National

ಮತಾಂಧರಿಗೆ ಕೊರೋನಾ ಕಾಲದಲ್ಲೂ ಸುಗ್ಗಿ!

ಮೇಲು-ಕೀಳು, ಬಡವ-ಬಲ್ಲಿದ ಎಂಬೆಲ್ಲ ಭೇದವನ್ನು ಪುಟ್ಟದೊಂದು ವೈರಸ್ ಅಳಿಸಿಹಾಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೌಢ್ಯದಲ್ಲೇ ಕೈತೊಳೆಯುತ್ತಿದ್ದವರು ಅದರಿಂದ ಹೊರಬರಲು ಇದೊಂದು ಅಪರೂಪದ ಅವಕಾಶ. ಬಹುಶಃ ನಿಮಗೆ ನೆನಪಿರಬೇಕು. ವುಹಾನಿನಲ್ಲಿ ಕೊರೋನಾ ಹಬ್ಬಲು ಆರಂಭಿಸಿದಾಗ ಅದರ ವರದಿಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆವು. ಮುಟ್ಟಿದರೆ, ಹತ್ತಿರ ನಿಂತು ಮಾತನಾಡಿದರೆ ಅದು ಹರಡುತ್ತಿದ್ದ ಬಗೆ ಪ್ರತಿಯೊಬ್ಬರಲ್ಲೂ ಅಚ್ಚರಿ ಹುಟ್ಟಿಸಿತ್ತು. ಆಗೆಲ್ಲ ಹತ್ತಾರು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಿರುಗಾಡಲಾರಂಭಿಸಿದವು. ಭಾರತಕ್ಕೆ, ಹಿಂದೂಗಳಿಗೆ ಕೊರೋನಾ ಬರುವುದಿಲ್ಲವೆಂತಲೂ ಏಕೆಂದರೆ ನಮಸ್ಕಾರವೆಂಬುದು ನಮ್ಮ ಸಂಸ್ಕೃತಿಯ ಅಂಗವಾದ್ದರಿಂದ ಒಬ್ಬರನ್ನೊಬ್ಬರು ಮುಟ್ಟುವ ಪ್ರಮೇಯವೇ ಇಲ್ಲವೆಂತಲೂ ಕೆಲವರು ಹೇಳಿಕೊಳ್ಳುತ್ತಿದ್ದರು. ಜಗತ್ತಿನ ಅನೇಕ ಕಡೆಗಳಲ್ಲಿ ಶೇಕ್ಹ್ಯಾಂಡ್ ಕೈಬಿಟ್ಟು ಕೈಮುಗಿಯುವ ಪರಂಪರೆ ಆರಂಭವಾಗಿದ್ದನ್ನು ಕೆಲವರು ಗಮನಿಸಿದ್ದರು. ಅವು ವೈರಲ್ ಕೂಡ ಆಗುತ್ತಿದ್ದವು. ಆದರೆ ನೋಡ-ನೋಡುತ್ತಲೇ ಕೊರೋನಾ ಭಾರತಕ್ಕೆ ಲಗ್ಗೆ ಇಟ್ಟಿತು. ಲಾಕ್ಡೌನಿನ ನಿಯಮವನ್ನು ಹೇರದೇ ಹೋಗಿದ್ದಿದ್ದರೆ ಅದು ಲಂಗು-ಲಗಾಮಿಲ್ಲದೇ ನಮಸ್ಕಾರ ಮಾಡುವವರನ್ನೂ, ಶೇಕ್ಹ್ಯಾಂಡ್ ಮಾಡುವವರನ್ನೂ ಖಂಡಿತ ಆವರಿಸಿಕೊಳ್ಳುತ್ತಿತ್ತು. ಕೆಲವು ಪುಣ್ಯಾತ್ಮರಂತೂ ಕೊರೋನಾ ಮುಂದಿರಿಸಿಕೊಂಡು ಅಸ್ಪೃಶ್ಯತೆ ಹುಟ್ಟಿರಬಹುದಾದ ಕಾರಣಗಳನ್ನು ಹುಡುಕುತ್ತಿರುವುದು ನೋಡಿದರೆ ಅಸಹ್ಯವೆನಿಸುತ್ತದೆ. ಮನುಷ್ಯ ಇಷ್ಟು ಕೆಳಹಂತ ಮುಟ್ಟಬಾರದು! ಹಾಗಂತ ಈ ಹಂತ ಮುಟ್ಟಿದವರು ಇವರು ಮಾತ್ರವೆಂದಲ್ಲ ಹೆಚ್ಚು-ಕಡಿಮೆ ಎಲ್ಲ ಮತ-ಪಂಥಗಳವರೂ ಇಂಥದ್ದನ್ನು ಮಾಡಿಯೇ ಇದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಮುಸಲ್ಮಾನರು ಕೊರೋನಾ ವೈರಸ್ಸನ್ನೇ ಧಿಕ್ಕರಿಸುವ ಧಾಷ್ಟ್ರ್ಯ ತೋರಿದರು. ಕುರಾನಿಗೂ ಕೊರೋನಾಕ್ಕೂ ಇರುವ ಸಾಮ್ಯ ಗುರುತಿಸುವುದರಿಂದ ಹಿಡಿದು ಮಸೀದಿಯಲ್ಲಿ ಹೆಚ್ಚು ಮಂದಿ ಸೇರಿದರೆ ಅಲ್ಲಾಹು ಅವರ ರಕ್ಷಣೆಗಾಗಿ ದೇವದೂತರನ್ನೇ ಕಳಿಸುತ್ತಾನೆ ಎಂಬ ಮೌಲಾನಾ ಸಾದ್ರ ಮಾತಿನವರೆಗೂ ಧಾವಿಸಿತು. ಟಿಕ್ಟಾಕ್ನಲ್ಲಿ ಅಸಂಖ್ಯ ವಿಡಿಯೊಗಳು ಇಸ್ಲಾಮಿನ ಆಚರಣೆಗಳನ್ನು ಸಮಥರ್ಿಸಿಕೊಳ್ಳಲೆಂದೇ ಬಂದವು. ಹಿಂದೂಗಳ ನಮಸ್ತೆಗೆ ಅವರು ಇಸ್ಲಾಮಿನ ತಬ್ಬಿಕೊಳ್ಳುವ ಪ್ರಕ್ರಿಯೆಗೆ ಬಲವಾಗಿ ಆತುಕೊಳ್ಳುವ ಸಂಕಲ್ಪ ತೋರಿದ್ದರು. ಕೊರೋನಾ ಬಂದು ಸತ್ತರೂ ಪರವಾಗಿಲ್ಲ, ಇಸ್ಲಾಮಿನ ಆಚರಣೆಯಾದ ಅಪ್ಪಿಕೊಂಡು ಶುಭಹಾರೈಸುವ ಸಂಪ್ರದಾಯ ಬಿಡಲಾರೆವು ಎಂದರು ಅನೇಕರು!


ತಬ್ಲೀಗಿ ಜಮಾತ್ನ ಮರ್ಕಜ್ ಕಾರ್ಯಕ್ರಮಕ್ಕೂ ಮುನ್ನ ನಮಾಜ್ ಮಾಡುವವರಿಗೆ ಕೊರೋನಾ ಬರಲಾರದು ಎಂಬ ಮಾತು ವ್ಯಾಪಕವಾಗಿಹೋಯ್ತಲ್ಲದೇ ಮೌಲಾನಾ ಸಾದ್ರು ಯಾವ ಮಸೀದಿಯೂ ಖಾಲಿ ಇರದಂತೆ ನೋಡಿಕೊಳ್ಳಿ ಎಂದು ಹೇಳಿದ ಮಾತುಗಳು ಪ್ರತಿಯೊಬ್ಬರಿಗೂ ಆದೇಶದ ರೂಪದಲ್ಲಿ ಬಂತು. ಈ ಕಾರಣದಿಂದಲೇ ತಮಗೆ ಕೊರೋನಾ ಬಂದಾಗಲೂ ಪೊಲೀಸರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಅನೇಕರು ತಮ್ಮ ಪರಿವಾರದವರಿಗೆ, ಜೊತೆಗಾರರಿಗೆ ಅದನ್ನು ಹಬ್ಬಿಸಿ ಭಾರತದ ಕೊರೋನಾ ಪೀಡಿತರ ಸಂಖ್ಯೆಯನ್ನು ಲೆಕ್ಕ ದಾಟುವಂತೆ ಮಾಡಿದರು. ಇವರ ಈ ಸಮರ್ಥನೆ ಇಲ್ಲಿಗೇ ನಿಲ್ಲದೇ ಹೇಗೆ ಅಸ್ಪೃಶ್ಯತೆಯನ್ನು ಸಮರ್ಥನೆ ಮಾಡಿಕೊಂಡವರು ಹಿಂದೂಗಳಲ್ಲಿದ್ದರೋ ಹಾಗೆಯೇ ಮಹಿಳೆಯರು ಬುಖರ್ಾ ಹಾಕುವುದನ್ನು ಸಮಥರ್ಿಸಿಕೊಳ್ಳುವ ಮುಸಲ್ಮಾನರೂ ತಯಾರಾದರು. ಮಾಸ್ಕ್ ಹಾಕುವ ಪ್ರಕ್ರಿಯೆಯೇ ಬುಖರ್ಾ ಹಾಕಿದಂತೆ. ಇದು ತಮ್ಮನ್ನು ತಾವು ಈ ಬಗೆಯ ವೈರಸ್ಗಳಿಂದ ರಕ್ಷಿಸಿಕೊಳ್ಳಲು ಇಸ್ಲಾಂ ಬಲುಹಿಂದೆಯೇ ಕಂಡುಕೊಂಡ ವ್ಯವಸ್ಥೆ ಎಂಬ ಭೂಪರೂ ಇದ್ದರು! ಹಾಗೇನಾದರೂ ಬುಖರ್ಾ ಹಾಕುವುದನ್ನು, ಅಸ್ಪೃಶ್ಯತೆಯನ್ನು ಕೊರೋನಾ ನೆಪಕ್ಕೆ ಸಮಥರ್ಿಸಿಕೊಳ್ಳುವುದಾದರೆ ಅದು ಮಾನವತೆಯ ಅತ್ಯಂತ ಕೊಳಕುಮಟ್ಟ ಎಂದೇ ಹೇಳಬೇಕು. ಹೆಣ್ಣುಮಕ್ಕಳನ್ನು ಪುರುಷರಿಗಿಂತ ಕೆಳಗಿನವರೆಂದು ಭಾವಿಸುವ ಬುಖರ್ಾ ವ್ಯವಸ್ಥೆ, ಹಾಗೆಯೇ ಒಂದಷ್ಟು ಜನರನ್ನು ಕನಿಷ್ಟರೆಂದು ಭಾವಿಸುವ ಅಸ್ಪೃಶ್ಯತಾ ವ್ಯವಸ್ಥೆ ಯಾವ ಕಾರಣಕ್ಕೂ ಸಮರ್ಥನೀಯವಲ್ಲ.


