State

ಮತದಾರನೇ ಭ್ರಷ್ಟನಾದಾಗ!!

ಉಪಚುನಾವಣೆಗಳು ಅನೇಕ ಪಾಠ ಕಲಿಸಿವೆ. ಚುನಾವಣೆ ಅದರಲ್ಲೂ, ಉಪಚುನಾವಣೆ ಯಾವುದನ್ನು ಮಾನದಂಡವಾಗಿಟ್ಟುಕೊಂಡು ನಡೆಯುತ್ತದೆ ಎಂಬುದೇ ಬಲುದೊಡ್ಡ ಪ್ರಶ್ನೆ. ಪ್ರತಿಯೊಂದು ಕ್ಷೇತ್ರದಲ್ಲೂ ಮೂರು ಪ್ರಮುಖ ಪಕ್ಷಗಳು ಸೇರಿದಂತೆ ಪಕ್ಷೇತರರನ್ನು ಲೆಕ್ಕ ಹಾಕಿದರೆ ನೂರು ಕೋಟಿ ರೂಪಾಯಿಯಾದರೂ ಹರಿದಾಡಿಬಿಟ್ಟಿದೆ. ಮತ್ತೊಂದು ಪಕ್ಷದಿಂದ ಆಳುವ ಪಕ್ಷಕ್ಕೆ ಬಂದು ಸೇರಿಕೊಂಡವರು ಗೆಲ್ಲಲಿಕ್ಕಾಗಿ ಅಪಾರ ಪ್ರಮಾಣದ ಹಣ ಬಸಿದು ಸುರಿದರೆ ಅವರನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದವರು ಕಡಿಮೆಯೇನು ಪಣಕ್ಕೊಡ್ಡಲಿಲ್ಲ! ಕೆಲವು ಕ್ಷೇತ್ರಗಳಲ್ಲಂತೂ ಒಂದೊಂದು ಪಕ್ಷವೂ ವೋಟಿಗೆ 2000 ರೂಪಾಯಿಯನ್ನು ಕೊಟ್ಟು ಮತದಾರನನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿವೆ. ಈ ಚುನಾವಣೆಯ ಸಂದರ್ಭದಲ್ಲಿ ನಡೆದ ಒಂದೆರಡು ಘಟನೆಗಳು ನಿಜಕ್ಕೂ ಭವಿಷ್ಯದ ದಿಕ್ಕನ್ನು ಚಿತ್ರಿಸುವಂಥವು. ಹೊಸಕೋಟೆಯಲ್ಲಿ ನಾಯಕನೊಬ್ಬನ ಅನುಯಾಯಿಗಳು ಮನೆ-ಮನೆಗೂ ಹೋಗಿ ತಾಯಂದಿರನ್ನು ಮಾತನಾಡಿಸಿ ಮಂಜುನಾಥಸ್ವಾಮಿಯ ಚಿತ್ರವಿರುವ ಚಿನ್ನಲೇಪಿತ ನಾಣ್ಯವನ್ನು ಹಂಚಿ ಬಂದಿದ್ದಾರೆ! ಹಾಗಂತ ನಾಣ್ಯವನ್ನು ಕೊಟ್ಟುಬಂದುಬಿಡುವುದಲ್ಲ. ನೇರವಾಗಿ ದೇವರ ಕೋಣೆಗೆ ಹೋಗಿ ಅಲ್ಲಿಯೇ ಅದನ್ನು ಇಟ್ಟು ‘ಸ್ವಾಮಿ ಒಳ್ಳೆಯದು ಮಾಡಲಿ’ ಎಂದು ಹೇಳಿ ಬರುವ ಪ್ರಚಾರದ ವೈಖರಿ ಅದು. ಭಾವನಾತ್ಮಕವಾಗಿ ಹೆಣ್ಣುಮಕ್ಕಳನ್ನು ಬಂಧಿಸುವ ವಿಶೇಷ ಪ್ರಯತ್ನ. ಉತ್ತರ ಕನರ್ಾಟಕದ ಕೆಲವು ಕಡೆ ಚುನಾವಣೆಗೆ ಮುನ್ನಾ ದಿನ ಕೈಯಲ್ಲಿ ತೆಂಗಿನಕಾಯಿ ಹಿಡಿದುಕೊಂಡು ಮತದಾರನಿಗೆ 2000 ರೂಪಾಯಿ ಕೊಟ್ಟು ತೆಂಗಿನಕಾಯಿ ಮೇಲೆ ಆತನ ಕೈಯ್ಯನಿಟ್ಟುಕೊಂಡು ದುಡ್ಡು ಕೊಟ್ಟವನಿಗೇ ವೋಟು ಹಾಕುವ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಮತದಾರ ಅದೆಷ್ಟು ಬುದ್ಧಿವಂತನೆಂದರೆ ಒಂದು ಪಕ್ಷದವನಿಗೆ ವೋಟು ಹಾಕುವೆನೆಂದು ಪ್ರಮಾಣ ಮಾಡಿದೊಡನೆ ಅದರ ಹಿಂದೆ ಬಂದ ಮತ್ತೊಂದು ಪಕ್ಷದವನಿಗೂ ಅದೇ ರೀತಿಯಲ್ಲಿ ಪ್ರಮಾಣ ಮಾಡಿ ಹಣ ತೆಗೆದುಕೊಂಡಿದ್ದಾನೆ. ಪಕ್ಷವೊಂದರ ಕಾರ್ಯಕರ್ತರು ನಗುತ್ತಾ ನನ್ನೊಡನೆ ಹಂಚಿಕೊಳ್ಳುತ್ತಿದ್ದರು, ‘ಯಾರು ಕೊನೆಯಲ್ಲಿ ಕೊಡುತ್ತಾರೋ ಅವರಿಗೇ ಮತ’ ಅಂತ!


