National

ಮಹಾಘಟಬಂಧನದ ನಡುಕ ಯಾರಿಗೆ?!

ಮಹಾಘಟಬಂಧನ್ ಕುರಿತಂತೆ ಕಾಂಗ್ರೆಸ್ಸಿಗರಲ್ಲಿ ಬಹುವಾದ ವಿಶ್ವಾಸವಿದೆ. ಈ ಮಹಾಸಂಯೋಗದಿಂದ ಮೋದಿ ಸುನಾಮಿಯನ್ನು ತಡೆಯುವಲ್ಲಿ ಗೆಲ್ಲುವ ವಿಶ್ವಾಸ ಅವರಿಗಿದೆ. ಆದರೆ ಭ್ರಷ್ಟಚಾರವನ್ನೇ ಮನೆದೇವರನ್ನಾಗಿಸಿಕೊಂಡಿರುವವರೆಲ್ಲರೂ ಒಟ್ಟಾಗಿ ನಿಂತರೆ ಅದು ಮತ್ತಷ್ಟು ಭ್ರಷ್ಟಾಚಾರಕ್ಕೆ ಕಾರಣವಾಗಬಹುದೇ ಹೊರತು ಸಮರ್ಥ ಆಡಳಿತಕ್ಕಲ್ಲ. ಆಡಳಿತದ ಕಥೆ ದೂರ, ಆಡಳಿತದ ಚುಕ್ಕಾಣಿ ಹಿಡಿಯುವ ಮುನ್ನ ಒಟ್ಟಾಗುವುದು ಸುಲಭ ಸಂಗತಿಯೇನಲ್ಲ. ‘ಉದ್ದೇಶ ಮುಗಿಲಿನಷ್ಟು ಎತ್ತರಕ್ಕಿದ್ದಾಗ ನಮ್ಮೆಲ್ಲಾ ವೈರುಧ್ಯಗಳನ್ನು ಮರೆತು ನಾವು ಒಂದಾಗಿಬಿಡುವುದು ಸಾಧ್ಯ. ಆದರೆ ಅದು ಕನಿಷ್ಠಮಟ್ಟದ ಉದ್ದೇಶವಾದರೆ ಅದು ಈಡೇರುವುದಕ್ಕೂ ಮುನ್ನ ಛಿದ್ರ-ಛಿದ್ರವಾಗುವುದು ಅಷ್ಟೇ ನಿಚ್ಚಳ’.

ಮೇಲೆ ಹೇಳಿದ್ದು ಯಾವುದೋ ಶ್ರೇಷ್ಠ ವ್ಯಕ್ತಿಗಳ ಮಾತೇನಲ್ಲ. ಇದು ಪ್ರತಿಯೊಬ್ಬರ ಸಹಜ ಅನುಭವ. ಮಹಾಘಟಬಂಧನ್ನ ಯಶಸ್ಸಿನ ಕನಸು ಬಿತ್ತಲ್ಪಟ್ಟಿದ್ದು ಬಿಹಾರದಲ್ಲಿ. ಉತ್ತಮ ಆಡಳಿತದ ನಂತರವೂ ಮೋದಿಯ ಅಲೆಯೆದುರು ಕೊಚ್ಚಿ ಹೋಗುವ ಭಯ ನಿತೀಶ್ ಕುಮಾರರನ್ನು ಕಾಡುತ್ತಿದ್ದಾಗ ಅವರು ಲಾಲೂಪ್ರಸಾದ್ ಯಾದವ್ರೊಂದಿಗೆ ಅನಿವಾರ್ಯ ಮೈತ್ರಿಗೆ ಕೈಜೋಡಿಸಬೇಕಾಯ್ತು. ಭ್ರಷ್ಟ ಲಾಲೂ ಪರಿವಾರದೊಂದಿಗೆ ಗುರುತಿಸಿಕೊಳ್ಳುವುದೇ ಸಮಸ್ಯೆಯಾದರೆ ಮುಂದಿನ ದಿನಗಳಲ್ಲಿ ಅವರೊಂದಿಗೆ ಸೇರಿ ಆಡಳಿತ ನಡೆಸುವುದು ಅಷ್ಟೇ ಕಷ್ಟವೆಂಬುದು ಅವರಿಗೆ ಗೊತ್ತಿರದ ಸಂಗತಿಯೇನಲ್ಲ. ಆದರೆ ತ್ರಿಕೋಣಾತ್ಮಕ ಸ್ಪಧರ್ೆ ನಡೆದುಹೋದರೆ ಭಾಜಪ ಅಧಿಕಾರ ನಡೆಸುವುದು ಅಷ್ಟೇ ಖಾತ್ರಿ ಎಂದು ಅರಿವಿದ್ದ ನಿತೀಶ್ ಲಾಲೂ ಜೊತೆಗೆ ಸಂಬಂಧ ಬೆಳೆಸಿದರು, ಚುನಾವಣೆಗೂ ಹೋದರು. ಚುನಾವಣಾ ನೀತಿಯ ದೃಷ್ಟಿಯಿಂದ ಅವರು ಬಳಸಿದ ಪ್ರತಿಯೊಂದು ನಡೆಯೂ ಕೂಡ ಮೋದಿ ಪಾಳಯವನ್ನು ಗಾಬರಿಗೆ ದೂಡಿತ್ತು ನಿಜ. ಫಲಿತಾಂಶ ಬಂದಾಗ ನಿತೀಶ್-ಲಾಲೂ ಜೋಡಿ ಜಯಭೇರಿ ಬಾರಿಸಿತ್ತಾದರೂ ಬಿಜೆಪಿಗೆ ಬರಬೇಕಿದ್ದ ವೋಟುಗಳ ಪ್ರಮಾಣದಲ್ಲಿ ಒಂದಿನಿತೂ ಕಡಿಮೆಯಾಗಿರಲಿಲ್ಲ. ಅಂದರೆ ಈ ಜೋಡಿ ಬಿಜೆಪಿಯ ಪರ ಸ್ವಿಂಗ್ ಆಗಬಹುದಾಗಿದ್ದ ಮತಗಳನ್ನಷ್ಟೇ ಕಡಿದಿತ್ತೇ ಹೊರತು ಪಾರಂಪರಿಕ ಮತದಾರರನ್ನು ಸೆಳೆಯಲು ಸೋತಿತ್ತು. ಕನರ್ಾಟಕದಲ್ಲೂ ಅನೇಕರು ಬಿಜೆಪಿಯ ಸೋಲನ್ನು ಕಾಣೆಮೀನು ತಿಂದು ಸಂಭ್ರಮಿಸಿದ್ದರು. ಆದರೆ ತಿಂದ ಮೀನು ಜೀರ್ಣವಾಗುವ ಮುನ್ನವೇ ನಿತೀಶ್ ಲಾಲೂ ಜೊತೆಗೆ ಅಧಿಕಾರ ನಡೆಸಲು ಸಾಧ್ಯವಿಲ್ಲವೆಂದು ಮತ್ತೆ ಭಾಜಪದ ತೆಕ್ಕೆಗೆ ಬಂದಿದ್ದರು. ಚುನಾವಣಾ ಪೂರ್ವ ಮೈತ್ರಿ ಲಾಲೂ ಜೊತೆಗಾದರೆ ಚುನಾವಣೆ ನಂತರ ಮತ್ತೆ ಭಾಜಪವೇ ಅಧಿಕಾರದಲ್ಲಿತ್ತು. ಆದರೆ ಈ ಗೆಲುವಿನಿಂದ ಪ್ರೇರಣೆ ಪಡೆದ ಎಲ್ಲಾ ಪ್ರಾದೇಶಿಕ ಪಕ್ಷಗಳು ಒಂದು ಪಾಠವನ್ನಂತೂ ಕಲಿತವು. ಮೋದಿಯವರನ್ನು ಸೋಲಿಸಲು ತಮ್ಮೆಲ್ಲಾ ಆಕ್ರೋಶಗಳನ್ನು ಬದಿಗಿರಿಸಿ ಒಟ್ಟಾಗುವುದೊಂದೇ ಮಾರ್ಗ ಅಂತ. ಆಗ ಹುಟ್ಟಿಕೊಂಡಿದ್ದು ಮಹಾಘಟಬಂಧನದ ಕಲ್ಪನೆ. ಅಂದರೆ ಇವರೆಲ್ಲರ ಉದ್ದೇಶ ಮೋದಿಯನ್ನು ಸೋಲಿಸಿ ಮತ್ತೆ ಅಧಿಕಾರವನ್ನು ಪಡೆಯುವುದೇ ಹೊರತು ರಾಷ್ಟ್ರದ ಘನತೆಯನ್ನು ಹೆಚ್ಚಿಸುವ ದೃಷ್ಟಿಯಲ್ಲ!

