ದಿನಗಳಿಂದ ಕನರ್ಾಟಕದಲ್ಲಿ ಸಕರ್ಾರವೇ ಇಲ್ಲ. ಸಕರ್ಾರ ನಡೆಸಬೇಕಾದ ಶಾಸಕರು ರಾಜಿನಾಮೆ ಕೊಟ್ಟು ಅಡಗಿಕುಳಿತಿದ್ದಾರೆ. ಇವರನ್ನು ಸಂಭಾಳಿಸಬೇಕಾಗಿದ್ದ ಮಂತ್ರಿ, ಮುಖ್ಯಮಂತ್ರಿಯಾದಿಯಾಗಿ ಇಡಿಯ ಸಕರ್ಾರ ವಿಧಾನಸಭೆಯಲ್ಲಿ ದಿನಗಟ್ಟಲೆ ಕಥೆ ಹೇಳುತ್ತಾ ಕಾಲಕಳೆಯುತ್ತಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಸಮಾಜದ ಮುಂದೆ ಆಡಳಿತ ಪಕ್ಷದ ವೈಫಲ್ಯಗಳನ್ನು ಎಳೆ-ಎಳೆಯಾಗಿ ಬಿಚ್ಚಿಡಬೇಕಾಗಿದ್ದ ಪ್ರತಿಪಕ್ಷ ತಾನೇ ಗೊಂದಲದ ಗೂಡಾಗಿದೆ ಮತ್ತು ಅಧಿಕಾರ ಸಿಗಬಹುದೆಂದು ಕಾಯುತ್ತ ಕುಳಿತುಕೊಂಡುಬಿಟ್ಟಿದೆ. ಇತ್ತ ರಾಜ್ಯ ದಿನೇ ದಿನೇ ಬಡವಾಗುತ್ತಿದೆ ಅಷ್ಟೇ. ಈ ಅವಕಾಶವನ್ನೇ ಬಳಸಿಕೊಂಡು ಲಕ್ಷಾಂತರ ರೂಪಾಯಿ ಖಚರ್ು ಮಾಡಿ ಅನೇಕರು ವಗರ್ಾವಣೆ ಧಂಧೆಯ ಪಾತ್ರವಾದರೆ ಮತ್ತೂ ಕೆಲವು ಟೆಂಡರ್ಗಳನ್ನು ಬೇಕಾಬಿಟ್ಟಿ ಕರೆದು ಬೊಕ್ಕಸದಲ್ಲಿದ್ದ ನಮ್ಮ ಹಣವನ್ನು ನಮಗೇ ಗೊತ್ತಿಲ್ಲದಂತೆ ಕರಗಿಸಿಬಿಡಲಾಗುತ್ತಿದೆ. ಕನರ್ಾಟಕ ರಾಜ್ಯದ ಅಮೂಲ್ಯವಾದ ಒಂದು ವರ್ಷ ಗಲಾಟೆಗಳಲ್ಲೇ ಕಳೆದುಹೋಯ್ತು. ಇದು ಈ ರಾಜ್ಯವೊಂದರ ಕಥೆಯಲ್ಲ. ಅತ್ತ ಮಧ್ಯಪ್ರದೇಶದಲ್ಲೂ ಆಡಳಿತ ಪಕ್ಷದ ಗೊಂದಲ ಹೀಗೆಯೇ ಇದೆ. ಇತ್ತ ಗೋವಾದಲ್ಲಿ ಪ್ರತಿಪಕ್ಷವನ್ನೇ ನಿನರ್ಾಮಗೊಳಿಸಿ ಬಿಜೆಪಿ ಪ್ರಜಾಪ್ರಭುತ್ವದ ಮಾನವನ್ನು ಕಳೆಯುವುದಕ್ಕೆ ಬಲವಾದ ಹೆಜ್ಜೆಯನ್ನೇ ಇಟ್ಟುಬಿಟ್ಟಿದೆ. ಅಧಿಕಾರದ ಬಲ ಜಾತಕದಲ್ಲಿ ಜೋರಾಗಿರುವಾಗ ಎಲ್ಲವನ್ನೂ ಜೀಣರ್ಿಸಿಕೊಂಡುಬಿಡಬಹುದು. ಆದರೆ ಕಾಲ ಕೈಕೊಟ್ಟಾಗ ಇವುಗಳೇ ಭೂತವಾಗಿ ಕಾಡಲಿದೆ ಎಂಬುದನ್ನು ಭಾಜಪದ ನಾಯಕರು ಅಥರ್ೈಸಿಕೊಳ್ಳಬೇಕು. ಅಧಿಕಾರದ ಧಿಮಾಕಿನಲ್ಲಿದ್ದಾಗ ಇಂದಿರಾ ಎಮಜರ್ೆನ್ಸಿಯನ್ನೂ ಹೇರಿ ಜೀಣರ್ಿಸಿಕೊಂಡುಬಿಟ್ಟರು. ಆದರೆ ಈಗಲೂ ಕಾಂಗ್ರೆಸ್ಸು ಹೊಸ ಪೀಳಿಗೆಯ ತರುಣರು ಕೇಳುವ ಪ್ರಶ್ನೆಗೆ ಉತ್ತರಿಸಲಾಗದೇ ಚಡಪಡಿಸುತ್ತಿದೆ!


