National

ಮಹಾರಾಷ್ಟ್ರದಲ್ಲಿ ಅಮಿತ್ ‘ಶಾ’ಣಕ್ಯ!

ಮಹಾರಾಷ್ಟ್ರ ಸಕರ್ಾರ ಯಾರದ್ದೆಂಬ ಕುತೂಹಲ ಇನ್ನೂ ಮುಗಿದಿಲ್ಲ. ಅಮಿತ್ ಶಾ ಮುಖದಲ್ಲಿ ನಿರಾಳತೆಯನ್ನು ಕಂಡಾಗ ಶಿವಸೇನೆಯವರಿಗೆ ಆತಂಕ ಹೆಚ್ಚುವುದಷ್ಟೇ ಅಲ್ಲದೇ ಬಲಪಂಥೀಯರಿಗೂ ಮುಂದೇನೆಂಬ ಕಾತರತೆ ಖಂಡಿತ ಕಾಣುತ್ತದೆ. ಮಹಾರಾಷ್ಟ್ರ ಅಧಿಕಾರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾದ ರಾಜ್ಯ. ಖಂಡಿತ ಯಾವ ಪಕ್ಷವೂ ಅದನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಆದರೆ ಸ್ವಲ್ಪ ಧಾವಂತಕ್ಕೆ ಬಿದ್ದರೂ ಮೈಮೇಲೆಳೆದುಕೊಳ್ಳಬಲ್ಲ ಸಮಸ್ಯೆಗಳು ಸಾಕಷ್ಟಿವೆ!


ಸುಮ್ಮನೆ ಬಿಜೆಪಿಯ ಮುಂದಿರುವ ಅವಕಾಶಗಳನ್ನು ನೋಡಿ. ಕಳೆದ ಬಾರಿ ಯಾರೊಂದಿಗೂ ಸೇರಿಕೊಳ್ಳದೇ ತಾನೇ ಚುನಾವಣೆಯಲ್ಲಿ ಬಡಿದಾಡಿ ಗಳಿಸಿದ ಸ್ಥಾನಕ್ಕಿಂತಲೂ ಒಪ್ಪಂದ ಮಾಡಿಕೊಂಡ ನಂತರ ಕಡಿಮೆ ಸ್ಥಾನ ಗಳಿಸಿದೆ. ಇಷ್ಟಾದರೂ ಪ್ರತಿಸ್ಪಧರ್ಿಸಿದ ಶೇಕಡಾ 70 ಸ್ಥಾನಗಳಲ್ಲಿ ಗೆದ್ದಿರುವ ಹಿರಿಮೆ ಬಿಜೆಪಿಯದ್ದು. ನಿಸ್ಸಂಶಯವಾಗಿ ಇದರ ಶ್ರೇಯವೆಲ್ಲಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸರಿಗೆ. ನರೇಂದ್ರಮೋದಿಯವರ ನಂತರ ರಾಷ್ಟ್ರದ ನಿಷ್ಕಳಂಕ ವ್ಯಕ್ತಿತ್ವ ಅವರದ್ದೆಂಬುದು ಢಾಳಾಢಾಳಾಗಿ ಕಾಣುವ ಸಂಗತಿ. ಈಗಲೂ ಮಹಾರಾಷ್ಟ್ರದ ಜನತೆ ಫಡ್ನವೀಸರ ವಿರುದ್ಧ ಒಂದು ಮಾತನಾಡಲೂ ಸಿದ್ಧರಿಲ್ಲ. ಅವರು ಬಹುದೀರ್ಘ ಕಾಲ ಅಲ್ಲಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುತ್ತಾರೆ. ಈಗ ಹಠಕ್ಕೆ ಬಿದ್ದು ಸದಾ ತರಲೆ ಮಾಡುವ ಶಿವಸೇನೆಯೊಂದಿಗೆ ಸೇರಿ ಸಕರ್ಾರವನ್ನೇನಾದರೂ ಫಡ್ನವೀಸರು ರಚಿಸಿಬಿಟ್ಟರೆ ಅದು ಅವರಿಗೆ ನುಂಗಲಾರದ ಬಿಸಿ ತುಪ್ಪ. ಎರಡೂವರೆ ವರ್ಷದೊಳಗೆ ಮಾಡಬೇಕಾದ ಎಲ್ಲ ಕೆಲಸವನ್ನೂ ಮುಗಿಸಿ ಉದ್ಧವ್ ಠಾಕ್ರೆಗೆ ಅಧಿಕಾರ ಬಿಟ್ಟುಕೊಟ್ಟುಬಿಟ್ಟರೆ ಅವರು ಮಾಡುವ ಎಲ್ಲ ತಪ್ಪುಗಳಿಗೂ ಇವರೇ ಹೊಣೆಗಾರರಾಗಬೇಕಾಗುತ್ತದಲ್ಲದೇ ಮುಂದೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಅವಕಾಶವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೇ ಈ ಬಾರಿ ತಾನೇ ಸಕರ್ಾರ ನಡೆಸಲು ಹೋಗಿ ಶಿವಸೇನೆ ಎಡವಟ್ಟು ಮಾಡಿಕೊಂಡರೆ ಅಲ್ಲಿಗೆ ಭಾಜಪದ ಶಕ್ತಿ ಹಿಂದಿಗಿಂತಲೂ ಹೆಚ್ಚಾಗುತ್ತದೆ. ಶಿವಸೇನೆಗೆ ಮುಖ್ಯಮಂತ್ರಿ ಪದವಿ ಬಿಟ್ಟುಕೊಡುವ ಸಾಧ್ಯತೆಯೇ ಇಲ್ಲ ಎಂಬ ಹೇಳಿಕೆ ಕೊಡುವ ಮೂಲಕ ತನ್ನ ನಡೆಯನ್ನು ಸ್ಪಷ್ಟಪಡಿಸಿದ ಅಮಿತ್ಶಾ ಮಾತುಕತೆಗೆ ಉದ್ಧವ್ರ ಮನೆಗೂ ಹೋಗದೇ ತೋರಿದ ಖಡಕ್ಕುತನ ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು. ನಾಲ್ಕು ಗೋಡೆಗಳ ನಡುವೆ ಚುನಾವಣೆಗೆ ಮುನ್ನ ಆಡಿದ ಮಾತುಗಳನ್ನು ಮನಸೋ ಇಚ್ಛೆ ತಿರುಚಿ ಹೇಳಿದುದರ ಫಲವನ್ನು ಈಗ ಶಿವಸೇನೆ ಉಣ್ಣುತ್ತಿದೆ.


