National

ಮಲ್ಯ, ಲಲಿತ್ ಹಿಡಿದು ತರುತ್ತಾರಾ ಮೋದಿ?

2019 ಕ್ಕೂ ಮುಂಚೆ ನರೇಂದ್ರಮೋದಿಯವರ ಮುಂದೆ ಇರುವ ಕೆಲವು ಸವಾಲುಗಳಲ್ಲಿ ಮಲ್ಯ, ನೀರವ್, ಲಲಿತ್ ಮೂವರನ್ನೂ ಎಳೆದುಕೊಂಡು ಬರುವುದು ಒಂದು. ಮೋದಿ ಹರಸಾಹಸ ಮಾಡುತ್ತಿದ್ದಾರೆ. ದೇಶ ಬಿಟ್ಟು ಓಡಿ ಹೋಗಿರುವ ಈ ಮೂವರನ್ನು ಎಳೆದು ತಂದುಬಿಟ್ಟರೆ ಕಾಂಗ್ರೆಸ್ಸಿಗೆ ಮೋದಿಯ ವಿರುದ್ಧ ಆರೋಪ ಮಾಡಲು ಇರುವ ದೊಡ್ಡದೊಂದು ಅಸ್ತ್ರವೇ ಇಲ್ಲವಾಗಿಬಿಡುತ್ತದೆ. ಇಷ್ಟಕ್ಕೂ ಈ ಮೂವರಿಗೂ ಹಣ ಕೊಟ್ಟಿದ್ದು ಕಾಂಗ್ರೆಸ್. ಅದರ ಲಾಭ ಪಡೆದಿದ್ದು ಕಾಂಗ್ರೆಸ್. ಮೋದಿ ಸಕರ್ಾರದ ಕಠಿಣ ನಿಯಮಗಳು ಅವರಿಂದ ಹಣವನ್ನು ಕಕ್ಕಿಸುತ್ತವೆಂದು ಗೊತ್ತಾದೊಡನೆ ಅವರು ದೇಶವನ್ನೇ ಬಿಟ್ಟು ಓಡಿ ಹೋಗಿದ್ದರು. ಈಗ ಕಾಂಗ್ರೆಸ್ಸು ಅವರು ದೇಶಬಿಟ್ಟು ಓಡಿ ಹೋಗಲು ಮೋದಿ ಅವಕಾಶ ಮಾಡಿಕೊಟ್ಟರೆಂದು ಕಣ್ಣೀರಿಡುತ್ತಿದೆ. ಅದರರ್ಥ ಈ ಐದು ವರ್ಷವೂ ಕಾಂಗ್ರೆಸ್ಸೇ ಇದ್ದಿದ್ದರೇ ಈ ಮೂವರೂ ಇಲ್ಲಿಯೇ ಇದ್ದು ಇನ್ನಷ್ಟು ಲೂಟಿ ಮಾಡಿಕೊಂಡು ಹಾಯಾಗಿರುತ್ತಿದ್ದರು ಅಂತಲಾ? 70 ವರ್ಷಗಳ ಕಾಲ ರಾಷ್ಟ್ರೀಯ ಪಕ್ಷವಾಗಿ ಬಾಳಿ ಬದುಕಿದ ಕಾಂಗ್ರೆಸ್ಸಿನ ದೈನೇಸಿ ಸ್ಥಿತಿ ಇದು. ಹಾಗಂತ ಮೋದಿ ಸುಮ್ಮನಿಲ್ಲ. ಅವರು ಈ ಮೂವರನ್ನೂ ಎಳೆದು ತಂದು ರಾಷ್ಟ್ರೀಯವಾಗಿ ಭಾಜಪದ, ಜಾಗತಿಕವಾಗಿ ಭಾರತದ ಗೌರವವನ್ನು ಹೆಚ್ಚಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ನರೇಂದ್ರಮೋದಿಯವರು ಯುರೋಪಿಯನ್ ಯುನಿಯನ್ ಪ್ರವಾಸ ಮಾಡಿದ್ದು ನಿಮಗೆ ನೆನಪಿರಬೇಕು. ಅಚಾನಕ್ಕಾದ ಇಂಗ್ಲೆಂಡಿನ ಭೇಟಿ ಎಲ್ಲರಿಗೂ ಅಚ್ಚರಿ ಹುಟ್ಟಿಸಿತ್ತು. ಅಲ್ಲಿನ ಪ್ರಧಾನಿ ತೆರೆಸಾ ಮೇ ಜೊತೆ ಅವರು ವ್ಯಾಪಾರ ವಹಿವಾಟುಗಳ ಕುರಿತಂತೆ ಸಾಕಷ್ಟು ಚಚರ್ೆ ಮಾಡುತ್ತಾರೆಂದು