National

ಮತ್ತೆ ಜಾಗೃತರಾದ ಜೀವಪರ ಅತೃಪ್ತ ಆತ್ಮಗಳು!

ಕೆಲವು ದಿನಗಳ ಹಿಂದಷ್ಟೇ ಸುಮಾರು ನೂರು ಸಿನಿಮಾ ನಿರ್ಮಾಪಕರು ಪ್ರಜಾಪ್ರಭುತ್ವವನ್ನು ರಕ್ಷಿಸಿ ಎಂದು ಕೇಳಿಕೊಳ್ಳುತ್ತಾ ನರೇಂದ್ರಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಲು ವೋಟು ಮಾಡಿ ಎಂದು ವರದಿಯೊಂದನ್ನು ಬಿಡುಗಡೆ ಮಾಡಿದ್ದು ನಿಮಗೆ ನೆನಪಿರಬೇಕು. ಇದೀಗ ಸುಮಾರು 200 ಬರಹಗಾರರು ಸರ್ಕಾರವನ್ನು ಬದಲಿಸಿ, ನರೇಂದ್ರಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ತಮ್ಮದೇ ವರದಿಯೊಂದನ್ನು ಬಿಡುಗಡೆಗೊಳಿಸಿದ್ದಾರೆ.
ಈ ಇನ್ನೂರು ಜನರಲ್ಲಿ ಕೆಲವರು ತಮ್ಮ ಎಡಪಂಥೀಯ, ಒಡೆದು ಆಳುವ ನೀತಿಯ ಬರಹಕ್ಕೆ ಪ್ರಸಿದ್ಧರು. ಕೆಲವರ ಮಾಹಿತಿ ಇಲ್ಲಿದೆ ನೋಡಿ –
1. ಆನಂದ್ ತೇಲ್‌ತುಂಬ್ಡೆ:
ಈತ ಭೀಮಾ ಕೊರೆಂಗಾವ್ ಹಿಂಸಾಚಾರ ಪ್ರಕರಣದಲ್ಲಿ ಪುಣೆ ಪೊಲೀಸರು ಬಂಧಿಸಿದ ಅದೇ ವ್ಯಕ್ತಿ. ಆತನಿಗೆ ಜಾಮೀನು ನಿರಾಕರಿಸಿದ ವಿಶೇಷ ನ್ಯಾಯಮೂರ್ತಿಗಳಾದ ಕೆ.ಡಿ ವಡನೆಯವರು ಭೀಮಾ ಕೊರೆಂಗಾವ್ ಪ್ರಕರಣದಲ್ಲಿ ಈತನ ಪಾತ್ರವಿರುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ ಎಂಬ ವರದಿಯನ್ನು ನೀಡಿದ್ದರು.
2. ಮೃನಾಲ್ ಪಾಂಡೆ:
ಮೃನಾಲ್ ಪಾಂಡೆ ನ್ಯಾಷನಲ್ ಹೆರಾಲ್ಡ್‌ನ ಸಂಪಾದಕೀಯ ಸಲಹೆಗಾರರು ಮತ್ತು ಕಾಂಗ್ರೆಸ್ಸಿನ ಮೌತ್‌ಪೀಸ್.‌ ಈಕೆಗೆ 2006 ರಲ್ಲಿ ಕಾಂಗ್ರೆಸ್ಸು ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತ್ತು. 2010 ರಲ್ಲಿ ಯುಪಿಎ ಸರ್ಕಾರವಿದ್ದ ಸಮಯದಲ್ಲಿ ಪ್ರಸಾರ ಭಾರತಿಯ ಮುಖ್ಯಸ್ಥರಾಗಿದ್ದರು. ಇತ್ತೀಚೆಗಷ್ಟೇ ನರೇಂದ್ರಮೋದಿಯವರ ವಿರುದ್ಧ ಅತ್ಯಂತ ಕೆಟ್ಟ ಹೇಳಿಕೆಯನ್ನು ನೀಡಿ ಪ್ರಚಾರ ಗಿಟ್ಟಿಸಿಕೊಂಡಿದ್ದಳು ಈಕೆ.
3. ಹರ್ಷ್ ಮಂದರ್:
ಸೋನಿಯಾರ ರಾಷ್ಟ್ರೀಯ ಸಲಹೆಗಾರರ ಕಮಿಟಿಯಲ್ಲಿ ಈತ ಕಾರ್ಯನಿರ್ವಹಿಸಿದ್ದ. ಈ ಹಿಂದೆ ಮತಾಂತರವನ್ನು ತಡೆಗಟ್ಟುವ ಕಾನೂನುಗಳ ಕುರಿತು ಅಪಹಾಸ್ಯ ಮಾಡಿದ್ದ. ಎಲ್‌ಇಟಿ ಭಯೋತ್ಪಾದಕಿ ಇಶ್ರತ್ ಜಹಾನ್ ಪರ ಬರೆಯುತ್ತಿದ್ದ ಜೀವಪರ ಹೋರಾಟಗಾರನೀತ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಈತನ ಬರಹವನ್ನು ಹಂಚಿಕೊಂಡು ಪಾಕಿಸ್ತಾನವನ್ನು ಸಮರ್ಥಿಸಿಕೊಳ್ಳುತ್ತಾರೆ. ಈತನ ಸ್ವಯಂ ಸೇವಾ ಸಂಸ್ಥೆ ಸಾಕಷ್ಟು ವಿದೇಶೀ ಹಣವನ್ನು ಗಳಿಸಿದೆ.
4. ರೊಮಿಲಾ ಥಾಪರ್:
ಭೀಮಾ ಕೊರೆಂಗಾವ್ ಪ್ರಕರಣದಲ್ಲಿ ಬಂಧಿತರಾದ ಐವರು ಅರ್ಬನ್ ನಕ್ಸಲರ ಪರ ಅರ್ಜಿಯನ್ನು ಸಲ್ಲಿಸಿದ್ದು ಈಕೆಯೇ. ತನ್ನ ಬರಹಗಳಲ್ಲಿ ಈಕೆ ಹಿಂದೂ ವಿರೋಧಿ ನೀತಿಯನ್ನೇ ಅಳವಡಿಸಿಕೊಂಡಿದ್ದಾರೆ. ಇತಿಹಾಸಕಾರರೆಂದು ಹೆಸರು ಪಡೆದಿರುವ ಇವರು ಬರೆಯುವ ಇತಿಹಾಸ ಭಾರತದ ವಿರುದ್ಧವೇ ಇರುತ್ತದೆ.
5. ಅರುಂಧತಿ ರಾಯ್:
ನಾಗರಿಕರನ್ನು ಕೊಲ್ಲುವ ಮಾವೋವಾದಿಗಳನ್ನು ಈಕೆ ಕೈಯಲ್ಲಿ ಗನ್ನು ಹಿಡಿದಿರುವ ಗಾಂಧಿಗಳೆಂದು ಕರೆಯುತ್ತಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಲ್ಲವೆಂದು ಈಕೆ ಈ ಹಿಂದೆ ಹೇಳಿದ್ದಳು.
ಇದರೊಡನೆ ಹಿಂದೂ ವಿರೋಧಿ ಹೇಳಿಕೆ ನೀಡಿ ಪ್ರಖ್ಯಾತರಾದ ಸಂಗೀತಗಾರ ಟಿ.ಎಮ್ ಕೃಷ್ಣ, ನೆಹರೂವಿನ ಸಂಬಂಧಿ, ಅಸಹಿಷ್ಣುತೆಯ ನಾಟಕವಾಡಿ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸಿದ ನಯನತಾರಾ ಸೆಹ್ಗಲ್‌ರೂ ಇದ್ದಾರೆ.
ಹೀಗೆ ಈ ಬರಹಗಾರರರಲ್ಲಿ ಇರುವವರೆಲ್ಲ ಕಾಂಗ್ರೆಸ್ಸಿನ ಬೂಟು ನೆಕ್ಕುವ, ಭಯೋತ್ಪಾದಕ, ಮಾವೋವಾದಿಗಳನ್ನು ಸಮರ್ಥಿಸಿಕೊಳ್ಳುತ್ತಿದ್ದ ಅರ್ಬನ್ ನಕ್ಸಲರೇ ಎಂದು ಹೇಳಬಹುದು.
Click to comment

Leave a Reply

Your email address will not be published. Required fields are marked *

Most Popular

To Top