ಘಟಬಂಧನದ ನೀತಿಯಿಂದ ಹೆದರಿರುವ ಮೋದಿ ಅನುಯಾಯಿಗಳು ಕೆಲವೊಮ್ಮೆ ಸಣ್ಣದೊಂದು ಲೆಕ್ಕಾಚಾರ ಹಾಕಲು ಸೋತುಬಿಡುತ್ತಾರೆ. ಹಿಂದಿ ಹೃದಯ ಭಾಗಗಳಲ್ಲಿ ಪ್ರಮುಖವಾಗಿರುವ ಬಿಹಾರದಲ್ಲಿ ನಿತೀಶ್ ಮೋದಿಯೊಂದಿಗಿದ್ದಾರೆ. ಮಧ್ಯಪ್ರದೇಶದಲ್ಲಿ ಮಹಾಘಟಬಂಧನ ಕಾಂಗ್ರೆಸ್ಸಿಗೆ ಕಿರಿಕಿರಿಯಾಗಬಹುದೇ ಹೊರತು ಬಿಜೆಪಿಗಲ್ಲ. ರಾಜಸ್ಥಾನದಲ್ಲೂ ಸೀಟು ಬೇಕೆಂದು ಕೇಳುತ್ತಿರುವ ಮಾಯಾವತಿ, 14 ರಾಜ್ಯಗಳಲ್ಲಿ ಸ್ಪಧರ್ಿಸುತ್ತೇವೆಂದು ಹೇಳಿರುವ ಮಮತಾ ಇವರೆಲ್ಲರೂ ಅಲ್ಲಿಯೂ ಪ್ರಧಾನಪಕ್ಷವಾಗಿರುವ ಕಾಂಗ್ರಸ್ಸಿಗೆ ಸಾಕಷ್ಟು ಸಮಸ್ಯೆ ಒಡ್ಡಬಲ್ಲರು. ಮಹಾರಾಷ್ಟ್ರದಲ್ಲಿ ಶಿವಸೇನಾ ಬಿಜೆಪಿಯೊಂದಿಗೆ ಗುದ್ದಾಡುವುದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾಗಿಯೇ ಹೊರತು ಪಕ್ಷದಿಂದ ಹೊರನಿಂತರೆ ಪಾರಂಪರಿಕ ಹಿಂದೂ ಮತಗಳನ್ನು ಕಳೆದುಕೊಳ್ಳುವ ಭಯ ಅದಕ್ಕೆ ಖಂಡಿತ ಇದೆ. ಹೀಗಾಗಿ ಲೋಕಸಭಾ ಚುನಾವಣೆಗೂ ಮುನ್ನ ಎಂದಿನಂತೆ ಶಿವಸೇನೆ ಬಿಜೆಪಿಯೊಂದಿಗಿದೆ. ಪಶ್ಚಿಮಬಂಗಾಳದಲ್ಲಿ ಮಹಾಘಟಬಂಧನ್ ಎಂದರೆ ದೀದಿಯೊಬ್ಬಳೆ. ಇತರೆಡೆಯೆಲ್ಲಾ ಎಡಪಕ್ಷಗಳು ಕಾಂಗ್ರೆಸ್ಸಿಗೆ ಜೋತುಕೊಂಡು ನಿಂತರೆ ಇಲ್ಲಿ ಮಾತ್ರ ದೀದಿಯೊಂದಿಗೆ ಸಂಬಂಧ ಸಾಧಿಸುವುದು ಅಸಾಧ್ಯವೇ ಸರಿ. ಅಂದರೆ ಮಹಾಘಟಬಂಧನದ ಸದಸ್ಯ ಪಕ್ಷಗಳೇ ಬಂಗಾಳದಲ್ಲಿ ಜಿದ್ದಾಜಿದ್ದಿಗೆ ಬೀಳಲಿವೆ. ದೆಹಲಿಯಲ್ಲಿ ತಿಪ್ಪರಲಾಗ ಹೊಡೆದರೂ ಜನ ಕಾಂಗ್ರೆಸ್ಸನ್ನು ನಂಬಲಾರರು. ಕೇಜ್ರಿವಾಲ್ ಅವರೊಂದಿಗೆ ಸೇರಿಕೊಳ್ಳುವುದರಿಂದ ತಾನೂ ಮುಳುಗುವನೇ ಹೊರತು ಜಯಶಾಲಿಯಾಗುವುದು ಅಸಾಧ್ಯ. ಇನ್ನು ಉತ್ತರಕ್ಕೆ ಹೋದಂತೆ ಅವೆಲ್ಲಾ ಏಕಪಕ್ಷಗಳ ಕಾರುಬಾರು. ಅಲ್ಲೆಲ್ಲಾ ನೇರ ಹಣಾಹಣಿ ಬಿಜೆಪಿ ಮತ್ತು ಆಯಾ ಪ್ರಾದೇಶಿಕ ಪಕ್ಷಗಳೊಂದಿಗೆ ಮಾತ್ರ. ದಕ್ಷಿಣಕ್ಕೆ ಬಂದರೆ ಕನರ್ಾಟಕದಲ್ಲಿ ಕಾಂಗ್ರೆಸ್ಸಿನ ಸಂಬಂಧದಿಂದ ದಳ ಅದಾಗಲೇ ಕಣ್ಣೀರು ಸುರಿಸುತ್ತಿದೆ. ಕಷ್ಟವಾದರೂ ಸರಿಯೇ ಕುಮಾರಣ್ಣ ಅಧಿಕಾರಕ್ಕೆ ಜೋತುಬಿದ್ದಿರುವುದು ದೇವೇಗೌಡರು ಪ್ರಧಾನಿಯಾಗಿಬಿಡುತ್ತಾರೆಂಬ ಒಂದೇ ಕಾರಣಕ್ಕೆ. ಆದರೆ ನೆನಪಿರಲಿ ಮುಲಾಯಂ, ಲಾಲೂ, ದೀದಿ, ಮಾಯಾವತಿ, ರಾಹುಲ್, ಶರತ್ ಪವಾರ್, ಶರದ್ ಯಾದವ್ ಇವರೆಲ್ಲರ ಸುದೀರ್ಘ ಆಕಾಂಕ್ಷೆಯ ನಡುವೆ ಪುಟ್ಟ ಪಕ್ಷವಾದ ಜೆಡಿಎಸ್ಗೆ ಅವಕಾಶ ಸಿಗುವುದು ಗಗನ ಕುಸುಮ. ಇನ್ನು ಹಿಂದುಗಳನ್ನು ಬೈದು ಹೋಮ-ಹವನಗಳನ್ನು ಮಾಡುತ್ತಲೇ ಇರುವ ದೇವೇಗೌಡರಿಗೆ ಅದೃಷ್ಟ ಒಲಿಯಬಹುದೆಂದು ನಿರೀಕ್ಷಿಸುತ್ತಾ ಕೂತಿರಬಕೇನೋ!

ನರೇಂದ್ರಮೋದಿಗೆ ಇವೆಲ್ಲಾ ಲೆಕ್ಕಾಚಾರ ಸ್ಪಷ್ಟವಾಗಿದೆ. ಮಹಾಘಟಬಂಧನ ಅವರಿಗೆ ಸವಾಲಾಗಬಹುದಾಗಿದ್ದು ಉತ್ತರಪ್ರದೇಶದಲ್ಲಿ ಮಾತ್ರ. ಅಲ್ಲಿ ಕಳೆದ ಬಾರಿಗಿಂತ 30 ಸೀಟುಗಳು ಕಡಿಮೆಯಾಗಬಹುದೆಂದು ಅಂದಾಜು ಮಾಡಿಕೊಂಡರೂ ಅದನ್ನು ಉಳಿಸಿಕೊಳ್ಳಲು ಬಡಿದಾಡುವುದಕ್ಕಿಂತ ದೇಶದ ಇತರೆಡೆಯಲ್ಲಿ 50 ಸೀಟುಗಳನ್ನು ಗಳಿಸುವ ಪ್ರಯತ್ನ ಮಾಡಿಬಿಟ್ಟರೆ ಮೋದಿ ನಿರಾತಂಕವಾಗಿ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಹೀಗಾಗಿಯೇ ಈ ಬಾರಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಮಹಾರ್ಯಾಲಿಗಳನ್ನು ಆಯೋಜಿಸುತ್ತಿರುವುದು. ಆ ರ್ಯಾಲಿಗಳಿಗೆ ಬರುತ್ತಿರುವ ಜನಗಳನ್ನು ನೋಡಿದರೆ, ಅಮಿತ್ಶಾ ಮುಖದಲ್ಲಿ ಮಿನುಗುತ್ತಿರುವ ಮಂದಹಾಸವನ್ನು ಗಮನಿಸಿದರೆ ಉತ್ತರಪ್ರದೇಶದಲ್ಲಿ ಕಳೆದ ಬಾರಿ ಆದಂತೆ ಈ ಬಾರಿ ಪಶ್ಚಿಮಬಂಗಾಳದಲ್ಲಾದರೂ ಅಚ್ಚರಿ ಪಡಬೇಡಿ. ಕೇರಳ-ತಮಿಳುನಾಡುಗಳಲ್ಲೂ ಈ ಬಾರಿ ಭರವಸೆಯ ವಾತಾವರಣ ಮೂಡಲಿದೆ. ಈಶಾನ್ಯ ರಾಜ್ಯಗಳಂತೂ ಮೋದಿಯವರ ಅಭಿವೃದ್ಧಿಯ ಕಾಣ್ಕೆಯನ್ನು ಕಂಡು ಬೆಕ್ಕಸ ಬೆರಗಾಗಿಬಿಟ್ಟಿವೆ. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿರುವ ಮೋದಿ ಈ ಎಲ್ಲಾ ಪ್ರದೇಶಗಳಲ್ಲೂ ಚುನಾವಣೆಗೆ ಮುನ್ನವೇ ಸಾಕಷ್ಟು ಓಡಾಟ ನಡೆಸುತ್ತಿದ್ದಾರೆ. ಅತ್ತ ಘಟಬಂಧನ್ನ ಸದಸ್ಯರು ಸೀಟುಗಳಿಗಾಗಿ ಕಿತ್ತಾಡುತ್ತಿದ್ದಾರೆ. ಇವರ ಸೀಟು ಹೊಂದಾಣಿಕೆಯ ಪ್ರಯತ್ನ ಮುಗಿಯುವ ವೇಳೆಗೆ ಮೋದಿ-ಅಮಿತ್ಶಾ ಜೋಡಿ ದೇಶದ ಅರ್ಧಭಾಗವನ್ನು ತಮ್ಮ ಪ್ರಚಾರದಿಂದ ತೆಕ್ಕೆಗೆ ಸೆಳೆದುಕೊಂಡುಬಿಟ್ಟಿರುತ್ತಾರೆ.

ಇವೆಲ್ಲದರ ನಡುವೆ ಮುಗಿಯಲಾರದ ಗೊಂದಲಕ್ಕೆ ಸಿಲುಕಿರುವುದು ಕಾಂಗ್ರೆಸ್ಸೇ. ರಾಹುಲ್ ಇನ್ನು ಕೆಲಸಕ್ಕೆ ಬರುವುದಿಲ್ಲವೆಂದು ಅವರಿಗೆ ಅರ್ಥವಾದ ಮೇಲೆ ಪ್ರಿಯಾಂಕಳನ್ನು ಕರೆತಂದಿದ್ದಾರೆ. ಆದರೆ ಆಕೆಯನ್ನು ಅಜ್ಜಿಯ ಮುಖ ಮುಂದಿರಿಸಿ ವೋಟು ಕೇಳಬೇಕೇ ಹೊರತು ಸ್ವಂತ ಬಲದ ಮೇಲೆ ಅಸಾಧ್ಯ. ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಂಡು ಘಟಬಂಧನದ ಚಚರ್ೆಯಿಂದ ಆಚೆಗಿಟ್ಟೇ ಮುಂದುವರೆಯುತ್ತಿದ್ದಾರೆ. ಒಟ್ಟಾರೆ ಈ ಮಹಾಕದನದಲ್ಲಿ ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗುವ ಲಕ್ಷಣ ಇರುವುದು ಕಾಂಗ್ರೆಸ್ಸಿಗೇ. ಕಾದು ನೋಡೋಣ.

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top