ಶಿವಸೇನೆಯ ಪರಿಸ್ಥಿತಿ ಅದೆಷ್ಟು ಹೀನಾಯವಾಗಿದೆ ಎಂದರೆ ಬಿಜೆಪಿಯನ್ನು ಹೆದರಿಸಿ ಸಕರ್ಾರ ರಚಿಸಿಬಿಡಬಹುದೆಂಬ ಭರವಸೆ ಅದಕ್ಕಿತ್ತು. ಹೀಗಾಗಿಯೇ ಕೇಂದ್ರಕ್ಕೆ ಕೊಟ್ಟ ಬೆಂಬಲವನ್ನು ಹಿಂತೆಗೆದುಕೊಂಡು ಆಕ್ರಮಣಕಾರಿ ವ್ಯಕ್ತಿತ್ವವನ್ನೂ ತೋರಿಸಿಬಿಟ್ಟಿತು. 303 ಸಂಸದರನ್ನು ಹೊಂದಿರುವ ಬಿಜೆಪಿಗೆ ಮಿತ್ರ ಪಕ್ಷಗಳಷ್ಟೂ ಹೊರಟುಹೋದರೂ ನಷ್ಟವಿಲ್ಲವೆಂಬುದು ಗೊತ್ತಿದ್ದೂ ಉದ್ಧವ್ ಈ ಬಗೆಯ ನಿರ್ಣಯ ತೆಗೆದುಕೊಳ್ಳಬಾರದಿತ್ತು. ಅತ್ತ ಎನ್ಸಿಪಿಯೊಂದಿಗೆ ಸೇರಿಕೊಂಡು ಸೋನಿಯಾಮಾತೆಯ ಆಶೀವರ್ಾದದಿಂದ ಅಧಿಕಾರ ನಡೆಸಿಯೇ ಬಿಡುವ ಹುಮ್ಮಸ್ಸು ಹೊಂದಿದ್ದ ಠಾಕ್ರೆ ಪರಿವಾರಕ್ಕೆ ಆಘಾತವಾಗಿದ್ದು ಯಾವಾಗ ಗೊತ್ತೇ? ಸ್ವತಃ ಪವಾರ್ ಶಿವಸೇನೆಗೆ ಬೆಂಬಲಿಸಲು ನಿರಾಕರಿಸಿದಾಗ. ಅತ್ತ ಕಾಂಗ್ರೆಸ್ ಕೂಡ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಶಿವಸೇನೆಗೆ ಬೆಂಬಲಿಸಿ ಮಹಾರಾಷ್ಟ್ರದಲ್ಲಿ ಅಧಿಕಾರವನ್ನೇನೋ ಮಾಡಿಬಿಡಬಹುದು ಆದರೆ ಅವರ ಆಕ್ರಮಕ ಹಿಂದುತ್ವವನ್ನು ಬೆಂಬಲಿಸಿ ದೇಶದಲ್ಲೆಲ್ಲಾ ವಿರೋಧ ಎದುರಿಸಬೇಕಾಗುತ್ತದಲ್ಲಾ, ಇಡುಗಂಟಿನಂತಿರುವ ಮುಸಲ್ಮಾನರ ಮತಗಳನ್ನು ಮಹಾರಾಷ್ಟ್ರದ ಅಧಿಕಾರಕ್ಕಾಗಿ ಕಳೆದುಕೊಳ್ಳಬೇಕಾಗುತ್ತದಲ್ಲಾ, ಅದೇ ಅದರ ಸಂಕಟ. ಶಿವಸೇನೆಗೆ ಗತಿ ಕಾಣಿಸಲು ಇಷ್ಟು ಸಾಕು. ಏಕೆಂದರೆ ಕಾಂಗ್ರೆಸ್ಸಿನೊಂದಿಗೆ ಸೇರಿಕೊಳ್ಳುವ ಮಾತನ್ನಾಡುತ್ತಿದ್ದಂತೆ ಶಿವಸೇನೆ ತನ್ನ ಹಿಂದುತ್ವದ ಬೆಂಬಲಿಗರನ್ನು ಕಳೆದುಕೊಂಡು ಅಷ್ಟನ್ನೂ ಬಿಜೆಪಿಗೆ ವಗರ್ಾಯಿಸಿಬಿಟ್ಟಿದೆ. ಮತ್ತೊಮ್ಮೆ ಚುನಾವಣೆಯಾದರೆ ಶಿವಸೇನೆಯದ್ದು ಅನಾಥವಾಗುವ ಪರಿಸ್ಥಿತಿ!