ಗೊತ್ತಿದ್ದರೂ ಈ ಹೊತ್ತಿನಲ್ಲಿ ಈ ಯಾತ್ರೆಯ ತುತರ್ು ಏನಿತ್ತೆಂಬುದು ಅಚ್ಚರಿಯೇ ಆಗಿತ್ತು. ಬ್ರಿಟನ್ ಯುರೋಪಿಯನ್ ಯುನಿಯನ್ನಿಂದ ಹೊರಬರಬೇಕೆಂದು ನಿಧರ್ಾರ ಮಾಡಿದಾಗಿನಿಂದಲೂ ಬಲು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದೆ. 2020 ರವರೆಗೆ ಯುರೋಪಿಯನ್ ಯುನಿಯನ್ ಖಚರ್ು ವೆಚ್ಚಗಳನ್ನು ನಿಭಾಯಿಸಬೇಕೆಂಬ ಕರಾರಿಗೆ ಸಹಿಯಾಗಿದ್ದರಿಂದ ಬ್ರಿಟನ್ 50 ಬಿಲಿಯನ್ ಪೌಂಡ್ಗಳಷ್ಟು ಹಣವನ್ನು ಕೊಡಬೇಕಾಗಿದೆ. ಯುನಿಯನ್ನಲ್ಲಿದ್ದಾಗ ಅದರ 28 ಸದಸ್ಯ ರಾಷ್ಟ್ರಗಳಲ್ಲಿ ಎಲ್ಲಿ ಬೇಕಾದರೂ ಹೋಗಿ ಉಳಿದುಕೊಳ್ಳುವ ಕೆಲಸ ಮಾಡುವ ಅವಕಾಶ ಪಡೆದಿದ್ದ ಬ್ರಿಟನ್ನಿನ ನಾಗರಿಕರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ಬ್ರಿಟನ್ನಿನ ಅನೇಕ ನಾಗರಿಕರು ಯುರೋಪಿಯನ್ ಯುನಿಯನ್ನ ಪಾಸ್ಪೋಟರ್್ ಉಳಿಸಿಕೊಳ್ಳಲೆಂದೇ ಐಲರ್ೆಂಡಿನ ಪಾಸ್ಪೋಟರ್್ ಪಡೆಯಲು ಹೆಣಗಾಡುತ್ತಿದ್ದಾರೆ. ಅವರ 44 ಪ್ರತಿಶತದಷ್ಟು ರಫ್ತು ನಡೆಯುತ್ತಿದ್ದುದೇ ಯುನಿಯನ್ನ ರಾಷ್ಟ್ರಗಳೊಂದಿಗೆ ಈಗ ಏಕಾಏಕಿ ಇವೆಲ್ಲಕ್ಕೂ ಹೊಡೆತ ಬೀಳಲಿದೆ. ಜೊತೆಗೆ ಗಡಿ ಸಮಸ್ಯೆಗಳು ಅಗತ್ಯಕ್ಕಿಂತಲೂ ಹೆಚ್ಚು ಉಲ್ಬಣವಾಗಲಿದೆ. ಒಟ್ಟಾರೆ ಬ್ರಿಟನ್ ಯಾವ ವೈಭವದಿಂದ ಮೆರೆದಿತ್ತೋ ಅದನ್ನು ಕಳೆದುಕೊಂಡು ಪ್ರಪಾತಕ್ಕೆ ಬೀಳಲಿದೆ. ಇವು ಸಾಲದೆಂಬಂತೆ ಕಿತ್ತು ತಿನ್ನುವ ವಲಸೆಗಾರರ ಸಮಸ್ಯೆಯೂ ಕೂಡ ಪರಿಸ್ಥಿತಿಯನ್ನು ಹದಗೆಡಿಸಿದೆ. ಈ ಹೊತ್ತಿನಲ್ಲಿ ಅವರ ಸಹಾಯಕ್ಕೆ ಬರಬಲ್ಲವರು ಭಾರತ-ಚೀನಾದಂತಹ ರಾಷ್ಟ್ರಗಳು ಮಾತ್ರ. ಮೋದಿಯವರ ಪಾಲಿಗೆ ಈಗ ಇದೇ ಟ್ರಂಪ್ ಕಾಡರ್್ ಕೂಡ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಅವರು ಇಂಗ್ಲೆಂಡಿಗೆ ಹೋಗಿದ್ದರು.

ಮೊದಲೆಲ್ಲ ಇತರೆ ರಾಷ್ಟ್ರಗಳೊಂದಿಗೆ ಮಾತನಾಡುವಾಗ ನಮ್ಮ ಧಾಟಿಯೇ ಬೇರೆ ಇರುತ್ತಿತ್ತು. ಈಗ ನಾವು ಮಾತನಾಡುವ ಶೈಲಿ ಬದಲಾಗಿದೆ. ಇಂಗ್ಲೆಂಡಿರಲಿ ಅಮೇರಿಕಾ ಇರಲಿ ಚೀನಾ-ರಷ್ಯಾಗಳೇ ಇರಲಿ ಭಾರತದ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡೇ ನಮ್ಮ ವಾದ ಚಚರ್ೆಗಳೆಲ್ಲವೂ. ನರೇಂದ್ರಮೋದಿ ಇಂಗ್ಲೆಂಡಿಗೆ ಹೋಗುವ ಮುನ್ನ ತೆರೆಸಾ ಮೇ ಭಾರತದೊಂದಿಗೆ ಮುಕ್ತ ವ್ಯಾಪಾರದ ಮಾತುಗಳನ್ನಾಡಿದ್ದರು. ಹೀಗಾಗಿ ನರೇಂದ್ರಮೋದಿಯವರೊಂದಿಗಿನ ಅವರ ಮಾತುಕತೆಗೆ ಬಹುವಾದ ಬೆಲೆ ಇತ್ತು. ಮಾತುಕತೆಯ ಮೇಜಿನ ಮುಂದೆ ಕುಳಿತಾಗ ನರೇಂದ್ರಮೋದಿ ವ್ಯಾಪಾರ ವಹಿವಾಟುಗಳಿಗೂ ಮುನ್ನ ಮಲ್ಯ, ಲಲಿತ್ ವಿಚಾರ ಪ್ರಸ್ತಾಪಿಸಿದ್ದರು. 1992 ರ ಭಾರತ-ಬ್ರಿಟನ್ ನಡುವಿನ ಎಕ್ಸ್ಟ್ರೆಡಿಶನ್ ಟ್ರೀಟಿ ನೆನಪಿಸಿದ ನರೇಂದ್ರಮೋದಿ ರೆಡ್ ಕಾರ್ನರ್ ನೋಟೀಸ್ ಮತ್ತು ವಾರೆಂಟ್ಗಳನ್ನು ಹೊಂದಿರುವ ಭಾರತದ ಅಪರಾಧಿಗಳನ್ನು ಹಸ್ತಾಂತರಿಸಬೇಕೆಂದು ವಿನಂತಿಸಿಕೊಂಡರು. ಸಹಜವಾದ ಬ್ರಿಟೀಷರ ಧಿಮಾಕಿನಿಂದ ತೆರೆಸಾ ಭಾರತದ ಜೈಲುಗಳು ಸಮರ್ಪಕವಾಗಿಲ್ಲ. ಅಂತರರಾಷ್ಟ್ರೀಯ ಮಟ್ಟಕ್ಕೆ ನಿಲುಕುವುದಿಲ್ಲ ಎಂಬ ಮಾತುಗಳನ್ನಾಡಿದೊಡನೆ ಮೋದಿ ಸ್ವಲ್ಪ ಖಾರವಾಗಿಯೇ ಉತ್ತರಿಸುತ್ತಾ, ‘ಭಾರತದ ಇದೇ ಜೈಲುಗಳಲ್ಲಿ ನೀವು ಮಹಾತ್ಮಾ ಮತ್ತು ನೆಹರೂರವರನ್ನು ಇಟ್ಟಿದ್ದನ್ನು ಮರೆತಿರೇನು?’ ಎಂದುಬಿಟ್ಟರು. ಬ್ರಿಟನ್ನಿನ ಪ್ರಧಾನಿಗೆ ಆಗಿರಬಹುದಾದ ಮುಖಭಂಗವನ್ನು ಊಹಿಸಿ ನೋಡಿ. ಆನಂತರದ ಮಾತುಕತೆಗಳು ಯಾವ ದಿಕ್ಕಿನಲ್ಲಿರಬಹುದೆಂದು ನಾವು ಅಂದಾಜು ಮಾಡಬಹುದು. ಭಾರತ ಬ್ರಿಟನ್ನಿನೊಂದಿಗೆ ಯಾವ ಮಹತ್ವದ ವಿಚಾರ ಪ್ರಸ್ತಾಪಕ್ಕೂ ನಿರಾಕರಿಸಿಬಿಟ್ಟತು. 128 ಕೋಟಿ ಜನರ ಪ್ರಧಾನಿಯಾಗಿ ನರೇಂದ್ರಮೋದಿ ಬ್ರಿಟನ್ನಿನೆದುರು ಈಗ ನಿಂತಿದ್ದರು. ಅವರು ಗಾಂಧೀಜಿಯವರಂತೆ ಹೃದಯ ಮುಂದಿಟ್ಟು ಒಪ್ಪಂದ ಮಾಡಿಕೊಳ್ಳುವ ವ್ಯಕ್ತಿತ್ವದವರಾಗಿರಲಿಲ್ಲ. ಬದಲಿಗೆ ಸುಭಾಷ್ಬೋಸರು ಹಿಟ್ಲರ್ನೊಂದಿಗೆ ನಡೆಸಿದ ವಾತರ್ಾಲಾಪದಂತೆ ತೆರೆಸಾ ಮೇಯೊಂದಿಗೆ ನಡೆದುಕೊಂಡರು.

ಇಷ್ಟಕ್ಕೂ 2 ಶತಮಾನಗಳ ಕಾಲ ಆಳಿದವರೆಂಬ ಧಿಮಾಕು ಬ್ರಿಟನ್ನಿನವರಿಗೆ ಇಂದಿಗೂ ಇದೆ. ಭಾರತ ಸ್ವಾಭಿಮಾನಿಯಾಗಿ ಎದುರು ಕುಳಿತು ಮಾತನಾಡುವುದನ್ನು ಅದು ಇಂದಿಗೂ ಧಿಕ್ಕರಿಸುತ್ತದೆ. ಎಕ್ಸ್ಟ್ರೆಡಿಶನ್ ಟ್ರೀಟಿ 92 ರಲ್ಲೇ ಆಗಿದ್ದರೂ ಅದಾದ 23 ವರ್ಷಗಳ ನಂತರ ಸಮೀರ್ಭಾಯ್ ವಿನೂಭಾಯ್ ಪಟೇಲ್ರನ್ನು 2016 ರಲ್ಲಿ ಭಾರತಕ್ಕೆ ಕಳಿಸಿಕೊಡಲಾಗಿತ್ತು. ಅದಕ್ಕೂ ಮೊದಲು ಗುಲ್ಷನ್ ಕುಮಾರ್ ಹತ್ಯೆಯಲ್ಲಿ ಭಾಗಿಯಾಗಿದ್ದ ನದೀಂ, 93 ರ ಗುಜರಾತ್ ಬ್ಲಾಸ್ಟ್ ಕೇಸಿನ ಅಪರಾಧಿಯಾಗಿದ್ದ ಟೈಗರ್ ಹನೀಫ್, ನೌಕಾಸೇನೆಯ ಮಾಹಿತಿಯನ್ನು ಬಹಿರಂಗ ಪಡಿಸಿದ ರವಿಶಂಕರ್ ಇವರೆಲ್ಲರನ್ನೂ ಭಾರತಕ್ಕೆ ಮರಳಿಸುವಂತೆ ಕೇಳಿಕೊಂಡಿದ್ದ ಭಾರತದ ಯಾವ ಕೋರಿಕೆಯನ್ನು ಬ್ರಿಟನ್ ಮನ್ನಿಸಿರಲಿಲ್ಲ. ಸಮೀರ್ಭಾಯ್ ಪಟೇಲ್ರನ್ನು ಅವರು ಮರಳಿಸಿದ್ದು ಬಹುಶಃ ಆತ 2002 ರ ಗುಜರಾತ್ ದಂಗೆಯಲ್ಲಿ ಭಾಗವಹಿಸಿದ್ದ ಎಂಬ ಕಾರಣಕ್ಕಿರಬಹುದು. ಬ್ರಿಟನ್ನಿನ ಮುಸ್ಲೀಂ ಓಲೈಕೆ ಭಾವನೆ ತನ್ನನ್ನೇ ನುಂಗುವಷ್ಟು ಬೆಳೆದುಬಿಟ್ಟಿದೆ ಎನ್ನುವುದು ಅದಕ್ಕೆ ಅರಿವಾಗುತ್ತಿಲ್ಲ. ಅಲ್ಲಿನ ನ್ಯಾಯಾಲಯಗಳ ಕಾರ್ಯ ಶೈಲಿ ಥೇಟು ಭಾರತದ್ದೇ. ದಾವೂದ್ ಇಬ್ರಾಹಿಂ ನ ಬಂಟನಾಗಿದ್ದ ಟೈಗರ್ ಹನೀಫ್ನನ್ನು ಭಾರತಕ್ಕೊಪ್ಪಿಸಲು ಜಿಲ್ಲಾ ನ್ಯಾಯಾಲಯಗಳು ಒಪ್ಪಿಗೆ ಸೂಚಿಸಿದ್ದನ್ನು ಅಲ್ಲಿನ ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಹನೀಫ್ ಅಷ್ಟಕ್ಕೇ ಸುಮ್ಮನಾಗದೇ ಅಂದು ಗೃಹ ಕಾರ್ಯದಶರ್ಿಯಾಗಿದ್ದ ತೆರೆಸಾ ಮೇ ಅವರಿಗೆ ಹಸ್ತಾಂತರಿಸದಿರುವಂತೆ ಮನವಿಮಾಡಿಕೊಂಡ. ಇಂದು ಆಕೆ ಪ್ರಧಾನಮಂತ್ರಿಯಾಗಿದ್ದಾರೆ. ಆತನ ಕೋರಿಕೆ ಮಾತ್ರ ಕಡತಗಳಲ್ಲೇ ಕೊಳೆಯುತ್ತಿದೆ. ಈಗಿನ ಗೃಹ ಕಾರ್ಯದಶರ್ಿ ಈ ಕೋರಿಕೆಯನ್ನು ಒಪ್ಪಿಕೊಂಡರೂ ಆತ ಸವರ್ೋಚ್ಚ ನ್ಯಾಯಾಲಯಕ್ಕೆ ಹೋಗುತ್ತಾನೆ. ಅಲ್ಲಿಯೂ ಅದು ವರ್ಷಗಟ್ಟಲೆ ವಿಚಾರಣೆಗೆ ಬರದೇ ಹಾಗೆಯೇ ಉಳಿಯುತ್ತದೆ. ಅಷ್ಟರೊಳಗೆ ಒಂದೋ ಆತನೇ ಸತ್ತಿರುತ್ತಾನೆ ಅಥವಾ ಭಾರತ ಅವನನ್ನು ಮರೆತಿರುತ್ತದೆ. ಮಲ್ಯನಿಗೂ ಇದು ಬಲು ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಆತ ಕಣ್ಣಾಮುಚ್ಚಾಲೆ ಆಡುತ್ತಲೇ ಇದ್ದಾನೆ. ಮೋದಿ ಕೂಡ ಕಡಿಮೆಯವರಲ್ಲ. ಅಲ್ಲಿನ ಕಾನೂನುಗಳಲ್ಲಿ ಹೋರಾಟಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಟ್ಟು ಅದೂ ಸಾಲದೆಂಬಂತೆ ಉನ್ನತ ಮಟ್ಟದ ಒತ್ತಡವನ್ನು ತರಲೆಂದು ಪ್ರಧಾನಮಂತ್ರಿಯೊಂದಿಗೂ ಮಾತನಾಡಿದ್ದಾರೆ. ಆಕೆ ಧಿಮಾಕಿನ ಬುದ್ಧಿ ತೋರಿದೊಡನೆ ಅದಕ್ಕೆ ಸೊಪ್ಪು ಹಾಕದೇ ಅಲ್ಲಿಂದ ಎದ್ದು ಬಂದಿದ್ದಾರೆ.

ಮೋದಿ ಇಷ್ಟಕ್ಕೇ ಸುಮ್ಮನಾಗುತ್ತಾರೆಂದುಕೊಂಡರೆ ಖಂಡಿತ ಸುಳ್ಳು. ಆನಂತರವೇ ಅವರು ಯುರೋಪಿಯನ್ ಯುನಿಯನ್ನ ಇತರೆ ರಾಷ್ಟ್ರಗಳನ್ನು ಭೇಟಿ ಮಾಡಿ ಅಲ್ಲಿಂದ ಸಾಕಷ್ಟು ಬೆಂಬಲವನ್ನು ಪಡೆದುಕೊಂಡು ಬಂದಿದ್ದಾರೆ. ಜರ್ಮನಿಯ ಏಂಜಲಾ ಮಾಕರ್ೆಲ್ರನ್ನು ಯುರೋಪಿಯನ್ ಯುನಿಯನ್ ಪ್ರಭಾವಿ ನಾಯಕಿ ಎಂದೆಲ್ಲಾ ಬಣ್ಣಿಸಿ ಬಂದಿದ್ದಾರೆ. ಇದು ಸಹಜವಾಗಿಯೇ ಬ್ರಿಟನ್ನನ್ನು ಎದುರಿಸುವ ಪರಿ. ಬ್ರೆಕ್ಸಿಟ್ನ ಕಿರಿಕಿರಿಯಿಂದ ಅದಾಗಲೇ ನೊಂದಿರುವ ಬ್ರಿಟನ್ ಗೆ ನರೇಂದ್ರಮೋದಿಯವರ ಈ ನಡೆ ಅಚ್ಚರಿಯಷ್ಟೇ ಅಲ್ಲ ಕಿರಿಕಿರಿಯೂ ಆಗಿರಲು ಸಾಕು. ತಾವೇ ರೂಪಿಸಿಕೊಟ್ಟ ಶಿಕ್ಷಣ, ತಾವೇ ಅಡಿಪಾಯ ಹಾಕಿಕೊಟ್ಟ ನ್ಯಾಯವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ರಾಜಕೀಯ ವ್ಯವಸ್ಥೆ ಇವೆಲ್ಲವುಗಳನ್ನು ಹೊಂದಿರುವ ರಾಷ್ಟ್ರವೊಂದು ತನ್ನನ್ನು ಹೀಗೆ ಎದುರಿಸುವುದನ್ನು ಬ್ರಿಟನ್ ಸಹಿಸಿತಾದರೂ ಹೇಗೆ? ಅದು ಪ್ರತಿಭಟನೆ ವ್ಯಕ್ತಪಡಿಸದೇ ಬಿಡಲಿಲ್ಲ. ಭಾರತೀಯ ವಿದ್ಯಾಥರ್ಿಗಳಿಗಾಗಿ ಇರುವ ಟೈರ್-4 ವೀಸಾ ನೀತಿಯನ್ನು ಭಾರತೀಯರಿಗೆ ಬಲು ಕಠಿಣಗೊಳಿಸಿ ಚೀನಾ-ಸೆಬರ್ಿಯಾದಂತಹ ರಾಷ್ಟ್ರಗಳಿಗೆ ಬೇಕೆಂತಲೇ ಮುಕ್ತ ಮಾಡಿತು. ಭಾರತದ ಎಡಪಂಥೀಯ ಪತ್ರಕರ್ತರು ಮೋದಿ ವಿರೋಧಿ ಪಾಳಯದಲ್ಲಿ ಬಲವಾಗಿ ಗುರುತಿಸಿಕೊಂಡ ವಿನೋದ್ ದುವಾರಂತಹ ‘ದಿ ವೈರ್’ನ ಫುಲ್ ಟೈಮ್ ಪತ್ರಕರ್ತರು ಈ ವಿಚಾರವನ್ನು ನರೇಂದ್ರಮೋದಿಯವರ ಸೋಲೆಂದು ಬಿಂಬಿಸಲು ಪ್ರಯತ್ನಿಸಿದರು. ಆದರೆ ಅಚ್ಚರಿಯೇನು ಗೊತ್ತೇ? ಇದರಿಂದ ಭಾರತಕ್ಕೆ ನಷ್ಟವಾಗುವ ಪ್ರಮೇಯವೇ ಇರಲಿಲ್ಲ. ಬ್ರಿಟನ್ ಈ ನಿರ್ಣಯ ಕೈಗೊಳ್ಳುವುದಕ್ಕೂ ಮುನ್ನವೇ ಕಳೆದ 5 ವರ್ಷಗಳಲ್ಲಿ ಆ ದೇಶಕ್ಕೆ ಹೋಗುವ ಭಾರತೀಯರ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. 2017 ಡಿಸೆಂಬರ್ ನ ಅಂಕಿ ಅಂಶದ ಪ್ರಕಾರ ಕಳೆದ 5 ವರ್ಷಗಳಲ್ಲಿ ಅಲ್ಲಿಗೆ ಅಧ್ಯಯನಕ್ಕೆಂದು ಹೋಗುವ ವಿದ್ಯಾಥರ್ಿಗಳ ಪ್ರಮಾಣ ಪ್ರತಿಶತ 44 ರಷ್ಟು ಕಡಿಮೆಯಾಗಿದೆ. 2010 ರಲ್ಲಿ 60,000 ದಷ್ಟು ಭಾರತೀಯರು ಅಲ್ಲಿ ಅಧ್ಯಯನಕ್ಕೆ ಹೋಗುತ್ತಿದ್ದರೆ ಕಳೆದ ವರ್ಷ ಆ ಸಂಖ್ಯೆ 14000 ದಷ್ಟಿತ್ತು. 