National

ಮೆತ್ತಗಾದರು ಪ್ರತ್ಯೇಕತಾವಾದಿಗಳು!

ಆಟರ್ಿಕಲ್ 370 ಮತ್ತು 35 ಎ ತೆಗೆದು ಹಾಕುವ ನಿಧರ್ಾರ ಐತಿಹಾಸಿಕವೆಂದು ಬಣ್ಣಿಸಲ್ಪಡುತ್ತಿದೆಯೇನೋ ನಿಜ, ಆದರೆ ಇದರ ಹಿಂದೆ ಒಂದು ತಂಡವಾಗಿ ಮೋದಿ, ಅಮಿತ್ ಶಾಹ್, ದೋವಲ್ ಮತ್ತು ಸೇನಾ ಮುಖ್ಯಸ್ಥರೆಲ್ಲ ಇಟ್ಟ ಎಚ್ಚರಿಕೆಯ ಹೆಜ್ಜೆ ಮೆಚ್ಚಬೇಕಾದ್ದೇ. ಮೊದಲು ಜಮ್ಮು-ಕಾಶ್ಮೀರದ ಡಿಲಿಮಿಟೇಶನ್ ಸುದ್ದಿಯನ್ನು ಚಚರ್ೆಗೆ ಬಿಟ್ಟಿತು ಕೇಂದ್ರ ಸಕರ್ಾರ. ಅದರ ನಿಧರ್ಾರ ಆಗಿಯೇ ಬಿಡುವುದೆಂಬುದು ನಿಶ್ಚಿತವೆನಿಸಲಾರಂಭಿಸಿದಾಗ ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ನಿಂತ ನೆಲ ಕುಸಿಯುವಂತಾಗಿಬಿಟ್ಟಿತ್ತು. ಅಲ್ಲಿನ ಪ್ರಮುಖ ಎರಡೂ ಪಾಟರ್ಿಗಳು ಆಟರ್ಿಕಲ್ 370 ಹೋದರೂ ಪರವಾಗಿಲ್ಲ; ಡಿಲಿಮಿಟೇಶನ್ ಆಗಬಾರದೆಂದು ಕೂಗು ಹಾಕಲಾರಂಭಿಸಿದ್ದರು. ಒಮ್ಮೆ ಸಕರ್ಾರ ದಲಿತರಿಗೂ ಯೋಗ್ಯ ಸಾಂವೈಧಾನಿಕ ಸ್ಥಾನಮಾನ ಕೊಡುವ ನಿಧರ್ಾರ ಯಶಸ್ವಿಯಾಗಿ ತಂದುಬಿಟ್ಟರೆ ಎರಡೂ ಪಕ್ಷಗಳ ಮುಖ್ಯಸ್ಥರಿಗೆ ಅಧಿಕಾರ ಶಾಶ್ವತವಾಗಿ ಕೈ ತಪ್ಪುತ್ತದೆ. ಇದರ ಮುನ್ಸೂಚನೆಯ ಜಾಡು ಹಿಡಿದೇ ಅವರೆಲ್ಲ ತೆಪ್ಪಗಾಗಿದ್ದು. ಆನಂತರ ಅಮಿತ್ ಶಾಹ್ ಕಾಶ್ಮೀರಿಗರನ್ನು ಮೆತ್ತಗಾಗಿಸಲು ಕಠೋರವಾದ ಕ್ರಮವನ್ನೇ ಅನುಸರಿಸಿದರು. ಭಾರತ ಸಕರ್ಾರವನ್ನು ಹೆದರಿಸಲು ಭಯೋತ್ಪಾದನೆಯ ಅಸ್ತ್ರ ಹಿಡಿಯುತ್ತಿತ್ತಲ್ಲ ಕಾಶ್ಮೀರ ಈಗ ಅದನ್ನು ಅವರ ವಿರುದ್ಧವೇ ಪ್ರಯೋಗಿಸಲು ನಿರ್ಧರಿಸಿತ್ತು ಮೋದಿ ಬಳಗ. ನೋಡನೋಡುತ್ತಲೇ ಸಾವಿರಾರು ಸಂಖ್ಯೆಯಲ್ಲಿ ಸೈನಿಕರು ಸೇರಲಾರಂಭಿಸಿದರು. ಮುಂದೇನಾಗುತ್ತದೆ ಎಂಬುದು ಹೊರಗಿನವರಿಗೆ ಬಿಡಿ, ಸ್ವತಃ ಪತ್ರಕರ್ತರು, ಮಂತ್ರಿಗಳಿಗೂ ಗೊತ್ತಿರಲಿಲ್ಲ. ಕಾದೂ ಕಾದು ಕೊನೆಗೊಮ್ಮೆ ಆಟರ್ಿಕಲ್ 370 ಇಲ್ಲವೆಂದು ಪ್ರಧಾನ ಮಂತ್ರಿಗಳು ಘೋಷಿಸುವಾಗ ದೇಶ ಸಂಭ್ರಮದ ಡೋಲು ಬಡಿಯುತ್ತಿತ್ತು.