ಶರತ್ ಪವಾರ್ ದೇವೇಗೌಡರಂತೆ ಪಳಗಿದ ರಾಜಕಾರಣಿ. ಅವರಿಗೆ ದೂರದೃಷ್ಟಿಯಿದೆ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಹೇಗೆ ಬೆಳೆಯಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತು. ಖಂಡಿತವಾಗಿಯೂ ಶಿವಸೇನೆಯೊಂದಿಗೆ ಸೇರಿ ಅವರು ತಮ್ಮ ವಿಸ್ತಾರವಾಗಿರುವಂತಹ ಬೆಂಬಲಿಗರನ್ನು ಕಳೆದುಕೊಳ್ಳಲಾರರು. ಹಾಗೆಯೇ ಕೇಂದ್ರದಲ್ಲಿ ಪ್ರಬಲ ಸ್ಥಿತಿಯಲ್ಲಿರುವ ಮೋದಿ-ಅಮಿತ್ಶಾರೊಂದಿಗೆ ವಿರೋಧವನ್ನೂ ಕಟ್ಟಿಕೊಳ್ಳಲಾರರು. ಅವರಿಗೀಗ ತಲೆಯ ಮೇಲೆ ತೂಗುತ್ತಿರುವ ಅನೇಕ ವಿಚಾರಣೆಗಳಿಂದ ತಪ್ಪಿಸಿಕೊಳ್ಳಲು ಮಹಾರಾಷ್ಟ್ರ ಸಕರ್ಾರ ಬೇಕಿಲ್ಲ, ಕೇಂದ್ರಸಕರ್ಾರವೇ ಬೇಕಿದೆ. ತಮ್ಮ ಮಗಳನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅವರು ಬಾಹ್ಯ ಬೆಂಬಲ ಕೊಟ್ಟರೆ ಯಾರೂ ಅಚ್ಚರಿ ಪಡಬೇಕಿಲ್ಲ. ಇದನ್ನು ಜನ ಬಿಜೆಪಿ ಬೆನ್ನಿಗೆ ಚೂರಿ ಹಾಕಿತು ಎಂದೇನು ಭಾವಿಸುವುದಿಲ್ಲ. ಏಕೆಂದರೆ ಶಿವಸೇನೆಗೆ ಸಕರ್ಾರ ರಚಿಸಲು ಸಾಕಷ್ಟು ಸಮಯ ಕೊಟ್ಟು ಅದು ಕೈಚೆಲ್ಲಿದಾಗಷ್ಟೇ ಮತ್ತೊಂದು ಚುನಾವಣೆಯನ್ನು ತಪ್ಪಿಸಲು ಎನ್ಸಿಪಿಯೊಂದಿಗೆ ಮೈತ್ರಿ ಎಂದು ಅದು ಹೇಳಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಶರತ್ ಪವಾರ್ ಕಳೆದುಕೊಳ್ಳುವುದೇನಿಲ್ಲ. ಆದರೆ ಕೇಂದ್ರದಲ್ಲಿ ಮಂತ್ರಿ ಪದವಿಯಷ್ಟೇ ಅಲ್ಲದೇ ಮುಂದಿನ ಕೆಲವಾರು ವರ್ಷಗಳ ಕಾಲವಾದರೂ ಎಲ್ಲ ಬಗೆಯ ದಾಳಿಗಳಿಂದ ಬಚಾವಾಗಿ ಬಿಡುತ್ತಾರೆ. ಹೀಗಾಗಿಯೇ ಅಮಿತ್ಶಾ ಕೇಂದ್ರ ಮಂತ್ರಿಯಾಗಿರುವ ಅಠವಳೆಯವರು ಮಾತನಾಡಿಸಲು ಹೋದಾಗ ಸದ್ಯದಲ್ಲೇ ಮಹಾರಾಷ್ಟ್ರದಲ್ಲಿ ಸಕರ್ಾರ ರಚನೆಯಾಗುತ್ತದೆ ಎಂದು ಸಮಾಧಾನಿಸಿ ಕಳಿಸಿರೋದು.