2016 ರಲ್ಲಿ ಇದಕ್ಕಿಂತಲೂ ಕಡಿಮೆ ಇದ್ದುದನ್ನು ಅಂಕಿಅಂಶಗಳು ಗುರುತಿಸುತ್ತವೆ. ಇದೇ ವರ್ಷ ಒಂದು ಲಕ್ಷ ವಿದ್ಯಾಥರ್ಿಗಳು ಕೆನೆಡಾಕ್ಕೆ ಅಧ್ಯಯನಕ್ಕೆಂದು ಹೋಗಿದ್ದರು. ಈ ವಿಚಾರವನ್ನು ಬ್ರಿಟನ್ನಿನ ಹೌಸ್ ಆಫ್ ಲಾಡ್ಸರ್್ನಲ್ಲಿ ಕರಣ್ ಬಿಲಿ ಮೋರಿಯಾ ಬಿಚ್ಚಿಟ್ಟು ಭಾರತೀಯ ವಿದ್ಯಾಥರ್ಿಗಳಿಗೆ ಬೇಕಾದ ಪೂರಕ ವಾತಾವರಣವನ್ನು ನಿಮರ್ಿಸಿಕೊಡದಿದ್ದರೆ ಭಾರತ-ಬ್ರಿಟನ್ನೊಂದಿಗೆ ಮುಕ್ತ ವಹಿವಾಟು ಅಸಾಧ್ಯ ಎಂದು ಎಚ್ಚರಿಸಿದ್ದಾರೆ. ಬ್ರಿಟನ್ನಿನ ಬಿಸಿನೆಸ್ ಸೆಕ್ರೆಟರಿ ವಿನ್ಸ್ ಕ್ಯಾಬಲ್ ಅಂತರರಾಷ್ಟ್ರೀಯ ವಿಚಾರ ಸಂಕೀರ್ಣವೊಂದರಲ್ಲಿ ಮಾತನಾಡುತ್ತ ಬ್ರಿಟನ್ನಿಗೆ ಇನ್ನು ಮುಂದೆ ಭಾರತೀಯ ವಿದ್ಯಾಥರ್ಿಗಳು ಬೇಕಾಗಿಲ್ಲ ಎಂಬ ಸಂದೇಶವನ್ನು ನಾವು ಕಳಿಸುತ್ತಿರುವುದು ಖಂಡಿತ ದೇಶಕ್ಕೆ ಒಳಿತಾಗಲಾರದು ಎಂಬ ಎಚ್ಚರಿಕೆಂನ್ನು ಅಲ್ಲಿನ ಪ್ರಧಾನಿಗೆ ಕೊಟ್ಟಿದ್ದಾರೆ. ಅಲ್ಲಿನ ಭಾರತೀಯ ವಿದ್ಯಾಥರ್ಿಗಳ ಸಂಘಟನೆಯೂ ಕೂಡ ಬ್ರಿಟನ್ನಿನ ಈ ನಿರ್ಣಯವನ್ನು ಕಟುವಾಗಿ ಟೀಕಿಸಿ ಇದು ಭಾರತೀಯರ ಮೇಲೆ ಬ್ರಿಟನ್ ಮಾಡುತ್ತಿರುವ ಪ್ರಹಾರ ಎಂದಿದ್ದಾರೆ. ಇವ್ಯಾವುವೂ ತೆರೆಸಾ ಮೇಗೆ ಸಂತೋಷ ಕೊಡುವ ಸುದ್ದಿಗಳಲ್ಲ. ಆಕೆ ಬಡವನ ಕೋಪವನ್ನು ದವಡೆಯ ಮೇಲೆ ತೀರಿಸಿಕೊಂಡಂತೆ ನರೇಂದ್ರಮೋದಿಯವರೊಂದಿಗೆ ಒಪ್ಪಂದದಲ್ಲಿ ಗೆಲ್ಲಲಾಗದ ಕೋಪವನ್ನು ವಿದ್ಯಾಥರ್ಿಗಳ ಮೇಲೆ ತೀರಿಸಿಕೊಳ್ಳಲು ಹೊರಟಿದ್ದಾರೆ. ಭಾರತ ಬಗ್ಗುವ ಲಕ್ಷಣಗಳಂತೂ ಸದ್ಯಕ್ಕೆ ಕಾಣುತ್ತಿಲ್ಲ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾವು ಜೋರಾಗುತ್ತಿದೆ. ಮೋದಿ ಮಧ್ಯಪ್ರದೇಶ, ರಾಜಸ್ತಾನ ಚುನಾವಣೆಗಳನ್ನೂ ಕೂಡ ಸವಾಲಾಗಿಯೇ ಸ್ವೀಕರಿಸಬೇಕಿದೆ. ಈ ರಾಜ್ಯಗಳಲ್ಲಿ ಸಕರ್ಾರ ಪುನರ್ರಚಿಸಲು ಸೋತರೆ ಅದನ್ನು 2019 ರ ಚುನಾವಣೆಯ ದಿಕ್ಸೂಚಿ ಎಂದೇ ಬುದ್ಧಿ ಜೀವಿಗಳು ಷರಾ ಬರೆದುಬಿಡುತ್ತಾರೆ. ಆ ಚುನಾವಣೆಗಳಿಗೂ ಮುನ್ನ ಬಹು ದೊಡ್ಡ ಸದ್ದು ಮಾಡಲೇಬೇಕಿದೆ. ಅದಕ್ಕೆ ಅವರೂ ಬಿಟ್ಟೂ ಬಿಡದ ಪ್ರಯತ್ನದಲ್ಲಿ ತಲ್ಲೀನರಾಗಿದ್ದಾರೆ. ಹಾಗಂತ ಭಾರತದ ಘನತೆ-ಗೌರವಗಳನ್ನು ಬಲಿ ಕೊಟ್ಟು ತಲೆತಗ್ಗಿಸಿ ನಿಂತು ಇಂತಹುದೊಂದು ಗೆಲುವು ಸಾಧಿಸುವ ಅಗತ್ಯ ಅವರಿಗಿಲ್ಲ. ಚೀನಾ ಜಗತ್ತನ್ನು ತನ್ನ ಧನಬಲ ಮತ್ತು ಮಾನವ ಸಂಪನ್ಮೂಲದ ಮೇಲಿರುವಂತಹ ಅಧಿಕಾರ ಬಲದಿಂದಲೇ ಗೆಲ್ಲುತ್ತಿದೆ. ನಮ್ಮಲ್ಲಿನ್ನೂ ಹಾಗಿಲ್ಲ. ಪಾಕಿಸ್ತಾನದ ಮೇಲೆ ಸಜರ್ಿಕಲ್ ಸ್ಟ್ರೈಕ್ ನಡೆಸಿದಾಗಲೂ ಸಾಕ್ಷಿ ಕೇಳುವ ಕೇಜ್ರಿವಾಲ್ ಇದ್ದಾರೆ. ಭಾರತದ ಸೈನಿಕರಿಗಿಂತ ಭಯೋತ್ಪಾದಕರು ವಾಸಿ ಎನ್ನುವ ಗುಲಾಂ ನಬಿ ಆಜಾದ್ರಂತಹ ಕಾಂಗ್ರೆಸ್ ನಾಯಕರಿದ್ದಾರೆ. ನಮ್ಮ ಅವಿಭಾಜ್ಯ ಅಂಗವಾದ ಕಾಶ್ಮೀರವನ್ನು ಸ್ವತಂತ್ರವಾಗಿಸಬೇಕೆಂದು ಹೇಳುವ ಸೈಫುದ್ದೀನ್ ಸೋಜ್ರಂತಹ ನಾಯಕರಿದ್ದಾರೆ. ಮುಸಲ್ಮಾನರ ವೋಟು ಪಡೆಯಲೆಂದು ಹಿಂದೂ ಭಯೋತ್ಪಾದನೆ ಎಂಬ ಇಲ್ಲದ ಕಲ್ಪನೆಯೊಂದನ್ನು ಸೃಷ್ಟಿ ಮಾಡಿ ದೇಶದ ಭದ್ರತೆಗೆ ಭಂಗ ತರುವ ಪಕ್ಷ ಇದೆ. ಇವೆಲ್ಲದರ ನಡುವೆ ಭಾರತವನ್ನು ಉಳಿಸಿಕೊಳ್ಳಲು ಆತ್ಮಗೌರವವನ್ನು ಕಾಪಾಡಿಕೊಳ್ಳಲು ಬಲುವಾಗಿ ಹೆಣಗಾಡಬೇಕಿದೆ. ಇದೊಂದು ಬಗೆಯಲ್ಲಿ ಟೈಟ್ ರೋಪ್ ವಾಕ್. 2019ರಲ್ಲೂ ಮೋದಿ ಬಹುಮತದೊಂದಿಗೆ ಗೆದ್ದರೆಂದರೆ ಇನ್ನು ಮುಂದೆ ಬ್ರಿಟನ್ ನಮ್ಮೊಂದಿಗೆ ಈ ಧಾಟಿಯಲ್ಲಿ ಮಾತನಾಡಲಾರದು. ಹೀಗಾಗಿ ಜವಾಬ್ದಾರಿ ನರೇಂದ್ರಮೋದಿಯವರ ಮೇಲಲ್ಲ. ನಮ್ಮ ಹೆಗಲ ಮೇಲೇ ಹೆಚ್ಚಿದೆ.

Click to comment

Leave a Reply

Your email address will not be published. Required fields are marked *

Most Popular

To Top