ತುಂಬಾ ಜನರು ಕಾಯುತ್ತಿದ್ದುದು ಶುಕ್ರವಾರಕ್ಕಾಗಿ. ನಮಾಜು ಮುಗಿಸಿ ಬರುವಾಗಲೆಲ್ಲ ಅಫೀಮು ತಿಂದಂತಾಡುವ ಉಗ್ರ ಮುಸಲ್ಮಾನರು ಈ ಬಾರಿ ದೇಶದಾದ್ಯಂತ ದಂಗೆಯೇಳಲಿದ್ದಾರೆ ಎಂದು ಪುಕಾರು ಹಬ್ಬಿಸಿದರು. ಮೋದಿ ಪ್ರಜಾಪ್ರಭುತ್ವ ವಿರೋಧಿ ಎಂದರು. ಕೊನೆಗೆ ಈಗಲ್ಲದಿದ್ದರೆ ಇನ್ನೆಂದಿಗೂ ಇಲ್ಲ ಎಂಬಂತೆಯೂ ಮಾತನಾಡಿದರು. ಒಟ್ಟಾರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವಂತೆ ಮಾಡಿದರೆ ಮೋದಿಯ ಕಾಯರ್ಾವಧಿಯಲ್ಲಿ ಕಿರಿಕಿರಿ ಉಂಟುಮಾಡಬಹುದೆಂದು ಅವರ ಬಯಕೆ. ಆದರೆ ವಾಸ್ತವವಾಗಿ ಆಗಿದ್ದೇನು ಗೊತ್ತೇ? ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈ ವಿಚಾರವಾಗಿ ತಾನೇ ಒಡೆದುಹೋಯ್ತು. ಅನೇಕ ಶಾಸಕರು ಕಾಂಗ್ರೆಸಿನ ಆಶಯಕ್ಕೆ ವಿರುದ್ಧವಾಗಿ ಮಾತನಾಡಿದರು. ರಾಜ್ಯಸಭಾ ಎಮ್ಪಿಯೋರ್ವರು ರಾಜಿನಾಮೆ ಬಿಸುಟು ಕಾಂಗ್ರೆಸಿನ ಸಂಬಂಧ ಕಳಕೊಂಡರು. ಭಾರತವಿಡೀ ಈ ವಿಚಾರದಲ್ಲಿ ಏಕರಸವಾಗಿರುವುದನ್ನು ಕಂಡ ವಿರೋಧಿವಲಯ ಕಂಗಾಲಾಯ್ತು.