ಚುನಾವಣೆಗಳೆಂದರೆ ಮತದಾರರಷ್ಟೇ ಪತ್ರಕರ್ತರಿಗೂ ಸುಗ್ಗಿಯೇ. ಪತ್ರಿಕಾಗೋಷ್ಠಿಯಲ್ಲಿ ತಲೆಬುಡವಿಲ್ಲದ ಪ್ರಶ್ನೆಗಳನ್ನು ಕೇಳಿ ಗಾಬರಿಪಡಿಸಿಬಿಡುತ್ತಾರೆ. ಆನಂತರ ಮಾರನೆಯ ದಿನ ಅದು ವರದಿಯಾಗದಿರುವಂತೆ ಮಾಡಲು ಹಣವನ್ನೂ ಪಡೆದುಕೊಂಡು ಹೋಗುತ್ತಾರೆ. ಹಾಗಂತ ಕೊನೆಯವರೆಗೂ ಹಣ ಕೊಟ್ಟವರೊಂದಿಗೆ ನಿಷ್ಠೆಯಿಂದಿರುತ್ತಾರಾ? ಅದು ನಂಬಲಾಗುವುದಿಲ್ಲ. ಅದೂ ಸರಿಯೇ ಬಿಡಿ. ಗೆದ್ದವನು ರಾಷ್ಟ್ರದೊಂದಿಗೆ ನಿಷ್ಠೆಯಿಂದಿರುತ್ತಾನೆ ಎಂಬ ಭರವಸೆ ಇಲ್ಲದೇ ಹೋದಾಗ ಆತನೊಂದಿಗೆ ಇವರಿಗಾದರೂ ನಿಷ್ಠೆ ಏಕೆ? ನಾನು ಮತ್ತೆ ವಿಚಾರಕ್ಕೆ ಬರುತ್ತೇನೆ. ಪ್ರಚಾರಕ್ಕೆ ತೆರಳಿದವರೊಬ್ಬರು ತಾವು ಹೋದ ಮನೆಯೊಳಗೆ ಆಗತಾನೇ ಅಪಘಾತಕ್ಕೆ ಸಿಲುಕಿ ಕೈಮುರಿದುಕೊಂಡ ಹುಡುಗನನ್ನು ನೋಡುತ್ತಾರೆ. ಕಡುಬಡತನದಲ್ಲಿದ್ದ ತಂದೆಯನ್ನು ನೋಡಿ ಕನಿಕರದಿಂದ ಚುನಾವಣಾ ಪ್ರಚಾರದ ನಡುವೆಯೂ ಮಾನವೀಯತೆಯ ದೃಷ್ಟಿಯಿಂದಲೇ ಆ ಹುಡುಗನನ್ನು ಆಸ್ಪತ್ರೆಗೋಯ್ದು ಅರ್ಧ ಲಕ್ಷದಷ್ಟ ಖಚರ್ು ಮಾಡಿ ಚಿಕಿತ್ಸೆ ಕೊಡಿಸಿ ಹಾರೈಸಿ ಕಳಿಸುತ್ತಾರೆ. ಚುನಾವಣೆಯ ಫಲಿತಾಂಶ ಬಂದಾಗ ಆ ವಾಡರ್ಿನಿಂದ ಮೂರು ಮತಗಳು ಮಾತ್ರ ಬಂದು ನಿರಾಸೆಗೊಂಡ ಈ ವ್ಯಕ್ತಿ ತನ್ನಿಂದ ಚಿಕಿತ್ಸೆ ಪಡೆದ ಹುಡುಗನ ತಂದೆಗೆ ಕರೆ ಮಾಡುತ್ತಾರೆ. ಸುಮ್ಮನೆ ಗೊಂದಲ ಹುಟ್ಟಿಸಬೇಕೆಂದು ಆ ವ್ಯಕ್ತಿಯನ್ನು ‘ನಿಮ್ಮ ವಾಡರ್ಿನಿಂದ ಒಂದೂ ಮತ ಬರಲಿಲ್ಲವಲ್ಲಪ್ಪಾ’ ಎಂದು ಕೇಳಿದರೆ ಆತ ರೇಗಾಡುತ್ತಾನೆ, ಕೂಗಾಡುತ್ತಾನೆ! ‘ಚುನಾವಣೆಗೂ ಮುನ್ನಾ ದಿನ ಅವರು ಬಂದು 2000 ರೂಪಾಯಿ ಕೊಟ್ಟು ಆಣೆ ಮಾಡಿಸಿಕೊಂಡು ಹೋದರು. ಕೊಟ್ಟ ಮಾತಿಗೆ ತಪ್ಪುವುದು ಹೇಗೆ?’ ಎಂದು ಜೋರಾದ ದನಿಯಲ್ಲಿ ಹೇಳಿ ಫೋನು ಕುಕ್ಕಿಬಿಡುತ್ತಾನೆ. ಅಲ್ಲಿಗೆ ಚುನಾವಣೆಯ ದಿಕ್ಕು ಈ ವ್ಯಕ್ತಿಗೆ ಸ್ಪಷ್ಟವಾಗುತ್ತದೆ.

