National

ಮಿಷನರಿ ಶಾಲೆಯಲ್ಲಿ ವಿದ್ಯಾರ್ಥಿಯ ಭಯಾನಕ ಕೊಲೆ! ಪಾಲಕರಿಗೂ ತಿಳಿಸದೇ ಶವವನ್ನು ಹೂತು ಹಾಕಿದ ಸಿಬ್ಬಂದಿ!

ಡೆಹರಾಡೂನ್‌ನ ರಾಣಿಪೋಖ್ರಿಯಲ್ಲಿ ಮಿಷನರಿ ಬೋರ್ಡಿಂಗ್ ಶಾಲೆಯೊಂದರಲ್ಲಿ ನಡೆದ ಭಯಾನಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 10 ರಂದು ನಡೆದ ಘಟನೆಯನ್ನು ಮುಚ್ಚಿಡುವ ಪ್ರಯತ್ನ ಮಾಡಿದ ಶಾಲಾ ಸಿಬ್ಬಂದಿಗಳು, ಅಧಿಕಾರಿಗಳು ಈಗ ಜಗದ ಮುಂದೆ ಬೆತ್ತಲಾಗಿದ್ದಾರೆ.
ವಾಸು ಯಾದವ್ ಎಂಬ 12 ವರ್ಷದ ಯುವಕ ಮಿಷನರಿ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದ. ಮಾರ್ಚ್ 10 ರಂದು ಈತನ ಸೀನಿಯರ್ಸ್ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ವಾಸುಗೆ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟುಗಳಿಂದ ಸಾಯುವ ರೀತಿ ಬಡಿದು ಹಾಕಿದ್ದಾರೆ. ಇದು ತಿಳಿಯುತ್ತಿದ್ದಂತೆ ಶಿಕ್ಷಕರು ಮತ್ತಿತರ ಸಿಬ್ಬಂದಿಗಳು ಗಾಬರಿಗೊಂಡಿದ್ದಾರೆ. ಸ್ವಲ್ಪ ತಡವಾಗಿ ಆತನನ್ನು ಹತ್ತಿರದ ಜಾಲಿ ಗ್ರಾಂಟ್ ಆಸ್ಪತ್ರೆಗೆ ಕರೆದೊಯ್ದದ ಪರಿಣಾಮ ಆತ ಮೃತಪಟ್ಟಿದ್ದಾನೆ! ಮತ್ತಷ್ಟು ಗಾಬರಿಗೊಂಡ ಶಾಲೆಯವರು ವಾಸುವಿನ ಶವವನ್ನು ತಂದೆ-ತಾಯಿಗೂ ತಿಳಿಸದೇ ಶಾಲಾ ಕ್ಯಾಂಪಸ್ ಒಳಗೇ ಹೂತುಹಾಕಿಬಿಟ್ಟಿದ್ದಾರೆ.
ಇಷ್ಟೇ ಅಲ್ಲ. ಇನ್ನೂ ಚಕಿತಗೊಳಿಸುವ ಸಂಗತಿಯೆಂದರೆ ಶಾಲಾ ಸಿಬ್ಬಂದಿಗಳು, ಆಸ್ಪತ್ರೆಯ ವೈದ್ಯರು, ರಾಣಿಪೋಖ್ರಿ ಪೊಲೀಸರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ವಿಷ ಆಹಾರ ಸೇವಿಸಿ ಸತ್ತಿದ್ದಾನೆಂದು ನಿರೂಪಿಸಲು ಹೊರಟಿದ್ದರು. ಆದರೆ ಆತನ ಶವದ ಮೇಲಿನ ಗಾಯಗಳು ಅದನ್ನು ಸುಳ್ಳೆಂದು ಸಾಬೀತುಪಡಿಸಿವೆ.
ಯಾದವ್ ನ ತಂದೆಗೆ ಶಾಲೆಯವರು ಫೋನಿನಲ್ಲಿ ಆತ ಆಹಾರ ವ್ಯತ್ಯಾಸದಿಂದಲೇ ಸತ್ತದ್ದೆಂದು ತಿಳಿಸಿದ್ದಾರೆ. ಯಾದವ್‌ನ ತಂದೆ ಉತ್ತರಾಖಂಡದ ಕಮಿಷನರ್‌ ಅವರ ಬಳಿ ತನ್ನ ಮಗನ ಶವಪರೀಕ್ಷೆಯಾಗಬೇಕೆಂದು ಕೇಳಿಕೊಂಡ ನಂತರ ಎಲ್ಲವೂ ಬೆಳಕಿಗೆ ಬಂದಿದೆ. ರಾಣಿಪೋಖ್ರಿ ಪೊಲೀಸರು ಶಾಲಾ ಆಡಳಿತದ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿದಿದ್ದಾರೆ.
ಮಕ್ಕಳ ಹಕ್ಕು ರಕ್ಷಣೆಯ ಅಡಿಯಲ್ಲಿ ಉತ್ತರಾಖಂಡದ ಕಮಿಷನರ್ ಸರಿಯಾದ ತನಿಖೆ ನಡೆಸಿ ಇಬ್ಬರು ವಿದ್ಯಾರ್ಥಿಗಳನ್ನು ಮತ್ತು ಮೂವರು ಶಾಲಾ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ.
Click to comment

Leave a Reply

Your email address will not be published. Required fields are marked *

Most Popular

To Top