ಅತ್ತ ಮೋದಿ-ಜಯಶಂಕರ್ ಜೋಡಿ ಎಷ್ಟು ವ್ಯವಸ್ಥಿತವಾಗಿ ಜಾಗತಿಕ ಮಾಟ್ಟದಲ್ಲಿ ಕೆಲಸ ಮಾಡಿತ್ತೆಂದರೆ ಈ ನಿಧರ್ಾರ ತೆಗೆದುಕೊಂಡ ಸ್ವಲ್ಪವೇ ಹೊತ್ತಲ್ಲಿ ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ಈ ನಿರ್ಣಯವನ್ನು ಆಂತರಿಕವೆಂದು ಘೋಷಿಸಿ ತಾವು ತಲೆ ಹಾಕುವುದಿಲ್ಲವೆಂದುಬಿಟ್ಟವು. ಮುಸ್ಲೀಂ ರಾಷ್ಟ್ರಗಳು ಕೂಡ ಪಾಕಿಸ್ತಾನದ ನಿಲುವನ್ನು ಬೆಂಬಲಿಸಲಿಲ್ಲ. ಅಲ್ಲಿಗೆ ಕಾಶ್ಮೀರಕ್ಕೆ ಬರಬಹುದಾಗಿದ್ದ ಹಣ ಸಂಪೂರ್ಣ ನಿಂತು ಹೋಯ್ತು. ಕಲ್ಲೆಸೆಯುವವರ ಕಥೆ ದಾರುಣವಾಯ್ತು. ಅವರನ್ನು ಪೋಷಿಸುತ್ತಿದ್ದ ದೊರೆಗಳು ಅಮಿತ್ ಶಾಹ್ ಎಸೆದದಾಳಕ್ಕೆ ಪತರಗುಟ್ಟಿದ್ದರು. ಗಿಲಾನಿಯೂ ಸೇರಿದಂತೆ ಬಹುತೇಕ ಎಲ್ಲ ಪ್ರತ್ಯೇಕವಾದಿಗಳೂ ಶ್ರೀನಗರ, ಮುಂಬೈ, ದೆಹಲಿಗಳಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ, ವಿದೇಶದಲ್ಲೂ ಕೂಡ. ಒಂದಷ್ಟು ಹೋಟೆಲ್ಲುಗಳ ಮೇಲೆ ಶ್ರೀನಗರದಲ್ಲಿ ದಾಳಿಮಾಡಿದೊಡನೆ ಪ್ರತ್ಯೇಕತಾವಾದಿಗಳು ತೆಪ್ಪಗಾದರು. ಅವರ ಪ್ರತಿರೋಧದ ಮಾತು ಮೆತ್ತಗಾಯ್ತು. ರಾಜಕೀಯ ನಾಯಕರ ಭದ್ರತಾ ವ್ಯವಸ್ಥೆ ಹಿಂದೆಗೆದುಕೊಳ್ಳುವ ಘೋಷಣೆ ಅನೌಪಚಾರಿಕವಾಗಿ ಹೊರಡಿಸುತ್ತಿದ್ದಂತೆ ಅವರು ತಮಗೆ ತಾವೇ ದಿಗ್ಬಂಧನ ಹೇರಿಕೊಂಡರು. ಮನೆಯಿಂದ ಹೊರಗೆ ಬರಲೇ ಇಲ್ಲ. ಅಮಿತ್ ಶಾಹ್ ಸದನದಲ್ಲಿ ಮಾತನಾಡುತ್ತ ನಾಯಕರಿಗೆ ದಿಗ್ಬಂಧನ ಹಾಕಿಯೇ ಇಲ್ಲ ಎನ್ನುತ್ತಿದ್ದರಲ್ಲ ಅದರ ಹಿಂದಿದ್ದುದು ಇದೇ ವಿಚಾರ. ಒಟ್ಟಿನಲ್ಲಿ ಇಡಿಯ ಭಾರತವನ್ನು ಗುಮ್ಮವಾಗಿ ಕಾಡುತ್ತಿದ್ದ ಆಟರ್ಿಕಲ್ 370 ಮಂಜಿನಂತೆ ಸರಿದುಹೋಯ್ತು!