ಎಲ್ಲ ಸವಾಲುಗಳೂ ನರೇಂದ್ರಮೋದಿಯವರನ್ನೇ ಇದುರುಗೊಳ್ಳಲು ಕಾಯುತ್ತಿವೆ. ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗಿದೆ. ಮೊದಲ ಅವಧಿಯಲ್ಲಿ ಜನರಲ್ಲಿದ್ದ ಆ ಭಾವನೆಗಳು ಈಗಿಲ್ಲ. ಮತ್ತು ಮಾಡಲಾಗದ ಕೆಲಸಕ್ಕೆ ಹಿಂದಿನ ಸಕರ್ಾರವನ್ನು ದೂಷಿಸಲು ಸಿಗಬಹುದಾಗಿದ್ದ ಅವಕಾಶಗಳು ಇನ್ನು ಮುಂದೆ ಸಿಗುವುದಿಲ್ಲ. ಹೀಗಾಗಿ ಸಾವಧಾನವಾಗಿ ಹೆಜ್ಜೆಯನ್ನಿಡುತ್ತಾ, ಇಟ್ಟ ಹೆಜ್ಜೆಯನ್ನು ಬಲವಾಗಿ ಊರುತ್ತಾ ನಡೆಯಬೇಕಷ್ಟೇ. ನರೇಂದ್ರಮೋದಿ ಸಂಭಾಳಿಸುವುದರಲ್ಲಿ ನಿಸ್ಸೀಮರು. 12 ವರ್ಷಗಳ ಕಾಲ ಕಾಂಗ್ರೆಸ್ಸನ್ನು ಎದುರುಹಾಕಿಕೊಂಡು ಗುಜರಾತನ್ನು ಸಂಭಾಳಿಸಿದ್ದಲ್ಲದೇ ಕಾಂಗ್ರೆಸ್ಸಿನ ಸಮಿತಿಯಿಂದಲೇ ಶ್ರೇಷ್ಠರಾಜ್ಯವೆಂಬ ಬಿರುದನ್ನೂ ಪಡೆದುಕೊಂಡವರು ಅವರು. ಹೀಗಿರುವಾಗ ಈಗಿನ ಸಮಸ್ಯೆಗಳನ್ನು ಎದುರಿಸುವುದು ಅವರಿಗೆ ಕಠಿಣವಾಗಲಾರದು. ಅವರ ವೇಗಕ್ಕೆ ಜೊತೆಗಿರುವವರು ಓಡಿದರೆ ಸಾಕಷ್ಟೇ. ಈಗಿನ ನರೇಂದ್ರಮೋದಿಯವರ ವೇಗವನ್ನು ಕಂಡರೆ ಅವರು ಬಲು ಧಾವಂತದಲ್ಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದಷ್ಟು ಬೇಗ ರಾಜ್ಯಸಭೆಯಲ್ಲಿ ಬಹುಮತವನ್ನು ತಂದುಕೊಂಡು ಅನೇಕ ಸಮರ್ಥ ನಿರ್ಣಯಗಳನ್ನು, ದಶಕಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಅವರು ಕಾತರಿಸುತ್ತಿದ್ದಾರೆ. ಹಾಗೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೇಗೇ ಆಗಲಿ, ಭಾರತದ ಮಹಾಯಾತ್ರೆ ಅಬಾಧಿತವಾಗಿ ನಡೆದರೆ ಸಾಕು ಅಷ್ಟೇ!

-ಚಕ್ರವರ್ತಿ ಸೂಲಿಬೆಲೆ

1 Comment

1 Comment

Leave a Reply

Your email address will not be published. Required fields are marked *

Most Popular

To Top