ದುಡ್ಡು ಪಡೆದು ದೇವಸ್ಥಾನದ ಹೊಸ್ತಿಲ ಮೇಲೆ ಕೈಯಿಟ್ಟು ಆಣೆ ಮಾಡುವ, ಮಸೀದಿಯ ಕಲ್ಗಳ ಮೇಲಿಟ್ಟು ಆಣೆ ಮಾಡುವ ಜನರಿಗೇನು ಕೊರತೆಯಿಲ್ಲ. ಮತ್ತು ಹೀಗೆ ಆಣೆ ಮಾಡಿದವರೆಲ್ಲಾ ಆಯಾ ವ್ಯಕ್ತಿಗಳಿಗೇ ವೋಟು ಹಾಕಿಬಿಡುತ್ತಾರೆಂಬ ವಿಶ್ವಾಸವೂ ಇಲ್ಲ. ಇಷ್ಟಕ್ಕೂ ಮತದಾನವೆಂದರೆ ಹಣ ತೆಗೆದುಕೊಂಡು ಆಣೆ ಮಾಡುವ ಪ್ರಕ್ರಿಯೆ ಎಂಬ ಪರಿಸ್ಥಿತಿಗೆ ನಿಂತಿದೆಯಲ್ಲಾ ಅದೇ ಜೀಣರ್ಿಸಿಕೊಳ್ಳಲು ಅಸಾಧ್ಯವಾದದ್ದು. ಶಾಸಕ, ಸಂಸದ ತಾನು ಮಾಡುವ ಅಭಿವೃದ್ಧಿ ಕಾರ್ಯ, ಜನರ ಜೀವನ ಮಟ್ಟವನ್ನೇರಿಸಲು ಆತ ಮಾಡುವ ಪ್ರಯತ್ನ, ಇದ್ಯಾವುದೂ ಚುನಾವಣೆಯ ದಿನ ಕೆಲಸಕ್ಕೆ ಬರುವುದಿಲ್ಲ. ಅಲ್ಲಿ ಕೆಲಸಕ್ಕೆ ಬರುವುದು ನಿಮ್ಮ ಜಾತಿ, ನೀವು ವೋಟಿಗಿಂತಿಷ್ಟು ಎಂದು ಕೊಟ್ಟ ಹಣ ಮತ್ತು ಹಂಚಿದ ಬಿರಿಯಾನಿ ಪ್ಯಾಕೆಟುಗಳು ಮಾತ್ರ! ಅನೇಕ ನಾಯಕರಿಗೆ ಗೆಲ್ಲುವ ಕಲೆ ಗೊತ್ತಾಗಿಹೋಗಿಬಿಟ್ಟಿದೆ. ಯಾವ ಜಾತಿಯ ಯಾವ ನಾಯಕರನ್ನು ಹಿಡಿದುಕೊಂಡರೆ ಎಲ್ಲೆಲ್ಲಿ ಎಷ್ಟೆಷ್ಟು ವೋಟುಗಳು ಬರುತ್ತವೆಂಬ ಲೆಕ್ಕಾಚಾರ ಅವರಿಗೆ ಸ್ಪಷ್ಟವಾಗಿದೆ. ಅನೇಕ ಕಡೆಗಳಲ್ಲಿ ಇಂಥವರು ವೋಟು ಹಾಕಲಾರರು ಎಂದೆನಿಸಿದರೆ ಅವರಿಗೆ ದುಡ್ಡು ಕೊಟ್ಟು ಕೈಗೆ ಇಂಕನ್ನೂ ಬಳಿದು ಪ್ರವಾಸಕ್ಕೆಂದು ಕಳಿಸಿಬಿಡುತ್ತಾರೆ. ಮತ್ತು ಆಯಾ ಜಾತಿಗಳ ಪ್ರಮುಖರೇ ಇಂಥದ್ದೊಂದು ಐಡಿಯಾ ನಾಯಕರುಗಳಿಗೆ ಕೊಡುತ್ತಾರೆ. ಎಂಥ ದುದರ್ೈವವಲ್ಲವೇ? ಈ ಬಗೆಯ ಚುನಾವಣಾ ಮಾಹೋಲಿನಲ್ಲಿ ಸಭ್ಯರ ಗೆಲುವು ಕಷ್ಟ ಎಂಬುದು ಒಂದಾದರೆ ಈ ರೀತಿಯಲ್ಲಿ ಗೆದ್ದು ಬಂದವರು ಕನಸಿನ ರಾಜ್ಯ, ರಾಷ್ಟ್ರಗಳನ್ನು ಕಟ್ಟಬಲ್ಲರೇ ಎಂಬುದು ಮತ್ತೊಂದು ಆತಂಕ!


