National

ಮತದಾರರಾಗಿ ನೊಂದಾಯಿಸಲು ಇಲ್ಲಿದೆ ಸುಲಭ ಉಪಾಯ!

ಮತದಾರರ ಗುರುತಿನ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಈ ಕೆಳಗಿನದನ್ನು ಅನುಸರಿಸಿ-

1. ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ‌ ನೀಡಿ.
2. ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ ಮೇಲೆ ಕ್ಲಿಕ್ಕಿಸಿ
3. Apply online for registration of new voter ಎಂಬ ಬಟನ್ನಿನ ಮೇಲೆ ಕ್ಲಿಕ್ ಮಾಡಿ.
4. ಮಾಹಿತಿಯನ್ನು ತುಂಬಿ ಮತ್ತು ಅಲ್ಲಿ ಕೇಳಲಾದ ದಾಖಲೆಗಳನ್ನು ಅಪ್‌ಲೋಡ್ ಮಾಡಿ
5. Submit ಬಟನ್ನಿನ ಮೇಲೆ ಒತ್ತಿ.

ಆನ್‌ಲೈನ್‌ನಲ್ಲಿ ಮತದಾನ ಗುರುತಿನ ಚೀಟಿ ಪಡೆಯಲು ಈ ಕೆಳಕಂಡ ದಾಖಲೆಗಳ ಅಗತ್ಯವಿದೆ.
* ಪಾಸ್‌ಪೋರ್ಟ್ ಸೈಜಿನ ಒಂದು ಫೋಟೊ
* ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪಾನ್‌ಕಾರ್ಡ್ ಅಥವಾ ಪ್ರೌಢಶಾಲೆಯ ಅಂಕಪಟ್ಟಿ – ಇವುಗಳಲ್ಲಿ ಯಾವುದಾದರೂ ಒಂದು
* ವಿಳಾಸದ ಸಾಕ್ಷಿಗಾಗಿ – ರೇಷನ್ ಕಾರ್ಡ್, ಪಾಸ್‌ಪೋರ್ಟ್, ಡಿಎಲ್, ಫೋನು ಅಥವಾ ವಿದ್ಯುತ್ ಬಿಲ್‌ ಇವುಗಳಲ್ಲಿ ಯಾವುದಾದರೂ ಒಂದನ್ನು ನೀಡಬಹುದು.

ಆನ್‌ಲೈನ್‌ನಲ್ಲಿ ಮತದಾರ ಗುರುತುಚೀಟಿಗೆ ನೊಂದಾಯಿಸಿಕೊಳ್ಳುವುದರ ಲಾಭಗಳು:

1. ನೀವು ಸರ್ಕಾರಿ ಕಛೇರಿಯವರೆಗೂ ನಡೆದು ಹೋಗಬೇಕೆಂದಿಲ್ಲ. ಕುಳಿತಲ್ಲೇ ಮತದಾರರ ಚೀಟಿಯನ್ನು ಪಡೆಯಬಹುದು.
2. ಆನ್‌ಲೈನ್ ನಲ್ಲಿ ನೊಂದಾಯಿಸಿದರೆ ನಿಮ್ಮ ಮತದಾರ ಚೀಟಿಯ ಸ್ಟೇಟಸ್ ಅನ್ನು ಸುಲಭವಾಗಿ ಕಂಡುಹಿಡಿಯಬಹುದು. ಅರ್ಜಿ ತುಂಬಿದ ಕ್ಷಣದಿಂದ ನಿಮ್ಮ ಗುರುತಿನ ಚೀಟಿಗೆ ಸಂಬಂಧಿಸಿದ ಪ್ರತಿ ಮಾಹಿತಿಯೂ ಬರುತ್ತದೆ.
3. ಆನ್‌ಲೈನ್ ಅರ್ಜಿ ಸಲ್ಲಿಸಿದರೆ ಬೇಗ, ಎಂದರೆ ಒಂದು ತಿಂಗಳೊಳಗೆ ಮತದಾನ ಚೀಟಿ ದೊರೆಯುತ್ತದೆ. ನಿಮ್ಮ ಮನೆಯ ಬಾಗಿಲಿಗೇ ಮತದಾರರ ಗುರುತಿನ ಚೀಟಿ ಬರುತ್ತದೆ.

ಮೊದಲನೇ ವಿಭಾಗ:
ಮೊದಲನೇ ವಿಭಾಗದಲ್ಲಿ ನಿಮ್ಮ ಹೆಸರನ್ನು ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ದಪ್ಪ ಅಕ್ಷರಗಳಲ್ಲಿ, ನಿಮ್ಮ ಲಿಂಗ, ಹುಟ್ಟಿದ ದಿನಾಂಕ, ವಯಸ್ಸು, ಅಪ್ಪ/ಅಮ್ಮ/ಪೋಷಕರು/ಗಂಡ/ಹೆಂಡತಿ ಇವುಗಳನ್ನು ತುಂಬಬೇಕು.

ಎರಡನೇ ವಿಭಾಗ:
ಎರಡನೇ ವಿಭಾಗದಲ್ಲಿ ನಿಮ್ಮ ಪೂರ್ಣ ವಿಳಾಸವನ್ನು, ಹಳ್ಳಿ, ನಗರ, ಜಿಲ್ಲೆ, ರಾಜ್ಯಗಳ ಹೆಸರನ್ನು, ಪಿನ್ ಕೋಡನ್ನು ನಮೂದಿಸಬೇಕು.

ಮೂರನೇ ವಿಭಾಗ:
ಇದರಲ್ಲಿ ಅದೇ ಕ್ಷೇತ್ರದಲ್ಲಿ ಮತದಾರರಾಗಿ‌ ನೊಂದಾಯಿಸಿಕೊಂಡಿರುವ ನಿಮ್ಮ ಕುಟುಂಬ ಸದಸ್ಯರ ಮಾಹಿತಿಯನ್ನು ತುಂಬಬೇಕು.

ನಾಲ್ಕನೇ ವಿಭಾಗ:
ನಾಲ್ಕನೇ ವಿಭಾಗದಲ್ಲಿ ಆ ವಿಳಾಸದಲ್ಲಿರುವವರು ನೀವೇ ಎಂದು ಘೋಷಣೆಯನ್ನು ಮಾಡಬೇಕು.

ಇವೆಲ್ಲವನ್ನೂ ತುಂಬಿ ಸಬ್‌ಮಿಟ್ ಬಟನ್ನನ್ನು ಒತ್ತಬೇಕು. ನೀವು ತುಂಬಿರುವ ಮಾಹಿತಿಯನ್ನು ಬದಲಾಯಿಸಲು ‘Reset’ ಬಟನನ್ನನ್ನು ಒತ್ತಬೇಕು.

Click to comment

Leave a Reply

Your email address will not be published. Required fields are marked *

Most Popular

To Top