ವೈಚಾರಿಕ ಆಂದೋಲನಗಳ ಮೂಲಕ ಇಂಥವರನ್ನೆಲ್ಲಾ ಬದಿಗಿಟ್ಟು ಸಮರ್ಥವಾಗಿರುವ ನಾಡು ಕಟ್ಟಬೇಕಾಗಿದೆ. ಅದು ಈ ಮತ-ಪಂಥಗಳ ತಾಕಲಾಟದಲ್ಲಿ ಸಿಲುಕಿಕೊಳ್ಳದೇ ಆಧ್ಯಾತ್ಮಿಕತೆಯ ಆಳಕ್ಕೆ ಇಳಿದು ಮುತ್ತು-ರತ್ನಗಳನ್ನು ಹೆಕ್ಕಿ ತರುವಂಥದ್ದಾಗಿರಬೇಕು. ಕೊರೋನಾ ಅಂಥದ್ದೊಂದು ಭರವಸೆಯನ್ನಂತೂ ಹುಟ್ಟಿಸಿದೆ. ಸುಮಾರು ಒಂದೂವರೆ ತಿಂಗಳುಗಳ ಕಾಲ ಮನೆಯಲ್ಲೇ ಕುಳಿತು ಅನೇಕರು ತಮ್ಮ ತಾವು ಮರುವಿಮಶರ್ಿಸಿಕೊಂಡಿದ್ದಾರೆ. ಬದಲಾವಣೆಗಳನ್ನು ತಂದುಕೊಳ್ಳಲು ಪ್ರಯತ್ನಿಸಿದ್ದಾರೆ. ಹಾಗಂತ ಇದು ಹೀಗೆಯೇ ಮುಂದುವರೆಯುತ್ತದೆಂದು ನಿಶ್ಚಯಿಸಿಬಿಡಬೇಕಿಲ್ಲ. ಒಂದೂವರೆ ತಿಂಗಳುಗಳ ಕಾಲ ಮನೆಯಲ್ಲೇ ಕುಳಿತು ಇವನ್ನೆಲ್ಲಾ ಆಲೋಚನೆ ಮಾಡಿದ ವ್ಯಕ್ತಿ ಮೊನ್ನೆ ಮದ್ಯದಂಗಡಿ ತೆರೆದೊಡನೆ ಎಲ್ಲಾ ಆಲೋಚನೆಗಳನ್ನೂ ಗಾಳಿಗೆ ತೂರಿ ಅಂಗಡಿ ಎದುರು ಸಾಲು ನಿಂತುಬಿಟ್ಟಿದ್ದ. ಮತ-ಪಂಥ, ಧರ್ಮ-ಕರ್ಮ ಇವ್ಯಾವುವೂ ಅವನಿಗೆ ಅಡ್ಡ ಬರುವುದೇ ಇಲ್ಲ. ತನಗೆ ಬೇಕಾದ್ದು ಸಿಕ್ಕುಬಿಟ್ಟರೆ ಯಾವ ಗೊಂದಲಕ್ಕೂ ಒಳಗಾಗದ ಸ್ಥಿತಪ್ರಜ್ಞನಂತೆ ಆತ ಬದುಕು ಸವೆಸಿಬಿಡುತ್ತಾನೆ. ಈ ನಡುವೆ ತಮಗೆ ಲಾಭ ಮಾಡಿಕೊಳ್ಳಲು ಸಿದ್ಧವಿರುವ ಅನೇಕರು ತಯಾರಾಗಿಬಿಟ್ಟಿದ್ದಾರೆ. ಅದು ನಮ್ಮ ಕ್ಷೇತ್ರದ ಪುಢಾರಿಯಿಂದ ಹಿಡಿದು ಪಕ್ಕದ ರಾಷ್ಟ್ರ ಪಾಕಿಸ್ತಾನದವರೆಗೂ. ಕೊರೋನಾ ಹೊತ್ತಿನಲ್ಲಿ ಹಣ, ಅಧಿಕಾರ ಎಲ್ಲವೂ ಅಧಿಕಾರಿಗಳ ಕೈಗೆ ಸೇರುತ್ತಿರುವುದರಿಂದ ಕೆಲ ರಾಜಕಾರಣಿಗಳು ಗೊಂದಲಕ್ಕೀಡಾಗಿಬಿಟ್ಟಿದ್ದಾರೆ. ನೂರಾರು ಕೋಟಿ ರೂಪಾಯಿ ಹಣ ಕಾಣುತ್ತದೆ. ಆದರೆ ಯಾವುದೂ ಅವರ ಕೈಗೆ ಬರುತ್ತಿಲ್ಲ. ಅತ್ತ ಪಾಕಿಸ್ತಾನವೂ ಹಾಗೆಯೇ ತನಗೆ ಉಣ್ಣಲು ಎರಡು ಹೊತ್ತಿನ ಊಟಕ್ಕೆ ಗತಿ ಇಲ್ಲದೇ ಜಗತ್ತಿನ ರಾಷ್ಟ್ರಗಳೆದುರು ಸಾಲಕ್ಕೆ ಕೈಚಾಚಿ ಕುಳಿತರೂ ಭಾರತದ ಬದುಕನ್ನು ಹೈರಾಣುಗೊಳಿಸಬೇಕೆಂದು ಕಾತರಿಸುತ್ತಿದೆ. ಇತ್ತೀಚೆಗೆ ಭಾರತದೊಳಕ್ಕೆ ನುಸುಳಿದ ಭಯೋತ್ಪಾದಕರು ನಾಲ್ಕು ಯೋಧರು, ಒಬ್ಬ ಪೊಲೀಸರನ್ನು ಹತ್ಯೆ ಮಾಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಜಗತ್ತೆಲ್ಲಾ ಒಂದು ವೈರಸ್ನೊಂದಿಗೆ ಬಡಿದಾಡುತ್ತಿದ್ದರೆ ಅತ್ತ ಪಾಕಿಸ್ತಾನವೇ ಭಾರತದ ಪಾಲಿಗೆ ಒಂದು ದೊಡ್ಡ ವೈರಸ್ ಆಗಿ ಕಾಡುತ್ತಿದೆ. ಇತ್ತ ಭಾರತದೊಳಕ್ಕೆ ವಿವೇಚನಾರಹಿತ ಮತಾಂಧರು ಕೊರೋನಾಕ್ಕೆ ಪೂರಕ ವಾತಾವರಣ ರೂಪಿಸಿಕೊಡುತ್ತಿದ್ದಾರೆ. ಬದಲಾವಣೆ ಯಾವಾಗ ಬರುವುದೋ ಕಾದು ನೋಡಬೇಕಷ್ಟೇ!

-ಚಕ್ರವರ್ತಿ ಸೂಲಿಬೆಲೆ

Click to comment

Leave a Reply

Your email address will not be published. Required fields are marked *

Most Popular

To Top