ಇವೆಲ್ಲದರ ನಡುವೆ ಏನೂ ಮಾಡಲಾಗದೇ ಚಡಪಡಿಸುತ್ತಾ ಕೈ ಕೈ ಹಿಸುಕಿಕೊಂಡು ಕುಳಿತಿರೋದು ಕಾಂಗ್ರೆಸ್ಸು. ಶರತ್ ಪವಾರರ ನಡೆಯನ್ನು ಅಂದಾಜಿಸಲಾಗದೇ ಧಾವಂತಕ್ಕೆ ಬಿದ್ದು ಶಿವಸೇನೆಗೆ ಬೆಂಬಲ ಕೊಡುವಂತಿಲ್ಲ. ಒಮ್ಮೆ ಶಿವಸೇನೆಯೊಂದಿಗೆ ಕಾಂಗ್ರೆಸ್ಸು ಸೇರುತ್ತದೆ ಎಂದು ಅರಿವಾದೊಡನೆ ಅಮಿತ್ಶಾ ಬಲವಾದ ಅಸ್ತ್ರದೊಂದಿಗೆ ಸಜ್ಜಾಗಿಬಿಡುತ್ತಾರೆ. ಅದು ಬಿಟ್ಟು ಬೆಂಬಲ ಕೊಡಲು ಹಿಂದೆ ಮುಂದೆ ನೋಡುತ್ತಿದ್ದರೆ ಶಿವಸೇನೆಯೋ ಎನ್ಸಿಪಿಯೋ ಕೈ ಚೆಲ್ಲಿ ಬಿಜೆಪಿಯೊಂದಿಗೆ ಸೇರಿಕೊಂಡುಬಿಟ್ಟರೆ ಆಗಲೂ ಕಾಂಗ್ರೆಸ್ಸಿನ ಕಥೆ ಮುಗಿದಂತೆ.


ಒಟ್ಟಾರೆ ಮಹಾರಾಷ್ಟ್ರದ ಸಕರ್ಾರ ರಚನೆಯ ಕಸರತ್ತಿನಲ್ಲಿ ದೃಗ್ಗೋಚರವಾಗಿರುವ ಅಂಶಗಳೆಂದರೆ ಪ್ರಧಾನಮಂತ್ರಿ ಪದವಿಗೆ ಬಲವಾದ ಸ್ಪಧರ್ಿಯಾಗಬಹುದಾಗಿದ್ದ ದೇವೇಂದ್ರ ಫಡ್ನವೀಸ್ ಶಕ್ತಿ ಕಳೆದುಕೊಂಡರು. ಶಿವಸೇನೆಯನ್ನು ಮಾತೂ ಆಡಲಾಗದಂತೆ ಭಾಜಪ ಕಟ್ಟುಹಾಕಿಬಿಟ್ಟಿದೆ. ಶರತ್ ಪವಾರರಿಗೆ ಪದ್ಮಪ್ರಶಸ್ತಿ ಘೋಷಣೆಯಾದಾಗಲೇ ಅನುಮಾನವಿತ್ತು. ಅದರ ಹಿಂದೆ ಇಷ್ಟೊಂದು ದೂರದೃಷ್ಟಿ ಇರಬಹುದೆಂಬ ಕಲ್ಪನೆ ಯಾರಿಗೂ ಇರಲಿಲ್ಲ.
ಅಮಿತ್ ಶಾ ಸುಮ್ಮ-ಸುಮ್ಮನೆ ಚಾಣಕ್ಯರಲ್ಲ!

-ಚಕ್ರವರ್ತಿ ಸೂಲಿಬೆಲೆ

 

Click to comment

Leave a Reply

Your email address will not be published. Required fields are marked *

Most Popular

To Top