National

ಮುಸ್ಲೀಂ ಉಗ್ರರ ಈ ಭಯಾನಕ ರೂಪ ಅಸಹ್ಯ ಹುಟ್ಟಿಸುವಂಥದ್ದು!

ಮಾರ್ವಾ ಖೇದ್ರ್ ಈ ಘಟನೆಯಾದಾಗ ಕೇವಲ ಹತ್ತು ವರ್ಷದ ಬಾಲಕಿ. ಇಸ್ಲಾಮಿಕ್ ಸ್ಟೇಟ್ ನ ಉಗ್ರರೊಂದಷ್ಟು ಮಂದಿ ಇರಾಕಿನ ಸಿಂಜಾರ್ ಎಂಬ ಪ್ರದೇಶವನ್ನು ಸುತ್ತುವರಿದು ಗನ್ನನ್ನು ಹಿಡಿದು ಎಲ್ಲಾ ಕುಟುಂಬವನ್ನು ಸುತ್ತುವರಿದಿದ್ದರು. ಗಂಡಸರನ್ನು ಸಾಮೂಹಿಕವಾಗಿ ಬೆಂಕಿಗೆ ಹಾಕಿ ಸುಟ್ಟುಬಿಡಲಾಯ್ತು. ಹೆಂಗಸರು ಮತ್ತು ಮಕ್ಕಳನ್ನು ಅಲ್ಲಿಂದ ಉತ್ತರ ದಿಕ್ಕಿನಲ್ಲಿರುವ ನಗರವೊಂದಕ್ಕೆ ಕರೆದೋಯ್ದು ಅವರನ್ನು ವಯಸ್ಸಿನ ಆಧಾರದ ಮೇಲೆ ಬೇರೆ-ಬೇರೆಯಾಗಿ ವಿಂಗಡಿಸಲಾಯ್ತು!

ಇಸ್ಲಾಮಿಕ್ ಸ್ಟೇಟಿನ ಹಿರಿಯ ಉಗ್ರನಿಗೆ ಅತ್ಯುತ್ತಮ ಬಹುಮಾನವಾಗಿ 10 ರಿಂದ 20 ವರ್ಷದೊಳಗಿನವರನ್ನು ನೀಡಲಾಯ್ತು. ಇದರಲ್ಲಿ ಯಾಜಿದಿ ಎಂಬ ಅಲ್ಪಸಂಖ್ಯಾತ ಸಮುದಾಯವೊಂದರ ಸದಸ್ಯೆಯಾದ ಬಾಲಕಿ ಮಾರ್ವಾ ಕೂಡ ಇದ್ದಳು. ಕೆಲವು ದಿನಗಳ ಹಿಂದಷ್ಟೇ ಹತ್ತು ವರ್ಷವಾಗಿತ್ತು ಈಕೆಗೆ!

ಇತ್ತೀಚೆಗಷ್ಟೇ ಐಸಿಸ್ ನ ಬಾಘುಜ್ ಎಂಬಲ್ಲಿಂದ ಮಾರ್ವಾಳ ಆಂಟಿ ಮ್ಹಾದ್ಯಾ ತಪ್ಪಿಸಿಕೊಂಡು ಬಂದಿದ್ದಾರೆ. ಕೊನೆಯ ಬಾರಿ ಮ್ಹಾದ್ಯಾ ಮಾರ್ವಾಳನ್ನು ನೋಡಿದ್ದು ಆಕೆ ಸದ್ಯ ವಾಸವಿರುವ ಹತ್ತಿರದ ಮಾರುಕಟ್ಟೆಯಲ್ಲಿ. ಆಕೆಯನ್ನು ಗುಂಪಿನಲ್ಲಿ ಐಸಿಸ್ ನ ರಾಜಧಾನಿ ರಕ್ಕಾಗೆ ಎಳೆದೊಯ್ಯಲಾಗುತ್ತಿತ್ತು! ಇದಾದ ಕೆಲವು ತಿಂಗಳುಗಳ ನಂತರ ಮ್ಹಾದ್ಯಾನ ಸ್ನೇಹಿತೆಯೊಬ್ಬರು ಮತ್ತೊಮ್ಮೆ ಮಾರ್ವಾಳನ್ನು ನೋಡಿದಾಗ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆಕೆ ಗರ್ಭಿಣಿಯಾಗಿದ್ದಳು! ಸದ್ಯ ಮಾರ್ವಾ ಈಗೆಲ್ಲಿದ್ದಾಳೆಂಬುದು ತಿಳಿದಿಲ್ಲ.

ಐಸಿಸ್ ನಿಂದ ತಪ್ಪಿಸಿಕೊಂಡು ಬಂದ ಯಾಜಿದಿ ಸಮುದಾಯದ ಹೆಣ್ಣುಮಕ್ಕಳಿಗಾಗಿಯೇ ಜೈದ್ ಅವ್ದಾಲ್ ಎನ್ನುವವರು ರಕ್ಷಣೆ ನೀಡುವ ಅನಾಥಾಶ್ರಮವನ್ನು ನಡೆಸುತ್ತಿದ್ದಾರೆ. ಆಕೆಯ ಪ್ರಕಾರ ಮಾರ್ವಾ ರೀತಿ ಹಲವು ಮಕ್ಕಳು ಐಸಿಸ್ ಉಗ್ರರ ಬಲೆಯಲ್ಲಿದ್ದಾರೆ. ಆಕೆ ಗರ್ಭಿಣಿಯಾಗಿರುವುದು ಅತ್ಯಂತ ಘೋರ ಸಂಗತಿ. ಅಷ್ಟೇ ಅಲ್ಲದೇ, ಈ ರೀತಿಯ ಹೆಣ್ಣುಮಕ್ಕಳು ಗರ್ಭಿಣಿಯರಾಗುವ ಮುನ್ನ 100 ಜನರಿಂದ ಅತ್ಯಾಚಾರಕ್ಕೊಳಗಾಗಿರುತ್ತಾರೆ ಎನ್ನುವುದು ಇನ್ನೂ ಭಯಾನಕವಾದ ಸಂಗತಿಯಾಗಿದೆ ಎಂದಿದ್ದಾರೆ!

29 ವರ್ಷದ ಮ್ಹಾದ್ಯಾ ತನ್ನ ಎಂಟು ಮತ್ತು ಒಂಭತ್ತು ವರ್ಷದ ಇಬ್ಬರು ಮಕ್ಕಳೊಂದಿಗೆ ಐಸಿಸ್ ನಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಐಸಿಸ್ ಉಗ್ರರು 6500 ಯಾಜಿದಿಗಳನ್ನು ಅಪಹರಿಸಿದ್ದರು. ಅದರಲ್ಲಿ ಅರ್ಧದಷ್ಟು ಜನ ಇನ್ನೂ ಸಿಕ್ಕಿಲ್ಲ.

ಮ್ಹಾದ್ಯಾ ಅಲ್ಲಿನ ಭಯಾನಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಅಲ್ಲಿ ಆಕೆಯನ್ನು ಮಾರುವ, ಹಲವು ಬಾರಿ ಮದುವೆಯಾಗುವ, ಆಕೆಯ ಮಕ್ಕಳನ್ನು ಮುದುಕರಿಗೆ ಕೊಟ್ಟು ಮದುವೆ ಮಾಡಿಸಿಬಿಡುವ ಬೆದರಿಕೆಯನ್ನು ಹಾಕಲಾಗುತ್ತಿತ್ತಂತೆ. ಅಷ್ಟೇ ಅಲ್ಲದೇ, ಮಕ್ಕಳನ್ನು ಮದುವೆಯ ವಯಸ್ಸಿನ ಐಸಿಸ್ ಉಗ್ರರು ಕೇಬಲ್ ವೈರುಗಳಿಂದ ಹೊಡೆಯುತ್ತಿದ್ದರು. ಆಕೆಯ ಮತ್ತೊಂದು ಮಗುವನ್ನು ಬಾಂಬ್ ದಾಳಿಯಲ್ಲಿ ಕೊಲ್ಲಲಾಗಿತ್ತು. ‘ನನ್ನನ್ನು ಅದೆಷ್ಟು ಬಾರಿ ಮಾರಾಟ ಮಾಡಿದ್ದಾರೆ ಎಂಬುದು ನನಗೇ ತಿಳಿದಿಲ್ಲ’ ಎಂದಿದ್ದಾರೆ. ಮುಂದುವರೆದು ‘ಒಬ್ಬ ನನ್ನನ್ನು ಕೇವಲ ಮೂರು ದಿನವಷ್ಟೇ ಇಟ್ಟುಕೊಂಡು ಮಾರಿಬಿಟ್ಟಿದ್ದ. ನನ್ನನ್ನು ಎರಡು ತಿಂಗಳ ಕಾಲ ಭೂಗತವಿಡಲಾಗಿತ್ತು. ಅಲ್ಲಿ ಅದೆಷ್ಟು ಕತ್ತಲಿತ್ತೆಂದರೆ ಹಗಲು ಯಾವುದು ರಾತ್ರಿ ಯಾವುದು ತಿಳಿಯುತ್ತಲೇ ಇರಲಿಲ್ಲ’ ಎಂದಿದ್ದಾರೆ!

ತನ್ನ ನಾಲ್ಕುವರೆ ವರ್ಷದ ಭೀಕರ ದಿನಗಳಲ್ಲಿ ಯಾಜಿದಿ ಮಹಿಳೆಯರನ್ನು ಕೊಳ್ಳುವವರ ಪೈಕಿ ಜೈಲಿನಿಂದ ಬಿಡುಗಡೆಯಾದ ನಂತರ ಐಸಿಸ್ ಗೆ ಸೇರಿದ್ದ ಬಿಳಿಯನೊಬ್ಬನೂ ಇದ್ದ ಎಂದು ನೆನಪಿಸಿಕೊಳ್ಳುವ ಈಕೆ ‘ಆತ ಹೆಣ್ಣುಮಕ್ಕಳನ್ನು ಕೊಂಡುಕೊಳ್ಳುತ್ತಿದ್ದ, ಅವರಿಗೆ ಸ್ನಾನ ಮಾಡಿಸಿ, ಒಳ್ಳೆಯ ಬಟ್ಟೆಗಳಿಂದ ಸಿಂಗರಿಸಿ ಮಾರುತ್ತಿದ್ದ’ ಎಂದಿದ್ದಾರೆ.

ಮತ್ತೊಬ್ಬ ಈಕೆಯನ್ನು ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಅಡುಗೆ ಮಾಡಿ ಹಾಕುವ ಕೆಲಸಕ್ಕೆಂದು ಕೊಂಡುಕೊಂಡವನು ನಾಲ್ಕು ತಿಂಗಳುಗಳ ನಂತರ ಮದುವೆಯಾಗುವುದಾಗಿ ತಿಳಿಸಿದನಂತೆ. ಇವರು ತಿರಸ್ಕರಿಸಿದರೆ ಆಕೆಯ ಎಂಟು ವರ್ಷದ ಮಗಳನ್ನು ಮದುವೆಯಾಗುವ ಅಥವಾ ಇನ್ನೊಬ್ಬರಿಗೆ ಮಾರಿಬಿಡುವ ಬೆದರಿಕೆ ಹಾಕಿದ್ದನಂತೆ!

ಇತ್ತೀಚೆಗಷ್ಟೇ ಆಕೆ ಈ ಭಯಾನಕ ನರಕದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ತಾನು ಬದುಕುತ್ತೇನೆಂಬ ಆಸೆಯೂ ಇರಲಿಲ್ಲವೆನ್ನುವ ಈಕೆ ತನಗೆ ಕಡ್ಡಿಗಳನ್ನು, ಪ್ರಾಣಿಗಳ ಮಲವನ್ನು ಬಲವಂತವಾಗಿ ತಿನ್ನಿಸಲಾಗಿತ್ತು ಎನ್ನುತ್ತಿದ್ದಾರೆ. ಇಷ್ಟಾಗಿಯೂ ಅಲ್ಲಿ ಅದೆಷ್ಟು ಬ್ರೈನ್ ವಾಶ್ ಮಾಡಲಾಗಿತ್ತೆಂದರೆ ಆಕೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಆಕೆಯ ಮಕ್ಕಳೇ ಆಕೆಯನ್ನು ಸೇರಿಕೊಳ್ಳಲು ಹಿಂದೇಟು ಹಾಕಿದ್ದರು. ‘ಹೊರಗೆ ಹೋದರೆ ನಮಗೆ ಆಹಾರ ದೊರೆಯುತ್ತದೆ’ ಎಂದು ಹೇಳಿದ ನಂತರವೇ ಮಕ್ಕಳು ಬರಲು ಒಪ್ಪಿದ್ದು ಎಂದಿದ್ದಾರೆ ಮ್ಹಾದ್ಯಾ!

ಹಾದ್ಯಾ ಎನ್ನುವ ಮತ್ತೊಬ್ಬ ಹುಡುಗಿ ಅಲ್ಲಿಂದ ಬಂದಿದ್ದಾಳೆ. ಆಕೆಗಿನ್ನೂ ಒಂಭತ್ತು ವರ್ಷ. ಅಲ್ಲಿಂದ ಬಂದ ನಂತರ ಆಕೆಗಾದ ಸಂತಸ ಹೇಳತೀರದು ಎಂದಿದ್ದಾರೆ ಮ್ಹಾದ್ಯಾ. ಐದು ವರ್ಷಗಳ ಕಾಲ ಆಕೆ ಐಸಿಸ್ ಉಗ್ರನ ಮನೆಯೊಂದರಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಳು. ಆಕೆಯನ್ನು ಮನಬಂದಂತೆ ಹೊಡೆಯಲಾಗುತ್ತಿತ್ತಂತೆ. ಹಾದ್ಯಾಗೆ ಉಮತುಲ್ಲಾ ಎಂಬ ಹೊಸ ಹೆಸರನ್ನು ನೀಡಲಾಗಿತ್ತು. ಹಾದ್ಯಾ ಅಲ್ಲಿಂದ ತಪ್ಪಿಸಿಕೊಂಡು ಬರುವ ಎರಡು ವರ್ಷಗಳ ಹಿಂದೆಯೇ ಆಕೆಯ ತಾಯಿ ತಪ್ಪಿಸಿಕೊಂಡು ಬಂದಿದ್ದರು. ಈಗ ತಾಯಿ ಮಗಳಿಬ್ಬರೂ ಕೂಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top