ಆಮೇಲೇನಾಯ್ತು ಗೊತ್ತೇ? ಐಪಿಎಸ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದ ಶಾಹ್ ಫೈಸಲ್ ಸ್ವಾತಂತ್ರ್ಯ ದೊರೆತಾಗಿನಿಂದ ಕಶ್ಮೀರದ ಜನತೆಗೆ ಮಾಡಿರುವ ಅನ್ಯಾಯವನ್ನು ಸರಿ ಪಡಿಸಿರೆಂದು ಕೇಳಿಕೊಂಡಿದ್ದಲ್ಲದೇ ತಮ್ಮಿಂದ ಲೂಟಿ ಮಾಡಿದ್ದನ್ನು ಮರಳಿ ಕೊಡುವಂತೆ ಟ್ವೀಟ್ನ ಮೂಲಕ ಆಗ್ರಹಿಸಿದರು. ಅಕ್ಷರಶಃ ಇದು ಜನರನ್ನು ಭಡಕಾಯಿಸುವ ಸಂದೇಶವಾಗಿತ್ತು. ಆಟರ್ಿಕಲ್ 370 ಮರಳುವವರೆಗೆ ಕೇಂದ್ರ ಸಕರ್ಾರದೊಂದಿಗೆ ಆಗ್ರಹಪೂರ್ವಕ ಅಸಹಕಾರ ನಡೆಸಲು ಕರೆಯಾಗಿತ್ತು. ಆದರೆ ಈ ಟ್ವೀಟ್ಗೆ ಬಂದ ಪ್ರತಿಕ್ರಿಯೆ ಹೇಗಿತ್ತೆಂದರೆ ಫೈಸಲ್ ಮುಟ್ಟಿಕೊಂಡು ನೋಡುವಂಥದ್ದು. ರಾಜೀವ್ ಮಲಹೋತ್ರ ಬರೀ 47ರಿಂದ ಯಾಕೆ? ಸಾವಿರ ವರ್ಷಗಳ ಹಿಂದಿನದ್ದನ್ನೂ ನೆನಪಿಸಿಕೊಳ್ಳಿ ಮತ್ತು ಆಕ್ರಮಣಕಾರರಾಗಿ ಬಂದವರು ಅರಬ್ಸ್ಥಾನಕ್ಕೆ ಮರಳಿಬಿಡಿ ಎಂಬಂರ್ಥದಲ್ಲಿ ಟ್ವೀಟ್ ಮಾಡಿದರು. ಪಂಡಿತರನ್ನು ಪೀಡಿಸಿದ್ದುದನ್ನೂ ನೆನಪಿಸಿಕೊಡಲಯ್ತು. ಫೈಸಲ್ ತಾನೇ ಚಪ್ಪಲಿ ಕೊಟ್ಟು ಜನರ ಬಳಿ ಹೊಡೆಸಿಕೊಂಡಿದ್ದ.

ಅದು ಯಾವಾಗಲೂ ಹಾಗೆಯೇ. ಶಕ್ತಿ ಪ್ರದರ್ಶನವಾಗದೇ ಯಾರೂ ಬಾಗುವುದಿಲ್ಲ. ಅದರಲ್ಲೂ ಧರ್ಮಮಾರ್ಗದಲ್ಲಿರುವವರು ಅನವಶ್ಯಕವಾಗಿ ತಲೆ ತಗ್ಗಿಸಿಕೊಂಡು ನಿಲ್ಲುವುದರಲ್ಲೂ ಪುರುಷಾರ್ಥವಿಲ್ಲ. ಅದನ್ನೇ ಮೋದಿ-ಶಾಹ್ ಜೋಡಿ ಸಾಬೀತುಪಡಿಸಿದೆ. ಕಾಶ್ಮೀರವನ್ನೇ ಮೋದಿ ಪಳಗಿಸಿಬಿಟ್ಟರೆಂದರೆ ಬೇರೆಯವರು ಬಾಲಬಿಚ್ಚುವುದೂ ಇಲ್ಲ. ಅದನ್ನು ಅರಿತೇ ಅಧಿಕಾರ ಪಡೆದ ಐವತ್ತು ದಿನಗಳಲ್ಲೇ ಮೋದಿ ಟ್ರಿಪಲ್ ತಲಾಕ್, ಆಟರ್ಿಕಲ್ 370 ಯಂತಹ ಘನವಾದ ಸಮಸ್ಯೆಗಳನ್ನೇ ಪರಿಹರಿಸಿ ವಿಶ್ವಾಸ ತುಂಬಿದರು.


ಇನ್ನೂ ನಾಲ್ಕು ಮುಕ್ಕಾಲು ವರ್ಷಕ್ಕಿಂತಲೂ ಹೆಚ್ಚು ಬಾಕಿಯಿದೆ. ಭಾರತದ ಪಾಲಿಗೆ ಐತಿಹಾಸಿಕ ಪ್ರಮಾದವಾಗಿದ್ದ ಎಲ್ಲ ನಿಧರ್ಾರಗಳನ್ನೂ ಈ ತಂಡ ಸರಿಪಡಿಸಲಿದೆ. ಇದು ಹೊಸ ಭಾರತವೆಂಬುದನ್ನು ಸಾಬೀತುಪಡಿಸಲಿದೆ. ಅನುಮಾನವೇ ಇಲ್ಲ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top