ತಪ್ಪು ನಾಯಕರದ್ದಲ್ಲ, ಮತದಾರರಾದ ನಮ್ಮಗಳದ್ದೇ! ಸಿಗುವ 2000 ರೂಪಾಯಿಗಳಿಗೆ ನಮ್ಮ ಧ್ಯೇಯವನ್ನು, ಆದರ್ಶವನ್ನು, ಕನಸುಗಳನ್ನು, ಭವಿಷ್ಯವನ್ನು ಮಾರಿಕೊಂಡ ನಾವು ಪ್ರಶ್ನೆ ಕೇಳುವ ನೈತಿಕ ಪ್ರಜ್ಞೆ ಉಳಿಸಿಕೊಳ್ಳುವೆವೇ? ನಾಯಕರೆದುರು ಎದೆ ಎತ್ತಿ ನಡೆಯಬಲ್ಲ ತಾಕತ್ತನ್ನು ಉಳಿಸಿಕೊಳ್ಳುವೆವೇ? ಪ್ರತಿ ಶಾಲೆಯಲ್ಲಿ ಮಕ್ಕಳೊಂದಿಗೆ ಚಚರ್ೆಯಾಗಬೇಕಾಗಿರುವುದು ಇಂಥದ್ದೇ ಸಂಗತಿ. ಆದರೆ ದೌಭರ್ಾಗ್ಯವೇನು ಗೊತ್ತೇ? ಆ ಮಗುವಿನ ತಂದೆ-ತಾಯಿ, ಪಾಠ ಮಾಡುವ ಮೇಷ್ಟ್ರು ಮತ್ತವರ ಕುಟುಂಬವೂ ಈ ವ್ಯವಸ್ಥೆಯಲ್ಲಿ ಭಾಗಿಯಾಗಿ ಹಣ ಪಡೆದುಕೊಂಡೇ ವೋಟು ಹಾಕಿರುತ್ತಾರೆ. ಹಾಗಿರುವಾಗ ಇದನ್ನು ಸರಿಪಡಿಸುವುದಾದರೂ ಹೇಗೆ? ಕಾಡುವ ಪ್ರಶ್ನೆಗೆ ಉತ್ತರ ಸದ್ಯಕ್ಕಂತೂ ಹೊಳೆಯುತ್ತಿಲ್ಲ!

-ಚಕ್ರವರ್ತಿ ಸೂಲಿಬೆಲೆ

 

1 Comment

1 Comment

  1. Adarsh

    December 18, 2019 at 9:29 pm

    yeah

Leave a Reply

Your email address will not be published. Required fields are marked *

Most Popular

To Top